Tag: ಮುಂಬೈ ಏರ್‌ಪೋರ್ಟ್‌

  • ರಣ ಮಳೆಗೆ ನಡುಗಿದ ಮುಂಬೈ – ಹಲವೆಡೆ ಟ್ರಾಫಿಕ್‌ ಜಾಮ್‌, ಶಾಲಾ-ಕಾಲೇಜುಗಳಿಗೆ ರಜೆ, ರೆಡ್‌ ಅಲರ್ಟ್‌ ಘೋಷಣೆ

    ರಣ ಮಳೆಗೆ ನಡುಗಿದ ಮುಂಬೈ – ಹಲವೆಡೆ ಟ್ರಾಫಿಕ್‌ ಜಾಮ್‌, ಶಾಲಾ-ಕಾಲೇಜುಗಳಿಗೆ ರಜೆ, ರೆಡ್‌ ಅಲರ್ಟ್‌ ಘೋಷಣೆ

    – ಮುಳುಗಿದ ರೈಲ್ವೆ ಹಳಿಗಳು; ವಿಮಾನ ಹಾರಾಟಕ್ಕೂ ತೊಂದರೆ

    ಮುಂಬೈ: ಮಹಾರಾಷ್ಟ್ರದ ಮುಂಬೈ (Mumbai) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಂದು ಬೆಳಗ್ಗೆ ಭಾರೀ ಮಳೆಯಿಂದಾಗಿ (Heavy Rain) ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಭಾರೀ ಪ್ರಮಾಣದ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

    ಅಧಿಕಾರಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ನಗರದಲ್ಲಿ ಗರಿಷ್ಠ 54 ಮಿ.ಮೀ. ಗಿಂತ ಹೆಚ್ಚು ಮಳೆಯಾಗಿದೆ. ಇನ್ನೂ ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 72 ಮಿ.ಮೀ. ಮತ್ತು 65 ಮಿ.ಮೀ. ಮಳೆಯಾಗಿದೆ. ಹಾಗಾಗಿ ಮುಂಬೈ ಮಹಾನಗರ ಪಾಲಿಕೆಯು, ಅನಗತ್ಯ ಓಡಾಟ ನಿಲ್ಲಿಸುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಮೀನುಗಾರರು (Fishermen) ಕಡಲಿಗಿಳಿಯದಂತೆ ಸೂಚಿಸಿದೆ. ಇದನ್ನೂ ಓದಿ: ಮಾವೋವಾದಿಗಳು ಇಟ್ಟಿದ್ದ ಐಇಡಿ ಸ್ಫೋಟ – ಓರ್ವ ಪೊಲೀಸ್ ಸಾವು, ಮೂವರಿಗೆ ಗಾಯ

    ವಿಮಾನ ಹಾರಟಕ್ಕೂ ತೊಂದರೆ
    ಮಳೆಯಿಂದಾಗಿ ಮುಂಬೈನ ವಿಮಾನ ನಿಲ್ದಾಣದಲ್ಲಿ (Mumbai Airport) ಲ್ಯಾಂಡಿಂಗ್‌ ಮಾಡುವ ಮುನ್ನ 9 ವಿಮಾನಗಳು ಹಲವು ಸುತ್ತುಗಳನ್ನು ಹಾಕಿ ನಂತರ ಪ್ರಯಾಸದಿಂದ ಇಳಿದಿವೆ. ಒಂದು ವಿಮಾನವನ್ನ ಸೂರತ್‌ಗೆ ಮಾರ್ಗ ಬದಲಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: Video Viral | ಯೋಧನನ್ನ ಕಂಬಕ್ಕೆ ಕಟ್ಟಿ ಟೋಲ್ ಪ್ಲಾಜಾ ಸಿಬ್ಬಂದಿಯಿಂದ ಥಳಿತ; ನಾಲ್ವರು ಅರೆಸ್ಟ್‌

    ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು:
    ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮಳೆ ಹೆಚ್ಚಳವಾಗಿದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಮಳೆ ಸುರಿಯುತ್ತಿದ್ದು ಹಲವು ರಸ್ತೆಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇದನ್ನೂ ಓದಿ: ಸಂಜೆಯೊಳಗೆ ಮಹೇಶ್‌ ಶೆಟ್ಟಿ ತಿಮರೋಡಿ ಅರೆಸ್ಟ್‌ ಮಾಡಲು ಪರಮೇಶ್ವರ್‌ ಸೂಚನೆ

    ರೆಡ್‌ ಅಲರ್ಟ್‌ ಘೋಷಣೆ
    ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ 2 ದಿನಗಳಿಂದ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ. ಹೀಗಾಗಿ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಕೆಲವು ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದೆ. ಮಂಗಳವಾರ ಸಹ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹೇಳಿದೆ.

    ರೈಲು ಸಂಚಾರದಲ್ಲಿ ವಿಳಂಬ
    ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೇಂದ್ರೀಯ ರೈಲ್ವೆಯ ಉಪನಗರ ರೈಲು ಸಂಚಾರದಲ್ಲೂ ಸಮಸ್ಯೆ ಎದುರಾಗಿದೆ. ಕೆಲವು ಪ್ರದೇಶಗಳಲ್ಲಿ ಹಳಿಗಳು ಮುಳುಗಿವೆ. ಕುರ್ಲ ಮತ್ತು ತಿಲಕ್ ನಗರ ನಿಲ್ದಾಣಗಳ ನಡುವೆ ಚಾರ್ಜಿಂಗ್‌ ಪಾಯಿಂಟ್‌ಗಳೇ ಗೋಚರಿಸದಂತಾಗಿದೆ. ಹೀಗಾಗಿ ಕೆಲ ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ. ಆದ್ರೆ ಯಾವುದೇ ಸಂಚಾರ ಸ್ಥಗಿತಗೊಳಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ – ಉತ್ತರ ಪ್ರದೇಶದಲ್ಲಿ ಲೊಕೇಶನ್‌ ಪತ್ತೆ!

    ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ – ಉತ್ತರ ಪ್ರದೇಶದಲ್ಲಿ ಲೊಕೇಶನ್‌ ಪತ್ತೆ!

    ಮುಂಬೈ: ಇಲ್ಲಿನ ತಾಜ್‌ ಹೋಟೆಲ್‌ ಮತ್ತು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಲಾಗಿದೆ (Bomb Threat) ಎಂದು ಮುಂಬೈ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಬೆದರಿಕೆ ಕರೆ ಬಂದಿದೆ.

    ಬೆದರಿಕೆ ಕರೆ ಬಂದ ಹಿನ್ನೆಲೆ ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ ಪೊಲೀಸರು (Mumbai Police) ಸ್ಥಳಕ್ಕೆ ದೌಡಾಯಿಸಿ ತೀವ್ರ ತಪಾಸಣೆ ನಡೆಸಿದ್ದಾರೆ. ಈ ವೇಳೆ ಅನುಮಾನಾಸ್ಪದವಾದ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ದೂರವಾಣಿ ಕರೆಯ ಲೊಕೇಶನ್‌ ಉತ್ತರ ಪ್ರದೇಶದಲ್ಲಿ (Uttar Pradesh) ಪತ್ತೆಯಾಗಿದೆ ಎಂದಿರುವ ಪೊಲೀಸರು ಕಿಡಿಗೇಡಿಗಳಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ರಾಹುಲ್‌ ಪ್ರಚಾರದ ವೇಳೆ ಕುಸಿದ ವೇದಿಕೆ

    ಇತ್ತೀಚೆಗಷ್ಟೇ ದೆಹಲಿಯ ಸುಮಾರು 130 ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿತ್ತು. ಇದಾದ ಎರಡು ದಿನಗಳ ನಂತರ ಜೈಪುರದ ಶಾಲೆಗಳಿಗೂ ಬಾಂಬ್‌ ಬೆದರಿಕೆಯ ಇಮೇಲ್‌ ಬಂದಿತ್ತು. ಸದ್ಯ ಮುಂಬೈ ತಾಜ್‌ ಹೋಟೆಲ್‌ನಲ್ಲಿ (Taj Hotel) ಬಾಂಬ್‌ ಇರಿಸಿರುವುದಾಗಿ ಬೆದರಿಕೆ ಕರೆ ಬಂದಿರುವುದು 2008ರಲ್ಲಿ ನಡೆದ ಮುಂಬೈ ದಾಳಿಯನ್ನೇ ನೆನಪಿಸಿದೆ. ಇದನ್ನೂ ಓದಿ: ಪ್ರಣಾಳಿಕೆ ಭರವಸೆಯಿಂದಾಗುವ ಆರ್ಥಿಕ ಲಾಭ ಅಭ್ಯರ್ಥಿಯ ಭ್ರಷ್ಟಾಚಾರವಲ್ಲ – ಜಮೀರ್‌ಗೆ ಸುಪ್ರೀಂ ರಿಲೀಫ್

    ನೆನಪಿದೆಯಾ ಆ ಕರಾಳ ದಿನ..?
    2008ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. 60 ಗಂಟೆಗಳಿಗೂ ಹೆಚ್ಚು ಕಾಲ ಮುತ್ತಿಗೆ ಹಾಕಿ, ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನ ನಡೆಸಿ 166 ಜನರನ್ನು ಹತ್ಯೆಗೈದಿದ್ದರು. 300ಕ್ಕೂ ಹೆಚ್ಚು ಜನರನ್ನ ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು. ಇದನ್ನೂ ಓದಿ: ಕೇಜ್ರಿವಾಲ್‌ಗೆ ಕ್ಯಾನ್ಸರ್ ಗಂಭೀರ ಹಂತದಲ್ಲಿಯೇ?- ಜಾಮೀನು ವಿಸ್ತರಣೆ ಅರ್ಜಿಯ ಕುರಿತು ಅತಿಶಿ ಹೇಳಿದ್ದೇನು? 

  • ಎಮಿರೇಟ್ಸ್ ವಿಮಾನಕ್ಕೆ‌ ಸಿಲುಕಿ 40 ರಾಜಹಂಸ ಹಕ್ಕಿಗಳು ಸಾವು

    ಎಮಿರೇಟ್ಸ್ ವಿಮಾನಕ್ಕೆ‌ ಸಿಲುಕಿ 40 ರಾಜಹಂಸ ಹಕ್ಕಿಗಳು ಸಾವು

    ಮುಂಬೈ: ಎಮಿರೇಟ್ಸ್‌ ವಿಮಾನಕ್ಕೆ (Emirates Aircraft) ಡಿಕ್ಕಿ ಹೊಡೆದು 40 ರಾಜಹಂಸ (Flamingos) ಹಕ್ಕಿಗಳು ಮುಂಬೈನ ಉಪನಗರವಾದ ಘಾಟ್‌ಕೋಪರ್‌ನಲ್ಲಿ ಸಾವಿಗೀಡಾಗಿವೆ. ಮೃತ ಹಕ್ಕಿಗಳು ವಿವಿಧ ಪ್ರದೇಶಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

    ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಇಳಿಯುವ ಕೆಲವೇ ಕ್ಷಣಗಳ ಮೊದಲು ವಿಮಾನವು ಹಕ್ಕಿ ಹಿಂಡುಗಳಿಗೆ ಡಿಕ್ಕಿ ಹೊಡೆದಿದೆ ಎಂದು ವರದಿ ತಿಳಿಸಿದೆ. ದುಬೈಗೆ ತೆರಳಬೇಕಿದ್ದ ವಿಮಾನವು ನಿನ್ನೆ (ಸೋಮವಾರ) ರದ್ದುಗೊಂಡಿದೆ. ಇದನ್ನೂ ಓದಿ: ಅಮಿತ್‌ ಶಾ ಇನ್ನೂ ಪ್ರಧಾನಿಯಾಗಿಲ್ಲ ಆಗಲೇ ದುರಹಂಕಾರಿಯಾಗಿದ್ದಾರೆ: ಕೇಜ್ರಿವಾಲ್ ವಾಗ್ದಾಳಿ

    ಘಾಟ್ಕೋಪರ್ ಪ್ರದೇಶದಲ್ಲಿ ಸತ್ತು ಬಿದ್ದಿದ್ದ ಪಕ್ಷಿಗಳ ಬಗ್ಗೆ ಸ್ಥಳೀಯ ನಿವಾಸಿಗಳು, ವನ್ಯಜೀವಿ ತಂಡಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಪಕ್ಷಿಗಳ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ.

    ಪಕ್ಷಿಗಳ ಮೃತದೇಹಗಳು ಬಿದ್ದಿದ್ದ ಪ್ರದೇಶಗಳಿಗೆ ತೆರಳಿ ಅಧಿಕಾರಿಗಳು ಅವಶೇಷಗಳನ್ನು ವಶಕ್ಕೆ ಪಡೆದಿದ್ದಾರೆ. ರೆಕ್ಕೆಗಳು, ಉಗುರು, ಕೊಕ್ಕುಗಳ ಮುರಿದ ತುಂಡುಗಳು ಅಲ್ಲಲ್ಲಿ ಬಿದ್ದಿದ್ದವು. ಇದನ್ನೂ ಓದಿ: ಸಂಸದ ಜಯಂತ್ ಸಿನ್ಹಾಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್ ಜಾರಿ

    ಹಕ್ಕಿಗಳ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರೆಸ್ಕಿಂಕ್ ಅಸೋಸಿಯೇಷನ್ ಫಾರ್ ವೈಲ್ಡ್ಲೈಫ್ ವೆಲ್ಫೇರ್ (RAWW) ಸಂಸ್ಥಾಪಕ ಪವನ್ ಶರ್ಮಾ ಹೇಳಿದ್ದಾರೆ.

  • ಬಿಟ್‌ಕಾಯಿನ್‌ ರೂಪದಲ್ಲಿ 8 ಕೋಟಿ ಕೊಡದಿದ್ರೆ ಮುಂಬೈ ಏರ್ಪೋರ್ಟ್‌ ಬ್ಲಾಸ್ಟ್‌ – ಬೆದರಿಕೆ

    ಬಿಟ್‌ಕಾಯಿನ್‌ ರೂಪದಲ್ಲಿ 8 ಕೋಟಿ ಕೊಡದಿದ್ರೆ ಮುಂಬೈ ಏರ್ಪೋರ್ಟ್‌ ಬ್ಲಾಸ್ಟ್‌ – ಬೆದರಿಕೆ

    ಮುಂಬೈ: ಬಿಟ್‌ಕಾಯಿನ್‌ (ಕ್ರಿಪ್ಟೋಕರೆನ್ಸಿ) (Bitcoin) ರೂಪದಲ್ಲಿ 10 ಲಕ್ಷ ಡಾಲರ್‌ (8.33 ಕೋಟಿ ರೂ.) ಪಾವತಿಸದಿದ್ದರೇ ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್‌ 2 ಅನ್ನು ಸ್ಫೋಟಿಸುವುದಾಗಿ ಮುಂಬೈ ಪೊಲೀಸರಿಗೆ ಇಮೇಲ್ ಬೆದರಿಕೆ ನೀಡಲಾಗಿದೆ.

    ಇ-ಮೇಲ್‌ ಬೆದರಿಕೆ ಕಳುಹಿಸಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ಮುಂಬೈ ಪೊಲೀಸರು (Mumbai Police) ಪ್ರಕರಣ ದಾಖಲಿಸಿದ್ದಾರೆ. ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮುಂಬೈ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ಗೆ (MIAL) ID–quaidacasrol@gmail.com-ನಿಂದ ಬೆದರಿಕೆ ಇಮೇಲ್ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಹೇಳಿಕೆ- ಕೇಂದ್ರ ಚುನಾವಣಾ ಆಯೋಗದಿಂದ ರಾಹುಲ್ ಗಾಂಧಿಗೆ ನೋಟಿಸ್

    ನಿಮ್ಮ ವಿಮಾನ ನಿಲ್ದಾಣಕ್ಕೆ ಇದು ಕೊನೆಯ ಎಚ್ಚರಿಕೆಯಾಗಿದೆ. 10 ಲಕ್ಷ ಡಾಲರ್‌ (Million Dollars) ಅನ್ನು ಬಿಟ್‌ಕಾಯಿನ್‌ ರೂಪದಲ್ಲಿ ಪಾವತಿಸದೇ ಇದ್ದರೇ 48 ಗಂಟೆಗಳ ಒಳಗೆ ವಿಮಾನ ನಿಲ್ದಾಣದ ಟರ್ಮಿನಲ್ 2 (Mumbai Airport Terminal 2 )ಅನ್ನು ಬಾಂಬ್‌ ಹಾಕಿ ಉಡಾಯಿಸುತ್ತೇವೆ. 24 ಗಂಟೆಗಳ ನಂತರ ಮತ್ತೊಂದು ಎಚ್ಚರಿಕೆ ನೀಡಲಾಗುವುದು ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ

    ಬೆದರಿಕೆಯ ಇಮೇಲ್‌ ಬರುತ್ತಿದ್ದಂತೆ ಮುಂಬೈ ಪೊಲೀಸರು (Mumbai Police) ಫುಲ್‌ ಅಲರ್ಟ್‌ ಆಗಿದ್ದಾರೆ. ಇಮೇಲ್‌ ಕಳುಹಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಸೂಕ್ಷ್ಮವಾಗಿ ತನಿಖೆಯನ್ನು ಮುಂದುವರಿಸಿದ್ದಾರೆ.

    \

    ಈ ಹಿಂದೆ ಸೆಪ್ಟೆಂಬರ್‌ 5 ರಂದು ಮುಂಬೈ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಕಾಮತಿಪುರದಲ್ಲಿ ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿತ್ತು. ಇದನ್ನೂ ಓದಿ: ನೌಕಾಪಡೆ 8 ಮಾಜಿ ಸಿಬ್ಬಂದಿಯ ಮರಣದಂಡನೆಗೆ ವಿರೋಧ – ಭಾರತದ ಮನವಿ ಸ್ವೀಕರಿಸಿದ ಕತಾರ್

  • ಶಾರುಖ್‌ ಬ್ಯಾಗ್‌ನಲ್ಲಿ ದುಬಾರಿ ವಾಚ್‌ ಪತ್ತೆ – ಏರ್‌ಪೋರ್ಟ್‌ನಲ್ಲೇ 6.87 ಲಕ್ಷ ರೂ. ತೆರಿಗೆ ಕಟ್ಟಿದ ನಟ

    ಶಾರುಖ್‌ ಬ್ಯಾಗ್‌ನಲ್ಲಿ ದುಬಾರಿ ವಾಚ್‌ ಪತ್ತೆ – ಏರ್‌ಪೋರ್ಟ್‌ನಲ್ಲೇ 6.87 ಲಕ್ಷ ರೂ. ತೆರಿಗೆ ಕಟ್ಟಿದ ನಟ

    ಯುಎಇಯಿಂದ (UAE) ವಾಪಸ್‌ ಆಗುವಾಗ ಬ್ಯಾಗ್‌ನಲ್ಲಿ ದುಬಾರಿ ವಾಚ್‌ಗಳನ್ನು ಹೊಂದಿದ್ದ ಬಾಲಿವುಡ್‌ (Bollywood) ನಟ ಶಾರುಖ್‌ ಖಾನ್‌ (Shah Rukh Khan) ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಕಸ್ಟಮ್ಸ್‌ ಅಧಿಕಾರಿಗಳು ತಡೆದು ತೆರಿಗೆ ಕಟ್ಟಿಸಿಕೊಂಡು ಕಳುಹಿಸಿದ್ದಾರೆ.

