Tag: ಮಿರಾಯ್‌

  • ಹನುಮಾನ್ ಖ್ಯಾತಿಯ ತೇಜ ಸಜ್ಜಾ ನಟನೆಯ ಮಿರಾಯ್ ಟ್ರೈಲರ್ ರಿಲೀಸ್

    ಹನುಮಾನ್ ಖ್ಯಾತಿಯ ತೇಜ ಸಜ್ಜಾ ನಟನೆಯ ಮಿರಾಯ್ ಟ್ರೈಲರ್ ರಿಲೀಸ್

    ನುಮಾನ್ ಚಿತ್ರದ ಮೂಲಕ ಬಾಕ್ಸ್ ಆಫೀಸ್ ಶೇಕ್ ಮಾಡಿದ್ದ ತೇಜ ಸಜ್ಜಾ (Teja Sajja), ಈಗ ಸೂಪರ್ ಯೋಧನಾಗಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಬಹುನಿರೀಕ್ಷಿತ ಮಿರಾಯ್ (Mirai Movie) ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಪ್ರೇಕ್ಷಕರಿಗೆ ಭರ್ಜರಿ ವಿಷ್ಯುವಲ್ ಟ್ರೀಟ್ ನೀಡಿದ್ದಾರೆ. ಮೂರು ನಿಮಿಷ ಏಳು ಸೆಕೆಂಡ್ ಇರುವ ಟ್ರೇಲರ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

    ಸೂಪರ್ ಯೋಧನಾಗಿ ಜನರನ್ನು ರಕ್ಷಿಸಲು ತೇಜ ಸಜ್ಜಾ ಹೋರಾಟ ಮಾಡ್ತಾರೆ. ಅವರ ವಿರುದ್ಧ ಮಂಚು ಮನೋಜ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಭರ್ಜರಿ ಆಕ್ಷನ್ ಜೊತೆಗೆ ಪುರಾಣದ ಕಥೆಯನ್ನು ಸೊಗಸಾಗಿ ಟ್ರೇಲರ್‌ನಲ್ಲಿ ಕಟ್ಟಿಕೊಡಲಾಗಿದೆ. ಧರ್ಮ ರಕ್ಷಕನಾಗಿ ತೇಜ ಸಜ್ಜಾ ಹೋರಾಟ ನಡೆಸುತ್ತಾರೆ. ಟ್ರೇಲರ್ ಕೊನೆಯಲ್ಲಿ ಬರುವ ಭಗವಾನ್ ಶ್ರೀರಾಮ ಝಲಕ್ ಪ್ರೇಕ್ಷಕರಿಗೆ ರೋಮಾಂಚನ ನೀಡಲಿದೆ. ಇದನ್ನೂ ಓದಿ: ರೋಷನ್ ಕೋಟಿ ಕೋಟಿ ಒಡೆಯ ಎಂದವರಿಗೆ ಅನುಶ್ರೀ ಕ್ಲ್ಯಾರಿಟಿ ಏನು?

    ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೀಡಿಯಾ ಫ್ಯಾಕ್ಟರಿಯಡಿ ಟಿ.ಜಿ.ವಿಶ್ವಪ್ರಸಾದ್ ಚಿತ್ರ ನಿರ್ಮಾಣ ಮಾಡಿದ್ದಾರೆ. ರಿತಿಕಾ ನಾಯಕ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಮಿರಾಯ್‌ಗೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶನ ಚಿತ್ರಕ್ಕಿದ್ದು, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರು. ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

    ಸೆಪ್ಟೆಂಬರ್ 12ರಂದು ಮಿರಾಯ್ ಸಿನಿಮಾ 2D ಮತ್ತು 3D ಫಾರ್ಮೆಟ್‌ನಲ್ಲಿ ಏಳು ಭಾಷೆಯಲ್ಲಿ ರಿಲೀಸ್ ಆಗಲಿದೆ. ಕನ್ನಡದಲ್ಲಿ ಈ ಚಿತ್ರವನ್ನು ವಿಕೆ ಫಿಲ್ಮ್ ಬ್ಯಾನರ್ ನಡಿ ಹೊಂಬಾಳೆ ಫಿಲ್ಮ್ ರಿಲೀಸ್ ಮಾಡುತ್ತಿದೆ. ಇದನ್ನೂ ಓದಿ: ನಟ ವಿಷ್ಣುವರ್ಧನ್‌ರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡಿ: ಸಿಎಂಗೆ ಅನಿರುದ್ಧ ಮನವಿ

