Tag: ಮಿಸೆಲ್‌

  • ರಷ್ಯಾಗೆ ಕೌಂಟರ್ ಕೊಡಲು 125 ಆ್ಯಂಟಿ ಏರ್‌ಕ್ರಾಫ್ಟ್ ಗನ್ – ಉಕ್ರೇನ್ ಬೆಂಬಲಕ್ಕೆ ಬ್ರಿಟನ್

    ರಷ್ಯಾಗೆ ಕೌಂಟರ್ ಕೊಡಲು 125 ಆ್ಯಂಟಿ ಏರ್‌ಕ್ರಾಫ್ಟ್ ಗನ್ – ಉಕ್ರೇನ್ ಬೆಂಬಲಕ್ಕೆ ಬ್ರಿಟನ್

    ಕೀವ್: ಉಕ್ರೇನ್ (Ukraine) ಅನ್ನು ಮಣಿಸಲು ಸತತ ದಾಳಿ ನಡೆಸುತ್ತಿರುವ ರಷ್ಯಾ (Russia) ತನ್ನ ಮಿತಿಯ ಎಲ್ಲ ಮಾದರಿಯ ಕ್ಷಿಪಣಿ ಹಾಗೂ ಸ್ಫೋಟಕಗಳನ್ನು ಉಕ್ರೇನ್ ಮೇಲೆ ಪ್ರಯೋಗಿಸುತ್ತಿದೆ. ಅದರಲ್ಲೂ ಇತ್ತೀಚೆಗೆ ಉಕ್ರೇನಿನ ಮೂಲ ಸೌಕರ್ಯಗಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಇದರಿಂದ ಉಕ್ರೇನಿನ ಜನ ಬೆಚ್ಚಿ ಬೀಳುತ್ತಿದ್ದಾರೆ.

    ಇದೀಗ ಬ್ರಿಟನ್ (UK) ಪ್ರಧಾನಿಯಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ರಿಷಿ ಸುನಾಕ್ ಉಕ್ರೇನ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಕೀವ್‌ಗೆ ಇಂದು ಅನಿರೀಕ್ಷಿತ ಭೇಟಿ ನೀಡಿದ ರಿಷಿ ಸುನಾಕ್ (Rishi Sunak) ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ಕಿ (Volodymyr Zelenskyy) ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಉಕ್ರೇನ್ ಗೆಲ್ಲುವವರೆಗೆ ಬ್ರಿಟನ್ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ರಷ್ಯಾದಿಂದ ಅಬ್ಬರಿಸುತ್ತಿರುವ ಇರಾನಿ ಡ್ರೋನ್‌ಗಳನ್ನು (Iranian Drones) ಎದುರಿಸಲು 125 `ಆ್ಯಂಟಿ ಏರ್‌ಕ್ರಾಫ್ಟ್ ಗನ್’ಗಳನ್ನು ಪೂರೈಸುವುದಾಗಿ ಹಾಗೂ 50 ಮಿಲಿಯನ್ STG ಪ್ಯಾಕೇಜ್ (ವಾಯುಸೇನೆ ರಕ್ಷಣಾತ್ಮಕ ಸೌಲಭ್ಯ) ಪೂರೈಸುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಮತ್ತೆ ಸಮರ ಸಾರಿದ ರಷ್ಯಾ – ಒಂದೇ ಬಾರಿಗೆ 100 ಕ್ಷಿಪಣಿ ಉಡಾವಣೆ

    ರಷ್ಯಾದ ಸತತ ದಾಳಿಯಿಂದ ಕಂಗೆಟ್ಟಿರುವ ಉಕ್ರೇನ್‌ನಲ್ಲಿ 437 ಮಕ್ಕಳು ಮೃತಪಟ್ಟಿದ್ದು, 837 ಮಕ್ಕಳು ಗಾಯಗೊಂಡಿದ್ದಾರೆ. ಉಕ್ರೇನಿನ ಮೂಲ ಸೌಕರ್ಯಗಳನ್ನ ಗುರಿಯಾಗಿಸಿ ಈಗಾಗಲೇ 1,000 ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ರಷ್ಯಾ ಉಡಾಯಿಸಿದೆ. ಆದರೂ ಆಗ್ನೇಯ ಭಾಗದಲ್ಲಿ ತನ್ನ ಪರಾಕ್ರಮವನ್ನು ಮುಂದುವರಿಸಿದೆ.

    ರಷ್ಯಾ ಕ್ಷಿಪಣಿ ದಾಳಿಯಿಂದ ಉಕ್ರೇನಿನ 12 ಪ್ರಾಂತ್ಯಗಳಲ್ಲಿ ತೀವ್ರ ವಿದ್ಯುತ್ ಸಮಸ್ಯೆ ಉಂಟಾಗಿದೆ. ಅಲ್ಲದೇ ಉಕ್ರೇನ್ ರಾಷ್ಟ್ರದ ಅರ್ಧದಷ್ಟು ಇಂಧನ ಮೂಲ ಸೌಕರ್ಯಗಳು ಹಾನಿಗೊಳಗಾಗಿವೆ ಎಂದು ಕೀವ್ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಮತ್ತೆ ಡೆಡ್ಲಿ ಡ್ರೋನ್ ದಾಳಿ – ಉಕ್ರೇನ್‌ನಲ್ಲಿ ಅಲ್ಲೋಲ ಕಲ್ಲೋಲ

    ಕೆಲ ದಿನಗಳ ಹಿಂದೆ ಯುದ್ಧಕ್ಕೆ ಬಿಡುವು ನೀಡಿದ್ದ ರಷ್ಯಾ ತನ್ನ ರಷ್ಯಾದ ಕ್ರಿಮಿಯಾ ಸೇತುವೆಯನ್ನು ಧ್ವಂಸಗೊಳಿಸಿದ ನಂತರ ಪ್ರತಿಕಾರವಾಗಿ ರಷ್ಯಾ ದಾಳಿಗೆ ಮುಂದಾಯಿತು. ಸತತವಾಗಿ 75 ಕ್ಷಿಪಣಿಗಳು, 5 ಡೆಡ್ಲಿ ರಾಕೆಟ್‌ಗಳನ್ನು ಉಕ್ರೇನ್ ಮೇಲೆ ಹಾರಿಬಿಟ್ಟಿತ್ತು. ಇದಾದ ಒಂದು ವಾರದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ವಿರುದ್ಧ ಕ್ಷಿಪಣಿ ದಾಳಿ ಅಂತ್ಯಗೊಳಿಸುವುದಾಗಿ ಹೇಳಿದ್ದರು. ಮತ್ತೆ 84 ಡೆಡ್ಲಿ ಡ್ರೋನ್‌ಗಳಿಂದ ದಾಳಿ ನಡೆಸಿತ್ತು. ಅದಕ್ಕಾಗಿ ಇರಾನಿ ಡ್ರೋನ್‌ಗಳನ್ನು ಬಳಸಲಾಗಿತ್ತು. ಮೂರು ದಿನಗಳ ಹಿಂದೆಯೂ ಸಹ ಏಕಾ-ಏಕಿ ನೂರು ಕ್ಷಿಪಣಿಗಳಿಂದ ದಾಳಿ ನಡೆಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್ ವಿರುದ್ಧ ಮತ್ತೆ ಸಮರ ಸಾರಿದ ರಷ್ಯಾ – ಒಂದೇ ಬಾರಿಗೆ 100 ಕ್ಷಿಪಣಿ ಉಡಾವಣೆ

    ಉಕ್ರೇನ್ ವಿರುದ್ಧ ಮತ್ತೆ ಸಮರ ಸಾರಿದ ರಷ್ಯಾ – ಒಂದೇ ಬಾರಿಗೆ 100 ಕ್ಷಿಪಣಿ ಉಡಾವಣೆ

    ಕೀವ್/ಮಾಸ್ಕೋ: ರಷ್ಯಾಪಡೆಗಳು ಉಕ್ರೇನಿನ ಇಂಧನ ಮೂಲ ಸೌಕರ್ಯಗಳನ್ನು (Energy Infrastructure) ಗುರಿಯಾಗಿಸಿ ದಾಳಿ ನಡೆಸಿದ್ದು, ಏಕಾ-ಏಕಿ 100 ಕ್ಷಿಪಣಿಗಳನ್ನು ಉಡಾಯಿಸಿವೆ.

    ಇದರಿಂದ ಉಕ್ರೇನಿನ (Ukraine) ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದು ಅಕ್ಟೋಬರ್ 10 ಅಂದು ನಡೆಸಿದ ದಾಳಿಗಿಂತಲೂ ಮಾರಕವಾಗಿದೆ ಎಂದು ವಾಯುಪಡೆಯ ವಕ್ತಾರ ಯೂರಿ ಇಗ್ನಾಟ್ ಉಕ್ರೇನಿಯನ್ ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಮತ್ತೆ ಡೆಡ್ಲಿ ಡ್ರೋನ್ ದಾಳಿ – ಉಕ್ರೇನ್‌ನಲ್ಲಿ ಅಲ್ಲೋಲ ಕಲ್ಲೋಲ

    ರಷ್ಯಾ ಪಡೆಗಳು ಉಕ್ರೇನಿನ ನಿರ್ಣಾಯಕ ಮೂಲ ಸೌರ್ಯಕಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ. ಅಲ್ಲದೇ ಉಕ್ರೇನಿನ ಕೆಲವು ಕ್ಷಿಪಣಿಗಳನ್ನು ಹೊಡೆದುರುಳಿದೆ. ನಿಖರ ಮಾಹಿತಿಯನ್ನು ಉಕ್ರೇನ್ ಸೇನೆ ಅಥವಾ ರಕ್ಷಣಾಲಯ ಸ್ಪಷ್ಟಪಡಿಸಬೇಕಿದೆ. ಇದನ್ನೂ ಓದಿ: ಅನ್ನಭಾಗ್ಯ ಕೊಡ್ತೀವಿ ಅಂತ ಸಿದ್ದರಾಮಯ್ಯ ಕನ್ನ ಹಾಕಿದ್ದಾರೆ – ಸಿಎಂ ವಾಗ್ದಾಳಿ

    ಇತ್ತೀಚೆಗಷ್ಟೇ ಉಕ್ರೇನ್ ರಷ್ಯಾದ ಕ್ರಿಮಿಯಾ ಸೇತುವೆಯನ್ನು (Crimean Bridge) ಧ್ವಂಸಗೊಳಿಸಿದ ನಂತರ ಪ್ರತೀಕಾರವಾಗಿ ರಷ್ಯಾ ದಾಳಿ ನಡೆಸಿತು. ಸತತವಾಗಿ 75 ಕ್ಷಿಪಣಿಗಳು, 5 ಡೆಡ್ಲಿ ರಾಕೆಟ್‌ಗಳನ್ನು ಉಕ್ರೇನ್ ಮೇಲೆ ಹಾರಿಬಿಟ್ಟಿತ್ತು. ಇದಾದ ಒಂದು ವಾರದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ವಿರುದ್ಧ ಕ್ಷಿಪಣಿ ದಾಳಿ ಅಂತ್ಯಗೊಳಿಸುವುದಾಗಿ ಹೇಳಿದ್ದರು. ಮತ್ತೆ 84 ಡೆಡ್ಲಿ ಡ್ರೋನ್‌ಗಳಿಂದ ದಾಳಿ ನಡೆಸಿತ್ತು. ಅದಕ್ಕಾಗಿ ಇರಾನಿ ಡ್ರೋನ್‌ಗಳನ್ನು ಬಳಸಲಾಗಿತ್ತು. ಇಂದು ಏಕಾಏಕಿ ನೂರು ಕ್ಷಿಪಣಿಗಳಿಂದ ದಾಳಿ ನಡೆಸಿದ್ದು, ಉಕ್ರೇನ್ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

    Live Tv
    [brid partner=56869869 player=32851 video=960834 autoplay=true]