Tag: ಮುಖ್ಯಮಂತ್ರಿ ಸ್ಥಾನ

  • ಸಿಎಂ, ಡಿಎಸಿಎಂ ಹುದ್ದೆ ಕೇಳುವ ಹಕ್ಕು ಎಲ್ಲರಿಗೂ ಇದೆ: ಪ್ರಿಯಾಂಕ್ ಖರ್ಗೆ

    ಸಿಎಂ, ಡಿಎಸಿಎಂ ಹುದ್ದೆ ಕೇಳುವ ಹಕ್ಕು ಎಲ್ಲರಿಗೂ ಇದೆ: ಪ್ರಿಯಾಂಕ್ ಖರ್ಗೆ

    ಕಲಬುರಗಿ: ಸಿಎಂ, ಡಿಸಿಎಂ ಹುದ್ದೆ (CM, DCM Post) ಕೇಳುವ ಹಕ್ಕು ಎಲ್ಲರಿಗೂ ಇದೆ. ಆದ್ರೆ ಎಲ್ಲಿ ಕೇಳಬೇಕು, ಅಲ್ಲಿಯೇ ಕೇಳಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಹೇಳಿದ್ದಾರೆ.

    ಕಲಬುರಗಿಯಲ್ಲಿ (Kalaburagi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಹುದ್ದೆ ಕೇಳುವ ಹಕ್ಕು ಎಲ್ಲರಿಗೂ ಇದೆ. ಆದ್ರೆ ಎಲ್ಲಿ ಕೇಳಬೇಕು, ಅಲ್ಲೇ ಕೇಳಬೇಕು. ಮಾಧ್ಯಮಗಳ ಮುಂದೆ ಕೇಳಿದ್ರೆ ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ: `ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು’ – ಭಗವದ್ಗೀತೆಯ ಸಂದೇಶ ಹಂಚಿಕೊಂಡ ಅಖ್ತರ್

    ಬೀದಿಯಲ್ಲಿ ಬಂದು ಜಗಳ ಆಡೋದು ಸರಿಯಲ್ಲ, ನಮ್ಮ ಅಭಿಪ್ರಾಯವನ್ನ ಬೀದಿಯಲ್ಲಿ ಚರ್ಚೆ ಮಾಡೋದು ಸರಿಯಲ್ಲ. ಈ ರೀತಿ ನಾವು ಮಾತಾಡಿಕೊಂಡು ಹೋದ್ರೆ ನಮ್ಮ ಕಾರ್ಯಕರ್ತರಿಗೆ (Congress Workers) ಏನು ಸಂದೇಶ ಕೊಟ್ಟ ಹಾಗೆ ಆಗುತ್ತೆ? ಸಮುದಾಯದ ಹಿರಿಯರು, ನಾಯಕರಿರಬಹುದು ಎಲ್ಲರೂ ಹೈಕಮಾಂಡ್‌ ಬಳಿ ಕೇಳಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ರಾಹುಲ್‌ Vs ನರೇಂದ್ರ ಮೋದಿ – ಲೋಕಸಭೆಯಲ್ಲಿ ಗದ್ದಲಕ್ಕೆ ಕಾರಣವಾಯ್ತು ‘ಹಿಂದೂ’ ಹೇಳಿಕೆ

    ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾವ್ಯಾವ ಸಮುದಾಯದವರು ಎಷ್ಟೆಷ್ಟು ವೋಟ್ ಹಾಕಿದ್ದಾರೆ ಅಂತಾ ಗೋತ್ತು, ಕೆಲವು ಸಮುದಾಯದವರಿಗೆ ಮಠಗಳು ಸ್ವಾಮೀಜಿಗಳು ಇದ್ದಾರೆ. ಇನ್ನೂ ಕೆಲವು ಸಮುದಾಯಗಳು ಸ್ವಾಮೀಜಿಗಳು ಇಲ್ಲದವರು ನಮ್ಮ ಪರವಾಗಿ ಕೆಲಸ ಮಾಡ್ತಿದ್ದಾರೆ. ಆದ್ರೆ ಅವರು ಕೇಳ್ತಿಲ್ಲ. ಪ್ರಹ್ಲಾದ್ ಜೋಶಿ ಅವರು ಇದರ ಬಗ್ಗೆ ಮಾತನಾಡುವುದು ಬಿಟ್ಟು ಅವರ ಮನೆ ಬೆಂಕಿ ಆರಿಸಿಕೊಳ್ಳಲಿ ಎಂದು ಕುಟುಕಿದ್ದಾರೆ.

    ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಕುರಿತು ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ. ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಇಲ್ಲವೇ ಇಲ್ಲ ಅಂತ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಐಸಿಸಿ ಕನಸಿನ ತಂಡ ಪ್ರಕಟ – ಕೊಹ್ಲಿಗಿಲ್ಲ ಸ್ಥಾನ, ಪಟ್ಟಿಯಲ್ಲಿದ್ದಾರೆ 6 ಟೀಂ ಇಂಡಿಯಾ ಆಟಗಾರರು

  • ಡಿಕೆ ಶಿವಕುಮಾರ್‌ ಸಿಎಂ ಆಗ್ತಾರೆ – ಶಿವ ಯೋಗೇಶ್ವರ ಸ್ವಾಮೀಜಿ ಭವಿಷ್ಯ

    ಡಿಕೆ ಶಿವಕುಮಾರ್‌ ಸಿಎಂ ಆಗ್ತಾರೆ – ಶಿವ ಯೋಗೇಶ್ವರ ಸ್ವಾಮೀಜಿ ಭವಿಷ್ಯ

    ಮಂಡ್ಯ: ಡಿ.ಕೆ ಶಿವಕುಮಾರ್‌ (DK Sivakumar) ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗ್ತಾರೆ, ಅದಕ್ಕೆ ಎಲ್ಲಾ ಅವಕಾಶಗಳಿವೆ ಎಂದು ಶ್ರೀ ಕರಿವೃಷಭ ದೇಶಿಕೇಂದ್ರ ಶಿವ ಯೋಗೇಶ್ವರ ಸ್ವಾಮೀಜಿ (Shri Shiva Yogeshwara Swamiji) ಭವಿಷ್ಯ ನುಡಿದಿದ್ದಾರೆ.

    ಮಂಡ್ಯದ (Mandya) ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ನಡೆದ ಶ್ರೀ ಪಟ್ಟಲದಮ್ಮ ದೇವಿಯ ದೀಪೋತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್‌ ರಾಜ್ಯದ ಸಿಎಂ ಆಗ್ತಾರೆ ಎಂದು ಹೇಳಿದ್ದಾರೆ.

    ಸರ್ಕಾರ ಸಿಎಂ ಆಯ್ಕೆ ಮಾಡುವ ವಿಚಾರದಲ್ಲಿ ಮೀಸಲಾತಿ (Reservation) ಪ್ರಕಟಿಸುವುದು ಉತ್ತಮ ಅದು ಎಲ್ಲರಿಗೂ ಅನುಕೂಲವಾಗಲಿದೆ. ಎಲ್ಲಾ ಸಮುದಾಯಗಳು ಇನ್ನಷ್ಟು ಹೆಚ್ಚಾಗಿ ಸಂಘಟನೆಯಲ್ಲಿ ಬೆಳೆಯುವವರೆಗೆ ರಾಜಕೀಯದಲ್ಲಿಯೂ ಮೀಸಲಾತಿ ಕೊಟ್ಟು ಮುಂದುವರಿಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಮಣಿಪುರ ಹಿಂಸಾಚಾರದ ವೇಳೆ ಕರ್ತವ್ಯ ನಿರ್ವಹಿಸಿದ್ದ ಹಾಸನ ಜಿಲ್ಲೆಯ ಯೋಧ ಅನಾರೋಗ್ಯದಿಂದ ನಿಧನ

    ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ (Chief Minister) ಆಗುವ ಅವಕಾಶ ಇದೆ. ಶ್ರೀಮಠದ ಪರಮ ಭಕ್ತರಾಗಿದ್ದಾರೆ, ಅವರು ಮುಖ್ಯಮಂತ್ರಿ ಆಗಲಿ ಎಂಬುದು ನಮ್ಮ ಸಂಕಲ್ಪ ಕೂಡ ಆಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಮತ್ತೆ ಸಿಎಂ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

    ಇತ್ತೀಚೆಗಷ್ಟೇ ಮದ್ದೂರು ಶಾಸಕ‌ ಕದಲೂರು ಉದಯ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸಹ ಡಿಕೆಶಿ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದರು. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆ ಕಾವು – 14 ಸಂಘಟನೆಗಳಿಂದ ಸಾಲು ಸಾಲು ಧರಣಿ

