ತನಗೆ ಅನ್ಯಾಯವಾಗಿದೆ, ಲೈಂಗಿಕ ಶೋಷಣೆಗೆ ಒಳಗಾಗಿದ್ದೇನೆ ಎಂದು ಹಲವಾರು ಬಾರಿ ತೆಲುಗು ನಿರ್ಮಾಪಕರ ಸಂಘ, ಕಲಾವಿದರ ಸಂಘದ ಮುಂದೆ ಬೆತ್ತಲೆಯಾಗಿ ಪ್ರತಿಭಟನೆ (Protest) ಮಾಡಿದ್ದ ನಟಿ ಶ್ರೀರೆಡ್ಡಿ (Srireddy) ಕುರಿತಾಗಿ ಆಘಾತಕಾರಿ ಸುದ್ದಿಯೊಂದು ಬಂದಿದೆ. ಬೇರೆಯವರಿಂದ ಹಣ ಪಡೆದುಕೊಂಡು ಹೀಗೆ ಬೆತ್ತಲೆ (Bettale) ನಾಟಕ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಶೀಘ್ರವೇ ಹೊರ ಹಾಕಲಾಗುವುದು ಎಂದು ಉದ್ಯಮದವರು ಹೇಳುತ್ತಿದ್ದಾರೆ.
ಶ್ರೀರೆಡ್ಡಿ ಈ ಹಿಂದೆ ಮೀಟೂ ಆರೋಪ ಮಾಡಿದ್ದರು. ಅದರಲ್ಲೂ ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ಹಿಂದೆ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರೆಡ್ಡಿ ಬೆತ್ತಲೆ ಪ್ರತಿಭಟನೆ ಮಾಡಿದ್ದರು ಈ ಸಂದರ್ಭವನ್ನು ನೆನಪಿಸಿಕೊಂಡು ಲೈವ್ ಮಾಡಿದ್ದ ಶ್ರೀರೆಡ್ಡಿ ಮತ್ತೆ ನರೇಶ್ ಹಾಗೂ ಪವಿತ್ರಾ ವಿಷಯವನ್ನು ಪ್ರಸ್ತಾಪಿಸಿದ್ದರು. ‘ನಾನು ಮೀಟೂ ವಿರುದ್ಧ ಪ್ರತಿಭಟನೆ ನಡೆಸಿದಾಗ ನರೇಶ್, ಆ್ಯಸಿಡ್‌ನಿಂದ ಕೈ ತೊಳಯಬೇಕು ಎಂದು ಕಾಮೆಂಟ್ ಮಾಡಿದ್ದರು. ಈಗ ಅವರ ಸ್ಥಿತಿ ಏನಾಗಿದೆ ನೋಡಿ’ ಎಂದು ಕಾಮೆಂಟ್ ಮಾಡಿದ್ದರು.
ಯಾರ ಬದುಕಿನಲ್ಲೂ ಯಾರು ಬಿರುಗಾಳಿ ಎಬ್ಬಿಸಬಾರದು ಎಂದು ಪರೋಕ್ಷವಾಗಿ ಪವಿತ್ರಾ ಲೋಕೇಶ್ ಕುರಿತಾಗಿಯೂ ಮಾತನಾಡಿದ್ದ ಶ್ರೀರೆಡ್ಡಿ, ರಮ್ಯಾ ಅವರ ಜೀವನವನ್ನು ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ. ಅಲ್ಲದೇ, ಮಹಿಳೆ ಅಂದಾಕ್ಷಣ ಅವರ ಶೀಲವನ್ನು ಶಂಕಿಸಲಾಗುತ್ತದೆ. ರಮ್ಯಾ ಮೇಲೂ ಅದೇ ಆಗಿದೆ. ಆದರೆ, ನಿಜವಾಗಿಯೂ ಜನರ ಮುಂದೆ ಬೆತ್ತಲೆ ಆದವರು ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನರೇಶ್ ಅವರನ್ನು ಕೇಳಿದ್ದರು.
ಶ್ರೀರೆಡ್ಡಿ ಲೈವ್ ಗೆ ಬಂದು ಮತ್ತೆ ಹಲವು ಕಲಾವಿದರ ಹೆಸರುಗಳನ್ನು ಬಹಿರಂಗ ಪಡಿಸಿದ್ದರು. ಅವರು ಜೀವನವೂ ಇದೇ ಹಾದಿಯಲ್ಲಿದೆ. ಮುಂದೆ ಜನರಿಗೂ ಗೊತ್ತಾಗಲಿದೆ ಎಂದು ಅಬ್ಬರಿಸಿದ್ದರು. ಶ್ರೀರೆಡ್ಡಿ ಲೈವ್ ಗೆ ಬರುತ್ತಿದ್ದಂತೆಯೇ ಮೀಟೂ ಚಳವಳಿ ಮತ್ತೆ ಆರಂಭವಾಗಲಿದೆಯಾ ಅನ್ನುವ ಅನುಮಾನವನ್ನಂತೂ ಅವರು ಹುಟ್ಟು ಹಾಕಿದ್ದರು. ಇದೆಲ್ಲದ ಹಿಂದೆ ಹಣದ ವಾಸನೆ ಇದೆ ಎನ್ನಲಾಗುತ್ತಿದೆ.
ಮೀಟೂ ಆರೋಪದ ಮೂಲಕ ಬಾಲಿವುಡ್ (Bollywood) ಗೆ ಬೆಂಕಿ ಹಚ್ಚಿದ್ದ ನಟಿ ಪಾಯಲ್ ಘೋಷ್ (Payal Ghosh) ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಈ ಹಿಂದೆ ಮೀಟೂ (Metoo) ಅಭಿಯಾನದಲ್ಲಿ ಪಾಲ್ಗೊಂಡಿದ್ದ ಪಾಯಲ್, ‘ಬಾಲಿವುಡ್ ಟಾಪ್ ನಿರ್ದೇಶಕರೊಬ್ಬರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ’ ಎಂದು ಅವರು ಆರೋಪ (Allegation) ಮಾಡಿದ್ದರು.
ಇದೀಗ ಪಾಯಲ್ ಘೋಷ್ 11ನೇ ಸಿನಿಮಾವನ್ನು ಮುಗಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಈ ಖುಷಿಯ ಜೊತೆಗೆ ಕಹಿ ಮಾತುಗಳನ್ನೂ ಆಡಿದ್ದಾರೆ. ಕೇಳಿದವರೊಟ್ಟಿಗೆ ನಾನು ಮಲಗಿದ್ದರೆ, ನನ್ನ ದೇಹವನ್ನು ಅವರೊಂದಿಗೆ ಹಂಚಿಕೊಂಡಿದ್ದರೆ, ಇಷ್ಟೊತ್ತಿಗೆ 30 ಚಿತ್ರಗಳನ್ನು ಮಾಡಿರುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ.
ಬಾಲಿವುಡ್ ಸಿನಿಮಾ ರಂಗದ ಕರಾಳ ಮುಖವನ್ನು ಆಗಾಗ್ಗೆ ಬಿಚ್ಚಿಡುವ ಪಾಯಲ್, ಈ ಹಿಂದೆ ಅನೇಕ ನಿರ್ದೇಶಕರ ಮತ್ತು ನಿರ್ಮಾಪಕರ ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲ, ಕೆಲವು ನಟಿಯರ ಬಗ್ಗೆಯೂ ಕಾಮೆಂಟ್ ಮಾಡಿದ್ದರು. ದೇಹ ಹಂಚಿಕೊಂಡೆ ಪಾತ್ರಗಳನ್ನು ಪಡೆಯುವ ನಟಿಯರೂ ಇದ್ದಾರೆ ಎಂದು ನೇರವಾಗಿಯೇ ಮಾತನಾಡಿದ್ದರು. ಆಗಲೂ ಕೂಡ ಇವರ ಮಾತು ಅಷ್ಟೇ ಸದ್ದು ಮಾಡಿತ್ತು. ಇದನ್ನೂಓದಿ:ದೊಡ್ಮನೆ ಕುಡಿ ‘ಯುವʼ ಸಿನಿಮಾ ಏನಾಯ್ತು? ಇಲ್ಲಿದೆ ಅಪ್‌ಡೇಟ್
ಈ ಬಾರಿಯ ಕಾಮೆಂಟ್ ಗೂ ಅಷ್ಟೇ ತೀವ್ರತರಹದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಾರೆಲ್ಲ ನಟಿಯರು ಹೀಗೆ ಅವಕಾಶ ಪಡೆದಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿ ಎಂದು ಕೆಲವರು ಕೇಳಿದ್ದಾರೆ. ಅಲ್ಲದೇ, ನಿಮ್ಮನ್ನು ಯಾರೆಲ್ಲ ಮಲಗಲು ಕರೆದಿದ್ದಾರೆ ಎನ್ನುವುದನ್ನು ತಿಳಿಸಿರಿ ಎಂದು ಕಾಮೆಂಟ್ ಮಾಡಿದ್ದಾರೆ.
ಪಾಯಲ್ ಘೋಷ್ ಸಿನಿಮಾ ರಂಗದ ಬಗ್ಗೆ ಆಗಾಗ್ಗೆ ಈ ರೀತಿಯ ಬಾಂಬ್ ಗಳನ್ನು ಸಿಡಿಸುತ್ತಲೇ ಇರುತ್ತಾರೆ. ಒಂದಷ್ಟು ಬಾರಿ ಅವರ ಮಾತನ್ನು ಸೀರಿಯಸ್ ಆಗಿ ತೆಗೆದುಕೊಂಡರೆ, ಮತ್ತಷ್ಟು ಬಾರಿ ನೆಗ್ಲೆಟ್ ಮಾಡಲಾಗುತ್ತದೆ. ಆದರೂ, ಅವರು ಹೇಳುವುದನ್ನು ನಿಲ್ಲಿಸುವುದಿಲ್ಲ. ಸಿನಿಮಾ ರಂಗ ಮತ್ತು ಕಿರುತೆರೆ ಎರಡರಲ್ಲೂ ಕೆಲಸ ಮಾಡಿರುವ ಪಾಯಲ್, ಬೋಲ್ಡ್ ಫೋಟೋ ಶೂಟ್ ಮೂಲಕವೂ ಸುದ್ದಿಯಲ್ಲಿರುತ್ತಾರೆ.
ಕನ್ನಡ ಚಿತ್ರರಂಗದ ಹೆಸರಾಂತ ನಟಿ ಶ್ರುತಿ ಹರಿಹರನ್ (Shruti Hariharan) ಮೀಟೂ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ದಕ್ಷಿಣದ ಖ್ಯಾತ ನಟ ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮೀಟೂ (Metoo) ಆರೋಪ ಮಾಡಿದ್ದರು. ಅದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಸೂಕ್ತ ಸಾಕ್ಷಿಗಳು ಇಲ್ಲ ಎನ್ನುವ ಕಾರಣಕ್ಕಾಗಿ ಜನವರಿ 2022ರಂದು ಬಿ ರಿಪೋರ್ಟ್ (B Report) ಸಲ್ಲಿಸಿದ್ದರು. ಈ ರಿಪೋರ್ಟ್ ವಿರುದ್ಧ ಶ್ರುತಿ ಮತ್ತೆ ಕೋರ್ಟ್ ಮೆಟ್ಟಿಲು ಏರಿದ್ದರು.
ಕಬ್ಬನ್ ಪಾರ್ಕ್ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಚಾಲೇಂಜ್ ಮಾಡಿದ್ದ ಶ್ರುತಿ ಹರಿಹರನ್ ಗೆ ಈಗ ಮತ್ತೆ ಪೊಲೀಸರು ನೋಟಿಸ್ (Notice) ನೀಡಿದ್ದಾರೆ. ಪೊಲೀಸರಿಗೆ ಸಾಕ್ಷ್ಯಾಧಾರಗಳನ್ನು ನೀಡುವಂತೆ ನೋಟಿಸ್ ನಲ್ಲಿ ತಿಳಿಸಿದ್ದಾರೆ. ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಬಳಿಕ ಈ ನೋಟಿಸ್ ನೀಡಲಾಗಿದೆ.
ಏನಿದು ಪ್ರಕರಣ ?
