Tag: ಮಿಣಿ ಮಿಣಿ ಪೌಡರ್

  • ನನ್ನ ಮುಖನೂ ಮಿಣಿ ಮಿಣಿ ಅಂತಿದೆ: ಡಿಕೆಶಿ

    ನನ್ನ ಮುಖನೂ ಮಿಣಿ ಮಿಣಿ ಅಂತಿದೆ: ಡಿಕೆಶಿ

    ಕಲಬುರಗಿ: ನನ್ನ ಮುಖ, ನಿಮ್ಮ ಮುಖನೂ ಮಿಣಿ ಮಿಣಿ ಅಂತಿದೆ. ಮಿಣಿ ಅಂದ್ರೆ ತಪ್ಪಾಗಿ ಬಿಡುತ್ತಾ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿಣಿ ಮಿಣಿಯ ಬಗ್ಗೆ ನನಗೆ ಗೊತ್ತಿಲ್ಲ. ಕುಮಾರಸ್ವಾಮಿಯವರು ನಮ್ಮ ರಾಜ್ಯ ಮಾಜಿ ಮುಖ್ಯಮಂತ್ರಿ. ನಮ್ಮ ಪಕ್ಕದ ಕ್ಷೇತ್ರದವರು. ಅವರ ಕೈ ಕೆಳಗೆ ಕೆಲಸ ಮಾಡಿರೋರು. ಬಿಜೆಪಿ ನಾಯಕರು ಕೆಲವು ಮಾತುಗಳನ್ನಾಡುತ್ತಿದ್ದಾರೆ. ಮಂತ್ರಿಗಳು, ಶಾಸಕರು ಮಾತನಾಡಿದ ಮಾತುಗಳನ್ನು ಹೇಳುತ್ತಿಲ್ಲ. ಕುಮಾರಸ್ವಾಮಿ ಮಿಣಿಮಿಣಿ ಪೌಡರ್ ವಿಚಾರ ಅಪಹಾಸ್ಯ ಮಾಡುವುದು ಸರಿಯಲ್ಲ, ಎಂದು ಬಿಜೆಪಿಯವರಿಗೆ ಹೆಚ್‍ಡಿಕೆ ಪರ ಬ್ಯಾಟ್ ಬೀಸಿದರು. ಇದನ್ನೂ ಓದಿ: ಮಿಣಿ ಮಿಣಿ ಪೌಡರ್ ಹೇಳಿಕೆ ವೈರಲ್- ಹೆಚ್‍ಡಿಕೆ ಮೊದಲ ಪ್ರತಿಕ್ರಿಯೆ

    ದೇಶಕ್ಕೆ ಸಮಾಜಕ್ಕೆ ಅನುದಾನ, ಅಭಿವೃದ್ಧಿ, ಯುವಕರು, ದ್ವೇಷ ಸಾಧನೆ, ಕೇಸು ಇವುಗಳ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಮಿಣಿ ಮಿಣಿ ಅಂದ್ರೆ ತಪ್ಪಾಗಿ ಬಿಡುತ್ತಾ ಎಂದು ಪ್ರಶ್ನಿಸಿದರು. ಅಲ್ಲದೆ ನನ್ನ ಮುಖನೂ ಮಿಣಿ ಮಿಣಿ ಅಂತಿದೆಪ್ಪಾ. ನಿಮ್ಮ ಮುಖನೂ ಮಿಣಿ ಮಿಣಿ ಅಂತಿದೆ. ಅದಕ್ಕೆ ಏನು ಮಾಡೋಕೆ ಆಗುತ್ತೆ. ಅದೊಂದು ವಿಷಯನಾ ಎಂದು ಮರು ಪ್ರಶ್ನೆ ಹಾಕುವ ಮೂಲಕ ಹೆಚ್‍ಡಿಕೆ ಹೇಳಿಕೆಯನ್ನು ಡಿಕೆಶಿ ಬೆಂಬಲಿಸಿದರು. ಇದನ್ನೂ ಓದಿ: ಮಿಣಿ ಮಿಣಿ ಪದ ಟ್ರೋಲ್, ಕನ್ನಡ- ಗ್ರಾಮೀಣ ಕರ್ನಾಟಕಕ್ಕೆ ಅಪಮಾನ: ಹೆಚ್‍ಡಿಕೆ

