Tag: ಮಿಸ್ಸಿಂಗ್

  • ಹೀರೋ ದಿಗಂತ್ ಮಿಸ್ಸಿಂಗ್ ಎಂದು ವಿಡಿಯೋ ಹಂಚಿಕೊಂಡ ಚಿತ್ರತಂಡ

    ಹೀರೋ ದಿಗಂತ್ ಮಿಸ್ಸಿಂಗ್ ಎಂದು ವಿಡಿಯೋ ಹಂಚಿಕೊಂಡ ಚಿತ್ರತಂಡ

    ದೂದ್ ಪೇಡ ದಿಗಂತ್ (Diganth) ನಟನೆಯ ‘ಎಡಗೈ ಅಪಘಾತಕ್ಕೆ ಕಾರಣ’ (edagai Apaghatakke  Karana) ಸಿನಿಮಾದ ಡಬ್ಬಿಂಗ್ (Dubbing) ಶುರುವಾಗಿದೆ. ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ, ಕೃಷ್ಣ ಹೆಬ್ಬಾಳೆ, ಧನು ಹರ್ಷ ತಮ್ಮ ಪಾತ್ರಗಳಿಗೆ ಮಾತು ಪೊಣಿಸಿದ್ದಾರೆ. ಆದರೆ ನಾಯಕ ದಿಗಂತ್ ಫೈಲ್ ಮಿಸ್ (Missing) ಆಗಿದೆ. ಹಾಗಿದ್ರೆ ದೂದ್ ಪೇಡೆ ಎಲ್ಲಿ? ಎಂಬ ವಿಡಿಯೋ ತುಣುಕನ್ನು ಚಿತ್ರತಂಡ ರಿವೀಲ್ ಮಾಡಿದೆ.

    ಸಸ್ಪೆನ್ಸ್ ಥ್ರಿಲ್ಲರ್ ಡ್ರಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರಕ್ಕೆ ಸಮರ್ಥ್ ಬಿ ಕಡ್ಕೋಲ್ ಆಕ್ಷನ್ ಕಟ್ ಹೇಳಿದ್ದು, ಗುರುದತ್ತ ಗಾಣಿಗ ಮತ್ತು ಸಮರ್ಥ್ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ದಿಗಂತ್ ಗೆ ಜೋಡಿಯಾಗಿ ಯುವನಟಿ ಧನು ಹರ್ಷ ನಟಿಸಿದ್ದಾರೆ. ಅಭಿಮನ್ಯು ಸದಾನಂದ್ ಛಾಯಾಗ್ರಾಹಣ ಮಾಡಿದ್ದಾರೆ. ಇದನ್ನೂ ಓದಿ:‘ಸಲಾರ್’ ಅಡ್ಡಾಗೆ ಎಂಟ್ರಿ ಕೊಟ್ಟ ಕನ್ನಡದ ನಟ ಸೌರವ್ ಲೋಕಿ

    ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಚಿತ್ರಕ್ಕಿದೆ. ಈ ಸಿನಿಮಾದಲ್ಲಿ ಪ್ರತಿ ಕೆಲಸಕ್ಕೂ ಎಡಗೈ ಬಳಸುವವರ ಸಮಸ್ಯೆಗಳ ಬಗ್ಗೆಯೇ ತೋರಿಸಲಾಗಿದೆ. ಅವರು ದಿನನಿತ್ಯದ ಜೀವನದಲ್ಲಿ ಎದುರಿಸುವ ಸವಾಲುಗಳ ಕುರಿತಾಗಿಯೇ ಫೋಕಸ್ ಮಾಡಲಾಗಿದೆಯಂತೆ. ಸದ್ಯ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾದ ಡಬ್ಬಿಂಗ್ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ.

