Tag: ಮುಖ್ಯೋಪಾಧ್ಯಾಯ

  • PUBLiC TV Impact; ಸರ್ಕಾರದ ಉಚಿತ ಪುಸ್ತಕಗಳು ಬೀದಿಪಾಲು – ಶಾಲಾ ಮುಖ್ಯೋಪಾಧ್ಯಾಯ ಅಮಾನತು

    PUBLiC TV Impact; ಸರ್ಕಾರದ ಉಚಿತ ಪುಸ್ತಕಗಳು ಬೀದಿಪಾಲು – ಶಾಲಾ ಮುಖ್ಯೋಪಾಧ್ಯಾಯ ಅಮಾನತು

    ವಿಜಯಪುರ: ತಾಲೂಕಿನ ಕನ್ನೂರು (Kannur) ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸರ್ಕಾರದ ಉಚಿತ ಪುಸ್ತಕಗಳನ್ನು ಬೀದಿಪಾಲು ಮಾಡಿ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯೋಪಾಧ್ಯಾಯರನ್ನು (Headmaster) ಅಮಾನತು ಮಾಡಲಾಗಿದೆ.

    ಘಟನೆಯ ಬಗ್ಗೆ ನಿಮ್ಮ ‘ಪಬ್ಲಿಕ್ ಟಿವಿ’ ವಿಸ್ತೃತ ವರದಿಯನ್ನು ಬಿತ್ತರಿಸಿತ್ತು. ವರದಿಯ 12 ಗಂಟೆಯಲ್ಲೇ ಶಾಲೆಯ ಮುಖ್ಯೋಪಾಧ್ಯಾಯ ವಿಜಯಕುಮಾರ ಅವತಾಡೆಯನ್ನು ಅಮಾನತು ಮಾಡಲು ಡಿಡಿಪಿಐ ಟಿಎಸ್ ಕೋಲಾರ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ನಿಯಂತ್ರಣಕ್ಕೆ ಬಂದ ಕಾಡ್ಗಿಚ್ಚು

    ಇನ್ನು ಪಬ್ಲಿಕ್ ಟಿವಿ ವರದಿ ಆಧರಿಸಿ ವಿಜಯಕುಮಾರ ಅಮಾನತು ಎಂದು ಆದೇಶದಲ್ಲಿ ನಮೂದಿಸಲಾಗಿದೆ. ನಿರ್ಲಕ್ಷತೆ ಹಾಗೂ ಕರ್ತವ್ಯಲೋಪ ಹಿನ್ನೆಲೆ ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಬೌಂಡರಿ ಚಚ್ಚಿ ಆರ್‌ಸಿಬಿ ಗೆಲುವು ಕಸಿದ 16ರ ಹುಡುಗಿ – ಯಾರು ಈ ಕಮಲಿನಿ? ಮುಂಬೈ 1.6 ಕೋಟಿ ನೀಡಿದ್ದು ಯಾಕೆ?

  • ಅತಿಥಿ ಶಿಕ್ಷಕಿ, ವಿದ್ಯಾರ್ಥಿನಿಯರಿಗೆ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳ

    ಅತಿಥಿ ಶಿಕ್ಷಕಿ, ವಿದ್ಯಾರ್ಥಿನಿಯರಿಗೆ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳ

    ಕಲಬುರಗಿ: ವಿದ್ಯಾರ್ಥಿನಿಯರು (Students) ಮತ್ತು ಅತಿಥಿ ಶಿಕ್ಷಕಿಗೆ (Teacher) ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ (Headmaster In Charge) ಲೈಂಗಿಕ ಕಿರುಕುಳ ನೀಡಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಸರ್ಕಾರಿ ಪ್ರೌಢ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಲೈಂಗಿಕ ಕಿರುಕುಳ ನೀಡುತ್ತಿದ್ದ. ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುವುದು, ಮೈ ಮುಟ್ಟುವುದು ಮಾಡುತ್ತಿದ್ದ. ನಾನು ನಿಮ್ಮ ಸೋದರ ಮಾವ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಹೇಳುತ್ತಿದ್ದ. ಅತಿಥಿ ಶಿಕ್ಷಕಿಗೂ ಆತ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಯುವಕನ ಮರ್ಡರ್ – ಮಹಾರಾಷ್ಟ್ರ ಮೂಲದ ಇಬ್ಬರು ಆರೋಪಿಗಳ ಬಂಧನ

