Tag: ಮುದ್ದಹನುಮೇಗೌಡ

  • ತುಮಕೂರು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್- ಮಾಧುಸ್ವಾಮಿ ಭೇಟಿಯಾದ ಮುದ್ದಹನುಮೇಗೌಡ!

    ತುಮಕೂರು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್- ಮಾಧುಸ್ವಾಮಿ ಭೇಟಿಯಾದ ಮುದ್ದಹನುಮೇಗೌಡ!

    – ಭೇಟಿ ಬಗ್ಗೆ ಮಾಜಿ ಸಚಿವರು ಹೇಳಿದ್ದೇನು..?

    ತುಮಕೂರು: ಜಿಲ್ಲೆಯ ರಾಜಕೀಯ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇಬ್ಬರ ಮುನಿಸು.. ಮೂರನೇ ವ್ಯಕ್ತಿಗೆ ಲಾಭ ಎಂಬಂತೆ ಇಂದು ಮಾಜಿ ಸಚಿವ ಮಾಧುಸ್ವಾಮಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ (MuddahanumeGowda) ಭೇಟಿ ಮಾಡುವ ಮೂಲಕ ತೀವ್ರ ಕುತೂಹಲ ಹುಟ್ಟಿಸಿದ್ದಾರೆ.

    ಮಾಧುಸ್ವಾಮಿಯವರು (Madhuswamy) ಲೋಕಸಭಾ ಚುನಾವಣೆಯ (Loksabha Elections 2024) ಟಿಕೆಟ್ ತಪ್ಪಿದ್ದಿಂದ ಅಸಮಾಧಾನಗೊಂಡಿದ್ದರು. ಬಳಿಕ ಯಡಿಯೂರಪ್ಪರ ಮಧ್ಯಸ್ಥಿಕೆಯಿಂದ ಸಮಾಧಾನಗೊಂಡಿದ್ದರು. ಆದರೆ ಇದೀಗ ದಿಢೀರ್ ಆಗಿ ಮುದ್ದಹನುಮೇಗೌಡ-ಮಾಧುಸ್ವಾಮಿ ಭೇಟಿ ಕುತೂಹಲ ಕೆರಳಿಸಿದೆ. ಭೇಟಿಯ ವೇಳೆ ಮುದ್ದಹನುಮೇಗೌಡ ಅವರು ಚುನಾವಣೆಯಲ್ಲಿ ಬೆಂಬಲಿಸುವಂತೆ ಮಾಧುಸ್ವಾಮಿಯ ಸಹಕಾರ ಕೋರಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: Tumakuru Look Sabha 2024: ಜಿದ್ದಾಜಿದ್ದಿನ ಕಣದಲ್ಲಿ ಗೆಲ್ಲೋದ್ಯಾರು?

    ಬಳಿಕ ಚಿಕ್ಕನಾಯಕನಹಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಒಬ್ಬ ಅಭ್ಯರ್ಥಿಯಾಗಿ ನಮ್ಮ ಮನೆಗೆ ಬಂದಿದ್ದಾರೆ. ನಾವು ಅವರು ಬಹಳ ಹಳೆಯ ಸ್ನೇಹಿತರು. ಇಬ್ಬರು ಒಟ್ಟಿಗೆ ಶಾಸಕರಾಗಿದ್ದವರು. ಸ್ನೇಹಿತರು ಅಂತ ಒಬ್ಬ ಅಭ್ಯರ್ಥಿ ಮನೆಗೆ ಬಂದಾಗ ವಿಶೇಷ ಅರ್ಥ ಕಲ್ಪಿಸೊದು ಬೇಡ. ಸೌಜನ್ಯದ ಭೇಟಿ ಮಾಡಿದ್ದಾರೆ. ಕ್ಯಾಂಡಿಡೇಟ್ ಆದವರು ಸಪೋರ್ಟ್ ಕೇಳಿದ್ದಾರೆ. ನಾವು ಬೇರೆ ಪಕ್ಷದಲ್ಲಿ ಇರುವವರು ಸಪೋರ್ಟ್ ಮಾಡುವುದಕ್ಕೆ ಆಗುತ್ತಾ?. ಅದೆಲ್ಲಾ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟರು.

    ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ವಿ. ಸೋಮಣ್ಣ ಅವರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್‍ನಿಂದ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.

  • ಚುನಾವಣೆ ಸ್ಪರ್ಧೆ ಕಾರಣಕ್ಕೆ ಪಕ್ಷಾಂತರ ಮಾಡಿರೋದು ಬೇಸರವಾಗಿದೆ: ಮುದ್ದಹನುಮೇಗೌಡ

    ಚುನಾವಣೆ ಸ್ಪರ್ಧೆ ಕಾರಣಕ್ಕೆ ಪಕ್ಷಾಂತರ ಮಾಡಿರೋದು ಬೇಸರವಾಗಿದೆ: ಮುದ್ದಹನುಮೇಗೌಡ

    – ಮಾತೃ ಪಕ್ಷಕ್ಕೆ ಮರಳಿದ ಮಾಜಿ ಸಂಸದ

    ಬೆಂಗಳೂರು: ಮಾಜಿ ಸಂಸದ ಮುದ್ದಹನುಮೇಗೌಡ (Muddahanume Gowda) ಅವರು ಬಿಜೆಪಿಯಿಂದ ಇಂದು ತಮ್ಮ ಮಾತೃಪಕ್ಷ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ಅವರು ಮಾಜಿ ಸಂಸದರಿಗೆ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಕಾಂಗ್ರೆಸ್‌ ಸೇರಿಕೊಂಡ ಬಳಿಕ ಮಾತನಾಡಿದ ಮುದ್ದಹನುಮೇಗೌಡ, ಪಕ್ಷಾಂತರವನ್ನ ಜನ ಒಪ್ಪಿಕೊಳ್ಳೋಕೆ ಶುರು ಮಾಡಿದ್ದಾರೆ. ಚುನಾವಣೆ ಸ್ಪರ್ಧೆ ಕಾರಣಕ್ಕೆ ಪಕ್ಷಾಂತರ ಮಾಡಿರೋದು ಬೇಸರವಾಗಿದೆ. ಜನತೆ ಮತ್ತು ನಾಯಕರಿಗೆ ನೋವು ಮಾಡಿದ್ದೇನೆ. ಹಾಗಾಗಿ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ ಎಂದರು.