ಶ್ರುತಿ ಹರಿಹರನ್ ವಿಸ್ಮಯ (Vismaya) ಚಿತ್ರದ ಚಿತ್ರೀಕರಣದ ವೇಳೆ ನಟ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮೀಟೂ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಶ್ರುತಿ ಆರೋಪ ಮಾಡುತ್ತಿದ್ದಂತೆ ಕೆಲ ಸಂಘಟನೆಗಳು, ನಟರು, ಕಲಾವಿದರು ನಟಿಯ ಪರ ನಿಂತರೆ, ಬಹುತೇಕ ಹಿರಿಯ ಕಲಾವಿದರು ಅರ್ಜುನ್ ಸರ್ಜಾ ಪರ ಬ್ಯಾಟ್ ಬೀಸಿದ್ದರು. ಇತ್ತ ಅರ್ಜುನ್ ಸರ್ಜಾ (Arjun Sarja) ವಿರುದ್ಧ ದೂರು ಕೇಳಿ ಬರುತ್ತಿದ್ದಂತೆ ಮಾವ, ಹಿರಿಯ ನಟ ಕಲಾ ತಪಸ್ವಿ ರಾಜೇಶ್ ಮೊದಲು ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಚಲನಚಿತ್ರ ಮಂಡಳಿ ಸಹ ಶ್ರುತಿ ಹರಿಹರನ್ ನೇರವಾಗಿ ಮಾಧ್ಯಮಗಳ ಮುಂದೆ ಹೋಗಬಾರದಿತ್ತು ಎಂದು ಅಸಮಾಧಾನ ಹೊರಹಾಕಿತ್ತು. ನಂತರ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಧ್ಯಸ್ಥಿತಿಕೆಯಲ್ಲಿ ಫಿಲ್ಮ್ ಚೇಂಬರ್ ನಲ್ಲಿ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಮಧ್ಯೆ ಸಂಧಾನ ಸಭೆ ನಡೆಯಿತು. ಇದನ್ನೂ ಓದಿ:ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ
`ವಿಸ್ಮಯ’ ಕುರಿತು ಹೇಳಿಕೆ ನೀಡುವ ವೇಳೆ ಮಧ್ಯ ಪ್ರವೇಶ ಮಾಡಿದ ನಟ ಅರ್ಜುನ ಸರ್ಜಾ ಅವರು, ಸಿನಿಮಾ ವೇಳೆ ನಾನು ಯಾವುದೇ ರೀತಿ ಕೆಟ್ಟದಾಗಿ ವರ್ತನೆ ಮಾಡಿಲ್ಲ. ಅಲ್ಲದೇ ಯಾವುದೇ ಡಿನ್ನರ್, ಹೋಟೆಲ್, ರೆಸಾರ್ಟ್, ರೂಮ್‍ಗೆ ಕರೆದಿಲ್ಲ. 35 ವರ್ಷದಿಂದ ಚಿತ್ರರಂಗದಲ್ಲಿ ಇದ್ದು, ಒಂದು ಕಪ್ಪು ಚುಕ್ಕೆ ನನ್ನ ಮೇಲಿಲ್ಲ. ಆದರೆ ಶ್ರುತಿ ಮಾಡಿರುವ ಆರೋಪದಿಂದ ನನಗೂ, ನನ್ನ ಕುಟುಂಬಸ್ಥರಿಗೂ ಸಾಕಷ್ಟು ನೋವಾಗಿದೆ ಎಂದು ಅಂಬರೀಶ್ ಮುಂದೆ ಹೇಳಿಕೊಂಡಿದ್ದರು. ಅಂಬರೀಶ್ ನಡೆಸಿದ ಸಂಧಾನ ವಿಫಲವಾಗುತ್ತಿದ್ದಂತೆಯೇ ಶ್ರುತಿ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಇದೆಲ್ಲವೂ ನಡೆದದ್ದು 2018ರಂದು.
ಶ್ರುತಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದ್ದರು. ಲೈಂಗಿಕ ಕಿರುಕುಳ ಆಗಿದೆ ಎನ್ನಲಾದ ಸ್ಥಳಗಳಿಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಜನವರಿ 2022ರಂದು ಕಬ್ಬನ್ ಪಾರ್ಕ್ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟನ್ನು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ಅಂಗೀಕರಿಸಿತ್ತು. ಅರ್ಜುನ್ ಸರ್ಜಾ ವಿರುದ್ಧ ಅಷ್ಟೆಲ್ಲಾ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ಕೂಡ ಪೊಲೀಸರ ಬಿ ರಿಪೋರ್ಟ್‍ಗೆ ಆಕ್ಷೇಪಣೆ ಸಲ್ಲಿಸಿಲ್ಲ. ಹೀಗಾಗಿ ಕೋರ್ಟ್ ಬಿ-ರಿಪೋರ್ಟ್ ಅಂಗೀಕರಿಸಿತ್ತು.
ತನಿಖೆ ಏನೆಲ್ಲ ಆಗಿತ್ತು?
ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಿಳಿದಿದ್ದ ಪೊಲೀಸರಿಗೆ ಯುಬಿ ಸಿಟಿಯ ಸೆಕ್ಯೂರಿಟಿ ಗಾರ್ಡ್‍ಗಳು ತಲೆನೋವಾಗಿ ಪರಿಣಮಿಸಿದ್ದರು. ಹೌದು. ನಟಿ ಶ್ರುತಿ ಹರಿಹರನ್ ಅವರು ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕಬ್ಬನ್ ಪಾರ್ಕ್ ಪೊಲೀಸರು, ಮೊದಲಿಗೆ ನಟ ಅರ್ಜುನ್ ಸರ್ಜಾ, ವಿಸ್ಮಯ ಚಿತ್ರದ ನಿರ್ದೇಶಕ, ನಿರ್ಮಾಪಕ ಸೇರಿದಂತೆ ಸಾಕಷ್ಟು ಜನರನ್ನು ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಹೇಳಿಕೆಗಳನ್ನು ಪಡೆದುಕೊಂಡಿದ್ದರು.
ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ನನಗೆ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ರು. ಯುಬಿ ಸಿಟಿಯಲ್ಲಿ ರೂಮ್ ನಲ್ಲಿ ಒಬ್ಬನೇ ಇದೇನಿ, ಬಾ ಸ್ವಲ್ಪ ಹೊತ್ತು ಕಾಲ ಕಳೆಯೋಣ ಅಂತಾ ನನ್ನನ್ನು ಕರೆದ್ರು ಎಂದು ನಟಿ ಶ್ರುತಿ ಹರಿಹರನ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆ ವೇಳೆ ಯುಬಿ ಸಿಟಿಯಲ್ಲಿ ಕೆಲಸ ಮಾಡ್ತಿದ್ದ ಸೆಕ್ಯೂರಿಟಿ ಗಾರ್ಡ್ ಗಳನ್ನು ವಿಚಾರಣೆ ನಡೆಸೋಕೆ ಹೋದ ಪೊಲೀಸರಿಗೆ ಶಾಕ್ ಆಗಿತ್ತು. ಆ ಘಟನೆ ನಡೆದ ನಂತರ ಹತ್ತಾರು ಸೆಕ್ಯೂರಿಟಿ ಗಾರ್ಡ್‍ಗಳು ಕೆಲಸಬಿಟ್ಟಿರೋದಲ್ಲದೇ, ಸೆಕ್ಯೂರಿಟಿ ಏಜೆನ್ಸಿಯನ್ನೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಅಲ್ಲಿದ್ದ ಕೆಲ ಸಿಬ್ಬಂದಿ ಕೂಡ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಬಾಯಿ ಬಿಟ್ಟಿರಲಿಲ್ಲ.
ಮೀಟೂ (MeeToo) ಅಭಿಯಾನದ ನಂತರ ಅನೇಕ ಕಲಾವಿದೆಯರು ತಮ್ಮ ಬದುಕಿನಲ್ಲಿ ನಡೆದಂತಹ ಕಹಿ ಘಟನೆಗಳನ್ನು ಬಿಚ್ಚಿಡುತ್ತಿದ್ದಾರೆ. ಅವಕಾಶಕ್ಕಾಗಿ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ತಮ್ಮ ಬದುಕಿನಲ್ಲಿ ಆಟವಾಡಿದ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಲಿವುಡ್ ನಿಂದ ಶುರುವಾದ ಮೀಟೂ ಭಾರತೀಯ ಸಿನಿಮಾ ರಂಗದ ನಾನಾ ಭಾಗಗಳಿಗೂ ಬಿಸಿಮುಟ್ಟಿಸಿದೆ.
ಈಗಾಗಲೇ ಹೆಸರಾಂತ ಕಲಾವಿದರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದು ಇವರ ಸಾಲಿಗೆ ಮಲಯಾಳಂ (Malayalam) ಸಿನಿಮಾ ತಾರೆ ಮಾಳವಿಕಾ ಶ್ರೀನಾಥ್ (Malavika Srinath) ಕೂಡ ಸೇರಿದ್ದಾರೆ. ಅವಕಾಶಕ್ಕಾಗಿ ತಮ್ಮೊಂದಿಗೆ ಸಹಕರಿಸುವಂತೆ ಒಬ್ಬರು ಕೇಳಿದ್ದರು ಎನ್ನುವ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ದತ್ತಣ್ಣ ಮದುವೆ ಆಗಲಿಲ್ಲ ಏಕೆ? ಗೆಳೆಯರು ಬಿಚ್ಚಿಟ್ಟ ರಹಸ್ಯ
ಮೂರು ವರ್ಷಗಳ ಹಿಂದೆ ನಡೆದ ಘಟನೆಯನ್ನು ಅವರು ನೆನಪಿಸಿಕೊಂಡಿದ್ದು, ಮಂಜು ವಾರಿಯರ್ ಮಗಳ ಪಾತ್ರಕ್ಕೆ ಆಯ್ಕೆಯಾಗಲು ಹತ್ತು ನಿಮಿಷ ನನ್ನೊಂದಿಗೆ ಸಹಕರಿಸು ಎಂದು ಡ್ರೆಸ್ಸಿಂಗ್ ರೂಮ್ ನಲ್ಲಿ ಓರ್ವ ವ್ಯಕ್ತಿ ಕೇಳಿದ. ಅಲ್ಲದೇ, ನನ್ನನ್ನು ತಬ್ಬಿಕೊಂಡು ಗುಪ್ತಾಂಗ ಮುಟ್ಟಿದ. ನಾನು ಅಳುತ್ತಲೇ ಓಡಿಹೋದೆ ಎಂದು ಅವರು ಹೇಳಿಕೊಂಡಿದ್ದಾರೆ.
ಆಡಿಷನ್ ನೆಪದಲ್ಲಿ ಕರೆಯಿಸಿಕೊಂಡು ಈ ರೀತಿಯಲ್ಲಿ ಆತ ವರ್ತಿಸಿದ. ನನ್ನೊಂದಿಗೆ ನನ್ನ ತಾಯಿ ಕೂಡ ಬಂದಿದ್ದರು. ಅವರು ಡ್ರೆಸ್ಸಿಂಗ್ ರೂಮ್ ಹೊರಗೆ ನನಗಾಗಿ ಕಾಯುತ್ತಿದ್ದರು. ನಾನು ಒಳಗಿದ್ದೆ. ಆ ವೇಳೆಯಲ್ಲಿ ಈ ಘಟನೆ ನಡೆಯಿತು ಎಂದು ಮಾಳವಿಕಾ ಹೇಳಿಕೊಂಡಿದ್ದಾರೆ. ಅಂದಹಾಗೆ ಮಧುರಂ, ಸಾಟರ್ಡೆ ನೈಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮಾಳವಿಕಾ ನಟಿಸಿದ್ದಾರೆ.
ಮೀಟೂ (MeToo) ಅಭಿಯಾನದ ನಂತರ ಅನೇಕ ತಾರೆಯರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಧೈರ್ಯದಿಂದ ಸಮಯ ಸಿಕ್ಕಾಗೆಲ್ಲ ಹೇಳುತ್ತಾ ಬಂದಿದ್ದಾರೆ. ಬಾಲಿವುಡ್ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಭಾರತೀಯ ಸಿನಿಮಾ ರಂಗದ ವಿವಿಧ ಭಾಷೆಯ ಚಿತ್ರ ಕಲಾವಿದರು ಕೂಡ ಕಾಸ್ಟಿಂಗ್ ಕೌಚ್ (Casting Couch) ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಈ ಮೂಲಕ ಚಿತ್ರರಂಗದ ಮತ್ತೊಂದು ಮುಖವನ್ನೂ ಬಿಚ್ಚಿಡುತ್ತಿದ್ದಾರೆ.