    ಈ ಬಗ್ಗೆ ವಿದ್ಯಾರ್ಥಿನಿಯರು ಬಿಇಒಗೆ ದೂರು ನೀಡಿದ್ದರು. ಚಿತ್ತಾಪುರ ಬಿಇಒ ರಿಂದ ವಾಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸದ್ಯ ಆರೋಪಿ ಪ್ರಭಾರಿ ಮುಖ್ಯೋಪಾಧ್ಯಾಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಹುಡುಗಿಯರ ಕಡೆ ನೋಡಲ್ಲ, ಆಂಟಿಯರು ಸಿಕ್ರೆ ಬಿಡಲ್ಲ – ಬೆಂಗ್ಳೂರಿನಲ್ಲೊಬ್ಬ ಕಾಮುಕ ಟೆಕ್ಕಿ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ- ಮುಖ್ಯೋಪಾಧ್ಯಾಯನ ಬಂಧನ

    ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ- ಮುಖ್ಯೋಪಾಧ್ಯಾಯನ ಬಂಧನ

    ರಾಯಚೂರು: 10ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ (Sexual Harassment) ನೀಡುತ್ತಿದ್ದ ಸರ್ಕಾರಿ ಸ್ವಾಮ್ಯದ ಶಾಲೆಯೊಂದರ ಮುಖ್ಯೋಪಾಧ್ಯಾಯನನ್ನು (Headmaster) ಪೊಲೀಸರು ವಶಕ್ಕೆ ಪಡೆದ ಘಟನೆ ರಾಯಚೂರು (Raichur) ಜಿಲ್ಲೆಯಲ್ಲಿ ನಡೆದಿದೆ.

    ಶಾಲೆಯ ಮುಖ್ಯೋಪಾಧ್ಯಾಯ ವಿ.ಕೆ.ಅಂಗಡಿ ಈ ಪ್ರಕರಣದ ಆರೋಪಿಯಾಗಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರತಿದಿನ ಮೊಬೈಲ್ ಕರೆ ಮಾಡಿ ಹಾಗೂ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ವಿದ್ಯಾರ್ಥಿನಿ ಮೊಬೈಲ್ ಕಾಲ್ ರೆಕಾರ್ಡ್ ಹಾಗೂ ವಾಟ್ಸಾಪ್ ಮೆಸೇಜ್‌ಗಳಿಂದ ಕಾಮುಕ ಮುಖ್ಯೋಪಾಧ್ಯಾಯನ ಬಣ್ಣ ಬಯಲಾಗಿದೆ. ಇದನ್ನೂ ಓದಿ: ಹರಿಯಾಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಹೋದ್ಯೋಗಿಯ ಮೇಲೆ ಫೈರಿಂಗ್ 

    ಹೇಳಿದ ಹಾಗೆ ಕೇಳದಿದ್ದರೆ ಪರೀಕ್ಷೆ ಆದ ಮೇಲೆ ಏನಾಗುತ್ತದೆ ನೋಡು ಎಂದು ಮುಖ್ಯೋಪಾಧ್ಯಾಯ ಬೆದರಿಕೆ ಹಾಕಿದ್ದಾನೆ. ಅಲ್ಲದೇ ನಿನಗೆ ಒಳ್ಳೆಯ ಆಫರ್ (Offer) ಕೊಡುತ್ತೇನೆ. ನನ್ನ ಮನೆಗೆ ಒಂದು ಗಂಟೆ ಬಂದು ಹೋಗು ಎಂದು ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ. ಮುಖ್ಯೋಪಾಧ್ಯಾಯನ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮಾನವ ಹಕ್ಕುಗಳು (Human Rights) ಮತ್ತು ಭ್ರಷ್ಟಾಚಾರ ವಿರೋಧಿ ವೇದಿಕೆಗೂ (Anti-Corruption Forum) ದೂರು ಸಲ್ಲಿಸಿದ್ದಾಳೆ. ಇದನ್ನೂ ಓದಿ: ಹೋಗಿ ಓದಿಕೋ ಎಂದು ಗದರಿದ ತಂದೆ – 9ರ ಬಾಲಕಿ ನೇಣಿಗೆ ಶರಣು 

