Tag: ಮಿಥುನ್ ರೈ

  • ಮಿಥುನ್ ರೈ ಎಲ್ಲಿ, ಸೆಲ್ಫಿ ತೆಗೆದುಕೊಳ್ಳಲು ಬರ್ಲಿ: ಶೋಭಾ ಕರಂದ್ಲಾಜೆ ತಿರುಗೇಟು

    ಮಿಥುನ್ ರೈ ಎಲ್ಲಿ, ಸೆಲ್ಫಿ ತೆಗೆದುಕೊಳ್ಳಲು ಬರ್ಲಿ: ಶೋಭಾ ಕರಂದ್ಲಾಜೆ ತಿರುಗೇಟು

    ಉಡುಪಿ: ಕೆಲ ದಿನಗಳ ಹಿಂದೆ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ (mithun Rai) ಅವರು ಸಚಿವೆ ಶೋಭಾ ಕರಂದ್ಲಾಜೆ ಕಂಡರೆ ಪೋಟೋ ತೆಗೆದು ಕಳುಹಿಸಿ. ನಾನು ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದೀಗ ಶೋಭಾ ಅವರು, ಮಿಥುನ್ ರೈ ಎಲ್ಲಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಮೊದಲು ಅವರು ಬರಲಿ ಎಂದು ಸವಾಲೆಸೆದಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಉಡುಪಿಗೆ ಬಂದಿದ್ದೇನೆ ಬನ್ನಿ ಎಲ್ಲರೂ ಸೆಲ್ಫಿ (Selfie) ತೆಗೆಯಿರಿ. ಅವ ಎಲ್ಲಿ ಮಿಥುನ್ ರೈ ಅವನು ಬರಲಿ ಎಂದು ಸಚಿವೆ ಗರಂ ಆಗಿ ಹೇಳಿದ್ದಾರೆ.  ಇದನ್ನೂ ಓದಿ: ಹೆಸರು ಬದಲಾಯಿಸಲು ತಲೆ ಕೆಟ್ಟಿದ್ಯಾ?: ಶೋಭಾ ಕರಂದ್ಲಾಜೆ ಗರಂ

    ಬರಲಿ ಎಲ್ಲರೂ ಸೆಲ್ಫಿ ತೆಗೆಯಲು ಬರಲಿ. ಅವನು ಮಿಥುನ್ ರೈ ಫಸ್ಟ್ ಬರಲಿ. ಈ ವಿಷಯಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಅವನನ್ನು ಯಾಕೆ ದೊಡ್ಡ ಮನುಷ್ಯ ಮಾಡಬೇಕು. ಅವನು ಚಿಲ್ಲರೆ ಮನುಷ್ಯ ಎಂದು ವಾಗ್ದಾಳಿ ನಡೆಸಿ ಶೋಭಾ ಕರಂದ್ಲಾಜೆ (Shobha Karandlaje) ಕಾರು ಹತ್ತಿದರು.

    ಮಿಥುನ್ ರೈ ಹೇಳಿದ್ದೇನು..?: ಉಡುಪಿಯ ಮಲ್ಪೆ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುವಂತೆ ಕಾಂಗ್ರೆಸ್ ಪ್ರತಿಭಟನೆ ಮಾಡಿತ್ತು. ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ನಾಪತ್ತೆಯಾಗಿದ್ದಾರೆ. ಅವರ ಜೊತೆ ಸೆಲ್ಫಿ ತೆಗೆದವರಿಗೆ ಐದು ಸಾವಿರ ರೂಪಾಯಿ ಬಹುಮಾನ ಎಂದು ಮಿಥುನ್ ರೈ ಘೋಷಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಭಾರೀ ಕುತೂಹಲಕ್ಕೆ ಕಾರಣವಾದ ಡಿಕೆಶಿ ಆಪ್ತ ಮಿಥುನ್ ರೈ ನಡೆ

    ಭಾರೀ ಕುತೂಹಲಕ್ಕೆ ಕಾರಣವಾದ ಡಿಕೆಶಿ ಆಪ್ತ ಮಿಥುನ್ ರೈ ನಡೆ

    ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ ಮಿಥುನ್ ರೈ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಉಮೇದುವಾರಿಕೆಯಿಂದ ಹಿಂದೆ ಸರಿದಿರುವ ಬಗ್ಗೆ ಮಿಥುನ್ ರೈ ಫೇಸ್‍ಬುಕ್ ನಲ್ಲಿ ಮಾಹಿತಿ ನೀಡಿದ್ದಾರೆ.

    ಮಿಥುನ್ ರೈ ಪೋಸ್ಟ್: ನಾನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಆಪ್ತನಾಗಿರುವ ಕಾರಣ, ಕೆಪಿಸಿಸಿ ಅಧ್ಯಕ್ಷರ ನಿರ್ದೇಶನದಂತೆ ನಾನು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಉಮೇದುವಾರಿಕೆಯಿಂದ ಹಿಂದೆ ಸರಿಯುತ್ತಿದ್ದೇನೆ. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಎಂದು ಮಿಥುನ್ ರೈ ಮನವಿ ಮಾಡಿಕೊಂಡಿದ್ದಾರೆ.

    ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ಚುನಾವಣೆ ಆರಂಭಗೊಂಡ ದಿನದಿಂದಲೂ ಮಿಥುನ್ ರೈ ಗೆಲ್ಲುವ ಅಭ್ಯರ್ಥಿ ಎಂದೇ ಅಂದಾಜಿಸಲಾಗಿತ್ತು. ಮಿಥುನ್ ರೈ ಸಹ ಭರ್ಜರಿ ಪ್ರಚಾರ ನಡೆಸಿದ್ದರು.

  • ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರಾ?

    ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರಾ?

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕೊರೊನಾ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾರೆಂದು ಭಾರೀ ವಿರೋಧ ವ್ಯಕ್ತವಾಗಿದೆ.

    ಕಳೆದ ಜುಲೈ 17ರಂದು ತನಗೆ ಪಾಸಿಟಿವ್ ಆಗಿದೆ ಎಂದು ಸ್ವತಃ ಮಿಥುನ್ ರೈ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಆ ಬಳಿಕ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಂಗಳೂರಿಗೆ ಬಂದಾಗ ಅವರೊಂದಿಗೆ ಮಿಥುನ್ ರೈ ಕಾಣಿಸಿಕೊಂಡಿದ್ದು ಜೊತೆಗೆ ಓಡಾಡಿದ್ದಾರೆ. ಇದನ್ನೂ ಓದಿ: ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಕೊರೊನಾ ಪಾಸಿಟಿವ್

    ಸರ್ಕಾರದ ಕೊವೀಡ್ ನಿಯಮದಂತೆ ಕೊರೊನಾ ಪಾಸಿಟಿವ್ ಆದ ವ್ಯಕ್ತಿ ಕನಿಷ್ಠ 17 ದಿನ ಐಸೋಲೇಷನ್ ನಲ್ಲಿ ಇರೋದು ಕಡ್ಡಾಯ. ಆದರೆ ಜುಲೈ 17ರಂದು ಪಾಸಿಟಿವ್ ಆಗಿದ್ದ ಮಿಥುನ್ ರೈ ಕೇವಲ 14 ದಿನದಂದೇ ಕೆಪಿಸಿಸಿ ಅಧ್ಯಕ್ಷರ ಜೊತೆ ಓಡಾಡಿದ್ದು, ಇದೀಗ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

  • ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಕೊರೊನಾ ಪಾಸಿಟಿವ್

    ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಕೊರೊನಾ ಪಾಸಿಟಿವ್

    ಮಂಗಳೂರು: ಕೊರೊನಾ ಎಂಬ ಮಹಾಮಾರಿ ಯಾರನ್ನೂ ಬಿಡುತ್ತಿಲ್ಲ. ಘಟಾನುಘಟಿ ವ್ಯಕ್ತಿಗಳಿಂದ ಹಿಡಿದು ಜನಸಾಮಾನ್ಯರವರೆಗೂ ಸೋಂಕು ಹರಡುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ಸಿನ ಯುವ ನಾಯಕ ಮಿಥುನ್ ರೈಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