  • ಉದ್ಯೋಗಕ್ಕೆಂದು ತೆರಳಿದ್ದ ಯುವತಿ ನಾಪತ್ತೆ

    ಉದ್ಯೋಗಕ್ಕೆಂದು ತೆರಳಿದ್ದ ಯುವತಿ ನಾಪತ್ತೆ

    ಮಂಗಳೂರು: ಉದ್ಯೋಗಕ್ಕೆಂದು ತೆರಳಿದ್ದ ಯುವತಿ ಮನೆಗೆ ವಾಪಸ್ ಬರದೆ ನಾಪತ್ತೆಯಾದ ಘಟನೆ ಮಂಗಳೂರಿನ ಸುರತ್ಕಲ್‍ (Surathkal Mangaluru) ನಲ್ಲಿ ನಡೆದಿದೆ.

    ಸುರತ್ಕಲ್‍ನ 3ನೇ ಬ್ಲಾಕ್ ನಿವಾಸಿ 20 ವರ್ಷದ ಶಿವಾನಿ ನಾಪತ್ತೆಯಾದ ಯುವತಿ. ಈಕೆ ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದು, ಇಂದು ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ತೆರಳಿದ್ದ ಯುವತಿ (Young Woman) ನಾಪತ್ತೆಯಾಗಿದ್ದಾಳೆ. ಇದನ್ನೂ ಓದಿ: ಕುಡಿತದ ಚಟವಿರುವವರು ಕೆಟ್ಟವರಲ್ಲ, ಅವರ ಕುಡಿತ ಕೆಟ್ಟದ್ದು: ವೀರೇಂದ್ರ ಹೆಗ್ಗಡೆ

    ಸದ್ಯ ಯುವತಿಯ ಮೊಬೈಲ್ ಸ್ವಿಚ್ಛ್ ಆಫ್ (Mobile Switch Off) ಆಗಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂಸ್ಥೆಯ ಇತರೆ ಸಿಬ್ಬಂದಿಯಿಂದಲೂ ಯುವತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆ

    ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆ

    ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದು, ಇದೀಗ ಪೋಷಕರು ಆತಂಕಗೊಂಡಿದ್ದಾರೆ.

    ಹರ್ಷಿತಾ ಹಾಗೂ ಮರಿಟಾ ವೈಶಾಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ ಇಬ್ಬರು ವಿದ್ಯಾರ್ಥಿನಿಯರಾಗಿದ್ದಾರೆ. ಇದೀಗ ಈ ಸಂಬಂಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಪ್ರವೀಣ್ ಕುಮಾರ್‌ ನೆಟ್ಟಾರು ಹತ್ಯೆ ಪ್ರಕರಣ – 7 ಮಂದಿ SDPI ಕಾರ್ಯಕರ್ತರು ವಶಕ್ಕೆ

    ಹರ್ಷಿತಾ ಹಾಗೂ ಮರಿಟಾ ಇಬ್ಬರು ಸ್ನೇಹಿತರಾಗಿದ್ದು, ದ್ವಿತೀಯ ಪಿಯುಸಿ ಓದುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ನಾವಿನ್ನು ಮನೆಗೆ ಬರಲ್ಲ ಇನ್ನೂ ಹುಡುಕಬೇಡಿ ಎಂದು ತಿಳಿಸಿ ನಾಪತ್ತೆಯಾಗಿದ್ದಾರೆ. ವಿದ್ಯಾರ್ಥಿನಿಯರು ನಾಪತ್ತೆಯಾಗಲು ಕಾರಣವೇನು? ಇದರ ಹಿಂದೆ ಯಾರಾದರೂ ಕೈವಾಡ ಇದೆಯಾ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಗ್ರೌಂಡ್ಸ್ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಇಬ್ಬರು ವಿದ್ಯಾರ್ಥಿನಿಯರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ಸತ್ತಿಲ್ಲ-ಅಂತ್ಯಕ್ರಿಯೆಯ 10 ದಿನಗಳ ಬಳಿಕ ಪ್ರತ್ಯಕ್ಷವಾದ ಯುವತಿ

    ನಾನು ಸತ್ತಿಲ್ಲ-ಅಂತ್ಯಕ್ರಿಯೆಯ 10 ದಿನಗಳ ಬಳಿಕ ಪ್ರತ್ಯಕ್ಷವಾದ ಯುವತಿ

    -ಜೀವಂತವಾಗಿದ್ದೇನೆ, ಸತ್ತಿಲ್ಲ: ಯುವತಿ ವಿಡಿಯೋ ಸಂದೇಶ
    -ಅಂತ್ಯಕ್ರಿಯೆ ಸಲ್ಲಿಸಿದ ಶವ ಯಾರದ್ದು?

    ಪಾಟ್ನಾ: ಪೋಷಕರು ಅಂತ್ಯಕ್ರಿಯೆ ನಡೆಸಿದ 10 ದಿನಗಳ ಬಳಿಕ ಯುವತಿ ಪ್ರತ್ಯಕ್ಷವಾಗಿರುವ ವಿಚಿತ್ರ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ರಹೀಂಪುರದಲ್ಲಿ ನಡೆದಿದೆ. ಮಗಳು ಬದುಕಿರುವ ವಿಷಯ ತಿಳಿದು ಪೋಷಕರು ಖುಷಿಯಾಗಿದ್ರೆ, ಇತ್ತ ಪೊಲೀಸರಿಗೆ ಅಂತ್ಯಕ್ರಿಯೆ ನಡೆಸಿದ ಶವ ಯಾರದು ಅನ್ನೋ ಪ್ರಶ್ನೆ ಮೂಡಿದೆ.

    ಆಗಸ್ಟ್ 22ರಂದು ರಹೀಂಪುರದ ವ್ಯಕ್ತಿ ತನ್ನ ಮಗಳು ಮೇನಕಾಳನ್ನ ಅಪಹರಿಸಲಾಗಿದೆ ಎಂದು ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಸಹ ಎಫ್‍ಐಆರ್ ದಾಖಲಿಸಿಕೊಂಡು ಮೇನಕಾ ಪತ್ತೆಗೆ ಮುಂದಾಗಿದ್ದರು. ಮರುದಿನವೇ ಇದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಯುವತಿಯ ಸಹ ಶವ ಪತ್ತೆಯಾಗಿತ್ತು. ಶವ ಗುರುತು ಸಿಗದ ಸ್ಥಿತಿಯಲ್ಲಿತ್ತು.

    ಮೇನಕಾ ಶವ ಎಂದು ತಿಳಿದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಹಾಗೆ ಅತ್ಯಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು. ಪೋಷಕರು ಮಗಳ ಶವವೆಂದು ತಿಳಿದು ಅಂತಿಮ ವಿಧಿ ವಿಧಾನಗಳನ್ನು ಸಲ್ಲಿಸಿದ್ದರು.

    ಮದ್ವೆಯಾಗಿ ಬಂದ ಮೇನಕಾ: 10 ದಿನಗಳ ಬಳಿಕ ಮೇನಕಾ ತನ್ನ ಕುಟುಂಬಸ್ಥರಿಗೆ ವಿಡಿಯೋ ಸಂದೇಶ ರವಾನಿಸಿದ್ದಳು. ನಾನು ಸ್ವಇಚ್ಛೆ ಮೇರೆಗೆ ಮನೆ ಬಿಟ್ಟು ಬಂದಿದ್ದು, ಪ್ರೀತಿಸುತ್ತಿದ್ದ ಹುಡುಗನನ್ನ ಮದುವೆಯಾಗಿರುವ ವಿಷಯ ತಿಳಿಸಿದ್ದಾಳೆ. ಕುಟುಂಬಸ್ಥರಿಗೆ ಫೋನ್ ಮಾಡಿರುವ ಮೇನಕಾ, ತನ್ನ ಸಾವಿನ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾಳೆ.

    ಮಗಳ ಬದುಕಿರುವ ಸುದ್ದಿ ತಿಳಿದ ಪೋಷಕರು ಸಂತೋಷ ವ್ಯಕ್ತಪಡಿಸಿದ್ದಾರೆ. ಪತ್ತೆಯಾಗಿದ್ದ ಶವ ಮೇನಕಾಳದ್ದು ಎಂದು ತಿಳಿದ ಪೊಲೀಸರು ಗೊಂದಲದಲ್ಲಿ ಸಿಲುಕಿದ್ದಾರೆ. ಸದ್ಯ ಪೊಲೀಸರು ಶವ ದೊರೆತಿರುವ ಬಗ್ಗೆ ಹೊಸದಾಗಿ ತನಿಖೆ ಆರಂಭಿಸಿದ್ದಾರೆ.

  • ತಿಥಿ ನಡೆದು ಎರಡು ದಿನದ ನಂತ್ರ ಮನೆಗೆ ಬಂದ ವ್ಯಕ್ತಿ

    ತಿಥಿ ನಡೆದು ಎರಡು ದಿನದ ನಂತ್ರ ಮನೆಗೆ ಬಂದ ವ್ಯಕ್ತಿ

    ಹಾಸನ: ತಿಥಿ ಮಾಡಿದ ಎರಡು ದಿನದ ಬಳಿಕ ವ್ಯಕ್ತಿಯೊಬ್ಬ ಮನೆಗೆ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ ಘಟನೆ ಹಾಸನ ತಾಲ್ಲೂಕು ಶಂಖ ಗ್ರಾಮದಲ್ಲಿ ನಡೆದಿದೆ.

    ಶಿವಣ್ಣ ಎಂಬವರು ಪತ್ನಿಯೊಂದಿಗೆ ಜಗಳ ಮಾಡಿಕೊಂಡು 15 ದಿನಗಳ ಹಿಂದೆ ನಾಪತ್ತೆಯಾಗಿದ್ದರು. 15 ದಿನಗಳು ಕಳೆದರೂ ಶಿವಣ್ಣ ಮನೆಗೆ ಬರದೇ ಇರುವುದರಿಂದ ಕುಟುಂಬಸ್ಥರು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದ್ದರು.

    ಕುಟುಂಬಸ್ಥರು ಶಿವಣ್ಣನ ಮಿಸ್ಸಿಂಗ್ ಕೇಸ್ ದಾಖಲಿಸಿದ 2 ದಿನಗಳ ಬಳಿಕ ಹಾಸನದ ಹೊಸ ಬಸ್ ನಿಲ್ದಾಣ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಸಿಕ್ಕಿತ್ತು. ಈ ಮೃತದೇಹ ನೋಡಲು ಮೇಲ್ನೋಟಕ್ಕೆ ಶಿವಣ್ಣನ ರೀತಿ ಹೋಲುತ್ತಿತ್ತು. ಹಾಗಾಗಿ ಕುಟುಂಬಸ್ಥರು ಇದು ಶಿವಣ್ಣದೇ ಮೃತದೇಹ ಎಂದು ಭಾವಿಸಿದ್ದರು.

    ಕುಟುಂಬದ ಸದಸ್ಯರು ಶಿವಣ್ಣನ ಮೃತದೇಹ ಎಂದು ಮನೆಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿದ್ದರು. ಅಲ್ಲದೆ ಶವ ಸಂಸ್ಕಾರ ಮಾಡಿ ತಿಥಿ ಕೂಡ ಮಾಡಿದ್ದರು. ಆದರೆ ತಿಥಿ ಮಾಡಿದ ಎರಡು ದಿನದ ಬಳಿಕ ಶಿವಣ್ಣ ತನ್ನ ಮನೆಗೆ ಹಿಂತಿರುಗಿದ್ದಾರೆ.

    ಶಿವಣ್ಣ ದಿಢೀರ್ ಎಂದು ಮನೆಯಲ್ಲಿ ಪ್ರತ್ಯಕ್ಷ ಆಗಿರುವುದು ನೋಡಿ ಜನರಲ್ಲಿ ಅಚ್ಚರಿ ಮೂಡಿದೆ. ಶಿವಣ್ಣ ಬದುಕಿದ್ದಾರೆ ಎಂಬ ವಿಷಯ ತಿಳಿದು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಈಗ ಅಂತ್ಯಸಂಸ್ಕಾರ ನಡೆಸಿದ ದೇಹ ಯಾರದ್ದು ಎನ್ನುವ ಪ್ರಶ್ನೆ ಎದ್ದಿದೆ.

  • 4 ವರ್ಷದ ಹಿಂದೆ ಕಾಣೆಯಾಗಿದ್ದ ಸೋದರಿಯನ್ನ ವೇಶ್ಯಾವಾಟಿಕೆ ಅಡ್ಡೆಯಿಂದ ಪಾರು ಮಾಡಿದ ಸಹೋದರ

    4 ವರ್ಷದ ಹಿಂದೆ ಕಾಣೆಯಾಗಿದ್ದ ಸೋದರಿಯನ್ನ ವೇಶ್ಯಾವಾಟಿಕೆ ಅಡ್ಡೆಯಿಂದ ಪಾರು ಮಾಡಿದ ಸಹೋದರ

    ಪಾಟ್ನಾ: ಪೊಲೀಸರು ಬಿಹಾರದ ಬೆಗುಸರಾಯ್ ಜಿಲ್ಲೆಯ ವೇಶ್ಯಾವಾಟಿಕೆಯ ಅಡ್ಡೆ ಮೇಲೆ ದಾಳಿ ನಡೆಸಿ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

    ರಾಮ್ ಮೋಹನ್ (ಹೆಸರು ಬದಲಾಯಿಸಲಾಗಿದೆ) ಎಂಬವರು ನಾಲ್ಕು ವರ್ಷಗಳ ಹಿಂದೆ ಕಾಣೆಯಾಗಿದ್ದ ಸೋದರಿಯನ್ನು ಹುಡುಕುತ್ತಿದ್ದರು. ಆದರೆ ರಾಮ್ ಮೋಹನ್ ತಮ್ಮ ಸೋದರಿಯನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದ್ದರು. ಖಾಸಗಿ ಹಡಗು ಸಂಸ್ಥೆಯೊಂದರಲ್ಲಿ ಕೆಲಸ ಮಾಡ್ತಿರೋ ರಾಮ್ ಮೋಹನ್ ಕೆಲಸದ ಮೇಲೆ ಇತ್ತೀಚೆಗೆ ಬಾಖ್ರಿ ಗ್ರಾಮವೊಂದರ ರೆಡ್ ಲೈಟ್ ಏರಿಯಾ ತಲುಪಿದಾಗ ಅಲ್ಲಿ ತನ್ನ ಸಹೋದರಿಯನ್ನ ನೋಡಿದ್ದಾರೆ.

    ಸೋದರಿ ಬಂಧಿಯಾಗಿರುವ ಬಗ್ಗೆ ತಿಳಿಯುತ್ತಲೇ ರಾಮ್ ಮೋಹನ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ವೇಶ್ಯಾವಾಟಿಕೆಯ ಅಡ್ಡೆ ಮೇಲೆ ದಾಳಿ ನಡೆಸಿ ರಾಮ್‍ಮೋಹನ್ ಸೋದರಿ ಸೇರಿದಂತೆ ಮತ್ತೊಬ್ಬ ಯುವತಿಯನ್ನು ರಕ್ಷಿಸಿದ್ದಾರೆ. ರಾಮ್ ಮೋಹನ್ ಸೋದರಿ ಶೇಹೊರಾ ಜಿಲ್ಲೆಯ ನಿವಾಸಿಯಾಗಿದ್ದು, ರಕ್ಷಿಸಲ್ಪಟ್ಟ ಮತ್ತೊಬ್ಬ ಯುವತಿ ಜಾರ್ಖಂಡ್ ರಾಜ್ಯದ ಗುಮ್ಲಾ ಜಿಲ್ಲೆಯ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

    ರಾಮ್ ಮೋಹನ್ ಸೋದರಿಗೆ ಕೆಲಸ ಕೊಡಿಸುವುದಾಗಿ ಹೇಳಿ ಹರಿಯಾಣದ ಮಹಿಳೆ ಬಾಖ್ರಿಯಲ್ಲಿ ವೇಶ್ಯಾವಾಟಿಕೆಗೆ ಮಾರಾಟ ಮಾಡಿದ್ದಳು. ರಕ್ಷಿಸಲ್ಪಟ್ಟ ಮತ್ತೊಬ್ಬ ಯುವತಿಯನ್ನು 10 ವರ್ಷಗಳ ಹಿಂದೆ ಇದೇ ರೀತಿ ಮಾರಾಟ ಮಾಡಲಾಗಿತ್ತು. ದಾಳಿ ವೇಳೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ದಂಧೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.

  • 3 ದಿನಗಳಲ್ಲಿ ಒಂದೇ ಊರಿನ, ಒಂದೇ ಶಾಲೆಯ 4 ಮಕ್ಕಳು ನಾಪತ್ತೆ!

    3 ದಿನಗಳಲ್ಲಿ ಒಂದೇ ಊರಿನ, ಒಂದೇ ಶಾಲೆಯ 4 ಮಕ್ಕಳು ನಾಪತ್ತೆ!

    ಮಡಿಕೇರಿ: ಕುಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಿಬ್ಬೆಟ್ಟ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 4 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.

    5ನೇ ತರಗತಿಯ ದಿವ್ಯ(9), 2ನೇ ತರಗತಿಯ ಸೂರ್ಯ(6), ಲಕ್ಷ್ಮಿ (6), ಆಶಾ(7) ಕಾಣೆಯಾದ ಮಕ್ಕಳು. ಅಪ್ಪ-ಅಮ್ಮ ಕೆಲಸಕ್ಕೆ ಹೋದ ಬಳಿಕ ಶಾಲೆಗೆ ಹೋಗಬೇಕಿದ್ದ ಮಕ್ಕಳು ಕಾಣೆಯಾಗಿದ್ದಾರೆ. ಹಾಡಿ ಜನಾಂಗದ ರವಿ ಮತ್ತು ಜಯ ದಂಪತಿಯ ಮಕ್ಕಳಾದ ದಿವ್ಯ ಹಾಗೂ ಸೂರ್ಯ, ನಾಗೇಶ್ ಮತ್ತು ನಾಗು ಎಂಬವರ ಸಾಕು ಮಕ್ಕಳಾದ ಲಕ್ಷ್ಮಿ ಮತ್ತು ಆಶಾ ಕಾಣೆಯಾಗಿದ್ದಾರೆ.

    ಮಕ್ಕಳು ಮನೆಗೆ ಬಾರದೇ ಸಂಬಂಧಿಕರ ಮನೆಯಲ್ಲಿರಬಹುದು ಎಂದು ಪೋಷಕರು ಭಾವಿಸಿಕೊಂಡಿದ್ದರು. ಕಳೆದ ಮೂರು ದಿನಗಳಿಂದ ಮಕ್ಕಳು ಶಾಲೆಗೆ ಬರದೇ ಇದ್ದ ಕಾರಣ ಮುಖ್ಯೋಪಾಧ್ಯಯರು ಪೋಷಕರಿಗೆ ಕರೆ ಮಾಡಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಶಾಲೆಯ ಮುಖ್ಯೋಪಾಧ್ಯಯರ ಸಲಹೆಯ ಮೇರೆಗೆ ಪೋಷಕರು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮಕ್ಕಳನ್ನು ಹುಡುಕಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.