Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಪಣಜಿ: ಬಾಲಿವುಡ್ ನಟ ಮತ್ತು ಮಾಡೆಲ್ ಮಿಲಿಂದ್ ಸೋಮನ್ ಬೀಚಿನಲ್ಲಿ ಬೆತ್ತಲೇ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ತಮ್ಮ 55ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಮಾಡೆಲ್ ಮಿಲಿಂದ್ ತನ್ನ 55ನೇ ವಯಸ್ಸಿನಲ್ಲೂ ಕೂಡ ಯುವಕರು ನಾಚುವಂತೆ ಬಾಡಿಯನ್ನು ಮಾಡಿದ್ದಾರೆ. ಈಗಲೂ ಕೂಡ ಸಿಕ್ಸ್ ಪ್ಯಾಕ್ ಮಾಡುತ್ತಾರೆ. ಇಂದು 55ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅವರು ಗೋವಾದ ಬೀಚಿನಲ್ಲಿ ಬೆತ್ತಲೆಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Happy birthday to me 😀
.
.
.
55 and running ! 📷 @5Earthy pic.twitter.com/TGoLFQxmui— Milind Usha Soman (@milindrunning) November 4, 2020
ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಬೆತ್ತಲೆ ಫೋಟೋವನ್ನು ಶೇರ್ ಮಾಡಿಕೊಂಡಿರುವ ಮಿಲಿಂದ್, ನನಗೆ ಹುಟ್ಟುಹಬ್ಬದ ಶುಭಾಶಯಗಳು 22 ವರ್ಷ ರನ್ನಿಂಗ್ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಈ ಫೋಟೋವನ್ನು ತಮ್ಮ ಪತ್ನಿ ಅಂಕಿತಾ ಕೊನ್ವಾರ್ ತೆಗೆದಿದ್ದು ಎಂದು ಬರೆದುಕೊಂಡಿದ್ದಾರೆ. ಸದ್ಯ ಮಿಲಿಂದ್ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಮಿಲಿಂದ್ ಅವರ ಈ ರೀತಿ ಫೋಟೋಶೂಟ್ ಮಾಡಿಸುತ್ತಿರುವುದು ಇದೇ ಮೊದಲೇನಲ್ಲ, 90 ದಶಕದಲ್ಲೇ ಟಫ್ ಶೂ ಜಾಹೀರಾತಿಗಾಗಿ ಮಾಜಿ ಮಿಸ್ ಇಂಡಿಯಾ ಮಧು ಸಪ್ರೆ ಜೊತೆ ನಗ್ನವಾಗಿ ಪೋಸ್ ನೀಡಿದ್ದರು. ಅಂದು ಇದು ಬಹಳ ಚರ್ಚೆಯಾಗಿತ್ತು. ಜೊತೆಗೆ ಈ ವಿಚಾರವಾಗಿ ಕೇಸ್ ಕೂಡ ದಾಖಲಾಗಿತ್ತು. ಮಿಲಿಂದ್, ಮಧು ಸಪ್ರೆ, ಛಾಯಾಗ್ರಾಯಕ ಮತ್ತು ಪಬ್ಲಿಶರ್ ಎಲ್ಲರೂ ಈ ಪ್ರಕರಣದಲ್ಲಿ 14 ವರ್ಷ ಕೋರ್ಟ್‍ಗೆ ಅಲೆದಿದ್ದರು. ತದನಂತರ ಪ್ರಕರಣ ಖುಲಾಸೆಯಾಗಿತ್ತು.

ನವದೆಹಲಿ: ಬಾಲಿವುಡ್ ನಟ, ಮಾಡೆಲ್ ಮಿಲಿಂದ್ ಸೋಮನ್ ಅವರ ತಾಯಿ ಉಷಾ ಸೋಮನ್ ಅವರು ಇತ್ತೀಚೆಗಷ್ಟೇ ತಮ್ಮ 81ನೇ ಹುಟ್ಟು ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿಕೊಂಡಿದ್ದು, ಇದೇ ವೇಳೆ 15 ಪುಶ್ ಅಪ್ ಮಾಡಿ ಅಚ್ಚರಿಗೊಳಿಸಿದ್ದಾರೆ. ಸದ್ಯ ಉಷಾ ಸೋಮನ್ ಅವರ ಪುಶ್ ಅಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಮಿಲಿಂದ್ ಸೋಮನ್ ಅವರು ತಮ್ಮ ಫಿಟ್ನೆಸ್ ಹಿಂದಿನ ಪ್ರೇರಣೆಯಾದ ವಿಡಿಯೋವನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಉಷಾ ಸೋಮನ್ ಅವರು ಸೀರೆ ಉಟ್ಟು ಪುಶ್ ಅಪ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ತಮ್ಮ 81ನೇ ವಯಸ್ಸಿನಲ್ಲಿ ಉಷಾ ಸೋಮನ್ ಅವರು 15 ಪುಶ್ ಅಪ್ ಮಾಡಿ ನೋಡುಗರು ಹುಬ್ಬೆರಿಸುವಂತೆ ಮಾಡಿದ್ದಾರೆ.
ಪುತ್ರ ಮಿಲಿಂದ್ ಸೋಮನ್ ಹಾಗೂ ಸೊಸೆ ಅಂಕಿತಾ ಕೊನ್ವಾರ್ ಅವರೊಂದಿಗೆ ಉಷಾ ಸೋಮನ್ ಅವರು ಜೂನ್ 3 ರಂದು ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸ್ವತಃ ಅಂಕಿತಾ ಅವರೇ ಮನೆಯಲ್ಲೇ ಕೇಕ್ ತಯಾರಿಸಿದ್ದಾರೆ. ‘ಲಾಕ್‍ಡೌನ್ ವೇಳೆ ಹುಟ್ಟುಹಬ್ಬದ ಸಂಭ್ರಮಾಚರಣೆ. 15 ಪುಶ್ ಅಪ್ ಮತ್ತು ಅಂಕಿತಾ ತಯಾರಿಸಿದ ಕೇಕ್‍ನೊಂದಿಗೆ ಪಾರ್ಟಿ’ ಎಂದು ಮಿಲಿಂದ್ ಸೋಮನ್ ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಈ ಹಿಂದೆ ಏಪ್ರಿಲ್‍ನಲ್ಲಿ ಅಂಕಿತಾ ಕೊನ್ವಾರ್ ಅವರು ಇನ್‍ಸ್ಟಾದಲ್ಲಿ ಉಷಾ ಸೋಮನ್ ಅವರೊಂದಿಗೆ ಇರುವ ವಿಡಿಯೋವನ್ನು ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಅಂಕಿತಾ ಮತ್ತು ಉಷಾ ಅವರು ಒಂದು ಕಾಲಿನ ಓಟ (ಕುಂಟಾನಿಲ್ಲೆ ಆಟ)ದಲ್ಲಿ ಭಾಗಿಯಾಗಿದ್ದರು. ‘ನಾನು 80 ವರ್ಷದ ವಯಸ್ಸಿನವರೆಗೂ ಬದುಕಿದ್ದರೇ ನನ್ನ ಏಕೈಕ ಆಸೆ ಒಂದೇ, ನಿಮ್ಮಂತೆ ಫಿಟ್ ಆಗಿರಬೇಕು. ನೀವು ಹಲವರಿಗೆ ಸ್ಫೂರ್ತಿಯಾಗಿದ್ದೀರಿ’ ಎಂದು ಅಂಕಿತಾ ಕೊನ್ವಾರ್ ಬರೆದುಕೊಂಡಿದ್ದರು.
ವಿಶ್ವ ಅಮ್ಮಂದಿರ ದಿನದಂದು ವಿಡಿಯೋ ಹಂಚಿಕೊಂಡಿದ್ದ ಮಿಲಿಂದ್ ಸೋನಮ್ ಅವರು 80 ವರ್ಷದ ಉಷಾ ಸೋನಮ್ ಅವರ ವಿಡಿಯೋ ಹಂಚಿಕೊಂಡು ತಮ್ಮ ಫಿಟ್ನೆಸ್ ಹಿಂದಿನ ಸ್ಫೂರ್ತಿ ಇವರೇ ಎಂದು ತಾಯಿದೊಂದಿಗೆ ಪುಶ್ ಅಪ್ ಮಾಡುತ್ತಿದ್ದ ವಿಡಿಯೋ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಉಷಾ ಸೋನಮ್ ಅವರು ಪುತ್ರನೊಂದಿಗೆ ಸ್ಫರ್ಧೆ ನಡೆಸುವಂತೆ ಪುಶ್ ಅಪ್ ಮಾಡಿದ್ದರು. ಮಿಲಿಂದ್ ಸೋನಮ್ ಮಾಡೆಲ್ ಕ್ಷೇತ್ರದಿಂದ ನಟನೆಗೆ ಕಾಲಿಟ್ಟವರು. ಅಷ್ಟೇ ಅಲ್ಲದೇ ಮ್ಯಾರಥಾನ್ ರನ್ನರ್ ಕೂಡ ಆಗಿದ್ದಾರೆ.
ಅಂದಹಾಗೇ, ತಮ್ಮ 54ನೇ ವಯಸ್ಸಿನಲ್ಲಿ ಮಿಲಿಂದ್ ಅವರು 2ನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಗಗನಸಖಿ ಹಾಗೂ ತಮ್ಮ ಬಹುಕಾಲದ ಗೆಳತಿ 26 ವರ್ಷದ ಅಂಕಿತಾ ಕೊನ್ವಾರ್ ಅವರನ್ನು 2018ರಲ್ಲಿ ಕೈ ಹಿಡಿದ್ದರು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಟೀಕೆ ಮಾಡಿದ್ದರೂ ಸಹ ಪ್ರೀತಿಗೆ ಯಾವುದೇ ವಯಸ್ಸಿನ ಮಿತಿ ಇಲ್ಲ ಎಂದು ಪ್ರೂವ್ ಮಾಡ್ತಾ ಮಿಂಚುತ್ತಿದ್ದಾರೆ. ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದು, ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೇ ಮ್ಯಾರಥಾನ್, ಟ್ರಕಿಂಗ್, ಟ್ರಾವೆಲ್ ಮತ್ತು ಹಬ್ಬಗಳು, ವಿಶೇಷ ಸಂದರ್ಭಗಳ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.
It’s never too late.
Usha Soman, my mother.
80 years young.#mothersday #love #mom #momgoals #fitwomen4fitfamilies #fitness #fitnessmotivation #healthylifestyle #fitterin2019 #livetoinspire make every day mother’s day!!!!! ???????????? pic.twitter.com/7aPS0cWxlR
— Milind Usha Soman (@milindrunning) May 12, 2019