Tag: ಮಿಲಿಟಿರಿ

  • ಮಗನನ್ನ ಅಪ್ಪನಂತೆ ಸೈನಿಕನನ್ನಾಗಿ ಮಾಡ್ತೀನಿ – ಸ್ವಗ್ರಾಮದಲ್ಲಿ ವೀರಯೋಧನಿಗೆ ಅಂತಿಮ ನಮನ

    ಮಗನನ್ನ ಅಪ್ಪನಂತೆ ಸೈನಿಕನನ್ನಾಗಿ ಮಾಡ್ತೀನಿ – ಸ್ವಗ್ರಾಮದಲ್ಲಿ ವೀರಯೋಧನಿಗೆ ಅಂತಿಮ ನಮನ

    – ಹುತಾತ್ಮ ಯೋಧನ ಪತ್ನಿ ಶಪಥ

    ವಿಜಯಪುರ: ರಕ್ಷಕ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧ ಕಾಶಿರಾಯ ಅವರ ಅಂತ್ಯಕ್ರಿಯೆಯನ್ನು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಇಂದು ಸರ್ಕಾರಿ ಗೌರವದೊಂದಿಗೆ ನಡೆಸಲಾಯಿತು.

    ವೀರ ಯೋಧ ಕಾಶಿರಾಯ ಬೊಮ್ಮನಹಳ್ಳಿ ಪಾರ್ಥಿವ ಶರೀರ ಸ್ವಾಗ್ರಾಮಕ್ಕೆ ತರಲಾಗಿತ್ತು. ಪುಲ್ವಾಮಾದಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಕಾಶಿರಾಯ ಬೊಮ್ಮನಹಳ್ಳಿ ಸಾವನ್ನಪ್ಪಿದ್ದರು. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಸ್ವಗ್ರಾಮದಲ್ಲಿ ಜೈಕಾರಗಳೊಂದಿಗೆ ದೇಶಪ್ರೇಮಿಯ ಪಾರ್ಥಿವ ಶರೀರ ಸ್ವಾಗತಿಸಿ, ಉಕ್ಕಲಿ ಗ್ರಾಮದ ಸರಕಾರಿ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

    ಈ ವೇಳೆ ಮಗನನ್ನ ಅಪ್ಪನಂತೆ ಸೈನಿಕ ಮಾಡುವೆ ಎಂದು ಹುತಾತ್ಮ ಯೋಧನ ಪತ್ನಿ ಸಂಗೀತಾ ಪಾರ್ಥಿವ ಶರೀರದ ಎದುರು ನಿಂತು ಶಪಥ ಮಾಡಿದ್ದಾರೆ. ಅವರ ಅಪ್ಪ ಅವನನ್ನ ಸ್ಟ್ರಾಂಗ್ ಮಾಡು ಎನ್ನುತ್ತಿದ್ದರು. ನಾನು ಅವರ ಮಗನನ್ನ ಸ್ಟ್ರಾಂಗ್ ಮಾಡುತ್ತೇನೆ. ಅವರ ಅಪ್ಪ ಹೇಳಿದಂತೆ ಅವನನ್ನು ಸೈನಿಕ ಮಾಡುತ್ತೇನೆ ಎಂದು ಹೇಳುತ್ತಾ ಹುತಾತ್ಮ ಯೋಧನ ಶವದ ಪೆಟ್ಟಿಗೆ ಮೇಲೆ ಬಿದ್ದು ಪತ್ನಿ ಸಂಗೀತಾ ಕಣ್ಣೀರು ಹಾಕಿದ್ದಾರೆ.

    ಪತ್ನಿ ಹಾಗೂ ತಾಯಿಗೆ ಯೋಧನ ಪಾರ್ಥಿವ ಶರೀರದ ಮೇಲೆ ಹಾಕಿದ್ದ ರಾಷ್ಟ್ರ ಧ್ವಜ ಹಸ್ತಾಂತರ ಮಾಡಲಾಯಿತು. ಪತ್ನಿ, ಇಬ್ಬರು ಮಕ್ಕಳು ತಾಯಿ ಹಾಗೂ ಸಹೋದರರು, ಯೋಧರು ಪಾರ್ಥೀವ ಶರೀರಕ್ಕೆ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು. ಸೇನೆ ಹಾಗೂ ಸ್ಥಳೀಯ ಪೊಲೀಸರಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಲಿಂಗಾಯತ ವಿಧಿವಿಧಾನ ಮೂಲಕ ನಡೆದ ಅಂತ್ಯಕ್ರಿಯೆ ನಡೆಸಲಾಯಿತು.

    ಯರನಾಳದ ಮಠದ ಶ್ರೀ ಸಂಗನಬಸವ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಅಂತ್ಯಕ್ರಿಯೆ ವಿಧಿವಿಧಾನ ನಡೆಸಲಾಯಿತು. ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕ ಶಿವಾನಂದ ಪಾಟೀಲ್, ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ, ಜಿಲ್ಲಾಧಿಕಾರಿ ಸುನೀಲ್‍ಕುಮಾರ್, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಸೇರಿದಂತೆ ಸಾವಿರಾರು ದೇಶಭಕ್ತರು ಅಂತ್ಯಕ್ರಿಯೆಯೆಲ್ಲಿ ಭಾಗಿಯಾಗಿದ್ದರು.

  • ಇಸ್ರೇಲ್ ವಾಯುದಾಳಿಯಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡು ಬದುಕುಳಿದ ಮಗು

    ಇಸ್ರೇಲ್ ವಾಯುದಾಳಿಯಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡು ಬದುಕುಳಿದ ಮಗು

    ಜೆರುಸಲೇಮ್ : ಗಾಜಾದ ಹಮಾಸ್ ಬಂಡುಕೋರರೊಂದಿಗೆ ಆರಂಭಗೊಂಡ ಇಸ್ರೇಲ್ ಮಿಲಿಟಿರಿ ಪಡೆಯ ಯುದ್ಧ ದಿನೇ ದಿನೇ ತೀವ್ರತೆ ಪಡೆದುಕೊಳ್ಳುತ್ತಿದೆ. ಗಾಜಾ ನಗರದಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಿಂದ ಒಂದೇ ಕುಟುಂಬದ ಸುಮಾರು 10 ಮಂದಿ ಸಾವನ್ನಪ್ಪಿದ್ದು, ಪವಾಡಸದೃಶ್ಯವೆಂಬಂತೆ 6 ತಿಂಗಳ ಮಗು ಬದುಕುಳಿದಿದೆ.

    ಈದ್ ಅಲ್- ಫಿತರ್ ರಜಾದಿನವನ್ನು ಆಚರಿಸಲು ಪತ್ನಿ ಮತ್ತು ಐದು ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದರು. ದಾಳಿಗೆ ಸಿಲುಕಿ ಕುಟುಂಬದ ಬಹುತೇಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಮಗುವಿನ ತಂದೆ ಮೊಹಮ್ಮದ್ ಹದೀದಿ ಹೇಳಿದ್ದಾರೆ. ಕಳೆದ ಶನಿವಾರ ಘಟನೆ ನಡೆದಿದ್ದು, ಸಾವನ್ನಪ್ಪಿದ ಕುಟುಂಬದ 10 ಮದಿ ಪೈಕಿ ಬಹುತೇಕರು ಪುಟ್ಟ ಮಕ್ಕಳೆ ಆಗಿದ್ದಾರೆ.

    ಪತ್ನಿ ಮತ್ತು 6 ರಿಂದ 14 ವರ್ಷದ ಮಕ್ಕಳಲ್ಲಿ ಮೂವರು ಸಾವನ್ನಪಿದ್ದಾರೆ, 11 ವರ್ಷದ ಮಗು ಕಾಣೆಯಾಗಿದೆ. 6 ತಿಂಗಳ ಮಗ ಒಮರ್ ಮಾತ್ರ ಬದುಕುಳಿದಿದ್ದಾನೆ. ಮಗುವಿನ ಕಾಲು ಮುರಿದಿದೆ. ಮಗುವನ್ನು ಗಾಜಾದ ಅಲ್- ಶಿಫಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ದಾಳಿಯ ಬೆನ್ನಲ್ಲೇ ನೂರಾರು ಜನರು ಗಾಜಾ ನಗರದ ಬೀದಿಗಳಲ್ಲಿ ಕುಟುಂಬ ಸದಸ್ಯರ ಮೃತದೇಹಗಳನ್ನು ಹೊತ್ತು ಮೆರವಣಿಗೆ ನಡೆಸಿದ್ದಾರೆ ಎಂದು ಹದೀದಿ ತಿಳಿಸಿದ್ದಾರೆ.

    ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ನೂರಾರು ರಾಕೆಟ್‍ಗಳನ್ನು ಹಾರಿಸಿದ್ದಾರೆ. ಪ್ರತೀಕಾರವಾಗಿ ಇಸ್ರೇಲ್ ಗಾಜಾ ಪಟ್ಟಿ ಮೇಲೆ ವೈಮಾನೀಕ ದಾಳಿ ನಡೆಸಿದೆ. ಗಾಜಾದಲ್ಲಿ 31 ಮಕ್ಕಳು 20 ಮಹಿಳೆಯರು ಸೇರಿದಂತೆ ಕನಿಷ್ಠ 126 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್‍ನಲ್ಲಿ 6 ವರ್ಷದ ಬಾಲಕ, ಸೈನಿಕರು ಸೇರಿದಂತೆ 7ಮಂದಿ ಮೃತಪಟ್ಟಿದ್ದಾರೆ.

  • ನಿವೃತ್ತಿ ಪಡೆದು ಬಂದ ಮರುದಿನವೇ ಸೈನಿಕ ಹೃದಯಾಘಾತದಿಂದ ಸಾವು

    ನಿವೃತ್ತಿ ಪಡೆದು ಬಂದ ಮರುದಿನವೇ ಸೈನಿಕ ಹೃದಯಾಘಾತದಿಂದ ಸಾವು

    ಕೋಲಾರ: ಸೇನೆಯಿಂದ ನಿವೃತ್ತಿ ಹೊಂದಿದ ಮರುದಿನವೇ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ.

    ದೇಶದ ಸೇವೆ ಮುಗಿಸಿ ನಿವೃತ್ತಿಯಾಗಿ ಊರಿಗೆ ಬಂದವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿತ್ತು. ಆದರೆ ಮರುದಿನ ಇವರ ನೆನೆಪು ಮಾತ್ರ ಉಳಿಯುವಂತಾಗಿದೆ. ಮೃತ ಮಂಜುನಾಥ್ ಅವರು ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಬಳಿಯ ಕೊಡಗುರ್ಕಿ ಗ್ರಾಮದ ನಿವಾಸಿಯಾಗಿದ್ದಾರೆ. ದೇಶದ ಗಡಿಯಲ್ಲಿ 17 ವರ್ಷಗಳ ಕಾಲ ವೀರಯೋಧನಾಗಿ ಭಾರತಾಂಬೆ ಸೇವೆ ಮಾಡಿ ತಮ್ಮ ಊರಿಗೆ ಮರಳಿದ್ದರು. ಆದರೆ ಮಂಗಳವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ಜನವರಿ 31 ರಂದು ಅಂದ್ರೆ ಒಂದು ದಿನದ ಮುಂಚೆ ನಿವೃತ್ತಿಯಾಗಿದ್ದರು. ಸಾವಿರಾರು ಕನಸುಗಳನ್ನ ಹೊತ್ತು ಕುಟುಂಬದ ಜೊತೆಗೆ ಕಾಲ ಕಳೆಯಲು ಆಸೆಯನ್ನು ಹೊತ್ತು ಬಂದಿದ್ದರು. ಕೋಲಾರ ನಗರದ ಅಂಬೇಡ್ಕರ್ ನಗರದಲ್ಲಿ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಮುಂಜುನಾಥ್ ಅವರು ಹೃದಯಾಘಾತದಿಂದ ಮೃತರಾಗಿದ್ದಾರೆ. ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ವೀರಯೋಧ ಮಂಜುನಾಥ್ ಅವರು ಇಬ್ಬರು ಮಕ್ಕಳು, ಪತ್ನಿ, ಕುಟುಂಬ ಮತ್ತು ಅಪಾರ ಸ್ನೇಹಿತರನ್ನ ಅಗಲಿದ್ದಾರೆ.

    ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಬಳಿಯ ಮಂಜುನಾಥ್ ಅವರ ಸ್ವಗ್ರಾಮದವಾದ ಕೊಡಗುರ್ಕಿಯಲ್ಲಿ ಅಂತಿಮ ನಮನ ಸಲ್ಲಿಸಿ, ಅಲ್ಲಿಯೇ ಅಂತ್ಯ ಸಂಸ್ಕಾರ ಸಡೆಲಾಯ್ತು. ಕುಟುಂಬದವರು ಹಾಗೂ ಗ್ರಾಮಸ್ಥರು ದುಃಖ ತೃಪ್ತರಾಗಿದ್ದಾರೆ.

  • ಭಾರತೀಯ ಸೇನಾಧಿಕಾರಿ ಅಂತ ಜನರನ್ನು ಮೋಸ ಮಾಡ್ತಿದ್ದ ಯುವಕ ಅರೆಸ್ಟ್

    ಭಾರತೀಯ ಸೇನಾಧಿಕಾರಿ ಅಂತ ಜನರನ್ನು ಮೋಸ ಮಾಡ್ತಿದ್ದ ಯುವಕ ಅರೆಸ್ಟ್

    – ಯುವಕನ ಪತ್ನಿಯೂ ಬಂಧನ

     ಮುಂಬೈ: ಭಾರತೀಯ ಸೇನಾಧಿಕಾರಿ ಎಂದು ಹೇಳಿಕೊಂಡು ಜನರನ್ನು ಮೋಸಗೊಳಿಸುತ್ತಿದ್ದ 23 ವರ್ಷದ ಯುವಕನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಲಾಗಿದೆ.

    ಇತ್ತೀಚೆಗೆ ಭಾರತೀಯ ಸೇನಾಧಿಕಾರಿಯಂತೆ ನಟಿಸಿ ಜನರನ್ನು ಮೋಸಗೊಳಿಸುತ್ತಿರವ ವ್ಯಕ್ತಿಯನ್ನು ಬಂಧಿಸಿದ್ದೇವೆ. ಮಿಲಿಟರಿ ಗುಪ್ತಚರ ಅಧಿಕಾರಿಗಳು ಆರೋಪಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯೊಬ್ಬಳನ್ನೂ ಬಂಧಿಸಲಾಗಿದೆ ಎಂದು ಪುಣೆ ಗ್ರಾಮೀಣ ಪೊಲೀಸ್ ಸ್ಥಳೀಯ ಅಪರಾಧ ಶಾಖೆಯ (ಎಲ್‍ಸಿಬಿ) ಹಿರಿಯ ಇನ್ಸ್‍ಪೆಕ್ಟರ್ ಪದ್ಮಕರ್ ಘನ್ವತ್ ತಿಳಿಸಿದ್ದಾರೆ.

    ಪುಣೆ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‍ಡಿಎ) ಬಳಿಯ ಕಿರ್ಕಾಟ್ವಾಡಿ ಪ್ರದೇಶದಲ್ಲಿ ಸೇನಾ ಅಧಿಕಾರಿಯಾಗಿ ನಟಿಸುತ್ತಿದ್ದ ಯುವಕನ್ನು ಬಂಧಿಸಿದ್ದಾರೆ. ಈ ವ್ಯಕ್ತಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಎಂದು ಹೇಳಿಕೊಂಡು ನಟಿಸುತ್ತಿದ್ದನು.  ಪೊಲೀಸ್ ಅವರ ನಿವಾಸದಿಂದ ಹಲವಾರು ನಕಲಿ ಮತ್ತು ನಕಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

    ಆರೋಪಿಯನ್ನು ಅಂಕಿತ್ ಕುಮಾರ್ ಸಿಂಗ್ (23) ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಹಸನ್ಪುರ ಅಮ್ರೋಹ್ ಮೂಲದವನಾಗಿದ್ದಾನೆ. 10 ಗುರುತಿನ ಚೀಟಿಗಳು, ಎರಡು ಮೊಬೈಲ್‍ಗಳು, ಟ್ಯಾಬ್ಲೆಟ್, ಪ್ರಿಂಟರ್, ಲ್ಯಾಪ್‍ಟಾಪ್, ನಕಲಿ ದಾಖಲೆಗಳು ಮತ್ತು ಭಾರತೀಯ ಸೇನಾಧಿಕಾರಿ ಸಮವಸ್ತ್ರ, ಬೂಟುಗಳು, ಸೊಂಟದ ಬೆಲ್ಟ್ ಮತ್ತು ಕ್ಯಾಪ್ ಅನ್ನು ಪೊಲೀಸರು ಆರೋಪಿಯಿಂದ ವಶಪಡಿಸಿಕೊಂಡಿದ್ದಾರೆ.

    ಪೊಲೀಸರಿಗೆ ಬಂದಿರುವ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾಗ ಲೆಫ್ಟಿನೆಂಟ್ ಕರ್ನಲ್ ಅಧಿಕಾರಿಯ ಸೋಗಿನಲ್ಲಿ ಆರೋಪಿ ಜನರನ್ನು ಯುವಕ ಮೋಸ ಮಾಡುತ್ತಿದ್ದನು. ಅರೋಪಿಯ ಹೆಂಡತಿ ಮೀನಾಕ್ಷಿ ಎಂಬ ಮಹಿಳೆಯನ್ನು ಬಂಧಿಸಿ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಸೇನೆಯ ನೇಮಕಾತಿ ದಂಧೆಯ ಭಾಗವಾಗಿದ್ದಾರೆಯೇ ಎಂದು ತಿಳಿಯಲು ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡುತ್ತೇವೆ ಪೊಲೀಸರು ತಿಳಿಸಿದ್ದಾರೆ.

  • 20 ಕುದುರೆ, 10 ಶ್ವಾನಗಳನ್ನು ಬಾಂಗ್ಲಾದೇಶ ಸೈನ್ಯಕ್ಕೆ ಭಾರತದಿಂದ ಗಿಫ್ಟ್

    20 ಕುದುರೆ, 10 ಶ್ವಾನಗಳನ್ನು ಬಾಂಗ್ಲಾದೇಶ ಸೈನ್ಯಕ್ಕೆ ಭಾರತದಿಂದ ಗಿಫ್ಟ್

    ನವದೆಹಲಿ: ಭಾರತೀಯ ಸೇನೆಯು 20 ಕ್ಕೂ ಹೆಚ್ಚು ಮಿಲಿಟರಿ ಕುದುರೆ ಮತ್ತು 10 ಶ್ವಾನಗಳನ್ನು ಬಾಂಗ್ಲಾದೇಶ ಸೈನ್ಯಕ್ಕೆ ಉಡುಗೊರೆಯಾಗಿ ನೀಡಿದೆ.

    ಭಾರತೀಯ ಸೇನೆ ಪಶುವೈದ್ಯಕೀಯ ಮತ್ತು ರಿಮೌಂಟ್ ದಳ ನೆಲಬಾಂಬ್‍ಗಳನ್ನು ಪತ್ತೆ ಹಚ್ಚುವ ತರಬೇತಿ ಪಡೆದಿರುವ 20 ಮಿಲಿಟರಿ ಕುದುರೆ ಮತ್ತು 10 ಶ್ವಾನಗಳನ್ನು ಬಾಂಗ್ಲಾದೇಶ ಸೈನ್ಯಕ್ಕೆ ಭಾರತೀಯ ಸೇನೆ ಉಡುಗೊರೆಯಾಗಿ ನೀಡಿದೆ. ಕಳೆದ ವರ್ಷ ಭಾರತ 10 ಶ್ವಾನಗಳನ್ನು ಬಾಂಗ್ಲಾದೇಶಕ್ಕೆ ಉಡುಗೊರೆಯಾಗಿ ನೀಡಿತ್ತು.

    ಪೆಟ್ರಾಫೋಲ್ ಬೆನಾಪೋಲ್ ಇಂಟಿಗ್ರೇಟೆಡ್ ಪೋಸ್ಟ್ ಬಳಿ ಬಾಂಗ್ಲಾದೇಶ ಸೇನೆಯ ನಿಯೋಗ ಭಾರತೀಯ ಸೇನೆಯಿಂದ ಈ ಉಡುಗೊರೆಯನ್ನು ಸ್ವೀಕರಿಸಿದೆ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸ್ನೇಹ ಸೌಹಾರ್ದವೃದ್ಧಿಗೆ ಈ ಉಡುಗೊರೆ ಸಹಾಯಕಾರಿಯಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ.

     

    ಭಾರತೀಯ ಸೇನಾ ನಿಯೋಗವನ್ನು ಬ್ರಹ್ಮಾಸ್ತ್ರ  ಕಾಪ್ಸ್   ಮುಖ್ಯಸ್ಥ ಮೇಜರ್ ಜನರಲ್ ನರಿಂದರ್ ಸಿಂಗ್ ಕ್ರೌಡ್ ನೇತೃತ್ವದಲ್ಲಿ ಕುದುರೆ ಮತ್ತು ಶ್ವಾನಗಳನ್ನು ಬಾಂಗ್ಲಾದೇಶ ಸೇನೆಗೆ ನೀಡಲಾಯಿತು. ಬಾಂಗ್ಲಾದೇಶ ಸೇನಾ ನಿಯೋಗವನ್ನು ಜೆಸ್ಸೋರ್ ಮೂಲದ ವಿಭಾಗದ ಕಮಾಂಡಿಂಗ್ ಮಾಡುತ್ತಿರುವ ಮೇಜರ್ ಜನರಲ್ ಮೊಹಮ್ಮದ್ ಹುಮಾಯೂನ್ ಕಬೀರ್ ನೇತೃತ್ವ ವಹಿಸಿದ್ದರು.