    ಈ ಬಗ್ಗೆ ತಮ್ಮ ಫೇಸ್‍ಬುಕ್ ನಲ್ಲಿ ಮಿಥುನ್ ರೈಯವರು ಮಾಹಿತಿ ಹಂಚಿಕೊಂಡಿದ್ದಾರೆ. ನನಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸದ್ಯ ನಾನು ಬೆಂಗಳೂರಿನಲ್ಲಿ ಕ್ವಾರಂಟೈನ್ ಆಗಿದ್ದೇನೆ. ಅಲ್ಲದೆ ನಿಮ್ಮ ಸೇವೆ ಮಾಡಲು ಆದಷ್ಟು ಬೇಗ ಗುಣಮುಖನಾಗಿ ಬರುತ್ತೇನೆ. ನಿಮ್ಮ ಪ್ರೀತಿ, ವಿಶ್ವಾಸ ಸದಾ ನನ್ನ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.

    ಹಾಗೆಯೇ ಕೆಲ ದಿನಗಳಿಂದ ಯಾರೆಲ್ಲ ನನ್ನ ಸಂಪರ್ಕದಲ್ಲಿದ್ರೋ ಅವರೆಲ್ಲ ಆದಷ್ಟು ಬೇಗ ಕೋವಿಡ್ 19 ಟೆಸ್ಟ್ ಮಾಡಿಸಿಕೊಳ್ಳಿ ಎಂದು ಇದೇ ವೇಳೆ ಮನವಿ ಕೂಡ ಮಾಡಿಕೊಂಡಿದ್ದಾರೆ.

    ಲಾಕ್‍ಡೌನ್ ಆದಾಗಿನಿಂದಲೂ ಮಿಥುನ್ ರೈ ಅವರು ಜಿಲ್ಲೆಯ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಜಿಲ್ಲೆಯ ನಾನಾ ಕಡೆ ಸುತ್ತಾಡಿ ಅಗತ್ಯ ವಸ್ತುಗಳ ಕಿಟ್ ನ್ನು ಮನೆ ಮನೆಗೆ ತಲುಪಿಸುತ್ತಿದ್ದರು. ಬಳಿಕವೂ ಯಾವುದಾದರೂ ಸಮಸ್ಯೆಗಳು ಗಮನಕ್ಕೆ ಬಂದಾಗ ಕೂಡ ಜನರೊಂದಿಗೆ ಬೆರೆಯುತ್ತಿದ್ದರು. ಹೀಗಾಗಿ ಕಳೆದ ಕೆಲ ದಿನದಿಂದ ಸಂಪರ್ಕದಲ್ಲಿದ್ದವರನ್ನು ಸ್ವಯಂ ಪರೀಕ್ಷೆಗೆ ಒಳಗಾಗುವಂತೆ ವಿನಂತಿಸಿದ್ದಾರೆ.

  • ಡಿಕೆಶಿಗೆ ಏನೇ ಆದ್ರೂ ಇಡಿ, ಕೇಂದ್ರ ಸರ್ಕಾರ ಕಾರಣ: ಮಿಥುನ್ ರೈ

    ಡಿಕೆಶಿಗೆ ಏನೇ ಆದ್ರೂ ಇಡಿ, ಕೇಂದ್ರ ಸರ್ಕಾರ ಕಾರಣ: ಮಿಥುನ್ ರೈ

    ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಏನಾದ್ರು ಆದರೆ ಇಡಿ ಮತ್ತು ಕೇಂದ್ರ ಸರ್ಕಾರಕ್ಕೆ ಕಾರಣ ಎಂದು ಮಂಗಳೂರಿನ ಕಾಂಗ್ರೆಸ್ ನಾಯಕ ಮಿಥುನ್ ರೈ ಎಚ್ಚರಿಕೆ ನೀಡಿದ್ದಾರೆ.

