Tag: ಮಿನಿಬಸ್

  • ಪಾಕಿಸ್ತಾನದಲ್ಲಿ ಕಂದಕಕ್ಕೆ ಬಿದ್ದ ಮಿನಿಬಸ್‌ – 11 ಮಕ್ಕಳು ಸೇರಿ 21 ಮಂದಿ ಸಾವು

    ಪಾಕಿಸ್ತಾನದಲ್ಲಿ ಕಂದಕಕ್ಕೆ ಬಿದ್ದ ಮಿನಿಬಸ್‌ – 11 ಮಕ್ಕಳು ಸೇರಿ 21 ಮಂದಿ ಸಾವು

    ಇಸ್ಲಾಮಾಬಾದ್‌: ದಕ್ಷಿಣ ಪಾಕಿಸ್ತಾನದಲ್ಲಿ (Pakistan) ಆಳವಾದ ಕಂದಕಕ್ಕೆ ಮಿನಿಬಸ್ ಬಿದ್ದು, 11 ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

    ಪ್ರವಾಹದಿಂದ ಕೊಚ್ಚಿಹೋದ ರಸ್ತೆಯಲ್ಲಿ ನೀರು ತುಂಬಿದ ಹಳ್ಳಕ್ಕೆ ಬಸ್‌ ಬಿದ್ದಿದೆ. ಅಪಘಾತದಲ್ಲಿ ಮೃತಪಟ್ಟ ಮಕ್ಕಳು 2ರಿಂದ 8 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಖಾದಿಮ್ ಹುಸೇನ್ ತಿಳಿಸಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್ ಪತನ – ಮೆಕ್ಸಿಕನ್ ರಾಜ್ಯದ ಭದ್ರತಾ ಮುಖ್ಯಸ್ಥ ಸೇರಿ ಐವರ ಸಾವು

    ಡ್ರೈವರ್‌ಗೆ ರಸ್ತೆಯ ಡೈವರ್ಶನ್ ಚಿಹ್ನೆಯನ್ನು ನೋಡಲಾಗಿಲ್ಲ. ಆದ್ದರಿಂದ ವ್ಯಾನ್ ಸೆಹ್ವಾನ್ ಷರೀಫ್ ಪಟ್ಟಣದ ಬಳಿ 25 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಅಪಘಾತದಲ್ಲಿ 14ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹುಸೇನ್‌ ಮಾಹಿತಿ ನೀಡಿದ್ದಾರೆ.

    ಪಾಕಿಸ್ತಾನವು ಈ ವರ್ಷ ದಾಖಲೆಯ ಮಾನ್ಸೂನ್ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿತ್ತು. ದೇಶದ ಮೂರನೇ ಒಂದು ಭಾಗ ನೀರಿನಲ್ಲಿ ಮುಳುಗಿತ್ತು. 8 ಮಿಲಿಯನ್ ಜನರನ್ನು ಸ್ಥಳಾಂತರಿಸಲಾಗಿತ್ತು. ಮೂಲಸೌಕರ್ಯ ಕೊರತೆ ದೇಶವನ್ನು ಮತ್ತಷ್ಟು ಕಂಗೆಡಿಸಿದೆ. ಇದನ್ನೂ ಓದಿ: ಗಾಜಾದ ನಿರಾಶ್ರಿತರ ಶಿಬಿರದಲ್ಲಿ ಭೀಕರ ಅಗ್ನಿ ಅವಘಡ – 7 ಮಕ್ಕಳು ಸೇರಿ 21 ಸಾವು

    ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, 2018 ರಲ್ಲಿ ಪಾಕಿಸ್ತಾನದ ರಸ್ತೆಗಳಲ್ಲಿ 27,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಂದಕಕ್ಕೆ ಉರುಳಿದ ಮಿನಿಬಸ್‌ – 10 ಮಂದಿ ದುರ್ಮರಣ, 28 ಮಂದಿಗೆ ಗಾಯ

    ಕಂದಕಕ್ಕೆ ಉರುಳಿದ ಮಿನಿಬಸ್‌ – 10 ಮಂದಿ ದುರ್ಮರಣ, 28 ಮಂದಿಗೆ ಗಾಯ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪೂಂಚ್ ಜಿಲ್ಲೆಯಲ್ಲಿ ಕಿಕ್ಕಿರಿದು ತುಂಬಿದ್ದ ಮಿನಿಬಸ್‌ವೊಂದು (Minibus Accident) ಆಳವಾದ ಕಂದಕಕ್ಕೆ ಉರುಳಿ ಹತ್ತು ಜನರು ಸಾವನ್ನಪ್ಪಿದ್ದು, 28 ಮಂದಿ ಗಾಯಗೊಂಡಿದ್ದಾರೆ.

    ಬಸ್ ಗಾಲಿ ಮೈದಾನದಿಂದ ಪೂಂಚ್‌ಗೆ ತೆರಳುತ್ತಿದ್ದಾಗ ಬೆಳಗ್ಗೆ 8.30ರ ಸುಮಾರಿಗೆ ಸಾವ್ಜಿಯಾನ್‌ನ ಗಡಿ ಬೆಲ್ಟ್‌ನ ಬ್ರಾರಿ ನಲ್ಲಾಹ್‌ ಬಳಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೇಗುಸರಾಯ್‍ನಲ್ಲಿ ಗುಂಡಿನ ದಾಳಿ – 11 ಮಂದಿಗೆ ಗಂಭೀರ ಗಾಯ, ಓರ್ವ ಸಾವು

    ಸೇನೆ, ಪೊಲೀಸರು ಮತ್ತು ಸ್ಥಳೀಯ ಗ್ರಾಮಸ್ಥರು ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಿದ್ದರು. ಒಂಬತ್ತು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡ 28 ಮಂದಿಯಲ್ಲಿ ಒಂಬತ್ತು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಅಪಘಾತದಲ್ಲಿ ಜೀವಹಾನಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ಅಪಘಾತದಲ್ಲಿ ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ಅಗತ್ಯ ನೆರವು ಕಲ್ಪಿಸುವಂತೆ ಪೊಲೀಸರು ಮತ್ತು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಸೈರಸ್‌ ಮಿಸ್ತ್ರಿ ಸಾವು ಪ್ರಕರಣ – ಅಪಘಾತಕ್ಕೀಡಾದ ಕಾರು ಪರಿಶೀಲಿಸಲು ಹಾಂಗ್‌ ಕಾಂಗ್‌ನಿಂದ ಬಂದ ಮರ್ಸಿಡಿಸ್ ತಜ್ಞರು

    ಮಿನಿಬಸ್‌ ಅಪಘಾತದ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು (draupadi murmu), ಪ್ರಧಾನಿ ಮೋದಿ (narendra modi) ಸೇರಿದಂತೆ ಅನೇಕ ಗಣ್ಯರು ದುಃಖ ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50,000 ಪರಿಹಾರ ಘೋಷಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 300 ಅಡಿ ಕಣಿವೆಗೆ ಉರುಳಿ ಬಿತ್ತು ಬಸ್- 13 ಸಾವು!

    300 ಅಡಿ ಕಣಿವೆಗೆ ಉರುಳಿ ಬಿತ್ತು ಬಸ್- 13 ಸಾವು!

    ಜಮ್ಮು: ಚಾಲಕನ ನಿಯಂತ್ರಣ ತಪ್ಪಿ 300 ಅಡಿಯ ಕಣಿವೆಗೆ ಮಿನಿ ಬಸ್ಸೊಂದು ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ 13 ಜನ ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ.

    ಶುಕ್ರವಾರ ಬೆಳಗ್ಗೆ 30 ಪ್ರಯಾಣಿಕರಿದ್ದ ಮಿನಿ ಬಸ್ಸು ಕಿಸ್ತ್ವಾರ್ ದಿಂದ ಕೆಶ್ವನ್ ಕಡೆಗೆ ಹೊರಟಿತ್ತು. ಈ ವೇಳೆ ಥಾಕ್ರೈ ಸಮೀಪ್ ದಾಂದರಬ್‍ಗೆ ಬರುತ್ತಿದ್ದಂತೆ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಬಸ್ಸು 300 ಅಡಿ ಆಳದ ಕಮರಿಗೆ ಬಿದ್ದಿದೆ. ಘಟನಾ ಸ್ಥಳದಲ್ಲಿಯೇ ಚೆನಾಬ್ ನದಿ ಹರಿಯುತ್ತಿದ್ದು, ಅದೃಷ್ಟವಶಾತ್ ನದಿಯ ದಂಡೆಯ ಮೇಲೆಯೇ ಬಸ್ ನಿಂತಿದೆ.

    ಅಪಘಾತದಲ್ಲಿ 13 ಜನರು ಮೃತಪಟ್ಟರೆ, 13 ಮಂದಿ ಗಾಯಗೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ಕಾರ್ಯ ಆರಂಭಿಸಲಾಯಿತು ಎಂದು ಕಿಸ್ತ್ವಾರ್ ದ ಹಿರಿಯ ಅಧೀಕ್ಷಕ ರಾಜೇಂದ್ರ ಗುಪ್ತಾ ತಿಳಿಸಿದ್ದಾರೆ.

    ಗಂಭೀರವಾಗಿ ಗಾಯಗೊಂಡಿದ್ದ 8 ಜನರನ್ನು ಪ್ರಪಾತದಿಂದ ಮೇಲೆತ್ತಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದಲ್ಲಿ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಧನ ನೀಡುವುದಾಗಿ ಕಿಸ್ತ್ವಾರ್ ಉಪ ಕಮಿಷನರ್ ಅಂಗ್ರೆಜ್ ಸಿಂಗ್ ರಾಣಾ ಘೋಷಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv