Tag: ಮುಡಾ ಪ್ರಕರಣ

  • ಮುಡಾ ಕೇಸ್‌ ತನಿಖೆಗೆ ಲೋಕಾಯುಕ್ತ ಎಂಟ್ರಿ – 18 ಅಧಿಕಾರಿಗಳಿಗೆ ನೋಟಿಸ್

    ಮುಡಾ ಕೇಸ್‌ ತನಿಖೆಗೆ ಲೋಕಾಯುಕ್ತ ಎಂಟ್ರಿ – 18 ಅಧಿಕಾರಿಗಳಿಗೆ ನೋಟಿಸ್

    ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅಕ್ರಮಗಳು (MUDA Scam_ ಬಗೆದಷ್ಟು ಬಯಲಾಗ್ತಿವೆ. ಈ ಹೊತ್ತಲ್ಲೇ ಲೋಕಾಯುಕ್ತ (Karnataka Lokayukta) ಎಂಟ್ರಿ ಕೊಟ್ಟಿದೆ.

    ಮೈಸೂರು (Mysuru) ಹಿನಕಲ್‌ನ ಸರ್ವೆ ನಂಬರ್ 89ರ 7.18 ಎಕರೆ ಭೂಮಿಯನ್ನು 350ಕ್ಕೂ ಹೆಚ್ಚು ಪ್ರಭಾವಿ ಅಧಿಕಾರಿಗಳಿಗೆ ನಿವೇಶನ ರೂಪದಲ್ಲಿ ನೀಡಿರುವ ಆರೋಪ ಸಂಬಂಧ ಲೋಕಾಯುಕ್ತ ತನಿಖೆಗೆ ಇಳಿದಿದೆ. 2017ರ ಅವಧಿಯಲ್ಲಿ ಪ್ರಾಧಿಕಾರದಲ್ಲಿ ಕೆಲಸ ಮಾಡಿದ್ದ 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್ ನೀಡಿದೆ. ಇದನ್ನೂ ಓದಿ: ಹಿರಿಯ ಅಧಿಕಾರಿ ವಿರುದ್ಧ IAF ಫ್ಲೈಯಿಂಗ್‌ ಸ್ಕ್ವಾಡ್‌ ಮಹಿಳಾಧಿಕಾರಿಯಿಂದ ಅತ್ಯಾಚಾರ ಆರೋಪ – ಕೇಸ್‌ ದಾಖಲು

    2017ರಲ್ಲಿ ದೂರು:
    2017ರಲ್ಲಿ ಆರ್‌ಟಿಐ ಕಾರ್ಯಕರ್ತ ಗಂಗರಾಜು ದೂರು ನೀಡಿದ್ದರು. ಸರ್ಕಾರದ ಅನುಮತಿ ಪಡೆದು 2022ರಲ್ಲಿ ಲೋಕಾಯುಕ್ತರು ಪ್ರಕರಣ ದಾಖಲಿಸಿಕೊಂಡಿದ್ದರು. ಹಿನಕಲ್ ಸರ್ವೇ ನಂಬರ್ 89ರ ನಿವೇಶನ ಹಂಚಿಕೆ ಸಂಬಂಧ ಮುಡಾದ 7.18 ಗುಂಟೆ ಜಮೀನಿನಲ್ಲಿ ನಿವೇಶನ ಮಾಡಿ 350ಕ್ಕೂ ಹೆಚ್ಚು ಪ್ರಭಾವಿ ಅಧಿಕಾರಿಗಳಿಗೆ ಹಂಚಿರುವ ಆರೋಪ ಇದಾಗಿದೆ. ಮುಡಾ ಸೂಪರಿಂಟೆಂಡೆಂಟ್ ಇಂಜಿನಿಯರ್ ಕಾರ್ಯದರ್ಶಿ ಸೇರಿದಂತೆ 2017ರಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ.

    ಇದೇ ಹೊತ್ತಲ್ಲಿ ಮುಡಾ ಆಯುಕ್ತರ ನಿವಾಸದಲ್ಲಿದ್ದ ಸಿಸಿಟಿವಿ, ಡಿವಿಆರ್ ನಾಪತ್ತೆಯಾಗಿವೆ. ಮುಡಾದ ಕೆಲ ಅಧಿಕಾರಿಗಳು ಸಿಸಿಟಿವಿ ಮತ್ತು ಡಿವಿಆರ್ ಅನ್ನು ಕೊಂಡೊಯ್ದ ಅನುಮಾನ ವ್ಯಕ್ತವಾಗಿದೆ. ಇದು ಡಿಜಿಟಲ್ ಸಾಕ್ಷ್ಯ ಆಗಬಹುದೆಂಬ ಕಾರಣಕ್ಕೆ ಅವರು ಸಾಕ್ಷ್ಯ ನಾಶಕ್ಕಾಗಿ ಇವನ್ನು ತೆರವು ಮಾಡಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಮುಡಾದ ಹಾಲಿ ಆಯುಕ್ತರು, ಮುಡಾ ಕಟ್ಟಡ ನಿರ್ವಹಣೆ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಕೋರ್ಟ್‌ಗೆಳೆಯುತ್ತೇವೆ; ಸಿಖ್ ಸಮುದಾಯದ ಬಗ್ಗೆ ಹೇಳಿಕೆಗೆ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡ

    ಮುಡಾ ಕೇಸಲ್ಲಿ ಒಂದೊಮ್ಮೆ ಸಿದ್ದರಾಮಯ್ಯ ಕುರ್ಚಿ ತೊರೆಯುವ ಸನ್ನಿವೇಶ ಸೃಷ್ಟಿಯಾದ್ರೆ ಸಿಎಂ ಆಗೋಣ ಎನ್ನುತ್ತಾ ಕಾಂಗ್ರೆಸ್‌ನ ಹಲವು ಪ್ರಮುಖರು ಕಸರತ್ತು ಶುರುಮಾಡಿದ್ದಾರೆ. ಸಚಿವರಾದ ಎಂಬಿ ಪಾಟೀಲ್ ಸೇರಿ ಹಲವರು ದೆಹಲಿಗೆ ತೆರಳಿರೋದು ಕುತೂಹಲ ಮೂಡಿಸಿದೆ. ಇಲಾಖೆಗೆ ಸಂಬಂಧಿಸಿ ಕೇಂದ್ರ ಸಚಿವರಾದ ಕುಮಾರಸ್ವಾಮಿ, ರಾಜನಾಥ್‌ಸಿಂಗ್‌ರನ್ನು ಭೇಟಿಯಾಗಿರೋ ಎಂಬಿ ಪಾಟೀಲ್, ಬುಧವಾರ ರಾಹುಲ್ ಗಾಂಧಿಯನ್ನು ಭೇಟಿ ಮಾಡೋ ಸಾಧ್ಯತೆಯಿದೆ. ಸದ್ಯ ಅಮೆರಿಕ ಪ್ರವಾಸದಲ್ಲಿರೋ ರಾಹುಲ್ ಗಾಂಧಿ, ಬುಧವಾರ (ಸೆ.11) ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಕನ್ನಡ 11ರ ಪ್ರೋಮೋ ಔಟ್- ಹೊಸ ಅಧ್ಯಾಯ  ಬರೆಯಲು ಸಜ್ಜಾದ ದೊಡ್ಮನೆ!

  • Breaking: ಮುಡಾ ಹಗರಣದ ಮೊದಲ ವಿಕೆಟ್ ಪತನ – ಹಿಂದಿನ ಆಯುಕ್ತ ದಿನೇಶ್ ಕುಮಾರ್ ಸಸ್ಪೆಂಡ್‌!

    Breaking: ಮುಡಾ ಹಗರಣದ ಮೊದಲ ವಿಕೆಟ್ ಪತನ – ಹಿಂದಿನ ಆಯುಕ್ತ ದಿನೇಶ್ ಕುಮಾರ್ ಸಸ್ಪೆಂಡ್‌!

    ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ ಪ್ರಕರಣದಲ್ಲಿ (MUDA Scam Case) ಮೊದಲ ವಿಕೆಟ್‌ ಪತನವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ಜಿ.ಟಿ ದಿನೇಶ್‌ಕುಮಾರ್‌ ಅವರನ್ನು ಸಮಾನತುಗೊಳಿಸಿ ಸರ್ಕಾರ (Government Of Karnataka )ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

    ಮೂಡಾ ಹಗರಣದಲ್ಲಿ ದಿನೇಶ್ ಕುಮಾರ್ ಮೇಲೆ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಮಾನತ್ತು ಮಾಡಿ ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: MUDA Scam | ಸಿಎಂ ಸಿದ್ದರಾಮಯ್ಯಗೆ ಮಧ್ಯಂತರ ರಿಲೀಫ್ –‌ ಸೆ.9ಕ್ಕೆ ಮತ್ತೆ ವಿಚಾರಣೆ ಮುಂದೂಡಿಕೆ!

    ಸರ್ಕಾರದ ಆದೇಶದಲ್ಲಿ ಏನಿದೆ?
    KUDA ಕಾಯ್ದೆ ಕಲಂ 13 (1) ರಲ್ಲಿ ಪ್ರಾಧಿಕಾರದ ಆಯುಕ್ತರು, ಮುಖ್ಯ ಕಾರ್ಯನಿರ್ವಹಣಾ ಮತ್ತು ಆಡಳಿತಾಧಿಕಾರಿಯಾಗಿದ್ದು ಸಭೆಗೆ ಮಂಡಿಸಲಾದ ಬಹುತೇಕ ವಿಷಯಗಳಲ್ಲಿ ಸ್ಪಷ್ಟ ಅಭಿಪ್ರಾಯವನ್ನು ಟಿಪ್ಪಣಿಯಲ್ಲಿ ದಾಖಲಿಸಿ ಮಂಡಿಸದೇ ಇರುವುದು ಮತ್ತು ಸರ್ಕಾರದಿಂದ ನೀಡಲಾದ ನಿರ್ದೇಶನಗಳ ಪಾಲನೆಯಾಗುತ್ತಿಲ್ಲದಿರುವುದನ್ನು ಗಮನಿಸಲಾಗಿದೆ. ಇದನ್ನೂ ಓದಿ: ಟಿಕೆಟ್ ಸಿಗಲಿ, ಸಿಗದೇ ಇರಲಿ ಪಕ್ಷದ ಜೊತೆ ಇರ್ತೇನೆ, ಜೆಡಿಎಸ್‌ಗೆ ಟಿಕೆಟ್ ಕೊಟ್ರೂ ಕೆಲಸ ಮಾಡ್ತೇನೆ: ಸಿಪಿವೈ