ಮೀಟೂ ಅಭಿಯಾನದ ಗಾಳಿ ಬಾಲಿವುಡ್ ನಲ್ಲಿ ಜೋರಾಗಿದ್ದರೂ, ಇತರ ಸಿನಿಮಾ ರಂಗದಲ್ಲೂ ಅದು ತನ್ನ ಪ್ರಭಾವ ಬೀರಿತ್ತು. ಹಾಗಾಗಿ ಕನ್ನಡವೂ ಸೇರಿದಂತೆ ತಮಿಳು, ತೆಲುಗು ಹಾಗೂ ಮಲೆಯಾಳಂ ಚಿತ್ರರಂಗದ ಅನೇಕ ನಟಿಯರು ತಮಗಾದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಇದೀಗ ತಮಿಳಿನ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayantara) ಕೂಡ ಈ ಕುರಿತು ಮಾತನಾಡಿದ್ದಾರೆ. ಸಿನಿಮಾ ರಂಗಕ್ಕೆ ಬಂದ ಆರಂಭದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಚಂದ್ರಮುಖಿ – 2 ಡ್ಯಾನ್ಸ್ ಪ್ರಾಕ್ಟಿಸ್ ಶುರು ಮಾಡಿದ ಕಂಗನಾ ರಣಾವತ್
ನಯನತಾರಾ ಸಿನಿಮಾ ರಂಗಕ್ಕೆ ಬಂದಾಗ ಅವರಿಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವ ಆಗಿದೆಯಂತೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಸಿನಿಮಾ ರಂಗಕ್ಕೆ ಬಂದಾಗ ನನ್ನನ್ನೂ ಕೂಡ ಕಮಿಟ್ಮೆಂಟ್ ಗೆ ಕೇಳಿದರು. ಆದರೆ, ನಾನು ಅದಕ್ಕೆ ಒಪ್ಪಲು ಸಿದ್ಧಳಿರಲಿಲ್ಲ. ನನಗೆ ನನ್ನ ಟ್ಯಾಲೆಂಟ್ ಮೇಲೆ ನಂಬಿಕೆಯಿತ್ತು. ನಾವು ಹೇಗೆ ಇರುತ್ತೆವೆಯೋ, ನಮ್ಮನ್ನು ಇಂಡಸ್ಟ್ರಿ ಹಾಗೆ ನಡೆಸಿಕೊಳ್ಳುತ್ತದೆ’ ಎಂದು ಹೇಳುವ ಮೂಲಕ ಕಾಸ್ಟಿಂಗ್ ಕೌಚ್ ಅನುಭವವನ್ನು ಅವರು ಬಿಚ್ಚಿಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮೀಟೂ ಪ್ರಕರಣಗಳು ಒಂದೊಂದೆ ಬೆಳಕಿಗೆ ಬರುತ್ತಿವೆ. ಸಿನಿಮಾ ರಂಗದ ಕರಾಳಮುಖವನ್ನು ಬಿಚ್ಚಿಡುತ್ತಾ, ಒಬ್ಬೊಬ್ಬರೇ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಹೇಳುತ್ತಿದ್ದಾರೆ. ತಮಗೆ ತೊಂದರೆ ಕೊಟ್ಟವರ ಹೆಸರನ್ನು ನೇರವಾಗಿ ಹೇಳದೇ ತಮ್ಮ ಬದುಕಿನಲ್ಲಿ ನಡೆದ ಆ ಕರಾಳ ಸತ್ಯವನ್ನು ಬಯಲು ಮಾಡುವ ಮೂಲಕ ಚಿತ್ರರಂಗದ ಮತ್ತೊಂದು ಮುಖವನ್ನು ಅನಾರವಣಗೊಳಿಸುತ್ತಿದ್ದಾರೆ. ಇವರ ಸಾಲಿಗೆ ಇದೀಗ ಮರಾಠಿ ಸಿನಿಮಾ ರಂಗದ ನಟಿಯು ಕೂಡ ಸೇರಿಕೊಂಡಿದ್ದಾರೆ.
ಇದು ಚಿತ್ರರಂಗದಲ್ಲಿ ನಡೆದಿರುವ ಘಟನೆ ಅಲ್ಲದೇ ಇದ್ದರೂ, ಸಿನಿಮಾ ರಂಗದಲ್ಲಿ ಇರುವವರಿಗೆ ಆದ ಕಹಿ ಘಟನೆ ಆಗಿದ್ದರಿಂದ ಸಿನಿಮಾ ರಂಗ ಇದನ್ನು ಗಂಭೀರವಾಗಿಯೇ ತಗೆದುಕೊಂಡಿದೆ. ಈ ಘಟನೆ ನಡೆದದ್ದು ಮರಾಠಿ ಸಿನಿಮಾ ರಂಗದಲ್ಲಾಗಿದ್ದು, ತಮ್ಮ ಜೀವನದಲ್ಲಿ ನಡೆದ ಘಟನೆಯನ್ನು ನಟಿ ತೇಜಸ್ವಿನಿ ಪಂಡಿತ್ ಹತ್ತು ವರ್ಷಗಳ ನಂತರ ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಮನಬಿಚ್ಚಿ ಮಾತನಾಡಿದ್ದಾರೆ.
