Tag: ಮುಖ್ತರ್ ಅನ್ಸಾರಿ

  • ಗ್ಯಾಂಗ್‍ಸ್ಟರ್ ಮುಖ್ತರ್ ಅನ್ಸಾರಿ ಸಾವಿನಿಂದ ನನಗೆ ನ್ಯಾಯ ಸಿಕ್ಕಿದೆ: ಹತ್ಯೆಗೀಡಾದ ಬಿಜೆಪಿ ನಾಯಕನ ಪತ್ನಿ

    ಗ್ಯಾಂಗ್‍ಸ್ಟರ್ ಮುಖ್ತರ್ ಅನ್ಸಾರಿ ಸಾವಿನಿಂದ ನನಗೆ ನ್ಯಾಯ ಸಿಕ್ಕಿದೆ: ಹತ್ಯೆಗೀಡಾದ ಬಿಜೆಪಿ ನಾಯಕನ ಪತ್ನಿ

    – ತಂದೆಗೆ ವಿಷ ನೀಡಿ ಹತ್ಯೆ: ಉಮರ್ ಅನ್ಸಾರಿ ಆರೋಪ

    ಲಕ್ನೋ: ಗ್ಯಾಂಗ್‍ಸ್ಟರ್, ರಾಜಕಾರಣಿ ಮುಖ್ತರ್ ಅನ್ಸಾರಿ (Mukhtar Ansari) ಸಾವಿನಿಂದ ನನಗೆ ನ್ಯಾಯ ಸಿಕ್ಕಿದೆ ಎಂದು ಆತನಿಂದ ಹತ್ಯೆಗೀಡಾದ ಬಿಜೆಪಿ ಶಾಸಕ ಕೃಷ್ಣಾನಂದ್ ರೈ (BJP MLA Krishnanand Rai) ಅವರ ಪತ್ನಿ ಅಲ್ಕಾ ರೈ  (Alka Rai) ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ವಾರಣಾಸಿಯಲ್ಲಿ (Varanasi) ಮಾತನಾಡಿದ ಅವರು, ನಾನು ನ್ಯಾಯಕ್ಕಾಗಿ ದೇವರನ್ನು ಪ್ರಾರ್ಥಿಸುತ್ತಿದ್ದೆ. ದೇವರು ಅದನ್ನು ಪೂರೈಸಿದ್ದಾನೆ. ಪತಿಯ ಹತ್ಯೆಯ ನಂತರ ನಾವು ಎಂದು ಹೋಳಿ ಆಚರಿಸಲಿಲ್ಲ. ನ್ಯಾಯ ಸಿಕ್ಕ ಈ ದಿನವನ್ನು ಹೋಳಿ ಎಂದು ನಾನು ಭಾವಿಸುತ್ತೇನೆ. ಆತನ ಸಾವಿನಿಂದ, ಅನಾಥರಾದ ಮಕ್ಕಳಿಗೆ ಸಂತೋಷವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್‌, ಯುಪಿ ರಾಜಕಾರಣಿ ಮುಖ್ತಾರ್‌ ಅನ್ಸಾರಿ ಹೃದಯಾಘಾತದಿಂದ ಸಾವು

    ಮೃತ ಮುಖ್ತರ್ ಅನ್ಸಾರಿಯ ಮಗ ಉಮರ್ ಅನ್ಸಾರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತನ್ನ ತಂದೆಗೆ ಆಹಾರದಲ್ಲಿ ವಿಷವನ್ನು ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ. ಇಡೀ ದೇಶಕ್ಕೆ ಎಲ್ಲವೂ ತಿಳಿದಿದೆ. ಎರಡು ದಿನಗಳ ಹಿಂದೆ ನಾನು ಅವರನ್ನು ಭೇಟಿಯಾಗಲು ಬಂದಿದ್ದೆ. ನನಗೆ ಅವಕಾಶ ನೀಡಲಿಲ್ಲ, ಸ್ಲೋ ಪಾಯ್ಸನ್ ನೀಡಿದ ಆರೋಪದ ಬಗ್ಗೆ ನಾವು ಮೊದಲೇ ಹೇಳಿದ್ದೇವೆ. ಈಗಲೂ ನಾನು ಅದನ್ನೇ ಹೇಳುತ್ತೇನೆ. ನಮಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ನಂಬಿಕೆ ಇದೆ ಎಂದಿದ್ದಾರೆ.