    ದೂರು ಹಿನ್ನೆಲೆ ಮುಖ್ಯೋಪಾಧ್ಯಾಯನನ್ನು ಪೊಲೀಸರು ವಶಕ್ಕೆ ಪಡೆಯಲು ಬಂದಿದ್ದಾರೆ. ಇದೇ ವೇಳೆ ಪೋಷಕರು ಹಾಗೂ ಸಾರ್ವಜನಿಕರು ಥಳಿಸಲು ಮುಂದಾದರು. ಆಕ್ರೋಶಗೊಂಡಿದ್ದ ಪೋಷಕರು ಆರೋಪಿಯನ್ನು ಬಂಧಿಸಿ ಕರೆದೊಯ್ಯುವ ವೇಳೆ ಮುಖ್ಯೋಪಾಧ್ಯಾಯನಿಗೆ ಕಪಾಳಮೋಕ್ಷ ಮಾಡಿದರು. ಆರೋಪಿ ವಿ.ಕೆ.ಅಂಗಡಿಯನ್ನು ವಶಕ್ಕೆ ಪಡೆದಿರುವ ಮಹಿಳಾ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಭಾರೀ ಸ್ಫೋಟ- ಪೊಲೀಸರಿಂದ ಶೋಧ

  • ನೀನು ಶಿಕ್ಷಕ ಅಲ್ಲ, ರಾಜಕಾರಣಿಯಂತೆ ಕಾಣುತ್ತೀಯ: ಕುರ್ತಾ, ಪೈಜಾಮಾ ಧರಿಸಿದ್ದಕ್ಕೆ ಮುಖ್ಯೋಪಾಧ್ಯಾನಿಗೆ ಡಿಎಂ ನಿಂದನೆ

    ನೀನು ಶಿಕ್ಷಕ ಅಲ್ಲ, ರಾಜಕಾರಣಿಯಂತೆ ಕಾಣುತ್ತೀಯ: ಕುರ್ತಾ, ಪೈಜಾಮಾ ಧರಿಸಿದ್ದಕ್ಕೆ ಮುಖ್ಯೋಪಾಧ್ಯಾನಿಗೆ ಡಿಎಂ ನಿಂದನೆ

    ಪಾಟ್ನಾ: ಶಾಲೆಯಲ್ಲಿ ಕುರ್ತಾ ಪೈಜಾಮಾ ಧರಿಸಿದ್ದಕ್ಕೆ ಶಾಲೆಯ ಮುಖ್ಯೋಪಾಧ್ಯಾಯನಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್(ಡಿಎಂ) ತರಾಟೆಗೆ ತೆಗೆದುಕೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಡಿಎಂ ಮುಖ್ಯೋಪಾಧ್ಯಾಯನಿಗೆ ನಿಂದಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದರೊಂದಿಗೆ, ಇದೀಗ ಶಿಕ್ಷಕರು ಭಾರತೀಯ ಉಡುಗೆ ಕುರ್ತಾ, ಪೈಜಾಮಾ ಧರಿಸುವುದು ಅಪರಾಧವೇ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಇದನ್ನೂ ಓದಿ: ಒಂದೇ ಆಟೋದಲ್ಲಿ 27 ಮಂದಿ ಪ್ರಯಾಣ- ದಿಗ್ಭ್ರಮೆಗೊಂಡ ಪೊಲೀಸರು

    ಬಿಹಾರದ ಲಖಿಸರಾಯ್ ಜಿಲ್ಲೆಯ ಡಿಎಂ ಸಂಜಯ್ ಕುಮಾರ್ ಸಿಂಗ್ ಅವರು, ಬಾಲಕಿಯರ ಪ್ರಾಥಮಿಕ ಶಾಲೆಯ ಬಾಲ್‌ಗುಡಾರ್ ಅವರನ್ನು ಕುರ್ತಾ, ಪೈಜಾಮ ಧರಿಸಿದ್ದಕ್ಕಾಗಿ ಗದರಿದ್ದಾರೆ. ನೀನು ಶಿಕ್ಷಕ ಅಲ್ಲ ರಾಜಕಾರಣಿಯಂತೆ ಕಾಣಿಸುತ್ತಿದ್ದೀಯ ಎಂದು ನಿಂದಿಸಿದ್ದಾರೆ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ನೋಡಲು ನೆರೆ ನೀರಿನಲ್ಲಿ ಈಜಿ ಬಂದ ಜನ

