Tag: ಮುಂಡಗೋಡ

  • ಹಾಲ್‌ನಲ್ಲಿ ಮದ್ವೆಯಾಗದಿದ್ರೂ ಸುಳ್ಳು ದಾಖಲೆ ಸೃಷ್ಟಿ –  ಯೂಟ್ಯೂಬರ್ ಮುಕುಳೆಪ್ಪನ ಜೊತೆ ಅಧಿಕಾರಿಗಳನ್ನು ಬಂಧಿಸುವಂತೆ ಆಗ್ರಹ

    ಹಾಲ್‌ನಲ್ಲಿ ಮದ್ವೆಯಾಗದಿದ್ರೂ ಸುಳ್ಳು ದಾಖಲೆ ಸೃಷ್ಟಿ – ಯೂಟ್ಯೂಬರ್ ಮುಕುಳೆಪ್ಪನ ಜೊತೆ ಅಧಿಕಾರಿಗಳನ್ನು ಬಂಧಿಸುವಂತೆ ಆಗ್ರಹ

    – ವಾಸವಾಗದೇ ಇದ್ರೂ ಬಾಡಿಗೆ ಮನೆಯ ನಕಲಿ ಒಪ್ಪಂದ ಪತ್ರ ಸಲ್ಲಿಕೆ
    – ಮುಕುಳೆಪ್ಪ ಹಿಂದೂ ಧರ್ಮಕ್ಕೆ ಬರುವಂತೆ ಗಾಯತ್ರಿ ತಾಯಿ ಆಗ್ರಹ

    ಹುಬ್ಬಳ್ಳಿ: ಯೂಟ್ಯೂಬರ್ ಮುಕುಳೆಪ್ಪ ಮದುವೆ ವಿವಾದ (Mukaleppa Marriage Controversy) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.‌ ಖಾಜ್ವಾ ಮತ್ತು ಗಾಯತ್ರಿ (Gayathri) ನಕಲಿ‌ ದಾಖಲೆಗಳನ್ನು ನೀಡಿ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಉಪ ನೋಂದಣಿ ಕಚೇರಿಯಲ್ಲಿ ವಿಶೇಷ ಮದುವೆ ಕಾಯ್ದೆಯ ಅಡಿ (Special Marriage Act) ಮದುವೆಯಾಗಿರುವುದಕ್ಕೆ ಗಾಯತ್ರಿ ಕುಟುಂಬಸ್ಥರು ಮತ್ತು ಶ್ರೀರಾಮಸೇನೆ (Srirma Sene) ದಾಖಲೆ ಬಿಡುಗಡೆ ಮಾಡಿದೆ.

    ಉಪ ನೋಂದಣಿ ಕಚೇರಿ ಸಲ್ಲಿಕೆ ಮಾಡಿರುವ ದಾಖಲೆ ಬಿಡುಗಡೆಯಾದ ಬೆನ್ನಲ್ಲೇ ಗಾಯತ್ರಿ ಕುಟುಂಬಸ್ಥರು ಮತ್ತು ಶ್ರೀರಾಮಸೇನೆ, ಮುಕುಳೆಪ್ಪ ಬಂಧನಕ್ಕೆ ಆಗ್ರಹಿಸಿದೆ. ಮುಕುಳೆಪ್ಪ ಮತಾಂತರ ಮಾಡಿಲ್ಲ ಅಂತ ಹೇಳಿಕೆ ನೀಡಿದ್ದಾನೆ. ಆದರೆ ಯುವತಿಗೆ ತಾಳಿ ಹಾಕಿಲ್ಲ ಕೈ ಮೇಲೆ ಉರ್ದು ಅಕ್ಷರದಲ್ಲಿ ಹೆಸರನ್ನು ಬರೆಸಿದ್ದಾನೆ ಎಂದು ಸಂಘಟನೆಗಳು ಆರೋಪಿಸಿವೆ.

