Tag: ಮಿನಿ ಹರಾಜು

  • IPL 2024 Retention: ‌ಪಂತ್ ಮತ್ತೆ ಅಖಾಡಕ್ಕೆ – ಕನ್ನಡಿಗನನ್ನು ಕೈಬಿಟ್ಟು ಮಿಚೆಲ್‌ ಮಾರ್ಷ್‌ ಉಳಿಸಿಕೊಂಡ ಕ್ಯಾಪಿಟಲ್ಸ್‌

    IPL 2024 Retention: ‌ಪಂತ್ ಮತ್ತೆ ಅಖಾಡಕ್ಕೆ – ಕನ್ನಡಿಗನನ್ನು ಕೈಬಿಟ್ಟು ಮಿಚೆಲ್‌ ಮಾರ್ಷ್‌ ಉಳಿಸಿಕೊಂಡ ಕ್ಯಾಪಿಟಲ್ಸ್‌

    ಮುಂಬೈ: ಡಿಸೆಂಬರ್‌ನಲ್ಲಿ ನಡೆಯಲಿರುವ ಐಪಿಎಲ್‌ ಮಿನಿ ಹರಾಜಿಗೂ (IPL 2024 Auction) ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬರೋಬ್ಬರಿ 11 ಆಟಗಾರರನ್ನ ಬಿಡುಗಡೆ ಮಾಡಿದ್ದು, 16 ಆಟಗಾರರನ್ನ ಉಳಿಸಿಕೊಂಡಿದೆ.

    ವಿಶೇಷವೆಂದರೆ ಕಳೆದ ಡಿಸೆಂಬರ್‌ 30 ರಂದು ಕಾರು ಅಪಘಾತದಲ್ಲಿ ಗಾಯಗೊಂಡು 2022ರ ಐಪಿಎಲ್‌ನಿಂದ (IPL 2022) ಹೊರಗುಳಿದಿದ್ದ ರಿಷಬ್‌ ಪಂತ್‌ 2024ರ ಐಪಿಎಲ್‌ನಲ್ಲಿ (IPL 2024) ಮತ್ತೆ ಪ್ಯಾಡ್‌ ಕಟ್ಟಲಿದ್ದಾರೆ. ರಿಷಬ್‌ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಕ್ಯಾಂಪನ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು, 17ನೇ ಆವೃತ್ತಿಯಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ.

    ಇನ್ನೂ ಕನ್ನಡಿಗ ಮನಿಷ್‌ ಪಾಂಡೆ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟು ವಿವಾದಕ್ಕೆ ಗುರಿಯಾಗಿದ್ದ ಮಿಚೆಲ್‌ ಮಾರ್ಷ್‌ ಅವರನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇದನ್ನೂ ಓದಿ: IPL 2024 Retention: ಮುಂಬೈ ಫ್ಯಾನ್ಸ್‌ಗೆ ಬಿಗ್ ಶಾಕ್ – ಟೈಟಾನ್ಸ್‌ನಲ್ಲೇ ಉಳಿದ ಪಾಂಡ್ಯ

    2023ರ ಐಪಿಎಲ್‌ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 14ರಲ್ಲಿ ಕೇವಲ 5 ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿತ್ತು. -0.808 ರನ್‌ರೇಟ್‌ ಹಾಗೂ 10 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿ ಉಳಿದುಕೊಂಡಿತ್ತು.

    ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡ ಆಟಗಾರರು:
    ರಿಷಬ್ ಪಂತ್, ಡೇವಿಡ್ ವಾರ್ನರ್, ಪೃಥ್ವಿ ಶಾ, ಅಕ್ಷರ್ ಪಟೇಲ್, ಮಿಚೆಲ್ ಮಾರ್ಷ್, ಅಭಿಷೇಕ್‌ ಪೊರೆಲ್‌, ಅಕ್ಷರ್‌ ಪಟೇಲ್‌, ಲಲಿತ್‌ ಯಾದವ್‌, ಯಶ್‌ ಧುಲ್‌, ಪ್ರವೀಣ್ ದುಬೆ, ವಿಕ್ಕಿ, ಅನ್ರಿಚ್ ನಾರ್ಟ್ಜೆ, ಕುಲ್ದೀಪ್‌ ಯಾದವ್‌, ಲುಂಗಿ ಎನ್‌ಗಿಡಿ, ಖಲೀಲ್ ಅಹಮದ್, ಇಶಾತ್‌ ಶರ್ಮಾ, ಮುಕೇಶ್‌ ಕುಮಾರ್‌. ಇದನ್ನೂ ಓದಿ: IPL 2024 Auction: ಹ್ಯಾಜಲ್‌ವುಡ್, ಹಸರಂಗ ಸೇರಿ 11 ಆಟಗಾರರಿಗೆ RCB ಕೊಕ್‌

    ಡೆಲ್ಲಿ ಕ್ಯಾಪಿಟಲ್ಸ್‌ ಬಿಡುಗಡೆ ಮಾಡಿದ ಆಟಗಾರರು:
    ರಿಲೀ ರೊಸ್ಸೌ, ಚೇತನ್ ಸಕರಿಯಾ, ರೋವ್ಮನ್ ಪೊವೆಲ್, ಮನೀಷ್ ಪಾಂಡೆ, ಫಿಲ್ ಸಾಲ್ಟ್, ಮುಸ್ತಾಫಿಜುರ್ ರೆಹಮಾನ್, ಕಮಲೇಶ್ ನಾಗರಕೋಟಿ, ರಿಪಾಲ್ ಪಟೇಲ್, ಸರ್ಫರಾಜ್ ಖಾನ್, ಅಮನ್ ಖಾನ್, ಪ್ರಿಯಮ್ ಗಾರ್ಗ್.

    ಪಂತ್‌ಗೆ ಏನಾಗಿತ್ತು?
    2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಹೊಸ ವರ್ಷಕ್ಕೆ ತನ್ನ ತಾಯಿಗೆ ಸರ್ಪ್ರೈಸ್ ಕೊಡಬೇಕು, ತಾಯಿಯೊಂದಿಗೆ ಹೊಸ ವರ್ಷದ ಸಂಭ್ರಮ ಕಳೆಯಬೇಕು ಎಂದು ಮರ್ಸಿಡೀಸ್ ಎಎಂಜಿ ಜಿಎಲ್‌ಇ-43 ಕೂಪೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಇದರಿಂದ ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

  • ಐಪಿಎಲ್ ಮಿನಿ ಹರಾಜು ಹೈಲೈಟ್ಸ್ – ಸುತ್ತಿಗೆಯ ಹೊಡೆತಕ್ಕೆ ಕಾಯುತ್ತಿದ್ದಾನೆ 15ರ ಬಾಲಕ

    ಐಪಿಎಲ್ ಮಿನಿ ಹರಾಜು ಹೈಲೈಟ್ಸ್ – ಸುತ್ತಿಗೆಯ ಹೊಡೆತಕ್ಕೆ ಕಾಯುತ್ತಿದ್ದಾನೆ 15ರ ಬಾಲಕ

    ತಿರುವನಂತಪುರಂ: ಕ್ರಿಕೆಟ್ ಹಬ್ಬ ಐಪಿಎಲ್ 2023ರ (IPL 2023) ಸಂಭ್ರಮ ನಾಳೆಯಿಂದ ರಂಗೇರಲಿದೆ. ನಾಳೆ ಕೊಚ್ಚಿಯಲ್ಲಿ ಮಿನಿ ಹರಾಜು (Auction) ಪ್ರಕ್ರಿಯೆ ನಡೆಯಲಿದೆ. ಈ ಹರಾಜಿನಲ್ಲಿ ಹದಿನೈದರ ಪೋರ ಅಲ್ಲಾ ಮೊಹಮ್ಮದ್ ಘಜನ್ಫರ್ (Allah Mohammed Ghazanfar) ಅತಿ ಕಿರಿಯ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ನಾಳೆ ನಡೆಯಲಿರುವ ಹರಾಜಿನಲ್ಲಿ ಈಗಾಗಲೇ 405 ಆಟಗಾರರ ಅಂತಿಮ ಪಟ್ಟಿ ಸಿದ್ಧಗೊಂಡಿದೆ. ಈ ಪಟ್ಟಿಯಲ್ಲಿ 273 ಭಾರತೀಯ ಆಟಗಾರರು ಕಾಣಿಸಿಕೊಂಡರೆ, 132 ಮಂದಿ ವಿದೇಶಿ ಅಟಗಾರರು ಸೇರಿದ್ದಾರೆ. ಒಟ್ಟು 991 ಆಟಗಾರರು ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆ ಬಳಿಕ 10 ಫ್ರಾಂಚೈಸ್‍ಗಳ ಜೊತೆ ಚರ್ಚಿಸಿ ಅಂತಿಮವಾಗಿ 369 ಆಟಗಾರರ ಪಟ್ಟಿ ಸಿದ್ಧಗೊಂಡಿತು. ನಂತರ 36 ಆಟಗಾರರ ಹೆಚ್ಚುವರಿ ಸೇರ್ಪಡೆಯೊಂದಿಗೆ ಒಟ್ಟು 405 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ರೋಹಿತ್‍ಗೆ ಗೇಟ್‍ ಪಾಸ್ – ಪಾಂಡ್ಯ ಸೀಮಿತ ಓವರ್‌ಗಳ ನಾಯಕ?

    ಹರಾಜಿನಲ್ಲಿ 15ರ ಬಾಲಕ ಅಲ್ಲಾ ಮೊಹಮ್ಮದ್ ಘಜನ್ಫರ್ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡು ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಹರಾಜು ಪ್ರಕ್ರಿಯೆ ಕೊಚ್ಚಿಯಲ್ಲಿ ಶುಕ್ರವಾರ ಮಧ್ಯಾಹ್ನ 2:30 ರಿಂದ ಆರಂಭವಾಗಲಿದೆ.

    ಯಾರಿದು ಅಲ್ಲಾ ಮೊಹಮ್ಮದ್ ಘಜನ್ಫರ್?:
    ಅಘ್ಫಾನಿಸ್ತಾನ ಮೂಲದ ಅಲ್ಲಾ ಮೊಹಮ್ಮದ್ ಘಜನ್ಫರ್‌ಗೆ ಈಗಷ್ಟೇ 15 ವರ್ಷ. 6 ಅಡಿ 2 ಇಂಚು ಉದ್ದವಿರುವ ಅಲ್ಲಾ ಮೊಹಮ್ಮದ್ ಘಜನ್ಫರ್ ಮೊದಲು ವೇಗದ ಬೌಲರ್ ಆಗಿದ್ದರು. ಬಳಿಕ ಸ್ಪಿನ್ನರ್ ಆಗಿ ಮಾರ್ಪಾಡು ಹೊಂದಿದ್ದಾರೆ. ಈಗಾಗಲೇ ಅಂಡರ್-16ನಲ್ಲಿ ಆಡಿದ್ದು, ಇದೀಗ ಅಂಡರ್-19 ಆಡಲು ಅಭ್ಯಾಸದಲ್ಲಿದ್ದಾರೆ. ಈ ನಡುವೆ ಐಪಿಎಲ್‍ನಲ್ಲಿ ಆಡಲು ಸಿದ್ಧರಾಗಿದ್ದಾರೆ. ಹರಾಜಿನಲ್ಲಿ ಮಾರಾಟವಾಗುವ ನಿರೀಕ್ಷೆಯಲ್ಲಿರುವ ಘಜನ್ಫರ್ ಮೂಲಬೆಲೆ 20 ಲಕ್ಷ ರೂ. ಆಗಿದೆ. ಇದನ್ನೂ ಓದಿ: ಮೊದಲ ಪಂದ್ಯದ ಮ್ಯಾಚ್ ವಿನ್ನರ್‌ಗಿಲ್ಲ ಎರಡನೇ ಟೆಸ್ಟ್‌ನಲ್ಲಿ ಅವಕಾಶ – ಕುಲ್‍ದೀಪ್‍ಗೆ ಕೊಕ್, ಉನಾದ್ಕಟ್‍ಗೆ ಬುಲಾವ್

    ಘಜನ್ಫರ್ ಕಿರಿಯ ಆಟಗಾರನಾದರೆ, ಭಾರತದ ಅಮಿತ್ ಮಿಶ್ರಾ ಹಿರಿಯ ಆಟಗಾರನಾಗಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಿಶ್ರಾಗೆ ಇದೀಗ 40 ವರ್ಷ ಆದರೂ ಈಬಾರಿ ಐಪಿಎಲ್‍ನಲ್ಲಿ ಆಡುವ ಉತ್ಸಾಹ ತೋರಿಸಿದ್ದಾರೆ. ಆದರೆ ಈ ಹಿರಿಯ ಹಾಗೂ ಕಿರಿಯ ಆಟಗಾರರಿಗೆ ಯಾವ ತಂಡ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

    ಯಾವ ತಂಡದಲ್ಲಿ ಎಷ್ಟು ಹಣ ಬಾಕಿ:
    ಸನ್‍ರೈಸರ್ಸ್ ಹೈದರಾಬಾದ್ (SRH) – 42.25 ಕೋಟಿ ರೂ. ಬಾಕಿ ಇದ್ದು 4 ವಿದೇಶಿ ಆಟಗಾರರು ಸಹಿತ 13 ಆಟಗಾರರನ್ನು ಖರೀದಿಸಬಹುದು.
    ಚೆನ್ನೈ ಸೂಪರ್ ಕಿಂಗ್ಸ್ (CSK) – 20.45 ಕೋಟಿ ರೂ. ಬಾಕಿ ಇದ್ದು, 2 ವಿದೇಶಿ ಸಹಿತ 7 ಆಟಗಾರರನ್ನು ಖರೀದಿ ಮಾಡಬಹುದು.

    ಡೆಲ್ಲಿ ಕಾಪಿಟಲ್ಸ್ (DC) – 19.45 ಕೋಟಿ ರೂ. ಬಾಕಿ ಇದ್ದು, 2 ವಿದೇಶಿ ಸಹಿತ 5 ಆಟಗಾರ ಖರೀದಿಗೆ ಅವಕಾಶವಿದೆ.
    ಗುಜರಾತ್ ಟೈಟಾನ್ಸ್ (GT) – 19.25 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 7 ಆಟಗಾರನ್ನು ಈ ಬಾರಿ ಖರೀದಿ ಮಾಡಬಹುದು.

    ಕೋಲ್ಕತ್ತಾ ನೈಟ್ ರೈಡರ್ಸ್ (KKR) – 7.05 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 11 ಆಟಗಾರರನ್ನು ಖರೀದಿಸಬಹುದು
    ಲಕ್ನೋ ಸೂಪರ್ ಜೈಂಟ್ಸ್ (LSG) – 23.35 ಕೋಟಿ ರೂ. ಬಾಕಿ ಇದ್ದು, 4 ವಿದೇಶಿ ಸಹಿತ 10 ಆಟಗಾರನ್ನು ಖರೀದಿಗೆ ಅವಕಾಶವಿದೆ.

    ಮುಂಬೈ ಇಂಡಿಯನ್ಸ್ (MI) – 20.55 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 9 ಆಟಗಾರರನ್ನು ಖರೀದಿ ಮಾಡಬಹುದು.
    ಪಂಜಾಬ್ ಕಿಂಗ್ಸ್ (PBKS) – 32.2 ಕೋಟಿ ರೂ. ಬಾಕಿ ಇದ್ದು, 3 ವಿದೇಶಿ ಸಹಿತ 9 ಆಟಗಾರರನ್ನು ಖರೀದಿಸಬಹುದು.
    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) – 8.75 ಕೋಟಿ ರೂ. ಬಾಕಿ ಇದ್ದು, 2 ವಿದೇಶಿ ಸಹಿತ ಒಟ್ಟು 7 ಆಟಗಾರ ಖರೀದಿಗೆ ಅವಕಾಶವಿದೆ.
    ರಾಜಸ್ಥಾನ ರಾಯಲ್ಸ್ (RR) – 13.2 ಕೋಟಿ ರೂ. ಬಾಕಿ ಇದ್ದು, 4 ವಿದೇಶಿ ಸಹಿತ 13 ಆಟಗಾರರನ್ನು ಖರೀದಿಸಬಹುದು.

    Live Tv
    [brid partner=56869869 player=32851 video=960834 autoplay=true]