Tag: ಮೀರಾಬಾಯಿ

  • ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ- ವೇಟ್ ಲಿಫ್ಟಿಂಗ್‍ನಲ್ಲಿ ಸಂಜಿತಾ ಚಾನುಗೆ ಗೋಲ್ಡ್

    ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ- ವೇಟ್ ಲಿಫ್ಟಿಂಗ್‍ನಲ್ಲಿ ಸಂಜಿತಾ ಚಾನುಗೆ ಗೋಲ್ಡ್

    ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ ವೇಲ್ತ್ ಗೇಮ್ಸ್ ನಲ್ಲಿ ಭಾರತದ ಚಿನ್ನದ ಬೇಟೆ ಮುಂದುವರಿದಿದೆ. ಭಾರತದ ಸಂಜಿತಾ ಚಾನು ವೇಟ್‍ಲಿಫ್ಟಿಂಗ್‍ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

    53 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಸಂಜಿತಾ ಚಾನು ಮೊದಲ ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಾರತಕ್ಕೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮೂರನೇ ಪದಕ ಒಲಿದು ಬಂದಾಂತಾಗಿದೆ. ಇದನ್ನೂ ಓದಿ: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಗುರುರಾಜ್‍ಗೆ ಸರ್ಕಾರಿ ಕೆಲಸ, 25 ಲಕ್ಷ ನಗದು ಬಹುಮಾನ- ಪ್ರಮೋದ್ ಮಧ್ವರಾಜ್

    ಸಂಜಿತಾ ಚಾನು ಒಟ್ಟು 192 ಕೆಜಿ ತೂಕ ಎತ್ತುವ ಮೂಲಕ ಅಗ್ರ ಸ್ಥಾನ ಗಳಿಸಿದ್ದಾರೆ. 182 ಕೆಜಿ ತೂಕ ಎತ್ತಿದ ಪಪುವಾ ನ್ಯೂಗಿನಿಯಾದ ಲೋಡಿಕಾ ಅವರು ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ತನ್ನದಾಗಿಸಿಕೊಂಡರೆ, ನ್ಯೂಜಿಲೆಂಡ್ ನ ರಾಚೆಲ್ ಲೆಬ್ಲಾಂಕ್ ಬಾಝಿನೆಟ್ ಅವರು ಒಟ್ಟು 181 ಕೆಜಿ ತೂಕ ಎತ್ತುವ ಮೂಲಕ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾರೆ. ಇದನ್ನೂ ಓದಿ: ವೇಟ್‍ಲಿಫ್ಟಿಂಗ್‍ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೀರಾಬಾಯಿ

    ಇದೀಗ ಚಿನ್ನದ ಪದಕ ಗಳಿಸಿರುವ ಸಂಜಿತಾ ಚಾನು ಅವರು 2014ರಲ್ಲಿ ನಡೆದ ಗ್ಲಾಸ್ಗೋ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲೂ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು.

    ಗುರುವಾರ 21ನೇ ಕಾಮನ್ ವೆಲ್ತ್ ಕ್ರೀಡಾಕೂಟದ ಶುಭಾರಂಭದಲ್ಲೇ ಕನ್ನಡಿಗ ಪಿ. ಗುರುರಾಜ್ ಅವರು 56 ಕೆ.ಜಿ. ವಿಭಾಗದ ವೇಯ್ಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು. ಬಳಿಕ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮಣಿಪುರದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ದಾಖಲೆಯ 196 ಕೆಜಿ ಎತ್ತಿ ಚಿನ್ನಕ್ಕೆ ಮುತ್ತಿಟ್ಟಿದ್ದರು. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

  • ವೇಟ್‍ಲಿಫ್ಟಿಂಗ್‍ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೀರಾಬಾಯಿ

    ವೇಟ್‍ಲಿಫ್ಟಿಂಗ್‍ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೀರಾಬಾಯಿ

    ಗೋಲ್ಡ್ ಕೋಸ್ಟ್: ಕಾಮನ್‍ವೆಲ್ತ್ ಗೇಮ್ಸ್ ಭಾರತ ಮೊದಲ ಚಿನ್ನದ ಪದಕವನ್ನು ಗೆದ್ದಿದೆ. ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮಣಿಪುರದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ದಾಖಲೆಯ 196 ಕೆಜಿ ಎತ್ತಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.

    ಸ್ನ್ಯಾಚ್ ನಲ್ಲಿ 86 ಕೆಜಿ, ಕ್ಲೀನ್ ಮತ್ತು ಜರ್ಕ್ ನಲ್ಲಿ 110 ಕೆಜಿ ಎತ್ತುವ ಮೂಲಕ ಚಿನ್ನವನ್ನು ಗೆದ್ದರು. ಈ ವಿಭಾಗದಲ್ಲಿ ಶ್ರೀಲಂಕಾ ದಿನುಶಾ 155 ಕೆಜಿ ಎತ್ತುವ ಮೂಲಕ ಕಂಚು ಗೆದ್ದರೆ, ಮಾರಿಷಸ್ ನ ಮಾರಿ ಹನಿಟ್ರಾ 170 ಕೆಜಿ ಎತ್ತುವ ಮೂಲಕ ಬೆಳ್ಳಿ ಗೆದ್ದರು.

    ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಆರಂಭವಾದ 21 ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕನ್ನಡಿಗ ಪಿ. ಗುರುರಾಜ್ ಅವರು 56 ಕೆ.ಜಿ. ವಿಭಾಗದ ವೇಯ್ಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.