Tag: ಮಿಹೀಕಾ ಬಜಾಜ್

  • ಮದ್ವೆಯಲ್ಲಿ ಬಳಸಲಾದ ತಂತ್ರಜ್ಞಾನ ಸೀಕ್ರೆಟ್ ಹೇಳಿದ ರಾಣಾ

    ಮದ್ವೆಯಲ್ಲಿ ಬಳಸಲಾದ ತಂತ್ರಜ್ಞಾನ ಸೀಕ್ರೆಟ್ ಹೇಳಿದ ರಾಣಾ

    ಹೈದರಾಬಾದ್: ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ತಮ್ಮ ಬಹುಕಾಲದ ಗೆಳತಿ ಮಿಹೀಕಾ ಬಜಾಜ್ ಅವರನ್ನು ವಿವಾಹವಾಗಿರುವುದು ತಿಳಿದೇ ಇದೆ. ಆದರೆ ಲಾಕ್‍ಡೌನ್ ಸಂದರ್ಭದಲ್ಲಿ ಕೇವಲ 30 ಜನರ ಮಧ್ಯೆ ವಿವಾಹವಾಗಿರುವ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಅಲ್ಲದೆ ತಂತ್ರಜ್ಞಾನದ ಮೂಲಕ ಹೆಚ್ಚು ಜನರನ್ನು ಹೇಗೆ ಭಾಗವಹಿಸುವಂತೆ ಮಾಡಬಹುದು ಎಂಬುದನ್ನೂ ಇದೇ ವೇಳೆ ತಿಳಿಸಿದ್ದಾರೆ.

    ರಾಣಾ ದಗ್ಗುಬಾಟಿ ಆಗಸ್ಟ್ 8ರಂದು ರಾಮಾನಾಯ್ಡು ಫಿಲ್ಮ್ ಸ್ಟುಡಿಯೋದಲ್ಲಿ ಮಿಹೀಕಾ ಬಜಾಜ್ ಅವರ ಕೈ ಹಿಡಿದಿದ್ದಾರೆ. ಕೇವಲ 30 ಜನ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಆದರೆ ಬಳಿಕ ತಂತ್ರಜ್ಞಾನದ ಮೂಲಕ ಹೆಚ್ಚು ಜನರನ್ನು ತಲುಪಿದೆ. ಈ ಕುರಿತು ಸಂದರ್ಶನವೊಂದರಲ್ಲಿ ರಾಣಾ ಮನಬಿಚ್ಚಿ ಮಾತನಾಡಿದ್ದಾರೆ.

    ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಸಿನಿಮಾ ಸ್ಟುಡಿಯೋದಲ್ಲೇ ವಿವಾಹವಾಗಿದ್ದು ಅದ್ಭುತ ಐಡಿಯಾ. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಹೇಗಿದ್ದರೂ ಸಿನಿಮಾ ಚಿತ್ರೀಕರಣ ನಡೆಯುತ್ತಿರಲಿಲ್ಲ. ಹೀಗಾಗಿ ಸಾಮಾಜಿಕ ಅಂತರ ಕಾಪಾಡುವುದು, ಕಡಿಮೆ ಜನ ಭಾಗವಹಿಸುವಂತೆ ನೋಡಿಕೊಳ್ಳಲು ಸ್ಟುಡಿಯೋಗಿಂತ ಸೂಕ್ತ ಜಾಗ ಬೇರೊಂದಿಲ್ಲ ಎನಿಸಿತು. ಹೀಗಾಗಿ ಸ್ಟುಡಿಯೋದಲ್ಲೇ ವಿವಾಹ ನಡೆಸಲು ಮುಂದಾದೆವು. ನಂತರ ಎಲ್ಲರೂ ಇದನ್ನು ಅದ್ಭುತ ಐಡಿಯಾ ಎಂದು ಹೇಳಿದರು. ಅಲ್ಲದೆ ರಾಮಾನಾಯ್ಡು ಫಿಲ್ಮ್ ಸ್ಟುಡಿಯೋ ನಮ್ಮ ಮನೆಯಿಂದ ಕೇವಲ 5 ನಿಮಿಷಗಳಷ್ಟು ದೂರ. ನನ್ನ ಇಬ್ಬರೇ ಸ್ನೇಹಿತರು ವಿವಾಹದಲ್ಲಿ ಭಾಗವಹಿಸಿದ್ದರು. 30ಕ್ಕಿಂತ ಕಡಿಮೆ ಜನ ಭಾಗವಹಿಸಿದ್ದರು. ಭಾಗವಹಸಿದ ಇಬ್ಬರು ಸ್ನೇಹಿತರು ಸಹ ನನ್ನೊಂದಿಗೆ ಇದ್ದವರು ಎಂದು ಹೇಳಿದ್ದಾರೆ.

