Tag: ಮುಡಾ ಹಗರಣ

  • MUDA Scam| ಕೈ ನಾಯಕ ಪಾಪಣ್ಣಗೆ ವಿಜಯನಗರದ 4ನೇ ಹಂತದಲ್ಲಿ ಹಂಚಿಕೆಯಾಗಿತ್ತು 31 ಸೈಟ್‌

    MUDA Scam| ಕೈ ನಾಯಕ ಪಾಪಣ್ಣಗೆ ವಿಜಯನಗರದ 4ನೇ ಹಂತದಲ್ಲಿ ಹಂಚಿಕೆಯಾಗಿತ್ತು 31 ಸೈಟ್‌

    – ಇಡಿಯಿಂದ 59 ಮುಡಾ ಸೈಟ್‌ ಮುಟ್ಟುಗೋಲು

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣ(MUDA Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬೇಟೆಯನ್ನು ಮುಂದುವರೆಸಿದೆ. ಮುಡಾದ ಮಾಜಿ ಆಯುಕ್ತ ದಿನೇಶ್ ಕುಮಾರ್ (Dinesh Kumar) ಬಂಧನದ ಬಳಿಕ 59 ಕ್ಕೂ ಹೆಚ್ಚು ಸೈಟ್ ಗಳನ್ನು ಮುಟ್ಟುಗೋಲು ಹಾಕಿಕೊಂಡು ವಶಕ್ಕೆ ಪಡೆದುಕೊಂಡಿದೆ.

    ವಶಪಡಿಸಿಕೊಂಡ 60 ಕೋಟಿ ರೂ. ಮೌಲ್ಯದ ಸೈಟ್‌ಗಳಲ್ಲಿ ಕಾಂಗ್ರೆಸ್ ಮುಖಂಡ ಎ ಪಾಪಣ್ಣ (Papanna) ಅವರದ್ದೇ ಅಗ್ರಪಾಲು. ಈ ಬಗ್ಗೆ ಪಬ್ಲಿಕ್ ಟಿವಿಯ ಬಳಿ ಎಕ್ಸ್ ಕ್ಲೂಸಿವ್ ದಾಖಲೆ ಸಿಕ್ಕಿದ್ದು ಎ ಪಾಪಣ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದನ್ನೂ ಓದಿ:  ಇದನ್ನೂಓದಿ: ಗಗನಕ್ಕೇರಿದ ಬಂಗಾರದ ಬೆಲೆ 1.5 ಲಕ್ಷದ ಗಡಿ ದಾಟಿದ ಕೆ.ಜಿ ಬೆಳ್ಳಿ!

    ಪಾಪಣ್ಣ ಬಳಿಯಿದ್ದ 31 ಸೈಟ್‌ಗಳು ವಿಜಯನಗರದ ನಾಲ್ಕನೇ ಹಂತದ್ದೇ ಆಗಿರುವುದು ವಿಶೇಷ. ಮುಡಾ ಮಾಜಿ ಅಧ್ಯಕ್ಷ ಮರೀಗೌಡಗೆ ಕೂಡ ಅಕ್ರಮ ಸೈಟ್ ಮಂಜೂರು ಮಾಡಲಾಗಿದೆ. ಇದನ್ನೂ ಓದಿ:  ವಿಮೆ ಹಣದ ಮೇಲೆ ಕಣ್ಣು – ಅಳಿಯನನ್ನೇ ಕೊಲೆ ಮಾಡಿದ ಮಾವ & ಗ್ಯಾಂಗ್

    ದಿನೇಶ್ ಕುಮಾರ್ ತನ್ನ ಮನೆಯ ಕೆಲಸಕ್ಕಿದ್ದ ರಮೇಶ್‌ ಹೆಸರಲ್ಲೂ ಕೋಟ್ಯಂತರ ರೂ. ಆಸ್ತಿ ಮಾಡಿದ್ದಾರೆ. ಅತ್ತೆ, ಮಾವ, ಬಾಮೈದಾ ಹೆಸರಲ್ಲಿ ಕೋಟಿ ಕೋಟಿ ಆಸ್ತಿ ಮಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

  • ಮುಡಾ ಕೇಸಲ್ಲಿ ಬಿ-ರಿಪೋರ್ಟ್‌ಗೆ ಸ್ನೇಹಮಯಿ ಆಕ್ಷೇಪ – ಅ.8ಕ್ಕೆ ಆದೇಶ ಕಾಯ್ದಿರಿಸಿದ ಜನಪ್ರತಿನಿಧಿಗಳ ನ್ಯಾಯಾಲಯ

    ಮುಡಾ ಕೇಸಲ್ಲಿ ಬಿ-ರಿಪೋರ್ಟ್‌ಗೆ ಸ್ನೇಹಮಯಿ ಆಕ್ಷೇಪ – ಅ.8ಕ್ಕೆ ಆದೇಶ ಕಾಯ್ದಿರಿಸಿದ ಜನಪ್ರತಿನಿಧಿಗಳ ನ್ಯಾಯಾಲಯ

    ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಕುಟುಂಬ ಮುಡಾದಲ್ಲಿ (MUDA) ಪಡೆದ 14 ನಿವೇಶನಗಳ ಸಂಬಂಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟ್‌ನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಜನಪ್ರತಿನಿಧಿಗಳ ನ್ಯಾಯಾಲಯ ಅ.8ಕ್ಕೆ ಕಾಯ್ದಿರಿಸಿದೆ.

    ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ತನಿಖಾಧಿಕಾರಿ ಬದಲಾವಣೆ ಮತ್ತು ತನಿಖಾಧಿಕಾರಿ ವಿರುದ್ದ ಕ್ರಮಕೈಗೊಳ್ಳುವಂತೆ ಮನವಿ ಮಾಡಿ, ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಸೋಮವಾರ (ಸೆ.28) ನಡೆದ ವಿಚಾರಣೆಯಲ್ಲಿ ಸ್ನೇಹಮಯಿ ಕೃಷ್ಣ ಖುದ್ದು ವಾದ ಮಂಡಿಸಿದರು.ಇದನ್ನೂ ಓದಿ: ಪಾಕ್‌ ಸರ್ಕಾರದ ವಿರುದ್ಧ ಪಿಓಕೆಯಲ್ಲಿ ಭಾರೀ ಪ್ರತಿಭಟನೆ – ಷರೀಫ್‌, ಅಸಿಮ್ ಮುನೀರ್‌ಗೆ ಪುಕ ಪುಕ

    ಸದ್ಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅರ್ಜಿಯ ಆದೇಶವನ್ನ ಅ.8ಕ್ಕೆ ಕೋರ್ಟ್ ಮುಂದೂಡಿದೆ. ಇದಕ್ಕೂ ಮುನ್ನ ಲೋಕಾಯುಕ್ತ ಸಲ್ಲಿಸಿದ್ದ ಬಿ-ರಿಪೋರ್ಟ್ ಪ್ರಶ್ನಿಸಿ ಇಡಿ ತಕರಾರು ಅರ್ಜಿ ಸಲ್ಲಿಸಿತ್ತು.

    ಈಗಾಗಲೇ ಈ ಪ್ರಕರಣದಲ್ಲಿ ಮಾಜಿ ಆಯುಕ್ತ ದಿನೇಶ್ ಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಈ ಕುರಿತು ಇಡಿ ಅಧಿಕಾರಿಗಳು, ದಿನೇಶ್ ನಕಲಿ ದಾಖಲೆಗಳನ್ನು  ಸೃಷ್ಟಿ ಮಾಡಿ, ಈ ದಾಖಲೆಗಳ ಮೂಲಕ ಸೈಟ್‌ಗಳನ್ನು ಮರುಹಂಚಿಕೆ ಮಾಡಿ ಲಾಭ ಮಾಡಿದ್ದಾರೆ. ಹಣ ಪಡೆದು ಆಸ್ತಿಗಳಿಕೆ ಮಾಡಿರುವುದಕ್ಕೆ ದಾಖಲೆ ಪತ್ತೆಯಾಗಿದೆ ಎಂದು ತಿಳಿಸಿತ್ತು.ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಮಳೆ ಅವಾಂತರ – ಮಂಗಳವಾರ ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

  • MUDA Scam| ಜಾಮೀನು ಅರ್ಜಿ ವಜಾ, 9 ದಿನ ಇಡಿ ಕಸ್ಟಡಿಗೆ ದಿನೇಶ್‌ ಕುಮಾರ್‌

    MUDA Scam| ಜಾಮೀನು ಅರ್ಜಿ ವಜಾ, 9 ದಿನ ಇಡಿ ಕಸ್ಟಡಿಗೆ ದಿನೇಶ್‌ ಕುಮಾರ್‌

    – ಕೇಜ್ರಿವಾಲ್‌ಗೆ ನೀಡಿದಂತೆ ಜಾಮೀನು ನೀಡಿ ಎಂದ ವಕೀಲ
    – 14 ದಿನಗಳ ಕಾಲ ಕಸ್ಟಡಿಗೆ ಕೇಳಿದ್ದ ಇಡಿ

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಸೈಟ್‌ ಹಂಚಿಕೆ ಹಗರಣದಲ್ಲಿ ಬಂಧನಕ್ಕೆ ಒಳಗಾದ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ (Dinesh Kumar) ಅವರನ್ನು ಕೋರ್ಟ್‌ 9 ದಿನಗಳ ಕಾಲ ಜಾರಿ ನಿರ್ದೇಶನಾಲಯದ (ED) ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿದೆ.

    ಮಂಗಳವಾರ(ಸೆ.16) ಬೆಂಗಳೂರಿನ ಕಚೇರಿಗೆ ವಿಚಾರಣೆಗೆ ಆಗಮಿಸಿದ್ದ ದಿನೇಶ್‌ ಕುಮಾರ್‌ ಅವರನ್ನು ಇಡಿ ಬಂಧಿಸಿತ್ತು. ರಾತ್ರಿ ನ್ಯಾಯಾಧೀಶರ ಮನೆ ಹಾಜರು ಪಡಿಸಿ 1 ದಿನ ಕಸ್ಟಡಿಗೆ ಪಡೆದುಕೊಂಡಿದ್ದ ಇಡಿ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿತು.

    ವಿಚಾರಣೆ ಸಮಯದಲ್ಲಿ ದಿನೇಶ್‌ ಕುಮಾರ್‌ ಪರವಾಗಿ ಹಾಜರಾದ ವಕೀಲರು, ಒಂದು ವರ್ಷದಿಂದ ಸುಮ್ಮನಿದ್ದ ಇಡಿ ಅಧಿಕಾರಿಗಳು ಈಗ ತನಿಖೆಗೆ ದಿನೇಶ್‌ ಬೇಕು ಎನ್ನುತ್ತಿದ್ದಾರೆ. ಇಷ್ಟು ದಿನ ಬಂಧನ ಮಾಡದೇ ಇದ್ದವರನ್ನು ಈಗ ಬಂಧಿಸಿದ್ದು ಯಾಕೆ? ಈಗಾಗಲೇ ಬ್ಯಾಂಕ್ ವಿವರಗಳನ್ನು ಎಲ್ಲವನ್ನೂ ನೀಡಿದ್ದು ಈಗ ಮತ್ತೆ ಕಸ್ಟಡಿಗೆ ಕೇಳುವುದು ಸರಿಯಲ್ಲ ಎಂದು ವಾದಿಸಿದರು. ಇದನ್ನೂ ಓದಿ:  ಮುಡಾ ಮಾಜಿ ಆಯುಕ್ತನ ಹೆಸ್ರಲ್ಲಿ 198, ಎಂಎಲ್‌ಸಿ ಹೆಸ್ರಲ್ಲಿ 128 ಬೇನಾಮಿ ಸೈಟ್ – 631 ಸೈಟುಗಳ ಮಾಹಿತಿ ಕೇಳಿದ ಇಡಿ

    ನಮ್ಮ ಕಕ್ಷಿದಾರರು, ಅಸ್ತಮಾ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿ ದೆಹಲಿ ಮಾಜಿ ಸಿಎಂ ಕೇಜ್ರಿವಾಲ್ ಮಧ್ಯಂತರ ಜಾಮೀನು ಆದೇಶ ಉಲ್ಲೇಖಿಸಿ ಜಾಮೀನು ನೀಡಬೇಕು ಎಂದು ಕೇಳಿಕೊಂಡರು. ಈ ವೇಳೆ ಜಡ್ಜ್‌, ದಿನೇಶ್‌ ಕುಮಾರ್‌ ರಾಜಕಾರಣಿ ಅಲ್ಲ. ಮುಡಾ ಪ್ರಕರಣದಲ್ಲಿ ಈ ಅಂಶವನ್ನು ಪ್ರಸ್ತಾಪ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

    ಇಡಿ ಪರ ವಕೀಲರು ನಮಗೆ ತನಿಖೆಗೆ ಬೇಕಾದ ಅಗತ್ಯ ದಾಖಲೆಗಳು ಸಿಕ್ಕಿದ್ದು 14 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಎರಡು ಕಡೆಯ ವಾದ ಆಲಿಸಿದ ಕೋರ್ಟ್‌ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಸೆ. 26 ರಂದು ಸಂಜೆ 5 ಗಂಟೆಗೆ ದಿನೇಶ್‌ಕುಮಾರ್‌ ಅವರನ್ನು ಹಾಜರುಪಡಿಸಬೇಕು ಎಂದು ಇಡಿಗೆ ಸೂಚಿಸಿತು.  ಇದನ್ನೂ ಓದಿ: ಕುರುಬರನ್ನು ಎಸ್‌ಟಿಗೆ ಸೇರಿಸಿ ನಮ್ಮನ್ನು ತುಳಿಯುವ ಹುನ್ನಾರ: ಸಿಎಂ ವಿರುದ್ಧ ವಾಲ್ಮೀಕಿ ನಾಯಕ ಒಕ್ಕೂಟ ಆಕ್ರೋಶ

    ದಿನೇಶ್‌ ಕುಮಾರ್‌ ಮೇಲಿರುವ ಆರೋಪ ಏನು?
    ದಿನೇಶ್ ಕುಮಾರ್ ಆಯುಕ್ತರಾಗಿದ್ದ ಅವಧಿಯಲ್ಲಿ ಮಧ್ಯವರ್ತಿಗಳ ಮೂಲಕ 1000 ರಕ್ಕೂ ಹೆಚ್ಚು ನಿವೇಶನಗಳು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರ ಬದಲಿ ನಿವೇಶನ ಹಂಚಿಕೆ ಪ್ರಕ್ರಿಯೆ ದಿನೇಶ್‌ ಕುಮಾರ್‌ ನೇತೃತ್ವದಲ್ಲಿ ನಡೆದಿದೆ. ನಿವೇಶನ ಹಂಚಿಕೆ ಮಾಡಲು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಬ್ಯಾಕ್‌ ವ್ಯವಹಾರದ ಮೂಲಕ ಸೈಟ್‌ ಹಂಚಿಕೆ ಮಾಡಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ ಎಂದು ಇಡಿ ಈ ಹಿಂದೆ ಹೇಳಿತ್ತು.

  • ಮುಡಾ ಹಗರಣ – ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಇಡಿಯಿಂದ ಅರೆಸ್ಟ್‌

    ಮುಡಾ ಹಗರಣ – ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಇಡಿಯಿಂದ ಅರೆಸ್ಟ್‌

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ (MUDA Scam) ಸಂಬಂಧಿಸಿದಂತೆ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ (Dinesh Kumar) ಅವರನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬಂಧಿಸಿದ್ದಾರೆ.

