Tag: ಮೀಟರ್ ಬಡ್ಡಿ ದಂಧೆ

  • 10 ಸಾವಿರ ಸಾಲ.. ಒಂದೂವರೆ ಲಕ್ಷ ಬಡ್ಡಿ – ಮೈಕ್ರೋ ಫೈನಾನ್ಸ್‌ ಬೆನ್ನಲ್ಲೇ ಮೀಟರ್ ಬಡ್ಡಿ ಹಾವಳಿ

    10 ಸಾವಿರ ಸಾಲ.. ಒಂದೂವರೆ ಲಕ್ಷ ಬಡ್ಡಿ – ಮೈಕ್ರೋ ಫೈನಾನ್ಸ್‌ ಬೆನ್ನಲ್ಲೇ ಮೀಟರ್ ಬಡ್ಡಿ ಹಾವಳಿ

    ಚಿಕ್ಕಬಳ್ಳಾಪುರ: ಮೈಕ್ರೋ ಫೈನಾನ್ಸ್ (Microfinance) ಕಿರುಕುಳಕ್ಕೆ ಜನ ವಿಲವಿಲ ಒದ್ದಾಡಿ ಸಾವು ನೋವು ಆಗಿರುವ ಸಂದರ್ಭದಲ್ಲೇ ಮೀಟರ್ ಬಡ್ಡಿ ಹಾವಳಿಯೂ ಹೆಚ್ಚಾಗಿದೆ. ನೂರು ರೂಪಾಯಿ ಸಾಲಕ್ಕೆ ಪ್ರತಿ ತಿಂಗಳು 10-15 ಪರ್ಸೆಂಟ್ ವಸೂಲಿ ಮಾಡಿದ್ದಲ್ಲದೇ ಬಡ್ಡಿ, ಚಕ್ರಬಡ್ಡಿ, ಅಸಲು ಸಮೇತ ಸಾಲ ತೀರಿಸಿದ್ರೂ ಶ್ಯೂರಿಟಿ ಇಟ್ಟುಕೊಂಡಿದ್ದ ಚೆಕ್‌ಗಳನ್ನು ನೀಡದೇ ಕಿರುಕುಳ ನೀಡುತ್ತಿರುವ ಆರೋಪ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯಲ್ಲಿ ಕೇಳಿಬಂದಿದೆ.

    ಬಡ್ಡಿ, ಚಕ್ರಬಡ್ಡಿ, ಅಸಲು ಸಮೇತ ಸಾಲ ಮೀಟರ್ ಬಡ್ಡಿ ಸಾಲ ತೀರಿಸಿದ್ರೂ.. ಶ್ಯೂರಿಟಿ ಇಟ್ಟುಕೊಂಡಿದ್ದ ಚೆಕ್‌ಗಳನ್ನು ನೀಡದೆ ಕಿರುಕುಳ ನೀಡುತ್ತಿದ್ದಾನೆ ಅಂತ ಆರೋಪಿಸಿ ಆತನ ಫೋಟೋಗಳನ್ನು ಪ್ರದರ್ಶನ ಮಾಡಿ ಚಿಕ್ಕಬಳ್ಳಾಪುರ ತಾಲೂಕಿನ ಎಲೆಹಳ್ಳಿ, ಕಂಡಕನಹಳ್ಳಿ ಹಾಗೂ ಆವಲಹಳ್ಳಿ ಗ್ರಾಮದ ಸಂತ್ರಸ್ತರು ನ್ಯಾಯ ಕೇಳ್ತಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಗಳು ಆಶೀರ್ವಾದ ಮಾಡಿದ್ರೆ, ಯೋಗ್ಯ ಅಂದ್ರೆ ಜನರ ವೋಟು ಗ್ಯಾರಂಟಿ: ಮುಖ್ಯಮಂತ್ರಿ ಚಂದ್ರು

    ಮದುವೆ ಸೇರಿದಂತೆ ಕೃಷಿ ಕಾಯಕಕ್ಕೆ ಕೈ ಸಾಲ ಅಂತ 10 ಸಾವಿರ 20 ಸಾವಿರ ರೂಪಾಯಿಯನ್ನ ಎಲೆಹಳ್ಳಿ ಗ್ರಾಮದ ವೆಂಕಟೇಶ್ ಬಳಿ ಪಡೆದುಕೊಂಡಿದ್ರಂತೆ. ಸಾಲ ಕೊಡುವಾಗ ಖಾಲಿ ಚೆಕ್ ಪಡೆದಿದ್ದ ವೆಂಕಟೇಶ್. 100 ರೂ.ಗೆ 10 ರಿಂದ 15 ಪರ್ಸೆಂಟ್ ಬಡ್ಡಿ ಹಾಕ್ತಿದ್ದನಂತೆ. ಆದ್ರೂ ಕಷ್ಟ ಅಂತ ತಗೊಂಡು ವರ್ಷಾನುಗಟ್ಟಲೇ ಬಡ್ಡಿ ಕಟ್ಟಿ ಸಾಕಾಗಿ ಕೊನೆಗೆ ಅಸಲು ಹಣ ಕೊಟ್ಟು ಕೈ ತೊಳೆದುಕೊಂಡಿದ್ದಾರಂತೆ. ಆದ್ರೆ ಸಾಲ ಪಡೆಯುವಾಗ ಶ್ಯೂರಿಟಿಯಾಗಿ ಕೊಟ್ಟಿದ್ದ ಖಾಲಿ ಚೆಕ್ ವಾಪಾಸ್ ಕೊಡದ ವೆಂಕಟೇಶ್, 10 ಸಾವಿರಕ್ಕೆ 1.20 ಲಕ್ಷ ಸೇರಿ 2 ಲಕ್ಷ ಹಣ ಕೊಡಬೇಕು ಅಂತ ಖಾಲಿ ಚೆಕ್‌ನಲ್ಲಿ ಬರೆದುಕೊಂಡು ಚೆಕ್ ಬೌನ್ಸ್ ಕೇಸ್ ಹಾಕಿ ಕೋರ್ಟ್‌ಗೆ ಅಲೆದಾಡಿಸುತ್ತಿದ್ದಾನಂತೆ ಅಂತ ಆರೋಪಿಸುತ್ತಿದ್ದಾರೆ.

    ಅಲ್ಲದೇ ಕಂಡಕನಹಳ್ಳಿ ನಿವಾಸಿ ಶಿವಶಂಕರ ಬಾಬು, ಆವಲಹಳ್ಳಿ ಮುನಿರಾಜು, ಕಂಡಕನಹಳ್ಳಿ ನಿವಾಸಿ ಭಾಗ್ಯಮ್ಮ, ಕಂಡಕನಹಳ್ಳಿ ನಿವಾಸಿ ನಾರಾಯಣಸ್ವಾಮಿ, ಅಂಗರೇಖನಹಳ್ಳಿ ಲಕ್ಷ್ಮಿದೇವಮ್ಮ, ಕಾಡದಿಬ್ಬೂರು ಮುನಿರಾಜು, ಕಾಡದಿಬ್ಬೂರು ಮುರಳಿ, ವರಮಲ್ಲೇನಹಳ್ಳಿ ಎಂ. ಮುನಿರಾಜು ಸೇರಿದಂತೆ ಹಲವರು ಈಗಾಗಲೇ ವೆಂಕಟೇಶ್ ಮೀಟರ್ ಬಡ್ಡಿ ದಂಧೆ ಮೂಲಕ ನಮಗೆ ಕೊಡಬಾರದ ಕಾಟ ಕೊಟ್ಟಿದ್ದಾನೆ. ನಮ್ಮ ಖಾಲಿ ಚೆಕ್ ನಮಗೆ ವಾಪಸ್ ಕೊಡದೆ ವಂಚನೆ ನಮ್ಮ ಮೇಲೆಯೇ ಕೇಸ್ ಹಾಕಿ ಬೆದರಿಸ್ತಿದ್ದಾನೆ ಅಂತ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿಗೆ ದೂರು ನೀಡಿದ್ದಾರೆ.

