Tag: ಮಿಸಲ್ ಪಾವ್

  • ಬಾಯಿ ಚಪ್ಪರಿಸುತ್ತಾ ಮಿಸಲ್ ಪಾವ್ ಸವಿದ ಸಚಿನ್ – ವೀಡಿಯೋ ವೈರಲ್

    ಬಾಯಿ ಚಪ್ಪರಿಸುತ್ತಾ ಮಿಸಲ್ ಪಾವ್ ಸವಿದ ಸಚಿನ್ – ವೀಡಿಯೋ ವೈರಲ್

    ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಮಿಸಲ್ ಪಾವ್ ಸವಿಯುತ್ತಿರುವ ವೀಡಿಯೋವೊಂದನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಮಹಾರಾಷ್ಟ್ರದ ಹಲವಾರು ಖಾದ್ಯಗಳಲ್ಲಿ ಮಿಸಲ್ ಪಾವ್ ಕೂಡ ಒಂದು. ಕ್ರಿಕೆಟ್ ದೇವರು ಎಂದೇ ಫೇಮಸ್ ಆಗಿರುವ ಸಚಿನ್ ತೆಂಡೂಲ್ಕರ್ ಈ ಟೆಸ್ಟಿ ಫುಡ್ ಅನ್ನು ಬಹಳ ಇಷ್ಟಪಟ್ಟು ಸವಿದಿದ್ದಾರೆ. ಅಲ್ಲದೇ ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ದನ್ನೂ ಓದಿ: ಮಾನಸಿಕವಾಗಿ, ದೈಹಿಕವಾಗಿ ಫಿಟ್ ಆಗಿರೋದು ಮುಖ್ಯ- ಸಂಯುಕ್ತಾ ಹಾಟ್ ಫೋಟೋ ವೈರಲ್

    ಮಿಸಲ್ ಪಾವ್ ಅಂದ್ರೆನೇ ಅದ್ಭುತ. ಇದು ನನಗೆ ಬರ್ಮೀಸ್ ಖಾವೊ ಸೂಯಿಯನ್ನು ನೆನಪಿಸುತ್ತದೆ. ಆದರೆ ಮಹಾರಾಷ್ಟ್ರ ಮಿಸಲ್ ಪಾವ್ ನಂಬರ್1 ಎಂದು ಸಚಿನ್ ವಿಡಿಯೋದಲ್ಲಿ ಹೇಳಿರುವುದನ್ನು ಕಾಣಬಹುದಾಗಿದೆ. ವೀಡಿಯೋ ಜೊತೆಗೆ ಅದು ಭಾನುವಾರ ಅಥವಾ ಸೋಮವಾರ ಆಗಿರಲಿ. ನಾನು ಮಿಸಲ್ ಪಾವ್ ಯಾವ ದಿನವಾದರೂ ಸವಿಯುತ್ತೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ದನ್ನೂ ಓದಿ: ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ: ಬೊಮ್ಮಾಯಿ

     

    View this post on Instagram

     

    A post shared by Sachin Tendulkar (@sachintendulkar)

    25 ಸೆಕೆಂಡ್ ಇರುವ ಈ ವೀಡಿಯೋವನ್ನು ಇಲ್ಲಿಯವರೆಗೂ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 50 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ ಮತ್ತು ಅನೇಕ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬಂದಿದೆ.