Tag: ಮುಡಾ ಸೈಟು

  • ಮುಡಾ 50:50 ಸೈಟು ಹಗರಣ – ಜೆಡಿಎಸ್‌ ಶಾಸಕ ಜಿಟಿಡಿ, ಪುತ್ರ ಹರೀಶ್‌ ಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಮುಡಾ 50:50 ಸೈಟು ಹಗರಣ – ಜೆಡಿಎಸ್‌ ಶಾಸಕ ಜಿಟಿಡಿ, ಪುತ್ರ ಹರೀಶ್‌ ಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಮೈಸೂರು: ಮುಡಾದ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) 50:50 ಸೈಟು ಹಂಚಿಕೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಇಬ್ಬರು ಜೆಡಿಎಸ್‌ ಶಾಸಕರ ವಿರುದ್ಧ ದೂರು ನೀಡಿದ್ದಾರೆ.

    ಇಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ತೆರಳಿ ಜೆಡಿಎಸ್‌ ಶಾಸಕರಾದ ಜಿ.ಟಿ ದೇವೇಗೌಡ (GT Devegowda) ಹಾಗೂ ಪುತ್ರ ಜಿ.ಡಿ ಹರೀಶ್‌ ಗೌಡ (Harish Gowda) ವಿರುದ್ಧ ಲೋಕಾಯುಕ್ತಕ್ಕೆ (Lokayukta) ದೂರು ಸಲ್ಲಸಿದ್ದಾರೆ. ಇದನ್ನೂ ಓದಿ: MUDA Scam | ಜೆಡಿಎಸ್‌ ಶಾಸಕ ಜಿಟಿಡಿ ವಿರುದ್ಧವೂ ಲೋಕಾಯುಕ್ತಕ್ಕೆ ದೂರು – 2 ಸೈಟು ಕಿಕ್‌ಬ್ಯಾಕ್‌ ಆರೋಪ

    ಮುಡಾ ಸೈಟು ಹಂಚಿಕೆಯಲ್ಲಿ ಶಾಸಕ ಜಿ.ಟಿ ದೇವೇಗೌಡರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸರ್ವೇ ನಂ.81/2ರಲ್ಲಿ 2.22 ಎಕರೆ ಜಮೀನಿಗೆ ಪರಿಹಾರ ನೀಡಿಲ್ಲವೆಂದು 19 ನಿವೇಶನವನ್ನು ಜಿಟಿಡಿ ಕುಟುಂಬ ಪಡೆದುಕೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಭೂ ಮಾಲೀಕನ ಮನೆಗೆ ತೆರಳಿ ಮಾತುಕತೆ ನಡೆಸಿರುವ ಫೋಟೋ ಸಹ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಸಿಎಂ ಪತ್ನಿಗೆ `ಹೈ’ ರಿಲೀಫ್ – ಕೋರ್ಟ್‌ನಲ್ಲಿ ವಾದ ಪ್ರತಿವಾದ ಏನಿತ್ತು?

    ದೇವನೂರು ಗ್ರಾಮದ ಶಂಕರಯ್ಯ ಕುಟುಂಬದ ಜೊತೆ ಶಾಸಕರಾದ ಜಿ.ಟಿ ದೇವೇಗೌಡ ಹಾಗೂ ಪುತ್ರ ಜಿ.ಡಿ ಹರೀಶ್‌ ಗೌಡ ವ್ಯವಹಾರ ನಡೆಸಿದ್ದಾರೆ ಹಾಗೂ ಕುಟುಂಬಸ್ಥರನ್ನು ಭೇಟಿಯಾಗಿ ಚೆಕ್‌ ನೀಡುತ್ತಿದ್ದಾರೆ ಎನ್ನಲಾದ ಫೋಟೋಗಳ ದಾಖಲೆಯೊಂದಿಗೆ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಸಿಎಂ ಪತ್ನಿಗೆ `ಹೈ’ ರಿಲೀಫ್ – ಕೋರ್ಟ್‌ನಲ್ಲಿ ವಾದ ಪ್ರತಿವಾದ ಏನಿತ್ತು?

    ಜಿ.ಟಿ ದೇವೇಗೌಡ ಅವರು ತಮ್ಮ ಸಹೋದರಿ ಮಗ ಮಹೇಂದ್ರ ಮೂಲಕ ಬೇನಾಮಿ ಆಸ್ತಿ ಖರೀದಿಸಿದ್ದಾರೆ. ಅಂದಿನ ತಹಸಿಲ್ದಾರ್ ರಕ್ಷಿತ್ ಅವರ ಮೇಲೆ ಪ್ರಭಾವ ಬೀರಿ ಮುಡಾ ಆಸ್ತಿಗೆ ಪರಿಹಾರ ಪಡೆದಿದ್ದಾರೆ. ದೇವನೂರು 2ನೇ ಹಂತದ ಸರ್ವೆ ನಂ. 81/2ರಲ್ಲಿ 20ಕ್ಕೂ ಹೆಚ್ಚು ಮನೆ ಇದ್ದರೂ ಪರಿಹಾರ ತೆಗೆದುಕೊಂಡಿದ್ದಾರೆ. ಇದರಲ್ಲಿ ಜಿಟಿಡಿ ಅವರ ಪ್ರಭಾವ, ಬೇನಾಮಿ ಆಸ್ತಿ ಹೊಂದಿರುವುದು ಹಾಗೂ ಅಧಿಕಾರಿಯ ತಪ್ಪು ಎದ್ದು ಕಾಣುತ್ತಿದೆ. ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂಬುದು ನನ್ನ ಮನವಿ ಎಂದು ಸ್ನೇಹಮಯಿ ಕೃಷ್ಣ ದೂರಿನಲ್ಲಿ ಮನವೊ ಮಾಡಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ಶಾಸಕ ಜಿ.ಟಿ ದೇವೇಗೌಡ ಅವರ ವಿರುದ್ಧ ಸ್ನೇಹಮಯಿ ಕೃಷ್ಣ ಸೈಟು ಕಿಕ್‌ ಬ್ಯಾಕ್‌ ಪಡೆದಿರುವ ಆರೋಪದ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದನ್ನೂ ಓದಿ: MUDA Case | ಇಡಿ ಸಮನ್ಸ್‌ಗೆ ಹೈಕೋರ್ಟ್ ತಡೆ – ಸಿಎಂ ಪತ್ನಿ ಪಾರ್ವತಿಗೆ ತಾತ್ಕಾಲಿಕ ರಿಲೀಫ್

  • ಮುಡಾ ಮಾಜಿ ಆಯುಕ್ತನ ಹೆಸ್ರಲ್ಲಿ 198, ಎಂಎಲ್‌ಸಿ ಹೆಸ್ರಲ್ಲಿ 128 ಬೇನಾಮಿ ಸೈಟ್ – 631 ಸೈಟುಗಳ ಮಾಹಿತಿ ಕೇಳಿದ ಇಡಿ

    ಮುಡಾ ಮಾಜಿ ಆಯುಕ್ತನ ಹೆಸ್ರಲ್ಲಿ 198, ಎಂಎಲ್‌ಸಿ ಹೆಸ್ರಲ್ಲಿ 128 ಬೇನಾಮಿ ಸೈಟ್ – 631 ಸೈಟುಗಳ ಮಾಹಿತಿ ಕೇಳಿದ ಇಡಿ

    – ಬೇನಾಮಿ ವಹಿವಾಟು ನೋಡಿ ಬೆಚ್ಚಿಬಿದ್ದ ಇಡಿ

    ಮೈಸೂರು: ಈಗಾಗಲೇ 300 ಕೋಟಿ ರೂ. ಮೌಲ್ಯದ 143 ಸೈಟ್‌ಗಳನ್ನು ಜಪ್ತಿ ಮಾಡಿರೋ ಇಡಿ, ಸದ್ಯದಲ್ಲೇ ಮುಡಾ ಸ್ಥಿರಾಸ್ತಿ (Immovable Properties) ಜಪ್ತಿಯ ಭಾಗ-2 ಕಾರ್ಯಾಚರಣೆ ಶುರು ಮಾಡುವ ಸಾಧ್ಯತೆ ಇದೆ. 631 ಮುಡಾ ನಿವೇಶನಗಳ ಬಗ್ಗೆ ಮಾಹಿತಿ ನೀಡುವಂತೆ ಇಡಿ (ED) ಕೇಳಿದೆ.

    ಕಳೆದ ಡಿಸೆಂಬರ್ 16ರಂದೇ ಮುಡಾಗೆ ಇಡಿ ಅಧಿಕಾರಿಗಳು ಬರೆದಿರುವ ಪತ್ರ ʻಪಬ್ಲಿಕ್ ಟಿವಿʼಗೆ (PUBLiC TV) ಲಭ್ಯವಾಗಿದೆ. ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ನಿವೇಶನಗಳ ವಿವರ ಕೇಳಿದ್ದು, ಮುಡಾ ಅಧಿಕಾರಿಗಳನ್ನ ಸಂಪರ್ಕ ಮಾಡಿ ಮತ್ತೊಂದು ಲಿಸ್ಟ್ ಕಳುಹಿಸುವಂತೆ ಸೂಚನೆ ನೀಡಿದ್ದಾರೆ. ಅಕ್ರಮ ಹಣ ವ್ಯವಹಾರ ಸಂಬಂಧ ಸಿಕ್ಕ ದಾಖಲೆಗಳ ಆಧಾರದಲ್ಲಿ ಲಿಸ್ಟ್ ಕೇಳಿದ್ದು, ಜಾರಿ ನಿರ್ದೇಶನಾಲಯ ಮುಡಾ ಕಚೇರಿಯಲ್ಲಿ ಭ್ರಷ್ಟರ ಬೇಟೆ ಮುಂದುವರಿಸಿದೆ. ಇದನ್ನೂ ಓದಿ: ಭಂಡತನ ಬಿಟ್ಟು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ – ವಿಜಯೇಂದ್ರ ಆಗ್ರಹ

    ಎಂಎಲ್‌ಸಿ ಹೆಸ್ರಲ್ಲಿ 128 ಸೈಟು:
    ಮುಡಾ ಸೈಟು ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಕಪ್ಪು ಹಣದ ವಹಿವಾಟು ಹೆಚ್ಚಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. 631 ಸೈಟುಗಳ ಖರೀದಿಯಲ್ಲಿ ದೊಡ್ಡಮಟ್ಟದಲ್ಲಿ ಕಪ್ಪು ಹಣದ ವಹಿವಾಟು ನಡೆದಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಅಲ್ಲದೇ ಮುಡಾ ಮಾಜಿ ಆಯುಕ್ತನ ಹೆಸರಲ್ಲಿ 198, ಮೈಸೂರಿನ ಎಂಎಲ್‌ಸಿ ಒಬ್ಬರಿಗೆ ಸೇರಿದೆ ಎನ್ನಲಾದ 128 ಸೈಟುಗಳ ದಾಖಲೆಗಳು ಪತ್ತೆಯಾಗಿವೆ. ಮೂಡಾ ನಗರ ಯೋಜನೆ ಅಧಿಕಾರಿ ಒಬ್ಬರಿಗೆ ಸೇರಿದ 92 ಬೇನಾಮಿ ಸೈಟಿನ ದಾಖಲೆಗಳೂ ಪತ್ತೆಯಾಗಿವೆ. ಮುಡಾದಲ್ಲಿ ಬೇನಾಮಿ ಆಸ್ತಿ ವಹಿವಾಟು ಕಂಡು ಇಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ: ಸಿದ್ರಾಮಣ್ಣ ಏನೇನು ಬೆಲೆ ಜಾಸ್ತಿ ಮಾಡ್ತಿರೋ ಒಟ್ಟಿಗೆ ಮಾಡಿ ಬಿಡಿ – ಅಶೋಕ್

