Tag: ಮುಗುಳು ನಗೆ

  • ಗಣಿ, ಭಟ್ರ ಜೋಡಿ, ತೆರೆ ಮೇಲೆ ಮೋಡಿ: ಚಿತ್ರಮಂದಿರಗಳು ಹೌಸ್ ಫುಲ್

    ಗಣಿ, ಭಟ್ರ ಜೋಡಿ, ತೆರೆ ಮೇಲೆ ಮೋಡಿ: ಚಿತ್ರಮಂದಿರಗಳು ಹೌಸ್ ಫುಲ್

    ಬೆಂಗಳೂರು : ವಿಶೇಷ ಕಥಾರಚನ ಕೌಶಲ್ಯ ತಮ್ಮ ಡೈಲಾಗ್, ಸಾಂಗ್ ಹೀಗೆ ಎಲ್ಲವುದರಲ್ಲಿಯೂ ಹೆಸರು ಮಾಡಿದವರು ಖ್ಯಾತ ನಿರ್ದೇಶಕ ಯೋಗರಾಜ್ ಭಟ್. ಇದೀಗ ‘ಮುಗುಳುನಗೆ’ ಚಿತ್ರದ ಮೂಲಕ ಮತ್ತೊಮ್ಮೆ ರಾಜ್ಯಾದ್ಯಂತ ಮುಗುಳುನಗೆ ಬೀರುತ್ತಿದ್ದಾರೆ. ಮುಂಗಾರುಮಳೆ ಚಿತ್ರದ ನಂತರ ದಶಕಗಳೇ ಕಳೆದು ಮತ್ತೊಮ್ಮೆ ಒಂದಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ರ ಜೋಡಿ ತೆರೆ ಮೇಲೆ ಮೋಡಿ ಮಾಡಿದೆ.

    ಇದೀಗ ಚಿತ್ರ ಬಿಡುಗಡೆಯಾಗಿ ಕೆಲವೇ ದಿನಗಳಷ್ಟೇ ಸಂದಿರುವಾಗ ಚಿತ್ರಮಂದಿರಗಳಲ್ಲಿ ಸಿನಿರಸಿಕರು ತುಂಬಿ ತುಳುಕುತ್ತಿರುವುದು ಚಿತ್ರತಂಡಕ್ಕೆ ಅತೀವ ಸಂತಸ ತಂದಿದೆ. ರಾಜ್ಯದ ಎಲ್ಲಾ ಚಿತ್ರಮಂದಿರಗಳೂ ಹೌಸ್ ಫುಲ್ ಆಗುತ್ತಿದ್ದು, ಗಣೇಶ್ ರವರ ಪ್ರಬುದ್ಧ ನಟನೆ ಹಿರಿಕಿರಿಯರೆನ್ನದೇ ಎಲ್ಲರನ್ನೂ ಮೋಡಿ ಮಾಡುತ್ತಿದೆ.

    ಸಾಮಾನ್ಯವಾಗಿ ಮನೆಯ ಧಾರಾವಾಹಿಗಳಿಗೆ ಸ್ಟಿಕ್ ಆಗಿರುವ ಮಹಿಳಾಮಣಿಗಳು ‘ಮುಗುಳುನಗೆ’ಯ ಝಲಕ್ ನೋಡಲು ಅರ್ಧ ಚಿತ್ರಮಂದಿರವನ್ನು ತುಂಬುತ್ತಿರುವುದು ಚಿತ್ರ ನಿರ್ಮಾಣ ಮಾಡಿದ ಸೈಯದ್ ಸಲಾಂ ರವರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.

    ಚಿತ್ರದ ‘ಹೊಡಿ ಒಂಬತ್ತು’ ಹಾಡೊಂದೇ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಎರಡು ಲಕ್ಷ ವ್ಯೂವ್ಸ್ ಪಡೆದು ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಇದೀಗ ಕೇವಲ ಒಂದು ತಿಂಗಳಿನಲ್ಲಿ5 ಲಕ್ಷ ವ್ಯೂವ್ ಗಳನ್ನು ದಾಟಿದೆ. ಚಿತ್ರದ ಇನ್ನಿತರ ಹಾಡುಗಳೂ ಜನಮನ ಸೂರೆಗೊಂಡಿದೆ. ವಿ.ಹರಿಕೃಷ್ಣ ಸಂಗೀತ ನೀಡಿರುವ ಚಿತ್ರದ ಹಾಡುಗಳಿಗಾಗಿಯೇ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಮುಗಿಬೀಳುತ್ತಿರುವ ದೃಶ್ಯ ಎಲ್ಲೆಡೆ ಸರ್ವೇಸಾಮಾನ್ಯವಾಗಿದೆ.

    ಹಾಗಾಗಿ ಜಾಕ್ ಮಂಜುರವರ ಮೈಸೂರು ಟಾಕೀಸ್ ಸಂಸ್ಥೆ ವಿತರಿಸುತ್ತಿರುವ ಈ ಚಿತ್ರ ಯಶಸ್ವೀ 25ನೇ ದಿನದತ್ತ ಮುನ್ನುಗ್ಗುತ್ತಿದ್ದು, ಚಿತ್ರ ನೂರು ಮೀರಿದ ದಿನಗಳನ್ನು ಕಾಣುವಂತಾಗಲಿ ಎನ್ನುವುದು ಕನ್ನಡ ಸಿನಿರಸಿಕರ ಹಾಗೂ ಗಣೇಶ್ ಅಭಿಮಾನಿಗಳ ಆಶಯವಾಗಿದೆ.

     

     

  • ಇಲ್ಲಿದೆ `ಮುಗುಳು ನಗೆ’ಯ ನಗುವಿನ ರಹಸ್ಯ-ಈ ಪಾತ್ರಗಳಲ್ಲಿ ಕಾಣಿಸಲಿದ್ದಾರೆ ನಾಲ್ವರು ನಾಯಕಿಯರು

    ಇಲ್ಲಿದೆ `ಮುಗುಳು ನಗೆ’ಯ ನಗುವಿನ ರಹಸ್ಯ-ಈ ಪಾತ್ರಗಳಲ್ಲಿ ಕಾಣಿಸಲಿದ್ದಾರೆ ನಾಲ್ವರು ನಾಯಕಿಯರು

    ಬೆಂಗಳೂರು: ಹತ್ತು ವರ್ಷಗಳ ನಂತರ ಸ್ಯಾಂಡಲ್‍ವುಡ್ ಹಿಟ್ ಜೋಡಿ ಗಣೇಶ್ ಮತ್ತು ಯೋಗರಾಜ್ ಭಟ್ರು ಒಂದಾಗಿದ್ದು, ಸಿನಿರಸಿಕರನ್ನು ಮುಗುಳ್ನಗೆಯಲ್ಲಿ ತೇಲಿಸಲು ಶುಕ್ರವಾರ ನಿಮ್ಮ ಮುಂದೆ ಬರಲಿದ್ದಾರೆ. ಈಗಾಗಲೇ ಗಣೇಶ್ ತಮ್ಮ ಮುಗುಳ್ನಗೆ ಮೂಲಕ ಅಭಿಮಾನಿಗಳನ್ನ ಸಿನಿಮಾದೆಡೆ ಸೆಳೆಯಲು ಯಶಸ್ವಿಯಾಗಿದ್ದಾರೆ.

    ಗಣೇಶ್ ಮುಗುಳು ನಗೆಯಲ್ಲಿ ಒಟ್ಟು ನಾಲ್ಕು ನಾಯಕಿಯರ ನಗು ಸಹ ಸೇರಿಕೊಂಡಿದೆ. ಗಣೇಶರೊಂದಿಗೆ ಆಶಿಕಾ, ನಿಖಿತಾ, ಅಮೂಲ್ಯ ಮತ್ತು ಅಪೂರ್ವ ಅರೋರಾ ಹಿತವಾದ ನಗು ನಿಮ್ಮನ್ನು ಸೆಳೆಯಲಿದೆ. ಸಿನಿಮಾದ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಗಣೇಶ್ ಸ್ಕ್ರಿಪ್ಟ್ ನ ಕೆಲವೊಂದು ಡೈಲಾಗ್ ಗಳನ್ನು ಮಾರ್ಕ್ ಮಾಡಿಕೊಟ್ಟಿದ್ದಾರೆ ಅಂತಾ ಹೇಳಲಾಗುತ್ತಿದೆ. ಈ ಹಿಂದೆ ಗಣೇಶ್ ಮುಂಗಾರು ಮಳೆಯ ಸಿನಿಮಾದಲ್ಲಿಯೂ ಕೆಲವೊಂದು ಡೈಲಾಗ್ ಗಳನ್ನು ಮಾರ್ಕ್ ಮಾಡಿದ್ದರು.

    ಹೀಗೆ ಕಾಣಿಸಲಿದ್ದಾರೆ ನಾಯಕಿಯರು:
    1. ಆಶಿಕಾ: ಮೈಸೂರಿನ ಹುಡುಗಿಯಾಗಿ ಆಶಿಕಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂಜಿನಿಯರಿಂಗ್ ಅಥವಾ ಪದವಿ ಮುಗಿದಾಗ ಉಂಟಾಗುವ ಲವ್ ಮತ್ತು ಭಾವನೆಗಳನ್ನು ಮರೆಮಾಚುವ ಚೆಂದದ ಹುಡುಗಿಯಾಗಿ ಆಶಿಕಾ ಬಣ್ಣ ಹಚ್ಚಿದ್ದಾರೆ.

    2. ನಿಖಿತಾ: ಪ್ರಬುದ್ಧತೆಯನ್ನು ಹೊಂದಿರುವ ಹುಡುಗಿಯಾಗಿ ನಿಖಿತಾ ಮಿಂಚಿದ್ದಾರೆ. ಜೀವನವನ್ನು ಶಿಸ್ತುಬದ್ಧ ಮತ್ತು ಕೆಲವೊಂದು ತನ್ನದೇ ಕಂಡೀಷನ್ ಗಳ ನಡೆಸಬೇಕು ಎಂದು ನಂಬಿರುವ ಮಾಡರ್ನ್ ಥಾಟ್ ಹೊಂದಿರುವ ಹುಡುಗಿ.

    3. ಅಮೂಲ್ಯ: ಇಲ್ಲಿ ಅಮೂಲ್ಯ ಮಧ್ಯಮ ವರ್ಗದಲ್ಲಿ ಬೆಳೆದ ಸುಂದರ ಹುಡುಗಿ. ನಾಯಕನೂ ಸಹ ಮಧ್ಯಮ ವರ್ಗದವನಾಗಿರುತ್ತಾನೆ. ಹಾಗೆಯೇ ಇಬ್ಬರ ನಡುವೆ ಉಂಟಾಗುವ ತೊಂದರೆ ಮತ್ತು ಅವುಗಳಿಂದ ಹೊರ ಬರಲು ಪ್ರಯತ್ನಿಸುವ ಪಾತ್ರವನ್ನು ಅಮೂಲ್ಯ ನಿರ್ವಹಿಸಿದ್ದಾರೆ.

    4. ಅಪೂರ್ವ ಅರೋರಾ: ಗ್ರಾಮೀಣ ಸೊಗಡಿನ, ಮುದ್ದಾದ ಮುಗ್ಧ ಹುಡುಗಿ ಅಪೂರ್ವ. ಗ್ರಾಮದಲ್ಲಿ ಹುಟ್ಟಿದ ಹುಡುಗಿ, ಬೇರೆ ಜಗತ್ತಿನ ಬಗ್ಗೆ ಅಷ್ಟಾಗಿ ತಿಳುವಳಿಕೆಯನ್ನು ಹೊಂದಿರುವ ಸಾದಾ ಸೀದಾ ಹಳ್ಳಿಯ ಚೆಲುವೆಯಾಗಿ ಅಪೂರ್ವ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅಪೂರ್ವರ ಕುಂದಾಪುರ ಶೈಲಿಯ ಕನ್ನಡ ಭಾಷೆ ನಿಮಗೆ ಖಂಡಿತಾ ಇಷ್ಟವಾಗುತ್ತದೆ.

    ಸಿನಿಮಾ ಕಹಾನಿ: ಕಣ್ಣಲ್ಲಿ ಒಂದು ಹನಿ ಕಣ್ಣೀರು ಬರದ ಹುಡುಗನ ಜೀವನದಲ್ಲಿ ನಾಲ್ಕು ವಿಭಿನ್ನ ಹುಡುಗಿಯರು ಬಂದು ಹೋಗುತ್ತಾರೆ. ಈ ನಾಲ್ವರು ಹುಡುಗನ ಕಣ್ಣಲ್ಲಿ ಕಣ್ಣೀರು ತರಿಸುವ ಪ್ರಯತ್ನವನ್ನು ನಡೆಸುವ ಕಥೆಯನ್ನು ಸಿನಿಮಾ ಒಳಗೊಂಡಿದೆ.

    ಈ ಹಿಂದೆ ಮುಂಗಾರು ಮಳೆ ಸಿನಿಮಾ ಬಿಡುಗಡೆಗೊಂಡಾಗ ಅದು ಒಂದು ಟ್ರೆಂಡ್ ಸೃಷ್ಟಿ ಮಾಡಿತ್ತು. ಅಂದು ಆ ಟ್ರೆಂಡ್ ಸೃಷ್ಟಿ ಮಾಡಿದ್ದ ಜೋಡಿ 10 ವರ್ಷಗಳ ಬಳಿಕ ಒಂದಾಗಿದೆ. ಹಾಗಾಗಿ ಭಟ್ರು ಮತ್ತು ನನಗೆ ಹೆಚ್ಚಿನ ಜವಬ್ದಾರಿ ಇದೆ ಎಂದು ನಟ ಗಣೇಶ್ ಹೇಳಿದರು.

    ಹರಿಕೃಷ್ಣರ 100ನೇ ಸಿನಿಮಾ: ಚಿತ್ರ ಒಟ್ಟು 8 ಹಾಡುಗಳನ್ನು ಹೊಂದಿದ್ದು, ಪ್ರತಿಯೊಂದು ಹಾಡು ಒಂದು ವಿಷಯವನ್ನು ಒಳಗೊಂಡಿದೆ. ಎಲ್ಲ ಹಾಡುಗಳು ಚೆನ್ನಾಗಿ ಮೂಡಿಬಂದಿದೆ. 5 ಮುಖ್ಯ ಹಾಡುಗಳು, 3 ಹಾಡುಗಳು ಸಂದರ್ಭಕ್ಕೆ ತಕ್ಕಂತೆ ಸಿನಿಮಾದಲ್ಲಿ ಬರಲಿವೆ. ಇದು ಹರಿಕೃಷ್ಣರ ನೂರನೇ ಸಿನಿಮಾದ ಸಂಗೀತ ಸಂಯೋಜನೆಯನ್ನು ಹೊಂದಿದೆ. ಅವರ ಪರಿಶ್ರಮವಿಲ್ಲದ ಈ ಹಾಡುಗಳು ಹಿಟ್ ಆಗಲು ಸಾಧ್ಯವಿರಲಿಲ್ಲ ಎಂದು ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದರು.

    ಮುಗುಳು ನಗೆ ಚಿತ್ರ ಎಸ್.ಎಸ್.ಫಿಲಂಸ್, ಗೋಲ್ಡನ್ ಮೂವೀಸ್ ಮತ್ತು ಯೋಗರಾಜ್ ಸಿನಿಮಾಸ್ ಬ್ಯಾನರ್‍ಗಳಲ್ಲಿ ನಿರ್ಮಾಣವಾಗಿದ್ದು, ಸೈಯದ್ ಸಲಾಂ ಚಿತ್ರವನ್ನು ನಿರ್ಮಿಸಿದ್ದಾರೆ. ಇನ್ನೂ ಸಿನಿಮಾದ ವಿಶೇಷ ಪಾತ್ರದಲ್ಲಿ ನಿರ್ಮಾಪಕ ಸೈಯದ್ ಸಲಾಂ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ.

  • ಹುಡುಗಿಯನ್ನ ತಬ್ಬಿಕೊಂಡಾಗ ಹೇಗಾಯ್ತು ಎಂಬುದನ್ನು ಗಣೇಶ್ ಹೀಗೆ ಹೇಳ್ತಾರೆ ನೋಡಿ

    ಹುಡುಗಿಯನ್ನ ತಬ್ಬಿಕೊಂಡಾಗ ಹೇಗಾಯ್ತು ಎಂಬುದನ್ನು ಗಣೇಶ್ ಹೀಗೆ ಹೇಳ್ತಾರೆ ನೋಡಿ

    ಬೆಂಗಳೂರು: ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ `ಮುಗುಳು ನಗೆ’ಯ ಟ್ರೇಲರ್ ಬಿಡುಗಡೆಗೊಂಡಿದ್ದು, ನೋಡುಗರನ್ನು ಮತ್ತೊಮ್ಮೆ ಮುಂಗಾರು ಮಳೆಯ ಲೋಕಕ್ಕೆ ಕರೆದುಕೊಂಡು ಹೋಗುವ ಪಥವನ್ನು ತೋರಿಸುತ್ತಿದೆ.

    ಹೌದು. ಡೈಲಾಗ್ ಗಳಿಂದಲೇ ಗೆದ್ದ ಮುಂಗಾರುಮಳೆ ಸಿನಿಮಾದಲ್ಲಿ ಈ ಚಿತ್ರದಲ್ಲೂ ಡೈಲಾಗ್ ಗಳಿಗೆ ಕೊರತೆ ಇಲ್ಲ ಎನ್ನುವಂತೆ ಟ್ರೇಲರ್ ಮೂಡಿಬಂದಿದೆ. “ತಬ್ಕೊಂಡಾಗ ಬಿಟ್ಟಾಂಗಾಯ್ತು..ಬಿಟ್ಟಾಗ ತಬ್ಕೊಂಡಗಾಯ್ತು..ಸೂರ್ಯ ತಂಪ ತಂಪಗೆ ಕಾಣಿಸ್ತಾಯಿದ್ದಾ.. ಚಂದ್ರ ಹೀಟ್ ಆದಹಾಗೆ ಕಾಣಿಸ್ತು.. ಒಂದು ದೊಡ್ಡ ಕಥೆ, ಇನ್ನೊಂದು ಪುಟ್ಟ ಕಥೆ…” ಎನ್ನುವ ಡೈಲಾಗ್ ಮುಗುಳುನಗೆಯಲ್ಲಿದೆ.

    ಸಿನಿಮಾದಲ್ಲಿ ಗಣೇಶ್‍ಗೆ ನಾಯಕಿಯರಾಗಿ ಅಮೂಲ್ಯ, ಆಶಿಕಾ, ಅಪೂರ್ವ ಅರೋರಾ ಮತ್ತು ನಿಖಿತಾ ನಾರಾಯಣ್ ಕಾಣಿಸಿಕೊಂಡಿದ್ದು, ಭಾವನಾ ವಿಶೇಷ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ದಶಕಗಳ ಹಿಂದೆ ಮುಂಗಾರು ಮಳೆ ಮತ್ತು ಗಾಳಿಪಟ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಗಣೇಶ್-ಯೋಗರಾಜ್ ಭಟ್ ಜೋಡಿ ಒಂದಾಗಿದ್ದು, ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ.

    ಚಿತ್ರ ಯುವ ಮನಸ್ಸುಗಳ ನಡುವಿನ ಪ್ರೀತಿ-ಪ್ರೇಮದ ಕಥಾ ಹಂದರವನ್ನು ಒಳಗೊಂಡಿದ್ದು, ಯುವ ಮನಸ್ಸುಗಳ ಪ್ರೇಮ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಕಾಲೇಜನಲ್ಲಿ ಉಂಟಾಗುವ ಪ್ರೀತಿ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಬದಲಾಗುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬಹುದಾಗಿದೆ.

    ಮುಗುಳು ನಗೆ ಚಿತ್ರವನ್ನು ಎಸ್.ಎಸ್.ಫಿಲಂಸ್, ಗೋಲ್ಡನ್ ಮೂವೀಸ್ ಮತ್ತು ಯೋಗರಾಜ್ ಸಿನಿಮಾಸ್ ಬ್ಯಾನರ್‍ಗಳಲ್ಲಿ ನಿರ್ಮಾಣವಾಗಿದ್ದು, ಸೈಯದ್ ಸಲಾಂ ಚಿತ್ರವನ್ನು ನಿರ್ಮಿಸಿದ್ದಾರೆ. ಮುಗುಳು ನಗೆಯ ಹಾಡುಗಳು ಈಗಾಗಲೇ ಜನರ ಮೆಚ್ಚುಗೆಯನ್ನು ಪಡೆದುಕೊಂಡಿವೆ.

    https://www.youtube.com/watch?v=x1cHJWz8M6U

  • ಹೊಸ ಲುಕ್‍ನಲ್ಲಿ ಗೋಲ್ಡನ್ ಸ್ಟಾರ್ ‘ಮುಗುಳು ನಗೆ’

    ಹೊಸ ಲುಕ್‍ನಲ್ಲಿ ಗೋಲ್ಡನ್ ಸ್ಟಾರ್ ‘ಮುಗುಳು ನಗೆ’

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ‘ಮುಗುಳುನಗೆ’ಯಲ್ಲಿ ಹೊಸ ಲುಕ್‍ನಿಂದ ಗಮನ ಸೆಳೆಯುತ್ತಿದ್ದಾರೆ. ಫಸ್ಟ್ ಟೈಂ ಗಣೇಶ್ ವಿಭಿನ್ನ ಹೇರ್ ಸ್ಟೈಲ್‍ನಲ್ಲಿ ಕಾಣಿಸಿಕೊಳ್ತಿದ್ದಾರೆ.

    ಇದೊಂದು ಟ್ರೆಂಡಿ ಹೇರ್ ಸ್ಟೈಲ್ ಆಗಿದ್ದು ಈ ಲುಕ್ ಅವ್ರ ಮುಂದಿನ ಚಿತ್ರ ಮುಗುಳು ನಗೆಯಲ್ಲಿ ನೋಡಬಹುದು. ಇತ್ತೀಚೆಗೆ ಸ್ಟಾರ್ ನಟರು ಪ್ರತಿಯೊಂದು ಸಿನಿಮಾಕ್ಕೂ ಹೇರ್ ಸ್ಟೈಲ್ ಬದಲಾಯಿಸೋ ಪದ್ಧತಿ ಜಾರಿಯಲ್ಲಿದೆ. ಆದ್ರೆ ಗಣೇಶ್ ಹೆಚ್ಚಾಗಿ ಹೇರ್ ಸ್ಟೈಲ್ ಮೇಲೆ ಪ್ರಯೋಗ ಮಾಡ್ತಿರಲಿಲ್ಲ. ಇದೀಗ ಫಸ್ಟ್ ಟೈಂ ಇಂಥದ್ದೊಂದು ಲುಕ್‍ನಲ್ಲಿ ಗಣೇಶ್ ಕಾಣಿಸಿಕೊಡು ಆಶ್ಚರ್ಯ ಮೂಡಿಸಿದ್ದಾರೆ.

    ಇತ್ತೀಚೆಗೆ ಬಿಡುಗಡೆಯಾದ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ಸುದೀಪ್ ತಮ್ಮ ವಿಭಿನ್ನ ಹೇರ್ ಸ್ಟೈಲ್ ಮೂಲಕ ಗಮನ ಸೆಳೆದಿದ್ದರು. ಸುದೀಪ್ ಅಭಿಮಾನಿಗಳಂತೂ ಇದೇ ಹೇರ್ ಸ್ಟೈಲ್ ಮಾಡಿಸಿಕೊಂಡು ಕಿಚ್ಚ ಸುದೀಪ್ ಮೇಲಿನ ಅಭಿಮಾನವನ್ನು ಮೆರೆದಿದ್ದರು

     

  • ಡಬ್ಬಿಂಗ್ ವಿರೋಧಿಗಳಿಗೆ ಚಾಟಿ ಬೀಸಿದ ನಟ ಜಗ್ಗೇಶ್

    ಡಬ್ಬಿಂಗ್ ವಿರೋಧಿಗಳಿಗೆ ಚಾಟಿ ಬೀಸಿದ ನಟ ಜಗ್ಗೇಶ್

    ಬೆಂಗಳೂರು: ನವರಸ ನಾಯಕ ಜಗ್ಗೇಶ್ ಡಬ್ಬಿಂಗ್ ವಿಚಾರದ ಬಗ್ಗೆ ಮತ್ತೆ ಗುಡುಗಿದ್ದಾರೆ.

    ಜೆಪಿನಗರದ ದೊಡ್ಡ ಪಬ್‍ನಲ್ಲಿ ಮುಗುಳು ನಗೆ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ನಿರ್ದೇಶಕ ಯೋಗರಾಜ್ ಭಟ್, ನವರಸ ನಾಯಕ ಜಗ್ಗೇಶ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಒಟ್ಟಿಗೆ ಸೇರಿದ್ರು. ಸೆಟ್‍ನಲ್ಲಿ ಸಖತ್ ಮಸ್ತ್ ಮಜಾ ಮಾಡ್ತಿದ್ದ ಸಿನಿಮಾ ತಂಡ ಪಬ್ಲಿಕ್ ಟಿವಿ ಜೊತೆ ಮಾತಿಗೆ ಇಳೀತು. ಈ ವೇಳೆ ಜಗ್ಗೇಶ್ ಸ್ಯಾಂಡಲ್‍ವುಡ್‍ನಲ್ಲಿ ನಡೆಯುತ್ತಿರುವ ಡಬ್ಬಿಂಗ್ ವಿಚಾರವಾಗಿ ಸ್ವಲ್ಪ ಗರಂ ಆದ್ರು.

    ಡಬ್ಬಿಂಗ್ ವಿಚಾರದಲ್ಲಿ ಜಗ್ಗೇಶ್ ಧ್ವನಿ ಎತ್ತಿದ್ದಕ್ಕೆ ಕೆಲವರು ಅವರ ಬಗ್ಗೆ, ಅವರ ವೈಯುಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರಂತೆ. ಇದರಿಂದ ಕುಪಿತರಾದ ಜಗ್ಗೇಶ್, ಹಿಂದೆ ಮಾತನಾಡುವ ಮಂದಿಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.

    ಏನೇನ್ ನಡೆಯುತ್ತೆ ನಡೆಯಲಿ. ಶಾರದೆ ನನಗೆ ಎಲ್ಲವನ್ನೂ ಕೊಟ್ಟಿದ್ದಾಳೆ. ನನ್ನ ಉದ್ದೇಶ ಈ ಉದ್ಯಮ ಉಳಿಯಲಿ ಅನ್ನೋದು ಅಷ್ಟೆ. ಇದನ್ನ ಮಧ್ಯದಲ್ಲಿ ಯಾರ್ಯಾರೋ ಅವರ ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ. ಅವರ ಬೆನ್ನ ಹಿಂದೆ ತುಂಬಾ ದೊಡ್ಡ ತಲೆಗಳಿವೆ. ನನ್ನ ರಾಜಕೀಯದ ಬಗ್ಗೆ ಎಲ್ಲಾ ಮಾತನಾಡ್ತಿದ್ದಾರೆ. ಈ ರಾಜ್ಯಕ್ಕೇ ಉತ್ತರ ಕೊಟ್ಟಿದ್ದೇನೆ. ಚಿಕ್ಕ ಚಿಕ್ಕ ಹುಡುಗರಿಗೆಲ್ಲಾ ನಾನು ಈ ಮೆಸೇಜ್ ಹೇಳೋಕೆ ಹೋಗಲ್ಲ. ಅವರೆಲ್ಲಾ ತೃಣಕ್ಕೆ ಸಮಾನ ಅಂದ್ರು.

    ಒಟ್ನಲ್ಲಿ ಮುಗುಳು ನಗೆ ಸೆಟ್ ಗೆ ಭೇಟಿ ಕೊಟ್ಟಿದ್ದರಿಂದ ಡಬ್ಬಿಂಗ್ ಬಗ್ಗೆ ಜಗ್ಗೇಶ್ ತನ್ನ ಮನದಾಳವನ್ನು ಹೇಳಿಕೊಂಡ್ರು. ಮುಂದಿನ ದಿನಗಳಲ್ಲಿ ಡಬ್ಬಿಂಗ್ ವಿಚಾರ ಯಾವ ಟರ್ನ್ ಪಡೆಯುತ್ತೆ ಕಾದು ನೋಡ್ಬೇಕು.