    ಇನ್ನೂ ಹೆಚ್ಚು ದಿನ ನಮ್ಮ ರಾಜಕೀಯ ಜೀವನ ಇರಲ್ಲ. ಹಾಗಾಗಿ ನಮಗೆ ಅವಕಾಶ ಕೊಟ್ಟ ಮಾತೃಪಕ್ಷದ ಸೇವೆ ಮಾಡಲು ಮರಳಿ ಬಂದಿದ್ದೇನೆ. ಲೋಪದೋಶಗಳನ್ನ ಸರಿಪಡಿಕೊಂಡು ಹೋಗೋಣ. ನಾನು ಕಾಂಗ್ರೆಸ್ (Congress) ಪಕ್ಷಕ್ಕೆ ಋಣಿಯಾಗಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: Loksabha Election 2024: ದೆಹಲಿಯಲ್ಲಿ ಕೈಗೆ 3 ಸ್ಥಾನ ಬಿಟ್ಟು ಕೊಟ್ಟು 4 ಸ್ಥಾನಗಳಲ್ಲಿ AAP ಸ್ಪರ್ಧೆ?

    ಕಾರ್ಯಕ್ರಮದಲ್ಲಿ ಸಚಿವರಾದ ರಾಜಣ್ಣ, ಡಾ. ಜಿ ಪರಮೇಶ್ವರ್, ಎಂಎಲ್‌ಸಿ ಸಲೀಂ ಅಹಮ್ಮದ್ ಭಾಗಿಯಾಗಿದ್ದರು. ಕಾಂಗ್ರೆಸ್ ಹಿರಿಯ ಶಾಸಕರಾದ ಟಿ.ಬಿ.ಜಯಚಂದ್ರ, ಕೆ.ಷಡಕ್ಷರಿ, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದು, ಈ ಮೂಲಕ ಅಸಮಧಾನ ವ್ಯಕ್ತಪಡಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ.

  • ಗುರುವಾರ ಮುದ್ದಹನುಮೇಗೌಡ ಕಾಂಗ್ರೆಸ್‌ಗೆ ಸೇರ್ಪಡೆ

    ಗುರುವಾರ ಮುದ್ದಹನುಮೇಗೌಡ ಕಾಂಗ್ರೆಸ್‌ಗೆ ಸೇರ್ಪಡೆ

    ತುಮಕೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಂಸದ ಮುದ್ದಹನುಮೇಗೌಡ (S. P. Muddahanumegowda) ಬಿಜೆಪಿಗೆ ಗುಡ್ ಬೈ ಹೇಳಿ ಕೈ ಹಿಡಿಯಲಿದ್ದಾರೆ.

    ಗುರುವಾರ ಸಂಜೆ‌ 4 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ಗೆ (Congress) ಸೇರ್ಪಡೆಯಾಗಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಚಿವರಾದ ಜಿ.ಪರಮೇಶ್ವರ್, ಕೆ ಎನ್ ರಾಜಣ್ಣ‌ ಸಮ್ಮುಖದಲ್ಲಿ ಸೇರ್ಪಡೆಗೆ ಸಿದ್ದತೆ ನಡೆಸಲಾಗುತ್ತಿದೆ.

    ಕಳೆದ ಲೋಕಸಭಾ ಚುನಾವಣೆಯಲ್ಲಿ (Loksabha Election) ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಮುದ್ದಹನುಮೇಗೌಡ ಅವರು ಬಿಜೆಪಿ (BJP) ಸೇರಿದ್ದರು. ಆದರೆ ಬಿಜೆಪಿಯಲ್ಲೂ ವಿಧಾನಸಭಾ ಟಿಕೆಟ್ ವಂಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ತಮ್ಮ ಮಾತೃಪಕ್ಷದತ್ತ ಮುಖ ಮಾಡಿದ್ದಾರೆ.  ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಜೊತೆ SP ಮೈತ್ರಿ ಖಚಿತ: ಅಖಿಲೇಶ್‌ ಯಾದವ್‌

  • ಹೈಕಮಾಂಡ್‌ಗೆ ಸೆಡ್ಡು – ಮುದ್ದಹನುಮೇಗೌಡ ಪರ ಪ್ರಚಾರ ಆರಂಭಿಸಿದ ರಾಜಣ್ಣ

    ಹೈಕಮಾಂಡ್‌ಗೆ ಸೆಡ್ಡು – ಮುದ್ದಹನುಮೇಗೌಡ ಪರ ಪ್ರಚಾರ ಆರಂಭಿಸಿದ ರಾಜಣ್ಣ

    ತುಮಕೂರು: ಕಾಂಗ್ರೆಸ್‌ ಹೈಕಮಾಂಡ್‌ಗೆ ಸಹಕಾರ ಸಚಿವ ಕೆಎನ್‌ ರಾಜಣ್ಣ (KN Rajanna) ಸೆಡ್ಡು ಹೊಡೆದಿದ್ದು ಮುದ್ದಹನುಮೇಗೌಡ (Muddahanumegowda) ಅವರನ್ನು ತುಮಕೂರು (Tumakuru) ಕ್ಷೇತ್ರದ ಕಾಂಗ್ರೆಸ್‌ (Congress) ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ.

    ಮಧುಗಿರಿ ತಾಲೂಕಿನ ಗುಟ್ಟೇ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜಣ್ಣ ಅವರು ಮಾಜಿ ಸಂಸದ ಮುದ್ದಹನುಮೇಗೌಡ ಪರ ಪ್ರಚಾರ ಆರಂಭಿಸಿದ್ದಾರೆ.  ಇದನ್ನೂ ಓದಿ: ವಿಜಯೇಂದ್ರ‌ ಮುಂದಿನ‌ ಮುಖ್ಯಮಂತ್ರಿ ಎಂದ ಶಾಸಕ ಶಿವರಾಜ್ ಪಾಟೀಲ್

    ಇವತ್ತಿನ ತೀರ್ಮಾನದಲ್ಲಿ ಮೇಲ್ನೋಟಕ್ಕೆ ಮಾಜಿ ಸಂಸದ ಮುದ್ದಹನುಮೇಗೌಡ ಅವರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವ ಅವಕಾಶ ಇದೆ. ಹಾಗಾಗಿ ಈಗಲೇ ಹೇಳುತ್ತಿದ್ದೇನೆ. ಮತ್ತೆ ನಾನೇನು ಹೇಳಲಿಲ್ಲ ಎಂದು ಹೇಳಬಾರದು. ಟಿಕೆಟ್‌ ನೀಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳಿದರು. ಇದನ್ನೂ ಓದಿ: ಇಂಥದ್ದೇ ಡ್ರೆಸ್‌ ಹಾಕೊಳ್ಳಿ, ಬಟ್ಟೆ ಬಿಚ್ಚಾಕ್ಕೊಂಡು ಹೋಗಿ ಹೇಳಲ್ಲ- ದೇಗುಲಗಳಲ್ಲಿನ ಡ್ರೆಸ್‌ ಕೋಡ್‌ಗೆ ಸಿಎಂ ವಿರೋಧ

    ನಾನು ನೇರವಾಗಿ ಲೋಕಸಭೆ ಚುನಾವಣೆಗೆ ಮತ ಕೇಳಲು ಬರುತ್ತೇನೆ. ಕಾಂಗ್ರೆಸ್‌ಗೆ ವೋಟು ಹಾಕಬೇಕು. ಇವತ್ತಿನ ದಿನಮಾನದಲ್ಲಿ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಈ ಬಗ್ಗೆ ಹೈಕಮಾಂಡ್ ಕೂಡ ಸೂಕ್ಷ್ಮವಾಗಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ ಮುದ್ದಹನುಮೇಗೌಡ ಬಿಟ್ಟು ಬೇರೆ ಯಾರಿಗಾದರೂ  ಟಿಕೆಟ್‌ ಸಿಗಲಿ 100ಕ್ಕೆ 99 ರಷ್ಟು ಭಾಗ ಕಾಂಗ್ರೆಸ್‌ಗೆ ವೋಟ್‌ ಹಾಕಬೇಕು ಎಂದರು.

     

  • ಮುದ್ದಹನುಮೇಗೌಡ ಕಾಂಗ್ರೆಸ್ ‌ಸೇರ್ಪಡೆ ದಿನಾಂಕ ಹೈಕಮಾಂಡ್ ತೀರ್ಮಾನ ಮಾಡುತ್ತೆ: ಸಚಿವ ಪರಮೇಶ್ವರ್

    ಮುದ್ದಹನುಮೇಗೌಡ ಕಾಂಗ್ರೆಸ್ ‌ಸೇರ್ಪಡೆ ದಿನಾಂಕ ಹೈಕಮಾಂಡ್ ತೀರ್ಮಾನ ಮಾಡುತ್ತೆ: ಸಚಿವ ಪರಮೇಶ್ವರ್

    ಬೆಂಗಳೂರು: ಮುದ್ದಹನುಮೇಗೌಡ (Muddahanumegowda) ಕಾಂಗ್ರೆಸ್ ಸೇರ್ಪಡೆ ದಿನಾಂಕವನ್ನು ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರು ತೀರ್ಮಾನ ಮಾಡ್ತಾರೆ ಎಂದು ಗೃಹ ಸಚಿವ ಪರಮೇಶ್ವರ್ತಿ (G.Parameshwar) ಳಿಸಿದರು.

    ಮುದ್ದಹನುಮೇಗೌಡ ಕಾಂಗ್ರೆಸ್ (Congress) ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುದ್ದಹನುಮೇಗೌಡ ಕಾಂಗ್ರೆಸ್ ‌ಸೇರ್ಪಡೆ ಮಾಡಿಕೊಳ್ಳೋದು ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರಿಗೆ ಬಿಟ್ಟ ವಿಚಾರ. ಹೈಕಮಾಂಡ್ ಅವರು ತೀರ್ಮಾನ ಮಾಡ್ತಾರೆ. ಅವರು ಕಾಂಗ್ರೆಸ್ ‌ಸೇರ್ಪಡೆಗೆ ಸಮಯ ನಿಗದಿಯಾಗಿಲ್ಲ. ಕೆಪಿಸಿಸಿ ಅಧ್ಯಕ್ಷರು ಅ ಬಗ್ಗೆ ನಿರ್ಧಾರ ಮಾಡ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಬದಲಾವಣೆ ಮಾಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ: ‌ಜಿ. ಪರಮೇಶ್ವರ್

    ಮುದ್ದಹನುಮೇಗೌಡರಿಗೆ ಪರವೂ ಇದೆ, ವಿರೋಧವೂ ಇದೆ. ಅಂತಿಮವಾಗಿ ಅಧ್ಯಕ್ಷರು, ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತೋ ಅದು ಆಗುತ್ತೆ. ನಾಲ್ಕು ಜನ ವಿರೋಧ ಮಾಡ್ತಾರೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.

