Tag: ಮುಡಿ

  • ತಿಮ್ಮಪ್ಪನಿಗೆ ಮುಡಿಕೊಟ್ಟ ಖ್ಯಾತ ನಟಿ ಗಾಯತ್ರಿ ರಘುರಾಮ್

    ತಿಮ್ಮಪ್ಪನಿಗೆ ಮುಡಿಕೊಟ್ಟ ಖ್ಯಾತ ನಟಿ ಗಾಯತ್ರಿ ರಘುರಾಮ್

    ನ್ನಡದಲ್ಲಿ ಮನಸ್ಸೆಲ್ಲಾ ನೀನೇ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ನಟಿ ಗಾಯತ್ರಿ ರಘುರಾಮ್(Gayatri Raghuram) , ಈವರೆಗೂ ಸಲ್ಲದ ಕಾರಣಕ್ಕಾಗಿ ಸುದ್ದಿಯಾಗುತ್ತಿದ್ದರು. ಈ ಬಾರಿ ಅವರು ತಿರುಪತಿ (Tirupati Timmappa)  ತಿಮ್ಮಪ್ಪನ ದರ್ಶನ ಮಾಡಿ, ಮುಡಿ ಕೊಡುವ ಮೂಲಕ ಸುದ್ದಿಯಾಗಿದ್ದಾರೆ. ತಿಮ್ಮಪ್ಪನಿಗೆ ಮುಡಿ ಕೊಡಬೇಕು ಎನ್ನುವುದು 10 ವರ್ಷಗಳ ಪ್ರಾರ್ಥನೆ ಆಗಿತ್ತಂತೆ. ಈಗ ಅದು ಈಡೇರಿದೆ. ವಾರದ ಹಿಂದೆಯಷ್ಟೇ ಉದ್ದನೆಯ ಜಡೆಯ ಫೋಟೋ ಹಾಕಿದ್ದ ಗಾಯತ್ರಿ ಇದೀಗ ಮುಡಿಕೊಟ್ಟ ಫೋಟೋ ಶೇರ್ ಮಾಡಿದ್ದಾರೆ.

    ತಮಿಳು ಚಿತ್ರೋದ್ಯಮದಲ್ಲಿ ಸ್ಟಾರ್ ನಟಿ ಎಂದೇ ಗುರುತಿಸಿಕೊಂಡಿದ್ದ ಗಾಯತ್ರಿ ಕನ್ನಡ, ತೆಲುಗು ಹಾಗೂ ಮಲಯಾಳಂ ಚಿತ್ರಗಳಿಗೂ ಬಣ್ಣ ಹಚ್ಚಿದ್ದಾರೆ. ಹಲವಾರು ಯಶಸ್ವಿ ಸಿನಿಮಾಗಳಿಗೆ ನಾಯಕಿಯಾಗಿದ್ದಾರೆ. ಕೇವಲ ನಟಿ ಮಾತ್ರವಲ್ಲ, ನಿರ್ಮಾಪಕಿ, ಕೊರಿಗೋಗ್ರಾಫರ್, ನಿರ್ದೇಶಕಿಯಾಗಿಯೂ ಚಿತ್ರೋದ್ಯಮಕ್ಕೆ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ:‘ಟೈಗರ್ ನಾಗೇಶ್ವರ್ ರಾವ್’ ಟೀಸರ್ ಔಟ್- ಮಾಸ್ ಆಗಿ ಎಂಟ್ರಿ ಕೊಟ್ಟ ರವಿತೇಜ

    2006ರಲ್ಲಿ ದೀಪಕ್ ಚಂದ್ರಶೇಖರ್ ಜೊತೆ ಹೊಸ ಬದುಕಿಗೆ ಕಾಲಿಟ್ಟವರು ಅಲ್ಲಿಯೂ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾದ ಕೇವಲ ನಾಲ್ಕೇ ನಾಲ್ಕು ವರ್ಷಕ್ಕೆ ಅವರಿಂದ ದೂರವಾದರು. ಎರಡು ವರ್ಷಗಳ ಹಿಂದೆಯಷ್ಟೇ ಚಿತ್ರೋದ್ಯಮಕ್ಕೆ ಗುಡ್ ಬೈ ಹೇಳಿದ್ದರು. ನಂತರ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದರು.

