Tag: ಮುಂಗುಸಿ

  • ಬ್ಯಾಂಕಾಕ್‍ನಿಂದ ಚೆನ್ನೈಗೆ ಮುಂಗುಸಿಯನ್ನು ಬ್ಯಾಗ್‍ನಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ ಪ್ರಯಾಣಿಕ ಅರೆಸ್ಟ್

    ಬ್ಯಾಂಕಾಕ್‍ನಿಂದ ಚೆನ್ನೈಗೆ ಮುಂಗುಸಿಯನ್ನು ಬ್ಯಾಗ್‍ನಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ ಪ್ರಯಾಣಿಕ ಅರೆಸ್ಟ್

    ಚೆನ್ನೈ: ಚೆಕ್ ಇನ್ ಬ್ಯಾಗೇಜ್‍ನಲ್ಲಿ ಬ್ಯಾಂಕ್‍ಕ್‍ನಿಂದ (Bangkok) ಅಕ್ರಮವಾಗಿ ಸಾಗಿಸಲಾಗಿದ್ದ 5 ವಿದೇಶಿ ಪ್ರಾಣಿಗಳನ್ನು (Animals) ಚೆನ್ನೈನ (Chennai) ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಮುಂಗುಸಿ ಹಾಗೂ ಕ್ಯೂಕಸ್ ಅನ್ನು ಚೀಲದಲ್ಲಿ ಮರೆ ಮಾಡಲಾಗಿತ್ತು. ಈ ಎಲ್ಲಾ ಪ್ರಾಣಿಗಳು ಬ್ಯಾಂಕಾಕ್‍ನಿಂದ ಬಂದ ಪ್ರಯಾಣಿಕನ (Passenger) ಬ್ಯಾಗ್‍ನಲ್ಲಿತ್ತು. ಅದನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡು ಥೈಲ್ಯಾಂಡ್‍ಗೆ ಕಳುಹಿಸಿದ್ದಾರೆ.

    ಮುಂಗುಸಿ ಅಂಗೋಲಾ, ಉತ್ತರ ನಮೀಬಿಯಾ, ದಕ್ಷಿಣ ಆಫ್ರಿಕಾದ ಕ್ವಾಝುಲು-ನಟಾಲ್, ಜಾಂಬಿಯಾ ಮತ್ತು ಪೂರ್ವ ಆಫ್ರಿಕಾಕ್ಕೆ ಸ್ಥಳೀಯವಾಗಿರುವ ಮುಂಗುಸಿ ಜಾತಿಯಾಗಿದೆ. ಇದು ಹಳದಿ, ಕೆಂಪು, ಕಡು ಕಂದು ಬಣ್ಣದಲ್ಲಿದೆ. ಇದನ್ನೂ ಓದಿ: ಡೆಂಗ್ಯೂ ರೋಗಿಗೆ ಡ್ರಿಪ್‍ನಲ್ಲಿ ಮೊಸಂಬೆ ಜ್ಯೂಸ್ ನೀಡಿದ್ದ ಆಸ್ಪತ್ರೆಗೆ ಇದೀಗ ಬುಲ್ಡೋಜರ್ ಭಯ

    ಘಟನೆಗೆ ಸಂಬಂಧಿಸಿ ಚೆನ್ನೈನಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪ್ರಯಾಣಿಕನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಹಿಳೆಯನ್ನು ಗುರಾಯಿಸಿದ್ದಕ್ಕೆ ಪೊಲೀಸರಿಂದ ಕಪಾಳಮೋಕ್ಷ – ಸೇಡಿಗೆ ವ್ಯಕ್ತಿ ಮಾಡಿದ್ದೇನು ಗೊತ್ತಾ?

    Live Tv
    [brid partner=56869869 player=32851 video=960834 autoplay=true]

  • ಮುಂಗುಸಿಗೆ ಆಹಾರವಾಗ್ತಿದ್ದ ನಾಗರಹಾವನ್ನು ರಕ್ಷಿಸಿದ ಆಟೋ ಚಾಲಕ

    ಮುಂಗುಸಿಗೆ ಆಹಾರವಾಗ್ತಿದ್ದ ನಾಗರಹಾವನ್ನು ರಕ್ಷಿಸಿದ ಆಟೋ ಚಾಲಕ

    ಮಡಿಕೇರಿ: ಮುಂಗುಸಿಗೆ ಆಹಾರವಾಗ್ತಿದ್ದ ನಾಗರಹಾವನ್ನು ಸತತ ಎರಡು ಗಂಟೆ ಕಾದು ಕುಳಿತು ರಕ್ಷಣೆ ಮಾಡಿದ ಅಪರೂಪದ ಘಟನೆ ಮಡಿಕೇರಿಯ ರಾಜಾಸೀಟ್ ಬಳಿ ನಡೆದಿದೆ.

    ನಗರದ ಆಟೋ ಚಾಲಕ ಈರಪ್ಪ ಎಂಬವರು ಆಟೋದಲ್ಲಿ ಹೋಗುವಾಗ ನಾಗರಹಾವನ್ನು ಮುಂಗುಸಿವೊಂದು ಕಚ್ಚುತ್ತಿರುವುದನ್ನು ನೋಡಿ, ಕೂಡಲೇ ಆಟೋದಿಂದ ಕೆಳಗೆ ಇಳಿದಿದ್ದಾರೆ. ಆ ಬಳಿಕ ಮುಂಗುಸಿಯನ್ನು ಓಡಿಸಿ, ನೋವಿನಿಂದ ಬಳಲುತ್ತಿದ್ದ ನಾಗರಹಾವಿನ ರಕ್ಷಣೆಗೆ ಮುಂದಾಗಿದ್ದಾರೆ.

    ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದರಿಂದ ವಾಹನ ಸವಾರರಿಗೂ ಎಚ್ಚರಿಸಿ, ನಾಗರಹಾವಿಗೂ ತೊಂದರೆಯಾಗದಂತೆ ಸುಮಾರು ಎರಡು ಗಂಟೆ ಕಾಲ ಕಾದು ಕುಳಿತಿದ್ದಾರೆ. ಆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದರೂ ನಾಗರಹಾವನ್ನು ಹಿಡಿಯಲು ವಿಫಲರಾದರು.

    ಒಂದು ಕಡೆ ಮುಂಗುಸಿಯಿಂದ ತಪ್ಪಿಸಿಕೊಂಡ ನಾಗರಹಾವು, ಆ ಬಳಿಕ ತನ್ನ ಫೋಟೋವನ್ನು ತೆಗೆದುಕೊಳ್ಳಲು ಮುಂದಾದ ಜನರಿಂದ ತಪ್ಪಿಸಿಕೊಳ್ಳಲು ಹರಸಾಹಸಪಡಬೇಕಾಗಿ ಬಂತು. ಕೊನೆಗೂ ತೀವ್ರ ನೋವಿನಿಂದ ನರಳಾಡುತ್ತಿದ್ದ ನಾಗರಾಜ, ಬದುಕಿ ಬಿಟ್ಟಿತ್ತು ಬಡಜೀವ ಎನ್ನುವ ಹಾಗೆ, ಮರಳಿ ಪೊದೆಯನ್ನು ಸೇರಿಕೊಂಡು ನಿಟ್ಟುಸಿರು ಬಿಟ್ಟಿತ್ತು.

    ಪ್ರವಾಸಿ ತಾಣ ರಾಜಾಸೀಟ್‍ಗೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಬರುವುದು ಸಾಮಾನ್ಯ. ಆದರೆ ಬುಧವಾರ ನಾಗರಾಜನ ಎಂಟ್ರಿಯಿಂದ ಎಲ್ಲರ ಒಂದು ಕ್ಷಣ ತಬ್ಬಿಬ್ಬು ಆದರು.

    https://www.youtube.com/watch?v=ZZgbazS1myI

  • ಮುಂಗುಸಿ-ನಾಗರಹಾವಿನ ನಡುವೆ ಭಯಂಕರ ಕಾದಾಟ

    ಮುಂಗುಸಿ-ನಾಗರಹಾವಿನ ನಡುವೆ ಭಯಂಕರ ಕಾದಾಟ

    ಚಿಕ್ಕಮಗಳೂರು: ಮುಂಗುಸಿ ಹಾಗೂ ನಾಗರಹಾವಿನ ನಡುವೆ ಭಯಂಕರ ಕಾದಾಟ ನಡೆದ ದೃಶ್ಯವೊಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಾಮೇನಹಳ್ಳಿ ಗ್ರಾಮದಲ್ಲಿ ಕಂಡುಬಂದಿದೆ.

    ಮುಂಗುಸಿ ಗದ್ದೆ ಬದಿಯಲ್ಲಿ ನಾಗರಹಾವಿನ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಮುಂಗುಸಿಯಿಂದ ತಪ್ಪಿಸಿಕೊಳ್ಳಲು ನಾಗರಹಾವು ಕಾದಾಟ ನಡೆಸಿದೆ. ನಾಗರಹಾವು ಹಾಗೂ ಮುಂಗುಸಿ ನಡುವಿನ ಕಾಳಗ ಕಂಡು ರೈತರು ಗಾಬರಿಗೊಂಡಿದ್ದರು.