    ಜನವರಿ 19ರ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರದೇಶ್ ಎಲೆಕ್ಷನ್ ಕಮಿಟಿ ಸಭೆ ಅದು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಅಬ್ಸರ್ವರ್ಸ್‌ ಹೆಸರು ತರುತ್ತಾರೆ. ಆ ಹೆಸರುಗಳನ್ನ ಆ ಸಮಿತಿಯಲ್ಲಿ ಇಟ್ಟು ಅದರ ಬಗ್ಗೆ ಚರ್ಚೆ ಮಾಡ್ತಾರೆ. ಚರ್ಚೆ ಬಳಿಕ ಅಭ್ಯರ್ಥಿಗಳ ಪಟ್ಟಿ ಮಾಡಿ ಕೇಂದ್ರ ಸಮಿತಿಗೆ ಕಳಿಸ್ತಾರೆ. ಸ್ಕ್ರೀನಿಂಗ್ ಕಮಿಟಿ ಮುಂದೆ ಇಡ್ತಾರೆ. ಅಂತಿಮವಾಗಿ ಹೈಕಮಾಂಡ್ ಟಿಕೆಟ್ ಬಗ್ಗೆ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜನವರಿ 19 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ

  • ಮಾಜಿ ಸಂಸದರಾದ ಮುದ್ದಹನುಮೇಗೌಡ, ನಟ ಶಶಿಕುಮಾರ್‌ ಬಿಜೆಪಿ ಸೇರ್ಪಡೆ

    ಮಾಜಿ ಸಂಸದರಾದ ಮುದ್ದಹನುಮೇಗೌಡ, ನಟ ಶಶಿಕುಮಾರ್‌ ಬಿಜೆಪಿ ಸೇರ್ಪಡೆ

    ಬೆಂಗಳೂರು: ಮಾಜಿ ಸಂಸದ ಮುದ್ದಹನುಮೇಗೌಡ (SP Muddahanume Gowda) ಹಾಗೂ ಚಿತ್ರದುರ್ಗದ ಮಾಜಿ ಸಂಸದ, ಹಿರಿಯ ಚಿತ್ರನಟ ಶಶಿಕುಮಾರ್ (Shashi Kumar) ಅವರು ಇಂದು ಬೆಂಗಳೂರಿನ (Bengaluru) ಮಲ್ಲೇಶ್ವರಂ ಕಚೇರಿಯಲ್ಲಿ ಬಿಜೆಪಿ (BJP) ಸೇರ್ಪಡೆಯಾದರು.

    ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸಿಎಂ ಬೊಮ್ಮಾಯಿ (Basavaraj Bommai) ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಇಬ್ಬರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಕಟೀಲ್ ಮತ್ತು ಸಿಎಂ ಮಾಜಿ ಸಂಸದರಾದ ಶಶಿಕುಮಾರ್ ಹಾಗೂ ಮುದ್ದಹನುಮೇಗೌಡರಿಗೆ ಪಕ್ಷದ ಶಾಲು ಹಾಕಿ, ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಈ ವೇಳೆ ಕೆಪಿಸಿಸಿ ಸದಸ್ಯರಾಗಿದ್ದ ವೆಂಕಟಾಚಲ, ಮಾಜಿ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಮೈಸೂರಿನ ರಮೇಶ್ ಮುನಿಯಪ್ಪ ಬಿಜೆಪಿ ಸೇರ್ಪಡೆ ಆದರು. ರಮೇಶ್‌ ಮುನಿಯಪ್ಪ ಮಾಜಿ ಸಿಎಂ ಶೀಲಾ ದಿಕ್ಷೀತ್‌ರಿಗೆ ವಿಶೇಷ ಕರ್ತವ್ಯಾಧಿಕಾರಿ ಆಗಿದ್ದರು.

    ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕದ ರಾಜಕಾರಣ‌ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಬಹಳ ಬದಲಾವಣೆ ಆಗಿದೆ. ಕಾಂಗ್ರೆಸ್ ವಿಶ್ವಾಸ ಕಳೆದುಕೊಂಡು ಅಧಿಕಾರ ಕಳೆದುಕೊಳ್ಳುತ್ತಿದೆ. ಈಗ ಕಾಂಗ್ರೆಸ್‌ಗೆ ಜನಮತ ಇಲ್ಲ. ಬಹುತೇಕ ಸಚಿವರು ಸೋತಿದ್ದರು. ಆದರೂ ಕಾಂಗ್ರೆಸ್ ಹಿಂಬಾಗಿಲಿಂದ ಅಧಿಕಾರ ಪಡೆದಿತ್ತು. ಆದರೆ ಜೆಡಿಎಸ್ ಜತೆಗಿನ ಸಮ್ಮಿಶ್ರ ಸರ್ಕಾರದ ಪ್ರಯೋಗ ವಿಫಲವಾಯಿತು. ನಂತರ ಬಿಜೆಪಿ ಅಧಿಕಾರಕ್ಕೇರಿ ಜನಮನ್ನಣೆ ಪಡೆದಿದೆ. ಬಿಜೆಪಿ ಪರ ಸಂಪೂರ್ಣ ದಿಕ್ಸೂಚಿ ಕಾಣುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಉತ್ತರ ಕರ್ನಾಟಕದಲ್ಲಿ ಜನಸಂಕಲ್ಪ ಯಾತ್ರೆಗಳಿಗೆ ಅಭೂತಪೂರ್ವ ಜನಬೆಂಬಲ ಸಿಗುತ್ತಿದೆ. ಕಾಂಗ್ರೆಸ್‌ನ ಹಲವು ನಾಯಕರಿಗೆ ಅಲ್ಲಿ ಸೇವೆ ಮಾಡಿದ್ರೂ ಬೆಲೆ ಸಿಗುತ್ತಿದೆ. ಹಲವರಿಗೆ ಕಾಂಗ್ರೆಸ್‌ನಲ್ಲಿ ಬೆಲೆ ಸಿಕ್ತಿಲ್ಲ ಅಂಥ ನಾಯಕರು ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬಿಜೆಪಿಗೆ ಸೇರುತ್ತಿದ್ದಾರೆ. ಹಲವರು ಭ್ರಮನಿರಸನಗೊಂಡು ನಮ್ಮ ಪಕ್ಷ ಸೇರಿದ್ದಾರೆ ಎಂದರು.