ಆಗ ತಾನೆ ಸಿನಿಮಾ ರಂಗಕ್ಕೆ ಬಂದ ದಿನಗಳವು. ಹಾಗಾಗಿ ನನ್ನ ಬಳಿ ತುಂಬಾ ಹಣ ಇರಲಿಲ್ಲ. ಒಂದು ರೀತಿಯಲ್ಲಿ ಕಡಿಮೆ ಹಣದಲ್ಲೇ ನಾನು ಬದುಕು ನಡೆಸುತ್ತಿದ್ದೆ. ಹಾಗಾಗಿ ನನ್ನ ಬಳಿ ಹಣ ಇಲ್ಲ ಅನ್ನು ಕಾರಣಕ್ಕಾಗಿ ಅಂಥದ್ದೊಂದು ಘಟನೆಗೆ ಸಾಕ್ಷಿಯಾಗಬೇಕಾಯಿತು. ಪುಣೆಯ ಅಪಾರ್ಟ್ಮೆಂಟ್ ನಲ್ಲಿ ನಾನು ವಾಸವಿದ್ದೆ. ಆ ಅಪಾರ್ಟ್ಮೆಂಟ್ ಕಾರ್ಪೋರೇಟ್ ಒಬ್ಬರಿಗೆ ಸೇರಿದ್ದಾಗಿತ್ತು. ಬಾಡಿಗೆ ಪಾವತಿಸಲು ಅವರ ಬಳಿ ಹೋದಾಗ, ನೇರವಾಗಿಯೇ ಅವನು ಮಂಚಕ್ಕೆ ಕರೆದ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ
ತೇಜಸ್ವೀನಿಯನ್ನು ಅವನು ನೇರವಾಗಿ ಮಂಚಕ್ಕೆ ಬರುತ್ತೀಯಾ ಎಂದು ಕೇಳಿದಾಗ ಶಾಕ್ ಆಗಿದ್ದರಂತೆ. ಕೋಪದಿಂದಲೇ ಅವನಿಗೆ ನೀರಿನ ಲೋಟವನ್ನು ಮುಖಕ್ಕೆ ಎಸೆದು ಬಂದಿದೆ ಎಂದು ಹೇಳಿಕೊಂಡಿದ್ದಾರೆ. ‘ಆಗ ಬೈ ಅರಾಚೆ’ ಸಿನಿಮಾದ ಮೂಲಕ ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ತೇಜಸ್ವೀನಿ ಆನಂತರ ಹಲವು ಚಿತ್ರಗಳನ್ನು ಮಾಡಿದ್ದಾರೆ. ಈ ಘಟನೆಯಿಂದಾಗಿ ಅವರು ಎಚ್ಚರಿಕೆಯಿಂದ ಬದುಕಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ತಮ್ಮ ವಿಭಿನ್ನ ಕಾಸ್ಟ್ಯೂಮ್ ಮೂಲಕವೇ ಸದಾ ಸುದ್ದಿ ಆಗುವ ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್, ಲೇಖಕ ಚೇತನ್ ಭಗತ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಚೇತನ್ ಭಗತ್ ಅವರ ಮೀಟು ಆರೋಪದ ವೇಳೆಯಲ್ಲಿ ಹರಿದಾಡಿದ ವಾಟ್ಸ್ ಅಪ್ ಚಾಟ್ ಗಳನ್ನು ಉರ್ಫಿ ಮತ್ತೆ ಶೇರ್ ಮಾಡಿದ್ದಾಳೆ. ಜೊತೆಗೆ ಮಹಿಳೆಯರು ಇಂತಿಷ್ಟೇ ಬಟ್ಟೆಗಳನ್ನು ಹಾಕಿಕೊಳ್ಳಿ ಅಂತ ಹೇಳುವುದಕ್ಕೆ ನೀವ್ಯಾರು ಎಂದು ಕೇಳಿದ್ದಾರೆ.
ಚೇತನ್ ಭಗತ್ ಕಾರ್ಯಕ್ರಮವೊಂದರಲ್ಲಿ ಯುವಕರ ಬಗ್ಗೆ ಮಾತನಾಡುತ್ತಾ, ‘ಇಂದಿನ ಯುವಕರಿಗೆ ಮೊಬೈಲ್ ಅಡ್ಡಿಯಾಗಿದೆ. ಅವರು ದಿನದ ಬಹಳ ಹೊತ್ತು ಮೊಬೈಲ್ ನಲ್ಲೇ ಕಳೆಯುತ್ತಾರೆ. ಉರ್ಫಿ ಜಾವೇದ್ ಹಾಕುವ ಕಾಸ್ಟ್ಯೂಮ್ ಗೆ ಲೈಕ್ ಹಾಗೂ ಕಾಮೆಂಟ್ ಮಾಡುವುದರಲ್ಲೇ ದಿನಗಳನ್ನು ಕಳೆಯುತ್ತಿದ್ದಾರೆ. ಪ್ರತಿಯೊಬ್ಬರಿಗೂ ಈ ಉರ್ಫಿ ಜಾವೇದ್ ಗೊತ್ತು ಅಂತೆಲ್ಲ ಮಾತನಾಡಿದ್ದರು. ಯಾವುದೇ ಕಾರ್ಯಕ್ರಮದಲ್ಲಿ ತನ್ನ ಹೆಸರನ್ನು ಪ್ರಸ್ತಾಪ ಮಾಡಿದ್ದಕ್ಕೆ ಉರ್ಫಿ ಗರಂ ಆಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಚೇತನ್ ಭಗತ್ ಸುದೀರ್ಘವಾಗಿ ಬರೆದುಕೊಂಡಿದ್ದರು. ಇದನ್ನೂ ಓದಿ:ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ರು `ಅಗ್ನಿಸಾಕ್ಷಿ’ಯ ವೈಷ್ಣವಿ ಗೌಡ
ಸೋಷಿಯಲ್ ಮೀಡಿಯಾ ಮೂಲಕ ಚೇತನ್ ಭಗತ್ ಅವರಿಗೆ ಟಾಂಗ್ ನೀಡಿದ್ದ ಉರ್ಫಿ, ‘ಕಾರ್ಯಕ್ರಮದಲ್ಲಿ ಅವರು ನನ್ನ ಹೆಸರನ್ನು ಎಳೆತರಬಾರದಿತ್ತು. ಯುವಕರ ಮನಸ್ಸನ್ನು ನಾನು ಹಾಳು ಮಾಡಿಲ್ಲ. ನನ್ನ ಚಿಕ್ಕಪ್ಪನ ವಯಸ್ಸಿನ ಚೇತನ್, ಈ ಹಿಂದೆ ಹುಡುಗಿಯರಿಗೆ ಅಶ್ಲೀಲ ಮಸೇಜ್ ಕಳುಹಿಸಿ ಮೀಟೂ ಆರೋಪಿಯಾಗಿದ್ದರು. ನನ್ನ ಕಾಸ್ಟ್ಯೂಮ್ ಬಗ್ಗೆ ಅವರಿಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ’ ಎಂದು ಬರೆದುಕೊಂಡಿದ್ದರು.
ಉರ್ಫಿಗೆ ಮತ್ತೆ ಪ್ರತಿಕ್ರಿಯೆ ನೀಡಿದ್ದ ಚೇತನ್ ಭಗತ್, ‘ನಾನು ಹೇಳಿದ್ದು ಬೇರೆ ಅರ್ಥದಲ್ಲಿ. ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಯುವಕರಿಗೆ ಆ ರೀತಿ ಸಲಹೆ ನೀಡಿದ್ದೆ. ಆದರೆ, ನನ್ನ ಮಾತನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ. ಆ ರೀತಿ ತಗೆದುಕೊಂಡಿದ್ದಕ್ಕೆ ವಿಷಾದವಿದೆ’ ಎಂದು ಹೇಳುವ ಮೂಲಕ ಈ ಪ್ರಕರಣವನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದರು. ಆದರೆ, ಅದು ತಣ್ಣಗಾಗುವಂತೆ ಕಾಣುತ್ತಿಲ್ಲ. ಚೇತನ್ ಭಗತ್ ಅವರ ಮೀಟೂ ಸಂದೇಶದ ಸ್ಕ್ರೀನ್ ಶಾಟ್ ಹಾಕುವ ಮೂಲಕ ಈ ಜಗಳವನ್ನು ಉರ್ಫಿ ಮುಂದುವರೆಸಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತೋ, ಕಾದು ನೋಡಬೇಕು.
