Tag: ಮಿಹಿಕಾ

  • ‘ಆರ್ಟಿಕಲ್ 370’ ಚಿತ್ರದ ನಟಿಯ ಪುತ್ರಿ ಮಿಹಿಕಾ ನಿಧನ

    ‘ಆರ್ಟಿಕಲ್ 370’ ಚಿತ್ರದ ನಟಿಯ ಪುತ್ರಿ ಮಿಹಿಕಾ ನಿಧನ

    ಬಾಲಿವುಡ್‌ನ  ‘ಜಬ್ ವಿ ಮೇಟ್’, ‘ಆರ್ಟಿಕಲ್ 370’ ಸಿನಿಮಾಗಳ ನಟಿ ದಿವ್ಯಾ ಸೇಠ್ (Divya Seth) ಅವರ ಪುತ್ರಿ ಮಿಹಿಕಾ ಶಾ (Mihika Shah) 20ನೇ ವಯಸ್ಸಿಗೆ ನಿಧನರಾಗಿದ್ದಾರೆ. ಮಗಳ ಸಾವಿನ ಸುದ್ದಿಯನ್ನು ನಟಿ ದಿವ್ಯಾ ಆ.6ರಂದು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.

    ಮನೆ ಮಗಳು ಮಿಹಿಕಾಳ ನಿಧನದಿಂದ ದಿವ್ಯಾ ಸೇಠ್‌ ಕುಟುಂಬಕ್ಕೆ ಆಘಾತವಾಗಿದೆ. ಮಿಹಿಕಾ ನಿಧನಕ್ಕೆ ಚಿತ್ರರಂಗದ ಗಣ್ಯರು, ಆಪ್ತರು ಸಂತಾಪ ಸೂಚಿಸಿದ್ದಾರೆ. ಮೂಲಗಳ ಪ್ರಕಾರ, ಮಿಹಿಕಾಗೆ ಜ್ವರ ಮತ್ತು ಮೂರ್ಛೆ ರೋಗವಿತ್ತು ಎನ್ನಲಾಗಿದೆ. ಇದನ್ನೂ ಓದಿ:ನಾನು ಭೂಮಿಯ ಮೇಲಿನ ಅದೃಷ್ಟ ವ್ಯಕ್ತಿ: ವಿಕ್ರಮ್ ಭೇಟಿಯಾದ ಡಿವೈನ್ ಸ್ಟಾರ್

    ಮಿಹಿಕಾರ ಅಜ್ಜಿ ಸುಷ್ಮಾ ಸೇಠ್ ಅವರು ‘ಕಭಿ ಖುಷಿ ಕಭಿ ಗಮ್’, ಕಲ್ ಹೋ ನ ಹೋ, ನಾಗಿನಾ, ತಮಾಷಾ ಸಿನಿಮಾ ಸೇರಿದಂತೆ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.