Tag: ಮಿನಿ ಲಾರಿ

  • ನಿಂತಿದ್ದ ಮಿನಿ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ – ಸ್ಥಳದಲ್ಲೇ ಮೂವರು ಸಾವು

    ನಿಂತಿದ್ದ ಮಿನಿ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ – ಸ್ಥಳದಲ್ಲೇ ಮೂವರು ಸಾವು

    ವಿಜಯನಗರ: ನಿಂತಿದ್ದ ಮಿನಿ ಲಾರಿಗೆ, ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ವಿಜಯನಗರ (Vijayanagara) ಜಿಲ್ಲೆಯ ಕೊಟ್ಟರು ತಾಲೂಕಿನ ಸಾಲವಾಡ ಕ್ರಾಸ್ ಬಳಿ ಈ ಘಟನೆ ನಡೆದಿದೆ.

    ಗಜಾಪುರದ ಮಿನಿ ಲಾರಿ ಚಾಲಕ ಗುರುವಣ್ಣ (40), ಬತ್ತನಹಳ್ಳಿಯ ತಿಪ್ಪಣ್ಣ (55), ಬಸವರಾಜ್ (25) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕೊಟ್ಟೂರು ತಾಲೂಕಿನ ಬತ್ತನಹಳ್ಳಿಯ ತಿಪ್ಪಣ್ಣ ಹಾಗೂ ಅವರ ಸಂಬಂಧಿಕರು ಹುಲಿಗಿ ದೇವಾಲಯಕ್ಕೆ ಹೊರಟಿದ್ದರು. ಮಿನಿ ಲಾರಿ ಹತ್ತಿದ 10 ಜನರು, ಸಾಸಲವಾಡ ಕ್ರಾಸ್ ಬಳಿ ತಮ್ಮ ಸಂಬಂಧಿಕರಿಗಾಗಿ ಕಾಯುತ್ತಿದ್ದರು. ಇದನ್ನೂ ಓದಿ: ಹೆಚ್‌.ಡಿ. ರೇವಣ್ಣ ಕುಟುಂಬವನ್ನ ರಾಜಕೀಯದಿಂದ ಶಾಶ್ವತವಾಗಿ ತೆಗೆಯುವುದೇ ನನ್ನ ಗುರಿ: ದೂರುದಾರ ದೇವರಾಜೇಗೌಡ

    ನಿಂತಿದ್ದ ಮಿನಿ ಲಾರಿಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯನಗರ ಎಸ್ಪಿ ಶ್ರೀಹರಿಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಎನ್.ಟಿ. ಶ್ರೀನಿವಾಸ ಅವರು ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ: ಸೆ.6ಕ್ಕೆ ಕಾವೇರಿ ವಿಚಾರಣೆ ಮುಂದೂಡಿಕೆ – ಇಂದು ಕಲಾಪದಲ್ಲಿ ಏನಾಯ್ತು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಲ್ಟಿಯಾದ ಲಾರಿಯೊಳಗಿಂದ ಬಿದ್ದ ಕಾಂಕ್ರಿಟ್ ಮಿಕ್ಸರ್- ಕಾರ್ಮಿಕ ಸಾವು

    ಪಲ್ಟಿಯಾದ ಲಾರಿಯೊಳಗಿಂದ ಬಿದ್ದ ಕಾಂಕ್ರಿಟ್ ಮಿಕ್ಸರ್- ಕಾರ್ಮಿಕ ಸಾವು

    ಮಡಿಕೇರಿ: ಪಲ್ಟಿಯಾದ ಲಾರಿಯೊಳಗಿನಿಂದ ಕಾಂಕ್ರೀಟ್ ಮಿಕ್ಸರ್ ಬಿದ್ದ ಪರಿಣಾಮ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೊಸಬೀಡು ಬಳಿ ನಡೆದಿದೆ.

    ಕೂಡಿಗೆ ನಿವಾಸಿ ಮಹಾದೇವ್ (48) ಮೃತ ದುರ್ದೈವಿ ಕಾರ್ಮಿಕ. ಮಿನಿಲಾರಿಯಲ್ಲಿ ಗಾರೆ ಕೆಲಸಕ್ಕೆಂದು ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

    ಕಾಂಕ್ರಿಟ್ ಕೆಲಸಕ್ಕೆಂದು ಹಲವು ಮಂದಿ ಕಾರ್ಮಿಕರನ್ನು ಮಿನಿ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಲಾರಿಯ ಬ್ರೇಕ್ ಫೇಲ್ ಆಗಿದೆ. ಪರಿಣಾಮ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದಿದೆ. ಈ ವೇಳೆ ಲಾರಿಯೊಳಗಿದ್ದ ಮಹಾದೇವು ಅವರ ಮೇಲೆ ಕಾಂಕ್ರಿಟ್ ಮಿಕ್ಸರ್ ಬಿದ್ದಿದೆ. ಪರಿಣಾಮ ಮಹದೇವ್ ಸ್ಥಳದಲ್ಲೇ ಮೃತಪಟ್ಟರೆ, ನಾಲ್ಕೈದು ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.

    ಫಟನೆ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಿನಿ ಲಾರಿ ಉರುಳಿ 18 ಲಕ್ಷ ರೂ. ಮೌಲ್ಯದ ಮದ್ಯ ರಸ್ತೆ ಪಾಲು

    ಮಿನಿ ಲಾರಿ ಉರುಳಿ 18 ಲಕ್ಷ ರೂ. ಮೌಲ್ಯದ ಮದ್ಯ ರಸ್ತೆ ಪಾಲು

    -ಪುಕ್ಕಟೆಯಾಗಿ ಸಿಕ್ವು ವಿಧದ ಬ್ರ್ಯಾಂಡ್ ಬಾಟಲ್

    ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಲಿಕ್ಕರ್ ಬಾಟಲ್‍ಗಳನ್ನು ಸಾಗಿಸುತ್ತಿದ್ದ ಮಿನಿ ಲಾರಿಯೊಂದು ಲಿಂಗಸುಗೂರು ಬೈಪಾಸ್ ರಸ್ತೆಯಲ್ಲಿ ಬಿದ್ದಿದ್ದು, ಕೆಲ ಮದ್ಯ ಪ್ರಿಯರು ಬಾಟಲ್‍ಗಳನ್ನು ಎತ್ತಿಕೊಂಡು ಹೋಗಿದ್ದಾರೆ.

    ಮದ್ಯ ಬಾಟಲ್‍ಗಳನ್ನು ತುಂಬಿಕೊಂಡು ಸಿಂಧನೂರು ಎಂಎಸ್‍ಐಎಲ್ ಘಟಕದಿಂದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಮಾರ್ಗವಾಗಿ ಲಿಂಗಸೂಗುರು ಮಳಿಗೆಗೆ ಹೊರಟಿತ್ತು. ಚಾಲಕ ವೇಗವಾಗಿ ಚಾಲನೆ ಮಾಡುತ್ತಿದ್ದ ಪರಿಣಾಮ ಆತನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ರಸ್ತೆ ಬದಿಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಸಂಭವಿಸುತ್ತಿದ್ದಂತೆ ಚಾಲಕ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾನೆ.

    ಮಿನಿ ಲಾರಿಯಲ್ಲಿ 18 ಲಕ್ಷ ರೂ. ಅಧಿಕ ಬೆಲೆ ಬಾಳುವ ಬೀಯರ್ ಸೇರಿದಂತೆ ವಿವಿಧ ಬ್ರ್ಯಾಂಡ್‍ನ ಮದ್ಯದ ಬಾಟಲ್‍ಗಳು ಇದ್ದವು. ರಸ್ತೆ ಬದಿಗೆ ಬಾಟಲ್‍ಗಳು ಬಿಳ್ಳುತ್ತಿದ್ದಂತೆ ಹೆದ್ದಾರಿ ಮಾರ್ಗವಾಗಿ ಹೋಗುತ್ತಿದ್ದ ಪ್ರಯಾಣಿಕರು, ಮದ್ಯ ಪ್ರಿಯರು ಬಾಟಲ್‍ಗಳನ್ನು ಎತ್ತಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಕೆಲವು ಬಾಟಲ್‍ಗಳು ಒಡೆದು ಹೋಗಿದ್ದು, ಮದ್ಯದ ಹೊಳೆಯೇ ಹರಿದಿದೆ.

    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಲಿಂಗಸುಗೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಸಂಚಾರ ಅಸ್ತವ್ಯಸ್ತವಾಗದಂತೆ ಎಚ್ಚರವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಿನಿ ಲಾರಿ ಪಲ್ಟಿಯಾಗಿ ಸ್ಥಳದಲ್ಲಿಯೇ ಕ್ಲೀನರ್ ಸಾವು

    ಮಿನಿ ಲಾರಿ ಪಲ್ಟಿಯಾಗಿ ಸ್ಥಳದಲ್ಲಿಯೇ ಕ್ಲೀನರ್ ಸಾವು

    ರಾಯಚೂರು: ಮಿನಿ ಲಾರಿ ಪಲ್ಟಿಯಾಗಿ ಸ್ಥಳದಲ್ಲಿಯೇ ಕ್ಲೀನರೊಬ್ಬರು ಮೃತಪಟ್ಟ ದುರ್ಘಟನೆ ರಾಯಚೂರು ತಾಲೂಕಿನ ಗಂಜಳ್ಳಿ ಹೊರವಲಯದಲ್ಲಿ ನಡೆದಿದೆ.

    ರಾಯಚೂರಿನ ಮೈಲಾರನಗರ ನಿವಾಸಿ ವೀರೇಶ್ (18) ಮೃತ ಕ್ಲೀನರ್. ರಾಯಚೂರಿನಿಂದ ನೀರಿನ ಪೈಪ್ ಗಳನ್ನ ಕೊರವಿಹಾಳ ಗ್ರಾಮಕ್ಕೆ ಸಾಗಣೆ ಮಾಡಿ, ಮರಳುತ್ತಿರುವ ವೇಳೆ ಘಟನೆ ನಡೆದಿದೆ.

    ಮಿನಿ ಲಾರಿಯಲ್ಲಿದ್ದ ಮೃತ ವೀರೇಶ್ ಹಾಗೂ ಚಾಲಕನ ಇದ್ದರು. ಲಾರಿ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಕೆಳಗೆ ಇಳಿಯುತ್ತಿದ್ದಂತೆ ಚಾಲಕನ ಲಾರಿಯಿಂದ ಹೊರಗೆ ಜಿಗಿದಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕ್ಲೀನರ್ ವೀರೇಶ್ ಲಾರಿಯಲ್ಲಿಯೇ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ರಾಯಚೂರು ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.