Tag: ಮಿಯಾಮಿ

  • ವೈದ್ಯರು ನಮ್ಮ ಪಾಲಿನ ದೇವರು, ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚಿರಋಣಿ: ಗೀತಾ ಶಿವರಾಜ್‌ಕುಮಾರ್

    ವೈದ್ಯರು ನಮ್ಮ ಪಾಲಿನ ದೇವರು, ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚಿರಋಣಿ: ಗೀತಾ ಶಿವರಾಜ್‌ಕುಮಾರ್

    ವಾಷಿಂಗ್ಟನ್: ಅಭಿಮಾನಿಗಳು ನಮಗೆ ದೇವರ ರೀತಿ. ಅದೇ ರೀತಿ ಇದೀಗ ಡಾಕ್ಟರ್ ಕೂಡ ನಮ್ಮ ಪಾಲಿಗೆ ದೇವರಾಗಿದ್ದಾರೆ ಎಂದು ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ (Geetha Shiva Rajkumar) ಹೇಳಿದ್ದಾರೆ.

    ಶಿವರಾಜ್‌ಕುಮಾರ್ ಸರ್ಜರಿ ಯಶಸ್ವಿಯಾದ ಬಳಿಕ ವೀಡಿಯೋ ಮೂಲಕ ಮಾತನಾಡಿದ ಅವರು, ಶಿವಣ್ಣ ಆಪರೇಷನ್ ಯಶಸ್ವಿಯಾಗಿದೆ. ಈಗ ಶಿವಣ್ಣ ಅವರನ್ನು ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ಶಿವರಾಜ್‌ಕುಮಾರ್‌ಗಾಗಿ ನೀವೆಲ್ಲರೂ ಪೂಜೆಗಳನ್ನು ಮಾಡಿ ಅವರಿಗೆ ಒಳ್ಳೆಯದಾಗಲಿ ಎಂದು ಬಯಸಿದ್ದೀರಿ, ಆಶೀರ್ವಾದ ಕೂಡ ಮಾಡಿದ್ದೀರಿ. ಇವತ್ತು ಶಿವಣ್ಣ ಅವರ ಆಪರೇಷನ್ ಯಶಸ್ವಿಯಾಗಲು ಡಾ. ಮನೋಹರನ್ ಅವರೇ ಕಾರಣ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಶಿವಣ್ಣ ಸರ್ಜರಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ, ಆರೋಗ್ಯ ಸ್ಥಿರ: ಡಾ.ಮುರುಗೇಶ್ ಮನೋಹರನ್

    ಸದ್ಯದಲ್ಲೇ ಶಿವರಾಜ್‌ಕುಮಾರ್ ಅವರು ನಿಮ್ಮ ಜೊತೆ ಮಾಡನಾಡಲಿದ್ದಾರೆ. ಆಪರೇಷನ್‌ನಿಂದಾಗಿ ಸುಸ್ತಾಗಿರುವುದರಿಂದ ಇನ್ನು 3-4 ದಿನಗಳಲ್ಲಿ ನಿಮ್ಮ ಜೊತೆ ಮಾತನಾಡಲಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಯಾವಾಗಲು ಚಿರಋಣಿ. ಇದನ್ನು ನಾನು ಜನ್ಮದಲ್ಲಿ ಮರೆಯಲ್ಲ ಎಂದು ಗೀತಕ್ಕ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ನ ಶಿವಣ್ಣನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

  • ಶಿವಣ್ಣ ಸರ್ಜರಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ, ಆರೋಗ್ಯ ಸ್ಥಿರ: ಡಾ.ಮುರುಗೇಶ್ ಮನೋಹರನ್

    ಶಿವಣ್ಣ ಸರ್ಜರಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ, ಆರೋಗ್ಯ ಸ್ಥಿರ: ಡಾ.ಮುರುಗೇಶ್ ಮನೋಹರನ್

    – ವೀಡಿಯೋ ಮೂಲಕ ಹೆಲ್ತ್ ಅಪ್ಡೇಟ್ ನೀಡಿದ ಡಾಕ್ಟರ್

    ವಾಷಿಂಗ್ಟನ್: ಡಾ. ಶಿವರಾಜ್‌ಕುಮಾರ್ (Shiva Rajkumar) ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸದ್ಯ ಶಿವಣ್ಣ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಿಯಾಮಿ ಕ್ಯಾನ್ಸರ್‌ ಇನ್ಸ್ಟಿಟ್ಯೂಟ್‌ ವೈದ್ಯ ಡಾ.ಮುರುಗೇಶ್ ಮನೋಹರನ್ (Murugesh Manoharan) ತಿಳಿಸಿದ್ದಾರೆ.

    ಶಸ್ತ್ರಚಿಕಿತ್ಸೆ ಬಳಿಕ ವೀಡಿಯೋ ಮೂಲಕ ಮಾತನಾಡಿದ ಅವರು, ದೇವರ ದಯೆಯಿಂದ ಹಾಗೂ ಹಲವರ ಆಶೀರ್ವಾದ ಹಾಗೂ ಪ್ರಾರ್ಥನೆಯಿಂದ ಸರ್ಜರಿ ಯಶಸ್ವಿಯಾಗಿದೆ. ಪ್ರಮುಖ ಹಂತ ಪೂರ್ಣಗೊಂಡಿದೆ. ಶಿವಣ್ಣ ಚೆನ್ನಾಗಿ ಸ್ಪಂದಿಸಿದ್ದಾರೆ. ಸರ್ಜರಿ ನಂತರವೂ ಆರಾಮಾಗಿದ್ದಾರೆ. ಅವರು ಶೀಘ್ರವೇ ಸಂಪೂರ್ಣ ಚೇತರಿಕೆ ಕಾಣಲಿದ್ದಾರೆ. ನಿಮ್ಮ ಬೆಂಬಲಕ್ಕೆ ಧನ್ಯವಾದ ಎಂದು ಹೇಳಿದ್ದಾರೆ. ಇದನ್ನೂ ಓದಿ: Hand Luggage On Flights | ಇನ್ಮುಂದೆ 7 ಕೆಜಿ ಮೀರದ ಕೇವಲ 1 ಬ್ಯಾಗ್‌ಗೆ ಮಾತ್ರ ಅನುಮತಿ

    ಡಾ. ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು, ಸಹೋದ್ಯೋಗಿಗಳು, ಶುಭಚಿಂತಕರು ಮತ್ತು ಮಾಧ್ಯಮಗಳಿಗೆ ಈ ಸಂದರ್ಭದಲ್ಲಿ ತೋರಿಸಿದ ನಿರಂತರ ಬೆಂಬಲ, ಪ್ರಾರ್ಥನೆ ಮತ್ತು ಮೆಚ್ಚುಗೆ ಸಂದೇಶಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹವು ಡಾ. ಶಿವರಾಜ್‌ಕುಮಾರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಶಕ್ತಿ ಒದಗಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ನ ಶಿವಣ್ಣನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

  • ಸ್ಯಾಂಡಲ್‌ವುಡ್‌ನ ಶಿವಣ್ಣನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ಸ್ಯಾಂಡಲ್‌ವುಡ್‌ನ ಶಿವಣ್ಣನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    – 6 ಗಂಟೆಗಳ ಕಾಲ ನಡೆದ ಆಪರೇಷನ್

    ವಾಷಿಂಗ್ಟನ್: ಸ್ಯಾಂಡಲ್‌ವುಡ್‌ನ (Sandalwood) ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ (Shiva Rajkumar) ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸಿಟ್ಯೂಟ್‌ನಲ್ಲಿ (Miami Cancer Institute) ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸುಮಾರು 6 ಗಂಟೆಗಳ ಕಾಲ ತಜ್ಞ ವೈದ್ಯರು ಶಿವಣ್ಣನಿಗೆ ಆಪರೇಷನ್ ಮಾಡಿದ್ದಾರೆ.

