Tag: ಮೀನಿನ ಕರಿ

  • ಮನೆಮಂದಿಗೆ ಇಷ್ಟವಾಗುವ ಮೀನಿನ ಕರಿ

    ಮನೆಮಂದಿಗೆ ಇಷ್ಟವಾಗುವ ಮೀನಿನ ಕರಿ

    ಮಾಂಸಹಾರಿಗಳು ಬೇರೆ ಬೇರೆ ಅಡುಗೆಗಳನ್ನು ಮಾಡಿ ಸವಿಯಲು ಇಷ್ಟಪಡುತ್ತಾರೆ. ಚಿಕನ್, ಮಟನ್‍ಗಳನ್ನು ಹೆಚ್ಚಾಗಿ ಸೇವಿಸುವ ನೀವು ಇಂದು ಮೀನಿನ ಖಾದ್ಯವನ್ನು ಮಾಡಿ ಸವಿಯಿರಿ. ಬಿರಿಯಾನಿ, ಕಬಾಬ್‍ಗಳನ್ನು ನೀವು ಮಾಡಿರುತ್ತಿರ. ಹಾಗದರೆ ಇಂದು ಕೊಂಚ ಡಿಫ್ರೆಂಟ್ ಆಗಿ ನಿಮ್ಮ ಮನೆ ಮಂದಿಗೆ ಇಷ್ಟವಾಗುವ ರೀತಿಯಲ್ಲಿ ಮೀನಿನ ಕರಿ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    *ಮೀನು – ಅರ್ಧ ಕೆಜಿ
    *ಹಸಿಶುಂಠಿ
    *ಈರುಳ್ಳಿ- 2
    *ಬೆಳ್ಳುಳ್ಳಿ – 2
    *ಕರಿಬೇವು
    *ಹುಣಸೆಹುಳಿಯ ರಸ
    *ಕೊಬ್ಬರಿ ಎಣ್ಣೆ – 2 ಟೀ ಸ್ಪೂನ್
    *ಟೊಮೇಟೋ-2
    *ಕೆಂಪು ಮೆಣಸಿನ ಪುಡಿ – 2 ಟೀ ಸ್ಪೂನ್
    *ದನಿಯ ಪುಡಿ – 4 ಟೀ ಸ್ಪೂನ್
    *ಕಾಳುಮೆಣಸಿನ ಪುಡಿ – 1 ಟೀ ಸ್ಪೂನ್
    *ಅರಿಶಿನ ಪುಡಿ – 2 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲು ಮೀನನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿಟ್ಟಿರಬೇಕು
    * ಒಂದು ಪಾತ್ರೆಯಲ್ಲಿ ಎಲ್ಲಾ ಮಸಾಲೆ ಪದಾರ್ಥಗಳನ್ನು ಅಂದರೆ, ಈರುಳ್ಳಿ,ದನಿಯ ಪುಡಿ, ಮೆಣಸಿನ ಪುಡಿ, ಅರಿಶಿಣ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಟೊಮೇಟೋ ಎಲ್ಲವನ್ನೂ ನುಣ್ಣಗೆ ರುಬ್ಬಿಕೊಳ್ಳಿ.

    * ಒಂದು ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆ ಹಾಕಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ ಈರುಳ್ಳಿ ಕೆಂಪಗಾಗುವವರೆಗೆ ಬಾಡಿಸಿ. ನಂತರ ಮಿಕ್ಸಿಯಲ್ಲಿ ಕಡೆದಿದ್ದ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ ಈ ಮಸಾಲೆಯಿಂದ ಎಣ್ಣೆ ಬಿಡುವವರೆಗೂ ಬೇಯಿಸಬೇಕು.

    * ನಂತರ ಹುಣಸೆ ರಸವನ್ನು ಹಾಕಬೇಕು. ನಂತರ ನಿಮ್ಮ ಆದ್ಯತೆ ತಕ್ಕಷ್ಟು ನೀರು, ಉಪ್ಪು ಸೇರಿಸಿ ಕುದಿಸಬೇಕು.

    * ಮಸಾಲೆ ಕುದಿಯಲು ಆರಂಭವಾದ ಬಳಿಕ ಮೀನು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಮುಚ್ಚಳ ಮುಚ್ಚಿ ಮೀನು ಬೇಯುವವರೆಗೂ ಮಧ್ಯಮ ಉರಿಯಲ್ಲಿ ಕುದಿಸಿದರೆ ರುಚಿಯಾದ ಮೀನಿನ ಕರಿ ಸವಿಯಲು ಸಿದ್ಧವಾಗುತ್ತದೆ.