    ಸುಳ್ಳು ದಾಖಲೆ ಸಲ್ಲಿಕೆ:
    ಮುಕುಳೆಪ್ಪ ಧಾರವಾಡ, ಗಾಯತ್ರಿ ಹುಬ್ಬಳ್ಳಿ ನಿವಾಸಿಯಾಗಿದ್ದು ಆರಂಭದಲ್ಲಿ ಮುಂಡಗೋಡ ಉಪ ನೋಂದಣಿ ಕಚೇರಿಗೆ ಹೋಗಿದ್ದಾರೆ. ಈ ವೇಳೆ ಸಲ್ಲಿಕೆ ಮಾಡಿದ ದಾಖಲೆಗಳು ಸರಿಯಾಗಿರದ ಕಾರಣ ಅರ್ಜಿ ತಿರಸ್ಕೃತಗೊಂಡಿವೆ.  ಇದನ್ನೂ ಓದಿ:  ನಾನು ಯಾವುದೇ ಲವ್‌ ಜಿಹಾದ್‌ ಮಾಡಿಲ್ಲ, ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದೇವೆ: ಯೂಟ್ಯೂಬರ್‌ ಮುಕಳೆಪ್ಪ

    ಈ ಅರ್ಜಿ ತಿರಸ್ಕೃತಗೊಳ್ಳಲು ಕಾರಣ ತಿಳಿದ ಬಳಿಕ ಮುಂಡಗೋಡದಲ್ಲಿ ಮದುವೆಯಾದರೆ ಮತ್ತು ಒಂದು ತಿಂಗಳು ಜೊತೆಯಾಗಿ ನೆಲೆಸಿದ್ದ ದಾಖಲೆ ನೀಡಿದರೆ ಮದುವೆ ಮಾನ್ಯವಾಗುತ್ತದೆ ಎಂದು ಯಾರೋ ಇವರಿಗೆ ಸಲಹೆ ನೀಡಿದ್ದಾರೆ. ಈ ಕಾರಣಕ್ಕೆ ಇವರು ಮುಂಡಗೋಡ ಟ್ರಿನಿಟಿ ಹಾಲ್‌ನಲ್ಲಿ ಮದುವೆಯಾಗಿದ್ದೇವೆ ಮತ್ತು ಮುಂಡುಗೋಡದಲ್ಲಿ ನೆಲೆಸಿದ್ದಕ್ಕೆ ಬಾಡಿಗೆ ಮನೆಯ ಒಪ್ಪಂದ ಪತ್ರವನ್ನು ಸಲ್ಲಿಕೆ ಮಾಡಿ ಮದುವೆಯನ್ನು ಮಾನ್ಯ ಮಾಡಿಸಿಕೊಂಡಿದ್ದಾರೆ.

    ಮದುವೆ ವಿಚಾರ ಜೋರಾಗಿ ವಿವಾದವಾಗುತ್ತಿದ್ದಂತೆ ಉಪ ನೋಂದಣಿ ಕಚೇರಿಗೆ ಸಲ್ಲಿಕೆ ಮಾಡಿದ ದಾಖಲೆಗಳನ್ನು ಗಾಯತ್ರಿ ಕುಟುಂಬಸ್ಥರು ಪಡೆದುಕೊಂಡಿದ್ದಾರೆ. ಈ ವೇಳೆ ಶ್ರೀರಾಮ ಸೇನೆಯವರು ತನಿಖೆಗೆ ಇಳಿದಾಗ ಏಪ್ರಿಲ್‌ 28 ರಂದು ಟ್ರಿನಿಟಿ ಹಾಲ್‌ನಲ್ಲಿ ಮದುವೆಯಾಗದೇ ಇರುವ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಮುಂಡಗೋಡ ಗಾಂಧಿನಗರದ ಬಾಡಿಗೆ ಮನೆಯಲ್ಲೂ ನೆಲೆಸದೇ ಇರುವ ವಿಚಾರವೂ ಗೊತ್ತಾಗಿದೆ. ಇದರ ಜೊತೆ ಸುಳ್ಳು ಸಾಕ್ಷಿಗಳ ಸಹಿಯನ್ನು ಹಾಕಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ:  ನಕಲಿ ದಾಖಲೆ ತೋರಿಸಿ ಹಿಂದೂ ಯುವತಿ ಜೊತೆ ಮದ್ವೆ – ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ಎಫ್‌ಐಆರ್

    ಮುಕುಳೆಪ್ಪ ಸುಳ್ಳು ದಾಖಲೆ ನೀಡಿ ಮದುವೆಯಾಗಿದ್ದಾನೆ. ಸುಳ್ಳು ದಾಖಲೆ ನೀಡಿ ಮದುವೆಯಾದ ಮುಕುಳೆಪ್ಪನನ್ನು ಬಂಧಿಸಬೇಕು. ದಾಖಲೆಗಳನ್ನು ಪರಿಶೀಲನೆ ಮಾಡದೇ ಈ ಮದುವೆಯನ್ನು ಮಾನ್ಯ ಮಾಡಿದ ಸಬ್ ರಿಜಿಸ್ಟರ್ ಮತ್ತು ಕಚೇರಿ ಸಿಬ್ಬಂದಿ ಸೇರಿ ಎಲ್ಲರನ್ನ ಬಂಧನ ಮಾಡಬೇಕು ಎಂದು ಶ್ರೀರಾಮಸೇನೆ ಲವ್ ಜಿಹಾದ್ ತಡೆ ಸಮಿತಿ ಅಧ್ಯಕ್ಷ ಬಸವರಾಜ ಗೌಡರ ಆಗ್ರಹಿಸಿದ್ದಾರೆ.

    ತನ್ನ ಮಗಳ ವಿರುದ್ಧ ಮತ್ತೊಮ್ಮೆ ತಾಯಿ ಶಿವಕ್ಕ, ನನ್ನ ಮಗಳು ಬೇಕು ಅಂದರೆ ಮುಕುಳೆಪ್ಪ ಮುಸ್ಲಿಂ ಧರ್ಮ‌ ಬಿಟ್ಟು ಹಿಂದೂ ಧರ್ಮಕ್ಕೆ ಮತಾಂತರ ಆಗಲಿ. ಹಿಂದೂ ಧರ್ಮಕ್ಕೆ ಖ್ವಾಜಾ ಬರಬೇಕು, ನಮ್ಮ ಆಚಾರ ವಿಚಾರ ಕಲಿಯಬೇಕು ಆಗ ನಾನು ಮದುವೆಗೆ ಒಪ್ಪುತ್ತೇನೆ. ಮುಕುಳೆಪ್ಪ ಕಲಾವಿದರಿಗೆ ಜಾತಿ ಧರ್ಮ ಇಲ್ಲ ಎನ್ನುತ್ತಾನೆ. ಆದರೆ ನನ್ನ ಮಗಳನ್ನು ಈಗಾಗಲೇ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ. ನನ್ನ ಮಗಳು ಸುರಕ್ಷಿತವಾಗಿಲ್ಲ ನನ್ನ ಮಗಳಿಗೆ ಖ್ವಾಜಾ ಮನೆಯಲ್ಲಿ ಪ್ರಾಣಾಪಾಯವಿದೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ.

  • ಯೂಟ್ಯೂಬರ್‌ ಮುಕಳೆಪ್ಪ ಮದುವೆ ಪ್ರಕರಣ – ವಿವಾಹ ನೋಂದಣಾಧಿಕಾರಿ ಕಚೇರಿ ಬಂದ್‌

    ಯೂಟ್ಯೂಬರ್‌ ಮುಕಳೆಪ್ಪ ಮದುವೆ ಪ್ರಕರಣ – ವಿವಾಹ ನೋಂದಣಾಧಿಕಾರಿ ಕಚೇರಿ ಬಂದ್‌

    ಕಾರವಾರ: ಯೂಟ್ಯೂಬರ್ ಮುಕಳೆಪ್ಪ ಪ್ರಕರಣದಲ್ಲಿ ಮುಂಡಗೋಡಿನ ವಿವಾಹ ನೋಂದಣಾಧಿಕಾರಿ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ನೋಂದಣಾಧಿಕಾರಿ ಕಚೇರಿಗೆ ಬೀಗ ಹಾಕಿ ಕಚೇರಿ ಸಿಬ್ಬಂದಿಯೊಂದಿಗೆ ನಡೆದ ಘಟನೆ ಜರುಗಿದೆ.