    ಮುದ್ದ ಹನುಮೇಗೌಡ ಸಜ್ಜನ ರಾಜಕಾರಣಿ. ಮುದ್ದಹನುಮೇಗೌಡರ ಸೇರ್ಪಡೆ ನಮಗೆ ದೊಡ್ಡ ಬಲ ನೀಡಿದೆ. ಚಿತ್ರನಟ ಶಶಿಕುಮಾರ್ ನಮ್ಮಲ್ಲೇ ಇದ್ದವರು. ಈಗ ಅವರು ಮರಳಿ ನಮ್ಮಲ್ಲಿಗೆ ಬಂದಿದ್ದಾರೆ. ನಮ್ಮ ಮನೆಯೇ ಸುರಕ್ಷಿತ ಅಂತ ಶಶಿಕುಮಾರ್ ಮರಳಿದ್ದಾರೆ. ಶಶಿಕುಮಾರ್ ಸೇರ್ಪಡೆ ನಮ್ಮ ಪಕ್ಷದ ಬಲ ಹೆಚ್ಚಿಸಿದೆ. ಅನಿಲ್ ಕುಮಾರ್ ಜನಪರ ಐಎಎಸ್ ಅಧಿಕಾರಿ ಆಗಿದ್ದವರು. ಹಲವು ಸಲ ನಾವು ತಾತ್ವಿಕವಾಗಿ ಚರ್ಚೆ ಮಾಡಿದ್ದೇವೆ. ಅನಿಲ್ ಕುಮಾರ್ ಪಕ್ಷ ಸೇರ್ಪಡೆಯಿಂದ ಎಸ್ಸಿ ಸಮುದಾಯದಲ್ಲಿ ಮತ್ತು ಮೌಲಿಕ ರಾಜಕಾರಣಕ್ಕೆ ಬೆಲೆ ಬಂದಿದೆ ಎಂದು ಅಭಿಪ್ರಾಯ ಪಟ್ಟರು.

    ಈ ವೇಳೆ ಸಚಿವ ಎಸ್ ಟಿ ಸೋಮಶೇಖರ್, ಸಚಿವ ಅಶ್ವತ್ಥ ನಾರಾಯಣ, ಎಮ್‌ಎಲ್‌ಸಿಗಳಾದ ಲಕ್ಷ್ಮಣ ಸವದಿ, ಸಿಪಿ ಯೋಗೇಶ್ವರ್, ದೇವೇಗೌಡ, ಶಾಸಕ ಮಸಾಲೆ ಜಯರಾಮ್, ಸಚಿವ ಗೋವಿಂದ್ ಕಾರಜೋಳ, ರಾಜ್ಯಸಭೆ ಸದಸ್ಯ ಜಗ್ಗೇಶ್ ಭಾಗಿ‌ ಆಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಅತ್ತ ಭಾರತ್ ಜೋಡೋ ಪಾದಯಾತ್ರೆ- ಇತ್ತ ಕಾಂಗ್ರೆಸ್ ಚೋಡೋ ಯಾತ್ರೆ

    ಅತ್ತ ಭಾರತ್ ಜೋಡೋ ಪಾದಯಾತ್ರೆ- ಇತ್ತ ಕಾಂಗ್ರೆಸ್ ಚೋಡೋ ಯಾತ್ರೆ

    ತುಮಕೂರು: ದೇಶವನ್ನು ಒಗ್ಗೂಡಿಸುವ ನೆಪದಲ್ಲಿ ಕಾಂಗ್ರೆಸ್ ಬಲವರ್ಧನೆಗಾಗಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆ (Bharat Jodo Yatra) ತುಮಕೂರು (Tumkur) ಜಿಲ್ಲೆ ಹಾದು ಹೋಗುತಿದ್ದಂತೆ, ಕಾಂಗ್ರೆಸ್ ಚೋಡೋ ಕಾರ್ಯಕ್ರಮವೂ ಜೋರಾಗಿದೆ. ಕಾಂಗ್ರೆಸ್‍ನ ಪ್ರಭಾವಿ ನಾಯಕ ಮಾಜಿ ಸಂಸದ ಮುದ್ದಹನುಮೇಗೌಡ (Mudda Hanume Gowda) ಕಾಂಗ್ರೆಸ್ (Congress) ತೊರೆದು ಬಿಜೆಪಿ (BJP) ವೇದಿಕೆಯಲ್ಲಿ ಹೆಚ್ಚಿಗೆ ಕಾಣಿಸಿಕೊಂಡು ಕಾಂಗ್ರೆಸ್‍ಗೆ ಶಾಕ್ ಕೊಟ್ಟಿದ್ದಾರೆ.

    ಮೂರು ದಿನಗಳ ಕಾಲ ಭಾರತ್ ಜೋಡೋ ಪಾದಯಾತ್ರೆ ತುಮಕೂರು ಜಿಲ್ಲೆಯಲ್ಲಿ ಸಂಚರಿಸಿ ಸೋಮವಾರ ಮಧ್ಯಾಹ್ನದ ವೇಳೆಗೆ ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸಿತ್ತು. ಆದರೆ ಇತ್ತ ತುಮಕೂರಿನಲ್ಲಿ ನಡೆದ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಮುದ್ದಹನುಮೇಗೌಡ ಭಾಗಿಯಾಗಿ ಸುರೇಶ್ ಗೌಡರ ಗುಣಗಾನ ಮಾಡುವುದರ ಜೊತೆಗೆ ಬಿಜೆಪಿಯನ್ನೂ ಹೊಗಳಿದರು.

    Congress

    ಕಾಂಗ್ರೆಸ್ ತೊರೆದ ಮುದ್ದಹನುಮೇಗೌಡ ಬಿಜೆಪಿಗೆ ಸೇರಿಲ್ಲ. ಭಾರತ್ ಜೋಡೋ ಪಾದಯಾತ್ರೆ ನೆಪದಲ್ಲಾದರೂ ಮುದ್ದಹನುಮೇಗೌಡ ಕಾಂಗ್ರೆಸ್ ಮೇಲಿನ ಮುನಿಸು ಕಡಿಮೆಯಾಗಿ ಪಕ್ಷದಲ್ಲೇ ಉಳಿಯಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಈ ಎಲ್ಲಾ ಲೆಕ್ಕಾಚಾರ ಬುಡಮೇಲು ಮಾಡಿದ ಮುದ್ದಹನುಮೇಗೌಡ ಇತ್ತ ಸುರೇಶ್ ಗೌಡರ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರೆ, ಅತ್ತ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆ ಮೂಲಕ ಭಾರತ್ ಜೋಡೋ ವೇಳೆ ಕಾಂಗ್ರೆಸ್ ಚೋಡೋ ಮಾಡಿ ಶಾಕ್ ಕೊಟ್ಟಿದ್ದಾರೆ.

    ಜಿಲ್ಲೆಯ ಕಾಂಗ್ರೆಸ್ ಜೋಡೋ ಮಾಡಲು ವಿಫಲವಾದ ಭಾರತ್ ಜೋಡೋ-ಭಾರತ್ ಜೋಡೋ ಮೂಲಕ ಜಿಲ್ಲೆಯ ಕಾಂಗ್ರೆಸ್ ನಾಯಕರು ಒಂದಾಗ ಬಹುದು ಎಂದುಕೊಳ್ಳಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಮಾಜಿ ಶಾಸಕ ಕೆ.ಎನ್.ರಾಜಣ್ಣ, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಮಾಜಿ ಸಚಿವ ಟಿ.ಬಿ.ಜಯಚಂದ್ರರ ನಡುವಿನ ಶೀತಲ ಸಮರ ಹಾಗೇ ಮುಂದುವರಿದಿದೆ. ಜೋಡೋ ಪಾದಯಾತ್ರೆಯಲ್ಲಿ ಈ ನಾಯಕರು ಅಷ್ಟಾಗಿ ಒಬ್ಬರಿಗೊಬ್ಬರು ಸ್ಪಂದಿಸದೇ ಇರೋದು ಕಂಡುಬಂತು. ಇದನ್ನೂ ಓದಿ: ಮೊರಾರ್ಜಿ ದೇಸಾಯಿ ಶಾಲೆಯಲ್ಲಿ RSS ಶಿಬಿರಕ್ಕೆ ಅವಕಾಶ ಆರೋಪ- ಅನುಮತಿ ಕೊಟ್ಟಿಲ್ಲ ಎಂದ ಕೋಟಾ

    ಮುದ್ದಹನುಮೇಗೌಡ ಎಂಟ್ರಿಯಿಂದ ಬಿಜೆಪಿಗೆ ಬಲ- ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರೂ ಆದ ಮುದ್ದಹನುಮೇಗೌಡ ಬಿಜೆಪಿಗೆ ಎಂಟ್ರಿ ಕೊಟ್ಟರೆ ತುಮಕೂರು ಗ್ರಾಮಾಂತರ, ತುರುವೇಕೆರೆ ಹಾಗೂ ಕುಣಿಗಲ್ ಭಾಗದಲ್ಲಿ ಬಿಜೆಪಿ ಇನ್ನಷ್ಟು ಬಲಗೊಳ್ಳಲಿದೆ. ಈ ಭಾಗದಲ್ಲಿ ಒಕ್ಕಲಿಗರ ಮತ ಹೆಚ್ಚಾಗಿರುವುದರಿಂದ ಆ ಸಮುದಾಯದ ಮತ ಸೆಳೆಯಲು ಗೌಡರ ಎಂಟ್ರಿ ಬಿಜೆಪಿಗೆ ಅನುಕೂಲ ಆಗಲಿದೆ. ಭಾರತ್ ಜೋಡೋ ಪಾದಯಾತ್ರೆಯಿಂದ ಕಾಂಗ್ರೆಸ್ ಬಲವರ್ಧನೆಗೊಳ್ಳುತ್ತದೆ ಎಂಬ ಲೆಕ್ಕಾಚಾರ ಜಿಲ್ಲೆಯ ಮಟ್ಟಿಗೆ ಅಷ್ಟೊಂದು ಯಶಸ್ವಿಯಾದಂತೆ ಕಾಣುತ್ತಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ `108′ ಸಮಸ್ಯೆ – 2 ತಿಂಗಳಲ್ಲಿ ಬಗೆಹರಿಯಲಿದೆ ಎಂದ ಸುಧಾಕರ್

    Live Tv 
    [brid partner=56869869 player=32851 video=960834 autoplay=true]

  • ಇಂದು ಸಂಜೆಯೊಳಗೆ ಮುದ್ದಹನುಮೇ ಗೌಡ ಕಾಂಗ್ರೆಸ್‍ಗೆ ಗುಡ್‍ಬೈ

    ಇಂದು ಸಂಜೆಯೊಳಗೆ ಮುದ್ದಹನುಮೇ ಗೌಡ ಕಾಂಗ್ರೆಸ್‍ಗೆ ಗುಡ್‍ಬೈ

    ಬೆಂಗಳೂರು: ನಾನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಬಿಡುಗಡೆ ಮಾಡಿ ಎಂದು ಮನವಿ ಮಾಡಿ ಬಂದಿದ್ದೇನೆ. ಒಂದು ಪಕ್ಷ ಬಿಡಲು ಬಲವಾದ ಕಾರಣ, ಅದು ಪಕ್ಷದಿಂದ ಆಗಿರಬೇಕು ಇಲ್ಲವೇ ನನ್ನಿಂದ ಆಗಿರಬೇಕು. ಅದು ನನ್ನ ಕಡೆಯಿಂದ ಆದ್ರೆ ಪಕ್ಷ ಸ್ಪಷ್ಟವಾಗಿ ಹೇಳಬೇಕು ಎಂದು ಮಾಜಿ ಸಂಸದ ಮುದ್ದಹನುಮೆಗೌಡ ಕಿಡಿಕಾರಿದ್ದಾರೆ.

    ಸಿದ್ದರಾಮಯ್ಯ ಹಾಗೂ ಡಿಕೆಶಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ರಾಷ್ಟ್ರೀಯ ಪಕ್ಷ ಬಿಡಲು ಬಲವಾದ ಕಾರಣದಿಂದ ಇರಬೇಕು ತಾನೇ..? ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಮತ್ತು ಡಿಕೆಶಿ ಭೇಟಿ ಮಾಡಿ ನನ್ನ ಸ್ಪಷ್ಟ ನಿರ್ಧಾರ ತಿಳಿಸಿದ್ದೇನೆ. 1989ರಲ್ಲಿ ಕಾಂಗ್ರೆಸ್ ಬಿ ಫಾರಂ ಕೊಟ್ಟು ನಂತರ ಬೇರೆಯವರಿಗೆ ಕೊಟ್ಟಿದ್ರು. ಬಳಿಕ 2019ರಲ್ಲಿ ಸಂಸದ ಆಗಿದ್ದರೂ ನಿಲ್ಲಲು ಅವಕಾಶ ಕೊಡಲಿಲ್ಲ. ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದನ್ನು ತಪ್ಪಿಸಲಾಗಿದೆ. ಕಾಂಗ್ರೆಸ್ ಪಕ್ಷ ಶಾಸಕ, ಸಂಸದರಾಗಿ ಆಯ್ಕೆಯಾಗಲು ಅವಕಾಶ ಕೊಟ್ರು ಎಂದರು.