    ಮಾಜಿ ಆಯುಕ್ತರ ಕುಟುಂಬಸ್ಥರ ಹೆಸರಲ್ಲಿ ಆಸ್ತಿಗಳು ಪತ್ತೆ:
    ಮೈಸೂರಿನ ರಿಯಲ್ ಎಸ್ಟೇಟ್ ಏಜೆಂಟ್ ಹೆಬ್ಬೆಟ್ ಜಯರಾಮ್ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬೇನಾಮಿ ಆಗಿದ್ದಾರಾ ಎಂಬ ಅನುಮಾನ ದಟ್ಟವಾಗಿದೆ. ಜಯರಾಮ್ ಮನೆ ಹಾಗೂ ಕಚೇರಿ ಮೇಲೆ ಇಡಿ ಅಧಿಕಾರಿಗಳು ನಿರಂತರ 70 ಗಂಟೆ ರೇಡ್ ಮಾಡಿದ್ದರು. ಆಗ ಜಯರಾಮ್ ಮನೆಯಲ್ಲಿ ಬಹುತೇಕ ಬೇನಾಮಿ ದಾಖಲೆಗಳು ಸಿಕ್ಕಿವೆ. ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದ ಹೆಸರಿಲ್ಲಿ ಬೇನಾಮಿ ನಡೆದಿದೆ ಎನ್ನಲಾಗುತ್ತಿದ್ದು, ಮುಡಾ ಮಾಜಿ ಆಯುಕ್ತ ದಿನೇಶ್ ಕುಟುಂಬಸ್ಥರ ಹೆಸರಿನಲ್ಲಿ ಆಸ್ತಿಗಳು ಇವೆ ಎನ್ನಲಾಗಿದೆ.

    ರಿಯಲ್ ಎಸ್ಟೇಟ್ ಏಜೆಂಟ್ ಹೆಬ್ಬೆಟ್ ಜಯರಾಮ್ ವಿಚಾರಣೆ ವೇಳೆ ಮತ್ತೊಂದು ಸ್ಫೋಟಕ ವಿಚಾರ ಬಯಲಾಗಿದ್ದು, ಪ್ರಾಥಮಿಕ ವಿಚಾರಣೆಯಲ್ಲಿ ಹಲವರ ಹೆಸರು ಬಾಯಿಬಿಟ್ಟಿದ್ದಾನೆ. ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಸಂಬಂಧಿ ತೇಜಸ್ ಗೌಡ ಹೆಸರನ್ನು ಜಯರಾಮ್ ತಿಳಿಸಿದ್ದಾನೆ. ಹೀಗಾಗಿಯೆ ಹೆಬ್ಬೆಟ್ ಜಯರಾಮ್ ಮನೆ ಕಚೇರಿ ಮೇಲೆ ರೇಡ್ ಆಗುತ್ತಿದ್ದಂತೆ ಮುಡಾ ಮಾಜಿ ಆಯುಕ್ತ ದಿನೇಶ್ ಎಸ್ಕೇಪ್ ಆಗಿದ್ದರು. ಹೆಬ್ಬೆಟ್ ಜಯರಾಮ್ ನಡೆಸುತ್ತಿದ್ದ ವಕ್ರತುಂಡ ಗೃಹನಿರ್ಮಾಣ ಸಹಕಾರ ಸಂಘದಲ್ಲಿ ದಿನೇಶ್ ಕುಟುಂಬಸ್ಥರೆ ನಿರ್ದೇಶಕರಾಗಿದ್ದಾರೆ ಎನ್ನಲಾಗಿದೆ.

    ಮುಡಾ ಅಕ್ರಮಕ್ಕೆ `ಕೋಕನಟ್’ ಕೋಡ್‌ವರ್ಡ್:
    ಬೇನಾಮಿ ಡೀಲ್ ವಹಿವಾಟಿಗೆ ಹೆಬ್ಬೆಟ್ ಜಯರಾಮ್ ಇಟ್ಟಿದ್ದ ಹೆಸರು ಕೋಕನಟ್. ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ಕೋಕನಟ್ ಹೆಸರಿನಲ್ಲೆ ಜಯರಾಮ್ ದುಡ್ಡು ಕಳುಹಿಸುತ್ತಿದ್ದನಂತೆ. ಜಯರಾಮ್ ವಾಟ್ಸಪ್‌ ಚಾಟ್‌ನಲ್ಲಿ ಮಹತ್ತರ ವಿಚಾರ ಇಡಿಗೆ ಸಿಕ್ಕಿದೆ. ಒಂದು ಕೋಕನಟ್ ಎಂದರೆ ಒಂದು ಲಕ್ಷ. 50 ಕೋಕನಟ್ ಎಂದರೆ 50 ಲಕ್ಷ. 100 ಕೋಕನಟ್ ಎಂದರೆ 1 ಕೋಟಿ. ಹೀಗೆ ಹಲವು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಕೋಕನಟ್ ಹೆಸರಿನಲ್ಲಿ ಹೆಬ್ಬೆಟ್ ಜಯರಾಮ್ ಹಣ ಕಳುಹಿಸಿದ್ದ ಎನ್ನಲಾಗುತ್ತಿದ್ದು, ಎಲ್ಲಾ ದಾಖಲೆಗಳನ್ನು ಇಡಿ ಸೀಜ್ ಮಾಡಿದೆ.

    ಸಿಎಂ ರಾಜೀನಾಮೆಗೆ ಬಿಗಿಪಟ್ಟು ಹಿಡಿದ ಬಿಜೆಪಿ
    ಜಾರಿ ನಿರ್ದೇಶನಾಲಯ 143 ಮುಡಾ ಬೇನಾಮಿ ಸೈಟ್‌ಗಳು ಸೀಜ್ ಮಾಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು ಹಿಡಿದಿದೆ. ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಅಂತ ಆಗ್ರಹಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಸಚಿವ ಚಲುವರಾಯಸ್ವಾಮಿ ಮನವಿ: ಕೇಂದ್ರದಿಂದ ಸಮ್ಮತಿ

    ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ್ದಾರೆ.. ಆದ್ರೆ, ಇದು ಸಿಎಂ ಮೇಲೆ ರಾಜಕೀಯವಾಗಿ ನಡೆದ ಪಿತೂರಿ ಅಂತ ಆರೋಪಿಸಿರೋ ಡಿಸಿಎಂ ಡಿಕೆ ಶಿವಕುಮಾರ್, ಇನ್ವೆಸ್ಟಿಗೇಷನ್ ಲಾಂಗ್ ಪ್ರೊಸೆಸ್ ಆಗಿದೆ.. ಅದು ಕೋರ್ಟ್ ಟ್ರಯಲ್ ಮಾಡೋದು.. ಅದನ್ನ ನಾನು ನೀವು ಟ್ರಯಲ್ ಮಾಡೋದಲ್ಲ.. ಸಿಎಂ ಪತ್ನಿ ಆಗಲಿ.. ಸಿಎಂ ಆಗಲಿ ಯಾವುದೇ ತಪ್ಪು ಮಾಡಿಲ್ಲ ಅಂತ ಹೇಳಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ..

    ಒಟ್ನಲ್ಲಿ ಮುಡಾ ಹಗರಣ ವಿಚಾರದಲ್ಲಿ ಒಂದು ಹಂತದ ವಿಚಾರಣೆ ಮುಗಿದಿದ್ದು, ಬೇನಾಮಿ ಆಸ್ತಿ ಮಾಡಿದವರಿಗೆ ಮಾರಿ ಹಬ್ಬ ಶುರುವಾಗಿದೆ. ಮತ್ತೊಂದೆಡೆ ರಾಜಕೀಯ ವಾಕ್ಸಮರವೂ ಜೋರಾಗಿದ್ದು, ವಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ್ದಾರೆ.. ಆದ್ರೆ, ಪವರ್ ಫೈಟ್ ನಡುವೆಯೂ ಸಿಎಂ ಪರ ಡಿಸಿಎಂ ಡಿ.ಕೆ.ಶಿವಕುಮಾರ್ ಬ್ಯಾಟ್ ಬೀಸಿದ್ದು, ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಆಟೋ ಕ್ಷೇತ್ರಕ್ಕೆ ಹಸಿರು ಬಲ – ಕೇಂದ್ರದ ಒತ್ತಾಸೆಯಿಂದ ಇವಿ ವಾಹನ ಮಾರಾಟ ಹೆಚ್ಚಳ: ಹೆಚ್‌ಡಿಕೆ

    `ಪಬ್ಲಿಕ್ ಟಿವಿ’ಯಲ್ಲಿ ಬಿಗ್ ಎಕ್ಸ್‌ಕ್ಲೂಸಿವ್‌
    ಮುಡಾದ 143 ಬೇನಾಮಿ ಸೈಟ್‌ಗಳನ್ನು ಇಡಿ ಮುಟ್ಟುಗೋಲು ಹಾಕಿದ್ದು, ಇವು ಪ್ರಭಾವಿಗಳಿಗೆ ಸೇರಿದ್ದ ನಿವೇಶನಗಳಾಗಿವೆ. ಮುಟ್ಟುಗೋಲು ಹಾಕಿಕೊಂಡ 143 ಸೈಟ್‌ಗಳು ಯಾರಿಗೆ ಸೇರಿದ್ದು? ಯರ‍್ಯಾರ ಎಷ್ಟೆಷ್ಟು ಸೈಟ್‌ಗಳು ಮುಟ್ಟುಗೋಲಾಗಿವೆ ಅನ್ನೋ ಎಕ್ಸ್‌ಕ್ಲೂಸಿವ್‌ ಮಾಹಿತಿ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ.