    ಸರ್ಕಾರದ ಆದೇಶದ ಮೇರೆಗೆ ಡಿಎಂ ಸಂಜಯ್ ಕುಮಾರ್ ಶಾಲೆಗೆ ತಪಾಸಣೆಗೆ ಬಂದಿದ್ದಾಗ ಮುಖ್ಯೋಪಾಧ್ಯಾಯರ ಉಡುಗೆ ಕಂಡು ಛೀಮಾರಿ ಹಾಕಿದ್ದಾರೆ. ಬಳಿಕ ಸ್ಥಳದಲ್ಲೇ ಅವರು ಶಿಕ್ಷಣಾಧಿಕಾರಿಗಳಿಗೆ ಕರೆ ಮಾಡಿ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸುವಂತೆ ಕೇಳಿದ್ದಾರೆ ಹಾಗೂ ವೇತನ ಕಡಿತಗೊಳಿಸಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿರಾಶ್ರಿತರ ಕೇಂದ್ರದ ಅಕ್ಕಿ ಅಕ್ರಮ ಸಂಗ್ರಹ: ರಾತ್ರೋರಾತ್ರಿ 60 ಕ್ವಿಂಟಾಲ್ ಅಕ್ಕಿ ಮಾಯ

    ನಿರಾಶ್ರಿತರ ಕೇಂದ್ರದ ಅಕ್ಕಿ ಅಕ್ರಮ ಸಂಗ್ರಹ: ರಾತ್ರೋರಾತ್ರಿ 60 ಕ್ವಿಂಟಾಲ್ ಅಕ್ಕಿ ಮಾಯ

    ರಾಯಚೂರು: ನೆರೆ ಹಾವಳಿ ಸಂದರ್ಭದಲ್ಲಿ ತೆರೆಯಲಾಗಿದ್ದ ನಿರಾಶ್ರಿತರ ಕೇಂದ್ರಗಳಲ್ಲಿ ಪ್ರವಾಹ ಸಂತ್ರಸ್ತರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿತ್ತು. ಪ್ರವಾಹ ಇಳಿದ ಬಳಿಕ ನಿರಾಶ್ರಿತರ ಕೇಂದ್ರಗಳಲ್ಲಿನ ದಾಸ್ತಾನು ಲೆಕ್ಕವನ್ನ ಕಂದಾಯ ಇಲಾಖೆ ಅಧಿಕಾರಿಗಳು ನೋಡಿಕೊಂಡಿದ್ದರು. ಇಷ್ಟಾದರೂ ಇಲ್ಲಿಯವರೆಗೆ ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಗಂಜಿ ಕೇಂದ್ರ ತೆರೆದಿದ್ದ ಕನ್ಯಾ ಸರ್ಕಾರಿ ಪ್ರೌಢಶಾಲೆಯಲ್ಲಿ 70 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದ್ದು ಅಕ್ರಮದ ವಾಸನೆ ಹರಡಿದೆ.

    ಶಾಲೆಯ ಮುಖ್ಯೋಪಾಧ್ಯಾಯ ವಿಜಯ್ ಕುಮಾರ್ ನಿರಾಶ್ರಿತರ ಕೇಂದ್ರದ ದಾಸ್ತಾನು ಸಂಪೂರ್ಣ ಖಾಲಿಯಾಗಿದೆ ಎಂದು ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ ಶಾಲೆಯಲ್ಲಿ ಉಳಿದಿದ್ದ ದಾಸ್ತಾನು ಬಿಸಿಯೂಟದ್ದು ಅಂತ ಹೇಳಿಕೊಂಡು ಬಂದಿದ್ದಾರೆ. ಸ್ಥಳೀಯರು ದಾಸ್ತಾನಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಳಿಕ ರಾತ್ರೋರಾತ್ರಿ 60 ಕ್ವಿಂಟಾಲ್ ಅಕ್ಕಿಯನ್ನ ಬೇರೆಡೆ ಸ್ಥಳಾಂತರಿಸಿ 10 ಕ್ವಿಂಟಾಲ್ ಮಾತ್ರ ಉಳಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ನಿರಾಶ್ರಿತರ ಕೇಂದ್ರಕ್ಕೆ ದಾನಿಗಳು ನೀಡಿದ ವಸ್ತುಗಳು ಸಹ ಇದೇ ರೀತಿ ದುರ್ಬಳಕೆಯಾಗಿವೆ. ಹೀಗಾಗಿ ಸೂಕ್ತ ತನಿಖೆ ನಡೆಸಿ ಮುಖ್ಯೋಪಾಧ್ಯಾಯ ವಿಜಯ್ ಕುಮಾರ್ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

  • ಪ್ರಿನ್ಸಿಪಾಲ್ ವರ್ಗಾವಣೆ ಖಂಡಿಸಿ ಶಾಲಾ ಮಕ್ಕಳಿಂದ ಪ್ರತಿಭಟನೆ

    ಪ್ರಿನ್ಸಿಪಾಲ್ ವರ್ಗಾವಣೆ ಖಂಡಿಸಿ ಶಾಲಾ ಮಕ್ಕಳಿಂದ ಪ್ರತಿಭಟನೆ

    ಹಾವೇರಿ: ಮುಖ್ಯೋಪಾಧ್ಯಾಯರ ವರ್ಗಾವಣೆಗೆ ವಿರೋಧಿಸಿ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಪ್ರತಿಭಟನೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರಕಾರಿ ಪ್ರೌಢಶಾಲೆ ಹೆಡ್ ಮಾಸ್ಟರ್ ಆಗಿ ಆರ್ ಮಂಜಪ್ಪ ಕಾರ್ಯನಿಹಿಸುತ್ತಿದ್ದರು. ಕಳೆದ ಆರು ವರ್ಷಗಳಿಂದ ಮಂಜಪ್ಪ ಶಾಲೆಯ ಅಭಿವೃದ್ಧಿಗಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದ್ರೆ ಇದೀಗ ಅವರು ಇಚ್ಚಂಗಿಯಿಂದ ಹಾವೇರಿಗೆ ವರ್ಗಾವಣೆಗೊಂಡಿದ್ದಾರೆ.

    ಈ ಹಿನ್ನೆಲೆಯಲ್ಲಿ ವರ್ಗಾವಣೆ ಖಂಡಿಸಿ ಶಾಲೆಗೆ ಬೀಗ ಹಾಕಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ದಾರೆ. ಹೆಡ್ ಮಾಸ್ಟರ್ ಮಂಜಪ್ಪರನ್ನು ಶಾಲೆಯಲ್ಲೇ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.

    ಈ ಘಟನೆ ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನು ಓದಿ: ಸರ್, ಪ್ಲೀಸ್ ನಮ್ಮನ್ನ ಬಿಟ್ಟು ಹೋಗ್ಬೇಡಿ- ಮಕ್ಕಳಿಂದ ಶಿಕ್ಷಕನಿಗೆ ಮುತ್ತಿಗೆ

  • ಹೊಸ ಸಮವಸ್ತ್ರಕ್ಕಾಗಿ ಅಳತೆ ತೆಗೆದುಕೊಳ್ಬೇಕೆಂದು 8ನೇ ಕ್ಲಾಸ್ ಬಾಲಕಿಯನ್ನ ವಿವಸ್ತ್ರಗೊಳಿಸಿದ ಪ್ರಿನ್ಸಿಪಾಲ್ ಬಂಧನ

    ಹೊಸ ಸಮವಸ್ತ್ರಕ್ಕಾಗಿ ಅಳತೆ ತೆಗೆದುಕೊಳ್ಬೇಕೆಂದು 8ನೇ ಕ್ಲಾಸ್ ಬಾಲಕಿಯನ್ನ ವಿವಸ್ತ್ರಗೊಳಿಸಿದ ಪ್ರಿನ್ಸಿಪಾಲ್ ಬಂಧನ

    ಲಕ್ನೋ: ಹೊಸ ಸಮವಸ್ತ್ರಕ್ಕಾಗಿ ಅಳತೆ ತೆಗೆದುಕೊಳ್ಳಬೇಕು ಎಂದು ಹೇಳಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯನೊಬ್ಬ 6ನೇ ತರಗತಿಯ ಬಾಲಕಿಯನ್ನ ವಿವಸ್ತ್ರಗೊಳಿಸಿ ಲೈಂಗಿಕ ಕಿರುಕುಳ ನೀಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಇಲ್ಲಿನ ಜಬಲ್‍ಪುರ್ ಕತ್ರಿ ಬಂಜರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯ ಪೋಷಕರು ಸದಾರ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮುಖ್ಯೋಪಾಧ್ಯಾಯನನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ.

    ಬಾಲಕಿಯ ತಂದೆ ದೂರು ನೀಡಿದ ಬಳಿಕ ಆರೋಪಿಯನ್ನ ಬಂಧಿಸಲಾಗಿದೆ ಎಂದು ಎಸ್‍ಪಿ ಕನೌಜ್ ಹರೀಶ್ ಚಂದ್ರ ಹೇಳಿದ್ದಾರೆ. ಮಂಗಳವಾರದಂದು ಬಾಲಕಿಯ ಪೋಷಕರು ಮುಖ್ಯೋಪಾಧ್ಯಾಯನ ವಿರುದ್ಧ ದೂರು ದಾಖಲಿಸಿದ್ದು, ಘಟನೆ ನಡೆದಾಗ ಬಾಲಕಿಯ ಜೊತೆ ಇದ್ದ ಶಾಲೆಯ ಇತರೆ ವಿದ್ಯಾರ್ಥಿನಿಯರು ಘಟನೆ ಬಗ್ಗೆ ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.

    ಪೊಲೀಸರು ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಂಡಿದ್ದು, ಆಕೆಯನ್ನ ವೈದ್ಯಕೀಯ ಪರೀಕ್ಷೆಗೆ ಕಳಿಸಿದ್ದಾರೆ.

  • ಪುಸ್ತಕದಲ್ಲಿ ಹಾಜರ್, ಶಾಲೆಗೆ ಚಕ್ಕರ್- ಕುಡಿದು ಊರೆಲ್ಲಾ ತೂರಾಡೋ ಹೆಡ್ ಮಾಸ್ಟರ್

    ಪುಸ್ತಕದಲ್ಲಿ ಹಾಜರ್, ಶಾಲೆಗೆ ಚಕ್ಕರ್- ಕುಡಿದು ಊರೆಲ್ಲಾ ತೂರಾಡೋ ಹೆಡ್ ಮಾಸ್ಟರ್

    ರಾಯಚೂರು: ಸೆಪ್ಟಂಬರ್ ತಿಂಗಳು ಅಂದ್ರೆ ಅದು ಶಿಕ್ಷಕರಿಗೆ ಮೀಸಲು. ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುವ ಉತ್ತಮ ಶಿಕ್ಷಕರನ್ನ ಗುರುತಿಸಿ ಇಡೀ ತಿಂಗಳು ಸನ್ಮಾನ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಆದರೆ ರಾಯಚೂರಿನ ಸಿಂಧನೂರು ತಾಲೂಕಿನಲ್ಲಿ ಶಿಕ್ಷಕ ಕಂ ಮುಖ್ಯೋಪಾಧ್ಯಾಯನೊಬ್ಬ ಶಾಲೆಗೆ ಬರದೇ ಕಂಠಪೂರ್ತಿ ಮದ್ಯ ಕುಡಿದು ಊರ ತುಂಬೆಲ್ಲಾ ತೂರಾಡುತ್ತಿರುತ್ತಾನೆ.

    ಸಿಂಧನೂರು ತಾಲೂಕಿನ ಮೀರಾಪುರ ಕ್ಯಾಂಪ್‍ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಾರುತಿ ರಾಠೋಡ್‍ನನ್ನ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ನಿತ್ಯ ಕುಡಿದು ಟೈಟಾಗಿ ಶಾಲೆ, ರಸ್ತೆ ಎಲ್ಲೆಂದರಲ್ಲಿ ಮಲಗಿರುತ್ತಾನೆ. ಮಕ್ಕಳಿಗೆ ಪಾಠ ಹೇಳಿ ಅವರ ಭವಿಷ್ಯ ನಿರ್ಮಿಸುವ ಜವಾಬ್ದಾರಿ ಹೊತ್ತಿರೋ ಶಿಕ್ಷಕ ಇವನು. ಶಾಲೆಯ ಮುಖ್ಯೋಪಾಧ್ಯಾಯ ಆಗಿರುವುದರಿಂದ ಮನಸ್ಸಿಗೆ ಬಂದಾಗ ಶಾಲೆಗೆ ಬಂದು ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಕುಡಿದು ಊರೆಲ್ಲಾ ತೂರಾಡಿಕೊಂಡಿರುತ್ತಾನೆ.