Live Tv
[brid partner=56869869 player=32851 video=960834 autoplay=true]
ಹಿಂದಿ ಕಿರುತೆರೆಯ ಖ್ಯಾತ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿಯೂ ಆಗಿರುವ ರತನ್ ರಾಜಪೂತ್ (Ratan Rajput) ತಮಗಾದ ಕಾಸ್ಟಿಂಗ್ ಕಾಚ್ (Casting Couch) ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಒಂದು ವೇಳೆ ನಾನು ಅವನು ಹೇಳಿದಂತೆ ಕೇಳಿದ್ದರೆ, ಸ್ಟಾರ್ ನಟಿಯಾಗಿರುತ್ತಿದ್ದೆ. ಆದರೆ, ಅದು ನನಗಿಷ್ಟವಾಗದ ದಾರಿ. ಹಾಗಾಗಿ ಅವನ ಮುಖಕ್ಕೆ ಉಗಿದು ಬಂದೆ ಎಂದು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಹದಿನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ.
ಆ ನಿರ್ದೇಶಕನಿಗೆ ಅರವತ್ತರ ವಯಸ್ಸು. ನನ್ನನ್ನು ನಾಯಕಿಯನ್ನಾಗಿ ಮಾಡುತ್ತೇನೆ ಅಂದ. ನನಗೆ ಗಾಡ್ ಫಾದರ್ ಆಗುತ್ತೇನೆ ಅಂತಾನೂ ಹೇಳಿದ. ನನ್ನ ಚರ್ಮ, ಮುಖ ಸರಿ ಇಲ್ಲ. ತಲೆಗೂದಲು ಚೆನ್ನಾಗಿಲ್ಲ ಹೀಗೆ ಅನೇಕ ಸಂಗತಿಗಳನ್ನು ಪಟ್ಟಿಮಾಡಿ, ಇದೆಲ್ಲವನ್ನೂ ಸರಿ ಮಾಡಿ ನಿನ್ನನ್ನು ಹೀರೋಯಿನ್ ಆಗಿ ಆಯ್ಕೆ ಮಾಡಿಕೊಳ್ಳಬೇಕು ಅಂದರೆ ಒಂದಷ್ಟು ಲಕ್ಷ ರೂಪಾಯಿ ಖರ್ಚಾಗುತ್ತದೆ. ನಿನಗಾಗಿ ನಾನು ಆ ಖರ್ಚು ಮಾಡಬೇಕು ಅಂದರೆ, ನೀನು ನನ್ನವಳಾಗಬೇಕು ಎಂದಿದ್ದರಂತೆ ನಿರ್ದೇಶಕರು. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ
ಆ ವ್ಯಕ್ತಿಯು ನನ್ನೊಂದಿಗೆ ಫ್ರೆಂಡ್ ರೀತಿ ಇರಬೇಕು, ನಾನು ಕೇಳಿದ್ದನ್ನು ಕೊಡಬೇಕು ಅಂದಾಗ ನನಗೆ ಅರಿವಾಯಿತು. ನೀವು ನನ್ನ ತಂದೆ ಸಮಾನರು, ಗುರು ಕೂಡ. ದೊಡ್ಡವರಾಗಿ ಹೀಗೆ ಮಾತನಾಡಬಾರದು. ನಿಮ್ಮನ್ನು ನಾನು ಗೌರವದಿಂದ ಕಾಣುತ್ತಿದ್ದೇನೆ ಅಂದೆ. ನನ್ನ ಮಗಳು ನಟಿಯಾಗಿದ್ದರೂ, ನಾನು ಅವಳ ಜೊತೆ ಮಲಗುತ್ತಿದ್ದೆ ಎಂದು ಅಸಹ್ಯವಾಗಿ ಹೇಳಿದ. ಅಂತಹ ಅಸಹ್ಯ ವ್ಯಕ್ತಿಯಿಂದ ದೂರ ಬಂದು ಬಿಟ್ಟೆ. ಹೀಗೆ ಬಾಲಿವುಡ್ ನಲ್ಲಿ ಅನೇಕರಿಗೆ ಇಂತಹ ಅನುಭವ ಆಗಿರುತ್ತದೆ ಎಂದಿದ್ದಾರೆ ರತನ್.
ರತನ್ ಬಿಹಾರ(Bihar) ಮೂಲದವರು. ಹಿಂದಿ ಕಿರುತೆರೆಯಲ್ಲಿ ಫೇಮಸ್ ಹೆಸರು. ಸಾಕಷ್ಟು ಹಿಂದಿ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 9 ಹಿಂದಿಯಲ್ಲಿ ಭಾಗಿಯಾಗಿದ್ದರು. ಅಲ್ಲದೇ, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ವೊಂದನ್ನು ಅವರು ನಡೆಸುತ್ತಿದ್ದು, ಮುಂಬೈಗೆ ಬಂದಾಗಿನ ಕೆಲ ಸಂಗತಿಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ ನಲ್ಲಿ ಮೀಟೂ ಭಯ ಹುಟ್ಟಿಸಿದ್ದ ನಟಿ ತನುಶ್ರೀ ದತ್ತ, ಮತ್ತೆ ಈ ವಿಷಯವನ್ನು ನೆನಪಿಸಿದ್ದಾರೆ. ಹಾರ್ನ್, ಓಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಾವು ನಾನಾ ಪಾಟೇಕರ್ ಜೊತೆ ನಟಿಸುವಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಹೇಳಿಕೊಂಡಿದ್ದರು. ಆ ದೌರ್ಜನ್ಯ ಆಗಿದ್ದು ನಾನಾ ಅವರಿಂದ ಎಂದು ದೂರು ದಾಖಲಿಸಿದ್ದರು.
ಇದೀಗ ಮತ್ತೆ ತನುಶ್ರೀ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದು ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ ಮಾಡಿದ್ದೆ. ನನಗೆ ಏನಾದರೂ ಪ್ರಾಣಹಾನಿಯಾದರೆ, ಅದಕ್ಕೆ ನಾನಾ ಕಾರಣ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಬಾಲಿವುಡ್ ಮಾಫಿಯಾ ಬಗ್ಗೆಯೂ ಮಾತನಾಡಿರುವ ಅವರು, ಸುಶಾಂತ್ ಸಿಂಗ್ ಸಾವಿನಲ್ಲಿ ಕೇಳಿ ಬಂದ ಹೆಸರುಗಳೇ ಬಾಲಿವುಡ್ ಮಾಫಿಯಾದಲ್ಲಿ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಶ್ವೇತಾ ಶ್ರೀವಾಸ್ತವ್
ಬಾಲಿವುಡ್ ಮಾಫಿಯಾ ಕುರಿತು ಹೆಚ್ಚಿನ ಮಾಹಿತಿಯನ್ನೂ ಹಂಚಿಕೊಂಡಿರುವ ತನುಶ್ರೀ, ‘ಈ ಮಾಫಿಯಾದಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಯಾರ ಸಿನಿಮಾ ನೋಡಬೇಕು, ಯಾವ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಬೇಕು, ಯಾರನ್ನು ಪ್ರೀತಿಸಬೇಕು, ಯಾರನ್ನು ದ್ವೇಷಿಸಬೇಕು ಹೀಗೆ ಎಲ್ಲವನ್ನೂ ಈ ಮಾಫಿಯಾ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಅವರಿಂದಾಗಿ ತಾನು ಎಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ ಎಂದೂ ಹೇಳಿದ್ದಾರೆ.
ತನುಶ್ರೀ ಕೇವಲ ನಾನಾ ಪಾಟೇಕರ್ ಮೇಲಷ್ಟೇ ಆರೋಪ ಮಾಡಿಲ್ಲ. ಎರಡು ವರ್ಷಗಳ ಹಿಂದೆ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮೇಲೆಯೂ ಆರೋಪ ಮಾಡಿದ್ದರು. ಸಹನಟನ ಜೊತೆ ಬೆತ್ತಲೆಯಾಗಿ ನೃತ್ಯ ಮಾಡಲು ಅವರು ನನಗೆ ಪ್ರಚೋದಿಸಿದ್ದರು ಎಂದು ಹೇಳಿಕೆ ನೀಡಿದ್ದರು. ಈ ವಿಷಯ ಕೂಡ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು.
Live Tv
[brid partner=56869869 player=32851 video=960834 autoplay=true]
ಬಿಟೌನ್ ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಈ ಹಿಂದೆ ಮೀಟೂ ಆರೋಪ ಮಾಡಿ ಬಾಲಿವುಡ್ ನಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ ತನುಶ್ರೀ ದತ್ತ, ಇದೀಗ ಮತ್ತೊಮ್ಮೆ ಗುಡುಗಿದ್ದಾಳೆ. ಮೀಟೂ ಆರೋಪ ಮಾಡಿದ್ದಕ್ಕೆ ತನಗಾದ ಅನ್ಯಾಯವನ್ನು ಮತ್ತೆ ತೆರೆದಿಟ್ಟಿದ್ದಾರೆ. ಈ ಆರೋಪದಿಂದ ಅವರು ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎಂದು ಮನದಾಳವನ್ನು ಬಿಚ್ಚಿಟ್ಟಿದ್ದಾರೆ.
ತನುಶ್ರೀ ದತ್ತ ಮೊದಲ ಬಾರಿಗೆ ಬಾಲಿವುಡ್ ನಲ್ಲಿ ಮೀಟೂ ಬಿರುಗಾಳಿಯನ್ನು ಎಬ್ಬಿಸಿದ ನಟಿ. ಬಾಲಿವುಡ್ ನ ಅನೇಕ ಕಲಾವಿದರ ಮತ್ತು ತಂತ್ರಜ್ಞರ ಬಣ್ಣ ಬಯಲು ಮಾಡಿದ್ದರು. ಈ ಕುರಿತು ಅವರು ಕಾನೂನು ಕ್ರಮಕ್ಕೂ ಮುಂದಾದರು. ಆರೋಪ ಪ್ರತ್ಯಾರೋಪಗಳು ನಡೆದು ಆನಂತರ ಅನೇಕರು ಇವರಿಗೆ ಕಿರುಕುಳ ನೀಡಿದರಂತೆ. ಬಾಲಿವುಡ್ ನಲ್ಲಿ ಬೆಳೆಯಲಿಕ್ಕೆ ಬಿಡಲಿಲ್ಲವಂತೆ. ಬಾಲಿವುಡ್ ಮಾಫಿಯಾ ತಮ್ಮ ವೃತ್ತಿ ಬದುಕನ್ನೇ ಕತ್ತಲಿನಲ್ಲಿ ಇಟ್ಟಿತ್ತು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್ ನಟನೆಯ ಹಾಲಿವುಡ್ ಚಿತ್ರತಂಡ
ಬಾಲಿವುಡ್ ಮಾಫಿಯಾದಿಂದ ಬಿಡಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಅವರು ಹೇಳಿದಂತೆ ಕೇಳಿದರೆ, ಯಾರು ಬೇಕಾದರೂ ಸ್ಟಾರ್ ನಟಿಯರು ಆಗಬಹುದು ಎಂದು ಕೆಲವರನ್ನು ಮತ್ತೆ ಟೀಕಿಸಿದ್ದಾರೆ. ಆದರೆ, ಯಾವ ಮಾಫಿಯಾಗೂ ನಾನು ತಲೆಬಾಗದೇ ಇರುವ ಕಾರಣಕ್ಕಾಗಿ ನಾನಾ ರೀತಿಯ ಕಿರುಕುಳವನ್ನು ಅನುಭವಿಸಬೇಕಾಯಿತು ಎಂದು ಹೇಳಿದ್ದಾರೆ ತನುಶ್ರೀ ದತ್ತ. ಇವತ್ತಿಗೂ ಅವರು ಮೀಟು ಪ್ರಕರಣದಿಂದಾಗಿ ಸಂಕಟಗಳನ್ನು ಅನುಭವಿಸುವುದು ತಪ್ಪಿಲ್ಲ ಎಂದಿದ್ದಾರೆ ತನುಶ್ರೀ.
Live Tv
[brid partner=56869869 player=32851 video=960834 autoplay=true]