Tag: ಮುಖ್ಯಮಂತ್ರಿ ಕುಮಾರಸ್ವಾಮಿ

  • ಸರ್ಕಾರಿ ನೌಕರರಿಗೆ ಸಿಹಿ-ಕಹಿ ಸುದ್ದಿ

    ಸರ್ಕಾರಿ ನೌಕರರಿಗೆ ಸಿಹಿ-ಕಹಿ ಸುದ್ದಿ

    ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಸರ್ಕಾರಿ ನೌಕರರ ರಜೆಯಲ್ಲಿ ಸಿಹಿ-ಕಹಿ ಸುದ್ದಿಯೊಂದು ಹೊರಬಿದ್ದಿದೆ.

    ಬೇಕಾಬಿಟ್ಟಿ ರಜೆಗಳನ್ನು ಕಡಿತ ಮಾಡಲಾಗಿದೆ. ಇನ್ನು ಮುಂದೆ ಜಯಂತಿ ಗಳಿಗೆ ರಜೆ ಇಲ್ಲ. ಈ ಮೂಲಕ ಬಸವ ಜಯಂತಿ, ಕನಕ ಜಯಂತಿ, ವಾಲ್ಮೀಕಿ ಜಯಂತಿ ಸೇರಿದಂತೆ ಹಲವು ಜಯಂತಿಗಳಿಗೆ ಕತ್ತರಿ ಹಾಕಲಾಗಿದೆ. ಈ ಆದೇಶ ಮುಂದಿನ ವರ್ಷದಿಂದ ಜಾರಿಗೆ ಬರಲಿದೆ.

    ಇನ್ನು ಮುಂದೆ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಕಡ್ಡಾಯ ರಜೆ ನೀಡಲಾಗುವುದು. ಜಯಂತಿಗಳ ರಜೆಯನ್ನು ಹಿಂಪಡೆದು ಬದಲಿಗೆ ಆಯಾ ಮಹಾನ್ ವ್ಯಕ್ತಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ರಜೆಯ ಕತ್ತರಿ ಹಾಕಲು ಸಿಎಂ ಅನುಮೋದಿಸಿದ್ದಾರೆ.

  • ರಾಜ್ಯದಲ್ಲಿ ದಿನಗೂಲಿ ಸರ್ಕಾರ ಆಡಳಿತದಲ್ಲಿದೆ: ಶಾಸಕ ಸಿಟಿ ರವಿ

    ರಾಜ್ಯದಲ್ಲಿ ದಿನಗೂಲಿ ಸರ್ಕಾರ ಆಡಳಿತದಲ್ಲಿದೆ: ಶಾಸಕ ಸಿಟಿ ರವಿ

    ಬೆಂಗಳೂರು: ರಾಜ್ಯದಲ್ಲಿ ದಿನಗೂಲಿ ಸರ್ಕಾರ ನಡೆಯುತ್ತಿದ್ದು, ಇವರಿಗೆ ಇವತ್ತಿಂದು ಇವತ್ತು ಮುಗಿದು ಹೋದ್ರೆ ಸಾಕಾಗಿದೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಆದರೆ ಸಿಎಂ ಕುಮಾರಸ್ವಾಮಿಯವರು ಇದಕ್ಕೂ ನನಗೂ ಸಂಬಂಧವಿಲ್ಲದಂತೆ ತೀರ್ಥ ಯಾತ್ರೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ದಿನಗೂಲಿ ಸರ್ಕಾರವಿದೆ. ಆದ್ದರಿಂದ ಅವರು ಇವತ್ತಿಂದು ಇವತ್ತು ಮುಗಿದು ಹೋದ್ರೆ ಸಾಕೆಂದು ಆಡಳಿತ ನಡೆಸುತ್ತಿದ್ದಾರೆ. ಅಲ್ಲದೇ ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರು ಮುಖನೋಡದ ಸ್ಥಿತಿಯಲ್ಲಿ ಇದ್ದಾರೆ. ಹೀಗಿರುವಾಗ ಇದು ಸರ್ಕಾರದ ಸಮನ್ವಯದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂದು ಕಿಡಿಕಾರಿದರು.

    ಈ ಕೂಡಲೇ ಜನರ ರಕ್ಷಣೆಗೆ ಜಿಲ್ಲಾಧಿಕಾರಿಗಳು ಟೊಂಕ ಕಟ್ಟಿ ನಿಲ್ಲಬೇಕು. ಸಂತ್ರಸ್ತರ ನೆರವಿಗೆ ಸರ್ಕಾರ ಹಾಗೂ ಅಧಿಕಾರಿಗಳು ಬರಬೇಕು. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಚುನಾವಣಾ ಆಯೋಗವು ಸಹ ಶಿವಮೊಗ್ಗ, ಮಂಗಳೂರು, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಬೇಕು ಎಂದು ಹೇಳಿದರು.

    ಮಾಜಿ ಪ್ರಧಾನಿ ಅಟಲ್ ಜೀ ಅವರ ಆರೋಗ್ಯ ಕುರಿತು ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿ ಹಾಗೂ ಅಜಾತ ಶತ್ರು ಎಂದೇ ಕರೆಸಿಕೊಳ್ಳುವ ಅಟಲ್ ಬಿಹಾರಿ ವಾಜಪೇಯಿಯವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದ್ದು, ಅವರ ಆರೋಗ್ಯದ ಬಗ್ಗೆ ನಾವೆಲ್ಲ ಚಿಂತೆಗೀಡಾಗಿದ್ದೇವೆ. ವಾಜಪೇಯಿಯವರು ನೂರು ವಸಂತಗಳನ್ನು ಪೂರೈಸಬೇಕು ಎನ್ನುವುದು ನಮ್ಮೆಲ್ಲರ ಆಶಯ. ದೇವರು ಅವರಿಗೆ ಆಯಸ್ಸು, ಆರೋಗ್ಯ ದಯಪಾಲಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.

    ಇದೇ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಇಷ್ಟು ದಿನ ಬಿಜೆಪಿ ಅಧಿಕಾರಕ್ಕೆ ಬರಲು ಸರ್ಕಾರ ಬೀಳಿಸುತ್ತಿದ್ದಾರೆ ಎಂಬ ಆರೋಪವನ್ನು ಮಾಡಿದ್ದರು. ಈಗ ಅವರ 17 ಜನ ಶಾಸಕರುಗಳೇ ರಾಜೀನಾಮೆ ನೀಡುವ ಸ್ಥಿತಿಯಲ್ಲಿ ಇದ್ದಾರೆ. ತಮ್ಮ ಸರ್ಕಾರ ಎಲ್ಲಿ ಬಿದ್ದು ಹೋಗುತ್ತದೆಯೋ ಎಂಬ ಭಯದಲ್ಲಿ ಪೊಲೀಸ್ ಅಧಿಕಾರಿಗಳ ಮೂಲಕ ಶಾಸಕರು ಹಾಗೂ ಮುಖಂಡರ ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುತೂಹಲ ಮೂಡಿಸಿತು ಕಿರಣ್ ಮಜುಂದಾರ್ ಶಾ, ಸಿಎಂ ಎಚ್‍ಡಿಕೆ ಭೇಟಿ!

    ಕುತೂಹಲ ಮೂಡಿಸಿತು ಕಿರಣ್ ಮಜುಂದಾರ್ ಶಾ, ಸಿಎಂ ಎಚ್‍ಡಿಕೆ ಭೇಟಿ!

    ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರನ್ನು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಭೇಟಿ ಮಾಡಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಿರಣ್, ಪ್ರಮುಖವಾಗಿ ಬೆಂಗಳೂರಿನ ಟ್ರಾಫಿಕ್ ನಿಯಂತ್ರಣ ಬಗ್ಗೆ, ಕಸ ನಿರ್ವಹಣೆ ಕುರಿತಾಗಿ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದೆ ಅಂತ ಹೇಳಿದ್ರು.

    ಈ ಕುರಿತು ಸಮಸ್ಯೆ ಬಗೆಹರಿಸಲು ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಕೆಲವೇ ತಿಂಗಳಲ್ಲಿ ಇಂದಿನ ಚರ್ಚೆಯ ಪರಿಣಾಮ ಎದುರಿಸಲಿದ್ದೇವೆ. ಟ್ರಾಫಿಕ್ ನಿಯಂತ್ರಣಕ್ಕೆ ಬೃಹತ್ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮನವಿ ಮಾಡಿದ್ದೇವೆ ಅಂದ್ರು.