    ಆರ್‍ಎಂಎಲ್ ಆಸ್ಪತ್ರೆಯ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಿಥುನ್ ರೈ, ನಮ್ಮ ನಾಯಕರನ್ನು ಭೇಟಿಯಾಗಲು ದೆಹಲಿಯ ಪೊಲೀಸರು ಅನುಮತಿ ನೀಡುತ್ತಿಲ್ಲ. ಆಸ್ಪತ್ರೆಯೊಳಗೆ ಸಹ ಬಿಡುತ್ತಿಲ್ಲ. ಕಾಂಗ್ರೆಸ್ ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ, ಧೃವ ನಾರಾಯಣ್, ಉಗ್ರಪ್ಪ ರಸ್ತೆಯಲ್ಲಿ ಕಾಯುವಂತಾಗಿದೆ. ಇದು ಕರ್ನಾಟಕ ಅಲ್ಲ, ದೆಹಲಿ ಎಂದು ಪೊಲೀಸರು ಹೇಳುತ್ತಿದ್ದು, ಇಡಿ ಅನುಮತಿ ತಂದರೆ ಆಸ್ಪತ್ರೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳುತ್ತಿದ್ದಾರೆ. ಇಡಿ ಅಧಿಕಾರಿಗಳು ಆರ್‍ಎಂಎಲ್ ವೈದ್ಯರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಆರೋಪಿಸಿದರು.

    ಡಿ.ಕೆ.ಶಿವಕುಮಾರ್ ಬಿಪಿ ನಿಯಂತ್ರಣಕ್ಕೆ ಬರಬೇಕಿದೆ. ಸಣ್ಣದಾಗಿ ಎದೆ ನೋವು ಸಹ ಕಾಣಿಸಿಕೊಂಡಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇಡಿ ಅಧಿಕಾರಿಗಳು ನಾರ್ಮಲ್ ರಿಪೋರ್ಟ್ ನೀಡಿ ಡಿಸ್ಚಾರ್ಜ್ ಮಾಡಬೇಕೆಂದು ವೈದ್ಯರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸೋದರ ಡಿ.ಕೆ.ಸುರೇಶ್ ಮತ್ತು ಬಾಮೈದ ಡಾ.ರಂಗನಾಥ್ ಅವರನ್ನು ಸಹ ಭೇಟಿಯಾಗಲು ಬಿಡುತ್ತಿಲ್ಲ. ರಂಗನಾಥ್ ಸಹ ಓರ್ವ ವೈದ್ಯರಾಗಿದ್ದು, ಡಿಕೆಶಿಯವರ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಮಿಥುನ್ ರೈ ಕಿಡಿಕಾರಿದರು.

    ಡಿಕೆ ಶಿವಕುಮಾರ್ ಅವರು ವಿಚಾರಣೆಗೆ ಸಹಕರಿಸಿದ್ದಾರೆ. ಆದ್ರೆ ಅಧಿಕಾರಿಗಳು ಕೇಂದ್ರ ಸರ್ಕಾರ ಮತ್ತು ಅಮಿತ್ ಶಾ ಅವರ ಕೈಗೊಂಬೆ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಮಿಥುನ್ ರೈ ಆರೋಪಿಸಿದರು.

  • ದೊಡ್ಡ ತಪ್ಪು ಮಾಡಿದ್ದೇನೆ, ಮನ್ನಿಸು: ಗೋಕರ್ಣನಾಥನಿಗೆ ಕ್ಷಮೆ ಯಾಚಿಸಿದ ಪೂಜಾರಿ

    ದೊಡ್ಡ ತಪ್ಪು ಮಾಡಿದ್ದೇನೆ, ಮನ್ನಿಸು: ಗೋಕರ್ಣನಾಥನಿಗೆ ಕ್ಷಮೆ ಯಾಚಿಸಿದ ಪೂಜಾರಿ

    – ಶಪಥ ಮುರಿದು ಕುದ್ರೋಳಿ ದೇವಸ್ಥಾನಕ್ಕೆ ಭೇಟಿ

    ಮಂಗಳೂರು: ಜೀವನದಲ್ಲಿ ದೊಡ್ಡ ತಪ್ಪು ಮಾಡಿದ್ದೇನೆ, ಮನ್ನಿಸು ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಜನಾರ್ದನ ಪೂಜಾರಿ ಗೋಕರ್ಣನಾಥನ ಮುಂದೆ ಕ್ಷಮೆ ಯಾಚಿಸಿದ್ದಾರೆ.

    ನಗರದ ಪ್ರಸಿದ್ಧ ಕುದ್ರೋಳಿ ದೇವಸ್ಥಾನಕ್ಕೆ ಭಾನುವಾರ ಜನಾರ್ದನ ಪೂಜಾರಿ ಅವರು ಭೇಟಿ ನೀಡಿದರು. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮಾಡಿದ್ದ ಶಪಥವನ್ನು ಮುರಿದಿದ್ದಾರೆ.

