Tag: ಮಿಸ್ಸಿಂಗ್ ಕೇಸ್

  • 55ರ ಆಂಟಿ ಜೊತೆಗೆ ಯುವಕ ಲವ್ವಿಡವ್ವಿ; ಲವರ್‌ಗಾಗಿ ಆಕೆಯ ಗಂಡನನ್ನೇ ಕೊಂದು ಸುಟ್ಟುಹಾಕಿದ್ದ ಮೂವರು ಅರೆಸ್ಟ್‌

    55ರ ಆಂಟಿ ಜೊತೆಗೆ ಯುವಕ ಲವ್ವಿಡವ್ವಿ; ಲವರ್‌ಗಾಗಿ ಆಕೆಯ ಗಂಡನನ್ನೇ ಕೊಂದು ಸುಟ್ಟುಹಾಕಿದ್ದ ಮೂವರು ಅರೆಸ್ಟ್‌

    ಚಿಕ್ಕಮಗಳೂರು: 33ರ ಯುವಕನಿಗೆ 55ರ ಆಂಟಿ (Aunty) ಜೊತೆಗಿದ್ದ ಅಕ್ರಮ ಸಂಬಂಧದ ಹಿನ್ನೆಲೆ ಆಕೆ ಗಂಡನನ್ನ ಕೊಂದು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದ ಪ್ರೇಮಿ ಸೇರಿ ಮೂವರನ್ನ ಪೊಲೀಸರು (Chikkamagaluru Police) ಹೆಡೆಮುರಿ ಕಟ್ಟಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಂಸಾಗರ ಗೇಟ್ ಬಳಿ ನಡೆದಿದೆ.

    ಮೃತನನ್ನ ಸುಬ್ರಹ್ಮಣ್ಯ ಎಂದು ಗುರುತಿಸಲಾಗಿದೆ. ಕಳೆದೊಂದು ವಾರದ ಹಿಂದೆ ಕಡೂರು ತಾಲೂಕಿನ ಕಂಸಾಗರ ಗೇಟ್ ಬಳಿ ಅನಾಮಧೇಯ ವ್ಯಕ್ತಿಯ ಸುಟ್ಟು ಕರಕಲಾಗಿದ್ದ ದೇಹದ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ನಾಪತ್ತೆ ಪ್ರಕರಣ. ಅನಾಮಧೇಯ ವ್ಯಕ್ತಿಯ ಮೃತದೇಹದ ಪ್ರಕರಣದ ಬೆನ್ನೆತ್ತಿದ್ದ ಕಡೂರು ಪೊಲೀಸರಿಗೆ ರೋಚಕ ತಿರುವು ಸಿಕ್ಕಿತ್ತು. ಇದನ್ನೂ ಓದಿ: ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್‌ – ಮೂವರು ಪುರುಷರೊಟ್ಟಿಗೆ ದಂಪತಿ ನೋಡಿದ್ದೆ: ಸ್ಫೋಟಕ ಸಂಗತಿ ಬಿಚ್ಚಿಟ್ಟ ಗೈಡ್‌

    33ರ ಯುವಕನಿಗೆ 55ರ ಆಂಟಿ ಜೊತೆಗಿದ್ದ ಅಕ್ರಮ ಸಂಬಂಧಕ್ಕಾಗಿ ಆಕೆಯ ಪತಿಯನ್ನೇ ಯುವಕ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಹೊರಬಂದಿದೆ. ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪೆಟ್ರೋಲ್‌ನಿಂದ ಸುಟ್ಟು ತಲೆಮರೆಸಿಕೊಂಡಿದ್ದ 3 ಜನ ಆರೋಪಿಗಳು ಕಡೂರು ಪೊಲೀಸರ ಅತಿಥಿಯಾಗಿದ್ದಾರೆ. ಇದನ್ನೂ ಓದಿ: ಮೆಟ್ರೋ ಪಿಲ್ಲರ್‌ಗೆ ಬಿಎಂಟಿಸಿ ಬಸ್ ಡಿಕ್ಕಿ – ಗಾಯಗೊಂಡಿದ್ದ ಓರ್ವ ವ್ಯಕ್ತಿ ಸಾವು

    ಕಡೂರು ಪಟ್ಟಣದ ನಿವಾಸಿ ಮೀನಾಕ್ಷಮ್ಮ ಎಂಬುವರು ಠಾಣೆಗೆ ಹಾಜರಾಗಿ ತನ್ನ ಗಂಡ ಸುಬ್ರಹ್ಮಣ್ಯ ಕಾಣೆಯಾಗಿರುವುದಾಗಿ ದೂರು ನೀಡಿದ್ದರು. ಪೊಲೀಸರು ತನಿಖೆಯನ್ನ ತೀವ್ರ ಗೊಳಿಸಿದ್ದರು. ಕೊಲೆಯಾದ ವ್ಯಕ್ತಿಯ ಗುರುತು ಹಾಗೂ ಕೊಲೆ ಆರೋಪಿಗಳ ಪತ್ತೆ ಹಾಗೂ ಕಾಣೆಯಾದ ಸುಬ್ರಹ್ಮಣ್ಯರವರ ಪತ್ತೆ ಸಂಬಂಧ ಕಡೂರು ಪೊಲೀಸ್ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿಯನ್ನೊಳಗೊಂಡ 2 ಪ್ರತ್ಯೇಕ ತಂಡ ನೇಮಕ ಮಾಡಲಾಗಿತ್ತು. ಇದನ್ನೂ ಓದಿ:  ಹಾಸನ | ಹೊಳೆನರಸೀಪುರದಲ್ಲಿ ನಾಲ್ವರು ಖತರ್ನಾಕ್ ಕಳ್ಳಿಯರ ಬಂಧನ

    ಎರಡೂ ಪ್ರಕರಣಗಳ ಸಂಬಂಧ ತನಿಖೆ ವೇಳೆ ತಾಂತ್ರಿಕ ಹಾಗೂ ವಿವಿಧ ಆಯಾಮಗಳ ತನಿಖೆಯಲ್ಲಿ ಕಾಣೆ ಹಾಗೂ ಕೊಲೆಯಾದ ವ್ಯಕ್ತಿ ಒಬ್ಬನೇ ಅನ್ನೋದು ಪೊಲೀಸರಿಗೆ ಖಚಿತವಾಗಿತ್ತು. ತನಿಖೆ ಮುಂದುವರಿದು ಕಡೂರು ಪಟ್ಟಣದ ಪ್ಲೇಗಿನಮ್ಮ ದೇವಸ್ಥಾನದ ಹತ್ತಿರದ ವಾಸಿ ಪ್ರದೀಪ್ ಆಚಾರ್, ಸಿದ್ದೇಶ್ ಹಾಗೂ ವಿಶ್ವಾಸ್ ರನ್ನು ವಶಕ್ಕೆ ಪಡೆದು ಕೂಲಂಕಶವಾಗಿ ವಿಚಾರಣೆಗೊಳಪಡಿಸಿದಾಗ ಕೊಲೆಗೆ ಖಚಿತ ಕಾರಣ ತಿಳಿದು ಬಂದಿದೆ.

    ಮೊದಲನೇ ಆರೋಪಿ ಪ್ರದೀಪ್‌ಗೂ ಕೊಲೆಯಾದ ವ್ಯಕ್ತಿಯ ಹೆಂಡತಿಗೂ ಅಕ್ರಮ ಸಂಬಂಧವಿತ್ತು. ಈ ವಿಚಾರದಲ್ಲಿ ಕೊಲೆಯಾದ ವ್ಯಕ್ತಿ ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ ಎಂದು ಪ್ರದೀಪ್ ಸ್ನೇಹಿತರಿಗೆ ಹಣದ ಆಮೀಷವೊಡ್ಡಿ ಅವರ ಸಹಾಯ ಪಡೆದು ಕಂಸಾಗರ ಗೇಟ್ ಬಳಿ ಮಾರುತಿ ಓಮಿನಿ ಕಾರಿನಲ್ಲಿ ಸುಬ್ರಹ್ಮಣ್ಯ ಅವರನ್ನ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ನಂತರ ಶವವನ್ನು ಸೌದೆ ಮತ್ತು ಪೆಟ್ರೋಲ್ ಬಳಿಸಿ ಸುಟ್ಟುಹಾಕಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ. 3 ಜನ ಆರೋಪಿಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಮಾರುತಿ ಓಮಿನಿ ಕಾರನ್ನು ವಶಕ್ಕೆ ಪಡೆದಿದ್ದಾರೆ.

  • ಪತ್ನಿಯನ್ನ ಕೊಲೆಗೈದು ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದ ಭೂಪ ಅರೆಸ್ಟ್

    ಪತ್ನಿಯನ್ನ ಕೊಲೆಗೈದು ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದ ಭೂಪ ಅರೆಸ್ಟ್

    – ತಮ್ಮನಿಗೆ ಸಹಾಯ ಮಾಡಿದ್ದ ಅಣ್ಣ ಕೂಡ ಅಂದರ್

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಲೆ ಮಾಡಿ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದ ಪತಿಯನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

    ಬಳ್ಳಾರಿ ಮೂಲದ ಕಲ್ಲೇಶ್ (31) ಪತ್ನಿಯನ್ನು ಕೊಲೆಗೈದ ಪತಿ. ಕೃತ್ಯಕ್ಕೆ ಕಲ್ಲೇಶ್ ಸಹೋದರ ಕೃಷ್ಣಪ್ಪ (33) ಸಹಾಯ ಮಾಡಿದ್ದು, ಆತನನ್ನೂ ಪೊಲೀಸರು ಬಂಧಿಸಿದ್ದಾರೆ. ಶಿಲ್ಪಾ (21) ಮೃತ ದುರ್ದೈವಿ. ಇದೇ 12ರಂದು ಘಟನೆ ನಡೆದಿದ್ದು, ಸತ್ಯ ತಡವಾಗಿ ಬೆಳಕಿಗೆ ಬಂದಿದೆ.

    ಕೊತ್ತನೂರು ವ್ಯಾಪ್ತಿಯ ದುರ್ಗಾ ಲೇಔಟ್‍ನಲ್ಲಿ ಕಲ್ಲೇಶ್, ಶಿಲ್ಪಾ ದಂಪತಿ ವಾಸವಾಗಿದ್ದರು. ಕೆಲಸಕ್ಕೆ ಹೋಗಬೇಡ ಅಂತ ಕಲ್ಲೇಶ್ ಪತ್ನಿ ಶಿಲ್ಪಾಗೆ ಹೇಳಿದ್ದ. ಆದರೆ ಪತಿಯ ಮಾತನ್ನು ಕೇಳದೆ ಶಿಲ್ಪಾ ಕಂಪನಿಯೊಂದಲ್ಲಿ ಕೆಲಸಕ್ಕೆ ಸೇರಿದ್ದು, ಹಣ ಕೊಡದೆ ಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ಕೆಲಸದ ವಿಚಾರವಾಗಿ ಕಲ್ಲೇಶ್ ಹಾಗೂ ಶಿಲ್ಪಾ ಮಧ್ಯೆ ಮೂರ್ನಾಲ್ಕು ಬಾರಿ ಗಲಾಟೆ ಆಗಿತ್ತು. ಆದರೆ ಕಲ್ಲೇಶ್ ಆಗಸ್ಟ್ 12ರಂದು ಮನೆಯಲ್ಲಿ ಮಲಗಿದ್ದ ಪತ್ನಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಅಣ್ಣ ಕೃಷ್ಣಪ್ಪನಿಗೆ ಫೋನ್ ಮಾಡಿ, ಘಟನೆಯನ್ನು ತಿಳಿಸಿದ್ದ. ಇದರಿಂದ ಗಾಬರಿಗೊಂಡ ಕೃಷ್ಣಪ್ಪ ಕಲ್ಲೇಶ್‍ನ ಮನೆಗೆ ದೌಡಾಯಿಸಿದ್ದ. ಈ ವೇಳೆ ಕಲ್ಲೇಶ್ ಅಣ್ಣನ ಮನವೊಲಿಸಿ ಶಿಲ್ಪಾಳ ಮೃತ ದೇಹವನ್ನು ಬೈಕ್‍ನಲ್ಲೇ ಕೊಂಡೊಯ್ದು ನಿರ್ಜನ ಪ್ರದೇಶದಲ್ಲಿ ಮಣ್ಣು ಮಾಡಿದ್ದ.

    ಪತ್ನಿಯ ಮನೆಯವರು ತನ್ನ ಮೇಲೆ ಅನುಮಾನ ವ್ಯಕ್ತಪಡಿಸಬಾರದು ಅಂತ ಪ್ಲ್ಯಾನ್ ಮಾಡಿದ್ದ ಕಲ್ಲೇಶ್ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಶನಿವಾರ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಕಲ್ಲೇಶ್ ಮೇಲೆ ಅನುಮಾನ ವ್ಯಕ್ತವಾಗುತ್ತಿದ್ದಂತೆ ಆತನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಕಲ್ಲೇಶ್ ಸತ್ಯವನ್ನು ಬಾಯಿಬಿಟ್ಟಿದ್ದಾನೆ.