    ಈ ಬಗ್ಗೆ ವೆಂಕಟೇಶ್ ದೂರವಾಣಿ ಮೂಲಕ ಸ್ಪಷ್ಟನೆ ನೀಡಿದ್ದು, ನಾನು ಸಾಲ ಕೊಟ್ಟಿರೊದು ನಿಜ. ಆದ್ರೆ ಬಡ್ಡಿ ಪಡೆದಿಲ್ಲ ಮೀಟರ್ ಬಡ್ಡಿ ದಂಧೆ ನಡೆಸಿಲ್ಲ. ಸಾಲ ಪಡೆವದರೆಲ್ಲ ನಮ್ಮ ಸಂಬಂಧಿಕರು ಹಣ ಪಡೆದು ಸಾಲ ವಾಪಸ್ ಕೊಡ್ತೀವಿ ಅಂತ ಒಪ್ಕೊಂಡು ಈಗ ಹೀಗೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪರ ಸ್ತ್ರೀ ಜೊತೆ ಸಲುಗೆ – ಪತಿಯ ಕಾಲು ಮುರಿಯಲು ಪತ್ನಿಯಿಂದಲೇ 5 ಲಕ್ಷಕ್ಕೆ ಸುಪಾರಿ

  • ಬೆಂಗಳೂರಲ್ಲಿ ಮೀಟರ್‌ ಬಡ್ಡಿ ದಂಧೆ; 40 ಲಕ್ಷ ಮೌಲ್ಯದ ನಗದು, ಚಿನ್ನಾಭರಣ ಸಿಸಿಬಿ ವಶಕ್ಕೆ

    ಬೆಂಗಳೂರಲ್ಲಿ ಮೀಟರ್‌ ಬಡ್ಡಿ ದಂಧೆ; 40 ಲಕ್ಷ ಮೌಲ್ಯದ ನಗದು, ಚಿನ್ನಾಭರಣ ಸಿಸಿಬಿ ವಶಕ್ಕೆ

    ಬೆಂಗಳೂರು: ರಾಜಧಾನಿಯಲ್ಲಿ ಮೀಟರ್‌ ಬಡ್ಡಿ (Meter Baddi) ದಂಧೆ ನಡೆಸುತ್ತಿದ್ದ ನಾಲ್ಕು ಕಡೆಗಳಲ್ಲಿ ಸಿಸಿಬಿ (CCB) ದಾಳಿ ನಡೆಸಿ ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.

    ಐದು ವರ್ಷಗಳ ನಂತರ ಮೀಟರ್ ಬಡ್ಡಿ ದಂಧೆ ನಡೆಸುತಿದ್ದವರನ್ನು ಗುರಿಯಾಗಿಸಿ ಸಿಸಿಬಿ ದಾಳಿ ನಡೆಸಿದೆ. ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬಡ್ಡಿ ದಂಧೆ ನಡೆಸುತ್ತಿದ್ದವರ ವಿರುದ್ಧ ಮನಿ ಲಾಂಡರಿಂಗ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ವ್ಯಕ್ತಿಯ ಮೇಲೆ ತಮಾಷೆಗೆ ಎಸೆದ ಪಟಾಕಿ ಜೀವವನ್ನೇ ತೆಗೀತು!

    ದಾಳಿ ವೇಳೆ 23 ಲಕ್ಷ ರೂ. ನಗದು, 127 ಗ್ರಾಂ ಚಿನ್ನಾಭರಣ, 10 ಕೆಜಿ ಬೆಳ್ಳಿ, 109 ಚೆಕ್‌ಗಳು, 50 ಅನ್ ಡಿಮಾಂಡ್ ಪ್ರಾಮಿಸರಿ ನೋಟ್, 42 ಖಾಲಿ ಬಾಂಡ್ ಪೇಪರ್, 85 ಶುದ್ಧ ಕ್ರಯ ಪತ್ರಗಳು, 35 ಸಾಲ ನಮೂದಿಸಿದ ದಾಖಲಾತಿ, 11 ಇ-ಸ್ಪಾಂಪ್ ಪೇಪರ್‌ಗಳು, 45 ಪಾಕೆಟ್ ಪುಸ್ತಕ, 15 ಅಗ್ರಿಮೆಂಟ್ ಪ್ರತಿಗಳು, 6 ರೋಲೆಕ್ಸ್ ವಾಚುಗಳನ್ನು ವಶಕ್ಕೆ ಪಡೆಯಲಾಗಿದೆ.

    ಒಟ್ಟಾರೆ 40 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಡ್ಡಿಗೆ ಎಂದು ಹಣ ಕೊಟ್ಟು ಸಾರ್ವಜನಿಕರನ್ನು ಹಿಂಸಿಸಿ ಮೀಟರ್ ಲೆಕ್ಕದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪದಡಿ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಮದುವೆಯಾಗಿ 3 ವರ್ಷವಾದ್ರೂ ಮಕ್ಕಳಾಗಿಲ್ಲ ಅಂತ ಪತ್ನಿಯ ಹತ್ಯೆ?