    ಮುಡಾ ಮುಟ್ಟುಗೋಲು ಸೈಟ್ ಲಿಸ್ಟ್:
    * ಅಬ್ದುಲ್ ವಾಜಿದ್- 42 ಸೈಟ್
    * ಮಂಜುನಾಥ್- 33 ಸೈಟ್
    * ರವಿಕುಮಾರ್- 35 ಸೈಟ್
    * ಚಾಮುಂಡೇಶ್ವರಿ ಲೇಔಟ್- 21 ಸೈಟ್
    * ಜಯರಾಮ್- 9 ಸೈಟ್

    ಸೈಟ್ ಮುಟ್ಟುಗೋಲು ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿರುವ ದೂರುದಾರ ಸ್ನೇಹಮಹಿ ಕೃಷ್ಣ, ಮೂಡಾ ಹಗರಣದಲ್ಲಿ ಇಡಿ ಜಪ್ತಿ ಮಾಡಿರುವ ಇವರೆಗಿನ ಆಸ್ತಿ ಕೇವಲ ಸ್ಯಾಂಪಲ್ ಅಷ್ಟೆ. ಮುಂದಿನ ದಿನಗಳಲ್ಲಿ 50:50 ಅನುಪಾತದಲ್ಲಿ ಪಡೆದ ಎಲ್ಲಾ ಸೈಟ್ ಗಳನ್ನು ಇಡಿ ಜಪ್ತಿ ಮಾಡುತ್ತದೆ ಅಂತ ತಿಳಿಸಿದ್ದಾರೆ. ಅಲ್ಲದೇ ಇಡಿ ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬ ಪಡೆದ 14 ಸೈಟ್ ಅಕ್ರಮ ಅನ್ನೋದು ಸ್ಪಷ್ಟವಾಗಿದೆ. ಲೋಕಾಯುಕ್ತ ತನಿಖೆಯಲ್ಲೂ ಸಿಎಂ ಕುಟುಂಬ ಪಡೆದ 14 ಸೈಟ್ ಅಕ್ರಮ ಎಂದೇ ವರದಿ ಬರಬೇಕು. ಲೋಕಾಯುಕ್ತ ತನಿಖೆ ಇದಕ್ಕೆ ವ್ಯತಿರಿಕ್ತವಾದರೆ ನ್ಯಾಯಾಲಯ ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಹೇಳಿದ್ದಾರೆ.

  • MUDA Scam | ಜೆಡಿಎಸ್‌ ಶಾಸಕ ಜಿಟಿಡಿ ವಿರುದ್ಧವೂ ಲೋಕಾಯುಕ್ತಕ್ಕೆ ದೂರು – 2 ಸೈಟು ಕಿಕ್‌ಬ್ಯಾಕ್‌ ಆರೋಪ

    MUDA Scam | ಜೆಡಿಎಸ್‌ ಶಾಸಕ ಜಿಟಿಡಿ ವಿರುದ್ಧವೂ ಲೋಕಾಯುಕ್ತಕ್ಕೆ ದೂರು – 2 ಸೈಟು ಕಿಕ್‌ಬ್ಯಾಕ್‌ ಆರೋಪ

    ಮೈಸೂರು: ಮುಡಾದಲ್ಲಿ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) 50:50 ಸೈಟು ಹಂಚಿಕೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna), ಸಿಎಂ ಬಳಿಕ ಮತ್ತೊಬ್ಬ ರಾಜಕಾರಣಿ ವಿರುದ್ಧ ದೂರು ನೀಡಿದ್ದಾರೆ.

    ಹೌದು. 50:50 ನಿವೇಶನ ಪಡೆಯುವಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ (GT Devegowda) ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿ, ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸರಿಗೆ ದಾಖಲೆ ಸಮೇತ ದೂರು ನೀಡಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯ (Siddaramaiah) ಪ್ರಕರಣಕ್ಕೆ ಸೇರಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮದ್ವೆಯಾಗುವಂತೆ ಒತ್ತಡ – ಲಿವ್‌ ಇನ್‌ ಗೆಳತಿ ಕೊಂದು ಶವವನ್ನ 8 ತಿಂಗಳು ಫ್ರಿಡ್ಜ್‌ನಲ್ಲಿಟ್ಟಿದ್ದ ಸೈಕೋ

    ಕೋರ್ಟ್‌ನಲ್ಲಿ ವ್ಯಾಜ್ಯ ಇದ್ದ ಭೂಮಿಗೆ ಅಕ್ರಮವಾಗಿ 50:50 ಪರಿಹಾರ ಕೊಡಿಸಲಾಗಿದೆ. ಜಿ.ಟಿ ದೇವೇಗೌಡರ ಪ್ರಭಾವ ಬಳಸಿ ಚೌಡಯ್ಯ ಎಂಬವರ ಹೆಸರಿಗೆ 44,736 ಚದರ ಅಡಿ ಜಾಗದ 6 ನಿವೇಶನ ಕೊಡಿಸಿದ್ದಾರೆ. ಅದರಲ್ಲಿ ಕಿಕ್‌ಬ್ಯಾಕ್‌ ರೂಪದಲ್ಲಿ 2 ನಿವೇಶನ ತಮ್ಮ ಕುಟುಂಬಕ್ಕೆ ಬರೆಸಿಕೊಂಡಿದ್ದಾರೆ. ವಿಜಯನಗರ ಬಡಾವಣೆ 4ನೇ ಹಂತದಲ್ಲಿ 2 ನಿವೇಶನ ಪಡೆದು ಅದನ್ನ ತಮ್ಮ ಮಗಳು ಅನ್ನಪೂರ್ಣ ಹಾಗೂ ಅಳಿಯ ವಿಶ್ವೇಶ್ವರಯ್ಯ ಹೆಸರಿಗೆ ಕ್ರಯ ಮಾಡಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್‌ ಹೂವು

    ಇದರಲ್ಲಿ ಜಿ.ಟಿ ದೇವೇಗೌಡ ಅವರ ಪ್ರಭಾವ ಇರುವುದು ದಟ್ಟವಾಗಿದೆ. ಆರ್‌ಟಿಸಿಯಲ್ಲಿ ಸರ್ಕಾರಿ ಭೂಮಿ ಎಂದು ಇದೆ. ಈ ವ್ಯಾಜ್ಯ ಕೋರ್ಟ್‌ನಲ್ಲಿ ಬಾಕಿ ಇದೆ. ಆದಾಗ್ಯೂ ಜಿಟಿಡಿ ತಮ್ಮ ಕುಟುಂಬಕ್ಕೆ 50:50 ನಿವೇಶನ ಬರೆಸಿಕೊಂಡಿರುವ ಅನುಮಾನವಿದೆ. ಮುಡಾ ವ್ಯಾಪ್ತಿಗೆ ಭೂಮಿ ಬರದಿದ್ದರೂ, ದೇವನೂರು ಬಡಾವಣೆಗೆ ಪರಿಹಾರ ಕೊಟ್ಟಂತೆ ಮಾಡಲಾಗಿದೆ. ಇದೆಲ್ಲದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುವಂತೆ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಇಂದಿನಿಂದ ಮೂರು ದಿನ ಹಲವು ಕಾರ್ಯಕ್ರಮ

  • ಸಿಎಂ ಪತ್ನಿಗೆ ಮತ್ತೊಂದು ಕಾನೂನು ಸಂಕಷ್ಟ – ತವರಿನಿಂದ ಉಡುಗೊರೆಯಾಗಿ ಪಡೆದಿದ್ದ ಭೂಮಿ ಮೇಲೆ ಕೇಸ್‌

    ಸಿಎಂ ಪತ್ನಿಗೆ ಮತ್ತೊಂದು ಕಾನೂನು ಸಂಕಷ್ಟ – ತವರಿನಿಂದ ಉಡುಗೊರೆಯಾಗಿ ಪಡೆದಿದ್ದ ಭೂಮಿ ಮೇಲೆ ಕೇಸ್‌

    ಮೈಸೂರು: ಸಿಎಂ ಪತ್ನಿ ಪಾರ್ವತಮ್ಮ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಸಿಎಂ ಪತ್ನಿ ಹಾಗೂ ಸಿಎಂ ಭಾಮೈದ ಸೇರಿ ಒಟ್ಟು 10 ಜನರ ಮೇಲೆ ಈಗ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ (Mysuru Civil Court) ಭೂ ವ್ಯಾಜ್ಯ ಸಂಬಂಧ ಕೇಸ್ ದಾಖಲಾಗಿದೆ.

    ಸಿದ್ದರಾಮಯ್ಯ (Siddaramaiah) ಅವರ ಪತ್ನಿ ಪಾರ್ವತಮ್ಮಗೆ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ತವರಿನ ಉಡುಗೊರೆ ರೀತಿ ಕೊಟ್ಟ ಕೆಸರೆ ಭಾಗದ ಮೂರುವರೆ ಎಕರೆ ಜಮೀನಿಂದ ಈಗ ಕಾನೂನಿನ ದೊಡ್ಡ ಸಂಕಷ್ಟ ಸೃಷ್ಟಿಯಾಗಿದೆ. ಕಳೆದ 4 ತಿಂಗಳಿಂದ ರಾಜ್ಯ ರಾಜಕೀಯದಲ್ಲಿ ಇದೇ ಜಮೀನು ಹಾಗೂ ಜಮೀನಿನಿಂದ ಸಿಕ್ಕ ಪರಿಹಾರ ರೂಪದ 14 ಸೈಟ್‌ಗಳು ಬಿರುಗಾಳಿ ಎಬ್ಬಿಸಿವೆ. ಹಲವು ತನಿಖೆಗಳು ಇದರಿಂದ ನಡೆಯುತ್ತಿವೆ. ಈಗ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು ಪ್ರಕರಣದ ಮೂಲ ಭೂಮಿಯ ಬಗ್ಗೆಯೆ ಈಗ ವಿವಾದ ಹುಟ್ಟಿಕೊಂಡಿದೆ.

    ಸಿಎಂ ಭಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ದೇವರಾಜ್ ಕೆಸರೆ ಭಾಗದಲ್ಲಿ ಮೂರುವರೆ ಎಕರೆ ಜಮೀನು ಮಾರಿದ್ದರು. ಈಗ ಆ ಜಮೀನು ದೇವರಾಜ್‌ ಅವರದ್ದಲ್ಲ. ಆ ಜಮೀನು ತಮ್ಮದ್ದು ಎಂದು ದೇವರಾಜ್ ಸಹೋದರ ಮೈಲಾರಯ್ಯನ ಮಗಳು ಜಮುನಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಇದನ್ನೂ ಓದಿ: ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್‌-ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆ

    ನನ್ನ ಚಿಕ್ಕಪ್ಪ ದೇವರಾಜ್ ನಮಗೆ ಮೋಸ ಮಾಡಿದ್ದಾರೆ. ನನ್ನ ತಂದೆಯ ಪಾಲಿನ ಜಾಗವನ್ನು ಮೋಸದಿಂದ ಬರೆಸಿಕೊಂಡು ಈಗ ಬೇರೆಯವರಿಗೆ ಮಾರಿದ್ದಾರೆ. ನಮಗೆ ನ್ಯಾಯ ಬೇಕು ಹೀಗಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ. ಖಾತೆ ಮಾಡಿಸಿಕೊಡುವ ಹೆಸರಿನಲ್ಲಿ ಸಹಿ ಪಡೆದು ಮೋಸ ಮಾಡಿದ್ದಾರೆ. ನಮಗೆ ಈ ಜಮೀನು ವಿಚಾರ ಮಾಧ್ಯಮದ ಮೂಲಕ ಗೊತ್ತಾಗಿದೆ. ಹೀಗಾಗಿ ಈಗ ಕೇಸ್ ಹಾಕಿದ್ದೇವೆ ಎಂದು ಮೈಲಾರಯ್ಯನ ಮಗಳು ಜಮುನಾ ಹೇಳಿದ್ದಾರೆ. ಇದನ್ನೂ ಓದಿ: ಟ್ರಕ್‌ಗೆ ಸ್ಕಾರ್‌ಪಿಯೊ ಡಿಕ್ಕಿ – ಭೀಕರ ಅಪಘಾತಕ್ಕೆ ಐವರು ವೈದ್ಯರ ದುರ್ಮರಣ

    ಈ ಬಗ್ಗೆ ಜಮುನಾ ಸಹೋದರ ಮಂಜುನಾಥ್ ಸ್ವಾಮಿ ಕೂಡ ಪ್ರತಿಕ್ರಿಯಿಸಿದ್ದು, ಚಿಕ್ಕಪ್ಪ ದೇವರಾಜ್ ನಮಗೆ ಮೋಸ ಮಾಡಿ ನಮ್ಮ ಜಮೀನನ್ನು ತಮ್ಮದ್ದು ಎಂದು ಮಾರಾಟ ಮಾಡಿದ್ದಾರೆ. ಹೀಗಾಗಿ ನಾವು ತಮ್ಮ ಚಿಕ್ಕಪ್ಪ ದೇವರಾಜ್ ಸೇರಿದಂತೆ ಅವರು ಜಮೀನು ಮಾರಾಟ ಮಾಡಿರುವ ಸಿಎಂ ಭಾಮೈದ ಮಲ್ಲಿಕಾರ್ಜುನ ಸ್ವಾಮಿ, ಸಿಎಂ ಪತ್ನಿ ಪಾರ್ವತಮ್ಮ ಸಿದ್ದರಾಮಯ್ಯ ಸೇರಿದಂತೆ ಎಲ್ಲರ ಮೇಲೂ ಕೇಸ್ ಹಾಕಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನವಜಾತ ಶಿಶು ಕದ್ದು 50,000 ರೂ.ಗೆ ಮಾರಾಟ – ಮೂವರು ಖತರ್ನಾಕ್‌ ಕಳ್ಳಿಯರು ಅರೆಸ್ಟ್‌

    ಖಾತೆ ಮಾಡಿಸಿ ಕೊಡುತ್ತೇನೆ ಎಂದು ಹೇಳಿ ನನ್ನ ಚಿಕ್ಕಪ್ಪ ಮೂವತ್ತು ವರ್ಷಗಳ ಹಿಂದೆ ನನ್ನ ಹಾಗೂ ನನ್ನ ತಾಯಿ ಬಳಿ ಸಹಿ ಮಾಡಿಸಿಕೊಂಡಿದ್ದರು. ಆ ಜಮೀನು ನನ್ನ ತಂದೆಗೆ ಭಾಗವಾಗಿ ಬಂದ ಪಿತ್ರಾರ್ಜಿತ ಆಸ್ತಿ. ಆ ಆಸ್ತಿಯನ್ನೆ ಮೋಸದಿಂದ ನನ್ನ ಚಿಕ್ಕಪ್ಪ ಪಡೆದು ಅದನ್ನು ಸಿಎಂ ಕುಟುಂಬಕ್ಕೆ ಮಾರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.

  • ಮುಡಾ ಕೇಸಲ್ಲಿ ಸಿಎಂ ಬಾಮೈದನಿಗೆ ಇಡಿ ವಿಚಾರಣೆ – ಸತತ 4 ಗಂಟೆ ಡ್ರಿಲ್

    ಮುಡಾ ಕೇಸಲ್ಲಿ ಸಿಎಂ ಬಾಮೈದನಿಗೆ ಇಡಿ ವಿಚಾರಣೆ – ಸತತ 4 ಗಂಟೆ ಡ್ರಿಲ್

    ಮೈಸೂರು/ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ (Chief Minister) ಬಾಮೈದ ಮಲ್ಲಿಕಾರ್ಜುನಸ್ವಾಮಿ ಅವರ‌ನ್ನ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

    ಸೋಮವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಇಡಿ ಮುಂದೆ ಹಾಜರಾದ ಮಲ್ಲಿಕಾರ್ಜುನ ಸ್ವಾಮಿ (Mallikarjunaswamy) ಅವರು ಸತತ ನಾಲ್ಕು ಗಂಟೆ ವಿಚಾರಣೆ ಎದುರಿಸಿದರು. ಸಂಜೆ ವೇಳೆಗೆ ವಿಚಾರಣೆ ಮುಗಿದ ಬಳಿಕ ಮನೆಗೆ ತೆರಳಿದರು. ಎ-4 ಹಾಗೂ ಭೂಮಾಲೀಕ ದೇವರಾಜು ಬಳಿ ಜಮೀನು ಪಡೆದು ಸಿಎಂ ಪತ್ನಿಗೆ ಎ-3 ಆರೋಪಿ ಮಲ್ಲಿಕಾರ್ಜುನಸ್ವಾಮಿ ಕುಂಕುಮ ರೂಪದಲ್ಲಿ ಭೂಮಿ ನೀಡಿದ್ದರು. ಮುಡಾ ಪ್ರಕರಣದಲ್ಲಿ ಇಡಿ ವಿಚಾರಣೆ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಿಎಂ ಪತ್ನಿ ಪಾರ್ವತಿ ಹಾಗೂ ಸಿದ್ದರಾಮಯ್ಯ (Siddaramaiah) ಅವರಿಗೂ ನೋಟಿಸ್‌ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ದೆಹಲಿ | 10, 12ನೇ ತರಗತಿಯವರಿಗೆ ಬೇರೆ ಬಗೆಯ ಶ್ವಾಸಕೋಶಗಳಿಲ್ಲ – ತರಗತಿ ಬಂದ್‌ಗೆ ಸುಪ್ರೀಂ ನಿರ್ದೇಶನ

    ಮುಡಾ ತನಿಖೆಯ ಸಂಬಂಧ ಈವರೆಗೆ ಯಾರ‍್ಯಾರಿಗೆ ಇಡಿ ನೋಟಿಸ್‌?

    * ಸೆಪ್ಟಂಬರ್ 7 ರಂದು ದೂರುದಾರ ಸ್ನೇಹಮಯಿ ಕೃಷ್ಣ ವಿಚಾರಣೆ
    * ಅಕ್ಟೋಬರ್ 18 ರಂದು ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ
    * ಅಕ್ಟೋಬರ್ 18 ರಂದು ಅಧಿಕಾರಿಗಳನ್ನ ವಿಚಾರಣೆ ಮಾಡಿದ್ದ ಇ.ಡಿ
    * ಅಕ್ಟೋಬರ್ 19 ರಂದು ಭೂಮಿ ಮಾಲೀಕ ದೇವರಾಜು ವಿಚಾರಣೆ
    * ಅಕ್ಟೋಬರ್ 27 ರಂದು ದೂರುದಾರ ಗಂಗರಾಜು ವಿಚಾರಣೆ
    * ಅಕ್ಟೋಬರ್ 28 ರಂದು ಬಿಲ್ಡರ್ ಮಂಜುನಾಥ್ ಮನೆಯಲ್ಲಿ ಶೋಧ
    * ಅಕ್ಟೋಬರ್ 28 ರಂದು ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಇಡಿ ಶಾಕ್
    * ನವೆಂಬರ್ 12 ರಂದು ಸಿಎಂ ಖಾಸಗಿ ಪಿಎ ಸಿ.ಟಿ ಕುಮಾರ್‌ಗೆ ವಿಚಾರಣೆ
    * ನವೆಂಬರ್ 13 ರಂದು ರಾಯಚೂರು ಸಂಸದ ಕುಮಾರ್ ನಾಯಕ್ ವಿಚಾರಣೆ
    * ನವೆಂಬರ್ 14 ರಂದು ಮುಡಾ ಮಾಜಿ ಅಧ್ಯಕ್ಷ ಮರಿಗೌಡ ವಿಚಾರಣೆ
    * ನವೆಂಬರ್ 14 ರಂದು ಮೂಡಾ ಮಾಜಿ ಅಧ್ಯಕ್ಷ ಮಾಳಿಗೆ ಶಂಕರ್, ಮರೀಗೌಡ ಆಪ್ತ
    ಶಿವಣ್ಣ ವಿಚಾರಣೆ
    * ನವೆಂಬರ್‌ 18ರಂದು ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ವಿಚಾರಣೆ

    ಇನ್ನೂ, ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ-ಕೇಂದ್ರ ಸಚಿವ ಸೋಮಣ್ಣ ಮುಖಾಮುಖಿ ಆಗಿದ್ರು. ಸಿಎಂ ಆಗಮಿಸುವಾಗ ಸೋಮಣ್ಣ ಹೊರಡ್ತಿದ್ರು. ಈ ವೇಳೆ, ಸಿಎಂ ಬಳಿ ಮುಡಾ ಕೇಸ್ ಪ್ರಸ್ತಾಪಿಸಿದ ಸೋಮಣ್ಣ, ಮುಂಚೆಯೇ ಸೈಟ್ ವಾಪಸ್ ಮಾಡಿದ್ರೆ ಇಷ್ಟೆಲ್ಲಾ ರಾದ್ಧಾಂತ ಆಗ್ತಿರಲಿಲ್ಲ ಎಂದು ಬೇಸರ ಹೊರಹಾಕಿದ್ರು. ಅದಕ್ಕೆ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಿಎಂ ಸಮರ್ಥಿಸಿಕೊಂಡ್ರು. ಹಾಗಿದ್ರೆ ಸದನದಲ್ಲೇಕೆ 65 ಕೋಟಿ ಸೈಟ್ ಅಂತಾ ಹೇಳಿದ್ದು ಎಂದು ಸೋಮಣ್ಣ ಕೇಳಿದ್ರು.. ಅದಕ್ಕೆ ಅದು ಹಾಗಲ್ಲ.. ನಾನು ಹೇಳಿದ್ದು ಬೇರೆ ಎಂದು ಸಿಎಂ ಸಮಜಾಯಿಷಿ ಕೊಟ್ರು.. ದೇವರು, ನಂಬಿಕೆಗಳ ವಿಚಾರಗಳು ಪ್ರಸ್ತಾಪ ಆದ್ವು. ನಾನು ದೇವರಲ್ಲಿ ನಂಬಿಕೆ ಇಟ್ಟಿಲ್ಲ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿಕೊಂಡ್ರು.

    ಈ ಮಧ್ಯೆ, ಜಿಟಿ ದೇವೇಗೌಡ ಸಂಬಂಧಿ ಮಹೇಂದ್ರಗೆ ಅಕ್ರಮವಾಗಿ 50:50 ಸೈಟ್ ನೀಡಿದ ಪ್ರಕರಣ ಸಂಬಂಧ ಇನ್ನಷ್ಟು ವಿಚಾರ ಬಯಲಾಗಿದೆ. 2020ರಲ್ಲಿ ಮಹೇಂದ್ರ ಜಮೀನು ಖರೀದಿಸಿದ್ರು. ಇದಾದ ಏಳೇ ತಿಂಗಳಿಗೆ ಮಹೇಂದ್ರಗೆ 50:50 ಅನುಪಾತದಲ್ಲಿ 19 ಸೈಟ್ ಹಂಚಿಕೆ ಆಗಿದ್ವು. ಮುಡಾ ವಶಪಡಿಸಿಕೊಂಡ ದೇವನೂರು ಭೂಮಿಯಲ್ಲಿ ಲೇಔಟ್ ಅಭಿವೃದ್ಧಿ ಆಗಿ, ಮನೆ ಕಟ್ಟಿದ ಸ್ಥಳದಲ್ಲಿನ ಜಮೀನನ್ನು ಮಹೇಂದ್ರ ಖರೀದಿಸಿದ್ದಾದ್ರೂ ಹೇಗೆ ಎಂಬುದೇ ಈಗ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದನ್ನೂ ಓದಿ: ಅರ್ಹತೆ ಇಲ್ಲದವರಿಗೆ ಬಿಪಿಎಲ್ ಕಾರ್ಡ್ ಸಿಕ್ತಿದೆ, ಸರ್ಕಾರ ಪರಿಷ್ಕರಣೆ ಮಾಡಬೇಕು: ನಟ ಚೇತನ್

  • ಕಡ್ಲೇಪುರಿಯಂತೆ ಮುಡಾ ಸೈಟ್ ಹಂಚಿಕೆ – 1962ರಲ್ಲಿ ವಶಪಡಿಸಿಕೊಂಡ ಭೂಮಿಗೆ 2023ರಲ್ಲಿ ಪರಿಹಾರ!

    ಕಡ್ಲೇಪುರಿಯಂತೆ ಮುಡಾ ಸೈಟ್ ಹಂಚಿಕೆ – 1962ರಲ್ಲಿ ವಶಪಡಿಸಿಕೊಂಡ ಭೂಮಿಗೆ 2023ರಲ್ಲಿ ಪರಿಹಾರ!

    ಮೈಸೂರು: ಮುಡಾ 50:50 ಸೈಟು ಹಂಚಿಕೆ ಹಗರಣ (50:50 Site Scam) ಮತ್ತೊಂದು ತಿರುವು, ಸಂಚಲನ ಸೃಷ್ಟಿಸಿದೆ. 50:50 ಅನುಪಾತದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಹೊತ್ತಲ್ಲೇ 50:50 ಅನುಪಾತದ ಫಲಾನುಭವಿಗಳ ಮೊದಲ ಲಿಸ್ಟ್ `ಪಬ್ಲಿಕ್ ಟಿವಿ’ಗೆ (Public TV) ಲಭ್ಯವಾಗಿದೆ.

    ಈ ಪಟ್ಟಿಯಲ್ಲಿ ಇರುವ ಬೇರೆಯವರ ಹೆಸರು ಇದುವರೆಗೆ ಬಹಿರಂಗ ಆಗಿರಲಿಲ್ಲ. ಈಗ ಅದರ ಮೊದಲ ಕಂತು ಬಹಿರಂಗವಾಗಿದ್ದು 300 ಜನರಿಗೆ ಸೈಟ್ ಸಿಕ್ಕಿರುವ ಲಿಸ್ಟ್ ಬೆಳಕಿಗೆ ಬಂದಿವೆ. ಪ್ರಾಧಿಕಾರದಲ್ಲಿ ಸೈಟ್‌ಗಳನ್ನು ಕಡ್ಲೇಪುರಿ ಥರ ಹಂಚಲಾಗಿದೆ. 50:50 ಅನುಪಾತದ ಸೈಟ್ ಹಂಚುವಲ್ಲಿ ಶರವೇಗವೂ ಕೂಡ ಇರೋದು ಗೊತ್ತಾಗಿದೆ. ಒಬ್ಬ ವ್ಯಕ್ತಿಗೆ ಮುಡಾದಿಂದ (MUDA) ಪರಿಹಾರ ರೂಪದಲ್ಲಿ ಹತ್ತಲ್ಲ, ಹದಿನೈದಲ್ಲ ಬರೋಬ್ಬರಿ 25 ಸೈಟ್ ಸಿಕ್ಕಿವೆ. ಇದನ್ನೂ ಓದಿ: ನೀಟ್‌ ಆಕಾಂಕ್ಷಿಗಳ ಮೇಲೆ ವಿಜ್ಞಾನ ಶಿಕ್ಷಕರಿಂದ ತಿಂಗಳಾನುಗಟ್ಟಲೆ ರೇಪ್‌, ಬ್ಲ್ಯಾಕ್‌ಮೇಲ್‌ – ಕಾಮುಕರು ಅರೆಸ್ಟ್‌

    ಅಬ್ದುಲ್ ವಾಜಿದ್‌ಗೆ 26 ಸೈಟ್
    ವಾಜಿದ್ ವಂಶಸ್ಥರ ಜಮೀನನ್ನು 1962ರಲ್ಲಿ ಸ್ವಾಧೀನ ಪಡಿಸಿ ಕೊಳ್ಳಲಾಗಿತ್ತು. 61 ವರ್ಷಗಳ ಬಳಿಕ 2022ರ ಡಿಸೆಂಬರ್‌ನಲ್ಲಿ ಮುಡಾಗೆ ಅರ್ಜಿ ಹಾಕಲಾಗಿದೆ. ಮುಡಾ ಆಯುಕ್ತರು 2023ರ ಫೆಬ್ರವರಿಯಲ್ಲಿ ಅಂದರೆ ಅರ್ಜಿ ಕೊಟ್ಟ ಎರಡೇ ತಿಂಗಳಿಗೆ 25 ಸೈಟ್ ಮಂಜೂರು ಮಾಡಿದ್ದಾರೆ. ಸರ್ಕಾರದ ಕಾನೂನು ಹೇಳುವಂತೆ, 2009ರ ಹಿಂದಿನ ಬಡಾವಣೆಗಳಿಗೆ 50:50 ಅನುಪಾತ ಅನ್ವಯವಾಗಲ್ಲ. ಆದರೆ, ಇದು 1962ರ ಕೇಸ್ ಎಂಬುದು ದಾಖಲೆಯಲ್ಲಿದೆ. ಇದನ್ನೂ ಓದಿ: ನಾಯಿ ಮರಿಯ ಶಬ್ದ ಕೇಳಲಾಗದೇ ಮೀರತ್‌ನಲ್ಲಿ 5 ನಾಯಿ ಮರಿಗಳಿಗೆ ಬೆಂಕಿ ಹಚ್ಚಿದ ಮಹಿಳೆಯರು: ಕೇಸ್ ದಾಖಲು

    ಯರ‍್ಯಾರಿಗೆ ಎಷ್ಟೆಷ್ಟು ಮುಡಾ ಸೈಟ್?
    ಸೈಯದ್ ಯೂಸಫ್: 21 ಸೈಟ್
    ಮಲ್ಲಪ್ಪ: 19 ಸೈಟ್
    ಎಸ್.ವಿ.ವೆಂಕಟಪ್ಪ: 17 ಸೈಟ್
    ದೇವಮ್ಮ: 16 ಸೈಟ್
    ಮಹದೇವು & ಗೀತಾ: 12 ಸೈಟ್
    ಸುರೇಶಮ್ಮ: 11 ಸೈಟ್
    ವೈರಮುಡಿ: 10 ಸೈಟ್
    ಚೌಡಯ್ಯ: 7 ಸೈಟ್

    ಇನ್ನು, ಕಡತಗಳು ಮಿಸ್ಸಾಗಿರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದಾರೆ. ಜೊತೆಗೆ, ಮನೆ ನಿರ್ಮಿಸಲು ನಕ್ಷೆಗೆ ಅನುಮತಿ ಕೊಡುವುದನ್ನು ನಿಲ್ಲಿಸಬೇಕು. ಕಾಮಗಾರಿ ಮಾಡುತ್ತಿರುವವರಿಗೆ ತಡೆಯಾಜ್ಞೆ ನೀಡಬೇಕು ಅಂತ ಆಗ್ರಹಿಸಿದ್ದಾರೆ. ಆಯ್ದ ಸೈಟ್‌ಗಳ ಕಡತಗಳೇ ಮಾಯವಾಗಿರೋ ವಿಚಾರವನ್ನು ಲೋಕಾಯುಕ್ತ ನೋಡಿಕೊಳ್ಳುತ್ತೆ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಈ ಮಧ್ಯೆ, ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಇಡಿ ಡ್ರಿಲ್ ಮಾಡಿದೆ.

  • 50:50 ಅನುಪಾತದಲ್ಲಿ ಸೈಟ್ ಪಡೆದವರಿಗೆ ಶಾಕ್ – ಎಲ್ಲಾ ನಿವೇಶನಗಳ ಜಪ್ತಿಗೆ ಮುಡಾ ಸಭೆಯಲ್ಲಿ ನಿರ್ಣಯ

    50:50 ಅನುಪಾತದಲ್ಲಿ ಸೈಟ್ ಪಡೆದವರಿಗೆ ಶಾಕ್ – ಎಲ್ಲಾ ನಿವೇಶನಗಳ ಜಪ್ತಿಗೆ ಮುಡಾ ಸಭೆಯಲ್ಲಿ ನಿರ್ಣಯ

    ಮೈಸೂರು: ಮುಡಾ ಹಗರಣದ (MUDA Scam) ಗೊಂದಲ ನಡುವೆಯೆ ಗುರುವಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಸಭೆ ನಡೆಯಿತು. 10 ತಿಂಗಳ ಬಳಿಕ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

    50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲಾ ಸೈಟುಗಳನ್ನು (50:50 Site) ಜಪ್ತಿ ಮಾಡಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. 50:50 ಅನುಪಾತದಲ್ಲಿ ಅಕ್ರಮವಾಗಿ ಹಂಚಿಕೆಯಾಗಿರುವ ಸೈಟುಗಳನ್ನು ಜಪ್ತಿ ಮಾಡಲು ಸರ್ವ ಸದಸ್ಯರು ಒಮ್ಮದ ಅಭಿಪ್ರಾಯ ಸೂಚಿಸಿದರು. ನ್ಯಾಯಮೂರ್ತಿ ಪಿ.ಎನ್ ದೇಸಾಯಿ ವರದಿ ನಂತರ ಜಪ್ತಿಯ ವರದಿ ಅಂಗಕರಿಸಲು ತೀರ್ಮಾನಿಸಲಾಯಿತು. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಡಿ.ರೂಪಾಗೆ ಹಿನ್ನಡೆ

    ಸಭೆಯಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಹರೀಶ್ ಗೌಡ, ಮಧು ಮಾದೇಗೌಡ, ರಮೇಶ್ ಬಂಡಿಸಿದ್ದೇಗೌಡ, ಶ್ರೀವತ್ಸ, ಎಚ್. ವಿಶ್ವನಾಥ್ ಸೇರಿದಂತೆ ಆಹ್ವಾನಿತ ಶಾಸಕರು ಸಭೆಯಲ್ಲಿ ಹಾಜರಿದ್ದರು. ಇದನ್ನೂ ಓದಿ: ಜೈಶಂಕರ್‌ ಸುದ್ದಿಗೋಷ್ಠಿ ಪ್ರಸಾರ – ಕೆನಡಾದಲ್ಲಿ ಆಸ್ಟ್ರೇಲಿಯಾ ಟುಡೇ ಬ್ಯಾನ್‌

    ಸಭೆಗೆ ಹೋಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ (Congress) ಶಾಸಕ ಹರೀಶ್ ಗೌಡ, 2020 ರಿಂದ 2024ರ ವರೆಗೂ ಕೊಟ್ಟಿರಿವ 50:50 ಅನುಪಾತದ ಎಲ್ಲಾ ಸೈಟ್‌ಗಳನ್ನ ಸರ್ಕಾರ ತಕ್ಷಣವೇ ಜಪ್ತಿ ಮಾಡಬೇಕು. ದೇಸಾಯಿ ಆಯೋಗದ ತನಿಖಾ ವರದಿ ಬಂದಮೇಲೆ ನ್ಯಾಯಸಮ್ಮತ ಸೈಟ್‌ಗಳನ್ನು ವಾಪಸ್ ಕೊಡಲಿ. ಅಕ್ರಮ ಸೈಟ್‌ಗಳನ್ನ ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳಲಿ. ನಾನು ಒಂದು ಇಂಚೂ ಜಾಗವನ್ನು 50:50 ಅನುಪಾತದಲ್ಲಿ ಪಡೆದಿಲ್ಲ. ಒಂದು ಇಂಚು ಜಾಗಕ್ಕೂ ನಾನು ಶಿಫಾರಸ್ಸು ಮಾಡಿಲ್ಲ. 50:50 ಅನುಪಾತದಲ್ಲಿ ನನ್ನದು ಯಾವುದಾದರೂ ಸೈಟ್ ಇದ್ದರೆ ಸರ್ಕಾರ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಿ ಎಂದರು. ಇದನ್ನೂ ಓದಿ: ಮೋದಿ ಸರ್ಕಾರದಿಂದ ರಾಜ್ಯಗಳಿಗೆ ಆಗುತ್ತಿರುವ ಆರ್ಥಿಕ ಅನ್ಯಾಯ ನಿಲ್ಲಬೇಕು: ಎಲ್.ಹನುಮಂತಯ್ಯ

    ಶಾಸಕ ಜಿ.ಟಿ. ದೇವೇಗೌಡ ಮಾತ್ರ 50:50 ಅನುಪಾತ ರದ್ದು ಮಾಡಿ ಎಂದು ನಾನು ಹೇಳಲ್ಲ ಎಂದು ಅಚ್ಚರಿಯ ಹೇಳಿಕೆ ಕೊಟ್ಟರು. 50:50 ಅನುಪಾತದಲ್ಲಿ ಆಗಿರುವ ಅಕ್ರಮ ಸೈಟ್ ಗಳನ್ನ ರದ್ದು ಮಾಡಬೇಕು. ಸರ್ಕಾರ ಅಕ್ರಮವಾಗಿ ಪಡೆದಿರೋ ನಿವೇಶನಗಳನ್ನ ವಾಪಾಸ್ ಪಡೆಯಲಿ. ಆದರೆ ಪ್ರಾಧಿಕಾರದ ದೃಷ್ಟಿಯಿಂದ 50:50 ಅನುಪಾತ ಬೇಕು ಎಂದರು. ನಿಯಮಾನುಸಾರ 50:50 ಅನುಪಾದಡಿ ಅರ್ಹರಿಗೆ ನಿವೇಶನ ನೀಡಲಿ. ಕಾನೂನು ಬಾಹಿರವಾಗಿ ನೀಡಿದ್ದರೆ ಅದನ್ನ ವಾಪಸ್ ಪಡೆದುಕೊಳ್ಳಲಿ ಎಂದು ಹೇಳಿದರು.

  • 50:50 ಅನುಪಾತದಲ್ಲಿ ಹಂಚಿಕೆಯಾಗಿರೊ 1,400 ನಿವೇಶನಗಳನ್ನ ಜಪ್ತಿ ಮಾಡಿ; ಸಿಎಂಗೆ ಬಿಜೆಪಿ ಶಾಸಕ ಆಗ್ರಹ

    50:50 ಅನುಪಾತದಲ್ಲಿ ಹಂಚಿಕೆಯಾಗಿರೊ 1,400 ನಿವೇಶನಗಳನ್ನ ಜಪ್ತಿ ಮಾಡಿ; ಸಿಎಂಗೆ ಬಿಜೆಪಿ ಶಾಸಕ ಆಗ್ರಹ

    ಮೈಸೂರು: 2020 ರಿಂದ 2024ರ ವರೆಗೆ 50:50 ಅನುಪಾತದಲ್ಲಿ ಹಂಚಿಕೆ ಮಾಡಿರುವ 1,400ಕ್ಕೂ ಹೆಚ್ಚು ನಿವೇಶನಗಳನ್ನ (MUDA Sites) ಜಪ್ತಿ ಮಾಡುವಂತೆ ಸಿಎಂಗೆ ಮನವಿ ಮಾಡಿರುವುದಾಗಿ ಬಿಜೆಪಿ ಶಾಸಕ ಟಿ.ಎಸ್‌ ಶ್ರೀವತ್ಸ (TS Srivatsa) ತಿಳಿಸಿದ್ದಾರೆ.

    ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2020 ರಿಂದ 2024ರ ವರೆಗೆ 50:50 ಅನುಪಾತದಲ್ಲಿ ಕೊಟ್ಟಿರುವ ಎಲ್ಲಾ ನಿವೇಶನಗಳನ್ನ ಜಪ್ತಿ ಮಾಡುವಂತೆ ಸಿಎಂಗೆ ಮನವಿ ಸಲ್ಲಿಸಿದ್ದೇನೆ. ಜೊತೆಗೆ 50:50 ಅನುಪಾತದಲ್ಲಿ ತೆಗೆದುಕೊಂಡಿರುವ ಸೈಟು ಪರಬಾರೆ ಆಗುತ್ತಿದೆ ಎಂಬ ಮಾಹಿತಿ ಇದೆ. ಇದಕ್ಕೆ ಕಡಿವಾಣ ಹಾಕಲು ಸಬ್‌ರಿಜಿಸ್ಟರ್‌ ಕಚೇರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

    ಅಲ್ಲದೇ ಮುಡಾ ಪ್ರಕರಣದಲ್ಲಿ ತಾಂತ್ರಿಕ ಸಮಿತಿ ಕೊಟ್ಟಿರುವ ವರದಿ ಬಗ್ಗೆ ತನಿಖೆಯಾಗಿಲ್ಲ. ಮರೀಗೌಡ ಅವರೂ ರಾಜೀನಾಮೆ ಕೊಟ್ಟಿದ್ದಾರೆ. ಇಬ್ಬರು ಮುಡಾ ಆಯುಕ್ತರು ಬಾಕಿಯಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದೇನೆ. ಅದಕ್ಕೆ ಸಿಎಂ ತನಿಖೆ ನಡೆಯುತ್ತಿದೆಯಲ್ಲಾ ನೋಡೋಣ ಎಂದು ಪ್ರತಿಕ್ರಿಯಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಸುಳ್ಳು ಆಪಾದನೆ ಮಾಡ್ತಿದ್ದಾರೆ, ನಾವು ಸಿಎಂ ಜೊತೆ ನಿಲ್ಲಬೇಕು: ಕೆಎನ್ ರಾಜಣ್ಣ

    ಮುಡಾದಲ್ಲಿ ಸುಮಾರು 1,400ಕ್ಕೂ ಹೆಚ್ಚು ನಿವೇಶನಗಳು 50:50 ಅನುಪಾತದಲ್ಲಿ ಹಂಚಿಕೆ ಆಗಿವೆ. ಅವೆಲ್ಲವನ್ನೂ ಜಪ್ತಿ ಮಾಡಿ ತನಿಖೆ ನಡೆಸಬೇಕು. ಅರ್ಹರಿದ್ದರೆ ಅವರಿಗೆ ಸೈಟು ನೀಡಲಿ, ಉಳಿದವನ್ನು ಜಪ್ತಿ ಮಾಡಲಿ. ಜೊತೆಗೆ ಕೆಲವರು ಸೈಟು ನಮ್ಮ ಬಳಿಯಿದ್ದರೆ ತೊಂದರೆ ಅಂತ ಬೇರೆಯವರಿಗೆ ಮಾರಾಟ ಮಾಡೋದಕ್ಕೆ ಮುಂದಾಗಿದ್ದಾರೆ. ಅದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಚನ್ನಪಟ್ಟಣ ಕ್ಷೇತ್ರವನ್ನು ಯೋಗೇಶ್ವರ್‌ಗೆ ಬಿಟ್ಟುಕೊಡಬೇಕು: ಸಿಪಿವೈ ಪರ ಮುನಿಸ್ವಾಮಿ ಬ್ಯಾಟಿಂಗ್

    ಮುಡಾದಲ್ಲಿ ಹಂಚಿಕೆ ಆಗಿರುವ 4,875 ಸೈಟುಗಳ ಬಗ್ಗೆಯೂ ಹೋರಾಟ ಮಾಡುತ್ತಿದ್ದೇವೆ. ಅದರಲ್ಲಿ 14 ಸೈಟು ವಾಪಸ್‌ ಬಂದಿದೆ. ಇದರೊಂದಿಗೆ ಬದಲಿ ನಿವೇಶನಗಳಲ್ಲೂ ವಂಚನೆ ಆಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ತಳ ಸಮುದಾಯದವರು ಸಂಸ್ಕೃತ ಕಲಿತು ಕಾವ್ಯ ರಚಿಸಿದರೆ ಅಂಥವರ ಬಗ್ಗೆ ಕಥೆ ಕಟ್ಟುತ್ತಾರೆ: ಸಿದ್ದರಾಮಯ್ಯ

  • ಸಿಎಂ ಪತ್ನಿ ಪತ್ರದ ಬೆನ್ನಲ್ಲೇ 14 ಸೈಟ್‌ಗಳ ಸೇಲ್ ಡೀಡ್ ರದ್ದು; ಅಧಿಕಾರಿಗಳಿಂದ ಭೂಮಿ ಪರಿಶೀಲನೆ

    ಸಿಎಂ ಪತ್ನಿ ಪತ್ರದ ಬೆನ್ನಲ್ಲೇ 14 ಸೈಟ್‌ಗಳ ಸೇಲ್ ಡೀಡ್ ರದ್ದು; ಅಧಿಕಾರಿಗಳಿಂದ ಭೂಮಿ ಪರಿಶೀಲನೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಇಡಿ ECIR ದಾಖಲಿಸುತ್ತಿದ್ದಂತೆ ಮುಡಾ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹತ್ವದ ಬೆಳವಣಿಗೆಯಲ್ಲಿ ಸಿಎಂ ಪತ್ನಿ ಪಾರ್ವತಿ 14 ಸೈಟ್‌ಗಳನ್ನು ವಾಪಸ್ ಮಾಡಿ ಮುಡಾಗೆ ಪತ್ರ ಬರೆದಿದ್ದಾರೆ.