    ಒಂದು ವೇಳೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಗೆಲುವು ಸಾಧಿಸದಿದ್ದರೆ ಕುದ್ರೋಳಿ ದೇವಸ್ಥಾನ ಪ್ರವೇಶ ಮಾಡುವುದಿಲ್ಲ ಎಂದು ಜನಾರ್ದನ ಪೂಜಾರಿ ಶಪಥ ಮಾಡಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ ವಿರುದ್ಧ ಮಿಥುನ್ ರೈ ಸೋಲು ಕಂಡಿದ್ದರು.

    ಜನಾರ್ದನ ಪೂಜಾರಿ ಅವರು ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ರೂವಾರಿಯಾಗಿದ್ದಾರೆ. ಪ್ರತಿಜ್ಞೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿ, ಗೋಕರ್ಣನಾಥನಿಗೆ ಕ್ಷಮೆ ಕೇಳಿದ್ದಾರೆ.

    2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ನರೇಂದ್ರ ಮೋದಿ ಅಲೆಯಲ್ಲಿ 2,74,621 ಮತಗಳ ಅಂತರದಿಂದ ಮೂರನೇ ಬಾರಿ ಲೋಕಸಭೆ ಪ್ರವೇಶ ಮಾಡಿದ್ದಾರೆ. ಕಟೀಲ್ 7,74,285 ಮತಗಳನ್ನು ಪಡೆದರೆ ಕಾಂಗ್ರೆಸ್ಸಿನ ಮಿಥುನ್ ರೈ 4,99,664 ಮತಗಳನ್ನು ಪಡೆದಿದ್ದರು.

  • ಮಂಗ್ಳೂರಲ್ಲಿ ಮಿಥುನ್ ರೈಗೆ ಜೀವ ಬೆದರಿಕೆ!

    ಮಂಗ್ಳೂರಲ್ಲಿ ಮಿಥುನ್ ರೈಗೆ ಜೀವ ಬೆದರಿಕೆ!

    ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಿಥುನ್ ರೈಗೆ ಬಹಿರಂಗ ಜೀವ ಬೆದರಿಕೆ ಹಾಕಿದ ಘಟನೆ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

    ಮೇ 23ರ ಮತ ಎಣಿಕೆಯ ದಿನದಂದು ಸಂಜೆ ಮಂಗಳೂರು ಹೊರವಲಯದ ಪೊಳಲಿ ಸಮೀಪದ ಬಡಕಬೈಲ್ ಎಂಬಲ್ಲಿ ನಡುರಸ್ತೆಯಲ್ಲೇ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ನಡೆದಿತ್ತು. ಈ ವೇಳೆ, ಮಿಥುನ್ ರೈ ವಿರುದ್ಧ ಘೋಷಣೆ ಹಾಕುತ್ತಾ ಬಜರಂಗದಳದ ಸುದ್ದಿಗೆ ಬಂದಲ್ಲಿ ಕೈ, ಕಾಲು ಕಡಿಯುತ್ತೇವೆ. ಅಗತ್ಯ ಬಿದ್ದರೆ ತಲೆಯನ್ನೂ ತೆಗೆಯುತ್ತೇವೆ ಎಂದು ಘೋಷಣೆ ಹಾಕಿದ್ದಾರೆ.

    ನಡುಬೀದಿಯಲ್ಲಿ ಹೀಗೆ ಘೋಷಣೆ ಹಾಕಿದ್ದನ್ನು ಸಾರ್ವಜನಿಕರು ವಿಡಿಯೋ ಮಾಡಿದ್ದು ಈಗ ವೈರಲ್ ಆಗಿದೆ. ಈ ಹಿಂದೆ ಚುನಾವಣೆ ಸಂದರ್ಭ ಮಿಥುನ್ ರೈ ಭಾಷಣ ಮಾಡುತ್ತಾ ತಾನು ಗೆದ್ದು ಬಂದಲ್ಲಿ ಬಜರಂಗದಳದ ಹುಟ್ಟಡಗಿಸುತ್ತೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ ಸಂಘಟನೆಯನ್ನು ನಿಷೇಧಿಸುತ್ತೇವೆಂದು ಹೇಳಿದ್ದರು.

