Tag: ಮೀನುಗಾರಿಕಾ ಬಂದರು

  • ಕೊರೊನಾ ಆತಂಕ: ಮಂಗಳೂರು ಮೀನುಗಾರಿಕಾ ಬಂದರು ಸೀಲ್‍ ಡೌನ್

    ಕೊರೊನಾ ಆತಂಕ: ಮಂಗಳೂರು ಮೀನುಗಾರಿಕಾ ಬಂದರು ಸೀಲ್‍ ಡೌನ್

    ಮಂಗಳೂರು: ಕೊರೊನಾದಿಂದ ಮುಕ್ತರಾಗುತ್ತಿದ್ದೇವೆ ಎಂದು ನಿಟ್ಟುಸಿರು ಬಿಡುತ್ತಿದ್ದ ಮಂಗಳೂರಿಗರಿಗೆ ಇದೀಗ ಮೀನುಗಾರಿಕೆಯೇ ದೊಡ್ಡ ಆತಂಕ ತಂದೊಡ್ಡಿದೆ. ಕೇವಲ ವಿದೇಶದಿಂದ, ಮಹಾರಾಷ್ಟ್ರದಿಂದ ಮಂಗಳೂರಿಗೆ ಕೊರೊನಾ ಆತಂಕ ಇದ್ದು ಇದೀಗ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಮೀನುಗಾರಿಕಾ ವಹಿವಾಟು ಭಾರೀ ಆತಂಕ ತಂದಿದೆ.

    ಹೊರ ರಾಜ್ಯದ ಮೀನು ಲಾರಿಗಳ ಎಂಟ್ರಿಯಿಂದ ಮಂಗಳೂರಿನಲ್ಲಿ ಸೋಂಕು ಹರಡಿದೆ. ಕೊರೊನಾ ಸೋಂಕು ಹರಡಿದ ಬೆನ್ನಲ್ಲೇ ಮಂಗಳೂರು ಮೀನುಗಾರಿಕಾ ಬಂದರು ಸೀಲ್ ಡೌನ್ ಮಾಡಲಾಗಿದೆ. ಬಂದರಿನ ಗೇಟುಗಳಿಗೆ ಬೀಗ ಜಡಿದು ಜನರ ಓಡಾಟ, ವಾಹನ ಸಂಚಾರ ಬಂದ್ ಮಾಡಲಾಗಿದೆ. ಅಲ್ಲದೆ ಎಲ್ಲಾ ರೀತಿಯ ಮೀನುಗಾರಿಕಾ ವ್ಯವಹಾರ ಸಂಪೂರ್ಣ ಬಂದ್ ಆಗಿದೆ.

    ಓರ್ವ ಮೀನುಗಾರನಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಬಂದರಿನಲ್ಲಿದ್ದ ಹಲವಾರು ಮೀನುಗಾರರಲ್ಲಿ ಕೊರೋನಾ ಲಕ್ಷಣ ಕಂಡುಬಂದಿದೆ. ಪ್ರತಿ ನಿತ್ಯ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಭಾಗದಿಂದ ಬರುತ್ತಿದ್ದ ಮೀನಿನ ಲಾರಿಗಳಿಂದ ವ್ಯಾಪಾರಿಗಳು ಜಿಲ್ಲೆಯ ಹಲವೆಡೆ ತೆಗೆದುಕೊಂಡು ಹೋಗಿ ಮೀನು ಮಾರಾಟ ಮಾಡುತ್ತಿದ್ದರು. ಸದ್ಯ ಈ ಆತಂಕ ದುಪ್ಪಟ್ಟಾಗಿದೆ.

  • ಮಂಗ್ಳೂರಿನಲ್ಲಿ 98 ಕೆಜಿ ತೂಕದ ದೈತ್ಯ ಮೀನನ್ನು ಬೋಟ್‍ನಿಂದ ಕೆಳಗಿಳಿಸುವ ವಿಡಿಯೋ ವೈರಲ್

    ಮಂಗ್ಳೂರಿನಲ್ಲಿ 98 ಕೆಜಿ ತೂಕದ ದೈತ್ಯ ಮೀನನ್ನು ಬೋಟ್‍ನಿಂದ ಕೆಳಗಿಳಿಸುವ ವಿಡಿಯೋ ವೈರಲ್

    ಮಂಗಳೂರು: ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ ದೈತ್ಯ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದ್ದು ಇದನ್ನು ಹೊತ್ತೊಯ್ಯುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಒಂದು ವಾರದ ಹಿಂದೆ ಮಂಗಳೂರಿನ ಸಲೀಂ ಎಂಬವರ ಬೋಟ್‍ಗೆ 98 ಕೆಜಿ ತೂಕದ ಮುರುಮೀನು ಎನ್ನುವ ದೈತ್ಯ ಮೀನು ಸಿಕ್ಕಿತ್ತು. ಇದನ್ನು ಬೋಟಿನಿಂದ ಕೆಳಗಿಳಿಸಲು ಇಬ್ಬರು ಮೀನುಗಾರರು ಕಬ್ಬಿಣದ ರಾಡ್ ಮೂಲಕ ಎಳೆದುಕೊಂಡು ಬಂದಿದ್ದರು. ಈ ಅಪರೂಪದ ದೃಶ್ಯವನ್ನು ಮೀನುಗಾರರೋರ್ವರು ಚಿತ್ರೀಕರಿಸಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸುಮಾರು 25 ಸಾವಿರ ರೂ. ಬೆಲೆ ಬಾಳುವ ಈ ಮೀನು ಸಿಕ್ಕಿದ ಬೋಟ್‍ನವರಂತೂ ಖುಷಿಯಿಂದಲೇ ಈ ಬೃಹತ್ ಮೀನನ್ನು ಮಾರಾಟ ಮಾಡಿದ್ದಾರೆ. ಸಣ್ಣ ಗಾತ್ರದಲ್ಲಿ ಸಿಗುವ ಈ ಮುರುಮೀನನ್ನು ಒಂದೆರಡು ತಿನ್ನಬಹುದಾಗಿದ್ದು, ಈ ದೊಡ್ಡ ಗಾತ್ರದ ಮೀನಿನ ಮಾಂಸವನ್ನು ಕೆಜಿ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತದೆ.

    https://www.youtube.com/watch?v=FWY7ckDv-TY&feature=youtu.be