  • 80 ವರ್ಷದ ಬಾಬುಲಾಲ್ ಮೀಟರ್ ಬಡ್ಡಿ ದಂಧೆಯ ಮಾಸ್ಟರ್ ಮೈಂಡ್

    80 ವರ್ಷದ ಬಾಬುಲಾಲ್ ಮೀಟರ್ ಬಡ್ಡಿ ದಂಧೆಯ ಮಾಸ್ಟರ್ ಮೈಂಡ್

    – ಕೊರೊನಾ ನಡುವೆಯೂ ಮೀಟರ್ ಬಡ್ಡಿಯಿಂದ ಬಡವರ ಜೀವ ಹಿಂಡ್ತಿದ್ದ

    ಬೆಂಗಳೂರು: ಕೊರೊನಾ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದು, ಇಷ್ಟಾದರೂ ಮೀಟರ್ ಬಡ್ಡಿ ದಂಧೆ ಮಾತ್ರ ಯಗ್ಗಿಲ್ಲದೆ ನಡೆಯುತ್ತಿದೆ. ದಂಧೆ ನಡೆಸುತ್ತಿದ್ದ ಮನೆ ಕಚೇರಿ ಮೇಲೆ ಸಿಸಿಬಿ ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟು ಸತ್ಯ ಹೊರ ಬೀಳುತ್ತಿದೆ.

    ಈ ಕುರಿತು ಸಿಸಿಬಿಯ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದು, ನಗರದ ವಿ.ವಿ.ಪುರದಲ್ಲಿ ಅಕ್ರಮವಾಗಿ ತಂದೆ, ಮಗ ಮತ್ತು ಸಹೋದರ ಬಡ್ಡಿ ವ್ಯವಹಾರ ನಡೆಸುತ್ತಿದ್ದರು. 80 ವರ್ಷದ ಬಾಬುಲಾಲ್, ಮಗ ಚೇತನ್ ಮತ್ತು ಸಹೋದರ ಅನೇಕ ವರ್ಷಗಳಿಂದ ಬಡ್ಡಿ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.

    ವಿವಿಪುರದಲ್ಲಿರುವ ಬಾಬುಲಾಲ್ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ ವಿವಿಧ ಬ್ಯಾಂಕ್ ಚಕ್ ಗಳು, ಆಸ್ತಿ ಪ್ರಮಾಣ ಪತ್ರ ಸೇರಿ ಮಹತ್ವದ ದಾಖಲೆ ಪತ್ತೆಯಾಗಿವೆ. ಅಕ್ರಮ ಬಡ್ಡಿ ವ್ಯವಹಾರ ಸಂಬಂಧ ಇನ್ಯಾರ್ಯಾರು ಭಾಗಿಯಾಗಿದ್ದಾರೆ, ಅಕ್ರಮ ವ್ಯವಹಾರದ ವ್ಯಾಪ್ತಿ ಇನ್ನೂ ಎಷ್ಟು ದೊಡ್ಡದಿದೆ ಎಂಬುದರ ಬಗ್ಗೆ ಸಮಗ್ರ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

    ಮೀಟರ್ ಬಡ್ಡಿ ಅವ್ಯವಹಾರ ಸಂಬಂಧ ಕಾಟನ್ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ತನಿಖೆ ನಡೆಸಿದಾಗ ಅನೇಕ ಮಾಹಿತಿ ಬೆಳಕಿಗೆ ಬಂದಿದೆ ಎಂದು ಅವರು ವಿವರಿಸಿದ್ದಾರೆ.

  • ಮೀಟರ್ ಬಡ್ಡಿ ದಂಧೆ ಬ್ರೇಕ್ ಗೆ ಹೊಸ ಯೋಜನೆ ಜಾರಿ!

    ಮೀಟರ್ ಬಡ್ಡಿ ದಂಧೆ ಬ್ರೇಕ್ ಗೆ ಹೊಸ ಯೋಜನೆ ಜಾರಿ!

    -ವ್ಯಾಪಾರಿಗಳ ಜೊತೆ ಸಿಎಂ ಚರ್ಚೆ

    ಬೆಂಗಳೂರು: ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಹೊಸ ಬಡವರ ಬಂಧು ಯೋಜನೆ ಜಾರಿಗೆ ಚಿಂತನೆ ನಡೆಸುತ್ತಿದ್ದು, ಇಂದು ಬೆಳ್ಳಂಬೆಳಗ್ಗೆ ಬೀದಿ ಬದಿ ವ್ಯಾಪಾರಿಗಳು ಹಾಗೂ ಮಾರುಕಟ್ಟೆ ವ್ಯಾಪಾರಿಗಳಿಗಳ ಜೊತೆ ಸಿಎಂ ಕುಮಾರಸ್ವಾಮಿ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದಾರೆ.

    ಈ ವೇಳೆ, ಬೀದಿ ಬದಿ ವ್ಯಾಪಾರಿಗಳು ಮತ್ತು ಮಾರುಕಟ್ಟೆ ವ್ಯಾಪಾರಿಗಳು ಸದ್ಯ ಮೀಟರ್ ಬಡ್ಡಿ ದಂಧೆಯಿಂದಾಗಿ ತಾವು ಅನುಭವಿಸುತ್ತಿರುವ ಕಷ್ಟ ಕೋಟಲೆಗಳ ಬಗ್ಗೆ ಅಳಲು ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ಜೊತೆ ತೋಡಿಕೊಂಡರು.

    ಇದೇ ವೇಳೆ, ಮಾರುಕಟ್ಟೆಯಲ್ಲಿ ಸಚಿವ ಬಂಡೆಪ್ಪ ಕಾಶೆಂಪೂರ, ವ್ಯಾಪಾರಿಗಳಿಂದ ಅಹವಾಲು ಸ್ವೀಕರಿಸಿದ್ರು. ಈ ವೇಳೆ ಮಾತನಾಡಿದ ಅವರು, ಮೀಟರ್ ಬಡ್ಡಿ ದಂಧೆಕೋರರಿಂದ ವ್ಯಾಪಾರಿಗಳನ್ನ ರಕ್ಷಿಸಲು ಬಡವರ ಬಂಧು ಯೋಜನೆ ಜಾರಿಗೆ ತರಲಿದ್ದೇವೆ. ಈ ಯೋಜನೆ ಬೀದಿ ವ್ಯಾಪಾರಿಗಳಿಗೆ ಬಹಳ ಅನೂಕೂಲವಾಗಿದೆ. ಈ ಯೋಜನೆ ಬಗ್ಗೆ ವ್ಯಾಪಾರಿಗಳ ಅನಿಸಿಕೆಯನ್ನು ಪಡೆಯಲು ಬಂದಿದ್ದೇನೆ. ಕೆಲವೇ ದಿನಗಳಲ್ಲಿ ಈ ಯೋಜನೆಗೆ ಚಾಲನೆ ದೊರೆಯಲಿದೆ ಅಂತಾ ಸ್ಪಷ್ಟಪಡಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

  • ಮೀಟರ್ ಬಡ್ಡಿ ದಂಧೆಗೆ ವ್ಯಕ್ತಿ ಬಲಿ- ದೂರು ಕೊಟ್ರೂ ಆರೋಪಿಗಳ ವಿರುದ್ಧ ಕ್ರಮವಿಲ್ಲ ಅಂತ ಪತ್ನಿ ಕಣ್ಣೀರು

    ಮೀಟರ್ ಬಡ್ಡಿ ದಂಧೆಗೆ ವ್ಯಕ್ತಿ ಬಲಿ- ದೂರು ಕೊಟ್ರೂ ಆರೋಪಿಗಳ ವಿರುದ್ಧ ಕ್ರಮವಿಲ್ಲ ಅಂತ ಪತ್ನಿ ಕಣ್ಣೀರು

    ಚಾಮರಾಜನಗರ: ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆಗೆ ಹಲವು ಹೆಣಗಳು ಉರುಳಿವೆಯಾದ್ರೂ ಇನ್ನೂ ಬ್ರೇಕ್ ಬಿದ್ದಿಲ್ಲ. ಇದೀಗ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಮೀಟರ್ ಬಡ್ಡಿ ದಂಧೆಗೆ ಓರ್ವ ಬಲಿಯಾಗಿದ್ದಾನೆ.

    ಇಲ್ಲಿನ ಈದ್ಗಾ ಮೊಹಲ್ಲಾ ನಿವಾಸಿ ಅಫ್ಸರ್ ಆಲಿ ಎಂಬಾತ ಮೀಟರ್ ಬಡ್ಡಿ ದಂಧೆಕೋರರ ಕಿರುಕುಳ ತಾಳಲಾರದೇ ಜುಲೈ19 ರಂದು ಮಂಡ್ಯ ಜಿಲ್ಲೆಯಲ್ಲಿ ಹರಿಯುವ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲದೆ ಆತ್ಮಹತ್ಯೆಗೂ ಮುನ್ನ ತನ್ನ ಸಹೋದರನಿಗೆ ಕರೆ ಮಾಡಿ, ತಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದಾನೆ.

    ಇದು ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ. ಆತ್ಮಹತ್ಯೆ ಮಾಡಿಕೊಂಡ ಬಳಿಕ ಮನೆಯವರು ಅಲ್ಲಿಗೆ ಧಾವಿಸಿ ಮಂಡ್ಯ ಜಿಲ್ಲೆ ಅರಕೆರೆ ಪೊಲೀಸ್ ಠಾಣೆಯಲ್ಲಿ ಎಜಾಸ್ ಹಾಗು ಅಲ್ಲಾಭಕ್ಷ ಎಂಬ ಬಡ್ದಿ ದಂಧೆಕೋರರ ವಿರುದ್ದ ಸಾಕ್ಷಿ ಸಮೇತ ಅಂದೇ ದೂರುಕೊಟ್ಟಿದ್ದಾರೆ. ದೂರು ಕೊಟ್ಟು ಹದಿನೈದು ದಿನಕಳೆದ್ರೂ ಅರೆಕೆರೆ ಪೊಲೀಸರು ಗುಂಡ್ಲುಪೇಟೆಗೆ ಬಂದು ವಿಚಾರಣೆ ಸಹ ನಡೆಸಿಲ್ಲ. ಅಲ್ಲದೇ ಆರೋಪಿಗಳ ವಿರುದ್ಧ ಯಾವುದೇ ಕ್ರಮನೂ ಕೈಗೊಂಡಿಲ್ಲ. ಹಾಗಾಗಿ ಮೃತ ಅಫ್ಸರ್ ಆಲಿ ಪತ್ನಿ ಹಾಗೂ ಇಬ್ಬರು ಮಕ್ಕಳು ಈಗ ದಿಕ್ಕು ತೋಚದೆ ಕಣ್ಣೀರುಡುತ್ತಿದ್ದಾರೆ.

    ಏನಿದು ಮೀಟರ್ ಬಡ್ಡಿ ದಂಧೆ?: ಬಡ್ಡಿ ದಂಧೆಕೋರರು ಸಣ್ಣಪುಟ್ಟ ವ್ಯಾಪಾರಿಗಳಿಗೆ, ಕಾರ್ಮಿಕರಿಗೆ ಸಾಲ ನೀಡಿ ತಮಗಿಷ್ಟ ಬಂದ ಹಾಗೆ ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಇವರ ಬಳಿ ಸಾಲ ತೆಗೆದುಕೊಂಡರೆ 1 ಲಕ್ಷ ರೂಪಾಯಿಗೆ ವಾರಕ್ಕೆ 10ಸಾವಿರ ರೂಪಾಯಿ ಬಡ್ಡೀನೆ ಕಟ್ಟಬೇಕಂತೆ. ಅಲ್ಲಿಗೆ ತಿಂಗಳಿಗೆ 40 ಸಾವಿರ ರೂಪಾಯಿಯಂತೆ ವರ್ಷಕ್ಕೆ 4 ಲಕ್ಷದ 80 ಸಾವಿರ ರೂಪಾಯಿ ಬಡ್ಡೀನೆ ಆಗುತ್ತೆ. ವಾರಕ್ಕೊಮ್ಮೆ ಬಡ್ಡಿ ಕಟ್ಟಿಲ್ಲವೆಂದರೆ ಸಾಲಪಡೆದವರ ಮಾನಮರ್ಯಾದೆ ಎಲ್ಲ ಹರಾಜು ಹಾಕಿ ಇನ್ನಿಲ್ಲದ ಕಿರುಕುಳ ನೀಡ್ತಾರೆ.