    ಈ ವಿಚಾರ ಹಿಂದೂ ಸಂಘಟನೆಗಳ ಆಕ್ಷೇಪಕ್ಕೆ ಕಾರಣವಾಗಿತ್ತು. ಇದೀಗ ಮಿಥುನ್ ರೈ ಹೀನಾಯವಾಗಿ ಸೋತ ಬಳಿಕ ಬಜರಂಗದಳದ ಕಾರ್ಯಕರ್ತರು ಬಿಜೆಪಿ ವಿಜಯೋತ್ಸವ ನೆಪದಲ್ಲಿ ಬೆದರಿಕೆ ಹಾಕಿದ್ದು ಸಹಜವಾಗೇ ಮತ್ತೊಂದು ರಾಜಕೀಯ ವೈರತ್ವಕ್ಕೆ ಕಾರಣವಾಗಿದೆ.

  • ಸದೃಢ ಭಾರತಕ್ಕಾಗಿ ಸರತಿಸಾಲಿನಲ್ಲಿ ನಿಂತು ನವವಧುಗಳಿಂದ ಮತದಾನ

    ಸದೃಢ ಭಾರತಕ್ಕಾಗಿ ಸರತಿಸಾಲಿನಲ್ಲಿ ನಿಂತು ನವವಧುಗಳಿಂದ ಮತದಾನ

    – ವಾಮಂಜೂರಿನಲ್ಲಿ ಕೆಲಕಾಲ ಕೈ ಕೊಟ್ಟ ಇವಿಎಂ
    – ವೃದ್ಧನಿಗೆ ಕಾಂಗ್ರೆಸ್ ಅಭ್ಯರ್ಥಿ ಸಹಾಯ

    ಮಂಗಳೂರು: ಸದೃಢ ಭಾರತಕ್ಕಾಗಿ ನವವಧುಗಳು ಸರತಿ ಸಾಲಿನಲ್ಲಿಯೇ ನಿಂತು ತನ್ನ ಹಕ್ಕು ಚಲಾಯಿಸಿರುವ ಘಟನೆ ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ನಡೆದಿದೆ.

    ಹೌದು, ಬಂಟ್ವಾಳ ವಿಧಾನಸಭಾ ಕ್ಷೇತ್ರ ವಿಟ್ಲದ ಕುಡ್ಪಲ್ತಡ್ಕದಲ್ಲಿ ವಧು ತನ್ನ ಮದುವೆಗೂ ಮುಂಚೆಯೇ ಮತದಾನ ಮಾಡಿದ್ದಾರೆ. ಆನೆಯಾಲಗುತ್ತು ಶ್ರುತಿ ಶೆಟ್ಟಿ ಎಂಬವರೇ ಈ ರೀತಿ ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಇತ್ತ ಬೆಳ್ತಂಗಡಿಯಲ್ಲೂ ಮೂವರು ವಧುಗಳು ಒಂದೇ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದ್ದಾರೆ. ತಾಲೂಕಿನ ತಣ್ಣೀರುಪಂಥ ಬೂತ್ ನಲ್ಲಿ ಮದುವೆ ಶೃಂಗಾರದಲ್ಲೇ ಬಂದ ಅಕ್ಷತಾ, ಅಶ್ವಿನಿ ಹಾಗೂ ಹೇಮಲತಾ ಮದುವೆ ಮಂಟಪಕ್ಕೆ ತೆರಳುವ ಮುನ್ನವೇ ತಮ್ಮ ಅಮೂಲ್ಯ ಮತವನ್ನು ಹಾಕಿದ್ದಾರೆ.

    ಕೈಕೊಟ್ಟ ಇವಿಎಂ:
    ಮಂಗಳೂರಿನಲ್ಲಿ ಇವಿಎಂ ಮೆಷಿನ್ ಕೆಲಕಾಲ ಕೈಕೊಟ್ಟಿತ್ತು. ವಾಮಂಜೂರು ತಿರುವೈಲ್ ವಾರ್ಡ್‍ನ ಮತಗಟ್ಟೆ 150ರಲ್ಲಿ ಈ ಘಟನೆ ನಡೆದಿದೆ. ಕೈಕೊಟ್ಟ ಇವಿಎಂನಿಂದಾಗಿ ಮತದಾರರು ಅಸಮಾಧಾನಗೊಂಡು ವಾಪಾಸ್ ಆಗಿದ್ದರು. ಹೀಗಾಗಿ ಒಂದು ಗಂಟೆ ತಡವಾಗಿ ಮತದಾನ ಆರಂಭಗೊಂಡಿದ್ದು, ವಾಪಸ್ಸಾದವರು ಸೇರಿದಂತೆ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

    ವೃದ್ಧನಿಗೆ ಮಿಥುನ್ ರೈ ಸಹಾಯ:
    ಮಂಗಳೂರು ಬಲ್ಮಠ ಸರ್ಕಾರಿ ಪ್ರೌಢ ಶಾಲೆ ಮತಗಟ್ಟೆಯಲ್ಲಿ ಅಶಕ್ತರಾಗಿದ್ದ 83 ವರ್ಷದ ರಮೇಶ್ ರಾವ್‍ಗೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಸಹಾಯ ಮಾಡಿದ್ದಾರೆ. ಕಾರಿನಿಂದ ಎತ್ತಿ ಇಳಿಸಿ ನಂತರವ್ಹೀಲ್ ಚೇರ್ ನಲ್ಲಿ ರೈ ಕೂರಿಸಿದ್ದಾರೆ. ಮಿಥುನ್ ರೈ ನಂತರ ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಮಿಥುನ್, ಹೆಗಲಿಗೆ ಕೇಸರಿ ಮತ್ತು ಹಳದಿ ಶಾಲು ಹಾಕ್ಕೊಂಡು ಬಂದಿದ್ದರು.

    ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಕೂಡ ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮತದಾನ ಮಾಡಿದ್ರು. ಬಂಟ್ವಾಳ ತಾಲೂಕಿನ ಭಂಡಾರಿಬೆಟ್ಟು ಸರಕಾರಿ ಶಾಲೆಯಲ್ಲಿ ಮತದಾನ ಮಾಡಿದ ಇವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು.

  • ಮೃದು ಹಿಂದುತ್ವದ ಪ್ರಶ್ನೆಗೆ ನಮ್ಮದು ಉತ್ತಮ ಹಿಂದುತ್ವ ಎಂದ ಖಾದರ್

    ಮೃದು ಹಿಂದುತ್ವದ ಪ್ರಶ್ನೆಗೆ ನಮ್ಮದು ಉತ್ತಮ ಹಿಂದುತ್ವ ಎಂದ ಖಾದರ್

    ಮಂಗಳೂರು: ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಮೃದು ಹಿಂದುತ್ವದತ್ತ ಮರಳುತ್ತಿದೆಯೇ ಅನ್ನುವ ಸಂಶಯ ಮೂಡಿದೆ. ದ.ಕ. ಉಸ್ತುವಾರಿ ಸಚಿವ ಯು.ಟಿ ಖಾದರ್ ಬಳಿ, ಈ ಪ್ರಶ್ನೆ ಮುಂದಿಟ್ಟಾಗ ಕಾಂಗ್ರೆಸಿನದ್ದು ಉತ್ತಮ ಹಿಂದುತ್ವ ಅನ್ನುವ ಉತ್ತರ ನೀಡಿದ್ದಾರೆ.

    ಕಾಂಗ್ರೆಸ್, ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರು ಹೇಳಿಕೊಟ್ಟ ಹಿಂದುತ್ವವನ್ನು ಪಾಲಿಸುತ್ತದೆ. ಆದರೆ ಬಿಜೆಪಿಯದ್ದು ಬೇರೆಯದ್ದೇ ಹಿಂದುತ್ವ ಎಂದಿದ್ದಾರೆ. ಇದೇ ವೇಳೆ, ದ.ಕ. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪ್ರಚಾರ ಸಂದರ್ಭದಲ್ಲಿ ಹನುಮಾನ್ ಚಾಲೀಸಾ, ಖುರಾನ್ ಪಠಣ ಮಾಡಿದ್ದನ್ನು ಸಚಿವ ಖಾದರ್ ಸಮರ್ಥಿಸಿಕೊಂಡಿದ್ದಾರೆ.

