Tag: ಮಿಹಿಕಾ ಬಜಾಜ್‌

  • ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ

    ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ

    ಬಾಹುಬಲಿ (Bahubali) ನಟ ರಾಣಾ ದಗ್ಗುಭಾಟಿ (Rana Daggubati) ಪೋಷಕರಾಗುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡ್ತಿದೆ. ರಾಣಾ ಪತ್ನಿ ಮಿಹಿಕಾ ಬಜಾಜ್ (Miheeka Bajaj) ಗರ್ಭಿಣಿ (Pregnant) ಎಂಬ ಸುದ್ದಿ ವೈರಲ್ ಆಗ್ತಿದ್ದಂತೆ ಮಿಹಿಕಾ ಸ್ಪಷ್ಟನೆ ನೀಡಿದ್ದಾರೆ.

    ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ರಾಣಾ- ಮಿಹಿಕಾ ಗುರುಹಿರಿಯರ ಸಮ್ಮುಖದಲ್ಲಿ 2020ರಲ್ಲಿ ಮದುವೆಯಾದರು. ಉದ್ಯಮಿ ಮಿಹಿಕಾ ಜೊತೆ ರಾಣಾ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದರು.

    ರಾಣಾ ಪತ್ನಿ ಗರ್ಭಿಣಿ ಎನ್ನುವ ಸುದ್ದಿಗೆ ಮಿಹಿಕಾ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯಕ್ಕೆ ತಾನು ಗರ್ಭಿಣಿಯಲ್ಲ ಎಂದು ರಾಣಾ(Rana) ಪತ್ನಿ ಮಿಹಿಕಾ ಹೇಳಿದ್ದಾರೆ. ಗರ್ಭಿಣಿ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ನಿಜವಾಗಲೂ ಗರ್ಭಿಣಿಯಾಗಿದ್ರೆ ಖಂಡಿತಾ ಎಲ್ಲರಿಗೂ ಹೇಳುತ್ತೇನೆ ಎಂದು ಮಿಹಿಕಾ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಮ್ಯಾರೇಜ್ ಆ್ಯನಿವರ್ಸರಿ ದಿನ ಮೊದಲ ಬಾರಿಗೆ ಮಗನ ಮುಖ ರಿವೀಲ್‌ ಮಾಡಿದ ಸೋನಂ ಕಪೂರ್

    ಸಮಂತಾ (Samantha) ಡಿವೋರ್ಸ್ ಬಳಿಕ ರಾಣಾ- ಮಿಹಿಕಾ ಕೂಡ ಡಿವೋರ್ಸ್‌ ಪಡೆಯುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆಗ ಮಿಹಿಕಾ, ಪತಿ ಜೊತೆಗಿನ ಪೋಸ್ಟ್ ಶೇರ್ ಮಾಡಿ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ್ದರು. ಇದೀಗ ಪ್ರೆಗ್ನೆಂಟ್ ಸುದ್ದಿಗೂ ಸ್ಪಷ್ಟನೆ ನೀಡಿದ್ದಾರೆ.

  • ರಾಣಾ ದಗ್ಗುಬಾಟಿ ವೈವಾಹಿಕ ಜೀವನದಲ್ಲಿ ಬಿರುಕು?

    ರಾಣಾ ದಗ್ಗುಬಾಟಿ ವೈವಾಹಿಕ ಜೀವನದಲ್ಲಿ ಬಿರುಕು?

    ಟಾಲಿವುಡ್ ಸೂಪರ್ ಸ್ಟಾರ್ ರಾಣಾ ದಗ್ಗುಬಾಟಿ, `ಬಾಹುಬಲಿ’ ಸೂಪರ್ ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ವಿಚಾರವಾಗಿ ಸುದ್ದಿಯಾಗ್ತಿದ್ದ ರಾಣಾ ಈಗ ತಮ್ಮ ವೈಯಕ್ತಿಕ ಬದುಕಿನ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ರಾಣಾ ವೈವಾಹಿಕ ಬದುಕಲ್ಲಿ ಬಿರುಕು ಮೂಡಿದ್ಯಾ ಎಂಬ ಪ್ರಶ್ನೆ ಎದುರಾಗಿದೆ.

    ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸುತ್ತಿರುವ ರಾಣಾ ದಗ್ಗುಬಾಟಿ ತಮ್ಮ ಸಂಸಾರಿಕ ಬದುಕಿನ ವಿಚಾರವಾಗಿ ಟಿಟೌನ್‌ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಮಿಹಿಕಾ ಬಜಾಜ್ ಮತ್ತು ರಾಣಾ ಮದುವೆಯಾಗಿ ಎರಡು ವರ್ಷಗಳಾಗಿದೆ. ತಮ್ಮ ಮದುವೆ ವಾರ್ಷಿಕೋತ್ಸವದ ವೇಳೆಯಲ್ಲಿ ರಾಣಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಅಷ್ಟು ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ತಮ್ಮ ಪತ್ನಿ ಮಿಹಿಕಾ ಜತೆಗಿರುವ ಫೋಟೋ ಕೂಡ ಡಿಲೀಟ್ ಮಾಡಿದ್ದಾರೆ. ಇದನ್ನೂ ಓದಿ:ಇನ್ನೊಂದು ವೀಡಿಯೋ ಇದೆ, ಯಾವಾಗ ಬಿಡುತ್ತಾನೋ ನನಗೆ ಗೊತ್ತಿಲ್ಲ: ಸೋನು ಗೌಡ

    ತಮ್ಮ ಸಿನಿಮಾ ಪ್ರಚಾರಕ್ಕಾಗಿ ಸದಾ ಇನ್ಸ್ಟಾಗ್ರಾಂನಲ್ಲಿ ಆಕ್ಟೀವ್ ಇರುತ್ತಿದ್ದ ರಾಣಾ, ತಮ್ಮ ಅಭಿಮಾನಿಗಳ ಜತೆಗೂ ಮಾತನಾಡುತ್ತಿದ್ದರು. ಈಗ ದಿಢೀರ್ ಅಂತಾ ತಮ್ಮ ಖಾತೆಯಲ್ಲಿನ ಅಷ್ಟು ಫೋಟೋಗಳನ್ನ ಡಿಲೀಟ್ ಮಾಡಿರುವುದು ನೆಟ್ಟಿಗರ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಮಿಹಿಕಾ ಜೊತೆ ದಾಂಪತ್ಯ ಜೀವನಕ್ಕೆ ರಾಣಾ ಫುಲ್ ಸ್ಟಾಪ್ ಇಟ್ಟಿದ್ದಾರಾ. ರಾಣಾ ವೈವಾಹಿಕ ಬದುಕಲ್ಲಿ ಬಿರುಕು ಮೂಡಿದ್ಯಾ ಎಂಬ ಪ್ರಶ್ನೆಗೆ, ಸ್ವತಃ ರಾಣಾ ಉತ್ತರಿಸುವವೆರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]