Tag: ಮಿಸ್ ಇಂಡಿಯಾ ವರ್ಲ್ಸ್

  • ಬಾಲಿವುಡ್ ಮೂಲಕ ಸಿನಿಮಾ ರಂಗ ಪ್ರವೇಶ ಮಾಡ್ತಾರಂತೆ ಮಿಸ್ ಇಂಡಿಯಾ ವರ್ಲ್ಡ್ ಸಿನಿ ಶೆಟ್ಟಿ

    ಬಾಲಿವುಡ್ ಮೂಲಕ ಸಿನಿಮಾ ರಂಗ ಪ್ರವೇಶ ಮಾಡ್ತಾರಂತೆ ಮಿಸ್ ಇಂಡಿಯಾ ವರ್ಲ್ಡ್ ಸಿನಿ ಶೆಟ್ಟಿ

    ಮಂಗಳೂರು ಮೂಲದ ಸಿನಿ ಶೆಟ್ಟಿ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡ ನಂತರ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಡಿಮಾಂಡ್ ಕ್ರಿಯೇಟ್ ಆಗಿದೆ. ಈಗಾಗಲೇ ಹಲವು ಸಿನಿಮಾ ರಂಗಗಳಿಂದ ಆಫರ್ ಕೂಡ ಬರುತ್ತಿವೆ. ಆದರೆ, ಅವರಿಗೆ ಮಾತ್ರ ಬಾಲಿವುಡ್ ಸಿನಿಮಾ ರಂಗದಿಂದಲೇ ಬಣ್ಣದ ಪ್ರಪಂಚಕ್ಕೆ ಕಾಲಿಡುವ ಆಸೆಯಿದೆಯಂತೆ. ಹಾಗಾಗಿ ನಾನು ಸಿನಿಮಾ ರಂಗಕ್ಕೆ ಬಂದರೆ, ಬಾಲಿವುಡ್ ನಿಂದಲೇ ಪ್ರವೇಶ ಪಡೆಯುತ್ತೇನೆ ಅಂದಿದ್ದಾರೆ.

    ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಗೆದ್ದ ನಂತರ ಮಂಗಳೂರಿಗೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿನಿಮಾ ರಂಗಕ್ಕೆ ಬರುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ. ಒಂದೊಳ್ಳೆ ಪಾತ್ರಗಳು ಸಿಕ್ಕರೆ ಒಪ್ಪಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಆಫರ್ ಬಂದಿರುವ ಕುರಿತೂ ಮಾತನಾಡಿರುವ ಅವರು, ಬಾಲಿವುಡ್ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ರಂಗದಿಂದ ಕರೆಗಳು ಬರುತ್ತಿರುವುದನ್ನೂ ಅವರು ಖಚಿತ ಪಡಿಸಿದ್ದಾರೆ. ಇದನ್ನೂ ಓದಿ:ಗುಮ್ಮನ ಜೊತೆ ಬಂದ `ವಿಕ್ರಾಂತ್ ರೋಣ’ ಟೀಮ್: ಹೊಸ ಸಾಂಗ್‌ ರಿಲೀಸ್

    ಸತತ ಎರಡು ದಿನಗಳಿಂದ ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನ, ಅವರ ಪೂರ್ವಿಕರ ವಾಸಸ್ಥಳ ಮತ್ತು ತವರೂರಿಗೂ ಭೇಟಿ ನೀಡಿರುವ ಸಿನಿ ಶೆಟ್ಟಿ, ಮಂಗಳೂರಿನ ಜನರೊಂದಿಗೆ ಬೆರೆತಿದ್ದಾರೆ. ತಮಗೆ ದೊರೆತ ಅದ್ಭುತ ಸ್ವಾಗತವನ್ನು ಮತ್ತು ಸನ್ಮಾನಗಳನ್ನು ಅವರು ಎಂಜಾಯ್ ಮಾಡುತ್ತಿದ್ದಾರೆ. ಹಲವರು ಊರುಗಳಿಗೆ ಭೇಟಿ ನೀಡಿ, ತಮ್ಮ ನೆನಪುಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ದಿನಗಳ ಕಾಲ ಇಲ್ಲೇ ಉಳಿಯುವುದಾಗಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]