    40 ವರ್ಷದ ರಾಜಕಾರಣದಲ್ಲಿ ಸಣ್ಣ ಕಳಂಕ ಹೊಂದಿಲ್ಲದ ನನ್ನ ಪತಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ, ನನ್ನ ಪಾಲಿಗೆ ಅರಿಶಿನ-ಕುಂಕುಮದ ರೂಪದಲ್ಲಿ ತವರಿನಿಂದ ಸಿಕ್ಕಿದ ಜಮೀನು (Land) ಕಂಟಕವಾಗುತ್ತೆ ಎಂದು ಎಣಿಸಿರಲಿಲ್ಲ. ಹೀಗಾಗಿ 14 ಸೈಟ್ ವಾಪಸ್ ನೀಡ್ತಿದ್ದೇನೆ ಎಂದು ಸಿಎಂ ಪತ್ನಿ ಪಾರ್ವತಿ (Parvathy) ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ವಿಚಾರ ತಮ್ಮ ಪತಿಗೂ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಕ್ಟೋಬರ್ 3ಕ್ಕೆ PSI ಪರೀಕ್ಷೆ; ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ, ENT ವೈದ್ಯರ ನಿಯೋಜನೆ: – ಕೆಇಎ

    ಈ ಬೆನ್ನಲ್ಲೇ ಪತ್ನಿ ನಿರ್ಧಾರವನ್ನು ಸಿಎಂ ಸ್ವಾಗತಿಸಿದ್ದಾರೆ. ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡಿದ್ದಾರೆ. ಕುಟುಂಬಕ್ಕಷ್ಟೆ ಸೀಮಿತವಾಗಿದ್ದ ನನ್ನ ಪತ್ನಿ, ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸ್ತಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಇದರ ಮಧ್ಯೆ, ಪಾರ್ವತಿ ಪತ್ರವನ್ನು ಸಿಎಂ ಪುತ್ರ, ಎಂಎಲ್‌ಸಿ ಯತೀಂದ್ರ ಮುಡಾ ಆಯುಕ್ತರಿಗೆ ಮಂಗಳವಾರ ಬೆಳಗ್ಗೆ ತಲುಪಿಸಿದ್ದಾರೆ. ಇದನ್ನು ಪರಿಶೀಲಿಸಿದ ಮುಡಾ, 14 ಸೈಟ್‌ಗಳ ಸೇಲ್ ಡೀಡ್ ರದ್ದು ಮಾಡಿದೆ. ವಿಜಯನಗರದಲ್ಲಿ ಸಿಎಂ ಪತ್ನಿಗೆ ನೀಡಿದ್ದ 14 ಸೈಟ್‌ಗಳನ್ನು ಮುಡಾ ವಾಪಸ್ ಪಡೆದಿದೆ.

    ಸಿಎಂ ಪತ್ನಿ ಸೈಟ್ ವಾಪಸ್.. ಮುಂದೇನು?
    * ಕಾನೂನಾತ್ಮಕವಾಗಿ ಯಾವುದೇ ಪರಿಣಾಮ ಬೀರಲ್ಲ
    * ಈಗಾಗಲೇ ತನಿಖೆಗೆ ಆದೇಶ ಆಗಿದ್ದು, ತನಿಖೆ ನಡೆಯಲೇಬೇಕು
    * ತನಿಖೆಯಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ
    * ಸಿಎಂ, ಸಿಎಂ ಪತ್ನಿ, ಉಳಿದ ಆರೋಪಿಗಳು ತನಿಖೆ ಎದುರಿಸಲೇಬೇಕು
    * ಪ್ರಕರಣದಲ್ಲಿ ಸಿಎಂಗೆ ಕಾನೂನು ಹೋರಾಟ ಅನಿವಾರ್ಯ

    ಅಧಿಕಾರಿಗಳ ಸಮ್ಮುಖದಲ್ಲೇ ಭೂಮಿ ಪರಿಶೀಲನೆ:
    ಮುಡಾಗೆ ಸಿಎಂ ಪತ್ನಿ ಸೈಟ್‌ಗಳನ್ನು ವಾಪಸ್ ಮಾಡಿದ ಬೆಳವಣಿಗೆ ಮಧ್ಯೆ ಮೈಸೂರು ಲೋಕಾಯುಕ್ತದಲ್ಲಿ ತನಿಖೆ ಚುರುಕಾಗಿದೆ. ಇವತ್ತು ದೂರುದಾರ ಸ್ನೇಹಮಯಿ ಕೃಷ್ಣರನ್ನು ವಿಚಾರಣೆಗೆ ಒಳಪಡಿಸಿದ್ರು. ಅಲ್ಲದೇ, ಸ್ನೇಹಮಯಿ ಕೃಷ್ಣ ಸಮ್ಮುಖದಲ್ಲಿ ಕೆಸರೆ ಗ್ರಾಮದ ವಿವಾದಿತ ಜಮೀನಲ್ಲಿ ಮಹಜರು ನಡೆಸಿದ್ರು. ಬಳಿಕ ಮಾತಾಡಿದ ಸ್ನೇಹಮಯಿ ಕೃಷ್ಣ, ಇವತ್ತಿನ ಸ್ಥಳ ಮಹಜರು ಪ್ರಕ್ರಿಯೆ ತೃಪ್ತಿ ನೀಡಿದೆ. ಲೋಕಾಯುಕ್ತ ಅಧಿಕಾರಿಗಳೇ ಖುದ್ದು ಸ್ನೇಹಮಯಿ ಕೃಷ್ಣ ಅವರೊಂದಿಗೆ ತೆರಳಿ, ಮೈಸೂರು ತಾಲೂಕು ಕೆಸರೆ ಗ್ರಾಮದಲ್ಲಿರೋ ಸರ್ವೆ ನಂ. 464ರ 3.16 ಎಕರೆ ಭೂಮಿಯನ್ನ ಸ್ಥಳ ಮಹಜರು ನಡೆಸಿದ್ದಾರೆ. ಸಿಎಂ ಪತ್ನಿ ಖರೀದಿಸಿರುವ ಜಮೀನಿನಲ್ಲಿ ನಿವೇಶನ ರಚನೆ ಕುರುಹುಗಳು ಕಂಡುಬಂದಿವೆ. ಗುರುವಾರ ವಿಜಯನಗರ 3-4ನೇ ಹಂತದಲ್ಲಿರುವ 14 ಸೈಟ್‌ಗಳಲ್ಲಿ ಮಹಜರು ನಡೆಯಲಿದೆ. ನನಗೆ ಹಾಜರಿರಲು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆಂದರು.

    ಈ ಮಧ್ಯೆ, ದೂರುದಾರ ಸ್ನೇಹಮಯಿ ಕೃಷ್ಣಗೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಕೋರಿ ಗೃಹ ಸಚಿವರು ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ನಸ್ರಲ್ಲಾ ಹತ್ಯೆ ಬಳಿಕ ಹಿಜ್ಬುಲ್ಲಾ ಪ್ರತೀಕಾರದ ದಾಳಿ – ಮೊಸಾದ್‌ ಹೆಡ್‌ಕ್ವಾರ್ಟಸ್‌ ಮೇಲೆ ಅಟ್ಯಾಕ್‌

    ಸಿಎಂ ತಲೆದಂಡಕ್ಕೆ ವಿಪಕ್ಷಗಳ ಪಟ್ಟು:
    ಸಿಎಂ ಪತ್ನಿ ಸೈಟ್ ವಾಪಸ್ ನೀಡಿದ ಬೆನ್ನಲ್ಲೇ ವಿಪಕ್ಷಗಳ ವಾಗ್ದಾಳಿ ಇನ್ನಷ್ಟು ತೀವ್ರಗೊಂಡಿದೆ. ತಪ್ಪು ಮಾಡಿಲ್ಲ ಅಂದ್ಮೇಲೆ ಸೈಟ್ ಏಕೆ ವಾಪಸ್ ಕೊಡ್ಬೇಕಿತ್ತು? ಅವರು ಸೈಟ್ ವಾಪಸ್ ಮಾಡಿದ್ದಾರೆ ಅಂದ್ಮೇಲೆ ಅವರು ತಪ್ಪು ಒಪ್ಪಿಕೊಂಡಂತೆ ಆಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುತ್ತಾ ಕೇಸರಿ ಪಡೆ ಮುಗಿಬಿದ್ದಿದೆ. ಕಾನೂನು ಕುಣಿಕೆಯಿಂದ ಬಚಾವ್ ಆಗಲು, ರಾಜಕೀಯವಾಗಿ ಅನುಕಂಪ ಪಡೆಯಲು ಸೈಟು ವಾಪಸ್ ಮಾಡಿದ್ದಾರೆ. ಭಾವನಾತ್ಮಕ ದಾಳ ಉರುಳಿಸಿದ್ದಾರೆ. ಆದ್ರೆ, ಇದು ವರ್ಕೌಟ್ ಆಗಲ್ಲ ಎಂದು ಬಿಜೆಪಿ ಹೇಳಿದೆ.