  • ಮಿರಾಯ್ ಸಿನಿಮಾದ ಮೊದಲ ಹಾಡಿಗೆ ಭರ್ಜರಿ ರೆಸ್ಪಾನ್ಸ್: ಹನುಮಾನ್ ಹುಡುಗನ ಚಿತ್ರ

    ಮಿರಾಯ್ ಸಿನಿಮಾದ ಮೊದಲ ಹಾಡಿಗೆ ಭರ್ಜರಿ ರೆಸ್ಪಾನ್ಸ್: ಹನುಮಾನ್ ಹುಡುಗನ ಚಿತ್ರ

    ‘ಹನುಮಾನ್’ ಖ್ಯಾತಿಯ ನಟ ತೇಜ್ ಸಜ್ಜಾ (Teja Sajja) ನಟನೆಯ ‘ಮಿರಾಯ್’ (Mirai) ಚಿತ್ರ ಮೂಲಕ ಬರಲು ಸಜ್ಜಾಗಿದ್ದಾರೆ. ‘ಹನುಮಾನ್’ ಚಿತ್ರ ಆದ್ಮೇಲೆ ಮಾಡಿರೋ ಮತ್ತೊಂದು ಸೂಪರ್ ಹೀರೋ ಚಿತ್ರವೇ ಇದಾಗಿದೆ. ಬಹುಭಾಷೆಯಲ್ಲಿಯೇ ಬರುತ್ತಿರುವ ಈ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ.

    ವೈಬ್ ಐತೆ ಬೇಬಿ ಎಂದು ನಾಯಕ ತೇಜ್ ಸಜ್ಜಾ ಮತ್ತು ರಿತಿಕಾ ನಾಯಕ್ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಕನ್ನಡದಲ್ಲಿಯೂ ಈ ಹಾಡು ರಿಲೀಸ್ ಆಗಿದ್ದು, ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ. ಗೌರ ಹರಿ ಸಂಗೀತ ನೀಡಿದ್ದಾರೆ, ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದಾರೆ. ಇದನ್ನೂ ಓದಿ: ಡಿ-ಬಾಸ್ ಫ್ಯಾನ್ಸ್‌ನಿಂದ ಅಶ್ಲೀಲ ಮೆಸೇಜ್ – ನಟಿ ರಮ್ಯಾ ಬೆಂಬಲಕ್ಕೆ ನಿಂತ ದೊಡ್ಮನೆ ಕುಟುಂಬ

    ‘ಮಿರಾಯ್’ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ಗಳಿವೆ. ಈ ಆ್ಯಕ್ಷನ್ ಚಿತ್ರವನ್ನ ಕಾರ್ತಿಕ್ ಘಟ್ಟಮನೇನಿ ಡೈರೆಕ್ಷನ್ ಮಾಡಿದ್ದಾರೆ. ವಿಶೇಷವಾಗಿ ಈ ಚಿತ್ರ 2ಡಿ ಮತ್ತು 3ಡಿ ರೂಪದಲ್ಲಿಯೇ ಸಿನಿಮಾ ರಿಲೀಸ್ ಆಗುತ್ತಿದೆ. ಅತೀ ದೊಡ್ಡ ಮಟ್ಟದಲ್ಲಿಯೇ ಈ ಚಿತ್ರ ರಿಲೀಸ್ ಆಗುತ್ತಿದೆ. ಸೆಪ್ಟೆಂಬರ್ 5ರಂದು ಮಿರಾಯ್ ಬಿಡುಗಡೆಯಾಗಲಿದೆ.

    ‘ಮಿರಾಯ್’ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಸಿನಿಮಾ ಹೇಳುತ್ತದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಅಡಿ ಟಿ.ಜಿ.ವಿಶ್ವಪ್ರಸಾದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ: ಕಿರುತೆರೆಯ ಖ್ಯಾತ ನಟ ಚಂದನ್ ನಿರ್ದೇಶನದ ಚಿತ್ರಕ್ಕೆ ಕಿಚ್ಚನ ಕಂಠ

    ಮನೋಜ್ ಮಂಚು ಖಳನಾಯಕನಾಗಿ ಮತ್ತು ನಾಯಕಿಯಾಗಿ ರಿತಿಕಾ ನಾಯಕ್ ನಟಿಸಿರುವ ಈ ಚಿತ್ರದಲ್ಲಿ ಡಿಫರೆಂಟ್ ರೋಲ್‌ನಲ್ಲಿ ತೇಜ್ ಸಜ್ಜಾ ನಟಿಸುತ್ತಿದ್ದಾರೆ. ಕಾರ್ತಿಕ್ ‘ಮಿರಾಯ್’ಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ನಾಗೇಂದ್ರ ತಂಗಳ ಕಲಾ ನಿರ್ದೇಶನ, ಗೌರ ಹರಿ ಸಂಗೀತ ಚಿತ್ರಕ್ಕಿದೆ.

  • ಮತ್ತೆ ಸೂಪರ್ ಹೀರೋ ಆಗಿ ತೇಜ್ ಸಜ್ಜಾ ಎಂಟ್ರಿ; ‘ಮಿರಾಯ್’ ಟೀಸರ್ ರಿಲೀಸ್‌ಗೆ ಡೇಟ್ ಫಿಕ್ಸ್

    ಮತ್ತೆ ಸೂಪರ್ ಹೀರೋ ಆಗಿ ತೇಜ್ ಸಜ್ಜಾ ಎಂಟ್ರಿ; ‘ಮಿರಾಯ್’ ಟೀಸರ್ ರಿಲೀಸ್‌ಗೆ ಡೇಟ್ ಫಿಕ್ಸ್

    ‘ಹನುಮಾನ್’ ಖ್ಯಾತಿಯ ನಟ ತೇಜ್ ಸಜ್ಜಾ (Teja Sajja) ನಟನೆಯ ‘ಮಿರಾಯ್’ ಚಿತ್ರ (Mirai) ಮೂಲಕ ಬರಲು ಸಜ್ಜಾಗಿದ್ದಾರೆ. ‘ಹನುಮಾನ್’ ಚಿತ್ರ ಆದ್ಮೇಲೆ ಮಾಡಿರೋ ಮತ್ತೊಂದು ಸೂಪರ್ ಹೀರೋ ಚಿತ್ರವೇ ಇದಾಗಿದೆ. ಬಹುಭಾಷೆಯಲ್ಲಿಯೇ ಬರುತ್ತಿರುವ ಈ ಸಿನಿಮಾದ ಟೀಸರ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದೆ. ಮೇ 28ಕ್ಕೆ ‘ಮಿರಾಯ್’ ಸಿನಿಮಾದ ಫಸ್ಟ್ ಟೀಸರ್ ಬಿಡುಗಡೆಯಾಗಲಿದೆ. ಇದನ್ನೂ ಓದಿ:ಅಡವಿ ಶೇಷ್, ಮೃಣಾಲ್ ನಟನೆಯ ‘ಡಕಾಯಿಟ್’ ಚಿತ್ರದ ಟೀಸರ್ ಔಟ್

    ‘ಮಿರಾಯ್’ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ಗಳಿವೆ. ಈ ಆ್ಯಕ್ಷನ್ ಚಿತ್ರವನ್ನ ಕಾರ್ತಿಕ್ ಘಟ್ಟಮನೇನಿ ಡೈರೆಕ್ಷನ್ ಮಾಡಿದ್ದಾರೆ. ವಿಶೇಷವಾಗಿ ಈ ಚಿತ್ರ 2ಡಿ ಮತ್ತು 3ಡಿ ರೂಪದಲ್ಲಿಯೇ ಅಲ್ಲಿಯೇ ರಿಲೀಸ್ ಆಗುತ್ತಿದೆ. ಅತೀ ದೊಡ್ಡ ಮಟ್ಟದಲ್ಲಿಯೇ ಈ ಚಿತ್ರ ರಿಲೀಸ್ ಆಗುತ್ತಿದೆ. ಇದೇ ವರ್ಷ ಆಗಸ್ಟ್ 1ರಂದು ‘ಮಿರಾಯ್’ 8 ಭಾಷೆಯಲ್ಲಿಯೇ ತೆರೆಗೆ ಬರಲಿದೆ. ಈ ಮೂಲಕ ತೇಜ್ ಸಜ್ಜಾ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ದರ್ಶನ ಕೊಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಕಾನ್ 2025: ನನಗೆ ಫಹಾದ್ ಫಾಸಿಲ್ ಆ್ಯಕ್ಟಿಂಗ್ ಇಷ್ಟ – ಆಲಿಯಾ ಭಟ್ ಗುಣಗಾನ

    ‘ಮಿರಾಯ್’ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಸಿನಿಮಾ ಹೇಳುತ್ತದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಅಡಿ ಟಿ.ಜಿ.ವಿಶ್ವಪ್ರಸಾದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

    ಮನೋಜ್ ಮಂಚು ಖಳನಾಯಕನಾಗಿ ಮತ್ತು ರಿತಿಕಾ ನಾಯಕ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಡಿಫರೆಂಟ್ ರೋಲ್‌ನಲ್ಲಿ ತೇಜ್ ಸಜ್ಜಾ ನಟಿಸುತ್ತಿದ್ದಾರೆ. ಕಾರ್ತಿಕ್ ‘ಮಿರಾಯ್’ಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ.

  • ಮಂಚು ಮನೋಜ್ ನಟನೆಯ ‘ಮಿರಾಯ್’ ಫಸ್ಟ್ ಲುಕ್ ರಿಲೀಸ್- ಸಾಥ್‌ ನೀಡಿದ ಡಿಬಾಸ್, ಕಿಚ್ಚ

    ಮಂಚು ಮನೋಜ್ ನಟನೆಯ ‘ಮಿರಾಯ್’ ಫಸ್ಟ್ ಲುಕ್ ರಿಲೀಸ್- ಸಾಥ್‌ ನೀಡಿದ ಡಿಬಾಸ್, ಕಿಚ್ಚ

    ತೆಲುಗಿನ ರಾಕಿಂಗ್ ಸ್ಟಾರ್ ಅಂತಾ ಕರೆಯಲ್ಪಡುವ ಮಂಚು ಮನೋಜ್ (Manchu Manoj) ಜನ್ಮದಿನದ (ಮೇ 20) ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿರುವ ಮನೋಜ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 8 ವರ್ಷದ ಬಳಿಕ ಮಂಚು ಮನೋಜ್ ಮತ್ತೆ ಬಣ್ಣ ಹಚ್ಚಿದ್ದಾರೆ. ‘ಹನುಮಾನ್’ ಖ್ಯಾತಿಯ ತೇಜ್ ಸಜ್ಜಾ (Teja Sajja) ನಾಯಕನಾಗಿ ನಟಿಸುತ್ತಿರುವ ಮಿರಾಯ್ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಮನೋಜ್ ಬೆಳ್ಳಿತೆರೆಗೆ ಮತ್ತೆ ಕಂಬ್ಯಾಕ್ ಆಗಿದ್ದಾರೆ.

    ಮಂಚು ಮನೋಜ್ ಜನ್ಮದಿನದ ವಿಶೇಷವಾಗಿ ಮಿರಾಯ್ ಚಿತ್ರತಂಡ ಸ್ಪೆಷಲ್ ವಿಡಿಯೋ ಬಿಡುಗಡೆ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಹಾಗೂ ಕಿಚ್ಚ ಸುದೀಪ್ (Actor Sudeep) ಮನೋಜ್ ಫಸ್ಟ್ ಲುಕ್ ಬಿಡುಗಡೆ ಮಾಡಿ ಪ್ರೀತಿಯ ಸಹೋದರನಿಗೆ ಸೋಶಿಯಲ್‌ ಮೀಡಿಯಾದಲ್ಲಿ ಶುಭಾಶಯ ಕೋರಿದ್ದಾರೆ. ‘ದಿ ಬ್ಲ್ಯಾಕ್ ಸ್ವೋರ್ಡ್’ ಟೈಟಲ್ ನಡಿ ರಿಲೀಸ್ ಆಗಿರುವ ಫಸ್ಟ್ ಲುಕ್ ನಲ್ಲಿ ಮನೋಜ್ ಉದ್ದ ಕೂದಲು ಬಿಟ್ಟು ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಭರ್ಜರಿ ಆಕ್ಷನ್ಸ್ ಮೂಲಕ ಗಮನ ಸೆಳೆಯುವ ಮಂಚು ಮನೋಜ್ ಡಬಲ್ ಶೇಡ್ ನಲ್ಲಿ ನಟಿಸಿದ್ದಾರೆ.

    ‘ಮಿರಾಯ್’ (Mirai Film) ಸಿನಿಮಾಗೆ ಕಾರ್ತಿಕ್ ಗಟ್ಟಮ್ನೇನಿ ಆಕ್ಷನ್ ಕಟ್ ಹೇಳಿದ್ದಾರೆ. ಮಿರಾಯ್ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಬಿಚ್ಚಿಡುವ ಕಥೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿಜಿ ವಿಶ್ವಪ್ರಸಾದ್ ‘ಮಿರಾಯ್’ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

    ಕಾರ್ತಿಕ್ ಗಟ್ಟಮ್ನೇನಿ ಮಿರಾಯ್‌ಗೆ ಚಿತ್ರಕಥೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದು, ಮಣಿಬಾಬು ಕರಣಂ ಅವರು ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶಕನ, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರಾಗಿದ್ದಾರೆ. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.

    ‘ಮಿರಾಯ್’ ಸಿನಿಮಾವನ್ನು 2 ಡಿ ಹಾಗೂ 3 ಡಿ ವರ್ಷನ್ ನಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಮುಂದಿನ ವರ್ಷದ ಏಪ್ರಿಲ್ 18ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್  ಹಾಕಿಕೊಂಡಿದೆ.