    ಕೆಪಿಸಿಸಿ ಅಧ್ಯಕ್ಷ ಆಯ್ಕೆಗೇ ನಾನು ಅರ್ಜಿನೂ ಹಾಕಿಲ್ಲ. ಆಕಾಂಕ್ಷಿನೂ ಅಲ್ಲ. ಸದ್ಯ ದಿನೇಶ ಗುಂಡೂರಾವ್ ಅವರು ನಮ್ಮ ನಾಯಕರು ಅವರೇ ಅಧ್ಯಕ್ಷರಾಗಿದ್ದಾರೆ. ಅವರು ರಾಜೀನಾಮೆ ನೀಡಿದರೂ ಅದನ್ನ ಪಕ್ಷದ ವರಿಷ್ಠರು ಅಂಗೀಕರಿಸಿಲ್ಲ. ಹೀಗಾಗಿ ಕೆಪಿಸಿಸಿ ಹುದ್ದೆ ಸಹ ಖಾಲಿ ಇಲ್ಲ. ಇನ್ನು ಆ ಹುದ್ದೆಯೇ ಕೇಳಿಲ್ಲ ಅಂದ್ರೆ ಯಾರು ತಾನೇ ಅಡ್ಡಗಾಲು ಹಾಕಲು ಸಾಧ್ಯ ಅಂತ ತಮ್ಮ ಎದುರಾಳಿ ಗುಂಪಿಗೆ ಡಿಕೆಶಿ ಟಾಂಗ್ ನೀಡಿದರು. ಇದನ್ನೂ ಓದಿ: ತುಳುನಾಡಿನ ಯಕ್ಷಗಾನದಲ್ಲೂ ಎಚ್‍ಡಿಕೆಯ ‘ಮಿಣಿ ಮಿಣಿ ಪೌಡರ್’ ಡೈಲಾಗ್ ಟ್ರೋಲ್ 

  • ತುಳುನಾಡಿನ ಯಕ್ಷಗಾನದಲ್ಲೂ ಎಚ್‍ಡಿಕೆಯ ‘ಮಿಣಿ ಮಿಣಿ ಪೌಡರ್’ ಡೈಲಾಗ್ ಟ್ರೋಲ್ 

    ತುಳುನಾಡಿನ ಯಕ್ಷಗಾನದಲ್ಲೂ ಎಚ್‍ಡಿಕೆಯ ‘ಮಿಣಿ ಮಿಣಿ ಪೌಡರ್’ ಡೈಲಾಗ್ ಟ್ರೋಲ್ 

    ಮಂಗಳೂರು: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಮಂಗಳೂರಿನಲ್ಲಿ ಪತ್ತೆಯಾಗಿದ್ದ ಬಾಂಬ್ ವಿಚಾರವಾಗಿ ಮಾತನಾಡುವಾಗ ‘ಮಿಣಿ ಮಿಣಿ ಪೌಡರ್’ ಎಂಬ ಪದ ಬಳಸಿದ್ದರು. ಈ ‘ಮಿಣಿ ಮಿಣಿ ಪೌಡರ್’ ಡೈಲಾಗ್ ಇಟ್ಟುಕೊಂಡು ಎಲ್ಲೆಡೆ ಎಚ್‍ಡಿಕೆ ಅವರನ್ನ ಟ್ರೋಲ್ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣ ಮಾತ್ರವಲ್ಲ ಯಕ್ಷಗಾನದಲ್ಲೂ ‘ಮಿಣಿ ಮಿಣಿ ಪೌಡರ್’ ಡೈಲಾಗ್ ಸಖತ್ ಫೇಮಸ್ ಆಗಿದೆ.

    ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು, ಬಾಂಬ್ ಜೊತೆ ಬ್ಯಾಗ್‍ನಲ್ಲಿ ‘ಮಿಣಿ ಮಿಣಿ ಪೌಡರ್’ ಕೂಡ ಪತ್ತೆಯಾಗಿತ್ತು ಎಂದು ಹೇಳಿದ್ದರು. ಈ ಮಿಣಿ ಮಿಣಿ ಪೌಡರ್ ಡೈಲಾಗ್ ಎಷ್ಟರ ಮಟ್ಟಿಗೆ ಟ್ರೋಲ್ ಆಗುತ್ತಿದೆ ಎಂದರೆ ಯಕ್ಷಗಾನದ ಪ್ರಸಂಗದಲ್ಲಿಯೂ ಈ ಡೈಲಾಗ್ ಬಳಿಸಿ ಟ್ರೋಲ್ ಮಾಡಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದ ಯಕ್ಷಗಾನ ಪ್ರಸಂಗ ಒಂದರಲ್ಲಿ ಹಾಸ್ಯ ಕಲಾವಿದರೋರ್ವರು ಕುಮಾರಸ್ವಾಮಿಯವರ ಹೆಸರು ಉಲ್ಲೇಖಿಸದೆ ‘ಮಿಣಿ ಮಿಣಿ ಪೌಡರ್’ ಬಗ್ಗೆ ಅಣಕಿಸಿದ್ದಾರೆ. ಜ್ಯೋತಿಷಿಯ ವೇಷಧಾರಿಯಾಗಿದ್ದ ಕಲಾವಿದ, ಮಿಣಿ ಮಿಣಿ ಪೌಡರ್ ಹಾಸನ ಮೂಲದ ಜ್ಯೋತಿಷಿ ನಂಗೆ ಕೊಟ್ಟಿದ್ದು, ಆ ಪೌಡರ್ ಅಸಾಮಾನ್ಯ ಶಕ್ತಿಯುಳ್ಳದ್ದು, ತಲೆಯಲ್ಲಿ ಕೂದಲು ಇಲ್ಲದ ದೊಡ್ಡ ಜ್ಯೋತಿಷಿ ಇದನ್ನು ನಂಗೆ ಕೊಟ್ಟಿದ್ದಾಗಿ ಹೇಳುತ್ತಾ ನಗುತ್ತಾನೆ. ಯಕ್ಷಗಾನ ಪ್ರಸಂಗದ ಈ ವಿಡಿಯೋ ಈಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  • ಮಿಣಿ-ಮಿಣಿ ಪೌಡರ್ ಅವರ ಬಾಯಿಂದ ಬರದಿದ್ರೆ ವೈರಲ್ ಆಗ್ತಿರಲಿಲ್ಲ: ಹೆಚ್‍ಡಿಕೆಗೆ ಸಿಟಿ ರವಿ ಸಲಹೆ

    ಮಿಣಿ-ಮಿಣಿ ಪೌಡರ್ ಅವರ ಬಾಯಿಂದ ಬರದಿದ್ರೆ ವೈರಲ್ ಆಗ್ತಿರಲಿಲ್ಲ: ಹೆಚ್‍ಡಿಕೆಗೆ ಸಿಟಿ ರವಿ ಸಲಹೆ

    ಚಿಕ್ಕಮಗಳೂರು: ಮಿಣಿ-ಮಿಣಿ ಪೌಡರ್ ಎಂದದ್ದು ಅವರೇ, ಅವರ ಬಾಯಿಂದ ಬರದಿದ್ದರೆ ವೈರಲ್ ಆಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರು ಟಾಂಗ್ ನೀಡಿದ್ದಾರೆ.

    ಇಂದು ಜಿಲ್ಲೆಯ ಕಡೂರಿನ ಚೌಳಹಿರಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಅದನ್ನು ಡಿಮೋಕ್ರೇಟಿಕ್ ವೇನಲ್ಲಿ ಸ್ವೀಕರಿಸಬೇಕು. ಗಾಂಧೀಜಿ ತಮ್ಮನ್ನ ತಾವು ಅಪಹಾಸ್ಯಕ್ಕೆ ಒಳಪಡೋದನ್ನು ಇಷ್ಟ ಪಡುತ್ತಿದ್ದರು ಎಂದು ಸಲಹೆ ನೀಡಿದ್ದಾರೆ.

