Tag: ಮುಗಿಲುಪೇಟೆ ಸಿನಿಮಾ

  • ರವಿಚಂದ್ರನ್ ಪುತ್ರ ಮನೋರಂಜನ್ ಮದುವೆಗೆ ವಿಶಿಷ್ಟ ಪತ್ರಿಕೆ ಇಲ್ಲಿದೆ

    ರವಿಚಂದ್ರನ್ ಪುತ್ರ ಮನೋರಂಜನ್ ಮದುವೆಗೆ ವಿಶಿಷ್ಟ ಪತ್ರಿಕೆ ಇಲ್ಲಿದೆ

    ಸ್ಯಾಂಡಲ್‌ವುಡ್ ಕನಸುಗಾರ ರವಿಚಂದ್ರನ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮದುವೆಯ ದಿಬ್ಬಣ ಹೊರಡಲು ದಿನಗಣನೆ ಶುರುವಾಗಿದೆ. ಕ್ರೇಜಿಸ್ಟಾರ್ ಹಿರಿಯ ಮಗ ಮನೋರಂಜನ್ ಮದುವೆ ಕೌಂಟ್‌ಡೌನ್ ಶುರುವಾಗಿದ್ದು, ಮದುವೆಯ ವಿಶಿಷ್ಟ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

    ಮನೋರಂಜನ್ ಕೂಡ ಸಾಕಷ್ಟು ಸಿನಿಮಾಗಳ ಮೂಲಕ ಚಂದನವನದಲ್ಲಿ ಗಮನ ಸೆಳೆದಿದ್ದಾರೆ. ಈಗ ತಮ್ಮ ವಯಕ್ತಿಕ ಬದುಕಿನ ವಿಚಾರವಾಗಿ ಸೌಂಡ್ ಮಾಡ್ತಿದ್ದಾರೆ. ಮನೋರಂಜನ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸದ್ಯ ಮದುವೆಯ ಇನ್ವಿಟೇಶನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪತ್ರಿಕೆಯಲ್ಲಿ ರವಿಚಂದ್ರನ್ ಅವರ ಫೋಟೋ ಇರುವುದು ಹೈಲೆಟ್ ಆಗಿದೆ.ʻಮುಗಿಲುಪೇಟೆʼ ನಟ ಮನು, ಸಂಗೀತಾ ದೀಪಕ್ ಅವರ ಜತೆ ಹಸೆಮಣೆ ಏರುತ್ತಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ವೈಟ್ ಪೆಟಲ್ಸ್‌ನಲ್ಲಿ ವಿವಾಹ ಸಮಾರಂಭ ಜರುಗಲಿದೆ. ಆಗಸ್ಟ್ 20 ಮತ್ತು 21ರಂದು ಅದ್ದೂರಿಯಾಗಿ ಮದುವೆ ನಡೆಯಲಿದೆ. ಸ್ಯಾಂಡಲ್‌ವುಡ್ ಜತೆ ಪರಭಾಷಾ ಚಿತ್ರರಂಗದ ಸ್ಟಾರ್ಸ್‌ ದಂಡೇ ಈ ಮದುವೆಗೆ ಸಾಕ್ಷಿಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಎಲ್ಲೂ ವೀಕ್‌ ಆಗದ ನಾನು, ಅಪ್ಪು ನೋಡಲು ಹೋದಾಗ ತುಂಬಾ ವೀಕ್‌ ಆದೆ: ರವಿಚಂದ್ರನ್‌ ಭಾವುಕ

    ಎಲ್ಲೂ ವೀಕ್‌ ಆಗದ ನಾನು, ಅಪ್ಪು ನೋಡಲು ಹೋದಾಗ ತುಂಬಾ ವೀಕ್‌ ಆದೆ: ರವಿಚಂದ್ರನ್‌ ಭಾವುಕ

    ಬೆಂಗಳೂರು: ಅಪ್ಪು ನೋಡಲು ವಿಕ್ರಂ ಆಸ್ಪತ್ರೆಗೆ ಹೋಗುತ್ತಿದ್ದಾಗ ಬಹಳ ವೀಕ್‌ ಆದೆ ಎಂದು ಪುನೀತ್‌ ರಾಜ್‌ಕುಮಾರ್‌ ನೆನೆದು ಹಿರಿಯ ನಟ ರವಿಚಂದ್ರನ್‌ ಭಾವುಕರಾದರು.

    ಮುಗಿಲುಪೇಟೆ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೂ ನಾನು ಎಲ್ಲೂ ವೀಕ್‌ ಆಗಿರಲಿಲ್ಲ. ಆದರೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಡಬ್ಬಿಂಗ್‌ ಮಾಡಿ ಪುನೀತ್‌ ನೋಡಲು ವಿಕ್ರಮ್‌ ಆಸ್ಪತ್ರೆಗೆ ಹೋಗುತ್ತಿದ್ದಾಗ ಜೀವನದಲ್ಲಿ ಬಹಳ ವೀಕ್‌ ಆದೆ ಎಂದರು. ಇದನ್ನೂ ಓದಿ: ರಾಜ್‍ಕುಮಾರ್ ಕುಟುಂಬ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು: ಜಮೀರ್ ಪುತ್ರ ಝೈದ್ ಖಾನ್

    ನಾವು ಇರೋವರೆಗೂ ಅವರನ್ನು ಮರೆಯೊಲ್ಲ. ಆದರೆ ಈಗ ಅನ್ನಿಸ್ತಿದೆ ನಾವು ಸಾಯೋವರೆಗೂ ಆ ನೋವು ಮರೆಯೋಕಾಗಲ್ಲ ಅಂತ. ಅಪ್ಪು ಮಗುವಾಗಿ ಬಂದ ಮಗುವಾಗೇ ಹೋದ ಎಂದು ನೆನೆದು ರವಿಚಂದ್ರನ್‌ ಭಾವುಕರಾದರು. ಇದನ್ನೂ ಓದಿ: ರಾಜ್ ಕುಟುಂಬದಲ್ಲಿ 20-23 ವರ್ಷಕ್ಕೆ ಮತ್ತೊಬ್ಬ ಸೂಪರ್ ಸ್ಟಾರ್ ಹುಟ್ಟಿ ಬರ್ತಾನೆ: ಜಗ್ಗೇಶ್

    ಆವತ್ತು ನಾನು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಡಬ್ಬಿಂಗ್‌ನಲ್ಲಿದ್ದೆ. ಒಂದ್ಕಡೆ ತಾಯಿಗೆ ಹುಷಾರಿಲ್ಲ ಅಂತ ಫೋನ್ ಬರುತ್ತೆ. ಇನ್ನೊಂದ್ಕಡೆ ಅಪ್ಪು ಆಸ್ಪತ್ರೆ ಸೇರಿದ್ದಾರೆ ಅಂತ ಫೋನ್ ಬರುತ್ತೆ. ಆಗ ನನಗೆ ಏನ್ ಮಾಡ್ಲಿ ಗೊತ್ತಾಗ್ಲಿಲ್ಲ. ಹೆಂಡತಿಗೆ ಫೋನ್ ಮಾಡಿ ಹೇಳಿದೆ, ಅಮ್ಮನ್ನ ನೋಡ್ಕೊ ಅಂತ. ನಾನು ವಿಕ್ರಂ ಆಸ್ಪತ್ರೆಗೆ ಹೋದೆ. ಆಗ ನಾನು ವೀಕ್ ಆದೆ. ನನಗೆ ಹಿಂದಿನಿಂದಲೂ ರಾಜ್‌ಕುಮಾರ್ ಕುಟುಂಬ ತೀರಾ ಹತ್ತಿರದ್ದು. ಇನ್ನು ಏನೇನೋ ಸಾಧನೆ ಮಾಡ್ತಿದ್ದ ಅಪ್ಪು, ಆದರೆ ಹೀಗಾಗೋಯ್ತು ಎಂದು ದುಃಖಿಸಿದರು.