Tag: ಮುಖೇಶ್ ಖನ್ನಾ

  • ರಣವೀರ್ ಸಿಂಗ್ ಅವರ ಯೋಗ್ಯತೆ ಪ್ರಶ್ನೆ ಮಾಡಿದ ಶಕ್ತಿಮಾನ್

    ರಣವೀರ್ ಸಿಂಗ್ ಅವರ ಯೋಗ್ಯತೆ ಪ್ರಶ್ನೆ ಮಾಡಿದ ಶಕ್ತಿಮಾನ್

    ಬಾಲಿವುಡ್ ಅಂಗಳದಲ್ಲಿ ಶಕ್ತಿಮಾನ್ (Shaktiman) ಕುರಿತಂತೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಹಿಂದೆ ಶಕ್ತಿಮಾನ್ ಸಾಕಷ್ಟು ಸದ್ದು ಮಾಡಿತ್ತು. ಅದರಲ್ಲೂ ಮಕ್ಕಳಿಗೆ ನೆಚ್ಚಿನ ಸೀರಿಸ್ ಅದಾಗಿತ್ತು. ಈಗ ಮತ್ತೆ ಶಕ್ತಿಮಾನ್ ತೆರೆಗೆ ತರಲು ಯೋಚಿಸಲಾಗುತ್ತಿದೆ. ಶಕ್ತಿಮಾನ್ ಪಾತ್ರ ಮಾಡಿದ್ದ ಮುಖೇಶ್ ಖನ್ನಾ ಅವರ ಜಾಗವನ್ನು ಯಾರು ತುಂಬ ಬಲ್ಲರು ಎನ್ನುವ ಹುಡುಕಾಟ ಕೂಡ ನಡೆದಿದೆ.

    ಶಕ್ತಿಮಾನ್ ಪಾತ್ರಕ್ಕೆ ಜೀವ ತುಂಬಬಲ್ಲ ಶಕ್ತಿ ರಣವೀರ್ ಸಿಂಗ್ (Ranveer Singh) ಅವರಿಗೆ ಇದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಶಕ್ತಿಮಾನ್ ಪಾತ್ರ ಮಾಡಿದ್ದ ಮುಖೇಶ್ ಖನ್ನಾ ಅವರು ಅದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಅಂತಹ ಪಾತ್ರವನ್ನು ಮಾಡುವಂತಹ ಯೋಗ್ಯತೆ ಮತ್ತು ಅರ್ಹತೆ ರಣವೀರ್ ಸಿಂಗ್ ಗೆ ಇಲ್ಲವೆಂದು ಅವರು ಹೇಳಿದ್ದಾರೆ.

    ರಣವೀರ್ ಸಿಂಗ್ ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಳ್ಳುವುದಕ್ಕೆ ಲಾಯಕ್. ಶಕ್ತಿಮಾನ್ ಅಂತಹ ಧೈತ್ಯ ಪಾತ್ರವನ್ನು ಅವರು ಮಾಡುವುದಕ್ಕೆ ಆಗುವುದಿಲ್ಲ. ಮತ್ತೆ ಯೋಗ್ಯತೆ ಕೂಡ ಅವರಿಗೆ ಇಲ್ಲ ಎಂದು ಕಿಡಿಕಾರಿದ್ದಾರೆ. ಬೇರೆ ನಟನನ್ನು ಹುಡುಕುವುದು ಸೂಕ್ತ ಎನ್ನುವ ಸಲಹೆಯನ್ನೂ ಅವರು ನೀಡಿದ್ದಾರೆ.

    ತಮ್ಮ ಬಗ್ಗೆ ಖನ್ನಾ ಹಾಗೆ ಮಾತನಾಡಿದ್ದಕ್ಕೆ ರಣವೀರ್ ಸಿಂಗ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಷಯ ಅವರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಬಂದಿದ್ದರೆ, ಯಾವ ರೀತಿಯಲ್ಲಿ ಅವರು ರಿಯ್ಯಾಕ್ಟ್ ಮಾಡ್ತಾರೆ ಎನ್ನುವುದನ್ನು ಕಾದು ನೋಡಬೇಕು.

  • ‘ಶಕ್ತಿಮಾನ್‌’ ಸಿನಿಮಾ ತಡವಾಗಿದ್ದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟ ಮುಖೇಶ್‌ ಖನ್ನಾ

    ‘ಶಕ್ತಿಮಾನ್‌’ ಸಿನಿಮಾ ತಡವಾಗಿದ್ದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟ ಮುಖೇಶ್‌ ಖನ್ನಾ

    ಕಿರುತೆರೆ ಜನಪ್ರಿಯ ‘ಶಕ್ತಿಮಾನ್’ (Shaktimaan) ಧಾರಾವಾಹಿ ಇದೀಗ ಸಿನಿಮಾ ರೂಪದಲ್ಲಿ ತೆರೆಗೆ ತರಲು ಪ್ಲ್ಯಾನ್ ನಡೆಯುತ್ತಿದೆ. ಈ ಸೀರಿಯಲ್‌ನಲ್ಲಿ ಮುಕೇಶ್ ಖನ್ನಾ ಅವರು ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಈ ಕುರಿತು ಬಹಳ ಹಿಂದೆಯೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಾಗಿತ್ತು. ಆದರೂ ಕೂಡ ‘ಶಕ್ತಿಮಾನ್’ ಸಿನಿಮಾ ಸೆಟ್ಟೇರಲು ಕಾರಣ ಏನು ಎಂಬುದನ್ನು ಮುಕೇಶ್ ಖನ್ನಾ(Actor Mukesh Khanna) ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ನಟ ಈ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಪ್ರಣಿತಾ ಹಾಟ್‌ನೆಸ್‌ಗೆ ಸಂತೂರ್ ಮಮ್ಮಿ ಎಂದ ನೆಟ್ಟಿಗರು

    1993ರಲ್ಲಿ ಇಂಡಿಯನ್ ಸೂಪರ್ ಹೀರೋ ಆಗಿ ಮುಖೇಶ್ ಖನ್ನಾ ಅವರು ಮಿಂಚಿದ್ದರು. ಮಕ್ಕಳಿಗಂತೂ ‘ಶಕ್ತಿಮಾನ್’ ಎಂದರೆ ಎಲ್ಲಿಲ್ಲದ ಪ್ರೀತಿ. ಆತನ ಸಾಹಸಗಳು ಒಂದೆರಡಲ್ಲ. ಈಗ ಈ ಸೂಪರ್ ಹೀರೋ ಪಾತ್ರವನ್ನೇ ಮುಖ್ಯವಾಗಿ ಇಟ್ಟುಕೊಂಡು ಸಿನಿಮಾ ಸಿದ್ಧವಾಗುತ್ತಿದೆ. ಶಕ್ತಿಮಾನ್ ಸಿನಿಮಾದ ಬಜೆಟ್ 200-300 ಕೋಟಿ ರೂಪಾಯಿ ನಿರ್ಮಾಣದಲ್ಲಿ ಬರಲಿದೆ. ‘ಸ್ಪೈಡರ್ ಮ್ಯಾನ್’ (Spider Man) ಸಿನಿಮಾ ಮಾಡಿದ್ದ ಸೋನಿ ಪಿಕ್ಚರ್ಸ್ (Sony Pictures) ಸಂಸ್ಥೆಯವರು ಶಕ್ತಿಮಾನ್ ಸಾಥ್ ನೀಡ್ತಿದ್ದಾರೆ. ಮೊದಲು ಕೊರೊನಾ ಬಂತು. ಅದರಿಂದ ವಿಳಂಬ ಆಯಿತು ಎಂದು ಮುಕೇಶ್ ಖನ್ನಾ ಹೇಳಿದ್ದಾರೆ.

    ಇದು ದೊಡ್ಡ ಸಿನಿಮಾ ಆದ್ದರಿಂದ ಸಮಯ ಹಿಡಿಯುತ್ತದೆ. ನಾನು ಶಕ್ತಿಮಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನಾ ಎಂಬುದು ದೊಡ್ಡ ಪ್ರಶ್ನೆ. ಬೇರೆ ಯಾರಾದರೂ ಶಕ್ತಿಮಾನ್ ಪಾತ್ರ ಮಾಡುತ್ತಾರಾ? ಆ ಬಗ್ಗೆ ನನಗೆ ತಿಳಿದಿಲ್ಲ. ಇದೊಂದು ಕಮರ್ಷಿಯಲ್ ಸಿನಿಮಾ. ದುಡ್ಡಿನ ಮಾತುಕತೆ ಸಾಕಷ್ಟು ಇರುತ್ತದೆ. ಈ ಸಿನಿಮಾದಲ್ಲಿ ನಾನು ಇರುತ್ತೇನೆ. ನನ್ನನ್ನು ಬಿಟ್ಟು ಈ ಸಿನಿಮಾ ಮಾಡೋಕೆ ಆಗಲ್ಲ ಎಂಬುದು ಎಲ್ಲರಿಗೂ ಗೊತ್ತು ಎಂದು ನಟ ಮುಖೇಶ್ ರಿಯಾಕ್ಟ್ ಮಾಡಿದ್ದಾರೆ.

    ಈ ಚಿತ್ರದಲ್ಲಿ ಮುಕೇಶ್ ಖನ್ನಾ ಇರುತ್ತಾರೆ ಆದರೆ ಶಕ್ತಿಮಾನ್ ವೇಷದಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ. ಯಾಕೆಂದರೆ ಇದು ನಿರ್ಮಾಪಕರ ನಿರ್ಧಾರವಾಗಿದೆ. ಪಾತ್ರವರ್ಗ ಮತ್ತು ತಾಂತ್ರಿಕ ಬಳಗದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ಮುಕೇಶ್ ಖನ್ನಾ ಹೇಳಿದ್ದಾರೆ. ರಣವೀರ್ ಸಿಂಗ್ (Ranveer Singh) ಅವರು ಶಕ್ತಿಮಾನ್ ಆಗಿ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂದು ಕಾದುನೋಡಬೇಕಿದೆ.

  • ರಾಮಾಯಣ, ಮಹಾಭಾರತದ ನಂತರ ಮತ್ತೆ ಎಂಟ್ರಿ ಕೊಡ್ತಿದ್ದಾನೆ ಶಕ್ತಿಮಾನ್

    ರಾಮಾಯಣ, ಮಹಾಭಾರತದ ನಂತರ ಮತ್ತೆ ಎಂಟ್ರಿ ಕೊಡ್ತಿದ್ದಾನೆ ಶಕ್ತಿಮಾನ್

    ನವದೆಹಲಿ: ಭಾರತದ ಪ್ರಪ್ರಥಮ ಸೂಪರ್ ಹೀರೋ ಧಾರಾವಾಹಿ, 90ರ ದಶಕದ ಮಕ್ಕಳ ಅಚ್ಚುಮೆಚ್ಚಿನ ಶಕ್ತಿಮಾನ್ ಶೋ ಮತ್ತೆ ಪ್ರಸಾರ ಮಾಡಲು ದೂರದರ್ಶನ ಸಕಲ ಸಿದ್ಧತೆ ಮಾಡಿಕೊಂಡಿದೆ.

    ಮುಖೇಶ್ ಖನ್ನಾ ನಟನೆಯ ಈ ಧಾರಾವಾಹಿಯನ್ನು ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಪ್ರತಿ ದಿನ ಒಂದು ತಾಸು ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್‍ನಿಂದ ಮಧ್ಯಾಹ್ನ 1ಗಂಟೆಗೆ ಈ ಶೋ ಪ್ರಸಾರವಾಗಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ಶಕ್ತಿಮಾನ್‍ನ ಸಾಹಸಗಳನ್ನು ಮಕ್ಕಳೊಂದಿಗೆ ಮತ್ತೆ ಎಂಜಾಯ್ ಮಾಡಬಹುದಾಗಿದೆ.

    ಮುಖೇಶ್ ಖನ್ನಾ ಅವರು ಈ ಧಾರಾವಾಹಿಯಲ್ಲಿ ಶಕ್ತಿಮಾನ್ ಪಾತ್ರ ನಿರ್ವಹಿಸಿದ್ದರು. ಕೇವಲ ಮನರಂಜನೆ ಮಾತ್ರವಲ್ಲದೆ ತಮ್ಮ ಅದ್ಭುತ ಶಕ್ತಿ ಮೂಲಕ ಶಕ್ತಿಮಾನ್ ಜೀವನದ ಪಾಠಗಳನ್ನು ಕಲಿಸುತ್ತಿದ್ದ. ಹೀಗಾಗಿ ಪ್ರತಿ ಭಾನುವಾರ ಒಂದು ಗಂಟೆ ಕಾಲ ಪ್ರಸಾರವಾಗುತ್ತಿದ್ದ ಶಕ್ತಿಮಾನ್ ಧಾರವಾಹಿಯನ್ನು ಕುಟುಂಬ ಸಮೇತರಾಗಿ ನೋಡುತ್ತಿದ್ದರು. ಇದೀಗ ಮತ್ತೆ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.

    ರಾಮಾಯಣ, ಮಹಾಭಾರತವನ್ನು ಮರು ಪ್ರಸಾರ ಮಾಡಲು ತೀರ್ಮಾನ ಕೈಗೊಂಡ ನಂತರ ಶಕ್ತಿಮಾನ್ ಧಾರವಾಹಿಯನ್ನೂ ಮರು ಪ್ರಸಾರ ಮಾಡುವಂತೆ ಒತ್ತಡ ಕೇಳಿ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಮಾತ್ರವಲ್ಲದೆ ಈ ಹಿಂದೆ ಶಕ್ತಿಮಾನ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದರ ಮುಂದುವರಿದ ಭಾಗವನ್ನು ರಚಿಸಲು ಮುಖೇಶ್ ಖನ್ನಾ ಚಿಂತನೆ ನಡೆಸಿದ್ದಾರಂತೆ. ಇದರಲ್ಲಿ ಮುಖೇಶ್ ಶಕ್ತಿಮಾನ್ ಪಾತ್ರ ನಿರ್ವಹಿಸುವುದು ಮಾತ್ರವಲ್ಲದೆ, ಕಥೆ ರಚಿಸುವ ಪ್ರಯತ್ನದಲ್ಲಿಯೂ ತೊಡಗಿದ್ದಾರಂತೆ.

    ಈ ಕುರಿತು ಇಂಗ್ಲಿಷ್ ಪತ್ರಿಕೆಯೊಂದರ ಸಂದರ್ಶನದಲ್ಲಿ ಮುಖೇಶ್ ಖನ್ನಾ ಮಾಹಿತಿ ನೀಡಿದ್ದು, ಶಕ್ತಿಮಾನ್ ಮುಂದುವರಿದ ಭಾಗದ ಕುರಿತು ಕೆಲಸ ಮಾಡುತ್ತಿದ್ದೇವೆ. ಶಕ್ತಿಮಾನ್‍ನ ಎರಡನೇ ಭಾಗವನ್ನು ತೆರೆ ಮೇಲೆ ತರಲು ಕಳೆದ ಮೂರು ವರ್ಷಗಳಿಂದ ಸಿದ್ಧತೆ ನಡೆಸಿದ್ದೇವೆ. ಇದು ಸಮಕಾಲೀನವಾಗಿದ್ದು, ಮೌಲ್ಯಗಳನ್ನು ಎತ್ತಿ ಹಿಡಿಯಲಿದೆ. ಹೀಗಾಗಿ ಅದರ ಎರಡನೇ ಭಾಗದ ತಯಾರಿಯಲ್ಲಿ ತೊಡಗಿದ್ದೇವೆ. ಅಲ್ಲದೆ ಜನ ಸಹ ಮುಂದೇನಾಗುತ್ತದೆ ಎಂಬುದನ್ನು ತಿಳಿಯಲು ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಕೊರೊನಾ ಭೀತಿ ಎಲ್ಲ ತಿಳಿಯಾದ ನಂತರ ಕೆಲಸ ಚುರುಕಾಗಲಿದೆ. ಆದರೆ ಯಾವಾಗಿಂದ ಮತ್ತೆ ಕೆಲಸ ಮಾಡುತ್ತೇವೆ ಎಂಬ ನಿರ್ದಿಷ್ಟ ಸಮಯವನ್ನು ಹೇಳಲು ಸಾಧ್ಯವಿಲ್ಲ. ಹಿಂದೆಂದಿಗಿಂತಲೂ ಇದೀಗ ತುಂಬಾ ಬೇಡಿಕೆ ಬರುತ್ತಿದೆ. ಹೀಗಾಗಿ ಎರಡನೇ ಭಾಗವನ್ನು ತೆರೆ ಮೇಲೆ ತರಲು ಇದು ಸೂಕ್ತ ಸಮಯ ಎಂದು ನಾನು ಭಾವಿಸಿದ್ದೇನೆ. ಇದಕ್ಕೂ ಮುನ್ನ ಮುಖೇಶ್ ಅವರು ಸೂಪರ್ ಹೀರೋ ಕುರಿತು ಚಿತ್ರ ಮಾಡುವ ಇಂಗಿತವನ್ನು ಹೊರ ಹಾಕಿದ್ದರು. ನಾನು ಶಕ್ತಿಮಾನ್ ನನ್ನು ಪೂರ್ಣ ಪ್ರಮಾಣದ ಚಲನಚಿತ್ರವನ್ನಾಗಿಸಲು ಬಯಸಿದ್ದೆ. ಆದರೆ ಟೆಲಿಫಿಲಂನೊಂದಿಗೆ ಹಣಕಾಸು ಹೊಂದಾಣಿಕೆ ಏರ್ಪಡಲಿಲ್ಲ. ಹೀಗಾಗಿ ಈ ಯೋಜನೆ ಈಡೇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಅಲ್ಲದೆ ಶಕ್ತಿಮಾನ್ 3ಡಿ ಆ್ಯನಿಮೇಟೆಡ್ ಸಿರೀಸ್ ಕೂಡ ಘೋಷಣೆಯಾಗಿದ್ದು, ಇದರ ಟ್ರೈಲರ್ ನ್ನು ಕಳೆದ ವರ್ಷ ಕಾಮಿಕ್-ಕಾನ್ ಇಂಡಿಯಾದಲ್ಲಿ ಬಿಡುಗಡೆ ಮಾಡಲಾಗಿದೆ.

    ಕೊರೊನಾ ವೈರಸ್ ಲಾಕ್‍ಡೌನ್ ಸಂದರ್ಭದಲ್ಲಿ ಕಾಲ ಕಳೆಯಲು ಅನುಕೂಲವಾಗುವಂತೆ ಇತ್ತೀಚೆಗಷ್ಟೇ ಹಳೆಯ ರಾಮಾಯಣ, ಮಹಾಭಾರತ ಧಾರಾವಾಹಿಗಳನ್ನು ಪ್ರಸಾರ ಮಾಡಲು ಸರ್ಕಾರ ಮುಂದಾಗಿದೆ. ಇವೆರಡೂ ಧಾರವಾಹಿ ಸಹ ಒಂದಾನೊಂದು ಕಾಲದಲ್ಲಿ ದೇಶದ ಜನತೆಯ ಪ್ರೈಮ್ ಟೈಮ್ ಫೇವರಿಟ್ ಶೋಗಳಾಗಿದ್ದವು. ಹೀಗಾಗಿ ಸಾರ್ವಜನಿಕರಲ್ಲಿ ಸಾಮರಸ್ಯ ಕಾಪಾಡಲು ಈ ಧಾರವಾಹಿಗಳನ್ನು ಸರ್ಕಾರ ಮರು ಪ್ರಸಾರ ಮಾಡುವ ನಿರ್ಧಾರ ಕೈಗೊಂಡಿದೆ.