    ಸೆ.22 ರಂದು ಶ್ರೀರಾಮ ಸೇನೆಯೊಂದಿಗೆ ಗಾಯತ್ರಿ ತಾಯಿ ಶಿವಕ್ಕ ನೋಂದಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ಇದರ ನಂತರ ನೋಂದಣಾಧಿಕಾರಿ ಹೇಮಾ ಸೇರಿ ಏಳು ಜನರ ವಿರುದ್ಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ನೋಂಣಾಧಿಕಾರಿ ಹೇಮಾ ಅವರು ದಾಖಲೆ ಪರಾಮರ್ಷಿಸದೇ ನಿಯಮ ಮೀರಿ ಹಣ ಪಡೆದು ವಿವಾಹ ನೋಂದಣಿ ಮಾಡಿಕೊಂಡಿದ್ದಾರೆ ಎಂದು ದೂರಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಇಂದು ಕಚೇರಿಗೆ ಯಾವೊಬ್ಬ ಸಿಬ್ಬಂದಿಯೂ ಬಾರದೇ ಕಚೇರಿಗೆ ಬೀಗ ಹಾಕಲಾಗಿತ್ತು.

    ಕಚೇರಿಗೆ ಬಂದ ಜನ ಬೀಗ ಹಾಕಿರುವುದನ್ನು ನೋಡಿ ಕೆಲಸ ಮಾಡಿಸಿಕೊಳ್ಳಲಾಗದೇ ಹಿಂತಿರುಗುವಂತಾಯಿತು. ಕಚೇರಿಯಲ್ಲಿ ಅಧಿಕಾರಿ ಸೇರಿ ಒಟ್ಟು ನಾಲ್ಕು ಜನ ಇದ್ದು, ಕಚೇರಿ ಸಮಯದಲ್ಲೇ ಹೀಗೆ ಬೀಗ ಹಾಕಿ ಹೋಗಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ.

  • ಉಕ್ರೇನ್‍ನಲ್ಲಿ ಸಂಪರ್ಕಕ್ಕೆ ಸಿಗದ ಮುಂಡಗೋಡದ ವಿದ್ಯಾರ್ಥಿನಿ

    ಉಕ್ರೇನ್‍ನಲ್ಲಿ ಸಂಪರ್ಕಕ್ಕೆ ಸಿಗದ ಮುಂಡಗೋಡದ ವಿದ್ಯಾರ್ಥಿನಿ

    ಕಾರವಾರ: ರಷ್ಯಾ-ಉಕ್ರೇನ್ ಯುದ್ದ ಪ್ರಾರಂಭವಾಗಿ ಇಂದಿಗೆ ಏಳು ದಿನಗಳಾಗಿದ್ದು, ಇದೀಗ ಹಾವೇರಿಯ ನವೀನ್ ಸಾವಿನ ನಂತರ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರ ಜೀವಕ್ಕೆ ಕಂಟಕ ತಂದಿದೆ. ಓರ್ವ ವಿದ್ಯಾರ್ಥಿನಿಯೊಬ್ಬರು ಸಂಪರ್ಕಕ್ಕೆ ಸಿಗದೇ ಅವರ ಕುಟುಂಬ ವರ್ಗದಲ್ಲಿ ಆತಂಕ ಸೃಷ್ಟಿಯಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ನಾಲ್ಕುಜನ ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿದ್ದು ಓರ್ವ ವಿದ್ಯಾರ್ಥಿ ಮರಳಿ ಭಾರತಕ್ಕೆ ಆಗಮಿಸಿದ್ದಾರೆ. ಬನವಾಸಿಯ ಇಮ್ರಾನ್, ಸ್ನೇಹಾ, ರೊಮೇನಿಯಾ ಗಡಿಯಲ್ಲಿ ಆರಾಮವಾಗಿದ್ದಾರೆ. ಆದರೇ ಖಾರ್ಕಿವ್ ನಲ್ಲಿ ಸಿಲುಕಿರುವ ಮುಂಡಗೋಡ ಮೂಲದ ನಾಝಿಯಾರಿಗೆ ಓನ್ ರಿಸ್ಕ್‍ನಲ್ಲಿ ರೊಮೇನಿಯಾಕ್ಕೆ ಬರುವಂತೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿತ್ತು. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್

    ಸೂಚನೆಯ ಹಿನ್ನೆಯಲ್ಲಿ ಅನಿವಾರ್ಯವಾಗಿ ಯುದ್ಧ ನಡೆಯುತ್ತಿರುವ ಖಾರ್ಕಿವ್‍ನನ್ನು ತೊರೆದಿದ್ದಾರೆ. ಆದರೇ ಇದೀಗ ಇವರ ಸಂಪರ್ಕ ಕಡಿತವಾಗಿದ್ದು ಇವರ ಬಗ್ಗೆ ಕೇಂದ್ರ ಹಾಗೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ದೊರೆಯುತಿಲ್ಲ. ಸದ್ಯ ಅವರ ಕುಟುಂಬದ ಸಂಪರ್ಕದಲ್ಲಿ ಜಿಲ್ಲಾಡಳಿತ ಅಧಿಕಾರಿಗಳಿದ್ದು ಯಾವುದೇ ತೊಂದರೆಗಳಾಗದೇ ರೊಮೇನಿಯಾ ಗಡಿ ತಲುಪುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಾರತ್‍ಪೇ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ

    ಉತ್ತರ ಕನ್ನಡ ಜಿಲ್ಲೆಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಆದರೇ ಖಾರ್ಕಿವ್‍ನಿಂದ ಹೊರಟ ನಾಝಿಯಾ ಈವರೆಗೂ ಸಂಪರ್ಕಕ್ಕೆ ಸಿಗದಿರುವುದು ಕುಟುಂಬ ವರ್ಗಕ್ಕೆ ಆತಂಕ ಎದುರಾಗುವಂತೆ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಮ್ಮ ಮಗಳನ್ನು ಸುರಕ್ಷಿತವಾಗಿ ಕರೆತರುವಂತೆ ಕುಟುಂಬವು ಮನವಿ ಮಾಡಿಕೊಂಡಿದೆ. ಕಾರವಾರದಲ್ಲಿ ಸಹ ಜನಶಕ್ತಿ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ತಮ್ಮ ಜಿಲ್ಲೆಯವರನ್ನು ಸುರಕ್ಷಿತವಾಗಿ ಕರೆತರುವಂತೆ ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ್ದಾರೆ.

  • ಹೋರಿ ಬೆದರಿಸಲು ಹೋದ ಯುವಕ ಸಾವು

    ಹೋರಿ ಬೆದರಿಸಲು ಹೋದ ಯುವಕ ಸಾವು

    ಕಾರವಾರ: ಹೋರಿ ಹೆದರಿಸುವ ಸ್ಪರ್ಧೆಯಲ್ಲಿ ಯುವಕ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ.

    ಮಂಜು ನೊರಜಪ್ಪನವರ (32) ಮೃತ ಯುವಕ. ಮಂಡಗೊಡ ತಾಲೂಕಿನ ಇಂದೂರು ಗ್ರಾಮದಲ್ಲಿ ಭಾನುವಾರ ಘಟನೆ ನಡೆದಿದೆ. ರೈತ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಹೋರಿ ಸ್ಪರ್ಧೆ ನಡೆಸಲಾಗಿತ್ತು. ಈ ವೇಳೆ ಹೋರಿ ಹಿಡಿಯಲು ಹೋದಾಗ ಹೋರಿಯುವ ಯುವಕನ ಎದೆ ಹಾಗೂ ತಲೆ ಭಾಗಕ್ಕೆ ಗುದ್ದಿದೆ.

    ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ತಕ್ಷಣವೇ ಮುಂಡಗೋಡು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ. ಈ ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರವಾಹ ಪೀಡಿತ ಗ್ರಾಮಗಳ ಭೇಟಿಗೆ ಅನಂತ್‍ಕುಮಾರ್ ಹೆಗಡೆ ನಕಾರ- ಗ್ರಾಮಸ್ಥರಿಂದ ಹಿಡಿಶಾಪ

    ಪ್ರವಾಹ ಪೀಡಿತ ಗ್ರಾಮಗಳ ಭೇಟಿಗೆ ಅನಂತ್‍ಕುಮಾರ್ ಹೆಗಡೆ ನಕಾರ- ಗ್ರಾಮಸ್ಥರಿಂದ ಹಿಡಿಶಾಪ

    ಕಾರವಾರ: ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲು ಒಪ್ಪದ ಸಂಸದ ಅನಂತ್‍ಕುಮಾರ್ ಹೆಗಡೆ ಅವರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ, ಹಿಡಿ ಶಾಪ ಹಾಕಿದ ಪ್ರಸಂಗ ಇಂದು ಮುಂಡಗೋಡ ತಾಲೂಕಿನ ಕಾತೂರಿನಲ್ಲಿ ನಡೆಯಿತು.

    ಚಿಗಳ್ಳಿ ಚೆಕ್ ಡ್ಯಾಂ ಒಡೆದುಹೋದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂಡಗೋಡ ತಾಲೂಕಿನ ಕೆಲ ಗ್ರಾಮಸ್ಥರು ಆಗಮಿಸಿದ್ದರು. ಈ ವೇಳೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅನಂತ್‍ಕುಮಾರ್ ಹೆಗಡೆ ಅವರಿಗೆ ಗ್ರಾಮಸ್ಥರು, ಸರ್ ನಮ್ಮ ಗ್ರಾಮಕ್ಕೆ ಬಂದು ಪರಿಸ್ಥಿತಿ ನೋಡಿ. ಚಿಗಳ್ಳಿ ಚೆಕ್ ಡ್ಯಾಂ ಒಡೆದು ಜಮೀನು, ಮನೆ ಎಲ್ಲವೂ ನೀರು ಪಾಲಾಗಿದೆ. ಬದುಕು ತುಂಬಾ ಕಷ್ಟವಾಗಿದೆ ಎಂದು ಮನವಿ ಮಾಡಿಕೊಂಡರು. ಆಗ ಸಂಸದರು, ನಾನು ಬರುವುದು ಮುಖ್ಯವಲ್ಲ ಅಧಿಕಾರಿಗಳು ಕೆಲಸ ಮಾಡುವುದು ಮುಖ್ಯ ಎಂದು ಜಾರಿಕೊಂಡರು.

    ಅನಂತ್‍ಕುಮಾರ್ ಹೆಗಡೆ ಅವರ ಮಾತಿನಿಂದ ಕೋಪಗೊಂಡ ಗ್ರಾಮಸ್ಥರು ಸಂಸದರನ್ನು ಮುತ್ತಿಗೆ ಹಾಕಿ, ಹಿಡಿ ಶಾಪ ಹಾಕಿದರು. ಆದರೆ ಅನಂತ್‍ಕುಮಾರ್ ಹೆಗಡೆ ಅವರು ಅಲ್ಲಿಂದ ಕೆಲವೇ ನಿಮಿಷಗಳಲ್ಲಿ ಬೇರೆ ಕಡೆಗೆ ಪ್ರಯಾಣ ಬೆಳೆಸಿದರು. ಇದರಿಂದ ಕೋಪಗೊಂಡ ಗ್ರಾಮಸ್ಥರು, ವೋಟ್ ಕೇಳುವಾಗ ನಾವು ಬೇಡ ಅಂದ್ರೂ ಕಾಲು ಮುಗಿಯುತ್ತಾರೆ. ವೋಟ್‍ಗಾಗಿ ಏನ್ ಬೇಕಾದರೂ ಮಾಡುತ್ತಾರೆ. ಈಗ ಪ್ರವಾಹದಿಂದ ಜನರು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮಕ್ಕೆ ಭೇಟಿ ನೀಡುತ್ತಿಲ್ಲ. ಸಂಸದರಿಗೆ ಅರ್ಥವಾಗೊಲ್ವಾ? ಹೊಟ್ಟೆಗೆ ಏನು ತಿನ್ನುತ್ತಾರೆ ಎಂದು ಕಿಡಿಕಾರಿದ್ದಾರೆ.

    ಸಂಸದ ಅನಂತ್‍ಕುಮಾರ್ ಹೆಗಡೆ ಅವರು ನಿನ್ನೆಯಷ್ಟೇ ಸಂತ್ರಸ್ತರ ಮಾತು ಕೇಳದೆ ಅವರನ್ನು ನಿರ್ಲಕ್ಷಿಸಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದರು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನೇಗಿನಹಾಳ ಗ್ರಾಮದ ಪರಿಹಾರ ಕೇಂದ್ರದಲ್ಲಿದ್ದ ನಿರಾಶ್ರಿತರನ್ನು ಭೇಟಿ ಮಾಡಲು ಅನಂತಕುಮಾರ್ ಹೆಗಡೆ ಅವರು ಹೋಗಿದ್ದರು. ಈ ವೇಳೆ ಮಲಪ್ರಭಾ ನದಿಯಿಂದ ಉಂಟಾದ ಪ್ರವಾಹಕ್ಕೆ ಮನೆಗಳನ್ನ ಕಳೆದುಕೊಂಡ ನಿರಾಶ್ರಿತರು, ದೂರದಿಂದ ನೋಡಲು ಮನೆಗಳು ಸರಿಯಾಗಿದೆ ಎಂದು ಕಾಣುತ್ತದೆ. ಆದರೆ ಮನೆಗಳ ಒಳಗೆ ಎಲ್ಲವೂ ಹಾನಿಯಾಗಿದೆ. ನಮಗೆ ಮನೆ ಕಟ್ಟಿಸಿಕೊಡಿ ಎಂದು ಕೇಳಿದ್ದರು. ಆದರೆ ಜನರ ಮಾತನ್ನು ಕೇಳದೆ, ಸರಿಯಾಗಿ ಸ್ಪಂದಿಸದ ಅನಂತ್‍ಕುಮಾರ್ ಅವರು ನಿರ್ಲಕ್ಷಿಸಿದ್ದ. ಇದರಿಂದ ಸಿಟ್ಟಿಗೆದ್ದ ಸಂತ್ರಸ್ತರು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದರು.

    ಅಲ್ಲದೆ ಪ್ರವಾಹದ ಬಗ್ಗೆ ಪ್ರತಿಕ್ರಿಯೆ ಕೇಳಿದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಕೂಡ ಅನಂತ್‍ಕುಮಾರ್ ಅವರು ಕಿಡಿಕಾರಿದ್ದರು. ವಿಡಿಯೋ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದ್ದರು. ಸಂಸದರ ನಡವಳಿಕೆಯಿಂದ ಸಿಟ್ಟಲಿದ್ದ ಸಂತ್ರಸ್ತ ಮಹಿಳೆಯರು ನಿನಗೆ ವೋಟ್ ಹಾಕುವುದಿಲ್ಲ ಎಂದು ಕೂಗಿ ಆಕ್ರೋಶ ಹೊರಹಾಕಿದ್ದರು. ಆದರೆ ಸಂಸದರು ಮಹಿಳೆಯರ ಮಾತು ಕೇಳಿಯೂ ಕೇಳಿಸದಂತೆ ಕುಳಿತ್ತಿದ್ದರು. ಹೀಗೆ ಗ್ರಾಮಸ್ಥರ ತೀವ್ರ ತರಾಟೆಗೆ ತೆಗೆದುಕೊಂಡ ನಂತರ ಬೇರೆ ಪರಿಹಾರ ಕೇಂದ್ರಕ್ಕೆ ಅನಂತ್‍ಕುಮಾರ್ ಹೆಗಡೆ ತೆರಳಿದ್ದರು.