    ಮೇಷ್ಟ್ರು ಪಾಠ ಹೇಳ್ತಾರೆ ಅಂತ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ನಿತ್ಯವೂ ನಿರಾಸೆ. ಈ ಕುಡುಕ ಮೇಷ್ಟ್ರಿಗೆ ಟೈಮ್ ಟೇಬಲ್ ಇಲ್ಲ. ಹೀಗಾಗಿ ಶಾಲೆಯ ಎಲ್ಲಾ ಕೋಣೆಗಳಿಗೂ ಯಾವಾಗಲೂ ಬೀಗ ಜಡಿದಿರುತ್ತೆ. ಮಾರುತಿ ರಾಠೋಡ್ ಅವಾಂತರ ಇಷ್ಟಕ್ಕೆ ಮುಗಿದಿಲ್ಲ. ಇವನ ದುರ್ವರ್ತನೆಯಿಂದ ಸಂಬಳ ತಡೆ ಹಿಡಿದರೆ ಕುಡಿದ ಅಮಲಿನಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ಜಗಳ ಆಡುತ್ತಾನೆ.

    ಮುಖ್ಯೋಪಾಧ್ಯಾಯನ ವಿರುದ್ಧ ದೂರು ನೀಡಿ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಈಗ ಕ್ರಮಕ್ಕೆ ಮುಂದಾಗಿರುವ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಗೌಡ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಮೊದಲೇ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನ ಕಳುಹಿಸಲು ಪೋಷಕರು ಹಿಂಜರಿಯುತ್ತಿರುವ ಹೊತ್ತಲ್ಲಿ ಇಂತಹ ಶಿಕ್ಷಕರು ಇನ್ನಷ್ಟು ಬೇಸರ ಮೂಡಿಸುತ್ತಿದ್ದಾರೆ.

  • ಮಂಡ್ಯದಲ್ಲಿ ಮುಖ್ಯೋಪಾಧ್ಯಾಯರ ಕೊಲೆ ಪ್ರಕರಣ – ಹೆಂಡತಿ, ಮಗಳಿಂದಲೇ ಸುಪಾರಿ

    ಮಂಡ್ಯದಲ್ಲಿ ಮುಖ್ಯೋಪಾಧ್ಯಾಯರ ಕೊಲೆ ಪ್ರಕರಣ – ಹೆಂಡತಿ, ಮಗಳಿಂದಲೇ ಸುಪಾರಿ

    ಮಂಡ್ಯ: ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳು ಮತ್ತು ಹೆಂಡತಿಯನ್ನ ಪೊಲೀಸರು ಬಂಧಿಸಿದ್ದಾರೆ.

    ಮದ್ದೂರು ತಾಲೂಕಿನ ಬಿದರಹೊಸಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದ ಶಶಿಭೂಷಣ್‍ರನ್ನ ಮಾರ್ಚ್ 31 ರಂದು ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ಗ್ರಾಮದ ಬಳಿ ನಡುರಸ್ತೆಯಲ್ಲಿ ಶಶಿಭೂಷಣ್‍ರನ್ನ ಕೊಲೆ ಮಾಡಲಾಗಿತ್ತು. ಹಾಡಹಗಲೇ ನಡೆದ ಕೊಲೆಗೆ ಸಾರ್ವಜನಿಕರು ಬೆಚ್ಚಿಬಿದ್ದಿದ್ರು.

    ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇದೀಗ ಕೊಲೆಗೆ ಸುಪಾರಿ ನೀಡಿದ್ದ ಮಗಳು ನವ್ಯಶ್ರೀ ಮತ್ತು ಹೆಂಡತಿ ಶಾಂತಮ್ಮಳನ್ನ ಬಂಧಿಸಿದ್ದಾರೆ. ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ತಾಯಿ ಮತ್ತು ಮಗಳು ಐದು ಲಕ್ಷ ರೂಪಾಯಿ ಸುಪಾರಿ ನೀಡಿ ಶಶಿಭೂಷಣ್ ಕೊಲೆ ಮಾಡಿಸಿದ್ರು. ಕೊಲೆಗಾರರಿಗೆ ಶಶಿಭೂಷಣ್ ಫೋಟೋ, ಅವರು ದಿನವೂ ಸಂಚರಿಸುವ ರಸ್ತೆ ಮತ್ತು ಪಾಠ ಮಾಡುವ ಶಾಲೆಯ ಫೋಟೋವನ್ನ ತಾಯಿ-ಮಗಳು ವಾಟ್ಸಪ್‍ನಲ್ಲಿ ಕಳುಹಿಸಿಕೊಟ್ಟಿದ್ರು. 6 ತಿಂಗಳ ಹಿಂದೆ ಮಗಳು ಮನೆ ಬಿಟ್ಟು ಹೋಗಿ ವಾಪಸ್ ಬಂದ ನಂತರ ತಂದೆ ಮನೆಗೆ ಸೇರಿಸಿರಲಿಲ್ಲ. ಈ ವಿಚಾರವಾಗಿ ಮಗಳು ತಂದೆಯ ಮಧ್ಯೆ ಸಮಸ್ಯೆ ಇತ್ತು ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

                          

    ಶಶಿಭೂಷಣ್ ಪತ್ನಿ ಶಾಂತಮ್ಮ ಕೂಡ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ರು. ಇದೀಗ ಕೊಲೆಗೆ ಸುಪಾರಿ ನೀಡಿದ್ದ ತಾಯಿ ಮಗಳನ್ನ ಕೆಎಂ ದೊಡ್ಡಿ ಪೊಲೀಸರು ಬಂಧಿಸಿದ್ದು ಸುಪಾರಿ ಪಡೆದು ಕೊಲೆಗೈದ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

  • ಮಂಡ್ಯ: ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರ ಕತ್ತು ಕೊಯ್ದು ಬರ್ಬರ ಹತ್ಯೆ

    ಮಂಡ್ಯ: ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರ ಕತ್ತು ಕೊಯ್ದು ಬರ್ಬರ ಹತ್ಯೆ

    ಮಂಡ್ಯ: ಹಾಡ ಹಗಲೇ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರೊಬ್ಬರನ್ನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ, ಅರೆಚಾಕನಹಳ್ಳಿ ಬಳಿ ನಡೆದಿದೆ.

    ಬಿದರಹೊಸಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಶಶಿಭೂಷಣ್ ಕೊಲೆಯಾದ ದುರ್ದೈವಿ. ಎಂದಿನಂತೆ ಮಂಡ್ಯದಿಂದ ಶಶಿಭೂಷಣ್ ಕೆಲಸದ ನಿಮಿತ್ತ ಬೈಕ್‍ನಲ್ಲಿ ಹೊರಟಿದ್ದರು. ಈ ಸಂದರ್ಭ ಶಶಿಭೂಷಣ್ ಅವರನ್ನ ಕಾರ್‍ನಲ್ಲಿ ಫಾಲೋ ಮಾಡಿಕೊಂಡು ಬಂದ ದುಷ್ಕರ್ಮಿಗಳು, ಬೈಕ್‍ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಆಯ ತಪ್ಪಿ ಶಶಿಭೂಷಣ್ ಕೆಳಗೆ ಬಿದ್ದಿದ್ದಾರೆ. ತಕ್ಷಣ ಕಾರಿನಿಂದ ಕೆಳಗಿಳಿದ ದುಷ್ಕರ್ಮಿಗಳು, ಶಶಿಭೂಷಣ್ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಹಾಡ ಹಗಲೆ ನಡು ರಸ್ತೆಯಲ್ಲಿ ನಡೆದ ಸರ್ಕಾರಿ ಶಾಲೆಯ ಮುಖ್ಯೋಪಧ್ಯಾಯನ ಕೊಲೆ ನೋಡಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ವಿಷಯ ತಿಳಿದ ತಕ್ಷಣ ಕೆಎಂ ದೊಡ್ಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.