    ವಿವಾಹದಲ್ಲಿ ಬಳಸಿದ ತಂತ್ರಜ್ಞಾನದ ಕುರಿತು ಸಹ ಅವರು ಮಾತನಾಡಿದ್ದು, 30 ಜನ ಹೊರತುಪಡಿಸಿದರೆ ಉಳಿದೆಲ್ಲ ನನ್ನ ಸ್ನೇಹಿತರು ವರ್ಚುವಲ್ ರಿಯಾಲಿಟಿ(ವಿಆರ್) ಮೂಲಕ ಸಾಕ್ಷಿಯಾದರು. ನಮ್ಮ ದೊಡ್ಡ ಕುಟುಂಬ ಹಾಗೂ ಸ್ನೇಹಿತರಿಗಾಗಿ ವಿಆರ್ ಹೆಡ್ ಸೆಟ್ ಹಾಗೂ ಸಿಹಿ ತಿಂಡಿಗಳು ಹಾಗೂ ಇತರೆ ಸಾಮಗ್ರಿಗಳನ್ನು ಕಳುಹಿಸಿದ್ದೆವು ಎಂದಿದ್ದಾರೆ.

    ನನ್ನ ವಿವಾಹದ ಸಂದರ್ಭವನ್ನು ವಿಆರ್ ಮೂಲಕ ಚಿತ್ರಿಸಿದ್ದೆವು, ವಿವಾಹದಲ್ಲಿ ಭಾಗವಹಿಸಲು ಸಾಧ್ಯವಾಗದ ನನ್ನ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ವಿಆರ್ ಹೆಡ್‍ಸೆಟ್ ಕಳುಹಿಸಿದ್ದೆನು. ಈ ಮೂಲಕ ಅವರು ವಿವಾಹದ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದಾರೆ. ವಿವಾಹದ ಬಳಿಕ ವಿಆರ್ ಬಾಕ್ಸ್, ಸಿಹಿ ತಿಂಡಿ ಹಾಗೂ ಇತರೆ ಸಾಮಗ್ರಿಗಳನ್ನು ಕಳುಹಿಸಿದ್ದೆವು. ಈ ಮೂಲಕ ಅವರು ನೈಜವಾಗಿ ಕಣ್ತುಂಬಿಕೊಂಡ ಅನುಭವವನ್ನು ನಿಡಲಾಗಿದೆ. ಇದರಿಂದಾಗಿ ಅವರು ನಮ್ಮ ವಿವಾಹದಲ್ಲಿ ನೈಜವಾಗಿ ಭಾಗವಹಿಸಿದ ಅನುಭವವಾಗಿದೆ ಎಂದು ಹೇಳಿದ್ದಾರೆ.

    ಈ ಹಿಂದೆ ವರ್ಚುವಲ್ ರಿಯಾಲಿಟಿ ವೀಕ್ಷಿಸಿದ್ದ ಟಾಲಿವುಡ್ ನಟ ನಾಣಿ ಟ್ವಿಟ್ಟರ್ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದರು. ವಿಆರ್ ಹೆಡ್‍ಸೆಟ್ ಹಾಕಿರುವ ಫೋಟೋ ಟ್ವೀಟ್ ಮಾಡಿ ಸಾಲುಗಳನ್ನು ಬರೆದಿದ್ದರು. ರಾಣಾ ದಗ್ಗುಬಾಟಿಯವರ ಬ್ಯಾಚುಲರ್ ಲೈಫ್ ಅಂತ್ಯವಾಗುವುದನ್ನು ವೀಕ್ಷಿಸುತ್ತಿದ್ದೇನೆ. ಅಭಿನಂದನೆಗಳು ಬಾಬೈ, ಏನಿದು ತಂತ್ರಜ್ಞಾನ ಎಂದು ಬರೆದುಕೊಂಡಿದ್ದರು.

    ಆಗಸ್ಟ್ 8ರಂದು ಲಾಕ್‍ಡೌನ್ ವೇಳೆ ನಡೆದ ರಾಣಾ ದಗ್ಗುಬಾಟಿ ಹಾಗೂ ಮಿಹೀಕಾ ಬಜಾಜ್ ಅವರ ವಿವಾಹದಲ್ಲಿ ನಾಗಚೈತನ್ಯ, ಪತ್ನಿ ಸಮಂತಾ, ಅಲ್ಲು ಅರ್ಜುನ್, ರಾಮ್ ಚರಣ್, ಉಪಾಸನಾ ಕಮಿನೇನಿ ಹಾಗೂ ಇತರ ಕೆಲ ನಟ, ನಟಿಯರು ಮಾತ್ರ ಭಾವಹಿಸಿದ್ದರು.

  • ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಬಲ್ಲಾಳ ದೇವ

    ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಬಲ್ಲಾಳ ದೇವ

    ಹೈದರಾಬಾದ್: ಬಾಹುಬಲಿ ಸಿನಿಮಾ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಪ್ರೇಯಸಿ ಮಿಹೀಕಾ ಬಜಾಜ್ ಕೊರಳಿಗೆ ಮೂರು ಗಂಟೆ ಹಾಕುವ ಮೂಲಕ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ರಾಣಾ ಮತ್ತು ಮಿಹಿಕಾ ಮದುವೆಯ ಕೆಲ ಫೋಟೋಗಳು ರಿವೀಲ್ ಆಗಿದ್ದು, ನವಜೋಡಿ ಕಲರ್ ಫುಲ್ ಡ್ರೆಸ್‍ನಲ್ಲಿ ಕಂಗೊಳಿಸುತ್ತಿದ್ದಾರೆ. ಮದುವೆಯಲ್ಲಿ ನಾಗಚೈತನ್ಯ, ಸಮಂತಾ ಅಕ್ಕಿನೇನಿ ಮತ್ತು ಅಲ್ಲು ಅರ್ಜುನ್ ಸೇರಿದಂತೆ ಎರಡು ಕುಟುಂಬದ ಆಪ್ತರು ಮಾತ್ರ ಭಾಗಿಯಾಗಿದ್ದಾರೆ.

    https://www.instagram.com/p/CDjIfhRDSMc/

    ರಾಣಾ ಮತ್ತು ಮಿಹೀಕಾ ಮೇನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿಯ ವಿಷಯವನ್ನು ರಿವೀಲ್ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಕ್ಯೂಟ್ ಜೋಡಿಯ ಅರಿಶಿನ ಮತ್ತು ಮೆಹಂದಿ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಜೋಡಿಗೆ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳ ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

    https://www.instagram.com/p/CDnPxaDjIvV/

  • ‘ಇದು ಮದುವೆಯ ಸಮಯ’ – ಪ್ರೇಯಸಿ ಮಿಹೀಕಾ ಬಗ್ಗೆ ರಾಣಾ ಮೆಚ್ಚುಗೆಯ ಮಾತು

    ‘ಇದು ಮದುವೆಯ ಸಮಯ’ – ಪ್ರೇಯಸಿ ಮಿಹೀಕಾ ಬಗ್ಗೆ ರಾಣಾ ಮೆಚ್ಚುಗೆಯ ಮಾತು

    – ಮಿಹೀಕಾ ನನ್ನ ಮನೆಯಿಂದ 3 ಕಿ.ಮೀ ದೂರದಲ್ಲಿದ್ದಾರೆ

    ಹೈದರಾಬಾದ್: ಬಾಹುಬಲಿ ಖ್ಯಾತಿಯ ರಾಜ ಬಲ್ಲಾಳದೇವ ರಾಣಾ ದಗ್ಗುಬಾಟಿಯವರು ಮುಂದಿನ ತಿಂಗಳು ತಮ್ಮ ಪ್ರೇಯಸಿ ಮಿಹೀಕಾ ಬಜಾಜ್ ಅವರ ಜೊತೆ ಮದುವೆಯಾಗಲಿದ್ದಾರೆ.

    ಕಳೆದ ಮೇ ತಿಂಗಳಿನಲ್ಲಿ ತಾನು ಪ್ರೀತಿ ಬಲೆಯಲ್ಲಿ ಸಿಲುಕಿದ್ದೇನೆ ಎಂದು ಟ್ವೀಟ್ ಮಾಡಿದ್ದ ರಾಣಾ, ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗುವುದಾಗಿ ತಿಳಿಸಿದ್ದರು. ಅದರಂತೆ ಲಾಕ್‍ಡೌನ್ ನಡುವೆ ಆಗಸ್ಟ್ 8ರಂದು ರಾಣಾ ಮತ್ತು ಮಿಹೀಕಾ ಅವರ ಮದುವೆಯನ್ನು ಕುಟುಂಬದವರು ಫಿಕ್ಸ್ ಮಾಡಿದ್ದರು. ಆದರೆ ಈ ಕೊರೊನಾ ಆರ್ಭಟದ ನಡುವೆಯೂ ತಾನು ಪ್ರೀತಿಸಿದ ಮಿಹೀಕಾ ಬಜಾಜ್ ಅವರನ್ನು ನಿಶ್ಚಯ ಮಾಡಿಕೊಂಡ ದಿನ ಮದುವೆಯಾಗಲು ರಾಣಾ ನಿರ್ಧರಿಸಿದ್ದಾರೆ.

    ಈಗ ಪ್ರೇಯಸಿಯ ಬಗ್ಗೆ ಮಾತನಾಡಿರುವ ಬಲ್ಲಾಳದೇವ, ನನಗೆ ಇದು ಮದುವೆಯ ಸಮಯ ಎನಿಸುತ್ತದೆ. ಮಿಹೀಕಾ ಕೂಡ ನಮ್ಮ ಮನೆಯ ಆಸು-ಪಾಸಿನಲ್ಲೇ ಇದ್ದಾರೆ. ಅವರ ಮನೆಗೆ ನಮ್ಮ ಮನೆಯಿಂದ ಕೇವಲ ಮೂರು ಕಿಮೀ ಆಗುತ್ತದೆ. ಆಕೆ ಬಹಳ ಒಳ್ಳೆಯವಳು, ನಾವಿಬ್ಬರೂ ಒಳ್ಳೆ ಜೋಡಿ ಎಂದು ನಾನು ಭಾವಿಸುತ್ತೇನೆ. ನಮಗೆ ನಮ್ಮ ಮದುವೆಯ ಬಗ್ಗೆ ಪಾಸಿಟಿವ್ ಯೋಚನೆಗಳು ಇದೆ. ನಾವು ಆಗಸ್ಟ್ 8ರಂದು ಮದುವೆಯಾಗುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾರು ಈ ಮಿಹೀಕಾ ಬಜಾಜ್?