    ಜೈಲಿನಲ್ಲಿದ್ದ ಮುಖ್ತಾರ್ ಅನ್ಸಾರಿ ಗುರುವಾರ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಉತ್ತರ ಪ್ರದೇಶದ (Uttar Pradesh) ಮಾವ್‍ದಿಂದ ಐದು ಬಾರಿ ಗೆದ್ದು ಶಾಸಕರಾಗಿದ್ದರು. ಅವರ ವಿರುದ್ಧ 61 ಕ್ರಿಮಿನಲ್ ಪ್ರಕರಣಗಳಿದ್ದು, ಅದರಲ್ಲಿ 15 ಕೊಲೆ ಆರೋಪದ ಪ್ರಕರಣಗಳಾಗಿವೆ. ಇದನ್ನೂ ಓದಿ: 300 ಅಡಿ ಕಣಿವೆಗೆ ಉರುಳಿದ ವಾಹನ – 10 ಮಂದಿ ದುರ್ಮರಣ

  • ಮುಖ್ತಾರ್‌ ಅನ್ಸಾರಿ ಆಂಬುಲೆನ್ಸ್‌ ಪ್ರಕರಣ- ಬಿಜೆಪಿ ನಾಯಕಿ ಅರೆಸ್ಟ್‌

    ಮುಖ್ತಾರ್‌ ಅನ್ಸಾರಿ ಆಂಬುಲೆನ್ಸ್‌ ಪ್ರಕರಣ- ಬಿಜೆಪಿ ನಾಯಕಿ ಅರೆಸ್ಟ್‌

    ಲಕ್ನೋ: ಜೈಲಿನಿಂದ ನ್ಯಾಯಾಲಯಕ್ಕೆ ಗ್ಯಾಂಗ್‌ಸ್ಟರ್‌-ರಾಜಕಾರಣಿಯನ್ನು ಆಂಬುಲೆನ್ಸ್‌ನಲ್ಲಿ ಹಾಜರುಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಿಜೆಪಿ ನಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಗ್ಯಾಂಗ್‌ಸ್ಟರ್‌ ಹಾಗೂ ರಾಜಕಾರಣಿ ಮುಖ್ತಾರ್‌ ಅನ್ಸಾರಿ ಅವರನ್ನು ಜೈಲಿನಿಂದ ಕೋರ್ಟ್‌ಗೆ ಹಾಜರುಪಡಿಸಲು ಆಂಬುಲೆನ್ಸ್‌ ನೀಡಿದ ಆರೋಪದಡಿ ಬಿಜೆಪಿ ನಾಯಕಿ ಡಾ.ಅಲ್ಕಾ ರೈ ಮತ್ತು ಆಕೆಯ ಸಹೋದರ ಶೇಷನಾಥ್‌ ರೈ ಅವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ

    ಮುಖ್ತಾರ್‌ ಅನ್ಸಾರಿ ಮತ್ತು 12 ಮಂದಿ ವಿರುದ್ಧ ಗ್ಯಾಂಗ್‌ಸ್ಟರ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅದರಂತೆ ಇಬ್ಬರು ಆರೋಪಿಗಳಾದ ಅಲ್ಕಾ ರೈ ಮತ್ತು ಶೇಷನಾಥ್ ರೈ ಅವರನ್ನು ಪೊಲೀಸರು ಮೌ ಜಿಲ್ಲೆಯಲ್ಲಿ ಬಂಧಿಸಿ, ಬಾರಾಬಂಕಿಗೆ ಕರೆದೊಯ್ದಿದ್ದಾರೆ.

    ಅಲ್ಕಾ ರೈ ಅವರು ಸಂಜೀವಿನಿ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ. ಮುಖ್ತಾರ್‌ ಅನ್ಸಾರಿಯನ್ನು ಜೈಲಿನಿಂದ ಕೋರ್ಟ್‌ಗೆ ಹಾಜರುಪಡಿಸಲು ಬುಲೆಟ್‌ ಪ್ರೂಫ್‌ ಆಂಬುಲೆನ್ಸ್‌ ಒದಗಿಸಿದ್ದರು. ಈ ಆರೋಪದಡಿ ಅವರನ್ನು ಬಂಧಿಸಲಾಗಿದೆ.

    ಡಾ.ಅಲ್ಕಾ ರೈ ಅವರು ಪ್ರಕರಣವೊಂದರಲ್ಲಿ 8 ತಿಂಗಳು ಜೈಲುವಾಸ ಅನುಭವಿಸಿದ್ದರು. ಈಚೆಗಷ್ಟೇ ಬಿಡುಗಡೆಯಾಗಿ ಹೊರಬಂದಿದ್ದರು. ಇದೀಗ ಗ್ಯಾಂಗ್‌ಸ್ಟರ್‌ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದಾರೆ

    ಅನ್ಸಾರಿ ಮತ್ತು ಈತನ ಸಹಚರರು ಲಕ್ನೋ ಜೈಲಿನಲ್ಲಿದ್ದಾಗ ಜೈಲಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಇದೆ. ಈ ಬಗ್ಗೆ ಜೈಲರ್ ಎಸ್‌.ಎನ್.ದ್ವಿವೇದಿ 2000ರಲ್ಲೇ ಎಫ್‌ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಅನ್ಸಾರಿ ಜೈಲು ಸೇರಿದ್ದಾರೆ. ಇದನ್ನೂ ಓದಿ: ಮಿಡಲ್ ಫಿಂಗರ್ ತೋರಿಸಿದ ಪೂನಂ: ಕೈಯನ್ನ ತುಂಡು ತುಂಡಾಗಿ ಕತ್ತರಿಸ್ತೀನಿ ಎಂದ ನಟ ಆಲಿ

  • ಶಾಸಕರ ಒಡೆತನದ ಎರಡು ಅಕ್ರಮ ಕಟ್ಟಡ ನೆಲಸಮ

    ಶಾಸಕರ ಒಡೆತನದ ಎರಡು ಅಕ್ರಮ ಕಟ್ಟಡ ನೆಲಸಮ

    ಲಕ್ನೋ: ಉತ್ತರ ಪ್ರದೇಶದ ಬಿಎಸ್‍ಪಿ ಶಾಸಕ ಮುಖ್ತರ್ ಅನ್ಸಾರಿ ಅವರಿಗೆ ಸೇರಿದ ಎರಡು ಅಕ್ರಮ ಕಟ್ಟಡಗಳನ್ನು ಸರ್ಕಾರಿ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.

    ಯುಪಿ ಪೊಲೀಸರು ಇಂದು ಈ ಹಿಂದೆ ಗ್ಯಾಂಗ್‍ಸ್ಟಾರ್ ಆಗಿದ್ದ ಶಾಸಕ ಮುಖ್ತರ್ ಅನ್ಸಾರಿಗೆ ಸೇರಿದ್ದ ಎರಡು ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಸರ್ಕಾರ ಕಟ್ಟಡ ನೆಲಸಮದ ಖರ್ಚುಗಳನ್ನು ಅವರಿಂದಲೇ ಪಡೆದುಕೊಂಡಿದೆ. ಕ್ರಿಮಿನಲ್ ಗಳು ಅಪರಾಧ ಪ್ರಕರಣಗಳಿಂದ ಹೊರ ಬರಬೇಕು ಅಥವಾ ಇಂತಕ ಕಠಿಣ ನಿರ್ಧಾರಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಮಾಧ್ಯಮ ಸಲಹೆಗಾರ ಮೃತ್ಯಂಜಯ್ ಹೇಳಿದ್ದಾರೆ.

    ಲಕ್ನೋ ನಗರದ ದಾಲಿಬಾಘ ವ್ಯಾಪ್ತಿಯಲ್ಲಿರುವ ಶಾಸಕರ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಕಟ್ಟಡ ನೆಲಸಮ ಮಾಡುವ ವೇಳೆ ಮುನ್ನೇಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ನೆಲಸಮಗೊಂಡಿರುವ ಕಟ್ಟಡಕ್ಕೆ ‘ನಿಷ್ಕ್ರಾಂತ್ ಸಂಪತಿ’ ಎಂದು ಹೆಸರಿಡಲಾಗಿದ್ದು, ಇಲ್ಲಿ ಪಾಕಿಸ್ತಾನದಿಂದ ಬಂದ ವಲಸಿಗರು ವಾಸವಾಗುತ್ತಿದ್ರು ಎಂದು ಸರ್ಕಾರದ ವಕ್ತಾರರೊಬ್ಬರು ಹೇಳಿದ್ದಾರೆ.