    ಇಂದು ಇಡಿ ವಿಚಾರಣೆಗೆ ಬರುವಂತೆ ದಿನೇಶ್‌ ಕುಮಾರ್‌ಗೆ ನೋಟಿಸ್‌ ನೀಡಿತ್ತು. ವಿಚಾರಣೆಗೆ ಬಂದ ವೇಳೆ ದಿನೇಶ್‌ ಕುಮಾರ್‌ ಅವರನ್ನು ಬಂಧನ ಮಾಡಲಾಗಿದ್ದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಬೇಕಿದೆ. ದಿನೇಶ್ ಅಕ್ರಮ ಹಣ ವರ್ಗಾವಣೆ ಮಾಡಿರೋದು ಸಾಬೀತಾಗಿದೆ ಎಂದು ಈ ಹಿಂದೆ ಇಡಿ ಹೇಳಿತ್ತು. ಇದನ್ನೂ ಓದಿ:  ಮುಡಾ ಹಗರಣ : ಇಡಿಯಿಂದ 100 ಕೋಟಿ ಮೌಲ್ಯದ 92 ಆಸ್ತಿ ಮುಟ್ಟುಗೋಲು

    ನಕಲಿ ದಾಖಲೆಗಳನ್ನು ದಿನೇಶ್ ಸೃಷ್ಟಿ ಮಾಡಿ ಈ ದಾಖಲೆಗಳ ಮೂಲಕ ಸೈಟ್ ಗಳನ್ನು ಮರುಹಂಚಿಕೆ ಮಾಡಿ ಲಾಭ ಮಾಡಿದ್ದಾರೆ. ಹಣ ಪಡೆದು ಆಸ್ತಿ ಗಳಿಕೆ ಮಾಡಿರುವುದಕ್ಕೆ ದಾಖಲೆ ಪತ್ತೆಯಾಗಿದೆ ಎಂದು ಇಡಿ ಹೇಳಿದೆ.

    2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ದಿನೇಶ್ ಕುಮಾರ್ ವಿರುದ್ಧ ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಯಾವುದೇ ಸ್ಥಳ ತೋರಿಸದೇ ದಿನೇಶ್ ಕುಮಾರ್‌ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರ ನಂತರ ಹಾವೇರಿ ವಿವಿಯ ಕುಲಸಚಿವ ಹುದ್ದೆಯನ್ನು ನೀಡಿತ್ತು. ಕುಲಸಚಿವ ಹುದ್ದೆಯನ್ನು ನೀಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸರ್ಕಾರ ಕೊನೆಗೆ ಆ ಆದೇಶವನ್ನೇ ರದ್ದು ಮಾಡಿತ್ತು. ಇದನ್ನೂ ಓದಿ:  ಮುಡಾ ಮಾಜಿ ಆಯುಕ್ತನ ಹೆಸ್ರಲ್ಲಿ 198, ಎಂಎಲ್‌ಸಿ ಹೆಸ್ರಲ್ಲಿ 128 ಬೇನಾಮಿ ಸೈಟ್ – 631 ಸೈಟುಗಳ ಮಾಹಿತಿ ಕೇಳಿದ ಇಡಿ

  • MUDA Scam| ತನಿಖಾಧಿಕಾರಿ ಬದಲಾವಣೆಗೆ ನ್ಯಾಯಾಲಯಕ್ಕೆ ಅರ್ಜಿ

    MUDA Scam| ತನಿಖಾಧಿಕಾರಿ ಬದಲಾವಣೆಗೆ ನ್ಯಾಯಾಲಯಕ್ಕೆ ಅರ್ಜಿ

    ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣದ (MUDA Scam) ತನಿಖಾಧಿಕಾರಿ ಬದಲಾಯಿಸುವಂತೆ ನಾನು ಅರ್ಜಿ ಹಾಕುತ್ತೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಹೇಳಿದ್ದಾರೆ.

    ಮೂಡಾ ಹಗರಣ ಪ್ರಕರಣದಲ್ಲಿ ಜನ ಪ್ರತಿನಿಧಿ ನ್ಯಾಯಾಲಯದ ಆದೇಶದಂತೆ ಇಂದು ಮೈಸೂರು ಲೋಕಾಯುಕ್ತರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕಿದೆ. ಈ ವರದಿಯ ಅಂಶಗಳು ಖುದ್ದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮೇಲೆಯೇ ಪ್ರಭಾವ ಬೀರುವ ಸಾಧ್ಯತೆ ಇದೆ. ಇದನ್ನೂ ಓದಿ: ಪತ್ನಿಯನ್ನು ಕೊಂದು ನಾಪತ್ತೆಯಾಗಿದ್ದ ಪತಿ, ಮುಳ್ಳಯ್ಯನಗಿರಿ ಕಾಡಿನಲ್ಲಿ ಬಂಧನ

     

    ಈ ಬಗ್ಗೆ ದೂರದಾರ ಸ್ನೇಹಮಯಿ ಕೃಷ್ಣ ಈ ಬಗ್ಗೆ ಪ್ರತಿಕ್ರಿಯಿಸಿ ಲೋಕಾಯುಕ್ತ ಇಂದು ಕೂಡ ಅಂತಿಮ ವರದಿ ಸಲ್ಲಿಸುವುದು ಅನುಮಾನ ಇದೆ. ಅವರು ಮತ್ತೆ ಸಮಯವನ್ನು ಕೇಳುತ್ತಾರೆ. ನನಗೆ ಲೋಕಾಯುಕ್ತ ಎಸ್‌ಪಿ ಬಗ್ಗೆ ಬಹಳಷ್ಟು ಅನುಮಾನವಿದ್ದು ತನಿಖಾಧಿಕಾರಿ ಬದಲಾಯಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತೇನೆ ಎಂದು ಹೇಳಿದ್ದಾರೆ.

  • ಮುಡಾ ಹಗರಣ | ಸಿಎಂಗೆ ನಿರಾಸೆ – ತನಿಖೆ ಮುಂದುವರಿಸಿ, ಅಂತಿಮ ವರದಿ ಸಲ್ಲಿಕೆಗೆ ಆದೇಶ

    ಮುಡಾ ಹಗರಣ | ಸಿಎಂಗೆ ನಿರಾಸೆ – ತನಿಖೆ ಮುಂದುವರಿಸಿ, ಅಂತಿಮ ವರದಿ ಸಲ್ಲಿಕೆಗೆ ಆದೇಶ

    – ಕೇಸ್ ಮುಚ್ಚಿ ಹಾಕಲು ಅವಕಾಶ ಕೊಡಲ್ಲ ಎಂದ ಸ್ನೇಹಮಯಿ

    ಬೆಂಗಳೂರು: ಮುಡಾ ಹಗರಣದಲ್ಲಿ (MUDA Scam) ಬಿಗ್ ರಿಲೀಫ್ ನಿರೀಕ್ಷೆಯಲ್ಲಿದ್ದ ಸಿಎಂ ಸಿದ್ಗೆದರಾಮಯ್ಯಗೆ (Siddaramaiah) ನಿರಾಸೆಯಾಗಿದೆ. ತನಿಖೆ ಮುಂದುವರಿಸಿ, ಅಂತಿಮ ವರದಿ ಸಲ್ಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

    ಸಿಎಂ ವಿರುದ್ಧದ ಬಿ ರಿಪೋರ್ಟ್ ವಿರೋಧಿಸಿ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಮತ್ತು ಇಡಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ, ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ ಅಂತಿಮ ವರದಿ ಬಳಿಕ ಬಿ ರಿಪೋರ್ಟ್ ಬಗ್ಗೆ ತೀರ್ಮಾನ ಮಾಡುವುದಾಗಿ ಹೇಳಿದೆ. ತನಿಖೆ ಮುಂದುವರಿಸಲು ಅನುಮತಿ ನೀಡುವಂತೆ ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಪುರಸ್ಕರಿಸಿದ್ದಾರೆ. ಇದನ್ನೂ ಓದಿ: ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಸಾಧ್ಯತೆ – ಮುಂಗಾರು ಮಳೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ

    ಆದೇಶದ ಬಳಿಕ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ ಅವರು, ಲೋಕಾ ಅಧಿಕಾರಿಗಳು ಸಿಎಂ ಕುಟುಂಬವನ್ನ ರಕ್ಷಣೆ ಮಾಡುವುದಕ್ಕೆ ತನಿಖೆ ಪೂರ್ಣಗೊಳಿಸದೇ ವರದಿ ಸಲ್ಲಿಕೆ ಮಾಡಿದ್ದರು. ಹಾಗಾಗಿ ಕೋರ್ಟ್ ಅಂತಿಮ ವರದಿಯನ್ನ ಸಲ್ಲಿಸಲು ಕೋರ್ಟ್ ಸೂಚಿಸಿದೆ ಎಂದಿದ್ದಾರೆ. ಇದನ್ನೂ ಓದಿ: ನವಜಾತ ಶಿಶುಗಳ ಕಳ್ಳಸಾಗಣೆ ಮಾಡಿದರೆ ಆಸ್ಪತ್ರೆಗಳ ಪರವಾನಿಗೆ ಕೂಡಲೇ ಅಮಾನತುಗೊಳಿಸಿ: ಸುಪ್ರೀಂ

    ತನಿಖಾಧಿಕಾರಿಗಳಿಗೆ ತನಿಖೆಯ ಬಗ್ಗೆ ತಿಳಿದಿಲ್ಲ. ಮಾನ್ಯ ನ್ಯಾಯಾಲಯದ ಇಂದಿನ ಆದೇಶದಲ್ಲಿ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಸಿಎಂ ಅಧಿಕಾರ ದುರುಪಯೋಗಪಡಿಸಿಕೊಂಡು ಕೇಸ್ ಮುಚ್ಚಿ ಹಾಕುವ ಪ್ರಯತ್ನಕ್ಕೆ ನಾನು ಅವಕಾಶ ಕೊಡಲ್ಲ ಎಂದು ಹೇಳಿದ್ದಾರೆ.

  • ಸಿಎಂ ಸಿದ್ದರಾಮಯ್ಯ, ಕುಟುಂಬದ ಮೇಲಿನ ಎಲ್ಲಾ ಆರೋಪಕ್ಕೂ ಸಾಕ್ಷಿ ಇವೆ: ಸ್ನೇಹಮಯಿ ಕೃಷ್ಣ

    ಸಿಎಂ ಸಿದ್ದರಾಮಯ್ಯ, ಕುಟುಂಬದ ಮೇಲಿನ ಎಲ್ಲಾ ಆರೋಪಕ್ಕೂ ಸಾಕ್ಷಿ ಇವೆ: ಸ್ನೇಹಮಯಿ ಕೃಷ್ಣ

    – ಸಿಎಂ ಪಾಲಿಗೆ ಬಿಗ್ ಡೇ! ಲೋಕಾಯುಕ್ತ ಕ್ಲೀನ್‌ಚೀಟ್ ಸರಿ ಇದ್ಯಾ? ಅಥವಾ ಇಲ್ವಾ? – ಅಂತಿಮ ಆದೇಶ ನೀಡಲಿದೆ ಕೋರ್ಟ್‌

    ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ಪಾಲಿಗೆ ಇಂದು ಬಿಗ್ ಡೇ. ಮುಡಾ ಹಗರಣ (MUDA Case) ವಿಚಾರದಲ್ಲಿ ಸಿಎಂ ಹಾಗೂ ಸಿಎಂ ಕುಟುಂಬಕ್ಕೆ ಲೋಕಾಯುಕ್ತರು ನೀಡಿರುವ ಕ್ಲೀನ್ ಚೀಟ್ ಪ್ರಶ್ನಿಸಿ ಜನಪ್ರತಿನಿಧಿ ನ್ಯಾಯಾಲಯಕ್ಕೆ ದೂರುದಾರ ಸ್ನೇಹಮಹಿ ಕೃಷ್ಣ ಅರ್ಜಿ ಹಾಕಿದ್ದರು. ಇಡಿ ಕೂಡ ಲೋಕಾಯುಕ್ತ ವರದಿ ಪ್ರಶ್ನಿಸಿ ಅರ್ಜಿ ಹಾಕಿತ್ತು. ಎಲ್ಲರ ವಾದ ಆಲಿಸಿರುವ ನ್ಯಾಯಾಲಯ ಇವತ್ತು ಲೋಕಾಯುಕ್ತ ವರದಿ ಒಪ್ಪಿಕೊಳ್ಳಬೇಕಾ ಅಥವಾ ತಿರಸ್ಕರಿಸಬೇಕಾ ಎಂಬ ಆದೇಶ ನೀಡಲಿದೆ.

    ಈ ಕುರಿತು ‘ಪಬ್ಲಿಕ್‌ ಟಿವಿ’ ಜೊತೆ ಮಾತನಾಡಿರುವ ಸ್ನೇಹಮಯಿ ಕೃಷ್ಣ, ಜನಪ್ರತಿನಿಧಿ ನ್ಯಾಯಾಲಯ ಲೋಕಾಯುಕ್ತ ರೀಪೋರ್ಟ್ ರದ್ದು ಮಾಡುವ ವಿಶ್ವಾಸವಿದೆ. ಸಿಎಂ ಹಾಗೂ ಸಿಎಂ ಕುಟುಂಬದ ಮೇಲಿನ ಎಲ್ಲಾ ಆರೋಪಕ್ಕೂ ಸಾಕ್ಷಿ ಇವೆ. ಲೋಕಾಯುಕ್ತ ಸಿಎಂ ಪ್ರಭಾವಕ್ಕೆ ಒಳಗಾಗಿ ಕ್ಲೀನ್‌ಚೀಟ್ ಕೊಟ್ಟಿದೆ. ನ್ಯಾಯಾಲಯಕ್ಕೆ ಇದನ್ನು ಮನವರಿಕೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಮರದ್ದು ಕಾಂಟ್ರ್ಯಾಕ್ಟ್‌ ಮ್ಯಾರೇಜ್, ಹಿಂದೂಗಳ ರೀತಿ ಏಳು ಜನ್ಮದ ಅನುಬಂಧ ಅಲ್ಲ: ರಾಯರೆಡ್ಡಿ

    ನ್ಯಾಯಾಲಯ ಲೋಕಾಯುಕ್ತ ರೀಪೋರ್ಟ್ ತಿರಸ್ಕರಿಸುವ ಸಾಧ್ಯತೆ ಇದೆ. ನ್ಯಾಯಾಲಯ ಲೋಕಾಯುಕ್ತ ರೀಪೋರ್ಟ್ ತಿರಸ್ಕರಿಸದೆ ಇದ್ದರೆ ನಾನು ಹೈಕೋರ್ಟ್‌ಗೆ ಅರ್ಜಿ ಹಾಕುತ್ತೇನೆ ಎಂದು ಹೇಳಿದರು.

    ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ನಡೆಸಿತ್ತು. ತನಿಖೆಯಲ್ಲಿ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್‌ ಕೊಟ್ಟಿತ್ತು. ಇದನ್ನೂ ಓದಿ: ಜಾತಿ ಜನಗಣತಿ ಯಾವುದೇ ಸಮಾಜದ ಪರ, ವಿರೋಧ ನಿರ್ಣಯ ಮಾಡೋದಲ್ಲ: ಶಿವಾನಂದ ಪಾಟೀಲ್

  • ಮುಡಾದಲ್ಲಿ ಮತ್ತೊಂದು ಗೋಲ್ಮಾಲ್‌ – ವಾರಸುದಾರ ಅಲ್ಲದವನಿಗೆ ಖಾತೆ

    ಮುಡಾದಲ್ಲಿ ಮತ್ತೊಂದು ಗೋಲ್ಮಾಲ್‌ – ವಾರಸುದಾರ ಅಲ್ಲದವನಿಗೆ ಖಾತೆ

    ಮೈಸೂರು: ಮುಡಾದಲ್ಲಿ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) 50:50 ಹಗರಣ ಆಯ್ತು. ಈಗ ಪೌತಿ ಖಾತೆ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ.

    ನಕಲಿ ದಾಖಲೆ ಸೃಷ್ಟಿಸಿ ಮಾದರಿ ಮನೆಯ (Model House) ಪೌತಿ ಖಾತೆಯನ್ನು ಅಧಿಕಾರಿಗಳು ಮಾಡಿರುವುದು ದಾಖಲಾತಿಗಳಿಂದ ಬೆಳಕಿಗೆ ಬಂದಿದೆ.

    ಮುಡಾ ವ್ಯವಸ್ಥಾಪಕ ಹಾಗೂ ತಹಶೀಲ್ದಾರ್ ಅಕ್ರಮವಾಗಿ ಪೌತಿ ಖಾತೆ ಮಾಡಿಕೊಟ್ಟಿದ್ದಾರೆ. ಈ ಸಂಬಂಧ ವ್ಯವಸ್ಥಾಪಕ ಸೋಮಸುಂದರ್‌ ಅವ್ರನ್ನ ಅಮಾನತುಗೊಳಿಸಿ ಮುಡಾ ಆಯುಕ್ತ ರಘುನಂದನ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಮುಡಾ ವಿಶೇಷ ತಹಶೀಲ್ದಾರ್ ಕೆ.ವಿ ರಾಜಶೇಖರ್ ವಿರುದ್ಧವೂ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ.

    ಏನಿದು ಗೋಲ್ಮಾಲ್‌ ಕೇಸ್‌?
    1982ರ ನವೆಂಬರ್ 2ರಂದು ಮೈಸೂರಿನ ಗೋಕುಲಂ 3ನೇ ಹಂತದಲ್ಲಿ ನಿರ್ಮಿಸಲಾಗಿದ್ದ ಮಾಡೆಲ್ ಹೌಸ್. ಮನೆ ಸಂಖ್ಯೆ 867 (30*40) ಅನ್ನು ಜಯಲಕ್ಷ್ಮೀಪುರಂನ ಲಿನಿಯನ್ ಶಾರದಾ ಜೋಸೆಫ್ ಎಂಬುವವರಿಗೆ ಮಂಜೂರು ಮಾಡಲಾಗಿತ್ತು. ಪೂರ್ಣ ಹಣ ಪಾವತಿಸಿಕೊಂಡು ಕರಾರು ಪತ್ರ, ದೃಢೀಕರಣ ಪತ್ರ ಸೇರಿದಂತೆ ಎಲ್ಲಾ ದಾಖಲೆಗಳನ್ನೂ ನೀಡಲಾಗಿತ್ತು.

    ಮನೆ ಮಂಜೂರಾತಿದಾರರು 1983ರ ಸೆಪ್ಟೆಂಬರ್ 3ರಂದು ಮರಣ ಹೊಂದಿದ್ದರು. ಆದ್ರೆ 2024ರ ಮಾರ್ಚ್ 26ರಂದು ಮೃತರ ಕಾನೂನುಬದ್ಧ ವಾರಸುದಾರ ಅಲ್ಲದ ಸಿವಿಲ್ ಮಾರ್ಕಸ್ ಜೋಸೆಫ್ ಎಂಬವರಿಗೆ ನಕಲಿ ವಂಶವೃಕ್ಷ, ಆಧಾರ್ ಸೃಷ್ಟಿಸಿ ಪೌತಿ ಖಾತೆ. ಮಾಡಿ ಕೊಟ್ಟಿದ್ದಾರೆ. ಇದು ದಾಖಲಾತಿಗಳಲ್ಲಿ ಸಾಬೀತಾಗಿದೆ.

  • ಮುಡಾ ಹಗರಣ – ಇಂದು ಸಿಎಂ ಸಿದ್ದರಾಮಯ್ಯಗೆ ನಿರ್ಣಾಯಕ ದಿನ

    ಮುಡಾ ಹಗರಣ – ಇಂದು ಸಿಎಂ ಸಿದ್ದರಾಮಯ್ಯಗೆ ನಿರ್ಣಾಯಕ ದಿನ

    – ಬಿ ರಿಪೋರ್ಟ್ ವಿರೋಧಿಸಿ ಇ.ಡಿ ವಾದ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaih) ಅವರಿಗೆ ಇಂದು ಮಹತ್ವದ ದಿನ. ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಲೋಕಾಯುಕ್ತ ಸಲ್ಲಿಕೆ ಮಾಡಿದ್ದ ಬಿ ರಿಪೋರ್ಟ್‌ಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶ ನೀಡಲಿದೆ.

    ಸುಮಾರು ನಾಲ್ಕು ತಿಂಗಳುಗಳ ಕಾಲ ತನಿಖೆ ನಡೆಸಿದ ಲೋಕಾಯುಕ್ತ ಸಿಎಂ ಮತ್ತು ಸಿಎಂ ಪತ್ನಿ ಸೇರಿದಂತೆ ನಾಲ್ವರಿಗೆ ಕ್ಲೀನ್ ಚಿಟ್ ನೀಡಿತ್ತು. ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಅಂತಿಮ ವರದಿ ಸಲ್ಲಿಸಿತ್ತು. ಆದರೆ ಅಂತಿಮ ವರದಿ ಪ್ರಶ್ನಿಸಿದ್ದ ದೂರುದಾರ ಸ್ನೇಹಮಯಿ ಕೃಷ್ಣ ಅಂತಿಮ ವರದಿಯಲ್ಲಿ ಇರುವ ಲೋಪದೋಷಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯ ಇಂದು ಆದೇಶ ನೀಡಲಿದೆ. ಇದನ್ನೂ ಓದಿ: ಇಂದು ಪಿಯುಸಿ ಫಲಿತಾಂಶ ಪ್ರಕಟ – ಯಾವ ವೆಬ್‌ಸೈಟ್‌ನಲ್ಲಿ ನೋಡಬಹುದು? ಚೆಕ್‌ ಮಾಡೋದು ಹೇಗೆ?

    ಆದರೆ ಸ್ನೇಹಮಯಿ ಕೃಷ್ಣ ಅವರ ಜೊತೆಗೆ ಇ.ಡಿ ಅಧಿಕಾರಿಗಳು ಬಿ ರಿಪೋರ್ಟ್ ವಿರುದ್ಧ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಇ.ಡಿಯ ತಕರಾರು ಅರ್ಜಿ ಮಾನ್ಯತೆಯ ವಾದ-ಪ್ರತಿವಾದ ನಡೆಯಲಿದೆ. ಈ ನಡುವೆ ಬಿ ರಿಪೋರ್ಟ್ ಅನ್ನು ನ್ಯಾಯಾಲಯ ಒಪ್ಪುತ್ತಾ ಅಥವಾ ಮರು ತನಿಖೆಗೆ ಆದೇಶ ನೀಡುತ್ತಾ ಎಂದು ಕಾದುನೋಡಬೇಕಿದೆ.  ಇದನ್ನೂ ಓದಿ: ಬೆಟ್ಟಿಂಗ್ ಆಪ್ ಪ್ರಮೋಟ್ ಆರೋಪ – ಸೋನು ಗೌಡ ಸೇರಿ 100ಕ್ಕೂ ಹೆಚ್ಚು ರೀಲ್ಸ್ ಸ್ಟಾರ್‌ಗಳ ವಿಚಾರಣೆ

  • ಇದ್ದವರು ಮೂರು ಜನ ಆದ್ರೆ ಕದ್ದವರು ಯಾರು?: ಸಿಎಂ ಕ್ಲೀನ್‌ಚಿಟ್‌ಗೆ ಸಿ.ಟಿ.ರವಿ ವ್ಯಂಗ್ಯ

    ಇದ್ದವರು ಮೂರು ಜನ ಆದ್ರೆ ಕದ್ದವರು ಯಾರು?: ಸಿಎಂ ಕ್ಲೀನ್‌ಚಿಟ್‌ಗೆ ಸಿ.ಟಿ.ರವಿ ವ್ಯಂಗ್ಯ

    ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಸಿಎಂಗೆ ಲೋಕಾಯುಕ್ತ ಕ್ಲೀನ್‌ಚಿಟ್ ನೀಡಿರುವ ವಿಚಾರಕ್ಕೆ ಪರಿಷತ್‌ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದು, ಇದ್ದವರು ಮೂರು ಜನ ಆದ್ರೆ ಕದ್ದವರು ಯಾರು ಎಂದು ವ್ಯಂಗ್ಯವಾಡಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಡಾದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆದಿದೆ ಅಂತ ಸರ್ಕಾರ ಒಪ್ಪಿಕೊಂಡಿದೆ. ಸಿದ್ದರಾಮಯ್ಯ ಕುಟುಂಬದವರು 14 ಸೈಟ್ ವಾಪಸ್‌ ಕೊಟ್ಟರು. ಜಿಲ್ಲಾಧಿಕಾರಿಗಳು ವರದಿ ಕೊಟ್ಟಿದ್ದಾರೆ. ಇದ್ದವರು ಮೂರು ಜನ, ಕದ್ದವರು ಯಾರು ಎಂದು ಪ್ರಶ್ನಿಸಿದರು.

    ಲೋಕಾಯುಕ್ತ ತನಿಖೆ ಎಸಿಬಿ ದಾರಿಯಲ್ಲೇ ಇಳಿದಿದೆ. ಕ್ಲೀನ್‌ಚಿಟ್ ಕೊಟ್ಟಿರೋದು ದುರದೃಷ್ಟಕರ. ಲೋಕಾಯುಕ್ತದಿಂದ ಸಮಗ್ರ ತನಿಖೆಯಾಗಿಲ್ಲ. ಹಣ ವರ್ಗಾವಣೆ ಆಗಿರೋದನ್ನು ಇ.ಡಿ ಪತ್ತೆ ಹಚ್ಚಿದೆ. ಅಪರಾಧ ನಡೆಸಿದ ಅಪರಾಧಿ ಯಾರು ಎಂಬುದನ್ನು ಲೋಕಾಯುಕ್ತ ಹೇಳಿಲ್ಲ. ಏನು ನಡೆದೇ ಇಲ್ವಾ ಹಾಗಾದ್ರೆ? ಸತ್ಯವನ್ನ ಸಮಾಧಿ ಮಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಆಕ್ರೋಶ ಹೊರಹಾಕಿದರು.

    ನಮ್ಮ ಪಕ್ಷದ ವರಿಷ್ಠರ ಜೊತೆ ಸಮಾಲೋಚನೆ ಮಾಡಿ ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಎಂದು ಚರ್ಚೆ ಮಾಡ್ತೀವಿ. ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಶಾಸಕರಾಗಿ ಮಾತಾಡ್ತಿದ್ದಾರೋ ಗೊತ್ತಿಲ್ಲ. ವಕೀಲರಾಗಿ ಕೆಲಸ ಮಾಡೋದಕ್ಕೆ ಫೀ ಸಿಗುತ್ತೆ. ಶಾಸಕರಾಗಿ ಮಾತಾಡೋದಕ್ಕೂ ಫೀ ಸಿಗುತ್ತೋ ಗೊತ್ತಿಲ್ಲ ಎಂದು ಟಾಂಗ್‌ ಕೊಟ್ಟರು.