    ನನ್ನನ್ನ ಅಪಹಾಸ್ಯಕ್ಕೆ ಒಳಪಡಿಸಿದ್ರೆ ಸಂತೋಷದಿಂದ ಸ್ವೀಕರಿಸುತ್ತೇನೆ. ಹಾಸ್ಯವೂ ಕೂಡ ಡೆಮಾಕ್ರಸಿಯ ಬ್ಯೂಟಿ, ಅದನ್ನು ಹಾಗೇ ತಿಳಿದುಕೊಳ್ಳಬೇಕು. ಅವರು ಇದಕ್ಕೆ ಅಷ್ಟು ವ್ಯಂಗ್ಯ ಹಾಗೂ ವ್ಯಾಘ್ರರಾದರೆ ಹೇಗೆ? ದೇಶ-ಜಗ ಮೆಚ್ಚಿರೋ ಮೋದಿ ಬಗ್ಗೆ ಏನೆಲ್ಲಾ ಪದ ಬಳಕೆ ಮಾಡಿಲ್ಲ. ಅವರು ಇದನ್ನು ಹರ್ಷದಿಂದ ಸ್ವೀಕರಿಸಬೇಕು ಎಂದು ಕುಮಾರಸ್ವಾಮಿ ಅವರಿಗೆ ಸಿಟಿ ರವಿ ಅವರು ಸಲಹೆ ನೀಡಿದ್ದಾರೆ.

    ಇಂದು ಇದೇ ವಿಚಾರವಾಗಿ ರಾಮನಗರದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ನನ್ನ ಹೇಳಿಕೆಯನ್ನು ಈ ರೀತಿಯಲ್ಲಿ ವೈರಲ್ ಮಾಡುತ್ತಿರುವುದು, ಬಿಜೆಪಿಯವರ ವಿಕೃತ ಮನೋಭಾವನೆ ಮತ್ತು ಅವರಲ್ಲಿನ ಅಸಹ್ಯಕರವಾದ ಆಲೋಚನೆಗಳನ್ನ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಪಕ್ಷದವರ ಮೇಲೆ ವಾಗ್ದಾಳಿ ನಡೆಸಿದ್ದರು.

  • ಮಿಣಿ ಮಿಣಿ ಪೌಡರ್ ಹೇಳಿಕೆ  ವೈರಲ್- ಹೆಚ್‍ಡಿಕೆ ಮೊದಲ ಪ್ರತಿಕ್ರಿಯೆ

    ಮಿಣಿ ಮಿಣಿ ಪೌಡರ್ ಹೇಳಿಕೆ ವೈರಲ್- ಹೆಚ್‍ಡಿಕೆ ಮೊದಲ ಪ್ರತಿಕ್ರಿಯೆ

    ರಾಮನಗರ: ಮಿಣಿ ಮಿಣಿ ಪೌಡರ್ ಎಂಬ ನನ್ನ ಹೇಳಿಕೆಯನ್ನು ವೈರಲ್ ಮಾಡಿರುವುದು ಬಿಜೆಪಿಗರ ವಿಕೃತ ಮನೋಭಾವನೆ ಸೂಚಿಸುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

    ಇಂದು ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೆಂಗಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ಈ ರೀತಿಯಲ್ಲಿ ವೈರಲ್ ಮಾಡುತ್ತಿರುವುದು, ಬಿಜೆಪಿಯವರ ವಿಕೃತ ಮನೋಭಾವನೆ ಮತ್ತು ಅವರಲ್ಲಿನ ಅಸಹ್ಯಕರವಾದ ಆಲೋಚನೆಗಳನ್ನ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಪಕ್ಷದವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

    ಮಂಗಳೂರಿನಲ್ಲಿ ಜನವರಿ 19 ರಂದು ನಡೆದ ಬಾಂಬ್ ಪ್ರಕರಣದಲ್ಲಿ, ಅವರು ಹೇಳುವುದು ಬಾಂಬ್ ಎನ್ನುವಂತಹದ್ದು, ಆದರೆ ದಿನಪತ್ರಿಕೆಯಲ್ಲಿ ಮಂಗಳೂರು ವರದಿ ನೋಡಿ. ಆ ವರದಿಯಲ್ಲಿ ಬಂದಿರುವುದು ಪಟಾಕಿಯಲ್ಲಿ ಬಳಸುವ ಮಿಣಿಮಿಣಿ ಪುಡಿ ಪೌಡರ್ ಇತ್ತು ಅಂತಾ ಹೇಳಿದ್ದಾರೆ. ಆ ವರದಿಯನ್ನು ಆಧರಿಸಿ ನಾನು ಹೇಳಿಕೆ ನೀಡಿದ್ದೇನೆ. ಅದಕ್ಕೆ ದೊಡ್ಡಮಟ್ಟದಲ್ಲಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ಕೊಡುತ್ತಿದ್ದಾರೆ. ನಾನು ನನ್ನ ಜೀವನದಲ್ಲಿ ಯಾವುದೇ ರೀತಿಯ ತಪ್ಪುಗಳನ್ನು ಮಾಡದೇ ಇರುವವನು. ತಪ್ಪು ಮಾಡಿದರೆ ಓಪನ್ ಆಗಿ ಹೇಳುವವನು ನಾನು, ಅದರಲ್ಲಿ ನನಗೆ ಯಾವುದೇ ಅಂಜಿಕೆಯಿಲ್ಲ ಎಂದು ಹೆಚ್‍ಡಿಕೆ ಗುಡುಗಿದ್ದಾರೆ.

    ನನ್ನ ಬಗ್ಗೆ ಕೀಳುಮಟ್ಟದಲ್ಲಿ ಅವರು ಕೆಲವು ವಿಡಿಯೋ ವೈರಲ್ ಮಾಡಿಕೊಂಡು ಹೊರಟಿದ್ದಾರೆ. ಅವರ ಕೀಳು ಅಭಿರುಚಿ ಏನು, ಅವರ ಭಾವನೆಗಳೇನು? ಬಿಜೆಪಿ ಪಕ್ಷದ ಸಂಸ್ಕೃತಿ ಏನು ಅದನ್ನು ವ್ಯಕ್ತಪಡಿಸಿದ್ದಾರೆ ಎಂದರು. ಇದೇ ವೇಳೆ ಆ ವಿಡಿಯೋಗಳನ್ನು ಬಿಜೆಪಿಯವರೇ ವೈರಲ್ ಮಾಡುತ್ತಿದ್ದರಾ? ಎಂದು ಕೇಳಿದಾಗ, ಅವರಲ್ಲದೇ ಇನ್ಯಾರು ಮಾಡುತ್ತಾರೆ. ಬಿಜೆಪಿಯ ಅಭಿಮಾನಿಗಳೇ ತಾನೇ ವೈರಲ್ ಮಾಡಿರುವುದು. ಸಂತೋಷ ಮಾಡಿಕೊಳ್ಳಲಿ ನಾನು ಏನು ಅಂತಾ ಜನ ನೋಡಿದ್ದಾರೆ. ನನ್ನ ಜೀವನ, ನಡವಳಿಕೆ ಜನರಿಗೆ ಗೊತ್ತಿದೆ ಇವರ ಸರ್ಟಿಫಿಕೇಟ್ ನನಗೆ ಬೇಕಾ? ಎಂದು ಹೆಚ್‍ಡಿಕೆ ಪ್ರಶ್ನೆ ಮಾಡಿದ್ದಾರೆ.

    ನಾನು ವೈಯಕ್ತಿಕವಾಗಿ ಯಾರ ಬಗ್ಗೆಯೂ ಹೇಳಿಕೆ ನೀಡಿಲ್ಲ. ಪ್ರಕರಣದ ದಿನ 9 ಗಂಟೆಗೆ ಆರಂಭವಾಗಿದ್ದು ಸಜೀವ ಬಾಂಬ್ ಅಂತಾ ನಂತರ 6 ಗಂಟೆಯ ತನಕ ಮಾಧ್ಯಮಗಳನ್ನು ದಾರಿ ತಪ್ಪಿಸಿದ್ದಾರೆ. ರಾಜ್ಯದ ಜನರ ಮುಂದೆ ಈ ವಿಚಾರ ಇಟ್ಟರೆ, ಅದನ್ನ ನೋಡಿದ ಜನರು ಮನಸ್ಥಿತಿ ಏನಾಗಬೇಕು. ಸರ್ಕಾರ ಏನು ಸಂದೇಶ ಕೊಡಲು ಹೊರಟಿದೆ. ಸರ್ಕಾರ ನಡೆಸುವವರು ಬಹಳ ಸೂಕ್ಷ್ಮವಾಗಿರಬೇಕು. ಸರ್ಕಾರ ಲೋಪದೋಷಗಳನ್ನ ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