     

    ಆನಂತರ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡು, ಪಕ್ಷ ಕಟ್ಟಲು ಮುಂದಾದರು. ಪಕ್ಷದ ಕಲೆ ಮತ್ತು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. ನಂತರ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮೇಲೆ ಆರೋಪ ಮಾಡಿ ರಾಜೀನಾಮೆ ಕೂಡ ನೀಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನೆದೇವರ ಮುಂದೆ ಮಗನ ಮುಡಿ ಅರ್ಪಿಸಿದ ನಟ ನಿಖಿಲ್ ಕುಮಾರಸ್ವಾಮಿ

    ಮನೆದೇವರ ಮುಂದೆ ಮಗನ ಮುಡಿ ಅರ್ಪಿಸಿದ ನಟ ನಿಖಿಲ್ ಕುಮಾರಸ್ವಾಮಿ

    ಮೊನ್ನೆಯಷ್ಟೇ ಕೃಷ್ಣ ಜನ್ಮಾಷ್ಟಮಿ ದಿನದಂದು ಮಗನಿಗೆ ಜುಟ್ಟು ಕಟ್ಟಿ ಕೃಷ್ಣನ ವೇಷ ಹಾಕಿ ಸಂಭ್ರಮಿಸಿದ್ದ ನಟ, ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ, ಎರಡು ದಿನಗಳ ಹಿಂದೆಯಷ್ಟೇ ಮಗನಿಗೆ ಮನೆದೇವರ ಮುಂದೆ ಮುಡಿ ಅರ್ಪಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಸೇರಿದಂತೆ ಕುಟುಂಬದ ಬಹುತೇಕ ಸದಸ್ಯರು ಹಾಜರಿದ್ದು, ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

    ಆಗಸ್ಟ್ 21 ರಂದು ಈ ಮುಡಿ ಕಾರ್ಯಕ್ರಮವು ಹೆಚ್.ಡಿ. ಕುಮಾರಸ್ವಾಮಿಗಳ ಮನೆ ದೇವರಾದ ಚನ್ನರಾಯಪಟ್ಟಣ ತಾಲೂಕಿನ ಯಲಿಯೂರು ಲಕ್ಷ್ಮಿ ದೇಗುಲದಲ್ಲಿ ನಡೆದಿದ್ದು, ವಿಶೇಷ ಪೂಜೆಯನ್ನೂ ಕುಟುಂಬ ಮಾಡಿದೆ. ಮೊಮ್ಮಗನಿಗೆ ಒಳ್ಳೆಯದಾಗಲಿ ಎಂದು ಹಲವು ಪೂಜಾ ಕಾರ್ಯಗಳನ್ನು ನೆರವೇರಿಸಿದ ನಿಖಿಲ್ ಕುಟುಂಬ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಮುಡಿ ಕಾರ್ಯಕ್ರಮದ  ನಂತರ ಇಡೀ ಕುಟುಂಬ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ಕುಲದೇವರು ದೇವೇಶ್ವರನಿಗೂ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಹಿಂದೆ ಬೆಂಗಳೂರಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಮೊಮ್ಮಗನಿಗೆ ಅವ್ಯಾನ್ ದೇವ್ ಎಂದು ನಾಮಕರಣ ಮಾಡಿದ್ದರು ಹೆಚ್.ಡಿ. ಕುಮಾರಸ್ವಾಮಿ. ಇದೀಗ ಮುಡಿ ಶಾಸ್ತ್ರವನ್ನೂ ಮುಗಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 99 ದಿನಗಳಲ್ಲಿ ಮುಡಿ ಕೂದಲಿನಿಂದ ಮಲೆ ಮಾದಪ್ಪನಿಗೆ ಬಂದ ಅದಾಯ 1.49 ಕೋಟಿ ರೂ.

    99 ದಿನಗಳಲ್ಲಿ ಮುಡಿ ಕೂದಲಿನಿಂದ ಮಲೆ ಮಾದಪ್ಪನಿಗೆ ಬಂದ ಅದಾಯ 1.49 ಕೋಟಿ ರೂ.

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಕೂದಲಿನ ಬಿಡ್ ನಡೆದಿದ್ದು, ಪ್ರತಿ ಕೆ.ಜಿ.ಗೆ 15,535 ರೂ. ನಂತೆ 4,595 ಕೆ.ಜಿ. ತುಂಡು ಕೂದಲು, 951 ಕೆ.ಜಿ. ಉದ್ದದ ಕೂದಲು ಮಾರಾಟವಾಗಿದ್ದು, ಇದರಿಂದ ಬರೋಬ್ಬರಿ 1,49,40,391 ರೂ. ಆದಾಯ ಬಂದಿದೆ.

    ನಾಡಿನ ಪ್ರಮುಖ ದೇಗುಲಗಳಲ್ಲಿ ಒಂದಾದ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹರಕೆ ಕೂದಲಿನ ಬಿಡ್ ನಡೆದಿದ್ದು, ಪ್ರತಿ ಕೆಜಿಗೆ 15,535 ರೂ. ನಂತೆ 4,595 ಕೆಜಿ ತುಂಡು ಕೂದಲು, 951 ಕೆ.ಜಿ. ಉದ್ದ ಕೂದಲು ಮಾರಾಟವಾಗಿದ್ದು, ಬರೋಬ್ಬರಿ 1,49,40,391 ರೂ. ಆದಾಯ ಬಂದಿದೆ. ಹುಂಡಿಯಲ್ಲಿ ಸಂಗ್ರಹವಾಗುತ್ತಿದ್ದ ಹಣದಿಂದ ಗಮನ ಸೆಳೆಯುತ್ತಿದ್ದ ಮಲೆ ಮಾದಪ್ಪ ಈಗ ಮತ್ತಷ್ಟು ಶ್ರೀಮಂತನಾಗಿದ್ದು, ಹರಕೆ ಕೂದಲಿನ ಹರಾಜಿನಿಂದ ಬರೋಬ್ಬರಿ 1.49 ಕೋಟಿ ರೂ. ಸಂಗ್ರಹವಾಗಿದೆ. ಇದನ್ನೂ ಓದಿ: ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

    ಈ ಕುರಿತು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿ, ಕಳೆದ ವರ್ಷಕ್ಕಿಂತ ಈ ವರ್ಷ ಪ್ರತಿ ಕೆ.ಜಿ.ಗೆ 8,135 ರೂ. ಹೆಚ್ಚಿನ ಲಾಭ ಬಂದಿದ್ದು, ಒಟ್ಟು ಹಣ 1.49 ಕೋಟಿ ರೂ. ಸಂಗ್ರಹವಾಗಿರುವುದು ಸಾರ್ವಕಾಲಿಕ ದಾಖಲೆಯಾಗಿದೆ. ಈ ಮುಡಿ ಕೂದಲು 99 ದಿನಗಳಲ್ಲಿ ಸಂಗ್ರಹವಾಗಿತ್ತು ಎಂದು ತಿಳಿಸಿದ್ದಾರೆ.

  • ಯಥರ್ವ್‍ನ ಮುಡಿಕೊಟ್ಟಿರುವ ಫೊಟೋ ಹಂಚಿಕೊಂಡ ರಾಧಿಕಾ ಪಂಡಿತ್

    ಯಥರ್ವ್‍ನ ಮುಡಿಕೊಟ್ಟಿರುವ ಫೊಟೋ ಹಂಚಿಕೊಂಡ ರಾಧಿಕಾ ಪಂಡಿತ್

    ಬೆಂಗಳೂರು: ರಾಕಿಂಗ್ ದಂಪತಿಯ ಪುಟ್ಟ ಕಂದಮ್ಮ ಯಥರ್ವ್‍ನ ಮುಡಿ ತೆಗೆದಿರುವ ಫೋಟೋವನ್ನು ರಾಧಿಕಾ ಪಂಡಿತ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಯಶ್ ದಂಪತಿ ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಮುದ್ದಾದ ಮಕ್ಕಳ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈ ಬಾರಿ ಹಂಚಿಕೊಂಡಿರುವ ಫೋಟೋ ಕೊಂಚ ವಿಭಿನ್ನ ಮತ್ತು ವಿಶೇಷವಾಗಿದೆ.

    ರಾಧಿಕಾ ಪಂಡಿತ್ ಹಂಚಿಕೊಂಡಿರುವ ಫೋಟೋದಲ್ಲಿ ಮುದ್ದು ಮಗ ಯಥರ್ವ್‍ನನ್ನು ಯಶ್ ಎತ್ತಿಕೊಂಡಿದ್ದಾರೆ. ನಗುತ್ತಾ ಮಗನ ತಲೆಯನ್ನು ನೋಡುತ್ತಿದ್ದಾರೆ. ಮಗನ ಮುಡಿಯನ್ನು ತೆಗೆದಿರುವ ವಿಚಾರವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಯಥರ್ವ್‍ನ ಮುಡಿ ಕೊಟ್ಟಿರುವ ಫೋಟೋವನ್ನು ಹಾಕಿ ಮೊದಲು ಮತ್ತು ನಂತರ ಎಂಬ ಶೀರ್ಷಿಕೆಯನ್ನು ಕೊಟ್ಟು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಈ ಹಿಂದೆ ರಾಕಿಂಗ್ ದಂಪತಿ ಮುದ್ದು ಮಗಳ ಮುಡಿಯನ್ನು ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಯಲ್ಲಿ ತೆಗೆಸಿ ಹರಕೆ ತೀರಿಸಿದ್ದರು. ಆಗ ತಂದೆ ಯಶ್‍ನನ್ನು ಮಗಳು ಐರಾ ಗರಂ ಆಗಿ ನೋಡುತ್ತಿರುವ ಫೋಟೋ ಸಖತ್ ವೈರಲ್ ಆಗಿತ್ತು.

    ಐರಾ ಮತ್ತು ಯಥರ್ವ್ ತುಂಟಾಟದ ಫೋಟೋವನ್ನು ಹಂಚಿಕೊಂಡು ಹೊಸ ವರ್ಷದ ಶುಭಾಶಯವನ್ನು ರಾಧಿಕಾ ಪಂಡಿತ್ ಕೋರಿದ್ದರು. ಇದೀಗ ವರ್ಷದ ಆರಂಭದಲ್ಲಿ ಮತ್ತೊಂದು ಫೋಟೋವನ್ನು ಹಂಚಿಕೊಳ್ಳುವ ಮೂಲವಾಗಿ ಮಗನ ಮುಡಿ ತೆಗೆಸಿರುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.