  • ಸಿಎಂ ಕುರ್ಚಿ ಕಿತ್ತಾಟಕ್ಕೆ ಡಿಕೆ-ಸಿದ್ದು ಕದನ ವಿರಾಮ

    ಸಿಎಂ ಕುರ್ಚಿ ಕಿತ್ತಾಟಕ್ಕೆ ಡಿಕೆ-ಸಿದ್ದು ಕದನ ವಿರಾಮ

    ಬೆಂಗಳೂರು: ಸಿದ್ದರಾಮೋತ್ಸವ ಮುಗಿದಿದ್ದು, ಕಾಂಗ್ರೆಸ್‌ನಲ್ಲಿ ಇನ್ನೇನಿದ್ದರೂ ಒಗ್ಗಟ್ಟಿನ ಮಂತ್ರ ಪಠಿಸಬೇಕಿದೆ. ನಿನ್ನೆಯಷ್ಟೇ ಡಿಕೆಶಿ, ಸಿದ್ದರಾಮಯ್ಯರ ನಡುವೆ ಗುದ್ದಾಟ ಇಲ್ಲ ಎಂದು ಕಾರ್ಯಕರ್ತರ ಮುಂದೆ ಘೋಷಣೆ ಮಾಡಿದ್ದಾರೆ. ಹೀಗಿದ್ದೂ ಸಿದ್ದು ಬೆಂಬಲಿಗರು, ಡಿಕೆಶಿ ಬೆಂಬಲಿಗರ ನಡುವೆ ಮುಂದಿನ ಸಿಎಂ ಎಂಬ ನೇರ ಮಾತಿಗೆ ಕಡಿವಾಣ ಬಿದ್ದಿದ್ದೆಯೇ ಎಂಬುದು ಪ್ರಶ್ನೆಯಾಗಿದೆ. ಸದ್ಯ ರಾಜ್ಯ ಕಾಂಗ್ರೆಸ್ಸಿಗರ ನಡೆ ಇಂತಹದ್ದೊಂದು ಕುತೂಹಲಕ್ಕೆ ಕಾರಣವಾಗಿದೆ.

    ಸಿದ್ದರಾಮೋತ್ಸವ ಘೋಷಣೆ ಆಗುತ್ತಿದ್ದಂತೆ ಮುಂದಿನ ಸಿಎಂ ಗದ್ದಲ ಜೋರಾಗಿತ್ತು. ಆದರೆ ಸಿದ್ದರಾಮೋತ್ಸವದ ವೇದಿಕೆ ಮೇಲೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರು ಬಹಿರಂಗವಾಗಿಯೇ ಕದನ ವಿರಾಮ ಘೋಷಣೆ ಮಾಡಿ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ. ಇನ್ನು ಮುಂದೇಯೂ ಇದು ಮುಂದುವರಿಯುತ್ತಾ? ಸಿಎಂ ಜಗಳಕ್ಕೆ ತಾತ್ಕಾಲಿಕವಾಗಿಯಾದರೂ ಬ್ರೇಕ್ ಬೀಳುತ್ತಾ ಅನ್ನೋದೇ ಸದ್ಯದ ಕುತೂಹಲವಾಗಿದೆ. ಇದನ್ನೂ ಓದಿ: ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಅಪ್ಪು ನೆನಪಿನ ಫಲಪುಷ್ಪ ಪ್ರದರ್ಶನ

    ನಿನ್ನೆ ದಾವಣಗೆರೆಯಲ್ಲಿ ಅದ್ಧೂರಿಯಾಗಿ ಸಿದ್ದರಾಮೋತ್ಸವ ನಡೆದಿದೆ. ಸುಮಾರು 7 ಲಕ್ಷಕ್ಕೂ ಹೆಚ್ಚು ಸಿದ್ದು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್‌ಗೆ ಬಲ ತುಂಬಲು ಸಾಕ್ಷಿಯಾಗಿದ್ದಾರೆ. ಕಾರ್ಯಕ್ರಮ ಮುಗಿಸಿ ವಾಪಸ್ ಹೊರಟ ಜನರಿಂದ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಕಿಲೋಮೀಟರ್ ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

    ಕಾರ್ಯಕ್ರಮ ಮುಗಿದು 4-5 ಗಂಟೆಗಳೇ ಕಳೆದ್ರೂ ವಾಹನ ದಟ್ಟಣೆ ಕರಗಲು ಸುಮಾರು ಗಂಟೆಗಳೇ ಬೇಕಾಯ್ತು. ರಾತ್ರಿ ಸಿದ್ದರಾಮಯ್ಯ ಚಿತ್ರದುರ್ಗದ ಸಿರಿಗೆರೆ ತರಳಬಾಳು ಮಠಕ್ಕೆ ಭೇಟಿ ನೀಡಿದ್ರು. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದ್ರು. ಬಳಿಕ ಚಿತ್ರದುರ್ಗದ ಮುರುಘಾಮಠಕ್ಕೆ ಸಿದ್ಧರಾಮಯ್ಯ ಭೇಟಿ ನೀಡಿದ್ರು. ಈ ವೇಳೆ ಅನ್ನದಾತ ಸಿದ್ಧರಾಮಯ್ಯಗೆ ಜೈ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ರು. ಇದನ್ನೂ ಓದಿ: ವಿದ್ಯಾರ್ಥಿಯಿಂದ ಅವಾಚ್ಯ ಪೋಸ್ಟ್- ಕಾಲೇಜು ವೇದಿಕೆಯಲ್ಲೇ ಕಣ್ಣೀರಿಟ್ಟ ಸಾ.ರಾ ಮಹೇಶ್

    ಒಟ್ಟಿನಲ್ಲಿ ಸಿದ್ದರಾಮೋತ್ಸವ ಕಾಂಗ್ರೆಸ್‌ಗೆ ಬಲ ತುಂಬುವ ಜೊತೆಗೆ ಕಾಂಗ್ರೆಸ್ ವರ್ಚಸ್ಸನ್ನು ಹೆಚ್ಚಿಸಲು ಕಾರಣವಾಯಿತು ಎಂದು ಕಾಂಗ್ರೆಸ್ಸಿಗರ ನಂಬಿಕೆ. ಆದರೆ ಸಿದ್ದು-ಡಿಕೆಶಿ ನಡುವೆ ಮತ್ತೆ ಸಿಎಂ ಕುರ್ಚಿ ಕಿತ್ತಾಟಕ್ಕೆ ವಾಕ್ಸಮರ ಮುಂದುವರಿಯಲಿದೆಯೇ ಎಂಬುದೇ ಪ್ರಶ್ನೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಗ್ರಹಣದ ಎಫೆಕ್ಟ್ – ಎರಡು ದಿನ ಕೇರಳದಲ್ಲಿ ಸಿಎಂ ವಿಶೇಷ ಪೂಜೆ

    ಗ್ರಹಣದ ಎಫೆಕ್ಟ್ – ಎರಡು ದಿನ ಕೇರಳದಲ್ಲಿ ಸಿಎಂ ವಿಶೇಷ ಪೂಜೆ

    ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು ನಾಳೆ ಬೆಳಗ್ಗೆ ಕೇರಳಕ್ಕೆ ತೆರಳಲಿದ್ದು, ಮುಂದಿನ 2 ದಿನಗಳ ಕಾಲ ಅವರು ಕೇರಳದ ವಿಶೇಷ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

    ಪ್ರತಿ ವರ್ಷವೂ ಸಿಎಂ ಈ ಸಮಯದಲ್ಲಿ ಕೇರಳದ ಆನಂತಪದ್ಮನಾಭ ದೇವಾಯಲಕ್ಕೆ ಭೇಟಿ ನೀಡುತ್ತಾರೆ. ಇತ್ತಿಚೇಗಷ್ಟೇ ಸಿಎಂ ನಿವಾಸದಲ್ಲಿ ಹೋಮ ಹವನ ನಡೆಸಲಾಗಿತ್ತು. ಸಿಎಂ ಬಿಎಸ್‍ವೈ ಅವರ ಕುಟುಂಬಕ್ಕೆ ಆಪ್ತರಾಗಿರುವ ಅರ್ಚಕರ ಸಲಹೆ ಮೇರೆಗೆ ಕೇರಳಕ್ಕೆ ಭೇಟಿ ನೀಡುತ್ತಿದ್ದಾರೆ. ಡಿ.26 ರಂದು ಅಮಾವಾಸ್ಯೆ ಇದ್ದು, ಈ ಬಾರಿ ವೃಶ್ಚಿಕ ರಾಶಿ ಅವರು ಗ್ರಹಣ ದೋಷ ನಿವಾರಣೆಗೆ ವಿಶೇಷ ಹೋಮ ಹವನ ನಡೆಸುವ ಅನಿವಾರ್ಯತೆ ಇದೆ ಎನ್ನಲಾಗಿದೆ.

    ಸಿಎಂ ಅವರದ್ದು ವೃಶ್ಚಿಕ ರಾಶಿ ಆಗಿದ್ದು, ಕೆಲ ದಿನಗಳ ಹಿಂದೆ ನಿವಾಸದಲ್ಲಿ ಸುದರ್ಶನ ನರಸಿಂಹಯಾಗವನ್ನು ಮಾಡಿದ್ದರು. ಕೇರಳದಲ್ಲಿ ಮಾಡಲಿರುವ ವಿಶೇಷ ಪೂಜೆ, ಹೋಮಗಳ ಇದರ ಮುಂದುವರಿದ ಭಾಗ ಎನ್ನಲಾಗಿದೆ. 26ರ ನಂತರ ಗ್ರಹಣ ದೋಷ ಇರುವುದರಿಂದಲೂ ಸಿಎಂ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನಲಾಗಿದೆ.

    ವಿಶೇಷ ಸಂದರ್ಭದಲ್ಲಿ ಶತ್ರು ಸಂಹಾರಕ್ಕಾಗಿ ಸುದರ್ಶನ ನರಸಿಂಹ ಹೋಮವನ್ನು ಮಾಡಲಾಗುತ್ತದೆ. ಮುಂದಿನ 3 ವರ್ಷಗಳ ಕಾಲ ಸರ್ಕಾರ ಸುಸ್ಥಿರವಾಗಿ ನಡೆದುಕೊಂಡು ಹೋಗುವ ಉದ್ದೇಶದಿಂದ ಈ ವಿಶೇಷ ಪೂಜೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಈ ಪ್ರವಾಸದ ಸಂದರ್ಭದಲ್ಲಿ ಸಿಎಂ ಕುಟುಂಬ ಸದಸ್ಯರು ಹಾಗೂ ಆಪ್ತರಷ್ಟೇ ಸಾಥ್ ನೀಡಲಿದ್ದಾರೆ.

    ಸಾಮಾನ್ಯವಾಗಿ ಗ್ರಹಣ ಸಂದರ್ಭದಲ್ಲಿ ಉಂಟಾಗಬಹುದಾದ ದೋಷವನ್ನು ನಿವಾರಿಸಲು ಈ ವಿಶೇಷ ಪೂಜೆ ನಡೆಯಲಿದೆ. ಕೇರಳ ರಾಜರಾಜೇಶ್ವರ ದೇವಾಲಯ ಸೇರಿದಂತೆ ಪ್ರಮುಖ 4 ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಈ ಹಿಂದೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಆನೆಯನ್ನು ದಾನ ಮಾಡಿದ್ದರು. ಬಿಎಸ್‍ವೈ ಅವರು ಸಿಎಂ ಆಗುವ ಮುನ್ನವೂ ಈ ದೇವಾಲಯಗಳಿಗೆ ಭೇಟಿ ನೀಡಿ ರಾತ್ರಿ ಇಡೀ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭವನ್ನು ನೆನೆಯಬಹುದಾಗಿದೆ.

  • ಮಂತ್ರಿಗಿರಿ ಕೊಡದಿದ್ರೆ ಮುಖ್ಯಮಂತ್ರಿ ಸ್ಥಾನ ಕೊಡಲಿ: ಉಮೇಶ್ ಕತ್ತಿ ಹೊಸ ಬಾಂಬ್

    ಮಂತ್ರಿಗಿರಿ ಕೊಡದಿದ್ರೆ ಮುಖ್ಯಮಂತ್ರಿ ಸ್ಥಾನ ಕೊಡಲಿ: ಉಮೇಶ್ ಕತ್ತಿ ಹೊಸ ಬಾಂಬ್

    – ನಾನು ಸಿಎಂ ಹುದ್ದೆಯ ಆಕಾಂಕ್ಷಿ
    – ಡಿಎಸಿಂ ಹುದ್ದೆ ಬೇಡವೇ ಬೇಡ

    ಬೆಂಗಳೂರು: ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ ಸಂಪುಟದಲ್ಲಿ ಸ್ಥಾನ ಪಡೆಯಲು ಹಲವರು ಇನ್ನೂ ಕಸರತ್ತು ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಂದ ಉಪಚುನಾವಣೆ ಫಲಿತಾಂಶದ ಬಳಿಕ ಈ ಪೈಪೋಟಿ ಮತ್ತಷ್ಟು ವೇಗ ಪಡೆದುಕೊಂಡಿದೆ. ಮೊದಲಿಂದಲೂ ಸಚಿವ ಸ್ಥಾನ ಬೇಕು ಎನ್ನುತ್ತಿದ್ದ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಈಗ ಹೊಸ ಬಾಂಬ್ ಹಾಕಿದ್ದಾರೆ.

    ವಿಧಾನಸೌಧದಲ್ಲಿ ಮಾತಾಡಿದ ಅವರು, ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ. ಎಂಟು ಬಾರಿ ಶಾಸಕನಾಗಿ ಗೆದ್ದಿದ್ದೇನೆ. ಹಿಂದಿನಿಂದಲೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ. ಈಗಲೂ ಮತ್ತೆ ಮುಂದೆಯೂ ನಾನು ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿಯಾಗಿದ್ದೇನೆ. ಕೊಡುವುದಾದರೆ ನನಗೆ ಮಂತ್ರಿ ಸ್ಥಾನ ಕೊಡಲಿ. ಇಲ್ಲವಾದರೆ ಮುಖ್ಯಮಂತ್ರಿ ಸ್ಥಾನ ಕೊಡಲಿ. ಆದರೆ ಉಪಮುಖ್ಯಮಂತ್ರಿ ಸ್ಥಾನ ಮಾತ್ರ ಬೇಡವೇ ಬೇಡ ಅಂತ ಉಮೇಶ್ ಕತ್ತಿ ಕಡ್ಡಿ ತುಂಡು ಮಾಡುವಂತೆ ಸ್ಪಷ್ಟಪಡಿಸಿದರು.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನಕ್ಕೆ ಕಣ್ಣಿಟ್ಟ ಉಮೇಶ್ ಕತ್ತಿ ಅವರ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟಿಸಿದೆ. ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರುವ ಇತರೇ ಬಿಜೆಪಿ ಹಿರಿಯ ಶಾಸಕರು ಉಮೇಶ್ ಕತ್ತಿಯವರ ಹೇಳಿಕೆಗೆ ಗಾಬರಿಗೊಂಡಿದ್ದಾರೆ. ಉಮೇಶ್ ಕತ್ತಿ ಅದ್ಯಾವ ಅರ್ಥದಲ್ಲಿ ಸಿಎಂ ಹುದ್ದೆ ಕೇಳುತ್ತಿದ್ದಾರೆ ಅಂತ ಅರ್ಥವಾಗದೇ ಉಳಿದ ಸಚಿವಾಕಾಂಕ್ಷಿಗಳು ಕಣ್ ಕಣ್ ಬಿಡುತ್ತಿದ್ದಾರಂತೆ. ಆದರೆ ಉಮೇಶ್ ಕತ್ತಿ ಹೇಳಿಕೆಯನ್ನು ಯಾರು ಹೇಗೆ ಸ್ವೀಕರಿಸಿದ್ದಾರೋ ಗೊತ್ತಿಲ್ಲ, ಸಿಎಂ ಯಡಿಯೂರಪ್ಪ ಅವರು ಮಾತ್ರ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಈ ಹಿಂದೆಯೂ ಕಾಂಗ್ರೆಸ್ ಅವಧಿಯಲ್ಲಿ ಉಮೇಶ್ ಕತ್ತಿ ಅವರು ಪ್ರತ್ಯೇಕ ಉತ್ತರ ಕರ್ನಾಟಕ ಮಾಡುವ ಹೇಳಿಕೆ ಕೊಟ್ಟು ವಿವಾದ ಮೆತ್ತಿಕೊಂಡಿದ್ದರು. ಪ್ರತ್ಯೇಕ ನಾಡಧ್ವಜಕ್ಕೂ ಅವರು ಬೇಡಿಕೆ ಇಟ್ಟಿದ್ದರು. ಶಾಸಕ ಈ ನಡೆಯ ಬಗ್ಗೆ ಇಡೀ ಬಿಜೆಪಿ ನಾಯಕರೇ ಬೆಚ್ಚಿಬಿದ್ದಿದ್ದರು. ಅದಾದ ನಂತರ ಇದೀಗ ಉಮೇಶ್ ಕತ್ತಿ ನನಗೂ ಸಿಎಂ ಹುದ್ದೆ ಕೊಡಿ ಅಂತ ಕೇಳುವ ಮೂಲಕ ಮತ್ತೊಮ್ಮೆ ಬಿಜೆಪಿ ಪಾಳಯಕ್ಕೆ ದಿಗಿಲು ಹುಟ್ಟಿಸಿದ್ದಾರೆ.

    ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಬಂದ ನಂತರ ರಚನೆಗೊಂಡ ಸಚಿವ ಸಂಪುಟದಲ್ಲಿ ಉಮೇಶ್ ಕತ್ತಿ ಸ್ಥಾನ ವಂಚಿತರಾಗಿದ್ದರು. ಆಗಲೇ ಬಂಡಾಯ ಏಳುವ ಸೂಚನೆಯನ್ನೂ ಅವರು ಕೊಟ್ಟಿದ್ದರು. ಆದರೆ ಮುಂದಿನ ಬಾರಿ ಸಚಿವ ಸ್ಥಾನ ಕೊಡುವುದಾಗಿ ಅವರನ್ನು ಸಿಎಂ ಯಡಿಯೂರಪ್ಪ ಅವರೇ ಮನವೊಲಿಸಿದ್ದರು. ಈಗ ಉಪಚುನಾವಣೆಯಲ್ಲಿ ಅನರ್ಹರು ಗೆದ್ದು ಶಾಸಕರಾದ ಬಳಿಕ ಮತ್ತೆ ಉಮೇಶ್ ಕತ್ತಿ ಅವರು ಸಿಎಂ ಯಡಿಯೂರಪ್ಪ ಮೇಲೆ ಸಚಿವ ಸ್ಥಾನಕ್ಕೆ ಪ್ರಬಲವಾಗಿಯೇ ಒತ್ತಡ ಹೇರುತ್ತಿದ್ದಾರೆ. ಈ ಮಧ್ಯೆ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಕೊಡಲೇಬೇಕೆಂಬ ನಿಲುವನ್ನೂ ಸಿಎಂ ಯಡಿಯೂರಪ್ಪ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

    ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಹೈಕಮಾಂಡ್ ಜೊತೆ ಚರ್ಚಿಸಲು ಸಿಎಂ ಯಡಿಯೂರಪ್ಪ ಅವರು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಚರ್ಚೆಯ ಬಳಿಕ ನಿರ್ಧಾರ ಸ್ಪಷ್ಟವಾಗಲಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

  • ಮುಖ್ಯಮಂತ್ರಿಯಾಗಿ ಎಂದು ಹೈಕಮಾಂಡ್, ರಾಜ್ಯ ನಾಯಕರು ಹೇಳಿಲ್ಲ: ಖರ್ಗೆ ಅಸಮಾಧಾನ

    ಮುಖ್ಯಮಂತ್ರಿಯಾಗಿ ಎಂದು ಹೈಕಮಾಂಡ್, ರಾಜ್ಯ ನಾಯಕರು ಹೇಳಿಲ್ಲ: ಖರ್ಗೆ ಅಸಮಾಧಾನ

    ಕಲಬುರಗಿ: ಮುಖ್ಯಮಂತ್ರಿಯಾಗಿ ಅಂತ ಹೈಕಮಾಂಡ್ ಕರೆದು ಹೇಳಿಲ್ಲ. ಇಲ್ಲಿಯ ನಾಯಕರು ಕೂಡ ಸಿಎಂ ಆಗಲು ಹೇಳಲಿಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಬೇಕಿತ್ತು ಎನ್ನುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿಕೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆ ವಿಚಾರದ ಕುರಿತಾಗಿ ಮಾತಾಡುವುದಿಲ್ಲ. ಕುಮಾರಸ್ವಾಮಿ ಅವರ ಹೇಳಿಕೆಗೆ ಎಲ್ಲರೂ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಒಂದು ವೇಳೆ ಎಲ್ಲರೂ ತಮ್ಮ, ತಮ್ಮ ವಿಚಾರ ಹೇಳಿಕೊಂಡರೆ ಪಕ್ಷದಲ್ಲಿ ಒಡಕು ಉಂಟಾಗುತ್ತದೆ ಎಂದು ತಿಳಿಸಿದರು.

    ನಾವು ಎಲ್ಲರೂ ಸೇರಿ ಹೈಕಮಾಂಡ್ ತೀರ್ಮಾನದಂತೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಮೇ 23ರ ಲೋಕಸಭಾ ಫಲಿತಾಂಶ ನಂತರ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡ ಪಕ್ಷಗಳ ನಾಯಕರೊಂದಿಗೆ ಮಾತನಾಡಲಿದ್ದಾರೆ. ಫಲಿತಾಂಶ ಬಂದ ಮೇಲೆ ಸಂಖ್ಯಾ ಬಲ ನೋಡಿ ಮುಂದಿನ ಹೆಜ್ಜೆ ಇಡಲಾಗುತ್ತದೆ. ಕಾಂಗ್ರೆಸ್‍ನವರೇ ಪ್ರಧಾನಿಯಾಗಬೇಕು ಎಂದು ಈಗಲೇ ಹೇಳಿದರೆ ಬೇರೆಯವರ ನಿಲುವು ಏನಾಗಿರುತ್ತೋ ಅಂತ ನೋಡಬೇಕಿದೆ ಎಂದು ಹೇಳಿದದರು.

    ಬಿಜೆಪಿ ಸಂಸದ ನಳಿನ್ ಕಟೀಲ್ ಅವರು ನಾಥುರಾಮ ಗೂಡ್ಸೆ ಕೊಂದಿದ್ದು ಒಬ್ಬರನ್ನು, ಮಾಜಿ ಪ್ರಧಾನಿ ರಾಜೀವ್ ಗಾಂಧಿ 17 ಸಾವಿರ ಜನರನ್ನು ಕೊಂದಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಅವರ ಮನಸ್ಥಿತಿ ನಮಗೆ ಅರ್ಥವಾಗುತ್ತದೆ. ರಾಜೀವ್ ಗಾಂಧಿ ಅವರು ದೇಶದ ಐಕ್ಯತೆಗಾಗಿ ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ಬಿಜೆಪಿ ನಾಯಕರು ಕೊಲೆ ಮಾಡಿದವರನ್ನು ದೇಶಭಕ್ತರು, ದೇವರು ಎಂದು ಪೂಜಿಸುತ್ತಿದ್ದಾರೆ. ಇನ್ನು ಮುಂದೆಯಾದರೂ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನು ಕಲಿಯಬೇಕು ಎಂದು ಕಿಡಿಕಾರಿದರು.