    ಗದ್ದೆಯಲ್ಲಿದ್ದ ಯುವಕರು ಮುಂಗುಸಿ ಹಾಗೂ ನಾಗರಹಾವಿನ ಕಾದಾಟದ ವಿಡಿಯೋವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಇತ್ತೀಚೆಗೆ ಮೈಸೂರಿನ ನಾಗರಹೊಳೆ ಅರಣ್ಯದಲ್ಲಿ ಹೆಬ್ಬಾವನ್ನು ನೋಡಿ ಹುಲಿ ಹೆದರಿಕೊಂಡ ಅಪರೂಪದ ದೃಶ್ಯವೊಂದು ಸಫಾರಿಗೆ ತೆರಳಿದ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅರಣ್ಯದಲ್ಲಿ ಹುಲಿಗೆ ಹೆಬ್ಬಾವು ಎದುರಾಗಿದೆ. ಈ ವೇಳೆ ಹೆಬ್ಬಾವನ್ನು ಕಂಡು ಹುಲಿ ಹೆದರಿಕೊಂಡಿತ್ತು. ಪ್ರವಾಸಿಗರು ಹೆಬ್ಬಾವು ಮತ್ತು ಹುಲಿಯನ್ನು ಒಟ್ಟಿಗೆ ನೋಡಿದ್ದು, ಸಾಮಾನ್ಯವಾಗಿ ಹುಲಿಗಳು ಹೆಬ್ಬಾವನ್ನು ಕಂಡರೆ ಅದನ್ನು ತಿನ್ನುತ್ತದೆ. ಆದರೆ ಇಲ್ಲಿ ಹುಲಿ ಹೆಬ್ಬಾವನ್ನು ಕಂಡು ಹೆದರುಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಾಮರಾಜನಗರದಲ್ಲಿ ಹಾವು-ಮುಂಗುಸಿ ಕಾಳಗ ಮಾಡ್ತಿರೋ ಅಪರೂಪದ ವಿಡಿಯೋ ನೋಡಿ

    ಚಾಮರಾಜನಗರದಲ್ಲಿ ಹಾವು-ಮುಂಗುಸಿ ಕಾಳಗ ಮಾಡ್ತಿರೋ ಅಪರೂಪದ ವಿಡಿಯೋ ನೋಡಿ

    ಚಾಮರಾಜನಗರ: ಜಗಳ ಬೀದಿಗೆ ಬಂದ್ರೆ ಯಾಕಪ್ಪ ಯಾವಾಗ್ಲೂ ಹಾವು-ಮುಂಗುಸಿ ತರ ಕಿತ್ತಾಡ್ತೀರಪ್ಪಾ ಅಂತ ದೊಡ್ಡವರು ಬುದ್ಧಿಮಾತು ಹೇಳೊದನ್ನು ಕೇಳಿದ್ದೀವಿ. ಆದ್ರೆ ಹಾವು-ಮುಂಗುಸಿ ಹೇಗೆ ಕಿತ್ತಾಡುತ್ತವೆ ಅನ್ನೋದನ್ನು ಸಾಮಾನ್ಯವಾಗಿ ಹೆಚ್ಚಿನವರು ನೋಡಿರಲ್ಲ. ಹೀಗಾಗಿ ಹಾವು, ಮುಂಗುಸಿ ಕಾಳಗ ಮಾಡಿರುವ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹೌದು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಗ್ರಾಮದ ಹೆಬ್ಬಾಗಿಲಲ್ಲಿ ಹಾವು ಮತ್ತು ಮುಂಗುಸಿ ಕಾಳಗಮಾಡಿದ್ದು, ಈ ದೃಶ್ಯವನ್ನ ಆ ಗ್ರಾಮದ ಗ್ರಾಮಸ್ಥರು ಸೆರೆಹಿಡಿದಿದ್ದಾರೆ.

    ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಹಾವು ಮತ್ತು ಮುಂಗುಸಿ ಕಾಳಗ ಮಾಡಿದ್ದು, ಈ ಕಾಳಗದಲ್ಲಿ ಕೊನೆಗೂ ಮುಂಗುಸಿ ಹಾವನ್ನು ಕೊಂದು ಹಾಕಿದೆ. ಅಪರೂಪದಲ್ಲೇ ಅಪರೂಪವಾದ ಈ ಕಾಳಗವನ್ನು ಗ್ರಾಮಸ್ಥರು ಮೂಕ ವಿಸ್ಮಯರಾಗಿ ನೋಡಿದ್ದಾರೆ.

    https://www.youtube.com/watch?v=uv9v7xRnuvk