Tag: ಮೀಚ್ ಕ್ಲೇಡನ್

  • ಬಾಲ್‍ಗೆ ಸ್ಯಾನಿಟೈಸರ್ ಹಚ್ಚಿದ ಆಸಿಸ್ ಬೌಲರ್ ಅಮಾನತು

    ಬಾಲ್‍ಗೆ ಸ್ಯಾನಿಟೈಸರ್ ಹಚ್ಚಿದ ಆಸಿಸ್ ಬೌಲರ್ ಅಮಾನತು

    ಲಂಡನ್: ಚೆಂಡಿಗೆ ಸ್ಯಾನಿಟೈಸರ್ ಹಚ್ಚಿದ್ದಕ್ಕೆ ಆಸ್ಟ್ರೇಲಿಯಾದ ಅನುಭವಿ ಕೌಂಟಿ ಕ್ರಿಕೆಟ್ ಬೌಲರ್ ಮೀಚ್ ಕ್ಲೇಡನ್ ಅವರನ್ನು ಮಾನತು ಮಾಡಲಾಗಿದೆ.

    ಕೌಂಟಿ ಕ್ರಿಕೆಟ್‍ನಲ್ಲಿ ಮೀಚ್ ಕ್ಲೇಡನ್ ಅವರು ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ ತಂಡದ ಪರವಾಗಿ ಆಡುತ್ತಾರೆ. ಕಳೆದ ತಿಂಗಳು ಮಿಡ್ಲ್‍ಸೆಕ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಮೀಚ್ ಕ್ಲೇಡನ್ ಮೂರು ವಿಕೆಟ್ ಪಡೆದಿದ್ದರು. ಈ ವೇಳೆ ಅವರು ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಾಲಿಗೆ ಹಾಕಿ ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಮೀಚ್ ಕ್ಲೇಡನ್ ಅವರು ಕಳೆದ ತಿಂಗಳು ನಡೆದ ಮಿಡ್ಲ್‍ಸೆಕ್ಸ್ ವಿರುದ್ಧ ಪಂದ್ಯದಲ್ಲಿ ಬಾಲಿಗೆ ಹ್ಯಾಂಡ್ ಸ್ಯಾನಿಟೈಸರ್ ಹಚ್ಚಿ ವಿರೂಪಗೊಳಿಸಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಹೇಳಿದೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ ತನ್ನ ವೆಬ್‍ಸೈಟಿನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

    ಕೊರೊನಾ ವೈರಸ್ ಕಾರಣದಿಂದ ಕ್ರಿಕೆಟ್ ಆಟದಲ್ಲಿ ಹಲವಾರು ಆರೋಗ್ಯಕ್ಕೆ ಸಂಬಂಧಿಸಿದ ಪ್ರೋಟೋಕಾಲ್‍ಗಳನ್ನು ಹೊರಡಿಸಲಾಗಿದೆ. ಈ ನಿಯಮದ ಪ್ರಕಾರ ಬೌಲರ್ ಬಾಲಿಗೆ ಉಗುಳನ್ನು ಹಚ್ಚುವುದನ್ನು ಬ್ಯಾನ್ ಮಾಡಲಾಗಿದೆ. ಹೀಗಿದ್ದರೂ ಬಾಲ್‍ಗೆ ಸ್ಯಾನಿಟೈಸರ್ ಹಾಕಿದ ಮೀಚ್ ಕ್ಲೇಡನ್ ಅವರನ್ನು ಅಮಾನತು ಮಾಡಲಾಗಿದೆ. ಹೀಗಾಗಿ ಸರ್ರೆ ವಿರುದ್ಧದ ಮುಂದಿನ ಬಾಬ್ ವಿಲ್ಲೀಸ್ ಟ್ರೋಫಿ ಪಂದ್ಯದಲ್ಲಿ ಕ್ಲೇಡನ್ ಅವರು ಆಡುವುದಿಲ್ಲ ಎಂದು ತಂಡ ತಿಳಿಸಿದೆ.