    ಶಾರುಕ್‌ ಖಾನ್‌ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ತಡೆದು ಸುಮಾರು ಒಂದು ಗಂಟೆ ಕಾಲ ಪರಿಶೀಲನೆ ನಡೆಸಿದರು. ಈ ವೇಳೆ ನಟನ ಬ್ಯಾಗ್‌ನಲ್ಲಿ ಸುಮಾರು 18 ಲಕ್ಷ ರೂ. ಮೌಲ್ಯದ ದುಬಾರಿ ವಾಚ್‌ಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಆ ವಾಚ್‌ಗಳಿಗೆ 6.87 ಲಕ್ಷ ರೂ. ತೆರಿಗೆಯನ್ನು ಶಾರುಖ್‌ ಖಾನ್‌ ಪಾವತಿಸಿದ್ದಾರೆ. ಇದನ್ನೂ ಓದಿ: ಡೇರ್ ಡೆವಿಲ್ ಸ್ಟಂಟ್ ಮಾಡಿದ ನಟ ಪವನ್ – ಕೇಸ್ ದಾಖಲಿಸಿದ ಪೊಲೀಸರು

    ಸರಿಸುಮಾರು ಒಂದು ಗಂಟೆ ವಿಚಾರಣೆಯ ನಂತರ ಶಾರುಖ್ ಮತ್ತು ಮ್ಯಾನೇಜರ್‌ ಪೂಜಾ ದದ್ಲಾನಿ ಅವರನ್ನು ವಿಮಾನ ನಿಲ್ದಾಣದಿಂದ ಹೊರಡಲು ಅನುಮತಿ ನೀಡಲಾಯಿತು. ಆದರೆ ನಟನ ಅಂಗರಕ್ಷಕ ರವಿ ಮತ್ತು ಇತರ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿಯೇ ಉಳಿಯಬೇಕಾಯಿತು. ಅಂಗರಕ್ಷಕ ರವಿ, ಶಾರುಖ್‌ ಖಾನ್‌ ಅವರ ಕ್ರೆಡಿಟ್ ಕಾರ್ಡ್ ಬಳಸಿ 6,87,000 ರೂ. ತೆರಿಗೆಯನ್ನು ಠೇವಣಿ ಮಾಡಿ ನಂತರ ಅಲ್ಲಿಂದ ಹೊರಟರು.

    ಶಾರುಖ್ ಜೊತೆಗೆ ಅವರ ಮ್ಯಾನೇಜರ್ ಪೂಜಾ ದದ್ಲಾನಿ, ಅಂಗರಕ್ಷಕ ರವಿ ಸೇರಿದಂತೆ ಅವರ ಸಿಬ್ಬಂದಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಮುಂಬೈಗೆ ಖಾಸಗಿ ಜೆಟ್‌ ಮೂಲಕ ಹಿಂತಿರುಗುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಖಾನ್ ಯುಎಇಗೆ ತೆರಳಿದ್ದರು. ಇದನ್ನೂ ಓದಿ: ಮಗು ಹುಟ್ಟಿದ ಒಂದೇ ತಾಸಿಗೆ ಹೆಸರಿಟ್ಟು ಸಂಭ್ರಮಿಸಿದ ನಟಿ ಬಿಪಾಶಾ ಬಸು

    Live Tv
    [brid partner=56869869 player=32851 video=960834 autoplay=true]