    ನಾನು ಅತ್ಯಂತ ಕ್ರೀಯಾಶೀಲನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷಕ್ಕೆ ನನ್ನದೇ ಆದ ಅಳಿಲು ಸೇವೆ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನನ್ನ ಸೇವೆಯೂ ಇದೆ. ನನ್ನ ಕ್ರಿಯಾಶೀಲ ರಾಜಕೀಯ ನಿಂತಿಲ್ಲ. ಪಕ್ಷಕ್ಕೆ ಕೂಡ ನನ್ನ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ. ನಾಲ್ಕು ಬಾರಿ ಸ್ಪರ್ಧೆಯಿಂದ ತಪ್ಪಿಸುವಂತಹ ಅನಿವಾರ್ಯ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಸೌದಿ ಮಹಿಳೆಗೆ 45 ವರ್ಷ ಜೈಲು ಶಿಕ್ಷೆ

    ನನ್ನ ರಾಜಕೀಯ ಜೀವನವನ್ನು ಯಾವ ರೀತಿ ಎದುರಿಸಿದೆ ಎಂದು ಜನರಿಗೆ ಗೊತ್ತಿದೆ. ಪಕ್ಷದಿಂದ ಬಿಡುಗಡೆ ಮಾಡಿ ಎಂದು ಕೇಳಿದ್ದೇನೆ. ಇಷ್ಟು ವರ್ಷಗಳ ನಡೆದ ರಾಜಕೀಯ ದೊರಣೆಗಳು ಇಂತಹ ಪರಿಸ್ಥಿತಿಗೆ ಕಾರಣ. ಇವತ್ತು ಈ ನಿರ್ಧಾರ ಮಾಡಿದ್ದೇನೆ, ಮುಂದೆ ಒಳ್ಳೆಯ ಅವಕಾಶಗಳು ಬರುತ್ತವೆ ಎಂದರು.

    ಸುರ್ಜೇವಾಲಾ ದೂರವಾಣಿ ಮೂಲಕ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಮಾತನಾಡಿದ್ರು. ಇತ್ತಿಚೆಗೆ ನನ್ನ ಜೊತೆ ಮಾತನಾಡಿಲ್ಲ. 2023ಕ್ಕೆ ನಾನು ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿ ಆಗುವುದು ಖಚಿತ. ನಾನು ಕಾಂಗ್ರೆಸ್ ನಿಂದ ದೂರ ಸರಿದಿದ್ದೇನೆ ಸಾಂಕೇತಿಕವಾಗಿ ಭೇಟಿ ಮಾಡಬೇಕಿತ್ತು. ಹೀಗಾಗಿ ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ನಿಂದ ದೂರ ಹೋಗಿದ್ದೇನೆ. ಇಂದು ಸಂಜೆ ಒಳಗೆ ಅಧಿಕೃತವಾಗಿ ರಾಜೀನಾಮೆ ಕೊಡ್ತೀನಿ ಎಂದು ಮುದ್ದಹನುಮೇಗೌಡ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಮುದ್ದಹನುಮೇಗೌಡದ್ದು ಬರೀ ಐರನ್ ಲೆಗ್ ಅಲ್ಲ, ಅದಕ್ಕಿಂತ ಕೆಟ್ಟದ್ದು: ರಾಮಸ್ವಾಮಿಗೌಡ

    ಮುದ್ದಹನುಮೇಗೌಡದ್ದು ಬರೀ ಐರನ್ ಲೆಗ್ ಅಲ್ಲ, ಅದಕ್ಕಿಂತ ಕೆಟ್ಟದ್ದು: ರಾಮಸ್ವಾಮಿಗೌಡ

    ತುಮಕೂರು: ಮುದ್ದಹನುಮೇಗೌಡದ್ದು ಬರೀ ಐರನ್ ಲೆಗ್ ಅಲ್ಲ. ಅದಕ್ಕಿಂತ ಕೆಟ್ಟದ್ದು. ಅವರನ್ನು ನಂಬಿದವರೆಲ್ಲಾ ಹಾಳಾಗಿ ಹೋಗಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ ಹರಿಹಾಯ್ದಿದ್ದಾರೆ.

    ಕುಣಿಗಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುದ್ದಹನುಮೇಗೌಡ ಬೆಳಗ್ಗೆ ಕಾಂಗ್ರೆಸ್ ಅಂತಾರೆ ಮಧ್ಯಾಹ್ನ ಬಿಜೆಪಿ, ಸಾಯಂಕಾಲ ಆಮ್ ಆದ್ಮಿ ಅಂತಾರೆ. ಮುದ್ದಹನುಮೇಗೌಡರು ಸುಲಭದಲ್ಲಿ ಸ್ವಾಹ ಮಾಡುವ ಗಿರಾಕಿ ಕಾಂಗ್ರೆಸ್ ಇಬ್ಬಾಗ ಮಾಡಿದ ಪುಣ್ಯಾತ್ಮ. ಈಗ ಬಿಜೆಪಿಗೆ ಹೋದರೆ ಗೆದ್ದು ಬಿಡುತ್ತೇನೆ ಎನ್ನುವ ಸ್ವಾರ್ಥ ಹೊಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಮುದ್ದಹನುಮೇಗೌಡ ಅವರಿಗೇ ರಾಜಕೀಯದಲ್ಲಿ ಯಾವ ನೈತಿಕತೆಯೂ ಇಲ್ಲ. ಕುಣಿಗಲ್ ತಾಲೂಕಿನಲ್ಲಿ ಅವರ ಸಾಧನೆ ಏನು? ಒಂದೇ ಒಂದು ಅಡಿ ಕಾಲುವೆ ಮಾಡಿದ್ದಾರಾ? ನಾನು ಕುಣಿಗಲ್ ತಾಲೂಕಿನವನು ಅಂತಾರೆ, ಕುಣಿಗಲ್‍ನಿಂದ ಟಿಕೆಟ್ ಕೇಳುತ್ತಾರೆ. ಎಲ್ಲರೂ ಪ್ರೈಮರಿ ಸ್ಕೂಲ್, ಮಿಡಲ್ ಸ್ಕೂಲ್, ಹೈ ಸ್ಕೂಲ್ ಇಲ್ಲಿಯೇ ಓದಿರುವುದು. ಇಲ್ಲಿ ಓದಿದ್ದೇನೆ ಅಂದ ಮಾತ್ರಕ್ಕೆ ಟಿಕೆಟ್ ಕೊಡಬೇಕು ಅಂತ ಹೇಳಿದರೆ ಹೇಗೆ? ಹಾಗಿದ್ದರೆ ಬಹಳಷ್ಟು ಮಂದಿ ಎಮ್‍ಎಲ್‍ಎ ಆಗಿಬಿಡುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಹತ್ಯೆಗೈದ ಅಪ್ರಾಪ್ತ ಬಾಲಕ

    ಮುದ್ದಹನುಮೇಗೌಡರು ಶಾಸಕರಾಗಿದ್ದು ಕುಣಿಗಲ್ ತಾಲೂಕಿನ 20 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ. ಮುದ್ದಹನುಮೇಗೌಡರು ಬರೀ ಐರನ್ ಲೆಗ್ ಅಲ್ಲ. ಅದಕ್ಕಿಂತ ಕೆಟ್ಟದ್ದು. ಅವರನ್ನು ನಂಬಿದವರನೆಲ್ಲಾ ಹಾಳು ಮಾಡಿ ಬಿಡುತ್ತಾರೆ. ಅವರು ಕಾಲಿಟ್ಟ ಪಕ್ಷವೆಲ್ಲಾ ಮುಳುಗಿ ಹೋಗುತ್ತದೆ. ನನ್ನ ಜೊತೆಯಲ್ಲಿ ಇದ್ದುಕೊಂಡೆ ನನಗೆ ಟಿಕೆಟ್ ತಪ್ಪಿಸಿದ ಕುತಂತ್ರಿ. ಇನ್ನೊಬ್ಬರು ಬೆಳೆಯಬಾರದು ಎನ್ನುವ ಕೆಟ್ಟ ಮನೋಭಾವ ಅವರದ್ದು, ಅವರು ಗೆದ್ದು ಕೆಲಸ ಮಾಡಿದ್ದ ಲೋಕಸಭಾ ಕ್ಷೇತ್ರ ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲೇ ಸ್ಪರ್ಧಿಸಿ ಚಾಲೆಂಜ್ ತೋರಿಸಲಿ ಎಂದು ಸವಾಲೊಡ್ಡಿದ್ದಾರೆ. ಇದನ್ನೂ ಓದಿ: ಕೊರೊನಾ ಇನ್ನೂ ಮುಗಿದಿಲ್ಲ, ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ: ಉದ್ಧವ್ ಠಾಕ್ರೆ

  • ಟಿಕೆಟ್‍ಗಾಗಿ ಸೋನಿಯಾ, ರಾಹುಲ್ ಗಾಂಧಿ ಬಳಿ ಹೋಗುತ್ತೇನೆ: ಮಾಜಿ ಸಂಸದ ಮುದ್ದಹನುಮೇಗೌಡ

    ಟಿಕೆಟ್‍ಗಾಗಿ ಸೋನಿಯಾ, ರಾಹುಲ್ ಗಾಂಧಿ ಬಳಿ ಹೋಗುತ್ತೇನೆ: ಮಾಜಿ ಸಂಸದ ಮುದ್ದಹನುಮೇಗೌಡ

    ತುಮಕೂರು: ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಈಗಿನಿಂದಲೇ ಕಾಂಗ್ರೆಸ್ ಟಿಕೆಟ್‍ಗಾಗಿ ಫೈಟ್ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಬಂಧಿ ಡಾ.ರಂಗನಾಥ ಹಾಲಿ ಶಾಸಕರಿದ್ದರೂ ಮಾಜಿ ಸಂಸದ ಮುದ್ದಹನುಮೇಗೌಡ ಟಿಕೆಟ್‍ಗಾಗಿ ಫೈಟ್ ಶುರುಮಾಡಿದ್ದಾರೆ.

    ಪಬ್ಲಿಕ್ ಟಿ.ವಿ. ಜೊತೆಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ನಾನು ಸ್ಥಾನ ತ್ಯಾಗ ಮಾಡಿದ್ದೆ. ರಾಜ್ಯ ಸಭಾ ಸದಸ್ಯರಾಗಿ ಮಾಡೋದಾಗಿ ವೇಣುಗೋಪಾಲ್ ಹೇಳಿದ್ದರು. ಈ ವಿಚಾರದಲ್ಲೂ ಪಕ್ಷದಿಂದ ನನಗೆ ಅನ್ಯಾಯವಾಗಿದೆ. ಹೀಗಾಗಿ ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ಕೊಟ್ಟು ನನಗೆ ಆದ ಅನ್ಯಾಯ ಸರಿಮಾಡಲಿ ಎಂದಿದ್ದಾರೆ.  ಇದನ್ನೂ ಓದಿ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ  ಇಬ್ರಾಹಿಂ ಸುತಾರ ನಿಧನ

    RAHUL GANDHI

    ಟಿಕೆಟ್ ಕೊಡಲಿ, ಬಿಡಲಿ ನಾನಂತು ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸೋದು ಶತಸಿದ್ಧವಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಳಿ ಹೋಗಿ ಟಿಕೆಟ್ ಕೇಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.