    ಅವನ್ಯಾರೋ ಡಿಜಿ ಕಚೇರಿಯಲ್ಲಿ ಬಂದು ಶರಣಾದನಲ್ಲ. ಅವತ್ತು ಲೋಕಲ್ ಪೊಲೀಸ್ ಹಿರಿಯ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಅಧಿಕಾರಿಗಳು ಸಲ್ಫರ್ ಪೌಡರ್ ಇತ್ತು ಅಂತೇಳಿದ್ದಾರೆ. ಇದನ್ನು ನಾನು ಕಥೆ ಕಟ್ಟಿರುವುದಲ್ಲ ಇದು ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ಸಾರ್ವಜನಿಕವಾಗಿ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದೇನೆ. ವಿಧಾನಸಭೆಯಲ್ಲೂ ಚರ್ಚೆ ಮಾಡುತ್ತೇನೆ. ಸರ್ಕಾರ ಹುಡುಕಾಟಿಕೆಗೆ ನಡೆಸಲು ಆಗಲ್ಲ. ಅವರ ಜವಾಬ್ದಾರಿ ನಿರ್ವಹಿಸಬೇಕಾದರೆ ಜನರಲ್ಲಿ ವಿಶ್ವಾಸದ ಭಾವನೆಯಿರಬೇಕು ಎಂದು ಹೇಳಿದರು.

    ಜನರನ್ನು ಭಯಭೀತರನ್ನಾಗಿಸುವುದು ನೀವೆ ತೋರಿಸಿದ್ದೀರಿ. ಬಾಂಬ್ ಸಿಡಿಯುತ್ತೆ ಎಂದು ದೊಡ್ಡ ಕಂಟೈನರ್ ನಲ್ಲಿ ತೆಗೆದುಕೊಂಡು ಹೋದರು. ಡ್ರಾಮ ಅದೆಲ್ಲ ಬೇಕಿತ್ತಾ? ಅದಕ್ಕೆ ನಾನೇಳಿರುವುದು ಇವರು ಸಹಿಸದಿದ್ದರೆ ನಾನೇನು ಮಾಡೋಕೆ ಆಗುತ್ತೆ. ಯಾವುದೋ ಒಂದು ಸಮಾಜದ ಬಗ್ಗೆ ದೋಷ ಕೊಡಬೇಕು ಎಂಬ ಭಾವನೆ ಅವರಲ್ಲಿತ್ತು. ಈಗ ಅದು ಎಕ್ಸ್ ಪೋಸ್ ಆಗಿದೆ. ಮುಚ್ಚಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಈ ಕಥೆಗಳನ್ನ ಕಟ್ಟಿಕೊಂಡಿದ್ದಾರೆ ಎಂದು ಹೆಚ್‍ಡಿಕೆ ತಿಳಿಸಿದ್ದಾರೆ.

  • ನ್ಯೂಜಿಲ್ಯಾಂಡ್‍ನಲ್ಲಿ ಮಿಣಿ ಮಿಣಿ ಪೌಡರ್ ಗಮ್ಮತ್ತು- ಕ್ರಿಕೆಟ್ ಪ್ರೇಮಿಗಳು ದಿಲ್ ಖುಷ್

    ನ್ಯೂಜಿಲ್ಯಾಂಡ್‍ನಲ್ಲಿ ಮಿಣಿ ಮಿಣಿ ಪೌಡರ್ ಗಮ್ಮತ್ತು- ಕ್ರಿಕೆಟ್ ಪ್ರೇಮಿಗಳು ದಿಲ್ ಖುಷ್

    ಬೆಂಗಳೂರು: ಕರ್ನಾಟಕದಲ್ಲಿ ಈಗ ಸದ್ದು ಮಾಡುತ್ತಿರುವ ಟ್ರೋಲ್ ಮಿಣಿ ಮಿಣಿ ಪೌಡರ್. ಮಂಗಳೂರು ಬಾಂಬ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಿಣಿ ಮಿಣಿ ಪೌಡರ್ ಗೆ ಹೋಲಿಕೆ ಮಾಡಿದ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಹೇಳಿಕೆ ಈಗ ಟ್ರೋಲ್‍ಗೆ ಸಿಕ್ಕ ಆಹಾರ. ನಿಖಿಲ್ ಎಲ್ಲಿದ್ದೀಯಪ್ಪಾ? ಎಂಬ ಡೈಲಾಗ್ ಇಂಟರ್ ನ್ಯಾಷನಲ್ ಟ್ರೋಲ್ ಆಗಿತ್ತು. ಈಗ ಮಿಣಿಮಿಣಿ ಪೌಡರ್ ಸರದಿ.

    ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಟ್ರೋಲ್‍ಗಳಿಗೆ ಲೆಕ್ಕವಿಲ್ಲ. ಮಂಡ್ಯ ಕ್ಷೇತ್ರದಲ್ಲಂತೂ ಮುಯ್ಯಿಗೆ ಮುಯ್ಯಿ ಎಂಬಂತೆ ಟ್ರೋಲ್ ಮೇಲೆ ಟ್ರೋಲ್ ನಡೀತಾ ಇತ್ತು. ಆದರಲ್ಲೂ ನಿಖಿಲ್ ಎಲ್ಲಿದ್ದೀಯಪ್ಪಾ ಎಂಬ ಡೈಲಾಗ್ ಅಂತೂ ಬೇಕಾಬಿಟ್ಟಿಯಾಗಿ ಟ್ರೋಲ್ ಮಾಡಿದ್ರು. ಕರ್ನಾಟಕದಲ್ಲಷ್ಟೇ ಅಲ್ಲ ವಿದೇಶಗಳಲ್ಲಿಯೂ ಟ್ರೋಲ್‍ಗೆ ಒಳಗಾಗಿತ್ತು. ಈ ಟ್ರೋಲ್ ಹಬ್ಬಿಸಿದ ವಿರೋಧಿಗಳಿಗೆ ಮಾಜಿ ಸಿಎಂ ಹೆಚ್‍ಡಿಕೆ, ನಿಖಿಲ್ ಕುಮಾರಸ್ವಾಮಿ ಖಡಕ್ ಟಾಂಗ್ ಕೊಟ್ಟಿದ್ದರು.

    ಆದರೆ ಈಗ ಮಿಣಿಮಿಣಿ ಪೌಡರ್ ಟ್ರೋಲ್ ಆಗ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಿಣಿ ಮಿಣಿ ಪೌಡರ್ ಡೈಲಾಗ್ ನಾನಾ ರೀತಿಯ ವಿಡಿಯೋಗಳನ್ನ ಎಡಿಟ್ ಮಾಡಿ ಟ್ರೋಲ್ ಮಾಡುತ್ತಿದ್ರೆ, ವಿದೇಶದಲ್ಲೂ ಮಿಣಿ ಮಿಣಿ ಪೌಡರ್ ಸದ್ದು ಮಾಡ್ತಿದೆ. ನ್ಯೂಜಿಲ್ಯಾಂಡ್‍ನ ಆಕ್ಲೆಂಡ್‍ನಲ್ಲಿ ನಡೆಯುತ್ತಿದ್ದ ಭಾರತ, ನ್ಯೂಜಿಲ್ಯಾಂಡ್ ಟಿ20 ಪಂದ್ಯದಲ್ಲಿ ಹೌದೋ ಹುಲಿಯಾ ಭಿತ್ತಿ ಪತ್ರದ ಜತೆ ಮಿಣಿ ಮಿಣಿ ಪೌಡರ್ ಭಿತ್ತಿ ಪತ್ರ ರಾರಾಜಿಸಿತ್ತು. ಕನ್ನಡದ ಕ್ರಿಕೆಟ್ ಅಭಿಮಾನಿಗಳು ‘ಹೌದೋ ಹುಲಿಯಾ’ ಮಿಣಿ ಮಿಣಿ ಪೌಡರ್ ಅಂತಾ ಘೋಷಣೆ ಕೂಗುತ್ತಿದ್ದರು. ಈ ವಿಡಿಯೋ ಕೂಡ ಹೆಚ್ಚು ವೈರಲ್ ಆಗ್ತಿದ್ದು, ಇಂಟರ್ ನ್ಯಾಷನಲ್ ಮಿಣಿಮಿಣಿ ಪೌಡರ್ ಅನ್ನೋ ಹೊಸ ಟ್ರೋಲ್ ಶುರುವಾಗಿದೆ.