    ಸಿದ್ದರಾಮಯ್ಯ ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು ಎಂದು ವಿಜಯೇಂದ್ರ ಭವಿಷ್ಯ ಹೇಳಿದ್ದಾರೆ. ಜಂಬೂಸವಾರಿಗೆ ಸಿಎಂ ಪುಷ್ಪಾರ್ಚನೆ ಮಾಡೋದೇ ಅನುಮಾನ ಎಂದು ಶಾಸಕ ಶ್ರೀವತ್ಸ ಹೇಳಿದ್ದಾರೆ. ನಾನು ಹಿಂದೆನೇ ಸಿಎಂಗೆ ಹೇಳಿದ್ದೇ. ಅವರು ಮಾತೇ ಕೇಳಲಿಲ್ಲ, ಈಗ ಸೈಟ್ ವಾಪಸ್ ಮಾಡಿದ್ರೂ ಏನು ಪ್ರಯೋಜನ ಇಲ್ಲ. ತನಿಖೆ ಎದುರಿಸಲೇಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಇದನ್ನೂ ಓದಿ: ಒಂದು ದಿನವಾದ್ರೂ ನನ್ನನ್ನ ಜೈಲಿಗೆ ಕಳಿಸಲು ರಾಜ್ಯ ಸರ್ಕಾರದಿಂದ ಸಂಚು – ಹೆಚ್‌ಡಿಕೆ ಗಂಭೀರ ಆರೋಪ

  • ಅಧಿಕಾರ ಕೈಯಲ್ಲಿತ್ತು, ವ್ಯಾಮೋಹ ಇದ್ದಿದ್ದರೇ ಎಷ್ಟು ಬೇಕಾದ್ರೂ ಆಸ್ತಿ ಮಾಡಬಹುದಿತ್ತು: ಸಿದ್ದರಾಮಯ್ಯ

    ಅಧಿಕಾರ ಕೈಯಲ್ಲಿತ್ತು, ವ್ಯಾಮೋಹ ಇದ್ದಿದ್ದರೇ ಎಷ್ಟು ಬೇಕಾದ್ರೂ ಆಸ್ತಿ ಮಾಡಬಹುದಿತ್ತು: ಸಿದ್ದರಾಮಯ್ಯ

    – 277 ಶಾಸಕರ ಖರೀದಿಗೆ 6,500 ಕೋಟಿ ಎಲ್ಲಿಂದ ಬಂತು?
    – ರಾಜಕೀಯ ನೀಚತನ ಬಂದಿದ್ದೇ ಯಡಿಯೂರಪ್ಪನಿಂದ: ಸಿಎಂ

    ಬೆಂಗಳೂರು: ಎರಡು ಬಾರಿ ಸಿಎಂ ಆಗಿದ್ದೇನೆ, 2 ಬಾರಿ ಉಪಮುಖ್ಯಮಂತ್ರಿಯೂ ಆಗಿದ್ದೆ. 15 ಬಾರಿ ಬಜೆಟ್‌ ಮಂಡಿಸಿದ್ದೇನೆ. ಕೈಯಲ್ಲಿ ಅಧಿಕಾರ ಇತ್ತು. ಆಸ್ತಿ (Property) ಮೇಲೆ ವ್ಯಾಮೋಹ ಇದ್ದಿದ್ದರೇ ಎಷ್ಟು ಬೇಕಾದ್ರೂ ಆಸ್ತಿ ಮಾಡಬಹುದಿತ್ತು ಅಂತ ಸಿಎಂ ಸಿದ್ದರಾಮ್ಯಯ್ಯ (Siddaramaiah) ತಿಳಿಸಿದ್ದಾರೆ.

    ಚುಟುಕು ಸಂದರ್ಶನದಲ್ಲಿ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿದ ಅವರು, ನನ್ನ 4 ದಶಕಗಳ ರಾಜಕೀಯ ಜೀವನ ತೆರೆದ ಪುಸ್ತಕ. ನನ್ನ ಹೆಸರಿಗೆ ಮಸಿ ಬಳಿಯುವ ದುರುದ್ದೇಶ ಬಿಜೆಪಿ-ಜೆಡಿಎಸ್‌ನದ್ದಾಗಿದೆ. ಅವರ ಈ ಪ್ರಯತ್ನ ವಿಫಲವಾಗುತ್ತೆ. ನಾನು 2 ಬಾರಿ ಮುಖ್ಯಮಂತ್ರಿಯಾಗಿದ್ದೇನೆ. 2 ಬಾರಿ ಉಪಮುಖ್ಯಮಂತ್ರಿಯಾಗಿದ್ದೆ, 2 ಬಾರಿ ವಿಪಕ್ಷ ನಾಯಕ ನಾಗಿದ್ದೆ. 15 ಬಾರಿ ಬಜೆಟ್ ಮಂಡಿಸಿದ್ದೇನೆ. ನನಗಾಗಲಿ, ನನ್ನ ಕುಟುಂಬಕ್ಕಾಗಲಿ ಆಸ್ತಿ ಮೇಲೆ ವ್ಯಾಮೋಹವಿಲ್ಲ. ವಾಮಮಾರ್ಗದಲ್ಲಿ ಮಾಡೋದಾಗಿದ್ದರೆ ಅಧಿಕಾರ ಇತ್ತು, ಎಷ್ಟು ಬೇಕಾದ್ರೂ ಆಸ್ತಿ ಮಾಡಬಹುದಿತ್ತು. ಆದ್ರೆ ನನಗೆ ಆಸ್ತಿ ಮೇಲೆ ವ್ಯಾಮೋಹ ಇಲ್ಲ ಎಂದು ಹೇಳಿದ್ದಾರೆ.

    ಬಿಜೆಪಿಯವರು (BJP) ಶೋಷಿತರು, ಬಡವರ ವಿರೋಧಿಗಳು. ಮನುವಾದಿಗಳಿಗೆ ಯಾವ ಸಿದ್ಧಾಂತ ಇದೆ? ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಜನರಿಗೆ ಸಮಾಜದ ಬದಲಾವಣೆಯಲ್ಲೂ ನಂಬಿಕೆ ಇಲ್ಲ. ಬಿಜೆಪಿಯವರು ಮನುವಾದಿಗಳಾದ್ರೆ, ಜೆಡಿಎಸ್‌ನವರು ಜಾತಿವಾದಿಗಳು. ಪಾಳೇಗಾರಿಕೆ ಮನೋವೃತ್ತಿ ಇರುವವರು. ಮನುವಾದಿಗಳು, ಜಾತಿಗಳು ಸೇರಿ ನನ್ನನ್ನ ಹಾಗೂ ಕಾಂಗ್ರೆಸ್‌ನ ಟಾರ್ಗೆಟ್ ಮಾಡ್ತಿದ್ದಾರೆ. ಸಿದ್ದರಾಮಯ್ಯಯನ ಹೆಸರಿಗೆ ಮಸಿ ಬಳಿದು, ರಾಜಕೀಯವಾಗಿ ಮುಗಿಸಿದ್ರೆ, ಸರ್ಕಾರ ಮುಗಿಸಲು ಸಾಧ್ಯವಾಗುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಜನ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದು ಸಿಎಂ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ದೆಹಲಿ, ಮುಂಬೈನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಐಸಿಸ್ ಶಂಕಿತ ಭಯೋತ್ಪಾದಕ ಅರೆಸ್ಟ್‌

    ಇದೇ ವೇಳೆ ಮೈಸೂರು ಚಲೋ ಪಾದಯಾತ್ರೆ ಕುರಿತು ಮಾತನಾಡಿ, ನಾನು 2 ಬಾರಿ ಸಿಎಂ ಆಗಿದ್ದೇನೆ. ಅವರು ಎಷ್ಟೇ ಸುಳ್ಳು ಹೇಳಿದ್ರೂ, ಜನ ನಮಗೇ ಆಶೀರ್ವಾದ ಮಾಡಿದ್ದಾರೆ. ಏನ್ ತಪ್ಪು ಮಾಡಿದ್ದೇವೆ ಅಂತ ಜನರಿಗೆ ಹೇಳ್ತಾರೆ? ಆಪರೇಷನ್ ಕಮಲ ಬಂದಿದ್ದು ಬಿಜೆಪಿ ಮತ್ತು ಯಡಿಯೂರಪ್ಪ ಅವರಿಂದ. ಈ ಅಂಟು ರೋಗ ಆರಂಭವಾಯ್ತು. ಶಾಸಕರನ್ನು ಕೊಂಡುಕೊಳ್ಳುವ ರಾಜಕೀಯ ನೀಚತನ ಬಂದಿದ್ದೇ ಯಡಿಯೂರಪ್ಪ ಅವರಿಂದ ಎಂದು ಲೇವಡಿ ಮಾಡಿದರು.

    ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡ್ತಾರಾ? ಅನ್ನೋ ಪ್ರಶ್ನೆಗೆ ಉತ್ತರಿಸಿದ ಸಿಎಂ, ನನಗಿರುವ ಕಾನೂನು ಜ್ಞಾನದ ಪ್ರಕಾರ, ಅಲ್ಲಿ ಯಾವುದೇ ನೈಜತೆ ಇಲ್ಲ. ಇದು ಬಿಜೆಪಿ-ಜೆಡಿಎಸ್‌ನ ದ್ವೇಷದ ರಾಜಕಾರಣ, ಸುಳ್ಳಿನ ರಾಜಕಾರಣ. ರಾಜ್ಯಪಾಲರಿಗೆ ಕಾನೂನು ಅರಿವಾಗುತ್ತೆ ಎಂದುಕೊಂಡಿದ್ದೇನೆ ಎಂದು ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಲೂಮಿನಲ್ ಟೆಸ್ಟ್‌ನಲ್ಲಿ ʻದಾಸʼನಿಗೆ ಟ್ವಿಸ್ಟ್‌ | ಒಗೆದು ಒಣಹಾಕಿದ್ದ ಬಟ್ಟೆಯಲ್ಲಿ ರಕ್ತದ ಕಲೆ ಪತ್ತೆಯಾಗಿದ್ದು ಹೇಗೆ?

    ಬಿಜೆಪಿ ವಿರುದ್ಧ 21 ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೀತಿದೆ. ಎಪಿಎಂಸಿ ಹಗರಣ, ಬೋವಿ ನಿಗಮ, 40% ಕಮಿಷನ್‌, ಬಿಟ್ ಕಾಯಿನ್, ಕೋವಿಡ್ ಹಗರಣ, ದೇವರಾಜ್ ಅರಸು ಟ್ರಕ್ ಟರ್ಮಿನಲ್ ಹಗರಣಗಳ ತನಿಖೆ ನಡೀತಿದೆ. ಎಲ್ಲಾ ಪ್ರಕರಣಗಳನ್ನ ನಾವು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಕಾನೂನು ಚೌಕಟ್ಟಿನಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡ್ತೇವೆ. ನಾವು ಕೂಡ ರಾಜಕೀಯವಾಗಿ, ಕಾನೂನಾತ್ಮಕವಾಗಿ ಎದುರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

    277 ಶಾಸಕರ ಖರೀದಿಗೆ 6,500 ಕೋಟಿ ಎಲ್ಲಿಂದ ಬಂತು?
    ಅಲ್ಲದೇ ಇತ್ತೀಚೆಗೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ರು, ಬಿಜೆಪಿಯವರು ಈವರೆಗೆ 277 ಶಾಸಕರನ್ನ ಖರೀದಿ ಮಾಡಿದ್ದಾರೆ. ಅದಕ್ಕಾಗಿ 6,500 ಕೋಟಿ ರೂ. ಖರ್ಚು ಮಾಡಿದ್ದಾರೆ. ಅಷ್ಟೊಂದು ಹಣ ಎಲ್ಲಿಂದ ಬಂತು? ನರೇಂದ್ರ ಮೋದಿ ಅವರು ಪ್ರಾಮಾಣಿಕರು ಅಂತಾರಲ್ಲ ಹೇಳಲಿ? ಎಂದು ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ, ನಿಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ: ಡಿಕೆಶಿ ಗುಡುಗು