    ಸರ್ಕಾರವು ನೀಡುವ ಯಾವುದೇ ನಿರ್ದೇಶನಗಳನ್ನು ಪಾಲಿಸುವುದು KUDA ಕಾಯ್ದೆ ಕಲಂ 65ರನ್ವಯ ಪ್ರಾಧಿಕಾರದ ಜವಾಬ್ದಾರಿ. ಆದ್ರೆ ನಿಯಮಗಳಿಗೆ ಮತ್ತು ಸರ್ಕಾರದ ನಿರ್ದೇಶನಗಳಿಗೆ ವ್ಯತಿರಿಕ್ತವಾಗಿ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸುತ್ತಿರುವುದು ಮತ್ತು ಅದರಂತೆ ಕ್ರಮವಹಿಸುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: Shivamogga | ಪ್ರೀತಿಸಲು ಹುಡುಗಿ ಸಿಗಲಿಲ್ಲ ಅಂತ ತುಂಗಾ ನದಿಗೆ ಹಾರಿ ಯುವಕ ಆತ್ಮಹತ್ಯೆ!

    ಅಲ್ಲದೇ ದಿನೇಶ್‌ ಕುಮಾರ್‌ ಅವರ ವಿರುದ್ಧ ಇನ್ನೂ ಅನೇಕ ಆರೋಪಗಳಿಂದ ಕರ್ತವ್ಯ ಲೋಪ ಎಸಗಿರುವುದು ಸಕ್ಷಮ ಪ್ರಾಧಿಕಾರಕ್ಕೆ ಮನವರಿಕೆಯಾಗಿದೆ. ಇದನ್ನೂ ಓದಿ: ಬೇಬಿ ಬಂಪ್ ಫೋಟೋ ಶೂಟ್‌ಗೆ ದೀಪಿಕಾ-ರಣವೀರ್‌ ಪೋಸ್‌; ಬಾಲಿವುಡ್‌ನ ಕ್ಯೂಟ್‌ ಕಪಲ್‌ ಫುಲ್‌ ಶೈನ್‌

    ಸದರಿ ಅವರು ಅಧಿಕಾರದಲ್ಲಿ ಮುಂದುವರಿದಲ್ಲಿ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿಯಿರಿಸಿ ಸೇವೆಯಿಂದ ಅಮಾನತುಗೊಳಿಸಲು ತೀರ್ಮಾನಿಸಿದೆ ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.

  • MUDA Scam Case | ಸಿಎಂ ಪತ್ನಿ ವಿರುದ್ಧ ದೂರು ದಾಖಲು

    MUDA Scam Case | ಸಿಎಂ ಪತ್ನಿ ವಿರುದ್ಧ ದೂರು ದಾಖಲು

    ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣ (MUDA Case) ಸಂಬಂಧ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ (Parvathi Siddaramaiah) ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮೈಸೂರಿನ ಲಕ್ಷ್ಮಿಪುರಂ ಠಾಣೆಗೆ ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿದೆ?
    ಪಾರ್ವತಿ ಸಿದ್ದರಾಮಯ್ಯ ಅವರು ಬರೆದ ಮೂಲ ಪತ್ರ ನಾಶ ಮಾಡಿ, ಇತ್ತೀಚಿಗೆ ಸೃಷ್ಟಿಸಿರುವ ಪತ್ರವನ್ನು ಕಡತಕ್ಕೆ ಸೇರಿಸಿದ್ದಾರೆ. ಸಿಎಂ ತೋರಿಸಿರುವ ಪತ್ರದಲ್ಲಿರುವ ಪಾರ್ವತಿ ಅವರ ಸಹಿ ಹಾಗೂ ಮಾಹಿತಿ ಹಕ್ಕಿನಲ್ಲಿ (RTI) ಪಡೆದ ಪತ್ರದಲ್ಲಿ ಇರುವ ಸಹಿ ಬೇರೆ ಬೇರೆ ರೀತಿ ಇದೆ. ಪಾರ್ವತಿ ಅವರ ಸಹಿ ನಕಲಿ ಆಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: IPL 2025 | ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ನೂತನ ಮೆಂಟರ್‌ ಆಗಿ ಜಹೀರ್‌ ಖಾನ್‌ ನೇಮಕ

    ವೈಟ್ನರ್ ಹಿಂದಿನ ಪದಗಳನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಹಾಗೂ ಪಾರ್ವತಿ ಅವರು ಸಂಚು ರೂಪಿಸಿ ಸುಳ್ಳು ಪತ್ರ ಸೃಷ್ಟಿಸಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ದೂರು ನೀಡಿದ್ದಾರೆ. ಇದಕ್ಕೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಗರಂ ಆಗಿದ್ದಾರೆ. ಸಿಎಂ ಪತ್ನಿ ಸಹಿ ನಕಲಿ ಅಂತಾ ಹೇಳೋದಕ್ಕೆ ದೂರುದಾರರೇನಾದ್ರೂ ಎಫ್‌ಎಸ್‌ಎಲ್ ಅಧಿಕಾರಿನಾ ಎಂದು ಪ್ರಶ್ನಿಸಿದ್ದಾರೆ.

    ಸ್ನೇಹಮಯಿ ಕೃಷ್ಣ ಒಬ್ಬ ಬ್ಲಾಕ್‌ಮೇಲರ್, ಆತನ ಕಡೆಯವರು ನನ್ನ ಬಳಿ ಬಂದು 100 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ. ಇಷ್ಟರಲ್ಲೇ ಅದೆಲ್ಲವನ್ನು ಬಯಲು ಮಾಡ್ತೇನೆ ಎಂದು ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಕೋಲ್ಡ್ ಬ್ಲಡೆಡ್ ಕೊಲೆ ಕೇಸ್‌ನಲ್ಲಿ ಪವಿತ್ರಾ ಭಾಗಿ – ಮಹಿಳೆಯರಿಗೇಕೆ ವಿಶೇಷ ಅವಕಾಶ ಕೊಡಬೇಕು?; ಎಸ್‌ಪಿಪಿ ವಾದ

    ಅತ್ತ, ಸುಳ್ಳು ದಾಖಲೆ ಕೊಟ್ಟು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕೂಡ ಆರೋಪ ಮಾಡಿದ್ದಾರೆ. ಬಿಜೆಪಿ ಕೂಡ ಟ್ವೀಟ್ ಮೂಲಕ ಹರಿಹಾಯ್ದಿದೆ. ಇದನ್ನೂ ಓದಿ: ಪೂರ್ಣಚಂದ್ರ ತೇಜಸ್ವಿ ತಂದೆಯ ನೆರಳಿನಿಂದ ಹೊರಬಂದು ಸ್ವಂತ ಆಲೋಚನೆ ಬೆಳೆಸಿಕೊಂಡರು: ಸಿದ್ದರಾಮಯ್ಯ

  • MUDA Scam | ರಾಜ್ಯಪಾಲರ ನಡೆಗೆ ಖಂಡನೆ – ಸಿದ್ದರಾಮಯ್ಯ ಬೆನ್ನಿಗೆ ನಿಂತ ಮಠಾಧೀಶರು

    MUDA Scam | ರಾಜ್ಯಪಾಲರ ನಡೆಗೆ ಖಂಡನೆ – ಸಿದ್ದರಾಮಯ್ಯ ಬೆನ್ನಿಗೆ ನಿಂತ ಮಠಾಧೀಶರು

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಹಲವು ಸಂಘಟನೆಗಳು, ಕಾಂಗ್ರೆಸ್‌ ಶಾಸಕರು, ಸಚಿವರು ಬೆಂಬಲ ನೀಡಿದ್ದಾರೆ. ಈ ನಡುವೆ ಹಿಂದುಳಿದ ವರ್ಗ ಮತ್ತು ದಲಿತ ಹಾಗೂ ಶೋಷಿತ ಸಮುದಾಯಗಳ ಸ್ವಾಮೀಜಿಗಳ ಒಕ್ಕೂಟ ಸಹ ಸಿಎಂ ಬೆನ್ನಿಗೆ ನಿಂತಿದೆ.

    ಹಿಂದುಳಿದ ವರ್ಗ ಮತ್ತು ದಲಿತ ಹಾಗೂ ಶೋಷಿತ ಸಮುದಾಯಗಳ ಸ್ವಾಮೀಜಿಗಳ ಒಕ್ಕೂಟದ ಸ್ವಾಮೀಜಿಗಳು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಬೇಷರತ್ ನೈತಿಕ ಬೆಂಬಲ ಘೋಷಿಸಿದ್ದಾರೆ.

    ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ 10 ಸ್ವಾಮೀಜಿಗಳನ್ನೊಳಗೊಂಡ ನಿಯೋಗ ಸಿದ್ದರಾಮಯ್ಯ ಅವರಿಗೆ ಆತ್ಮಸ್ಥೈರ್ಯ ತುಂಬಿತು. ಇದೇ ವೇಳೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಕ್ರಮವನ್ನು ಒಕ್ಕೂಟ ಖಂಡಿಸಿತು.

    ಸಿಎಂಗೆ ಯಾರೆಲ್ಲಾ ಬೆಂಬಲ್ಲ?
    * ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿಯವರು, ಕನಕ ಪೀಠ ಕಾಗಿನೆಲೆ.
    * ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮಿಗಳು, ಶ್ರೀ ಜಗದ್ಗುರು ಕುಂಚಿಟಿಗ ಮಾಸಂಸ್ಥಾನ ಮಠ ಹೊಸದುರ್ಗ.
    * ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳು, ಭೋವಿ ಗುರುಪೀಠ ಚಿತ್ರದುರ್ಗ.
    * ಜಗದ್ಗುರು ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಮಹಾಸ್ವಾಮಿಗಳು, ಮಾದರ ಚನ್ನಯ ಗುರುಪೀಠ ಚಿತ್ರದುರ್ಗ.
    * ಜಗದ್ಗುರು ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು, ಭಗಿರಥ ಪೀಠ ಮಧುರೆ.
    * ಪರಮಪೂಜ್ಯ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ಕನಕ ಗುರುಪೀಠ ಹೊಸದುರ್ಗ.
    * ಶ್ರೀ ರೇಣುಕಾನಂದ ಸ್ವಾಮಿಗಳು, ನಾರಾಯಣ ಗುರುಪೀಠ ಶಿವಮೊಗ್ಗ.
    * ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು, ಮಡಿವಾಳ ಗುರುಪೀಠ ಚಿತ್ರದುರ್ಗ.
    * ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮಿಗಳು, ಹಡಪದ ಅಪ್ಪಣ್ಣ ಗುರುಪೀಠ ತಂಗಡಗಿ.
    * ಶ್ರೀ ಶಾಂತಮ್ಮಯ್ಯ ಸ್ವಾಮೀಜಿಗಳು, ಸರೂರು ವಿಜಯನಗರ.
    ಈ ಎಲ್ಲಾ ಪೂಜ್ಯರು ನಿಯೋಗದ ಪರವಾಗಿ ಉಪಸ್ಥಿತರಿದ್ದು, ಕೃತಕವಾಗಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೇಂದ್ರ ಸರ್ಕಾರದ ಮತ್ತು ರಾಜಭವನದ ಷಡ್ಯಂತ್ರಗಳನ್ನು ತೀವ್ರವಾಗಿ ಖಂಡಿಸಿ, ಈ ಷಡ್ಯಂತ್ರದ ವಿರುದ್ಧ ಒಕ್ಕೋರಲಿನಿಂದ ಮುಖ್ಯಮಂತ್ರಿಗಳ ಪರವಾಗಿ ನಿಂತು ಹೋರಾಟ ನಡೆಸುವುದಾಗಿ ಘೋಷಿಸಿದರು.

    ರಾಜ ಭವನ ಚಲೋ ಕುರಿತು ಪೂರ್ವಭಾವಿ ಸಭೆ:
    ಅಲ್ಲದೇ ಮೈಸೂರಿನಲ್ಲೂ ಸಹ ಭಾನುವಾರ ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ ಇದೇ ಆಗಸ್ಟ್‌ 27ರಂದು ರಾಜ ಭವನ ಚಲೋ ಕಾರ್ಯಕ್ರಮ ಸಂಬಂಧ ಪೂರ್ವಭಾವಿ ಸಭೆ ನಡೆಸಲಾಗಿದೆ. ಕರ್ನಾಟಕ ‌ಶೋಷಿತ ಸಮುದಾಯಗಳ ಮಾಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ವತಿಯಿಂದ ಇದೇ ಆಗಸ್ಟ್‌ 27ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಫ್ರೀಡಂ ಪಾರ್ಕ್‌ನಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಕನಕ ಭವನದಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಸಲಾಗಿದೆ.

  • ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತ್ರ ಹೈಕಮಾಂಡ್ ತೀರ್ಮಾನ ಏನು ಗೊತ್ತಿಲ್ಲ – ಸತೀಶ್ ಜಾರಕಿಹೋಳಿ

    ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತ್ರ ಹೈಕಮಾಂಡ್ ತೀರ್ಮಾನ ಏನು ಗೊತ್ತಿಲ್ಲ – ಸತೀಶ್ ಜಾರಕಿಹೋಳಿ

    ಬೆಂಗಳೂರು: ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತರ ಹೈಕಮಾಂಡ್ ತೀರ್ಮಾನ ಏನು ಅನ್ನೋದು ಗೊತ್ತಿಲ್ಲ ಮುಂದೆ ತೀರ್ಮಾನ ಮಾಡುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ‌ (Satish Jarkiholi) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸಿಎಂ, ಡಿಸಿಎಂ ದೆಹಲಿ ಭೇಟಿ ನಮಗೆ ಅಷ್ಟೊಂದು ಗೊತ್ತಿಲ್ಲ ವಿಷ್ಯ ಏನೂ ಗೊತ್ತಿಲ್ಲ. ಸಾಮಾನ್ಯವಾಗಿ ಇಲ್ಲಿ ನಡೀತಿರೋ ವಿಚಾರವನ್ನ ಹೈಕಮಾಂಡ್ ಗಮನಕ್ಕೆ ತರೋ ಕೆಲಸ ಆಗ್ತಿದೆ. ಅದೇ ಕಾರಣಕ್ಕೆ ದೆಹಲಿಗೆ ಹೋಗಿದ್ದಾರೆ. ಪ್ರಾಸಿಕ್ಯೂಷನ್ (Prosecution) ನಂತ್ರ ಹೈಕಮಾಂಡ್ ತೀರ್ಮಾನ ಏನು? ಎಂಬ ವಿಚಾರದ ಬಗ್ಗೆ ಯಾವುದೇ ಕ್ಲಾರಿಫಿಕೇಷನ್ ಬಂದಿಲ್ಲ. ಕೋರ್ಟ್ ನಲ್ಲಿ ಆದೇಶ ಬಂದ್ಮೇಲೆ ಮುಂದಿನ ತೀರ್ಮಾನ. ಇಂಡಿಯಾ ಒಕ್ಕೂಟ ‌ಏನು ತೀರ್ಮಾನ ಕೈಗೊಳ್ಳುತ್ತದೆ ನೋಡಬಹುದು. ಬೇರೆ ಕಡೆ ಕೂಡ ಈ ರೀತಿ ಕೆಲಸ ಆಗ್ತಿವೆ ಎಂದು ಹೇಳಿದ್ದಾರೆ.

    ಹಲವು ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಸರ್ಕಾರಗಳ ನಡುವೆ ಸಂಘರ್ಷ ನಡೆದಿವೆ. ತಮಿಳುನಾಡು, ಬಂಗಾಳ ಸೇರಿ ನಮ್ಮ ರಾಜ್ಯದಲ್ಲೂ ನಡೀತಿದೆ. ರಾಜ್ಯಪಾಲರು ಬಿಲ್ ವಾಪಸ್ ಕಳಿಸಿದ್ದಾರೆ. ಕೆಲ ಬಿಲ್‌ಗಳನ್ನ ವಾಪಸ್ ಕಳಿಸಿದ್ದಾರೆ. ಅವರು ಬಿಲ್ ಕುರಿತು ಸ್ಪಷ್ಟನೆ ಕೇಳೋಕೆ ಹಕ್ಕಿದೆ. ಅದನ್ನ ಸರ್ಕಾರ ಕೂಡ ಉತ್ತರ ಕೊಡುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಾಖಲೆಗಳ ನಾಶ ಪಡಿಸಲು ವೈಟ್ನರ್ ಹಚ್ಚಿದ್ದು ಯಾರು? – ನಾವು ಸರ್ಕಾರ ಬೀಳಿಸಲ್ಲ: ಸಿಎಂ ವಿರುದ್ಧ ಸುನೀಲ್ ಕುಮಾರ್ ಕಿಡಿ

    ಇನ್ನೂ ಸರ್ಕಾರ ಅಸ್ಥಿರ‌ಗೊಳಿಸುವ ಕುರಿತು ಮಾತನಾಡಿ, ಸರ್ಕಾರ ಅಸ್ಥಿರ ಗೊಳಿಸೋ‌ ವಿಚಾರದ ಬಗ್ಗೆ ಸಿಎಂ ಹೇಳಿದ್ದಾರೆ. ಹಿಂದೆಯಿಂದಲೂ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಆದ್ರೆ ಯಾವುದೇ ಬದಲಾವಣೆ ಆಗಲ್ಲ. 6 ಗಳಿಗೊಮ್ಮೆ‌ ಸರ್ಕಾರ ಬೀಳಿಸೋ ವಿಚಾರ ಮುನ್ನಲೆಗೆ ಬರುತ್ತಿರುತ್ತೆ. ಮುಂದಿನ 4 ವರ್ಷಗಳ ಕಾಲ ನಮ್ಮದೇ ಸರ್ಕಾರ ಅಲ್ಲಿವರೆಗೆ ಬೀಳಿಸುವ ಪ್ರಯತ್ನ ನಡೆಯುತ್ತಲೇ ಇರುತ್ತೆ ಎಂದಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಕಪ್ಪುಚುಕ್ಕಿ ತರುವ ಸುಳ್ಳು ಆರೋಪಕ್ಕೆ‌ ರಾಜ್ಯಪಾಲರ ಸಮ್ಮತಿ: ಸಚಿವ ಎಂ.ಬಿ.ಪಾಟೀಲ್

  • ಸಿದ್ದರಾಮಯ್ಯ ಸಂಡೇ ಲಾಯರ್, ರಾಹುಲ್ ಗಾಂಧಿ ಮೌನ ಏಕೆ?: ಛಲವಾದಿ ನಾರಾಯಣಸ್ವಾಮಿ ಕಿಡಿ

    ಸಿದ್ದರಾಮಯ್ಯ ಸಂಡೇ ಲಾಯರ್, ರಾಹುಲ್ ಗಾಂಧಿ ಮೌನ ಏಕೆ?: ಛಲವಾದಿ ನಾರಾಯಣಸ್ವಾಮಿ ಕಿಡಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddarmaiah) ಅವರು ಮುಡಾ ಪ್ರಕರಣದಲ್ಲಿ (MUDA) ಸೆಷನ್ ಆರಂಭಕ್ಕೂ ಮುನ್ನ ಆಯೋಗ ರಚನೆ ಮಾಡಿ ತನಿಖೆಗೆ ಕೊಡ್ತಾರೆ. ಅದು ಸಂಡೇ.. ಇದು ಸಂಡೇ ಲಾಯರ್ ಕೆಲಸ, ಮಂಡೇ ಲಾಯರ್ ಕೆಲಸ ಅಲ್ಲ ಎಂದು ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವ್ಯಂಗ್ಯವಾಡಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ (Rahul Gandhi)ಭ್ರಷ್ಟಾಚಾರ ಸಹಿಸಲ್ಲ ಅಂತಾ ಹೇಳಿದ್ದರು. ಈಗ ಕರ್ನಾಟಕ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಆದರೆ ರಾಹುಲ್ ಗಾಂಧಿ ಏಕೆ ಮೌನವಾಗಿದ್ದಾರೆ. ಅವರಿಗೆ ಇನ್ನೂ ಭ್ರಷ್ಟಾಚಾರ ಗಮನಕ್ಕೆ ಬಂದಿಲ್ಲವಾ? ಅಥವಾ ಭ್ರಷ್ಟಾಚಾರಕ್ಕೆ ಬೆಂಬಲ ಕೊಟ್ಟಿದ್ದೀರಾ? ಜೊತೆಗೆ ಈ ಕುರಿತು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಮಾತಾಡಿಲ್ಲ, ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಪರಿಷತ್ ಸದಸ್ಯ

    ದೆಹಲಿಯ ಎಐಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕು ಅಂದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ನಿಲುವು, ಸ್ಪಷ್ಟನೆ ಕುರಿತು ಕೇಳಬೇಕು ಅಂದುಕೊಂಡಿದ್ದೇವೆ. ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಅಂತಾ ಹೇಳಿದ್ದಾರೆ.

    ಇನ್ನೊಂದೆಡೆ ಹೆಚ್.ಡಿ ಕುಮಾರಸ್ವಾಮಿ (H D Kumaraswamy) ಕುರಿತು ಮಾತನಾಡಿ, ನೀವು ಕೇಂದ್ರ ಸಚಿವರಾಗಿ ಕೆಲಸ ಮಾಡುತ್ತಿದ್ದೀರಿ. ನೀವು ಕೇಂದ್ರದ ಕೆಲಸ ಮಾಡಿ, ಎನ್‌ಡಿಎ (NDA) ಪರ ದೇಶ ಸುತ್ತಿ ಕೆಲಸ ಮಾಡಿ. ನೀವು ಮೋದಿ ಜತೆ ಸೇರಿ ಕೆಲಸ ಮಾಡಿ. ಬೆಳಗ್ಗೆ ಒಂದು ಹೇಳಿಕೆ ಕೊಡುತ್ತಾರೆ. ಅದಕ್ಕೆ ನೀವು ರಿಪ್ಲೈ ಕೊಡಬೇಕು ಈ ರೀತಿ ಮಾಡಿ ನಿಮ್ಮನ್ನು ಡೈವರ್ಟ್ ಮಾಡುತ್ತಾರೆ. ನಿಮ್ಮನ್ನು ಟ್ರ್ಯಾಪ್ ಮಾಡಲು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ (D K Shivakumar) ಈ ರೀತಿ ಮಾಡ್ತಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ನಾವು ನೋಡಿಕೊಳ್ಳುತ್ತೇವೆ. ಪಾದಯಾತ್ರೆಯಲ್ಲಿ ಬರೀ ಅವರ ಆಸ್ತಿ ಇವರ ಆಸ್ತಿ ಬಗ್ಗೆ ಅಷ್ಟೇ ಚರ್ಚೆಯಾಯಿತು. ಅವರ ಹೇಳಿಕೆಗಳಿಗೆ ರಿಯಾಕ್ಟ್ ನೀವು ಮಾಡಬೇಡಿ ಅಂತಾ ಸಲಹೆ ಕೊಟ್ಟಿದ್ದಾರೆ.ಇದನ್ನೂ ಓದಿ: ರಾಜ್ಯಪಾಲರು ಸರ್ಕಾರದ ವಿರುದ್ಧ ಇರೋದು ಸ್ಪಷ್ಟ – ಪರಮೇಶ್ವರ್ ಆರೋಪ

    ಇದೇ ವೇಳೆ ಡಿಕೆಶಿ ವಿರುದ್ಧ ಮಾತನಾಡಿ, ನೀರಿನ ತೆರಿಗೆ ವಿಚಾರದಲ್ಲಿ ಡಿಕೆಶಿ ಬೆಂಗಳೂರಿಗರ ಮೇಲೆ ಸಿಟ್ಟು ತೋರಿಸಿದ್ದಾರೆ. ನಿಮಗೆ ಯಾಕೆ ಅಷ್ಟೊಂದು ಸಿಟ್ಟು? ಹೆಚ್ಚು ತೆರಿಗೆ ಕಟ್ಟಲು ಬೆಂಗಳೂರು ಆಗ ಬೇಕು.. ಈಗ ಬೇಡ್ವಾ? ಬೆಂಗಳೂರಿಗೆ ನೀವು ಏಕೆ ಬೇಕು? ಬೆಂಗಳೂರಿಗೆ ನಿಮ್ಮ ಕೊಡುಗೆ ಏನು? ಡಿಸಿಎಂ ಅವರು ಬೆಂಗಳೂರಿಗರ ಮೇಲೆ ಗದಾಪ್ರಹಾರ ಮಾಡಿದ್ದಾರೆ. ಇಲ್ಲಿಯವರ ಬಗ್ಗೆ ನೀವು ಮಾತನಾಡಿದ್ದು ಅಪರಾಧ. ಡಿಕೆಶಿ ಅವರೇ ನಮ್ಮ ನಗರದ ಜನರ ಪರವಾಗಿ ನಾವು ರಾಜೀನಾಮೆ ಕೊಡಿ ಎಂದು ಕೇಳ್ತಾ ಇದ್ದೀವಿ. ಯೋಗ್ಯತೆ ಇರೋರು ಬರಲಿ ಎಂದು ಆಗ್ರಹಿಸಿದ್ದಾರೆ.

  • ಸಿದ್ದರಾಮಯ್ಯರನ್ನ ಮುಟ್ಟಲು ನಿಮ್ಮ ಹಣೆಯಲ್ಲೂ ಬರೆದಿಲ್ಲ – ಡಿಕೆಶಿ ವಾರ್ನಿಂಗ್‌

    ಸಿದ್ದರಾಮಯ್ಯರನ್ನ ಮುಟ್ಟಲು ನಿಮ್ಮ ಹಣೆಯಲ್ಲೂ ಬರೆದಿಲ್ಲ – ಡಿಕೆಶಿ ವಾರ್ನಿಂಗ್‌

    – ಸಿಎಂ ಬೆನ್ನಿಗೆ ನಿಂತ ಕೈ ನಾಯಕರು; ಮೈತ್ರಿಕೂಟದ ವಿರುದ್ಧ ಕೌಂಟರ್‌ ಅಟ್ಯಾಕ್‌
    – ಡಿಕೆಶಿ ಭಾಷಣದ ವೇಳೆ ʻಗೃಹಲಕ್ಷ್ಮಿʼ ಬರ್ತಿಲ್ಲ, ಬರ್ತಿಲ್ಲ ಅಂತ ಘೋಷಣೆ

    ಮಂಡ್ಯ: ಬಿಜೆಪಿ-ಜೆಡಿಎಸ್‌ ಪಾದಯಾತ್ರೆಗೆ (BJP JDS Padayatra) ಕೌಂಟರ್‌ ಕೊಡಲು ಇಂದಿನಿಂದ (ಆ.5) ಎರಡು ದಿನಗಳ ಕಾಲ ಕಾಂಗ್ರೆಸ್‌ ಜನಾಂದೋಲನ ಆರಂಭಿಸಿದೆ. ಮದ್ದೂರು ತಾಲೂಕು ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಜನಾಂದೋಲನ ಸಮಾವೇಶ ಮೊದಲ ದಿನ ಕಾಂಗ್ರೆಸ್‌ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪರ ಬ್ಯಾಟ್‌ ಬೀಸಿದ್ದಾರೆ. ಅಲ್ಲದೇ ಬಿಜೆಪಿ – ಜೆಡಿಎಸ್‌ ಮೈತ್ರಿಕೂಟದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

    ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ಭಾಷಣ ಮಾಡುತ್ತಾ, ಸಿದ್ದರಾಮಯ್ಯ ಏನು ಮಾಡಬಾರದ ತಪ್ಪು ಮಾಡಿದ್ದಾರೆ? ಸಿದ್ದರಾಮಯ್ಯ ಕಳ್ಳತನ ಮಾಡಿದ್ದಾರ? ಸರ್ಕಾರಿ ಜಮೀನು ಒಡೆದಿದ್ದಾರ? ಸರ್ಕಾರ ಪಡೆದು ಬೇರೆ ಜಾಗ ಕೊಟ್ಟಿದೆ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಂಜಯ್‌ ಲೀಲಾ ಬನ್ಸಾಲಿ ಚಿತ್ರದಲ್ಲಿ ನನ್ನಂತಹ ನಟರ ಅಗತ್ಯವಿಲ್ಲ: ಮನೋಜ್‌ ಬಾಜಪೇಯಿ

    ನಿಮ್ಮ (ಬಿಜೆಪಿ) ಸರ್ಕಾರದಲ್ಲಾದ ಹಗರಣಗಳ ಬಗ್ಗೆ ಮೊದಲು ಉತ್ತರ ಕೊಡಿ. ಆನಂತರ ಪಾದಯಾತ್ರೆ ಮಾಡಿ. ಸಿದ್ದರಾಮಯ್ಯರನ್ನ ಮುಟ್ಟಲು ನಿಮ್ಮ ಹಣೆಯಲ್ಲೂ ಬರೆದಿಲ್ಲ. ಹಿಂದುಳಿದ ವರ್ಗದ ನಾಯಕ 2ನೇ ಬಾರಿಗೆ ಸಿಎಂ ಆಗಿದ್ದು ನಿಮಗೆ ಸಹಿಸಲು ಆಗ್ತಿಲ್ಲ. ಸರ್ಕಾರ ಮಾಡುವ ಅವಕಾಶ ನಮಗೆ ಸಿಗಲಿಲ್ಲ ಎಂದು ಸಾಯುತ್ತಿದ್ದಾರೆ ಎಂದು ಬಿಜೆಪಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೋಚಿಂಗ್‌ ಸೆಂಟರ್‌ಗಳು ಡೆತ್‌ ಚೇಂಬರ್‌ಗಳಾಗಿ ಮಾರ್ಪಟ್ಟಿವೆ – ಸುಪ್ರೀಂ ಚಾಟಿ

    ಗೃಹಲಕ್ಷ್ಮಿ ಯೋಜನೆ ಹಣ ಬರ್ತಿಲ್ಲ, ಬರ್ತಿಲ್ಲ:
    ಮದ್ದೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಜನಾಂದೋಲನ ಸಮಾವೇಶದಲ್ಲಿ, ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳನ್ನು ಪ್ರಸ್ತಾಪಿಸಿ ಡಿಕೆಶಿ ಭಾಷಣ ಮಾಡುತ್ತಿದ್ದರು. ಈ ವೇಳೆ ಈ ವೇಳೆ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಬರ್ತಿದೆಯೋ – ಇಲ್ವೋ? ಎಂದು ಪ್ರಶ್ನಿಸಿದಾಗ ಗೃಹಲಕ್ಷ್ಮಿ ಯೋಜನೆ ಹಣ ಬರ್ತಿಲ್ಲ, ಬರ್ತಿಲ್ಲ ಎಂದು ಮಹಿಳೆಯರು ಕೂಗಿದ ದೃಶ್ಯವೂ ಕಂಡುಬಂದಿತು. ತಕ್ಷಣ ಎಚ್ಚೆತ್ತ ಡಿಕೆಶಿ, ಬರುತ್ತೆ ಬರುತ್ತೆ ಎಂದು ಸಮಾಧಾನಪಡಿಸಿದರು.

    ಮುಂದುವರಿದು ಮಾತನಾಡುತ್ತಾ, ಒಂದು, ಎರಡು ತಿಂಗಳದ್ದು ಬಂದಿಲ್ಲ. ಅನುದಾನ ಬಿಡುಗಡೆಯಾಗಿದೆ ಶೀಘ್ರವೇ ಬರಲಿದೆ. ವಿದ್ಯುತ್ ಬಿಲ್ ಉಚಿತ ಜೀರೋ ಬರ್ತಿಲ್ವಾ? ನಮ್ಮದು 10 ತಿಂಗಳ ಸರ್ಕಾರ ಅಲ್ಲ. 10 ವರ್ಷದ ಸರ್ಕಾರ ನಮ್ಮದು ಎಂದು ಹೆಚ್‌ಡಿಕೆಗೆ ಟಾಂಗ್‌ ನೀಡಿದರು. ಇದನ್ನೂ ಓದಿ: Valmiki Scam | 3 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ – ನಾಗೇಂದ್ರ, ದದ್ದಲ್‌ ಹೆಸರಿಲ್ಲ