Tag: ಮುಜಾಫರ್ಪುರ್

  • ಮಾಟಗಾತಿಯರೆಂದು ಮೂವರು ಮಹಿಳೆಯರ ತಲೆ ಬೋಳಿಸಿದ ಜನ

    ಮಾಟಗಾತಿಯರೆಂದು ಮೂವರು ಮಹಿಳೆಯರ ತಲೆ ಬೋಳಿಸಿದ ಜನ

    – ಗ್ರಾಮದಲ್ಲಿ ಅರೆಬೆತ್ತಲಾಗಿ ಮಹಿಳೆಯರ ಮೆರವಣಿಗೆ
    – 9 ಜನರನ್ನ ಬಂಧಿಸಿದ ಪೊಲೀಸ್

    ಪಾಟ್ನಾ: ಮಾಟಗಾತಿಯರೆಂದು ತಿಳಿದು ಒಂದೇ ಕುಟುಂಬದ ಮೂವರು ಮಹಿಳೆಯರ ತಲೆ ಬೋಳಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.

    ಪಾಟ್ನಾದಿಂದ 80 ಕಿ.ಮೀ ದೂರದಲ್ಲಿರುವ ಮುಜಾಫರ್ಪುರ್ ಜಿಲ್ಲೆಯ ಹಮ್ಮರಿ ಸಮೀಪ ಡಕ್ರಾಮ ಎಂಬ ಹಳ್ಳಿಯಲ್ಲಿ ಘಟನೆ ನಡೆಸಿದೆ. ಮಹಿಳೆಯರನ್ನು ಮಾಟಗಾತಿಯರೆಂದು ತಿಳಿದ ಜನರು ಅವರ ಕೂದಲನ್ನು ಕತ್ತರಿಸಿದ್ದಾರೆ. ನಂತರ ಅರೆಬೆತ್ತಲಾಗಿ ಮಹಿಳೆಯರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ಕೆಲವು ದಿನಗಳ ಹಿಂದೆ ಗ್ರಾಮದಲ್ಲಿ ಎರಡು ನವಜಾತ ಶಿಶುಗಳು ಸಾವನ್ನಪ್ಪಿದ್ದವು. ಈ ಮೂವರು ಮಹಿಳೆಯರೇ ಶಿಶುಗಳ ಸಾವಿಗೆ ಕಾರಣ ಎಂದು ಗ್ರಾಮಸ್ಥರು ತಿಳಿದಿದ್ದರು. ಹೀಗಾಗಿ ಕೆಲವರು ಅವರನ್ನು ಮಾಟಗಾತಿ ಎಂದು ಕರೆದರು. ಗ್ರಾಮದ ಕೆಲ ಮುಖಂಡರು ಸೇರಿ ಮಹಿಳೆಯರಿಗೆ ಪಾಠ ಕಲಿಸುವ ಚರ್ಚೆ ನಡೆಸಿದರು. ಸೋಮವಾರ ಮಹಿಳೆಯರನ್ನು ಹಿಡಿದು ಎಳೆದಾಡಿದ ಗ್ರಾಮಸ್ಥರು ಸಾರ್ವಜನಿಕ ಪ್ರದೇಶದಲ್ಲಿ ಅವರನ್ನು ಕೂರಿಸಿ ತಲೆ ಬೋಳಿಸಿದ್ದಾರೆ.

    ಈ ದೃಶ್ಯವನ್ನು ಸ್ಥಳದಲ್ಲಿ ಕೆಲವರು ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಿಡಿಯೋ ವೈರಲ್ ಆದ ನಂತರ ಆ ಪ್ರದೇಶದಲ್ಲಿ ಕೋಲಾಹಲ ಉಂಟಾಯಿತು. ಇತ್ತ ಘಟನೆಯಿಂದ ಭಯಗೊಂದ ಮೂವರು ಮಹಿಳೆಯರು ಕುಟುಂಬದವರೊಂದಿಗೆ ಗ್ರಾಮವನ್ನು ತೊರೆದಿದ್ದರು. ಹೀಗಾಗಿ ಸಂತ್ರಸ್ತರು ನೀಡದೆ ಪ್ರಕರಣ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಮ್ಮರಿ ಪೊಲೀಸ್ ಠಾಣೆಯ ಅಧಿಕಾರಿ ಜಿತೇಂದ್ರ ದೇವ್ ದೀಪಕ್ ಹೇಳಿದರು.

    ಈ ವಿಷಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗುತ್ತಿದ್ದಂತೆ ಎಡಿಜಿ ಜಿತೇಂದ್ರ ಕುಮಾರ್ ಎಚ್ಚೆತ್ತುಕೊಂಡರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಬೇಕು ಎಂದು ಸಿಬ್ಬಂದಿಗೆ ಸೂಚನೆ ನೀಡಿದರು. ಅದರಂತೆ 15 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈ ಪೈಕಿ 9 ಜನರನ್ನು ಬಂಧಿಸಲಾಗಿದೆ.