Tag: ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ

  • ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ 20 ವಾಹನಗಳ ನಡ್ವೆ ಭೀಕರ ಅಪಘಾತ – ಐಷಾರಾಮಿ ಕಾರುಗಳೇ ಚಿಂದಿ ಚಿಂದಿ

    ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ 20 ವಾಹನಗಳ ನಡ್ವೆ ಭೀಕರ ಅಪಘಾತ – ಐಷಾರಾಮಿ ಕಾರುಗಳೇ ಚಿಂದಿ ಚಿಂದಿ

    ಮುಂಬೈ: ರಾಯಗಢ ಜಿಲ್ಲೆಯ ಖೋಪೋಲಿ ಬಳಿಯ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ (Mumbai Pune Expressway) ಸುಮಾರು 20 ವಾಹನಗಳು ಅಪಘಾತಕ್ಕೀಡಾಗಿವೆ (Accident). 20ಕ್ಕೂ ಹೆಚ್ಚು ವಾಹನಗಳು ಪರಸ್ಪರ ಡಿಕ್ಕಿಯಾದ ಪರಿಣಾಮ, ಓರ್ವ ಸಾವನ್ನಪ್ಪಿದ್ದು, ಸುಮಾರು 20 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಪ್ರಾಥಮಿಕ ಮಾಹಿತಿಯ ಪ್ರಕಾರ, ಖೋಪೋಲಿ ಪೊಲೀಸ್ ಠಾಣೆ (Khopoli Police Station) ವ್ಯಾಪ್ತಿಯಲ್ಲಿ ಮುಂಬೈಗೆ ಹೋಗುವ ಮಾರ್ಗದಲ್ಲಿ ಘಟನೆ ಸಂಭವಿಸಿದೆ. ಇಳಿಜಾರಿನಲ್ಲಿ ಬರುವಾಗ ಕಂಟೇನರ್‌ ಟ್ರಕ್‌ನ ಬ್ರೇಕ್‌ ಫೇಲ್‌ ಆಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಟ್ರಕ್‌ ಮುಂದೆ ಸಾಗುತ್ತಿದ್ದ BMW ಮತ್ತು ಮರ್ಸಿಡಿಸ್‌ನಂತಹ ಐಷಾರಾಮಿ ಕಾರುಗಳು ಸೇರಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ.

    ಮುಂಬೈ ಲೇನ್‌ನ ಹೊಸ ಸುರಂಗ ಮಾರ್ಗದಿಂದ ಫುಡ್ ಮಾಲ್ ಹೋಟೆಲ್ ಪ್ರದೇಶದವರೆಗೆ ಅಪಘಾತ ಸಂಭವಿಸಿದೆ. ಈವರೆಗೆ ಓರ್ವ ಸಾವನ್ನಪ್ಪಿದ್ದು, ಸುಮಾರು 20 ಮಂದಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಕೆಲ ವಾಹನಗಳಂತೂ ಸಂಪೂರ್ಣ ಚಿಂದಿಯಾಗಿವೆ.

    ಸ್ಥಳೀಯ ಪೊಲೀಸರು ಹಾಗೂ ಅಂಬುಲೆನ್ಸ್‌ ವ್ಯವಸ್ಥೆಯನ್ನ ನಿಯೋಜನೆ ಮಾಡಿದ್ದಾರೆ. ಗಾಯಗೊಂಡವರನ್ನ ನವಿ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸುತ್ತಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ಬಳಿಕ ಅಪಘಾತಕ್ಕೆ ಕಾರಣವಾದ ಟ್ರಕ್‌ ಚಾಲಕನನ್ನ ವಶಕ್ಕೆ ಪಡೆಯಲಾಗಿದೆ. ಈ ಸಂಬಂದ ತನಿಖೆ ಮುಂದುವರಿದಿದೆ.

  • ಎಕ್ಸ್‌ಪ್ರೆಸ್‌ವೇನಲ್ಲಿ ಚಲಿಸುತ್ತಿದ್ದಾಗ ಬ್ರೇಕ್ ಫೇಲ್ – ಟ್ರಕ್ ಹೊಡೆತಕ್ಕೆ 12 ಕಾರುಗಳು ನಜ್ಜುಗುಜ್ಜು

    ಎಕ್ಸ್‌ಪ್ರೆಸ್‌ವೇನಲ್ಲಿ ಚಲಿಸುತ್ತಿದ್ದಾಗ ಬ್ರೇಕ್ ಫೇಲ್ – ಟ್ರಕ್ ಹೊಡೆತಕ್ಕೆ 12 ಕಾರುಗಳು ನಜ್ಜುಗುಜ್ಜು

    ಮುಂಬೈ: ಟ್ರಕ್ (Truck) ಒಂದರ ಬ್ರೇಕ್ ಫೇಲ್ (Brake Fail) ಆದ ಪರಿಣಾಮ ಇತರ ವಾಹನಗಳಿಗೆ ಡಿಕ್ಕಿ ಹೊಡೆದು 12 ಕಾರುಗಳು (Cars) ನಜ್ಜುಗುಜ್ಜಾಗಿರುವ ಘಟನೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ (Mumbai-Pune Expressway) ಗುರುವಾರ ನಡೆದಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಗಳು ತಿಳಿಸಿವೆ.

    ಮಹಾರಾಷ್ಟ್ರದ (Maharashtra) ಖೋಪೋಲಿ ಬಳಿ ಅಪಘಾತ ನಡೆದಿದೆ. ಎಕ್ಸ್‌ಪ್ರೆಸ್‌ವೇನಲ್ಲಿ ಚಳಿಸುತ್ತಿದ್ದ ಸಂದರ್ಭ ಟ್ರಕ್‌ನ ಬ್ರೇಕ್ ಫೇಲ್ ಆಗಿದೆ. ಪರಿಣಾಮ ಟ್ರಕ್ 12 ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸುಮಾರು 7-8 ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ ಎನ್ನಲಾಗಿದೆ. ಇದನ್ನೂ ಓದಿ: ದಾಂತೇವಾಡ ನಕ್ಸಲ್ ದಾಳಿ- ಮೃತ ಯೋಧನ ಶವಕ್ಕೆ ಹೆಗಲು ಕೊಟ್ಟ ಭೂಪೇಶ್ ಬಘೇಲ್

    ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋಗಳು ಹರಿದಾಡಿವೆ. ಹತ್ತರು ಕಾರುಗಳು ನಜ್ಜುಗುಜ್ಜಾಗಿ ರಸ್ತೆಯಲ್ಲಿ ರಾಶಿ ಬಿದ್ದಿರುವುದು ಕಂಡುಬಂದಿದೆ. ಟ್ರಕ್‌ಗೆ ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ಇನ್ನೆರಡು ಕಾರುಗಳು ಒಂದರ ಮೇಲೊಂದರಂತೆ ಬಿದ್ದಿರುವುದೂ ಕಂಡುಬಂದಿದೆ. ಗಾಯಾಳುಗಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೋದಿ ವಿಷದ ಹಾವು ಇದ್ದಂತೆ: ಖರ್ಗೆ