    ನಾನೂ ಕಳೆದ ಕೆಲ ತಿಂಗಳುಗಳಿಂದ ಆಕೆಯ ಜೊತೆಯೇ ಇದ್ದೇನೆ. ಈಗ ಇರುವ ಹಾಗೇ ಮುಂದೆಯೂ ಖುಷಿಯಾಗಿ ಇರುತ್ತೇವೆ ಎಂಬ ನಂಬಿಕೆ ನನಗೆ ಇದೆ. ಆಕೆ ಒಳ್ಳೆಯ ಮನಸ್ಸು ಇರುವ ಹುಡುಗಿ. ಕೊರೊನಾ ಲಾಕ್‍ಡೌನ್ ನಂತರ ಮದುವೆಯಾಗಲು ತೀರ್ಮಾನ ಮಾಡಿದ್ದೇವೆ. ಅದರಂತೆ ಮದುವೆಯಾಗುತ್ತಿದ್ದೇವೆ ಎಂದು ರಾಣಾ ದಗ್ಗುಬಾಟಿ ಅವರು ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ತಾನು ಪ್ರೀತಿಸುತ್ತಿರುವುದಾಗಿ ಕಳೆದ ಮೇ 12ರಂದು ಹೇಳಿಕೊಂಡಿದ್ದ ರಾಣಾ, ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ವೊಂದನ್ನು ಹಾಕಿಕೊಂಡಿದ್ದರು. ಅವಳು ಓಕೆ ಎಂದಳು ಎಂದು ಬರೆದು ಮಿಹೀಕಾ ಅವರನ್ನು ಟ್ಯಾಗ್ ಮಾಡಿದ್ದರು. ಜೊತೆಗೆ ಮಿಹೀಕಾ ಜೊತೆಗೆ ತೆಗೆದುಕೊಂಡ ಸೆಲ್ಫಿಯನ್ನು ಕೂಡ ಪೋಸ್ಟ್ ಮಾಡಿದ್ದರು. ಇದಾದ ನಂತರ ಮೇ 21ರಂದು ರಾಣಾ ಮಿಹೀಕಾ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು.

  • 2020ರ ಅದ್ಭುತ ಸುದ್ದಿಗೆ ಸಾಕ್ಷಿಯಾದ ನಾಗಚೈತನ್ಯ, ಸಮಂತಾ

    2020ರ ಅದ್ಭುತ ಸುದ್ದಿಗೆ ಸಾಕ್ಷಿಯಾದ ನಾಗಚೈತನ್ಯ, ಸಮಂತಾ

    ಹೈದರಾಬಾದ್: ಇತ್ತೀಚೆಗಷ್ಟೇ ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗೂಬಾಟಿ ಹಾಗೂ ಮಿಹೀಕಾ ಬಜಾಜ್ ಒಟ್ಟಿಗೆ ಕಾಣಿಸಿಕೊಂಡು ಸಖತ್ ಸುದ್ದಿಯಾಗಿದ್ದರು. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ತಾವು ಎಂಗೇಜ್ ಆಗಿರುವ ಕುರಿತು ಸುಳಿವು ನೀಡಿದ್ದರು. ಇದೀಗ ಮತ್ತೊಂದು ಸಂತಸದ ಸುದ್ದಿಯನ್ನು ತಿಳಿಸಿದ್ದು, ಇದರಲ್ಲಿ ಸಮಂತಾ ದಂಪತಿ ಸಹ ಭಾಗಿಯಾಗಿದ್ದಾರೆ.

     

    View this post on Instagram

     

    And it’s official!! ????????????????

    A post shared by Rana Daggubati (@ranadaggubati) on

    ಹೌದು ಇತ್ತೀಚೆಗಷ್ಟೇ ರಾಣಾ ಹಾಗೂ ಮಿಹೀಮಾ ಒಟ್ಟಿಗಿರುವ ಫೋಟೋವನ್ನು ಹಾಕಿ ತಮ್ಮ ಪ್ರೀತಿ ಕುರಿತು ಬಹಿರಂಗಪಡಿಸಿದ್ದರು. ಇದೀಗ ಈ ಜೋಡಿ ಅಧಿಕೃತವಾಗಿ ಎಂಗೇಜ್‍ಮೆಂಟ್ ಮಾಡಿಕೊಂಡಿದೆ. ಹೌದು ಪುಟ್ಟದಾಗಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದು ಸಿಂಪಲ್ ಆಗಿ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ.

    ಈ ಸಂಭ್ರಮದ ಕ್ಷಣದಲ್ಲಿ ಟಾಲಿವುಡ್ ಬೆಡಗಿ ಸಮಂತಾ ಹಾಗೂ ಅವರ ಪತಿ, ನಟ ನಾಗಚೈತನ್ಯ ಸಹ ಭಾಗಿಯಾಗಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಇದು 2020ರ ಅದ್ಭುತ ಸುದ್ದಿ’ ಎಂದು ಸಮಂತಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ತಮ್ಮ ಭಾವನಿಗೆ ವಿಶ್ ಮಾಡಿದ್ದಾರೆ. ಅಲ್ಲದೆ ಇದರಲ್ಲಿ ರಾಣಾ ಅವರ ಸಹೋದರ ಅಭಿರಾಮ್, ಸೋದರಸಂಬಂಧಿ ಅರ್ಜುನ್ ಹಾಗೂ ಮಿಹೀಕಾ ಕುಟುಂಬದ ದಂಪತಿ ಭಾಗವಹಿಸಿದ್ದಾರೆ.

     

    View this post on Instagram

     

    My happy place! ???????? @ranadaggubati

    A post shared by miheeka (@miheeka) on

    ಸಮಂತಾ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ, ನಮ್ಮನ್ನು ಕರೆ ತಂದಿದ್ದಕ್ಕೆ ಧನ್ಯವಾದ, ಇದು 2020ರ ಉತ್ತಮ ಸುದ್ದಿಯಾಗಿದೆ. ರಾಣಾ ದಗ್ಗೂಬಾಟಿ ಮತ್ತು ಮಿಹೀಕಾ ಬಜಾಜ್…. ಇನ್ನು ಎಂದೆಂದಿಗೂ ನಿಮ್ಮ ಸಂತೋಷ ಇಲ್ಲೇ ಇರಲಿದೆ ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ಮಿಹೀಕಾ ಬಜಾಜ್ ಇಂಟಿರಿಯರ್ ಡಿಸೈನರ್ ಆಗಿದ್ದು, ರಾಣಾ ಟಾಲಿವುಡ್‍ನ ಬೇಡಿಕೆಯ ನಟ. ಇದೀಗ ಇಬ್ಬರೂ ಎಂಗೇಜ್ ಆಗಿದ್ದಾರೆ. ಎಂಗೇಜ್‍ಮೆಂಟ್ ಫೋಟೋಗಳನ್ನು ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಾಂಸ್ಕøತಿಕ ಉಡುಗೆಯಲ್ಲಿ ಮಿಂಚಿದ್ದಾರೆ. ರಾಣಾ ಅವರು ತಮ್ಮ ಫೋಟೋಗೆ ‘ಆ್ಯಂಡ್ ಇಟ್ಸ್ ಅಫೀಶಿಯಲ್’ ಎಂದು ಬರೆದುಕೊಂಡಿದ್ದಾರೆ. ಮಿಹೀಕಾ ತಮ್ಮ ಫೋಟೋಗೆ ಟು ದಿ ಬಿಗಿನಿಂಗ್ ಆಫ್ ಫಾರೆವರ್ ಎಂದು, ಇನ್ನೊಂದು ಫೋಟೋಗೆ ಮೈ ಹ್ಯಾಪಿ ಪ್ಲೇಸ್ ಎಂದು ಬರೆದುಕೊಂಡಿದ್ದಾರೆ.

    ಮಿಹೀಕಾ ಬಜಾಜ್ ಹೈದರಾಬಾದ್‍ನಲ್ಲಿ ಇವೆಂಟ್ ಮ್ಯಾನೇಜ್ ಕಂಪನಿ ನಡೆಸುತ್ತಿದ್ದು, ಇವರು ಲಂಡನ್‍ನ ಚೆಲ್ಸಿಯಾ ವಿಶ್ವವಿದ್ಯಾಲಯದಲ್ಲಿ ಇಂಟಿರಿಯರ್ ಡಿಸೈನಿಂಗ್ ಓದಿದ್ದಾರೆ. ಇದೀಗ ಹೈದರಾಬಾದ್‍ನಲ್ಲೇ ಕಂಪನಿ ನಡೆಸುತ್ತಿದ್ದಾರೆ.

  • ಮಿಹೀಕಾ ಜೊತೆ ರಾಜ ಬಲ್ಲಾಳದೇವನ ನಿಶ್ಚಿತಾರ್ಥ – ಫೋಟೋ ವೈರಲ್

    ಮಿಹೀಕಾ ಜೊತೆ ರಾಜ ಬಲ್ಲಾಳದೇವನ ನಿಶ್ಚಿತಾರ್ಥ – ಫೋಟೋ ವೈರಲ್

    ಚೆನ್ನೈ: ನಟ ರಾಣಾ ದಗ್ಗುಬಾಟಿಯವರು ತಾನು ಪ್ರೀತಿಸಿದ ಉದ್ಯಮಿ ಮಿಹೀಕಾ ಬಜಾಜ್ ಅವರ ಜೊತೆ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

    ಇತ್ತೀಚೆಗಷ್ಟೇ ತನ್ನ ಫ್ಯಾನ್ಸ್ ಗಳಿಗೆ ಸಪ್ರ್ರೈಸ್ ನೀಡಿದ್ದ ರಾಣಾ ತಾನು ಮಿಹೀಕಾ ಅವರ ಪ್ರೀತಿಯ ಬಲೆಯಲ್ಲಿ ಸಿಲುಕಿರುವುದಾಗಿ ಅವರೇ ಹೇಳಿಕೊಂಡಿದ್ದರು. ಅಂತಯೇ ಪ್ರೀತಿಯ ಬಗ್ಗೆ ತಿಳಿಸಿದ ಒಂದೇ ವಾರದಲ್ಲಿ ರಾಣಾ ಮಿಹೀಕಾ ಅವರ ಜೊತೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಇದನ್ನು ಸ್ವತಃ ಅವರೇ ಇನಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ತಿಳಿಸಿದ್ದಾರೆ.

    ಈ ವಿಚಾರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ರಾಣಾ, ಈಗ ಇದು ಅಧಿಕೃತವಾಗಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಿಹೀಕಾ ಜೊತೆಯಲ್ಲಿ ನಿಶ್ಚಿತಾರ್ಥದಲ್ಲಿ ತೆಗೆದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಿಹೀಕಾ ಕಿತ್ತಲೆ ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದರೆ, ರಾಣಾ ಬಿಳಿ ಬಣ್ಣದ ಪಂಚೆ ಮತ್ತು ಶರ್ಟ್ ತೊಟ್ಟು ಪೋಸ್ ನೀಡಿದ್ದಾರೆ.

    https://www.instagram.com/p/CAcGYxRjRzk/

    ತಾನು ಪ್ರೀತಿಸುತ್ತಿರುವುದಾಗಿ ಇದೇ ತಿಂಗಳ 12ರಂದು ಹೇಳಿಕೊಂಡಿದ್ದ ರಾಣಾ, ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ವೊಂದನ್ನು ಹಾಕಿಕೊಂಡಿದ್ದರು. ಅವಳು ಓಕೆ ಎಂದಳು ಎಂದು ಬರೆದು ಮಿಹೀಕಾ ಅವರನ್ನು ಟ್ಯಾಗ್ ಮಾಡಿದ್ದರು. ಜೊತೆಗೆ ಮಿಹೀಕಾ ಜೊತೆಗೆ ತೆಗೆದುಕೊಂಡ ಸೆಲ್ಫಿಯನ್ನು ಕೂಡ ಪೋಸ್ಟ್ ಮಾಡಿದ್ದರು. ಆದರೆ ಕೂಡಲೇ ಕೆಲ ಅಭಿಮಾನಿಗಳು ರಾಣಾ ದಗ್ಗುಬಾಟಿ ಅವರೇ ಮಿಹೀಕಾ ಅವರಿಗೇ ಪ್ರಪೋಸ್ ಮಾಡಿದ್ದು, ಅವರು ಓಕೆ ಎಂದಿದ್ದಾರೆ ಅದಕ್ಕೆ ಈ ರೀತಿ ಪೋಸ್ಟ್ ಹಾಕಿದ್ದಾರೆ ಎಂದು ಹೇಳಿದ್ದರು.

    ರಾಣಾ ದುಗ್ಗುಬಾಟಿಯವರ ಪ್ರೇಯಸಿ ಮಿಹೀಕಾ ಅವರು ಹೈದರಾಬಾದ್ ಮೂಲದವರು. ಮಿಹೀಕಾ ಚೆಲ್ಸಿಯಾ ವಿಶ್ವವಿದ್ಯಾಲಯದಲ್ಲಿ ಇಂಟೀರಿಯರ್ ಡಿಸೈನಿಂಗ್ ಅಧ್ಯಯನ ಮಾಡಿದ್ದು, ಉದ್ಯಮಿ ಸಮರ್ಥ್ ಬಜಾಜ್ ಅವರ ಸಹೋದರಿಯಾಗಿದ್ದಾರೆ. ಜೊತೆಗೆ ಮಾಡೆಲಿಂಗ್ ಮಾಡಿಕೊಂಡು ಅವರ ತಾಯಿ ಬಂಟಿ ಬಜಾಜ್ ಅವರ ಉದ್ಯಮವನ್ನು ನೋಡಿಕೊಳ್ಳುತ್ತಾರೆ. ಮುಂಬೈನಲ್ಲೇ ಹೆಚ್ಚು ಇರುವ ಮಿಹೀಕಾ ಮತ್ತು ರಾಣಾ ಒಬ್ಬರನ್ನೊಬ್ಬರು ಇಷ್ಟ ಪಟ್ಟಿದ್ದರು.

    https://www.instagram.com/p/CAFfh1tDzoW/

    ಬಾಲಿವುಡ್ ಮಂದಿಯ ಜೊತೆಗೆ ಒಡನಾಟ ಇಟ್ಟಿಕೊಂಡಿರುವ ಮಿಹೀಕಾ ಅಲ್ಲಿ ಎಲ್ಲರಿಗೂ ಪರಿಚಿತರು, ಅದಕ್ಕೆ ರಾಣಾ ಮಿಹೀಕಾ ಪ್ರೀತಿ ವಿಚಾರ ತಿಳಿಯುತ್ತದ್ದಂತೆ, ಬಾಲಿವುಡ್ ತಾರೆಯರಾದ ಅನಿಲ್ ಕಪೂರ್ ನಟಿ ತಮನ್ನಾ ಭಾಟಿಯಾ, ಶೃತಿ ಹಾಸನ್, ಕೃತಿ ಕರಬಂಧ, ಸಮಂತಾ, ನಟ ಪುಲ್ಕಿತ್ ಸಮ್ರಾಟ್ ಜೊತೆಗೆ ಕನ್ನಡತಿ ಅನುಷ್ಕಾ ಶೆಟ್ಟಿ ಅವರು ಕೂಡ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದರು.

  • ಉದ್ಯಮಿಯ ಪ್ರೀತಿ ಬಲೆಯಲ್ಲಿ ರಾಜ ಬಲ್ಲಾಳದೇವ- ಯಾರು ಈ ಮಿಹೀಕಾ?

    ಉದ್ಯಮಿಯ ಪ್ರೀತಿ ಬಲೆಯಲ್ಲಿ ರಾಜ ಬಲ್ಲಾಳದೇವ- ಯಾರು ಈ ಮಿಹೀಕಾ?

    – ಸಹೋದರನ ಪ್ರೀತಿಗೆ ಕನ್ನಡತಿಯಿಂದ ವಿಶ್

    ಹೈದರಾಬಾದ್: ಬಾಹುಬಲಿ ಚಿತ್ರದ ಬಲ್ಲಾಳದೇವ ಖ್ಯಾತಿಯ ನಟ ರಾಣಾ ದಗ್ಗುಬಾಟಿಯವರು ಮಾಡೆಲ್ ಕಮ್ ಉದ್ಯಮಿಯೊಬ್ಬರ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ.

    ನಟ ರಾಣಾ ದಗ್ಗುಬಾಟಿಯವರ ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳದೇವನ ಪಾತ್ರ ಮಾಡಿ ಜನಮೆಚ್ಚುಗೆ ಪಡೆದವರು. ಈಗ ರಾಣಾ, ತಾನು ಪ್ರೀತಿಯಲ್ಲಿ ಸಿಲುಕಿರುವ ಬಗ್ಗೆ ಸ್ವತಃ ತಾವೇ ಇನ್‍ಸ್ಟಾಗ್ರಾಮ್ ಪೋಸ್ಟ್ ಹಾಕುವ ಮೂಲಕ ಖಚಿತಪಡಿಸಿದ್ದಾರೆ. ಹೌದು ಹೈದರಾಬಾದ್ ಮೂಲದ ಉದ್ಯಮಿ ಮಿಹೀಕಾ ಬಜಾಜ್ ಅವರ ಜೊತೆ ರಾಣಾ ಅವರಿಗೆ ಪ್ರೇಮಕುಂರವಾಗಿದೆ.

     

    View this post on Instagram

     

    And she said Yes 🙂 ❤️#MiheekaBajaj

    A post shared by Rana Daggubati (@ranadaggubati) on

    ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್‍ವೊಂದನ್ನು ಹಾಕಿರುವ ರಾಣಾ, ಅವಳು ಓಕೆ ಎಂದಳು ಎಂದು ಬರೆದು ಮಿಹೀಕಾ ಅವರನ್ನು ಟ್ಯಾಗ್ ಮಾಡಿದ್ದಾರೆ. ಜೊತೆಗೆ ಅವರ ಜೊತೆಗೆ ತೆಗೆದುಕೊಂಡ ಸೆಲ್ಫಿಯನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಆದರೆ ಕೂಡಲೇ ಕೆಲ ಅಭಿಮಾನಿಗಳು ರಾಣಾ ದಗ್ಗುಬಾಟಿ ಅವರೇ ಮಿಹೀಕಾ ಅವರಿಗೇ ಪ್ರಪೋಸ್ ಮಾಡಿದ್ದು, ಅವರು ಓಕೆ ಎಂದಿದ್ದಾರೆ ಅದಕ್ಕೆ ಈ ರೀತಿ ಪೋಸ್ಟ್ ಹಾಕಿದ್ದಾರೆ ಎಂದು ಹೇಳಿದ್ದಾರೆ.

    https://www.instagram.com/p/B_jTGAWJbm5/?utm_source=ig_embed

    ಯಾರು ಈ ಮಿಹೀಕಾ?
    ರಾಣಾ ದುಗ್ಗುಬಾಟಿಯವರ ಪ್ರೇಯಸಿ ಮಿಹೀಕಾ ಅವರು ಹೈದರಾಬಾದ್ ಮೂಲದವರು. ಮಾಡೆಲಿಂಗ್ ಮಾಡಿಕೊಂಡು ಜೊತೆಗೆ ಅವರ ತಾಯಿ ಬಂಟಿ ಬಜಾಜ್ ಅವರ ಉದ್ಯಮವನ್ನು ನೋಡಿಕೊಳ್ಳುತ್ತಾರೆ. ಜೊತೆಗೆ ಒಂದು ಈವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದಾರೆ. ಇವರ ಮೂಲ ಹೈದರಬಾದ್ ಅದರೂ ಅವರು ಹೆಚ್ಚಾಗಿ ಇರುವುದು ಮುಂಬೈನಲ್ಲಿ. ಮಿಹೀಕಾ ಚೆಲ್ಸಿಯಾ ವಿಶ್ವವಿದ್ಯಾಲಯದಲ್ಲಿ ಇಂಟೀರಿಯರ್ ಡಿಸೈನಿಂಗ್ ಅಧ್ಯಯನ ಮಾಡಿದ್ದು, ಉದ್ಯಮಿ ಸಮರ್ತ್ ಬಜಾಜ್ ಅವರ ಸಹೋದರಿಯಾಗಿದ್ದಾರೆ.

    https://www.instagram.com/p/BikgFSAFgTr/?utm_source=ig_embed

    ಮಿಹೀಕಾ ಹೆಚ್ಚಾಗಿ ಮುಂಬೈನಲ್ಲಿ ಒಡನಾಟ ಹೊಂದಿರುವ ಕಾರಣ ಬಾಲಿವುಡ್ ಮಂದಿಯ ಜೊತೆಗೆ ಗುರುತಿಸಿಕೊಂಡಿದ್ದರು. ಬಾಲಿವುಡ್ ಬೆಡಗಿ ಸೋನಮ್ ಕಪೂರ್ ಅವರ ಗೆಳತಿಯಗಿರುವ ಮಿಹೀಕಾ ಕೆಲ ಪಾರ್ಟಿ ಹಾಗೂ ಮದುವೆಗಳಲ್ಲಿ ಅವರ ಜೊತೆ ಕಾಣಿಸಿಕೊಂಡಿದ್ದರು. ಹೀಗಾಗಿ ಇವರ ಪ್ರೀತಿಗೆ ಬಾಲಿವುಡ್ ಮಂದಿ ಕೂಡ ವಿಶ್ ಮಾಡಿದ್ದು, ನಟ ಅನಿಲ್ ಕಪೂರ್, ನನ್ನ ಹೈದರಾಬಾದ್ ಮಗನಿಗೆ ಶುಭಾಶಯಗಳು. ನೀವು ಪ್ರೀತಿ ಮಾಡುತ್ತಿರುವುದು ನನಗೆ ಖುಷಿಯಿದೆ ಎಂದಿದ್ದಾರೆ.

    https://www.instagram.com/p/CAFoFzHjJnI/

    ಪ್ರೀತಿಯ ಸಹೋದರನಿಗೆ ಕನ್ನಡತಿ ವಿಶ್
    ರಾಜ ಬಲ್ಲಾಳದೇವನ ಪ್ರೀತಿಗೆ ರಾಣಿ ದೇವಸೇನಾ ಕೂಡ ವಿಶ್ ಮಾಡಿದ್ದು, ಶುಭಾಶಯಗಳು ಸಹೋದರ ಹಾಗೂ ಮಿಹೀಕಾ ಬಜಾಜ್, ನಿಮಗಿಬ್ಬರಿಗೂ ಒಳ್ಳೆಯದಾಗಲಿ. ನಮ್ಮೆಲ್ಲರ ಪ್ರೀತಿ ಸದಾ ನಿಮ್ಮ ಮೇಲೆ ಇರುತ್ತದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನಟಿ ತಮನ್ನಾ ಭಾಟಿಯಾ, ಶೃತಿ ಹಾಸನ್, ಕೃತಿ ಕರಬಂಧ, ಸಮಂತಾ, ನಟ ಪುಲ್ಕಿತ್ ಸಮ್ರಾಟ್ ಅವರು ಕೂಡ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ.

    ತಮ್ಮ ವೈಯಕ್ತಿಕ ಜೀವನವನ್ನು ಮೀಡಿಯಾದಿಂದ ದೂರ ಇಟ್ಟಿದ್ದ ರಾಣಾ ಹೆಸರು ಈ ಹಿಂದೆ ನಟಿ ತ್ರಿಶಾ ಅವರ ಜೊತೆ ಕೇಳಿ ಬಂದಿತ್ತು. ಈ ವಿಚಾರವಾಗಿ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ್ದ ರಾಣಾ, ನಾನು ತ್ರಿಶಾ ಹೆಚ್ಚು ಸಮಯಗಳ ಕಾಲ ಸ್ನೇಹಿತರಾಗಿದ್ದವು. ಆದರೆ ಸ್ವಲ್ಪ ಸಮಯ ಡೇಟ್ ಮಾಡಿದ್ದೇವೆ. ಆದರೆ ಅದು ವರ್ಕ್ ಆಗಲಿಲ್ಲ ಎಂದು ಹೇಳಿದ್ದರು.