Tag: ಮಿಲನಾ ಪ್ರಕಾಶ್

  • ‘ಡೆವಿಲ್ ಶೂಟಿಂಗ್’ಗೂ ಮುನ್ನ ಕುಕ್ಕೆಗೆ ಭೇಟಿ ನೀಡಿದ ದರ್ಶನ್ ಟೀಮ್

    ‘ಡೆವಿಲ್ ಶೂಟಿಂಗ್’ಗೂ ಮುನ್ನ ಕುಕ್ಕೆಗೆ ಭೇಟಿ ನೀಡಿದ ದರ್ಶನ್ ಟೀಮ್

    ಡೆವಿಲ್ (Devil) ಚಿತ್ರತಂಡದಿಂದ ಹೊಸದೊಂದು ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ದರ್ಶನ್ (Darshan) ನಟನೆಯ ಡೆವಿಲ್ ಚಿತ್ರೀಕರಣ ಶುರುವಾಗಿದೆ ಎಂದೇ ಹೇಳಲಾಗಿತ್ತು. ಆದರೆ, ಈವರೆಗೂ ಚಿತ್ರದ ಶೂಟಿಂಗ್ ಮಾಡಿಲ್ಲವೆಂದು ಗೊತ್ತಾಗಿದೆ. ಮೊದಲ ಹಂತದ ಚಿತ್ರೀಕರಣವು ಇದೇ ಸೋಮವಾರದಿಂದ ಬೆಂಗಳೂರಿನ ರಾಕ್ ಲೈನ್ ಸ್ಟುಡಿಯೋದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಚಿತ್ರತಂಡ ಕುಕ್ಕೆ ಸುಬ್ರಮಣ್ಯಂ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದೆ.

    ಈಗಾಗಲೇ ‘ಡೆವಿಲ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡ್ತಿದೆ. ದಚ್ಚು ಹುಟ್ಟುಹಬ್ಬದ ದಿನ ಫ್ಯಾನ್ಸ್‌ಗೆ ಇದೊಂದು ಸರ್ಪ್ರೈಸ್ ಗಿಫ್ಟ್ ಆಗಿತ್ತು. ದರ್ಶನ್ ‘ಡೆವಿಲ್’ನಲ್ಲಿ (Devil Film) ವಿಭಿನ್ನ ಲುಕ್‌ನಲ್ಲಿ ಕಾಣಿಸ್ಕೊಂಡಿದ್ದಾರೆ. ಹಾಗಾದ್ರೆ ಈ ಸಿನಿಮಾದ ಬ್ಲಾಕ್‌ಬಸ್ಟರ್ ಅಪ್‌ಡೇಟ್ ಏನು? ಶೂಟಿಂಗ್ ಶುರುವಾಗೋದು ಯಾವಾಗ? ಆ ಬಗ್ಗೆ ಖುದ್ದು ದರ್ಶನ್ ಬಿಚ್ಚಿಟ್ಟ ಮಾಹಿತಿ ಇಲ್ಲಿದೆ.

    ದರ್ಶನ್ ಹುಟ್ಟುಹಬ್ಬದ ದಿನವೇ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಯ್ತು. ಅಬ್ಬರಿಸುವ ಡೈಲಾಗ್ ಮೂಲಕ ದಚ್ಚು ಎಂಟ್ರಿ ಬಹಳ ಕುತೂಹಲಕಾರಿಯಾಗಿತ್ತು. ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು’ ಎಂಬ ವಿಭಿನ್ನ ಡೈಲಾಗ್ ಹೇಳುವ ಮೂಲಕ ದರ್ಶನ್ ಉಗ್ರವಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ನಿರೀಕ್ಷೆ ದುಪ್ಪಟ್ಟಾಗಿದೆ. ಮಾರ್ಚ್‌ನಿಂದ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದಿದ್ದರು ದರ್ಶನ್. ಅದು ಈಗ ನಿಜವಾಗಿದೆ.

    ಮಿಲನ ಪ್ರಕಾಶ್ (Milana Prakash) ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.

     

    ಡಿಬಾಸ್ ಕೈಯಲ್ಲಿ ಈಗ 9ಕ್ಕೂ ಹೆಚ್ಚು ಚಿತ್ರಗಳಿವೆ. ರಮೇಶ್ ಪಿಳ್ಳೈ, ಶೈಲಜಾ ನಾಗ್ ಮತ್ತು ಬಿ.ಸುರೇಶ, ಮೋಹನ್ ನಟರಾಜನ್, ಸೂರಪ್ಪ ಬಾಬು, ಸಚ್ಚಿದಾನಂದ ಇಂಡುವಾಳ, ಕೆ.ಮಂಜುನಾಥ್, ರಘುನಾಥ್ ಸೋಗಿ, ಮಹೇಶ್ ಸುಖಧರೆ, ರಾಘವೇಂದ್ರ ಹೆಗ್ಡೆ ಹೀಗೆ ಸಾಲು ಸಾಲು ನಿರ್ಮಾಪಕರು ದರ್ಶನ್‌ಗಾಗಿ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ದರ್ಶನ್ ಹುಟ್ಟುಹಬ್ಬದಂದು (ಫೆ.16) ಸಿನಿಮಾಗಳನ್ನು ಘೋಷಣೆ ಕೂಡ ಮಾಡಿದ್ದಾರೆ.

  • ದರ್ಶನ್ ಹುಟ್ಟು ಹಬ್ಬಕ್ಕೆ ‘ಡೆವಿಲ್’ ಚಿತ್ರದ ಫಸ್ಟ್ ಲುಕ್

    ದರ್ಶನ್ ಹುಟ್ಟು ಹಬ್ಬಕ್ಕೆ ‘ಡೆವಿಲ್’ ಚಿತ್ರದ ಫಸ್ಟ್ ಲುಕ್

    ವೈಷ್ಣೋ ಸ್ಟುಡಿಯೋಸ್ ಲಾಂಛನದಲ್ಲಿ ಜೆ.ಜಯಮ್ಮ ಅವರು ನಿರ್ಮಿಸುತ್ತಿರುವ, ಪ್ರಕಾಶ್ ವೀರ್ ನಿರ್ದೇಶನದ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಾಯಕರಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ‘ಡೆವಿಲ್’ ಚಿತ್ರದ  ಫಸ್ಟ್ ಲುಕ್ (First Look) ಟೀಸರ್ ಫೆಬ್ರವರಿ 15ರ‌ ರಾತ್ರಿ 11.59ಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ಫಸ್ಟ್ ಲುಕ್ ಟೀಸರ್ ಗೆ ದರ್ಶನ್ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಮಿಲನ ಚಿತ್ರದ ಖ್ಯಾತಿಯ  ಪ್ರಕಾಶ್ ವೀರ್ ಅವರ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸುತ್ತಿರುವ ‘ಡೆವಿಲ್’ (Devil) ಚಿತ್ರದ ಸ್ಕ್ರಿಪ್ಟ್ ಪೂಜೆ  ಎರಡು ತಿಂಗಳ ಹಿಂದೆ ಸರಳವಾಗಿ ನೆರವೇರಿತ್ತು. ಆದರೆ ಚಿತ್ರತಂಡ ಡೆವಿಲ್ ಚಿತ್ರದ ಕುರಿತಂತೆ ಇನ್ನು ಯಾವುದೇ ಪ್ರಚಾರ ಕಾರ್ಯ ಆರಂಭ ಮಾಡಿರಲಿಲ್ಲ.

    ಮೊದಮೊದಲು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಪೋಸ್ಟರ್ ಹಾಕಿ ಡೆವಿಲ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅಂತ ಹೇಳಿಕೊಂಡಿದ್ದರು.  ಈಗ ಈ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದ್ದಾರೆ ಎಂಬ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಈ  ಮೇಲ್ಕಂಡ ಯಾವುದೇ ವಿಷಯಗಳು ಚಿತ್ರತಂಡದ ಅಧಿಕೃತ ಮಾಹಿತಿ ಆಗಿರುವುದಿಲ್ಲ. ಸದ್ಯದಲ್ಲೇ ನಮ್ಮ ಚಿತ್ರದ ಪ್ರಚಾರ ಕಾರ್ಯ ಆರಂಭಿಸುತ್ತೇವೆ‌. ನಮ್ಮ ವೈಷ್ಣೊ ಸ್ಟುಡಿಯೋಸ್ ಸಂಸ್ಥೆಯ ಮೂಲಕವೇ ಅಧಿಕೃತವಾಗಿ ಡೆವಿಲ್ ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾ ಹೋಗುತ್ತೇವೆ ಎಂದು ನಿರ್ದೇಶಕ ಪ್ರಕಾಶ್ ವೀರ್ ತಿಳಿಸಿದ್ದರು.

     

    ಮಿಲನ ಪ್ರಕಾಶ್ (Milan Prakash) ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಈ ನಡುವೆ ಮತ್ತೊಂದು ಸುದ್ದಿ ಗಾಂಧಿ ನಗರದಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ. ದರ್ಶನ್ ಮತ್ತು ಸುದೀಪ್ ಕಾಂಬಿನೇಷನ್ ನ  ದಿಗ್ಗಜರು 2 ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೆ ಇಬ್ಬರು ಜೊತೆಯಾಗಿ ನಟಿಸುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.