Tag: ಮುಡಾ ಸೈಟ್‌

  • ಮನೆಯಲ್ಲಿ ನಾನು ಹೇಳದೇ ನನ್ನ ಹೆಂಡತಿ ತೀರ್ಮಾನ ಮಾಡ್ತಾಳಾ? ಇದೆಲ್ಲ ನಾಟಕ – ರಮೇಶ ಜಿಗಜಿಣಗಿ

    ಮನೆಯಲ್ಲಿ ನಾನು ಹೇಳದೇ ನನ್ನ ಹೆಂಡತಿ ತೀರ್ಮಾನ ಮಾಡ್ತಾಳಾ? ಇದೆಲ್ಲ ನಾಟಕ – ರಮೇಶ ಜಿಗಜಿಣಗಿ

    – ಸಿಎಂ ಸಲಹೆಯಿಂದಲೇ ಅವರ ಪತ್ನಿ ಸೈಟ್ ವಾಪಸ್ ನೀಡಿದ್ದಾರೆ

    ವಿಜಯಪುರ: ನಮ್ಮ ಮನೆಯಲ್ಲಿ ನಾನು ಹೇಳದೇ ನನ್ನ ಹೆಂಡತಿ ತೀರ್ಮಾನ ಮಾಡ್ತಾಳಾ? ಇದೆಲ್ಲ ನಾಟಕ ಎಂದು ಹೇಳುವ ಮೂಲಕ ಸಿಎಂ ಪತ್ನಿ ಮುಡಾ ಸೈಟ್ (MUDA Site) ವಾಪಸ್ ನೀಡಿರುವ ವಿಚಾರವಾಗಿ ಸಂಸದ ರಮೇಶ ಜಿಗಜಿಣಗಿ (Ramesh Jigajinagi) ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲೆಯಲ್ಲಿ ಮಾತನಾಡಿದ ಅವರು, ಸಿಎಂ ಯಾಕೆ ಸೈಟ್ ತಗೋಬೇಕಿತ್ತು? ಸೈಟ್ ತಗೊಂಡ ಮೇಲೆ ವಾಪಸ್ ಯಾಕೆ ಕೊಡಬೇಕು? ತಪ್ಪು ಮಾಡಿದ್ದಾರೆ ಅದಕ್ಕೆ ವಾಪಸ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ (CM Siddaramaiah) ಸಲಹೆಯಿಂದಲೇ ಅವರ ಪತ್ನಿ ಸೈಟ್ ವಾಪಸ್ ನೀಡಿದ್ದಾರೆ. ನಮ್ಮ ಮನೆಯಲ್ಲಿ ನಾನು ಹೇಳದೇ ನನ್ನ ಹೆಂಡತಿ ತೀರ್ಮಾನ ಮಾಡ್ತಾಳಾ? ಇದೆಲ್ಲವೂ ನಾಟಕ? ಸೈಟ್ ವಾಪಸ್ ನೀಡಿದ್ದು ನಾಟಕ? ಎಂದರು.ಇದನ್ನೂ ಓದಿ: ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಕಿತ್ತೂರು ರಾಣಿ ಚನ್ನಮ್ಮ – ಸಿಎಂ

    ರಾಮಕೃಷ್ಣ ಹೆಗಡೆಯವರಂತೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ. ನಾನು ಹಿಂದೆನೇ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಯೋಗ್ಯ ಎಂದು ಹೇಳಿದ್ದೆ. ಈಗ ಸಿಎಂ ಕೆಸರಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ. ಕೆಸರಲ್ಲಿ ಸಿಕ್ಕು ಒದ್ದಾಡುವಾಗ ಯಾರು ಬದುಕಿಸುತ್ತಾರೆ? ರಾಜಕಾರಣ ಗಬ್ಬೆದ್ದು ನಾರುತ್ತಿದೆ. ಎಲ್ಲ ಪಕ್ಷಗಳಲ್ಲೂ ಇದೆ ಸ್ಥಿತಿಯಿದೆ. ಎಲ್ಲರೂ ಸೇರಿಕೊಂಡೆ ರಾಜಕಾರಣವನ್ನ ಗಬ್ಬು ಹಿಡಿಸಿದ್ದೇವೆ. ಎಲ್ಲ ಪಕ್ಷಗಳು ನಿಷ್ಠೆಯಿಂದ ಕೆಲಸ ಮಾಡುತ್ತಿವೆ. ನಾವು ರಾಜಕಾರಣಿಗಳು ಗಬ್ಬು ಹಿಡಿಸಿದ್ದೇವೆ ಎಂದು ಸದ್ಯದ ರಾಜಕೀಯದ ಬಗ್ಗೆ ಅಸಮಧಾನ ಹೊರಹಾಕಿದರು.

    ಇದೇ ವೇಳೆ ದಲಿತರ ಗೌಪ್ಯ ಮೀಟಿಂಗ್ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‌ನಲ್ಲಿ (Congress) ದಲಿತರ ಗೌಪ್ಯ ಮೀಟಿಂಗ್ ನಾಟುವುದಿಲ್ಲ. ದೆಹಲಿಯಿಂದ ಏನು ಬರುತ್ತದೆ ಅದು ಮಾತ್ರ ನಾಟುತ್ತದೆ. ಜನುಮದಲ್ಲಿ ಕಾಂಗ್ರೆಸ್‌ನವರು ದಲಿತರನ್ನು ಸಿಎಂ ಮಾಡಲ್ಲ. ಇದು ಸತ್ಯ. ಕಾಂಗ್ರೆಸ್‌ನ ದಲಿತರು ಕನಸು ಕಾಣುತ್ತಿದ್ದಾರೆ ಅಷ್ಟೇ. ಮಹದೇವಪ್ಪ ಹುಚ್ಚನಿದ್ದಾನೆ. ಪೈಪೋಟಿ ನಡೆಯುತ್ತದೆ ಅದರಿಂದ ಏನು ನಡೆಯಲ್ಲ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: HMT ಕ್ಯಾಂಪಸ್‌ನಲ್ಲಿ ಪೌರ ಕಾರ್ಮಿಕರೊಂದಿಗೆ ಕಸ ಗುಡಿಸಿದ ಹೆಚ್‌ಡಿಕೆ

  • ಅಣ್ಣನಿಗೆ ಆಗದೇ ಇರೋರು ಹಗರಣ ಮಾಡಿದ್ದಾರೆ, ಸಿದ್ದರಾಮಯ್ಯ ರಾಜೀನಾಮೆ ಕೊಡಬಾರದು: ಸಿಎಂ ಸಹೋದರ

    ಅಣ್ಣನಿಗೆ ಆಗದೇ ಇರೋರು ಹಗರಣ ಮಾಡಿದ್ದಾರೆ, ಸಿದ್ದರಾಮಯ್ಯ ರಾಜೀನಾಮೆ ಕೊಡಬಾರದು: ಸಿಎಂ ಸಹೋದರ

    ಮಂಡ್ಯ/ಮೈಸೂರು: ಸಿದ್ದರಾಮಯ್ಯ (Siddaramaiah) ಅವರು ತಪ್ಪು ಮಾಡಿದ್ದಾರೋ ಇಲ್ಲವೋ ನಮಗೆ ಗೊತ್ತಿಲ್ಲ. ಅವರು ರಾಜೀನಾಮೆ ಕೊಡುವುದು ನಮಗೆ ಇಷ್ಟ ಇಲ್ಲ. ನಮ್ಮ ಅಣ್ಣನಿಗೆ ಆಗದೇ ಇರುವವರು ಹಗರಣ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ (Siddegowda) ಹೇಳಿದ್ದಾರೆ.

    ಮೈಸೂರಿನ (Mysuru) ಸಿದ್ದರಾಮನ ಹುಂಡಿಯಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಏನಾದರೂ ಮಾಡಿ ಕೆಡವಬೇಕೆಂದು ಹೀಗೆ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರ ವಿರುದ್ಧ ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಈಗ ಸೈಟ್ ಹಿಂದಕ್ಕೆ ಕೊಡುತ್ತಿದ್ದಾರೆ ಎಂದು ಹೇಳುತ್ತಾರೆ. ತಪ್ಪು ನಡೆದಿದೆಯೋ ಇಲ್ಲವೋ ಗೊತ್ತಿಲ್ಲ. ಪಾರ್ವತಮ್ಮ ಅವರಿಗೆ ಕುಂಕುಮ ರೂಪದಲ್ಲಿ ಜಮೀನು ಕೊಟ್ಟಿರೋದು ನಮಗೆ ಗೊತ್ತಿಲ್ಲ. ವಿಜಯನಗರದಲ್ಲಿ ಸೈಟ್ ಕೊಟ್ಟಿರೋದು ಗೊತ್ತಿಲ್ಲ ಎಂದರು. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‌ರ ವಿರುದ್ಧ ಅವಹೇಳನಕಾರಿ ಹೇಳಿಕೆ – ಧಾರ್ಮಿಕ ಮುಖಂಡ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ 67 FIR

    ಸಿದ್ದರಾಮಯ್ಯ ಅವರಿಗೂ ಈ ವಿಚಾರ ಗೊತ್ತಿಲ್ಲ. ಈಗ ಅವರನ್ನು ರಾಜೀನಾಮೆ ಕೇಳಿದರೆ ಹೇಗೆ ಕೊಡೋಕೆ ಆಗುತ್ತೆ. 40 ವರ್ಷದಿಂದ ಸಿದ್ದರಾಮಯ್ಯ ಕೆಟ್ಟ ಹೆಸರು ತಗೊಂಡಿರಲಿಲ್ಲ. ಈಗ ಇವರು ಆರೋಪ ಮಾಡುತ್ತಿದ್ದಾರೆ. ನಮ್ಮ ಬಳಿ ಇರೋದು ಎಲ್ಲಾ ಪಿತ್ರಾರ್ಜಿತ ಆಸ್ತಿ. ನಾವು ಖರೀದಿ ಮಾಡಿದ ಜಮೀನು ಇಲ್ಲ. ಸಿದ್ದರಾಮಯ್ಯ ಅವರು ಈ ಬಗ್ಗೆ ನಮ್ಮ ಜೊತೆ ಏನೂ ಹೇಳಿಕೊಂಡಿಲ್ಲ. ಅವರು ನೊಂದಿದ್ದಾರೆ ಎಂದು ನಮಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬಾರದು ಎಂದು ತಿಳಿಸಿದರು. ಇದನ್ನೂ ಓದಿ: ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಗದಗದಲ್ಲಿ ಜೆಡಿಎಸ್ ಪ್ರೊಟೆಸ್ಟ್

  • ಸೈಟ್ ವಾಪಸ್ ಕೊಟ್ಟು ಸಿಎಂ ಮತ್ತಷ್ಟು ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ : ಬೊಮ್ಮಾಯಿ

    ಸೈಟ್ ವಾಪಸ್ ಕೊಟ್ಟು ಸಿಎಂ ಮತ್ತಷ್ಟು ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ : ಬೊಮ್ಮಾಯಿ

    ಹುಬ್ಬಳ್ಳಿ: ಸೈಟ್ ವಾಪಸ್ ಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮತ್ತಷ್ಟು ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಮುಡಾ ಸೈಟ್ (MUDA Site) ವಾಪಸ್ ಕೊಟ್ಟಿರುವ ವಿಚಾರವಾಗಿ ಈ ಕೆಲಸವನ್ನು ಅವರು ಮೊದಲೇ ಮಾಡಬೇಕಿತ್ತು. ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ಮಾಡಿಸಿದ್ದರೆ ಮುಗಿದಿತ್ತು. ಸಿದ್ದರಾಮಯ್ಯ ಅವರ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಬರುತ್ತಿರಲಿಲ್ಲ. ಆದರೆ ಆಗ ಸಮರ್ಥನೆ ಮಾಡಿಕೊಂಡರು ಎಂದು ಪ್ರತಿಕ್ರಿಯೆ ನೀಡಿದರು.ಇದನ್ನೂ ಓದಿ: ರಾಯಚೂರಿನಿಂದ ಬೀದರ್‌ಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 6 ಲಾರಿಗಳ ಜಪ್ತಿ

    ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿ ಕೊಟ್ಟು, ಪ್ರಕರಣ ದಾಖಲಾಗಿ, ಈಗ ತನಿಖೆ ಆರಂಭವಾಗಿದೆ. ಈಗ ಸೈಟ್ ವಾಪಸ್ ಕೊಟ್ಟಿರುವುದರಿಂದ ಹಲವಾರು ಪ್ರಶ್ನೆಗಳು ಉದ್ಭವಿಸಿವೆ. ವಾಪಸ್ ಕೊಡುವ ಮೂಲಕ ಮೂಲಕ ಮತ್ತಷ್ಟು ಜಟಿಲ ಮಾಡಿಕೊಂಡಿದ್ದಾರೆ. ಎಫ್‌ಐಆರ್ ಆದ ಮೇಲೆ ತನಿಖೆ ಆಗಲೇಬೇಕು. ಒಂದು ಕಡೆ ಲೋಕಾಯುಕ್ತ ತನಿಖೆ ನಡೆದಿದೆ. ಮತ್ತೊಂದು ಕಡೆ ಇಡಿ ಎಫ್‌ಐಆರ್ ಮಾಡಿಕೊಂಡು ತನಿಖೆ ಮಾಡುತ್ತಿದೆ. ಕಾಂಗ್ರೆಸ್ (Congress) ನಾಯಕರು ತಪ್ಪೇ ನಡೆದಿಲ್ಲ ಎಂದು ಹೇಳುತ್ತಿದ್ದರು ಎಂದು ತಿಳಿಸಿದರು.

    ಸೈಟ್ ವಾಪಸ್ ಕೊಡುವ ಮೂಲಕ ತಪ್ಪಾಗಿದೆ ಎನ್ನುವುದು ಒಪ್ಪಿಕೊಂಡಂತಾಗಿದೆ. ಈ ಹಿಂದೆ ಯಡಿಯೂರಪ್ಪ ಸೈಟ್ ವಾಪಸ್ ಮಾಡಿದಾಗ ಇದೇ ಸಿದ್ದರಾಮಯ್ಯ ಏನು ಹೇಳಿದ್ದರು ಎಂದು ನೆನಪಿಸಿಕೊಳ್ಳಲಿ. ಆಗ ಸಿದ್ದರಾಮಯ್ಯ ಸೈಟ್ ವಾಪಸ್ ಮಾಡುವ ಮೂಲಕ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದರು. ಇದೇ ಮಾತು ಈಗ ಸಿದ್ದರಾಮಯ್ಯ ಅವರಿಗೂ ಅನ್ವಯ ಆಗುತ್ತದೆ. ಸೈಟ್ ವಾಪಸ್‌ನೊಂದಿಗೆ ಸೈಟು ಹಂಚಿಕೆ ಕಾನೂನುಬಾಹಿರವಾಗಿ ಹಾಗೂ ಅಕ್ರಮವಾಗಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಯುಕೆ ಸಂಸತ್‌ನಲ್ಲಿ ಬಸವಣ್ಣನ `ಇವನ್ಯಾರವ’ ವಚನ ಪಠಿಸಿ ಕನ್ನಡ ಪ್ರೇಮ ಮೆರೆದ ಆದೀಶ್

  • ಮುಡಾ ಸೈಟ್ ವಾಪಸ್ ನೀಡಿರುವುದು ಒಳ್ಳೆಯ ನಿರ್ಧಾರ – ಪರಮೇಶ್ವರ್

    ಮುಡಾ ಸೈಟ್ ವಾಪಸ್ ನೀಡಿರುವುದು ಒಳ್ಳೆಯ ನಿರ್ಧಾರ – ಪರಮೇಶ್ವರ್

    ಬೆಂಗಳೂರು: ಮುಡಾ ಸೈಟ್ (MUDA Site) ವಾಪಾಸ್ ನೀಡಿರುವುದು ಒಳ್ಳೆಯ ನಿರ್ಧಾರ ಎಂದು ಸಿಎಂ ಪತ್ನಿ ಮುಡಾ ಸೈಟ್ ವಾಪಸ್ ನೀಡಿರುವ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ( G.Parameshwar) ಹೇಳಿದ್ದಾರೆ.ಇದನ್ನೂ ಓದಿ: ನಟ ಗೋವಿಂದ ಕಾಲಿಗೆ ಗುಂಡೇಟು – ಆಸ್ಪತ್ರೆಗೆ ದಾಖಲು : ಆಗಿದ್ದೇನು?

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾಭಾವಿಕವಾಗಿ ಮನೆಯಲ್ಲಿ ಯಜಮಾನರಿಗೆ ತೊಂದರೆ ಆಗುತ್ತಿದೆ ಅಥವಾ ತೇಜೋವಧೆ ಆಗುತ್ತಿದೆ ಎನ್ನವುದು ಅವರಿಗೆ ಗೊತ್ತಾಗಿದೆ. ಅದಕ್ಕಾಗಿ ವಾಪಸ್ ಮಾಡುತ್ತೇನೆ ಎಂದಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರ ಅನಿಸುತ್ತದೆ. ತನಿಖೆ ಇರಲಿ ಆಪಾದನೆ ಬಂದ ತಕ್ಷಣ ಇದು ಸತ್ಯ ಆಗುವುದಿಲ್ಲ. ಆದರೆ ಇಷ್ಟು ದಿನ ರಾಜಕೀಯಕ್ಕೆ ಉಪಯೋಗಿಸುತ್ತಿದ್ದಾರೆ ಎನ್ನುವುದು ಅವರ ಅಭಿಪ್ರಾಯ ಅಷ್ಟೇ ಎಂದರು.

    ಕಾನೂನು ದೃಷ್ಟಿಯಲ್ಲಿ ಮುಂದೆ ಏನಾಗುತ್ತದೆ ಗೊತ್ತಿಲ್ಲ. ಸರೆಂಡರ್ ಮಾಡಿದ ಮೇಲೆ ಏನಾಗುತ್ತದೆ ಎಂದು ಗೊತ್ತಿಲ್ಲ. ರಾಜಕೀಯಕ್ಕೆ ಉಪಯೋಗ ಮಾಡುತ್ತಿದ್ದಾರೆ. ನನಗೆ ಮರ್ಯಾದೆ ಮುಖ್ಯ ಅನ್ನುವುದು ಅವರ ಭಾವನೆಯಾಗಿದೆ. ಹಾಗಾಗಿಯೇ ಮುಡಾ ಸೈಟುಗಳನ್ನು ವಾಪಸ್ ನೀಡಿದ್ದಾರೆ. ಆದರೆ ಮುಡಾ (MUDA Scam) ವಿಚಾರ ಬಿಜೆಪಿಯವರಿಗೆ (BJP) ರಾಜಕೀಯಕ್ಕೆ ಉಪಯೋಗ ಆಗುತ್ತಿದೆ ಎನ್ನುವುದು ಖಾತ್ರಿಯಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಅಂದು ಹುಬ್ಲೋಟ್‌ ವಾಚ್‌, ಇಂದು ಮುಡಾ ಸೈಟ್‌ಗಳು! – ಭಾರೀ ಚರ್ಚೆಗೆ ಗ್ರಾಸವಾಗಿದ್ದ ಗಿಫ್ಟ್‌

  • ಅಂದು ಹುಬ್ಲೋಟ್‌ ವಾಚ್‌, ಇಂದು ಮುಡಾ ಸೈಟ್‌ಗಳು! – ಭಾರೀ ಚರ್ಚೆಗೆ ಗ್ರಾಸವಾಗಿದ್ದ ಗಿಫ್ಟ್‌

    ಅಂದು ಹುಬ್ಲೋಟ್‌ ವಾಚ್‌, ಇಂದು ಮುಡಾ ಸೈಟ್‌ಗಳು! – ಭಾರೀ ಚರ್ಚೆಗೆ ಗ್ರಾಸವಾಗಿದ್ದ ಗಿಫ್ಟ್‌

    ಬೆಂಗಳೂರು: ಅಂದು ಹುಬ್ಲೋಟ್ ವಾಚನ್ನು ವಾಪಸ್‌ ನೀಡಿದ್ದ ಸಿದ್ದರಾಮಯ್ಯ (Siddaramaiah) ಇಂದು ಮುಡಾ ಸೈಟ್‌ಗಳು (MUDA) ವಾಪಸ್‌ ನೀಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಎರಡನೇ ಬಾರಿ ವಾಪಸ್ ನೀಡಿದ ಘಟನೆ ನಡೆದಿದೆ.

    ಮುಡಾ ಪ್ರಕರಣದಲ್ಲಿ ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ 2010 ರಲ್ಲಿ ಈ ಜಾಗವನ್ನು ಗಿಫ್ಟ್‌ ಡೀಡ್‌ ಆಗಿ ನೋಂದಣಿ ಮಾಡಿದ್ದರಿಂದ ಸಿದ್ದರಾಮಯ್ಯ ವಿವಾದಕ್ಕೆ ಸಿಲುಕಿದ್ದಾರೆ. ಇದು ಈಗಿನ ಪ್ರಕರಣವಾಗಿದ್ದರೆ ಸಿಎಂ ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ವಾಚ್‌ ಗಿಫ್ಟ್‌ ಪಡೆದು ವಿವಾದಕ್ಕೆ ಸಿಲುಕಿದ್ದರು. ಇದನ್ನೂ ಓದಿ: ಪ್ರೀತಿಯ ವ್ಯಕ್ತಿಯಿಂದ ಸಿಎಂ ಸಿದ್ದರಾಮಯ್ಯಗೆ Rado ವಾಚ್ ಗಿಫ್ಟ್

    2013-2018ರ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 40 ಲಕ್ಷ ರೂ. ಮೌಲ್ಯದ ಹುಬ್ಲೊಟ್ ವಾಚ್ (Hublot Watch) ಹಗರಣ ದೊಡ್ಡ ಸದ್ದು ಮಾಡಿತ್ತು. ಹುಬ್ಲೋಟ್ ವಾಚ್ ಗಿಫ್ಟ್‌  ಪ್ರಕರಣದಿಂದ ದೊಡ್ಡ ಮಟ್ಟದ ರಾಜಕೀಯ ಬಿರುಗಾಳಿ ಸೃಷ್ಟಿಯಾಗಿತ್ತು.

    ಸಿದ್ದರಾಮಯ್ಯಗೆ ವಾಚ್‌ ಗಿಫ್ಟ್‌ ನೀಡಿದ್ದ ಉದ್ಯಮಿ ಗಿರೀಶ್‌ ಚಂದ್ರವರ್ಮ
    ಸಿದ್ದರಾಮಯ್ಯಗೆ ವಾಚ್‌ ಗಿಫ್ಟ್‌ ನೀಡಿದ್ದ ಉದ್ಯಮಿ ಗಿರೀಶ್‌ ಚಂದ್ರವರ್ಮ

    2015ರ ಜುಲೈನಲ್ಲಿ ತನ್ನ ಎನ್‌ಆರ್‌ಐ ಸ್ನೇಹಿತ ಡಾ.ಗಿರೀಶ್‌ಚಂದ್ರ ವರ್ಮಾ ಈ ಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದರು ಎಂದು  ಸಿದ್ದರಾಮಯ್ಯ ಹೇಳಿದ್ದರು. ನಂತರ ಈ ವಿಚಾರವನ್ನು ಕೆದಕಿದ್ದ ಹೆಚ್‌ಡಿ ಕುಮಾರಸ್ವಾಮಿ ನಿಮ್ಮ ಸಿಎಂ ಸಮಾಜವಾದಿಯಲ್ಲ ಅವರು ಮಜಾವಾದಿ. ದುಬಾರಿ ಬೆಲೆಯ ವಜ್ರ ಖಚಿತ ವಾಚು, ಗ್ಲಾಸ್‌ಗಳನ್ನು ಧರಿಸುತ್ತಾರೆ ಎಂದು  ಹೇಳಿ ಟೀಕಿಸಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಮತ್ತೆ ಸುತ್ತಿಕೊಂಡ `ವಾಚ್’ ಕಂಟಕ!

    ಕೆಲವು ಒಪ್ಪಂದಗಳಿಗೆ ಸಹಕರಿಸಿದ್ದಕ್ಕೆ ವೈದ್ಯ ಗಿರೀಶ್‌ ಚಂದ್ರವರ್ಮ ಅವರಿಂದ ಸಿದ್ದರಾಮಯ್ಯ ಕಿಕ್‌ ಬ್ಯಾಕ್‌ ರೂಪದಲ್ಲಿ ವಾಚ್‌ ಪಡೆದಿದ್ದಾರೆ. ಅದಕ್ಕೆ ಎಲ್ಲ ದಾಖಲೆಗಳಿವೆ. ಹಾಗಾಗಿ ಪ್ರಧಾನಮಂತ್ರಿ ಕಚೇರಿಗೂ ದೂರು ನೀಡಲಾಗಿತ್ತು. ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ನ್ಯಾಯಾಲಯ ನಿರ್ದೇಶಿಸಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಹ ಸಲ್ಲಿಸಲಾಗಿತ್ತು.

    ಪ್ರಕರಣದಲ್ಲಿ ಸಿದ್ದರಾಮಯ್ಯ ಆಪ್ತ ಡಾ.ಗಿರೀಶ್ ಚಂದ್ರ ವರ್ಮಾ ಅವರು ನೀಡಿದ್ದ ದಾಖಲಾತಿಗಳು ಸುಳ್ಳು ಎಂದು ಆರೋಪ ಕೇಳಿಬಂದಿತ್ತು. ದುಬೈನಲ್ಲಿ ವಾಚ್ ಖರೀದಿ ಮಾಡಿದ್ದೆ ಎಂದು ಪ್ರಕರಣದ ತನಿಖಾ ಸಂಸ್ಥೆ ಎಸಿಬಿ ಮುಂದೆ ನೀಡಿದ್ದ ಹೇಳಿಕೆ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವರ್ಮಾ ಸಲ್ಲಿಸಿದ್ದರು. ಆದರೆ ಸದ್ಯ ಇದು ಸುಳ್ಳು, ಆ ದಾಖಲೆಗಳು ನಕಲಿ ಎಂಬ ಆರೋಪ ಕೇಳಿ ಬಂದಿತ್ತು.

    ಸಿದ್ದರಾಮಯ್ಯ ರಾಜೀನಾಮೆ ಹಂತಕ್ಕೂ ಹುಬ್ಲೋಟ್ ವಾಚ್ ಪ್ರಕರಣ ತಲುಪಿತ್ತು. ವಾಚ್ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಒಳಗಾಗುತ್ತಿದ್ದಂತೆ ಸಿದ್ದರಾಮಯ್ಯ ವಾಚ್ ಅನ್ನು ಕೊನೆಗೆ ಸರ್ಕಾರದ ವಶಕ್ಕೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ಅಂತ್ಯ ಹಾಡಿದ್ದರು.

    ವಾಚ್‌ ಯಾರಿಂದ ಬಂದಿದೆ ಎಂಬ ವಿವರವುಳ್ಳ ಪತ್ರವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಸಿಎಂ ನೀಡಿದ್ದರು. ಕಾಗೋಡು ತಿಮ್ಮಪ್ಪನವರು ಮುಖ್ಯ ಕಾರ್ಯದರ್ಶಿಯಾಗಿದ್ದ ಅರವಿಂದ್ ಜಾಧವ್ ಅವರನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಕೈಗಡಿಯಾರವನ್ನು ಹಸ್ತಾಂತರ ಮಾಡಿದ್ದರು.  ನಂತರ ವಾಚನ್ನು ಕ್ಯಾಬಿನೆಟ್ ಹಾಲ್‌ನಲ್ಲಿಡುವುದಾಗಿ ಸಿಎಸ್  ಪ್ರಕಟಿಸಿದರು.

    ವಿವಾದ ಅಂತ್ಯವಾಗಿದ್ದರೂ ಈ ವಾಚ್ ಪ್ರಕರಣ ಸಿದ್ದರಾಮಯ್ಯ ಅವರ ಇಮೇಜ್‍ಗೆ ಸ್ವಲ್ಪ ಹೊಡೆತ ನೀಡಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಈ ವಿಚಾರವನ್ನು ಪ್ರಸ್ತಾಪ ಮಾಡಿ ಟೀಕೆ ಮಾಡುತ್ತಿದ್ದರು.