  • ನಾನು ಸಿಎಂ, ಡಿಸಿಎಂ ಹುದ್ದೆ ರೇಸ್‍ನಲ್ಲಿಲ್ಲ: ಸಚಿವ ರೇವಣ್ಣ

    ನಾನು ಸಿಎಂ, ಡಿಸಿಎಂ ಹುದ್ದೆ ರೇಸ್‍ನಲ್ಲಿಲ್ಲ: ಸಚಿವ ರೇವಣ್ಣ

    – ರೇಸ್ ನಡೆಸೋಕೆ ನಮ್ಮ ಬಳಿ ಕುದುರೆಗಳೇ ಇಲ್ಲ
    – ಬಿಜೆಪಿ ಅವ್ರಿಗೆ ಲೆಕ್ಕ ಹಾಕೋಕೆ ಬರೊಲ್ಲ

    ಬೆಂಗಳೂರು: ನಾನು ಸಿಎಂ ಅಥವಾ ಡಿಸಿಎಂ ಹುದ್ದೆ ರೇಸ್‍ನಲ್ಲಿಲ್ಲ. ಪಕ್ಷ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿದ ಜವಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಎಂದು ಲೋಕೋಪಲೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರೇಸ್ ನಡೆಸಲು ನಮ್ಮ ಬಳಿ ಕುದುರೆಗಳೇ ಇಲ್ಲ. ಇನ್ನು ಎಲ್ಲಿಂದ ರೇಸ್‍ನಲ್ಲಿ ನಿಲ್ಲುವುದು. ನನಗೆ ನೀಡಿರುವ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ ಎಂದು ನಗೆ ಬೀರಿದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿಯು 18ರಿಂದ 20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ. ಜೆಡಿಎಸ್ 5ರಿಂದ 6 ಸೀಟು ಗೆಲ್ಲುತ್ತದೆ. 7 ಸೀಟು ಗೆದ್ದರೂ ಆಶ್ಚರ್ಯ ಪಡಬೇಡಿ. ಆದರೆ ಬಿಜೆಪಿಯವರಿಗೆ ಲೆಕ್ಕ ಹಾಕುವುದಕ್ಕೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಎಲ್ಲರೂ ಮೇ 23ರ ನಂತರ ಸಮಾಧಾನ ಆಗುತ್ತಾರೆ. ನಾನು ಹೇಳಿದ್ದು ಯಾವತ್ತು ಸುಳ್ಳು ಆಗಿಲ್ಲ. ಯಡಿಯೂರಪ್ಪ ತಿರುಪತಿಗೆ ಹೋಗಿದ್ದರು. ಜಗದೀಶ್ ಶೆಟ್ಟರ್ ಅವರಿಗೂ ಪಂಡರಾಪುರಕ್ಕೆ ಹೋಗುವುದಕ್ಕೆ ಹೇಳಿ. ಬಿಜೆಪಿಯವರು ಎಷ್ಟೇ ಡೇಟ್ ಕೊಟ್ಟರು ಸರ್ಕಾರಕ್ಕೆ ಬೀಳಲ್ಲ ಎಂದು ಭವಿಷ್ಯ ನುಡಿದರು.

    ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ರಾಜೀವ್ ಗಾಂಧಿಯವರು ಕರ್ನಾಟಕಕ್ಕೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ಆ ಕೊಡುಗೆ ದೇವೇಗೌಡ ಅವರಿಗೆ ಗೊತ್ತಿದೆ. ಕಾಲ ಬಂದಾಗ ಅವರ ಕೆಲಸದ ಬಗ್ಗೆ ಹೇಳುತ್ತೇನೆ. ರಾಜೀವ್ ಗಾಂಧಿ ಅವರು ಪ್ರಾಮಾಣಿಕ ರಾಜಕಾರಣಿ ಎಂದರು.

  • ಸಿಎಂ ಸ್ಥಾನ ಕೊಟ್ಟರೆ ನಿಭಾಯಿಸಲು ಸಿದ್ಧ – ಸಂಚಲನ ಮೂಡಿಸಿದೆ ಡಿಸಿಎಂ ಹೇಳಿಕೆ

    ಸಿಎಂ ಸ್ಥಾನ ಕೊಟ್ಟರೆ ನಿಭಾಯಿಸಲು ಸಿದ್ಧ – ಸಂಚಲನ ಮೂಡಿಸಿದೆ ಡಿಸಿಎಂ ಹೇಳಿಕೆ

    ಬೆಳಗಾವಿ: ಪಕ್ಷದ ಹೈಕಮಾಂಡ್ ಇದುವರೆಗೂ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದ್ದು, ಮುಂದೇ ಸಿಎಂ ಸ್ಥಾನ ಕೊಟ್ಟರೆ ಅದನ್ನು ನಿಭಾಯಿಸಲು ಸಿದ್ಧ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ಶಕ್ತಿ ಮೀರಿ ನಿರ್ವಹಣೆ ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷರಾಗಿ 8 ವರ್ಷ ಕಾರ್ಯನಿರ್ವಹಿಸಿದ್ದು, ಎರಡು ಚುನಾವಣೆಗಳಲ್ಲಿ ನಾನು ಪಕ್ಷ ಕಟ್ಟುವ ಕಾರ್ಯ ಮಾಡಿದ್ದೇನೆ. ಈ ಬಾರಿ ನಮ್ಮ ಮೈತ್ರಿ ಸರ್ಕಾರ ರಚನೆ ಆಗಿದ್ದು, ನನಗೆ ಡಿಸಿಎಂ ಸ್ಥಾನ ನೀಡಿದ್ದಾರೆ. ಆದ್ದರಿಂದ ನಾನು ಈ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಯಾವುದೇ ಜವಾಬ್ದಾರಿ ನೀಡಿಲ್ಲವೆಂದರೂ ನಾನು ಸುಮ್ಮನೆ ಇರುತ್ತೇನೆ. ಕೆಲಸ ನೀಡುವುದು ಬಿಡುವುದು ಅವರ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದರು.

    ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸುಗಮ ಆಗಿರುವ ವೇಳೆ ಡಿಸಿಎಂ ಪರಮೇಶ್ವರ್ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರದಲ್ಲಿ ಬದಲಾವಣೆ ಉಂಟಾದರೆ ಸಿಎಂ ಸ್ಥಾನ ನಮಗೇ ನೀಡಲಿ ಎಂ ಹಿನ್ನೆಲೆಯಲ್ಲಿ ಈ ರೀತಿ ಮಾತನಾಡಿದ್ದಾರೆ ಎಂಬ ಮಾತು ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews