Tag: ಮುಖ್ತಾರ್ ಅಬ್ಬಾಸ್ ನಖ್ವಿ

  • ಅಬ್ಬಾಸ್ ರಾಜೀನಾಮೆ ಬೆನ್ನಲ್ಲೇ ಸ್ಮೃತಿ ಇರಾನಿ, ಜೋತಿರಾಧಿತ್ಯ ಸಿಂಧಿಯಾ ಹೆಗಲಿಗೆ ಜವಾಬ್ದಾರಿ

    ಅಬ್ಬಾಸ್ ರಾಜೀನಾಮೆ ಬೆನ್ನಲ್ಲೇ ಸ್ಮೃತಿ ಇರಾನಿ, ಜೋತಿರಾಧಿತ್ಯ ಸಿಂಧಿಯಾ ಹೆಗಲಿಗೆ ಜವಾಬ್ದಾರಿ

    ನವದೆಹಲಿ: ರಾಜ್ಯಸಭೆ ಅವಧಿ ಅಂತ್ಯದ ಬೆನ್ನಲ್ಲೇ ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ ನೀಡಿದ್ದು, ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯನ್ನು ಸ್ಮೃತಿ ಇರಾನಿ ಅವರಿಗೆ ನೀಡಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರಿಂದು ಅಬ್ಬಾಸ್ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಇದನ್ನೂ ಓದಿ: ಮೋದಿ ಸಂಪುಟ ಸ್ಥಾನಕ್ಕೆ ಮುಖ್ತಾರ್‌ ಅಬ್ಬಾಸ್‌ ರಾಜೀನಾಮೆ

    ಕೇಂದ್ರ ಸಚಿವರ ರಾಜೀನಾಮೆ ಹಿನ್ನೆಲೆ ಸ್ಮೃತಿ ಇರಾನಿ ಮತ್ತು ಜೋತಿರಾಧಿತ್ಯ ಸಿಂಧಿಯಾಗೆ ಜವಾಬ್ದಾರಿ ನೀಡಲಾಗಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯನ್ನು ಸ್ಮೃತಿ ಇರಾನಿ ಅವರ ಹೆಗಲಿಗೆ ನೀಡಲಾಗಿದ್ದು, ಸ್ಟೀಲ್ ಖಾತೆಯನ್ನು ಜೋತಿರಾಧಿತ್ಯ ಸಿಂಧಿಯಾಗೆ ಹೆಚ್ಚುವರಿ ಜವಾಬ್ದಾರಿಯಾಗಿ ಹಂಚಿಕೆ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ನಾಮ ನಿರ್ದೇಶನ: ಮೋದಿ ಟ್ವೀಟ್

    ಇತ್ತೀಚೆಗಷ್ಟೆ ನಡೆದಿದ್ದ ರಾಜ್ಯಸಭೆ ಚುನಾವಣೆಯಲ್ಲಿ ಮುಖ್ತಾರ್ ಅಬ್ಬಾಸ್ ಸ್ಪರ್ಧಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಸಭೆ ಅವಧಿ ಗುರುವಾರ ಅಂತ್ಯಗೊಳ್ಳಲಿದೆ. ಮೋದಿ ಸಂಪುಟ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಖ್ವಿಗೆ ಕೇಂದ್ರ ಸರ್ಕಾರ ರಾಜ್ಯಪಾಲ ಹುದ್ದೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಮೋದಿ ಸಂಪುಟ ಸ್ಥಾನಕ್ಕೆ ಮುಖ್ತಾರ್‌ ಅಬ್ಬಾಸ್‌ ರಾಜೀನಾಮೆ

    ಮೋದಿ ಸಂಪುಟ ಸ್ಥಾನಕ್ಕೆ ಮುಖ್ತಾರ್‌ ಅಬ್ಬಾಸ್‌ ರಾಜೀನಾಮೆ

    ನವದೆಹಲಿ: ರಾಜ್ಯಸಭೆ ಅವಧಿ ಅಂತ್ಯದ ಬೆನ್ನಲ್ಲೇ ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್‌ ಅಬ್ಬಾಸ್‌ ನಖ್ವಿ ರಾಜೀನಾಮೆ ನೀಡಿದ್ದಾರೆ.

    ಇತ್ತೀಚೆಗಷ್ಟೆ ನಡೆದಿದ್ದ ರಾಜ್ಯಸಭೆ ಚುನಾವಣೆಯಲ್ಲಿ ಮುಖ್ತಾರ್‌ ಅಬ್ಬಾಸ್‌ ಸ್ಪರ್ಧಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಸಭೆ ಅವಧಿ ಗುರುವಾರ ಅಂತ್ಯಗೊಳ್ಳಲಿದೆ. ಮೋದಿ ಸಂಪುಟ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಖ್ವಿಗೆ ಕೇಂದ್ರ ಸರ್ಕಾರ ರಾಜ್ಯಪಾಲ ಹುದ್ದೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ಈಗಾಗಲೇ ಇಬ್ಬರು ಸಚಿವರ ರಾಜ್ಯಸಭೆ ಅವಧಿ ಅಂತ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಸಂಪುಟ ಸ್ಥಾನಕ್ಕೆ ಇಬ್ಬರು ಕ್ಯಾಬಿನೆಟ್‌ ಸಚಿವರು ನಾಳೆಯೊಳಗೆ ರಾಜೀನಾಮೆ ಸಲ್ಲಿಸಬೇಕಾಗುತ್ತದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಸಚಿವ ಆರ್‌ಸಿಪಿ ಸಿಂಗ್ ಅವರ ರಾಜ್ಯಸಭೆಯ ಅವಧಿ ಗುರುವಾರ ಕೊನೆಗೊಳ್ಳಲಿದೆ. ಇದನ್ನೂ ಓದಿ: ನಿಯಮ ಮೀರಿ ಚಾಮರಾಜಪೇಟೆ ಬಂದ್ ಮಾಡಿದ್ರೆ ಕಠಿಣ ಕ್ರಮ: ಪೊಲೀಸರ ಎಚ್ಚರಿಕೆ

    ಇತ್ತೀಚೆಗೆ ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಹಲವಾರು ಬಿಜೆಪಿ ನಾಯಕರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಆದರೆ ಪಕ್ಷವು ನಖ್ವಿಗೆ ರಾಜ್ಯಸಭಾ ಟಿಕೆಟ್ ನೀಡಲಿಲ್ಲ. ಇದನ್ನೂ ಓದಿ: ನಿದ್ದೆಯಿಂದ ಎಬ್ಬಿಸಿದಕ್ಕೆ ಪೊಲೀಸರನ್ನ ಅಸಭ್ಯವಾಗಿ ನಿಂದಿಸಿದ ವ್ಯಕ್ತಿಗೆ 1.7 ವರ್ಷ ಜೈಲು ಶಿಕ್ಷೆ

    Live Tv
    [brid partner=56869869 player=32851 video=960834 autoplay=true]

  • ಭಾರತದಲ್ಲಿ 2022ರ ಹಜ್‌ ಪ್ರಕ್ರಿಯೆ ಶೇ.100 ಡಿಜಿಟಲ್‌ ಆಗಿರುತ್ತದೆ: ಕೇಂದ್ರ ಸಚಿವ ನಖ್ವಿ

    ಭಾರತದಲ್ಲಿ 2022ರ ಹಜ್‌ ಪ್ರಕ್ರಿಯೆ ಶೇ.100 ಡಿಜಿಟಲ್‌ ಆಗಿರುತ್ತದೆ: ಕೇಂದ್ರ ಸಚಿವ ನಖ್ವಿ

    ಮುಂಬೈ: ಭಾರತದಲ್ಲಿ 2022 ಹಜ್‌ ಪ್ರಕ್ರಿಯೆ ಶೇ.100 ಡಿಜಿಟಲ್‌ ಆಗಿರುತ್ತದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

    ಮುಂಬೈನ ಹಜ್ ಹೌಸ್‌ನಲ್ಲಿ ಆನ್‌ಲೈನ್ ಬುಕಿಂಗ್ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಡೋನೇಷ್ಯಾ ನಂತರ ಭಾರತ ಎರಡನೇ ಅತಿದೊಡ್ಡ ಸಂಖ್ಯೆಯಲ್ಲಿ ಹಜ್ ಯಾತ್ರಿಕರನ್ನು ಕಳುಹಿಸುತ್ತದೆ ಎಂದು ಹೇಳಿದರು.

    2020 ರಲ್ಲಿ ಮತ್ತು ಈ ವರ್ಷ ಕೋವಿಡ್ -19 ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದಾಗಿ ಹಜ್ ನಡೆಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

    700 ಕ್ಕೂ ಹೆಚ್ಚು ಮಹಿಳೆಯರು ‘ಮೆಹ್ರಾಮ್’ (ಪುರುಷ ಒಡನಾಡಿ) ಇಲ್ಲದೆ ಹಜ್ 2021 ಗೆ ಅರ್ಜಿ ಸಲ್ಲಿಸಿದ್ದಾರೆ. ಅದೇ ವರ್ಗದ ಅಡಿಯಲ್ಲಿ 2,100 ಕ್ಕೂ ಹೆಚ್ಚು ಮಹಿಳೆಯರು ಹಜ್ 2020 ಗೆ ಅರ್ಜಿ ಸಲ್ಲಿಸಿದ್ದಾರೆ. ಅವರು ಯಾತ್ರೆ ಮಾಡಲು ಬಯಸಿದರೆ ಅವರ ಅರ್ಜಿಗಳು 2022 ಹಜ್‌ಗೆ ಅರ್ಹವಾಗಿರುತ್ತವೆ ಎಂದು ನಖ್ವಿ ವಿವರ ನೀಡಿದರು.

    ಇತರ ಮಹಿಳೆಯರು ಕೂಡ ‘ಮೆಹ್ರಾಮ್’ ವರ್ಗವಿಲ್ಲದೆ ಹಜ್ 2022 ಗೆ ಅರ್ಜಿ ಸಲ್ಲಿಸಬಹುದು. ಈ ವರ್ಗದ ಎಲ್ಲ ಮಹಿಳೆಯರಿಗೆ ಲಾಟರಿ ಪದ್ಧತಿಯಿಂದ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದರು.

    ಅಕ್ಟೋಬರ್ 21 ರಂದು ನವದೆಹಲಿಯಲ್ಲಿ ನಡೆಯಲಿರುವ ಮುಂಬರುವ ಹಜ್ ಪರಿಶೀಲನಾ ಸಭೆಯಲ್ಲಿ ಸಂಬಂಧಿಸಿದ ವಿವಿಧ ಇಲಾಖೆಗಳ ಸಮಾಲೋಚನೆಯ ನಂತರ ಹಜ್ 2022 ಅನ್ನು ಘೋಷಿಸಲಾಗುತ್ತದೆ. ಇದನ್ನೂ ಓದಿ: ಮೋದಿಗೆ ಸಿಕ್ಕ ಗಿಫ್ಟ್‌ಗಳಿಗೆ ಭರ್ಜರಿ ಬೆಲೆ- ಚೋಪ್ರಾ ಜಾವೆಲಿನ್‍ಗೆ 1.50 ಕೋಟಿ 

    ಹಜ್ ಪರಿಶೀಲನಾ ಸಭೆಯಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ಆರೋಗ್ಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು, ಸೌದಿ ಅರೇಬಿಯಾದ ಭಾರತದ ರಾಯಭಾರಿ, ಜೆಡ್ಡಾದಲ್ಲಿನ ಭಾರತದ ಕಾನ್ಸುಲ್ ಜನರಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿರುತ್ತಾರೆ.

  • ಮೋದಿ ಜೊತೆ ರಾಜ್ಯಕ್ಕೆ ಬರಲಿದ್ದಾರೆ ಸ್ಟಾರ್ ಪ್ರಚಾರಕರು

    ಮೋದಿ ಜೊತೆ ರಾಜ್ಯಕ್ಕೆ ಬರಲಿದ್ದಾರೆ ಸ್ಟಾರ್ ಪ್ರಚಾರಕರು

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯ ಜೋರಾಗುತ್ತಿದ್ದರೂ ಫೆಬ್ರವರಿಯಲ್ಲಿ ಮಾತ್ರ ಬಂದಿದ್ದ ಪ್ರಧಾನಿ ಮೋದಿ ಪ್ರಚಾರಕ್ಕೆ ಬರ್ತಿಲ್ಲ ಯಾಕೆ ಅನ್ನೋ ಚರ್ಚೆ ವ್ಯಾಪಕವಾಗುತ್ತಿದೆ.

    ಈ ಪ್ರಶ್ನೆಗೆ ಉತ್ತರ ಎಂಬಂತೆ ಏಪ್ರಿಲ್ ಕೊನೆಯ ವಾರದಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಿದ್ದು, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಅಥವಾ ಬೆಳಗಾವಿಯಲ್ಲಿ ಮೆಗಾ ರೋಡ್ ಶೋ ಸೇರಿದಂತೆ 16 ಕಡೆ ಸಮಾವೇಶ ನಡೆಸಲಿದ್ದಾರೆ ಎನ್ನಲಾಗಿದೆ. ಸಮಾವೇಶಕ್ಕಾಗಿ ಸ್ಥಳ, ದಿನಾಂಕ ನಿಗದಿ ಕಾರ್ಯ ಜೋರಾಗಿ ನಡೆಯುತ್ತಿದೆ.

    ಇದರ ಜೊತೆಗೆ, ಹಿಂದುತ್ವದ ಪ್ರಭಾವ ಇರೋ ಕರಾವಳಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬರುತ್ತಿದ್ದು ಚುನಾವಣೆಗೆ ಕನಿಷ್ಠ 15 ದಿನ ಸಮಯ ನೀಡುತ್ತೇನೆ ಎಂದು ಹೇಳಿದ್ದಾರಂತೆ.

    ಮೋದಿ, ಯೋಗಿಯ ಜೊತೆಗೆ ನಾಮಪತ್ರ ಸಲ್ಲಿಕೆಯ ನಂತರ ಕೇಂದ್ರ ಸಚಿವರ ದಂಡೇ ಕರ್ನಾಟಕಕ್ಕೆ ಇಳಿಯಲಿದೆ. ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಸ್ಮೃತಿ ಇರಾನಿ, ನಿತಿನ್ ಗಡ್ಕರಿ, ಮುಖ್ತಾರ್ ಅಬ್ಬಾಸ್ ನಖ್ವಿ, ಮಹಾರಾಷ್ಟ್ರ ಸಿಎಂ ದೇವಂದ್ರ ಫಡ್ನಾವಿಸ್, ಮಧ್ಯಪ್ರದೇಶ ಸಿ.ಎಂ ಶಿವರಾಜ್ ಸಿಂಗ್ ಚೌಹಾಣ್ ಸ್ಟಾರ್ ಪ್ರಚಾರಕರಾಗಿ ಬರಲಿದ್ದಾರೆ.