    ಹನುಮಾನ್ ಚಾಲೀಸಾ ಪಠಿಸಿದರೆ ಒಂದು ವೋಟು ಹೆಚ್ವು ಕೊಡಬೇಕು. ಖುರಾನ್ ಪಠಣ ಮಾಡಿದರೆ ಮತ್ತೂ ಹೆಚ್ಚು ವೋಟು ಲಭಿಸಲಿದೆ ಎಂದು ಖಾದರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್, ಚುನಾವಣೆಗಾಗಿ ಮೃದು ಹಿಂದುತ್ವದತ್ತ ಮರಳುತ್ತಿರುವುದರ ಸಂಕೇತ ಇದು ಎನ್ನಲಾಗುತ್ತಿದೆ.

  • ಮಿಥುನ್ ರೈ ಗೆಲ್ಲಿಸಲು ವಿಭಿನ್ನವಾಗಿ ಫೀಲ್ಡಿಗಿಳಿದ ಯುವಕರು!

    ಮಿಥುನ್ ರೈ ಗೆಲ್ಲಿಸಲು ವಿಭಿನ್ನವಾಗಿ ಫೀಲ್ಡಿಗಿಳಿದ ಯುವಕರು!

    ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ, ಯುವ ನಾಯಕ ಮಿಥುನ್ ರೈ ಪರವಾಗಿ ಭರ್ಜರಿ ಕ್ಯಾಂಪೇನ್ ನಡೆದಿದೆ.

    ಮಿಥುನ್ ರೈ ಪರವಾಗಿ ಕೆಲವು ಕಡೆ ಯುವಕರ ತಂಡ ಸ್ವಯಂಪ್ರೇರಿತರಾಗಿ ಫೀಲ್ಡಿಗಿಳಿದಿದ್ದಾರೆ. ನಗರದ ಕೂಳೂರಿನ ಶೇ.50ರಷ್ಟು ಯುವಕರು ತಮ್ಮದೇ ದುಡ್ಡಿನಲ್ಲಿ ಮಿಥುನ್ ರೈ ಫೋಟೋ ಮತ್ತು ಚಿಹ್ನೆ ಇರುವ ಟಿ ಶರ್ಟ್ ಹಾಕಿಕೊಂಡು ಪ್ರಚಾರ ಆರಂಭಿಸಿದ್ದಾರೆ.

    ಯಾವುದೇ ಪಕ್ಷದ ಕಾರ್ಯಕರ್ತರು ಅಲ್ಲ ಎಂದು ಹೇಳಿಕೊಳ್ಳುವ ಈ ಯುವಕರು, ನಾಡಿನ ಸಮಸ್ಯೆಗಳ ಬಗ್ಗೆ ಗೊತ್ತಿರುವ ವಿದ್ಯಾವಂತ ಸಂಸದನ ಆಯ್ಕೆ ಆಗಬೇಕೆಂಬ ನೆಲೆಯಲ್ಲಿ ಮನೆ, ಮನೆಗೆ ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದಾರೆ.

    ಮೋದಿ ಅಲೆಯ ವಿರುದ್ಧ ಯುವ ಐಕಾನ್ ಹೆಸರಲ್ಲಿ ಯುವಕರು ಅಭಿಯಾನ ನಡೆಸುತ್ತಿದ್ದಾರೆ. ಮಂಗಳೂರಿನ ಉರ್ವಾಸ್ಟೋರ್ ವ್ಯಾಪ್ತಿಯ ದಂಬೆಲ್, ಉರ್ವಾ ಮಾರ್ಕೆಟ್, ಹೊಯ್ಗೆ ಬೈಲ್, ಅಶೋಕನಗರ ಪರಿಸರದಲ್ಲಿ ಯಾವುದೇ ಮುಖಂಡರ ಸಾಥ್ ಇಲ್ಲದೆ ಸ್ವಯಂಪ್ರೇರಿತ ಪ್ರಚಾರ ನಡೆಸುತ್ತಿರುವುದು ಗಮನ ಸೆಳೆದಿದೆ.

    ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್ ಅವರು ಈ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ.