Tag: ಮುಜಾಫರ್ ನಗರ್

  • 6 ತಿಂಗ್ಳು ಅತ್ಯಾಚಾರ- ಗರ್ಭಿಣಿ ಅಂದಾಕ್ಷಣ ಗರ್ಭಪಾತ ಮಾಡ್ಸು ಅಂತ ಪೀಡಿಸ್ದ!

    6 ತಿಂಗ್ಳು ಅತ್ಯಾಚಾರ- ಗರ್ಭಿಣಿ ಅಂದಾಕ್ಷಣ ಗರ್ಭಪಾತ ಮಾಡ್ಸು ಅಂತ ಪೀಡಿಸ್ದ!

    ಮುಜಾಫರ್ ನಗರ್: 6 ತಿಂಗಳು ನಿರಂತರವಾಗಿ ಅತ್ಯಾಚಾರವೆಸಗಿ ಆಕೆ ಗರ್ಭಿಣಿಯಾಗಿದ್ದು ತಿಳಿಯುತ್ತಿದ್ದಂತೆಯೇ ಗರ್ಭಪಾತ ಮಾಡಿಸಿಕೊಳ್ಳಲು ಒತ್ತಾಯ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಶೋಯಿಬ್ 24 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ಅದರ ವಿಡಿಯೋ ಕೂಡ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶೋಯಬ್ ಯುವತಿಯನ್ನು 6 ತಿಂಗಳು ನಿರಂತರವಾಗಿ ಅತ್ಯಾಚಾರ ಮಾಡಿದ್ದಲ್ಲದೇ ಆಕೆ ಗರ್ಭಿಣಿ ಎಂದು ತಿಳಿದ ತಕ್ಷಣವೇ ಗರ್ಭಪಾತ ಮಾಡಿಸುವಂತೆ ಒತ್ತಾಯ ಮಾಡಿದ್ದಾನೆ. ಈತನೊಂದಿಗೆ ಈತನ ಪೋಷಕರು ಕೂಡ ಸೇರಿ ಯುವತಿಗೆ ಗರ್ಭಪಾತ ಮಾಡಿಸುವಂತೆ ಬೆದರಿಸಿದ್ದಾರೆ ಅಂತ ಪೊಲೀಸ್ ಅಧಿಕಾರಿ ಹರೀಶ್ ಭದೋರಿಯಾ ಹೇಳಿದ್ದಾರೆ.

    ಶೋಯಿಬ್ ಹಾಗೂ ಆತನ ಪೋಷಕರ ಬೆದರಿಕೆಯಿಂದ ಹೆದರಿದ ಯುವತಿ ಈ ವಿಚಾರವನ್ನು ತನ್ನ ಮನೆಯವರಿಗೆ ತಿಳಿಸಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಯುವತಿಯ ಪೋಷಕರು ಶೋಯಿಬ್ ಹಾಗೂ ಆತನ ತಂದೆ ಬದ್ರು ಹಸನ್, ತಾಯಿ ನಗ್ಮಾ ಹಾಗೂ ಆತನ ಸಹೋದರ ಆರಿಫ್ ವಿರುದ್ಧ ದೂರು ದಾಖಲಿಸಿದ್ದಾರೆ.

    ಯುವತಿ ಹಾಗೂ ಆಕೆಯ ಪೋಷಕರ ದೂರು ಸ್ವೀಕರಿಸಿದ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews