Tag: ಮುತ್ತೋಡಿ

  • ಮುತ್ತೋಡಿ ಅರಣ್ಯದಲ್ಲಿ ಪ್ರವಾಸಿಗರ ಕ್ಯಾಮೆರಾಕ್ಕೆ  ಪೋಸ್ ​​ ಕೊಟ್ಟ ಹುಲಿರಾಯ

    ಮುತ್ತೋಡಿ ಅರಣ್ಯದಲ್ಲಿ ಪ್ರವಾಸಿಗರ ಕ್ಯಾಮೆರಾಕ್ಕೆ ಪೋಸ್ ​​ ಕೊಟ್ಟ ಹುಲಿರಾಯ

    ಚಿಕ್ಕಮಗಳೂರು: ಮುತ್ತೋಡಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿರಾಯನ ದರ್ಶನವಾಗಿದೆ. ಹುಲಿರಾಯ ಕ್ಯಾಮರಾಕ್ಕೆ ಪೋಸ್ ನೀಡಿದ್ದು ಪ್ರವಾಸಿಗರು ಫುಲ್ ದಿಲ್ ಖುಷ್ ಆಗಿದ್ದಾರೆ.

    ತಾಲೂಕಿನ ಮುತ್ತೋಡಿ ಅರಣ್ಯ ವಲಯಕ್ಕೆ ಆಗಾಗ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಬಂದವರೆಲ್ಲರೂ ಕೂಡ ಕಾಡಿನಲ್ಲಿ ಬೆಳಗ್ಗೆ, ಸಂಜೆ ಸಫಾರಿಗೆ ತೆರಳುತ್ತಾರೆ. ಆದರೆ, ಬಂದವರಿಗೆಲ್ಲಾ ಹುಲಿರಾಯನ ದರ್ಶನವಾಗುವುದಿಲ್ಲ. ಆದರೆ, ನಿನ್ನೆ ಸಂಜೆ ಸಫಾರಿಗೆ ಹೊರಟ ಪ್ರವಾಸಿಗರಿಗೆ ನೀರು ಕುಡಿದು ಹಳ್ಳ ದಾಟುತ್ತಿದ್ದ ಹುಲಿರಾಯನ ದರ್ಶನವಾಗಿದೆ. ಹಳ್ಳವನ್ನು ದಾಟುತ್ತಿದ್ದ ವ್ಯಾಘ್ರ ಪ್ರವಾಸಿಗರು ನನ್ನನ್ನೇ ನೋಡುತ್ತಿದ್ದಾರೆ ಎಂದು ಭಾವಿಸಿ ಪ್ರವಾಸಿಗರ ಕ್ಯಾಮೆರಾಕ್ಕೆ ಪೋಸ್ ಕೊಟ್ಟು ಹೋಗಿದೆ. ಇದನ್ನೂ ಓದಿ: ರಸ್ತೆ ಪಕ್ಕದಲ್ಲೇ ಹೊತ್ತಿ ಉರಿದ ಕಾರು – ತಪ್ಪಿದ ಭಾರೀ ಅನಾಹುತ

    ಕಾಡಲ್ಲಿ ಹುಲಿಯನ್ನು ಕಣ್ಣಾರೆ ಕಂಡ ಪ್ರವಾಸಿಗರು ಸಂತೋಷದಿಂದ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ. ಮುತ್ತೋಡಿ ಅರಣ್ಯದಲ್ಲಿ ಪ್ರತಿದಿನ ಬೆಳಗ್ಗೆ-ಸಂಜೆ ಸಫಾರಿಗೆ ಕರೆದುಕೊಂಡು ಹೋಗುತ್ತಾರೆ. ಈ ವೇಳೆ, ಆನೆಗಳ ಹಿಂಡು, ಕಾಡುಕೋಣ, ನವಿಲು, ಉಡ, ಜಿಂಕೆ, ಸಾರಗ ಸೇರಿದಂತೆ ಸಾಕಷ್ಟು ಪ್ರಾಣಿಗಳು ಪ್ರವಾಸಿಗರ ಕಣ್ಣಿಗೆ ಬೀಳುತ್ತವೆ. ಆದರೆ, ಚಿರತೆ ಹಾಗೂ ಹುಲಿ ಬೀಳುವುದು ತುಂಬಾ ವಿರಳ. ಕೆಲವೊಮ್ಮೆ ಪ್ರವಾಸಿಗರಿಗೆ ಹುಲಿಗಳ ಹೆಜ್ಜೆ ಗುರುತುಗಳು ಸಿಗುತ್ತವೆ. ಆದರೆ, ನಿನ್ನೆ ಹೋದ ಪ್ರವಾಸಿಗರಿಗೆ ಕ್ಯಾಮರಾ ಕಣ್ಣಿಗೆ ಮನುಷ್ಯರಂತೆ ಪೋಸ್ ನೀಡುವ ಹುಲಿಯೇ ಸಿಕ್ಕಿದೆ. ಅಂದಾಜು 25 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿರುವ ಮುತ್ತೋಡಿ ಅರಣ್ಯ ವಲಯವನ್ನೂ ಆಡಳಿತದ ಅನುಕೂಲಕ್ಕಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಇದನ್ನೂ ಓದಿ: ಅರೆನೂರು ಗ್ರಾಮಕ್ಕೆ ಸೇತುವೆ ಇಲ್ಲದೇ ಜನ ಪರದಾಟ- ಪ್ರಾಣ ಕೈಲಿಡಿದೇ ಓಡಾಟ!

  • ಕಾಫಿನಾಡ ಕಾಡಲ್ಲಿ ಬಂಗಾರದ ಕಾಡೆಮ್ಮೆ ಪತ್ತೆ

    ಕಾಫಿನಾಡ ಕಾಡಲ್ಲಿ ಬಂಗಾರದ ಕಾಡೆಮ್ಮೆ ಪತ್ತೆ

    ಚಿಕ್ಕಮಗಳೂರು: 1980-90 ದಶಕದಲ್ಲಿ ಕಣ್ಮರೆಯಾಗಿದ್ದ ಅಪರೂಪದ ಕಾಟಿ ತಳಿಯ ಕಾಡೆಮ್ಮೆ ಸಂತತಿ ಮತ್ತೆ ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಅರಣ್ಯದ ಮುತ್ತೋಡಿ ವಲಯದಲ್ಲಿ ಪತ್ತೆಯಾಗಿದೆ.

    ಕಾಡೆಮ್ಮೆಗಳು ಬಹುತೇಕ ಕಪ್ಪು ಬಣ್ಣದಿಂದ ಕೂಡಿರುತ್ತವೆ. ಆದರೆ ಕಾಟಿ ತಳಿಯ ಈ ಕಾಡೆಮ್ಮೆ ಬಂಗಾರದ ಬಣ್ಣದಿಂದ ಕಂಗೊಳಿಸುತ್ತಿದೆ. ಈ ಅಪರೂಪದ ಕಾಡೆಮ್ಮೆ ಬಣ್ಣ ಹಾಗೂ ಮೈಕಟ್ಟು ನೋಡುಗರಲ್ಲಿ ಅಚ್ಚರಿ ಮೂಡಿಸಿದರೂ 80-90ರ ದಶಕದಲ್ಲಿ ಈ ತಳಿಯ ಕಾಡೆಮ್ಮೆಗಳು ಕಾಫಿನಾಡ ಅರಣ್ಯದಲ್ಲಿ ಇತ್ತು. ಆಗ ಇಂದರ್ಫಿಸ್ಟ್ ಎಂಬ ಕಾಯಿಲೆಯಿಂದ ಈ ತಳಿ ಸಂಪೂರ್ಣ ನಾಶವಾಗಿತ್ತು. ಇದೀಗ ಮತ್ತೆ ಈ ತಳಿಯ ಕಾಡೆಮ್ಮೆ ಪತ್ತೆಯಾಗಿರೋದು ಈ ತಳಿಗಳ ಬೆಳವಣಿಗೆಯಾಗಿದೆ ಎಂದೇ ಭಾವಿಸಲಾಗಿದೆ.

    ಹುಲಿಗಳಲ್ಲಿ ಬಿಳಿ ಹುಲಿ, ಚಿರತೆಗಳಲ್ಲಿ ಕಪ್ಪು ಚಿರತೆ ಇರುವಂತೆ ಕಾಡೆಮ್ಮೆಗಳಲ್ಲಿ ಈ ರೀತಿ ಕಂಡು ಬರಲಿದೆ. ಇದನ್ನ ಇಂಗ್ಲಿಷಿನಲ್ಲಿ ಗಾರ್ ಎಂದು ಕರೆಯುತ್ತಾರೆ. ಈ ಸಂತತಿ ಈಗ ಮತ್ತೆ ಹೆಚ್ಚಾಗಿರೋದ್ರಿಂದ ಈ ರೀತಿ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ ಎಂದು ಹೇಳಲಾಗಿದೆ. ಚಿನ್ನದ ಲೇಪನದಂತೆ ಹೊಳೆಯುವ ಕಾಡೆಮ್ಮೆಯೊಂದು ಕಂಡಿದ್ದು. ಈ ಭಾಗದಲ್ಲಿ ಈ ರೀತಿಯ ಕಾಡೆಮ್ಮೆ ಕಾಣ ಸಿಗುವುದು ವಿಶೇಷ.

    ಜಿಲ್ಲೆಯ ಮುತ್ತೋಡಿ ಅರಣ್ಯ ಹಲವು ವಿಚಿತ್ರ ಹಾಗೂ ವೈವಿಧ್ಯಮಯ ಘಟನೆಗೆ ಸಾಕ್ಷಿಯಾಗಿದೆ. ಈಗ ಸುಮಾರು 30-40 ವರ್ಷಗಳ ಹಿಂದೆಯೇ ನಾಶವಾಗಿರುವ ಪ್ರಾಣಿಗಳ ಸಂತತಿ ಒಂದು ಮತ್ತೆ ಅಭಿವೃದ್ಧಿ ಆಗಿರುವಂಥದ್ದು ಬೆಳಕಿಗೆ ಬಂದಂತಿದೆ. ಈ ಕಾಡೆಮ್ಮೆ ಇರುವುದು ಅಪರೂಪ, ನಿಸರ್ಗದಲ್ಲಿ ಅನೇಕ ವಿಸ್ಮಯಗಳು ನಡೆಯುತ್ತದೆ. ಅಂತಹಾ ವಿಸ್ಮಯಗಳಲ್ಲಿ ಇದು ಕೂಡ ಸಹಜ. ನೋಡಲು ಬಂಗಾರದ ಲೇಪನವಾದಂತೆ ಕಾಣೋ ಈ ಕಾಡೆಮ್ಮೆ ನೋಡುಗರ ಗಮನ ಸೆಳೆದಿದೆ.