    ಮೆಟ್ರೋ ಕಾಮಗಾರಿ ಉತ್ತರ ರೀತಿಯಲ್ಲಿ ಸಾಗಿದೆ. ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಹಾಗು ಹೆಬ್ಬಗೋಡಿಯಂತ್ರ ಸಂಚಾರಿ ದಟ್ಟಣೆಯ ಪ್ರದೇಶಗಳಿಗೆ ಮೆಟ್ರೋ ಅವಶ್ಯಕವಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಕೆಲವೇ ತಿಂಗಳಲ್ಲಿ ಇಂದಿನ ಚರ್ಚಾ ವಿಷಯಗಳ ಬಗ್ಗೆ ಪರಿಣಾಮ ಕಾಣುವ ವಿಶ್ವಾಸವಿದೆ ಅಂತ ಅವರು ತಿಳಿಸಿದ್ರು.

    ಕಿರಣ್ ಮಜುಂದಾರ್ ಶಾ ಅವರು ಇತ್ತೀಚೆಗಷ್ಟೇ ಕನ್ನಡಪರ ಸಂಘಟನೆಗಳ ಕುರಿತು ಅವಹೇಳನಕಾರಿ ಟ್ವೀಟ್ ಮಾಡಿ ಕನ್ನಡ ಸಂಘಟನೆಗಳ ವಿರೋಧ ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿರುವುದು ಮಹತ್ವ ಪಡೆದಿದೆ.

  • ಕುಮಾರಸ್ವಾಮಿ ಅಪ್ರಬುದ್ಧ ಮುಖ್ಯಮಂತ್ರಿ: ಅನಂತಕುಮಾರ್ ಹೆಗಡೆ ವ್ಯಂಗ್ಯ!

    ಕುಮಾರಸ್ವಾಮಿ ಅಪ್ರಬುದ್ಧ ಮುಖ್ಯಮಂತ್ರಿ: ಅನಂತಕುಮಾರ್ ಹೆಗಡೆ ವ್ಯಂಗ್ಯ!

    ಬೆಂಗಳೂರು: ರಾಜ್ಯದ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುತ್ತೇನೆ ಎಂದು ಹೇಳಿಕೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು `ಅಪ್ರಬುದ್ಧ ಮುಖ್ಯಮಂತ್ರಿ’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.

    ಮುಖ್ಯಮಂತ್ರಿಗಳ ಹೇಳಿಕೆಗೆ ತಮ್ಮ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ ಅವರು, ಅಧಿಕಾರ ಸಿಗದ್ದಿದ್ದರೆ ನನಗೆ ಜಾಸ್ತಿ ಆಯುಷ್ಯವಿಲ್ಲ, ಸತ್ತೇ ಹೋಗುತ್ತೇನೆ ಎಂದು ಗೋಳಾಡಿಕೊಂಡ ಅಪ್ರಬುದ್ಧ ಮುಖ್ಯಮಂತ್ರಿಗೆ ಫಿಟ್‍ನೆಸ್ ಸವಾಲ್ ಚಾಲೆಂಜ್ ಅನ್ನು ಪ್ರಧಾನಿಯವರು ಸೂಕ್ತವಾಗಿಯೇ ನೀಡಿರುತ್ತಾರೆ. ದೇಹ ಹಾಗು ಮಾನಸಿಕ ಫಿಟ್‍ನೆಸ್ ಇಲ್ಲದವರು ರಾಜ್ಯದ ಕಾಳಜಿ ಬಗ್ಗೆ ಮಾತನಾಡುವುದು ಶುದ್ಧ ಹಾಸ್ಯಾಸ್ಪದ ಎಂದು ಬರೆದು ಟಾಂಗ್ ನೀಡಿದ್ದಾರೆ.

    ರಾಜ್ಯದ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವ ಮುಖ್ಯಮಂತ್ರಿಗಳು, ಬೆಂಗಳೂರಿನ ಗುಂಡಿ ಭಾಗ್ಯ ನೀಡಿದ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ತನಿಖೆ ಮಾಡುವ ಸಾಹಸಕ್ಕೆ ಕೈ ಹಾಕುತ್ತೀರಾ? ಎಂದು ಬಿಜೆಪಿಯ ಮಲ್ಲೇಶ್ವರಂ ಶಾಸಕ ಅಶ್ವತ್ ನಾರಾಯಣ್ ರವರು ಮುಖ್ಯಮಂತ್ರಿಗೆ ಹಾಕಿದ್ದ ಟ್ವೀಟ್ ಅನ್ನು ಅನಂತಕುಮಾರ್ ಹೆಗಡೆಯವರು ರೀ ಟ್ವೀಟ್ ಮಾಡಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಸವಾಲಿಗೆ ಟಾಂಗ್ ನೀಡಿ ಉತ್ತರ ಕೊಟ್ಟ ಎಚ್‍ಡಿಕೆ

    ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಫಿಟ್ ನೆಸ್ ವಿಡಿಯೋವನ್ನು ಟ್ವೀಟ್ ಮಾಡಿ ಕುಮಾರಸ್ವಾಮಿಯವರಿಗೆ ಚಾಲೆಂಜ್ ಹಾಕಿದ್ದರು.

  • ಸಾರ್ ಇನ್ನು 5 ವರ್ಷ ಟೈಂ ಇದೆ, ಮುಂದಿನ ಬಾರಿ ಮತ್ತೊಂದು ನಾಟಕವಾಡಿ: ಸಿಎಂಗೆ ನೆಟ್ಟಿಗರ ಕ್ಲಾಸ್

    ಸಾರ್ ಇನ್ನು 5 ವರ್ಷ ಟೈಂ ಇದೆ, ಮುಂದಿನ ಬಾರಿ ಮತ್ತೊಂದು ನಾಟಕವಾಡಿ: ಸಿಎಂಗೆ ನೆಟ್ಟಿಗರ ಕ್ಲಾಸ್

    ಬೆಂಗಳೂರು: ಸಾಲ ಮನ್ನಾ ಮಾಡಲು ನಾನು ಸಂಪೂರ್ಣ ಬದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಕ್ಕೆ ಜನ ಟ್ವಿಟ್ಟರ್ ನಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ರೈತ ಬಾಂಧವರೇ, ಸಾಲ ಮನ್ನಾ ಬಗ್ಗೆ ಯಾವುದೇ ರೀತಿಯ ಗೊಂದಲ ಬೇಡ. ಸಾಲ ಮನ್ನಾ ಮಾಡಲು ನಾನು ಸಂಪೂರ್ಣ ಬದ್ಧನಿದ್ದೇನೆ. ಅತ್ಯಂತ ವೈಜ್ಞಾನಿಕವಾಗಿ ಗರಿಷ್ಠ ರೈತರಿಗೆ ಈ ಪ್ರಯೋಜನ ಸಿಗಬೇಕು ಎನ್ನುವ ಉದ್ದೇಶ ನನ್ನದು. ನಾನು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಅತಿ ಶೀಘ್ರದಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತೇನೆ ಎಂದು ಶುಕ್ರವಾರ ಬೆಳಗ್ಗೆ 9.45ಕ್ಕೆ ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ಪ್ರಕಟಗೊಂಡ ಬಳಿಕ ಟ್ವೀಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದು, ಆರಂಭದಲ್ಲಿ ಅಧಿಕಾರ ಸ್ವೀಕರಿಸಿದ 24 ಗಂಟೆಯ ಒಳಗಡೆ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದೀರಿ. ಆದರೆ ಇನ್ನೂ ಘೋಷಣೆಯಾಗಿಲ್ಲ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಗೋಪಿ ಬಿ.ಎನ್ ಎನ್ನುವವರು “ಸರ್ ಇನ್ನೂ ಐದು ವರ್ಷ ಟೈಮ್ ಇದೆ ಆರಾಮಾಗಿ ಸಾಲ ಮನ್ನಾ ಮಾಡಿ. ಮುಂದಿನ ಚುನಾವಣೆಯಲ್ಲಿ ಇನ್ನೊಂದು ನಾಟಕ ಮಾಡಿದರಾಯಿತು” ಎಂದು ಬರೆದು ಟಾಂಗ್ ನೀಡಿದ್ದಾರೆ.

    “ಮಾನ್ಯ @ಸಿಎಂ ಆಫ್ ಕರ್ನಾಟಕ ಅವರೆ ರೈತರು ಟ್ವಿಟ್ಟರ್ ಬಳಕೆ ಮಾಡುತ್ತಾರೆಯೇ? ನೀವು ಹೇಳ ಬೇಕಾಗಿದ್ದು ರೈತರ ಮುಂದೆಯೇ ಹೊರತು ಇಲ್ಲಲ್ಲ. ದಯವಿಟ್ಟು ರಾಜ್ಯದ ಪ್ರತಿ ರೈತರಿಗೆ ತಲುಪುವ ಹಾಗೇ ಹೇಳಿ. ಅಲ್ಲದೇ ಈ ಸಾಲ ಮನ್ನಾ ಮಾಡುವ ಮೊದಲು ಹಳೇ ಸರ್ಕಾರದ ಮನ್ನಾ ಮಾಡಿರುವ ಸಾಲದ ಮೊತ್ತವನ್ನು ರೈತರ ಖಾತೆಗೆ ಹಾಕಿ ಎಂದು ಬಿಎಸ್ ರುದ್ರೇಶ್ ಟ್ವೀಟ್ ಮಾಡಿದ್ದಾರೆ.

    ಏಪ್ರಿಲ್ 1 ಯಾವತ್ತೋ ಆಗಿ ಹೋಗಿದೆಯಲ್ಲ ಗುರು ಎಂದು ಜಗದೀಶ್ ಐತಳ್ ವ್ಯಂಗ್ಯವಾಡಿದ್ದಾರೆ.

    https://twitter.com/GopiBN5/status/1007497143509241856

    “ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ನೀವು ಕೇಳಿದ್ದ ಸಾಲ ಮನ್ನಾದ ಗಡುವನ್ನೇ ಮನ್ನಾ ಮಾಡಿಬಿಟ್ಟಿದ್ದಾರಲ್ಲ ಕುಮಾರಣ್ಣ. ಅದರ ಬಗ್ಗೆ ನೀವು ಏನಂತೀರಾ” ಎಂದು ಸುರೇಶ್ ಕುಮಾರ್ ಅವರು ಸಿಎಂ ಕುಮಾರಸ್ವಾಮಿ ಅವರ ಕಾಲೆಳೆದ್ದಾರೆ.

    ಕುಮಾರಣ್ಣ ಎಲ್ಲಿಯವರೆಗೆ ಬರೀ ಸಾಲಮನ್ನಾ ಮಾಡುತ್ತೀರಾ. ರೈತರೇ ಸರ್ಕಾರಕ್ಕೆ ಸಾಲ ಕೊಡುವಂತಹ ಯೋಜನೆಗಳನ್ನು ರೂಪಿಸಿ ಎಂದು ಎಂ.ಡಿ.ಮುಜೇಬ್ ವ್ಯಂಗ್ಯವಾಡಿದ್ದಾರೆ.

    ಕೊಟ್ಟ ಮಾತಿಗೆ ತಪ್ಪಬೇಡಿ, ಸಾಲ ಮನ್ನಾ ಮಾಡುವುದರಿಂದ ರೈತರು ಶ್ರೀಮಂತರಾಗುವುದಿಲ್ಲ. ನಿಮ್ಮ ಹೆಸರು ಹೇಳಿಕೊಂಡು ಸ್ವಲ್ಪ ನಿಟ್ಟುಸಿರು ಬಿಡುತ್ತಾರೆ. ಸಾಲ ಮನ್ನಾ ಮಾಡಲು ಯಾವುದೇ ಜಾತಿ ರಾಜಕಾರಣ ಬೇಡ. ಬಡವರು-ಶ್ರೀಮಂತರು ಅಂತಾ ಮುಖ ನೋಡಬೇಡಿ ಎಲ್ಲರಿಗೂ ಒಂದೇ ನ್ಯಾಯ ಸಿಗಲಿ. ಇದು ನನ್ನ ಕೋರಿಕೆ ಎಂದು ಶ್ರೀನಿವಾಸ್ ಮೂರ್ತಿ ಎಚ್.ಎಂ ಬರೆದಿದ್ದಾರೆ.

    ಸ್ವಲ್ಪ ಕಾಯಿರಿ ಫ್ರೆಶ್ ಎಲೆಕ್ಷನ್ ಬರುತ್ತದೆ ಎಂದು ಸುನೀಲ್ ಎಂಬವರು ಬರೆದು ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.