    ಭಾರತೀಯ ಮೂಲದ ತಜ್ಞ ವೈದ್ಯ ಡಾ. ಮುರುಗೇಶ್ ನೇತೃತ್ವದಲ್ಲಿ ಮಿಯಾಮಿ ಆಸ್ಪತ್ರೆಯಲ್ಲಿ ಶಿವಣ್ಣನಿಗೆ ಆಪರೇಷನ್ ಮಾಡಲಾಗಿದೆ. ಭಾರತೀಯ ಕಾಲಮಾನ ಮಂಗಳವಾರ ರಾತ್ರಿ 11:30ರ ಸುಮಾರಿಗೆ ಶಸ್ತ್ರಚಿಕಿತ್ಸೆ ಮುಗಿದಿದೆ. ಅಮೆರಿಕದ ಕಾಲಮಾನ ಬೆಳಗ್ಗೆ 8 ಗಂಟೆಗೆ ಅಂದರೆ ಭಾರತೀಯ ಕಾಲಮಾನದ ಪ್ರಕಾರ 6 ಗಂಟೆಗೆ ಆಪರೇಷನ್ ಥಿಯೇಟರ್‌ಗೆ ಶಿವಣ್ಣರನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸುಮಾರು 6 ಗಂಟೆಗಳ ಕಾಲ ಸರ್ಜರಿ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಶಿವಣ್ಣನೊಂದಿಗೆ ಪತ್ನಿ ಗೀತಾ, ಪುತ್ರಿ ನಿವೇದಿತಾ, ಬಾಮೈದ ಮಧು ಬಂಗಾರಪ್ಪ ಜೊತೆಗಿದ್ದಾರೆ. ಇದನ್ನೂ ಓದಿ: ಪೂಂಚ್‌ನಲ್ಲಿ 300 ಅಡಿ ಆಳದ ಕಂದಕಕ್ಕೆ ಬಿತ್ತು ಸೇನಾ ವಾಹನ – ಚಿಕ್ಕೋಡಿ ಯೋಧ ಹುತಾತ್ಮ

    ಇನ್ನು ಕ್ಯಾನ್ಸರ್ ಚಿಕಿತ್ಸೆಗೊಳಾಗಿರುವ ಶಿವಣ್ಣನಿಗೆ ಆಸ್ಪತ್ರೆಯಲ್ಲೇ ಇನ್ನೊಂದು ವಾರ ಚಿಕಿತ್ಸೆ ಮುಂದುವರೆಯಲಿದೆ. ನುರಿತ ವೈದ್ಯರ ನಿಗಾದಲ್ಲಿ ಶಿವಣ್ಣ ಇರಲಿದ್ದಾರೆ. ಬಳಿಕ ಮನೆಗೆ ಶಿಫ್ಟ್ ಆಗಲಿದ್ದಾರೆ. ಇನ್ನೊಂದು ತಿಂಗಳು ಅಮೆರಿಕದಲ್ಲೇ ಇರುವ ಶಿವರಾಜ್‌ಕುಮಾರ್ ಜನವರಿ 26ರಂದು ಭಾರತಕ್ಕೆ ಮರಳಲಿದ್ದಾರೆ. ಇದನ್ನೂ ಓದಿ: ಫೋನ್ ಮಾಡಿ ಶಿವಣ್ಣ ಆರೋಗ್ಯ ವಿಚಾರಿಸಿದ ಸಿಎಂ

  • ಶಿವಣ್ಣಗೆ ಇಂದು ಶಸ್ತ್ರಚಿಕಿತ್ಸೆ – ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ಪೂಜೆ

    ಶಿವಣ್ಣಗೆ ಇಂದು ಶಸ್ತ್ರಚಿಕಿತ್ಸೆ – ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ಪೂಜೆ

    – ಘಾಟಿ ದೇವಾಲಯದಲ್ಲೂ ಅಭಿಮಾನಿಗಳಿಂದ ಪೂಜೆ

    ರಾಮನಗರ: ಇಂದು (ಮಂಗಳವಾರ) ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shiva Rajkumar) ಶಸ್ತ್ರಚಿಕಿತ್ಸೆ ಯಶಸ್ವಿಯಾಗಲೆಂದು ಶಿವಣ್ಣ ಅಭಿಮಾನಿಗಳು ಪೂಜೆ ನೆರವೇರಿಸಿದ್ದಾರೆ.

    ರಾಜ್ಯದ ಹಲವೆಡೆ ಶಿವಣ್ಣನ ಆರೋಗ್ಯಕ್ಕೆ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದು, ಚನ್ನಪಟ್ಟಣದ (Channapatna) ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದಲ್ಲೂ ಅಭಿಮಾನಿಗಳು ಶಿವಣ್ಣನ ಹೆಸರಿನಲ್ಲಿ ಅರ್ಚನೆ ಮಾಡಿಸಿ ಪ್ರಸಾದ ಹಂಚಿಕೆ ಮಾಡಿದ್ದಾರೆ. 101 ಈಡುಗಾಯಿ ಹೊಡೆದು ಶಿವರಾಜ್‌ಕುಮಾರ್ ಪೋಟೋ ಹಿಡಿದು ಶುಭಹಾರೈಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ಸದಸ್ಯರ ಆಯ್ಕೆಗೆ ಕಾಂಗ್ರೆಸ್‌ ಆಕ್ಷೇಪ

    ಮೂತ್ರನಾಳ ಸಮಸ್ಯೆಯಿಂದ ಬಳಲುತ್ತಿರುವ ಶಿವರಾಜ್‌ಕುಮಾರ್ ಇಂದು ಅಮೆರಿಕಾದಲ್ಲಿ ಶಸ್ತçಚಿಕಿತ್ಸೆಗೆ ಒಳಗಾಗುತ್ತಿರುವ ಹಿನ್ನೆಲೆ ಶಿವಣ್ಣ ಆರೋಗ್ಯ ಚೇತರಿಕೆಗೆ ರಾಜ್ಯದ ಹಲವೆಡೆ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ರೇಪ್ & ಮರ್ಡರ್ ಕೇಸ್ | ಘಟನಾ ಸ್ಥಳದಲ್ಲಿ ಪ್ರತಿರೋಧದ ಪುರಾವೆ ಇಲ್ಲ – ಸಿಬಿಐಗೆ CFSL ವರದಿ ಸಲ್ಲಿಕೆ

    ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲೂ ಶಿವಣ್ಣ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಶಿವರಾಜ್ ಕುಮಾರ್ ಅಭಿಮಾನಿಗಳು ಹಾಗೂ ನವಕರ್ನಾಟಕ ಯುವಶಕ್ತಿ ಸಂಘಟನೆ ವತಿಯಿಂದ ಶಿವರಾಜ್ ಕುಮಾರ್ ಪೋಟೋ ಇಟ್ಟು ಸಂಕಲ್ಪ ಮಾಡಿಸುವ ಮೂಲಕ ದೇವರಲ್ಲಿ ಶಿವರಾಜ್ ಕುಮಾರ್‌ ಅವರಿಗೆ ಆರೋಗ್ಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿಕೊಂಡರು. ಬೇಗ ಗುಣಮುಖರಾಗಿ ತವರಿಗೆ ವಾಪಾಸ್ಸಾಗಲಿ ಎಂದು ಅಭಿಮಾನಿಗಳು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯಲ್ಲಿ 8 ತಿಂಗಳ ಅವಧಿಯಲ್ಲಿ 23 ಬಾಣಂತಿಯರ ಸಾವು

  • ವಿಶ್ವದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಶಿವಣ್ಣಗೆ ಚಿಕಿತ್ಸೆ – 1 ತಿಂಗಳ ಬಳಿಕ ರಿಟರ್ನ್‌

    ವಿಶ್ವದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಶಿವಣ್ಣಗೆ ಚಿಕಿತ್ಸೆ – 1 ತಿಂಗಳ ಬಳಿಕ ರಿಟರ್ನ್‌

    ಬೆಂಗಳೂರು: ನಟ ಶಿವರಾಜ್ ಕುಮಾರ್ (Shivaraj Kumar) ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಗೆ ಬುಧವಾರ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಅಮೆರಿಕಗೆ (USA) ಪ್ರಯಾಣ ಬೆಳೆಸಿದ್ದ ಶಿವರಾಜ್‌ಕುಮಾರ್‌ಗೆ, ಪತ್ನಿ ಗೀತಾ ಶಿವರಾಜ್‌ಕುಮಾರ್, ಪುತ್ರಿ ನಿವೇದಿತಾ ಸಾಥ್ ನೀಡಿದರು.

    ಡಿಸೆಂಬರ್ 24ರಂದು ಫ್ಲೋರಿಡಾ ರಾಜ್ಯದ ಮಿಯಾಮಿಯಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ (MCI) ಆಸ್ಪತ್ರೆಯಲ್ಲಿ ಶಿವರಾಜ್‌ಕುಮಾರ್ ಅವರಿಗೆ ಸರ್ಜರಿ ನಡೆಯಲಿದೆ. ಡಾಕ್ಟರ್ ಮುರುಗೇಶ್ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಬರೋಬ್ಬರಿ ಒಂದು ತಿಂಗಳು ಕಾಲ ಅಮೆರಿಕದಲ್ಲೇ ಶಿವರಾಜ್‌ಕುಮಾರ್ ಉಳಿದುಕೊಳ್ಳಲಿದ್ದಾರೆ.

    ಜನವರಿ 25ರಂದು ಅಮೆರಿಕದಿಂದ ಶಿವರಾಜ್‌ಕುಮಾರ್ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರು ಬಿಡುವ ಮುನ್ನ ಶಿವಣ್ಣ ಭಾವುಕರಾಗಿದ್ದರು. ಒಂದು ತಿಂಗಳ ಕಾಲ ಭಾರತವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

     

    ಪ್ರತಿಷ್ಠಿತ ಕ್ಯಾನ್ಸರ್‌ ಆಸ್ಪತ್ರೆ:
    ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್‌ (Miami Cancer Institute) ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ (Operation) ದಾಖಲಾಗಲಿರುವ ಶಿವರಾಜ್‌ಕುಮಾರ್‌ಗೆ ಅಲ್ಲಿ ಭಾರತ ಮೂಲದ ಮುರುಗೇಶ್ ನೇತೃತ್ವದ ತಜ್ಞವೈದ್ಯರ ತಂಡದಿಂದ ಚಿಕಿತ್ಸೆ ನಡೆಯಲಿದೆ.  ಇದನ್ನೂ ಓದಿ: ಶಿವಣ್ಣ ಫೈಟರ್, ಅವರು ಯಾವತ್ತೂ ಕುಗ್ಗಿಲ್ಲ, ಕುಗ್ಗೋದು ಇಲ್ಲ: ಸುದೀಪ್

    ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್‌ ನೆಕ್ಷ್ಟ್‌ ಜನರೇಶನ್ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯಾಗಿದ್ದು, ವೈದ್ಯಕೀಯ ಆರೈಕೆ, ಸಂಶೋಧನೆ, ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ.

    ವಿಶ್ವಮಾನ್ಯತೆ ಪಡೆದ ಆಂಕೋಲಾಜಿಸ್ಟ್‌ಗಳೆಂದು ಕರೆಯಲಾಗುವ ತಜ್ಞ ವೈದ್ಯರ ತಂಡ ಇದೆ. ಇವರು ಜಗತ್ತಿನ ಉನ್ನತ ಕ್ಯಾನ್ಸರ್ ಕೇಂದ್ರಗಳಿಂದ ನೇಮಕಗೊಂಡ ವೈದ್ಯರುಗಳಾಗಿದ್ದು, ಇಲ್ಲಿ ಶಸ್ತ್ರ ಚಿಕಿತ್ಸೆಯಿಂದ ಗುಣವಾಗುವ ಪ್ರಮಾಣ ಹೆಚ್ಚಿದೆ. ಈ ಕಾರಣಕ್ಕೆ ಹಲವು ದೇಶಗಳಿಂದ ಚಿಕಿತ್ಸೆಗೆ ಇಲ್ಲಿಗೆ ಆಗಮಿಸುತ್ತಿದ್ದಾರೆ.

    ಅತ್ಯಾಧುನಿಕ ಸುಧಾರಿತ ಲೇಸರ್ ತಂತ್ರಜ್ಞಾನ ಒಂದೇ ಸ್ಥಳದಲ್ಲಿ ಲಭ್ಯವಿದ್ದು ಪ್ರತಿಯೊಂದು ವಿಧದ ಕ್ಯಾನ್ಸರ್ ಚಿಕಿತ್ಸೆಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಕಾರಣಕ್ಕೆ ಶಿವರಾಜ್ ಕುಮಾರ್ ಭರ್ತಿ ಒಂದು ತಿಂಗಳುಗಳ ಕಾಲ ಅಲ್ಲೇ ಚಿಕಿತ್ಸೆ ಪಡೆದು ಸ್ವದೇಶಕ್ಕೆ ಮರಳಲಿದ್ದಾರೆ.

  • 271 ಪ್ರಯಾಣಿಕರಿದ್ದ ವಿಮಾನದಲ್ಲಿ ಪೈಲಟ್‌ಗೆ ಹೃದಯಾಘಾತ – ತುರ್ತು ಭೂಸ್ಪರ್ಶ ಮಾಡಿದ ಸಹ ಪೈಲಟ್‌ಗಳು

    271 ಪ್ರಯಾಣಿಕರಿದ್ದ ವಿಮಾನದಲ್ಲಿ ಪೈಲಟ್‌ಗೆ ಹೃದಯಾಘಾತ – ತುರ್ತು ಭೂಸ್ಪರ್ಶ ಮಾಡಿದ ಸಹ ಪೈಲಟ್‌ಗಳು

    ವಾಷಿಂಗ್ಟನ್: 271 ಪ್ರಯಾಣಿಕರೊಂದಿಗೆ ಮಿಯಾಮಿಯಿಂದ (Miami) ಚಿಲಿಗೆ ತೆರಳುತ್ತಿದ್ದ ವಿಮಾನದಲ್ಲಿ (Flight)  ಪೈಲಟ್ (Pilot) ಬಾತ್‌ರೂಂನಲ್ಲಿ ಹೃದಯಾಘಾತದಿಂದ (Heart Attack) ಕುಸಿದು ಬಿದ್ದು, ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಘಟನೆ ಬಳಿ ತಕ್ಷಣ ಸಹ ಪೈಲಟ್ ವಿಮಾನವನ್ನು ಪನಾಮದಲ್ಲಿ (Panama) ತುರ್ತು ಭೂಸ್ಪರ್ಶ ಮಾಡಿದ್ದಾರೆ.

    ವರದಿಗಳ ಪ್ರಕಾರ ಸ್ಯಾಂಟಿಯಾಗೊಗೆ ಹೊರಟಿದ್ದ ಎಲ್‌ಎಟಿಎಎಮ್ ವಿಮಾನದ ಕಮಾಂಡರ್ ಇವಾನ್ ಆಂಡೌರ್ (56) ಬಾತ್‌ರೂಂಗೆ ತೆರಳಿದ್ದಾಗ ತೀವ್ರ ಹೃದಯ ಸ್ತಂಭನವಾಗಿತ್ತು. ತಕ್ಷಣ ವಿಮಾನದ ಸಹ ಪೈಲಟ್‌ಗಳು ಪನಾಮ ನಗರದ ಟೊಕುಮೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ.

    ತಕ್ಷಣ ಪೈಲಟ್‌ಗೆ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ ಮಾಡಲಾಯಿತು. ದುರದೃಷ್ಟವಶಾತ್ ಅಷ್ಟರಲ್ಲಾಗಲೇ ಪೈಲಟ್ ಸಾವನ್ನಪ್ಪಿದ್ದರು. ಇತ್ತ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಪನಾಮ ಸಿಟಿಯ ಹೋಟೆಲ್‌ಗಳಲ್ಲಿ ವಸತಿ ಕಲ್ಪಿಸಿ ಬಳಿಕ ಮಂಗಳವಾರ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಗೊಳಿಸಲಾಯಿತು. ಇದನ್ನೂ ಓದಿ: ಚಂದ್ರಯಾನ-3: ಇಂದು ಮಧ್ಯಾಹ್ನ 1 ಗಂಟೆಗೆ ಮಹತ್ವದ ಬೆಳವಣಿಗೆ

    ದುರದೃಷ್ಟಕರ ಘಟನೆಯ ಬಗ್ಗೆ ಎಲ್‌ಎಟಿಎಎಮ್ ಗ್ರೂಪ್ ತೀವ್ರ ದುಃಖ ವ್ಯಕ್ತಪಡಿಸಿದೆ. ಅಗಲಿದ ಪೈಲಟ್‌ನ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದೆ. ಇದನ್ನೂ ಓದಿ: ಸೇನೆಗೆ ಪ್ರಬಲ ಶಸ್ತ್ರಾಸ್ತ್ರಗಳ ಬಲ ನೀಡಿದ್ದ DRDO ಮಾಜಿ ಮುಖ್ಯಸ್ಥ ನಿಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಡಿಯೋ: ಫ್ಲೋರಿಡಾದಲ್ಲಿ ಬ್ರಿಡ್ಜ್ ಕುಸಿದು ಬಿದ್ದ ದೃಶ್ಯ ಡ್ಯಾಶ್‍ಕ್ಯಾಮ್ ನಲ್ಲಿ ಸೆರೆ

    ವಿಡಿಯೋ: ಫ್ಲೋರಿಡಾದಲ್ಲಿ ಬ್ರಿಡ್ಜ್ ಕುಸಿದು ಬಿದ್ದ ದೃಶ್ಯ ಡ್ಯಾಶ್‍ಕ್ಯಾಮ್ ನಲ್ಲಿ ಸೆರೆ

    ಫ್ಲೋರಿಡಾ: ಕಳೆದ ವಾರ ಫ್ಲೋರಿಡಾದಲ್ಲಿ ಪಾದಚಾರಿ ಸೇತುವೆ ಕುಸಿದು 6 ಮಂದಿ ಸಾವುನ್ನಪ್ಪಿದ್ದು, ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ದಕ್ಷಿಣ ಫ್ಲೋರಿಡಾದ ಮಿಯಾಮಿ ವಿಶ್ವವಿದ್ಯಾಲಯದ ಬಳಿ ಮಾರ್ಚ್ 15 ರಂದು ಸೇತುವೆ ಕುಸಿದಿತ್ತು. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿ, ಹಲವು ವಾಹನಗಳು ಜಖಂಗೊಂಡಿದ್ದವು.

    174 ಅಡಿ ಎತ್ತರವಿರುವ ಸೇತುವೆಯು ಫ್ಲೋರಿಡಾ ವಿಶ್ವವಿದ್ಯಾಲಯ ಮತ್ತು ಸ್ವೀಟ್‍ವಾಟರ್ ನಗರವನ್ನ ಸಂಪರ್ಕಿಸಲು ನಿರ್ಮಾಣ ಮಾಡಲಾಗಿತ್ತು. ಅಲ್ಲದೇ ಮಾರ್ಚ್ 10ರಂದು ಸೇತುವೆಯನ್ನ ಲೋಕಾರ್ಪಣೆ ಮಾಡಲಾಗಿತ್ತು. ವಾಹನ ದಟ್ಟಣೆ ಇರುವ ರಸ್ತೆಯನ್ನ ದಾಟಲು ಜನರಿಗೆ ಅನುಕೂಲವಾಗಲು ಈ ಸೇತುವೆಯನ್ನ ನಿರ್ಮಿಸಲಾಗಿತ್ತು.

     

    ಸುಮಾರು 14.2 ಮಿಲಿಯನ್ ಡಾಲರ್ (ಅಂದಾಜು 92 ಕೋಟಿ ರೂ.) ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಸೇತುವೆ, ಚಂಡಮಾರುತಗಳನ್ನ ಸಹಿಸಬಲ್ಲ ಮತ್ತು 100 ವರ್ಷಗಳ ಕಾಲ ಬಾಳಿಕೆ ಬರುವ ಹಾಗೆ ನಿರ್ಮಿಸಲಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿತ್ತು.

    ವಿಪರ್ಯಾಸವೆಂಬಂತೆ ಸೇತುವೆ ಲೋಕಾರ್ಪಣೆಗೊಂಡ ಕೆಲವೇ ದಿನಗಳಲ್ಲಿ ಕುಸಿದು ಬಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಸದ್ಯ ರಾಷ್ಟ್ರೀಯ ಸಾರಿಗೆ ಮತ್ತು ಸುರಕ್ಷತಾ ಮಂಡಳಿಯ ತಂಡವು ಸೇತುವೆ ಕುಸಿದ ಕಾರಣದ ಬಗ್ಗೆ ತನಿಖೆ ನಡೆಸುತ್ತಿದೆ.

    ಕಳೆದ ವರ್ಷ ಆಗಸ್ಟ್ ನಲ್ಲಿ ಫ್ಲೋರಿಡಾ ವಿಶ್ವವಿದ್ಯಾಲಯದ 18 ವರ್ಷದ ವಿದ್ಯಾರ್ಥಿನಿಯೊಬ್ಬರು ರಸ್ತೆ ದಾಟುವ ವೇಳೆ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದರು. ಘಟನೆಯ ಬಳಿಕ ವೇಗವರ್ಧಿತ ಸೇತುವೆ ನಿರ್ಮಾಣ ತಂತ್ರಜ್ಞಾನವನ್ನು ಬಳಸಿ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು.

    https://www.instagram.com/p/BgWp1fCBPqG/?taken-at=249903486

  • ಕಳೆದ ವಾರವಷ್ಟೇ ಲೋಕಾರ್ಪಣೆಗೊಂಡಿದ್ದ ಪಾದಚಾರಿ ಸೇತುವೆ ಕುಸಿದು 4 ಮಂದಿ ಸಾವು

    ಕಳೆದ ವಾರವಷ್ಟೇ ಲೋಕಾರ್ಪಣೆಗೊಂಡಿದ್ದ ಪಾದಚಾರಿ ಸೇತುವೆ ಕುಸಿದು 4 ಮಂದಿ ಸಾವು

    ಫ್ಲೋರಿಡಾ: ಕಳೆದ ವಾರವಷ್ಟೇ ಲೋಕಾರ್ಪಣೆಗೊಂಡಿದ್ದ ಪಾದಚಾರಿ ಸೇತುವೆ ಕುಸಿದು ನಾಲ್ಕು ಮಂದಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಫ್ಲೋರಿಡಾದ ಮಿಯಾಮಿ ವಿಶ್ವವಿದ್ಯಾಲಯದ ಬಳಿ ಗುರುವಾರದಂದು ನಡೆದಿದೆ. ಸೇತುವೆಯ ಅಡಿಯಲ್ಲಿ 8 ಕಾರುಗಳು ಹಾಗೂ ಇನ್ನೂ ಹಲವಾರು ಮಂದಿ ಸಿಲುಕಿದ್ದಾರೆಂದು ವರದಿಯಾಗಿದೆ.

    ಸೇತುವೆಯ ಅಡಿಯಲ್ಲಿ ಸಿಲುಕಿ ಕಾರುಗಳು ಜಖಂಗೊಂಡಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಹತ್ತಿರದ ಆಸ್ಪತ್ರೆಗೆ ಸೇರಿಸಿಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

    173 ಅಡಿ ಎತ್ತರವಿರುವ ಸೇತುವೆಯು ಫ್ಲೋರಿಡಾ ವಿಶ್ವವಿದ್ಯಾಲಯ ಮತ್ತು ಸ್ವೀಟ್‍ವಾಟರ್ ನಗರವನ್ನ ಸಂಪರ್ಕಿಸುತ್ತದೆ. ಸೇತುವೆಯನ್ನ ಮಾರ್ಚ್ 10ರಂದು ಲೋಕಾರ್ಪಣೆ ಮಾಡಲಾಗಿತ್ತು. ವಾಹನ ದಟ್ಟಣೆ ಇರುವ ರಸ್ತೆಯನ್ನ ದಾಟಲು ಜನರಿಗೆ ಅನುಕೂಲವಾಗಲು ಈ ಸೇತುವೆಯನ್ನ ನಿರ್ಮಿಸಲಾಗಿತ್ತು.

    ಸುಮಾರು 14.2 ಮಿಲಿಯನ್ ಡಾಲರ್ (ಅಂದಾಜು 92 ಕೋಟಿ ರೂ.) ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸೇತುವೆ, ಚಂಡಮಾರುತಗಳನ್ನ ಸಹಿಸಬಲ್ಲ ಮತ್ತು 100 ವರ್ಷಗಳ ಕಾಲ ಬಾಳಿಕೆ ಬರುವ ಹಾಗೆ ನಿರ್ಮಿಸಲಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿತ್ತು.

    ವಿಪರ್ಯಾಸವೆಂದರೆ ಸೇತುವೆ ಲೋಕಾರ್ಪಣೆಗೊಂಡ ಕೆಲವೇ ದಿನಗಳಲ್ಲಿ ಕುಸಿದು ಬಿದ್ದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ರಾಷ್ಟ್ರೀಯ ಸಾರಿಗೆ ಮತ್ತು ಸುರಕ್ಷತಾ ಮಂಡಳಿಯ ತಂಡವು ಸೇತುವೆ ಕುಸಿದ ಕಾರಣದ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ.

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ಘಟನೆಯ ಸಂಕ್ಷಿಪ್ತ ವಿವರವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳನ್ನ ಸಲ್ಲಿಸಿದ್ದಾರೆ. ಗವರ್ನರ್ ಸ್ಕಾಟ್, ಸೆನೆಟರ್ ಮಾರ್ಕೊ ರುಬಿಯೊರೊಂದಿಗೆ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.

    https://www.instagram.com/p/BgWnBIrFepW/?utm_source=ig_embed

    https://www.instagram.com/p/BgWp1fCBPqG/?utm_source=ig_embed