Tag: ಮಿಟೂ

  • ಹಾಲಿವುಡ್ #MeToo ಅಭಿಯಾನಕ್ಕೆ ಹಿನ್ನಡೆ: ಹಾರ್ವಿಗೆ ವಿಧಿಸಿದ್ದ ಶಿಕ್ಷೆ ರದ್ದು

    ಹಾಲಿವುಡ್ #MeToo ಅಭಿಯಾನಕ್ಕೆ ಹಿನ್ನಡೆ: ಹಾರ್ವಿಗೆ ವಿಧಿಸಿದ್ದ ಶಿಕ್ಷೆ ರದ್ದು

    ಗತ್ತಿನಾದ್ಯಂತ ಮಿಟೂ (MeToo) ಅಭಿಯಾನಕ್ಕೆ ನಾಂದಿ ಹಾಡಿದ್ದ ಹಾಲಿವುಡ್ ಸಿನಿ ರಂಗದ ಖ್ಯಾತ ನಿರ್ಮಾಪಕ ಹಾರ್ವಿ ವೈನ್ ಸ್ಟೀನ್ (Harvey Weinstein) ಮೇಲಿನ ಅತ್ಯಾಚಾರ ಆರೋಪಕ್ಕೆ ತಾತ್ಕಾಲಿನ ಜಯ ಸಿಕ್ಕಿದೆ. ಹಾರ್ವಿ ವೈನ್ ಸ್ಟೀನ್ ಗೆ ವಿಧಿಸಿದ್ದ ಶಿಕ್ಷೆಯನ್ನು ನ್ಯೂಯಾರ್ಕ್ ನ ಮೇಲ್ಮನವಿ ನ್ಯಾಯಾಲಯವು ರದ್ದು ಮಾಡಿದೆ.

    ಸಾವಿರಾರು ಕೋಟಿ ರೂಪಾಯಿಯನ್ನು ಸಿನಿಮಾಗಳಿಗೆ ಹೂಡಿಕೆ ಮಾಡಿ, ಹಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದ ಹಾರ್ವಿ ಮೇಲೆ 80ಕ್ಕೂ ಅಧಿಕ ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಕೆಲವರು ಅತ್ಯಾಚಾರದಂತಹ ಗಂಭೀರ ಆರೋಪವನ್ನೂ ಮಾಡಿದ್ದರು. ಇಲ್ಲಿಂದ ಮಿಟೂ ಅಭಿಯಾನ ಶುರುವಾಗಿತ್ತು. ಅದು ಜಗತ್ತಿನಾದ್ಯಂತ ಹೋರಾಟಕ್ಕೂ ಕಾರಣವಾಗಿತ್ತು.

    2018ರಲ್ಲಿ ಅತ್ಯಾಚಾರದ ಆರೋಪದ ಮೇಲೆ ಹಾರ್ವಿಯನ್ನು ಬಂಧಿಸಲಾಗಿತ್ತು. ಆನಂತರ ಅವರಿಗೆ 23 ವರ್ಷಗಳ ಜೈಲು ಶಿಕ್ಷೆಯೂ ಪ್ರಕಟವಾಗಿತ್ತು. ಈ ತೀರ್ಪಿನ ವಿರುದ್ಧ ಹಾರ್ವಿ ವಕೀಲರು ಮೇಲ್ಮನೆ ಸಲ್ಲಿಸಿದ್ದರು. ಸಂಬಂಧವೇ ಇಲ್ಲದ ಸಾಕ್ಷಿಗಳನ್ನು ಪರಿಗಣಿಸಲಾಗಿದೆ ಮತ್ತು ನ್ಯಾಯಾಧೀಶರು ಹಾರ್ವಿ ಬಗ್ಗೆ ಪೂರ್ವಾಗ್ರಹ ಹೊಂದಿದ್ದರು ಎಂದು ವಾದ ಮಾಡಿದ್ದರು.

     

    ಮೇಲ್ಮನೆಯನ್ನು ಪುರಸ್ಕರಿಸಿದ ನ್ಯೂಯಾರ್ಕ್ ನ್ಯಾಯಾಲಯವು ಶಿಕ್ಷೆ ರದ್ದು ಮಾಡಿ, ಈ ಆರೋಪದ ಕುರಿತಂತೆ ಹೊಸದಾಗಿ ವಿಚಾರಣೆ ಮಾಡಲು ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ಹಾರ್ವಿಗೆ ರಿಲೀಫ್ ಸಿಕ್ಕಿದೆ. ಆದರೆ, ಮತ್ತೊಂದು ಲೈಂಗಿಕ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು, ಅವರು ಜೈಲಿನಲ್ಲಿ ಇರಬೇಕಾಗಿದೆ. ಯಾಕೆಂದರೆ, ಈ ಪ್ರಕರಣಕ್ಕೆ ಅವರಿಗೆ 16 ವರ್ಷ ಜೈಲು ಶಿಕ್ಷೆಯಾಗಿದೆ.

  • ಗೂಗಲ್‍ನಲ್ಲಿ #MeToo ಗಾಳಿ- 48 ಸಿಬ್ಬಂದಿಗೆ ಗೇಟ್ ಪಾಸ್

    ಗೂಗಲ್‍ನಲ್ಲಿ #MeToo ಗಾಳಿ- 48 ಸಿಬ್ಬಂದಿಗೆ ಗೇಟ್ ಪಾಸ್

    ವಾಷಿಂಗ್ಟನ್: ಮೀಟೂ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿಶ್ವದ ಐಟಿ ದಿಗ್ಗಜ ಕಂಪನಿ ಗೂಗಲ್ ಕಳೆದ 2 ವರ್ಷಗಳಲ್ಲಿ 48 ಸಿಬ್ಬಂದಿಗೆ ಗೇಟ್ ಪಾಸ್ ನೀಡಿದೆ.

    ಈ ಆರೋಪದಲ್ಲಿ 13 ಹಿರಿಯ ಅಧಿಕಾರಿಗಳು ಮತ್ತು 48 ಸಿಬ್ಬಂದಿ ಹೆಸರು ಕೇಳಿಬರುತ್ತಿದ್ದಂತೆ ಭಾರತೀಯ ಮೂಲದ ಗೂಗಲ್ ನ ಕಾರ್ಯನಿರ್ವಾಹಕ ಅಧಿಕಾರಿಯಾದ ಸುಂದರ್ ಪಿಚೈ ಅವರೆಲ್ಲರನ್ನು ಹೊರ ಹಾಕಿದ್ದಾರೆ.

    ಗೂಗಲ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಗೂಗಲ್ ನ ಆಂಡ್ರಾಯ್ಡ್ ಮುಖ್ಯಸ್ಥ ಆಂಡಿ ರೂಬಿನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಸಂಬಂಧ ಗೂಗಲ್ ಆಂಡಿ ರೂಬಿನ್ ಗೆ 9 ಕೋಟಿ ಡಾಲರ್(659 ಕೋಟಿ ರೂ.) ನಿರ್ಗಮನದ ಪ್ಯಾಕೇಜ್ ನೀಡಿ ಕೆಲಸದಿಂದ ತೆಗೆದು ಹಾಕಿತ್ತು. ಈ ಆರೋಪದಲ್ಲಿ ಆಂಡಿ ಮಾತ್ರವಲ್ಲದೇ 13 ಹಿರಿಯ ಅಧಿಕಾರಿಗಳ ಹೆಸರು ಕೇಳಿಬಂದಿದ್ದು, ಅವರನ್ನು ಸಹ ತಮ್ಮ ಕೆಲಸದಿಂದ ಹೊರಹಾಕಿದೆ ಎಂದು ಗೂಗಲ್ ವಕ್ತಾರರೊಬ್ಬರು ಮಾಧ್ಯಮವೊಂದಕ್ಕೆ ಇಮೇಲ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

    ಗೂಗಲ್ ತನ್ನ ಉಪಾಧ್ಯಕ್ಷರು ಮತ್ತು ಹಿರಿಯ ಉಪಾಧ್ಯಕ್ಷರು ಕಂಪನಿಯ ಇತರೆ ಸಿಬ್ಬಂದಿಯ ಜೊತೆಗೆ ಯಾವುದೇ ಪ್ರೇಮ ಸಂಬಂಧವನ್ನ ಹೊಂದುವುದನ್ನು ನಿಷೇಧಿಸಿದೆ. ಈ ಕುರಿತಾಗಿ ವಿಶೇಷ ನೀತಿಯನ್ನು ಜಾರಿಗೆ ತರಲಾಗಿದೆ.

    ಕಾರ್ಯಸ್ಥಳವನ್ನ ಸುರಕ್ಷಿತವಾಗಿ ನಿರ್ಮಾಣ ಮಾಡುವುದು ನಮ್ಮ ಗುರಿ, ಎರಡು ವರ್ಷದಲ್ಲಿ ನಮ್ಮ ಕಂಪನಿಯು ಅನೇಕ ಬದಲಾವಣೆಗಳನ್ನ ಮಾಡಿದೆ. ಕಿರುಕುಳ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಹ ಕೆಲಸಗಾರರಿಗೆ ಲೈಂಗಿಕ ಕಿರುಕುಳ ಅಥವಾ ದುರ್ವರ್ತನೆಗೆ ಸಂಬಂಧಿಸಿದ ಪ್ರತಿಯೊಂದು ದೂರನ್ನು ನಾವು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತೇವೆ ಎಂದು ಸುಂದರ್ ಪಿಚೈ ಇಮೇಲ್ ಮೂಲಕ ಉದ್ಯೋಗಿಗಳಿಗೆ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೃತಿ, ಅರ್ಜುನ್ ಸರ್ಜಾ ಸಂಧಾನ ವಿಫಲ- ಕಾನೂನು ಹೋರಾಟಕ್ಕೆ ಇಬ್ಬರಿಂದಲೂ ಸಿದ್ಧತೆ

    ಶೃತಿ, ಅರ್ಜುನ್ ಸರ್ಜಾ ಸಂಧಾನ ವಿಫಲ- ಕಾನೂನು ಹೋರಾಟಕ್ಕೆ ಇಬ್ಬರಿಂದಲೂ ಸಿದ್ಧತೆ

    ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ನಡುವಿನ ಹೋರಾಟ ಈಗ ಕಾನೂನಾತ್ಮಕ ರೂಪ ಪಡೆದುಕೊಂಡಿದೆ. ಗುರುವಾರ ಫಿಲಂ ಚೇಂಬರ್‍ನಲ್ಲಿ ಸಂಧಾನ ಸಭೆ ಮುರಿದು ಬಿದ್ದಿದ್ದರಿಂದ ಇಬ್ಬರು ಕಾನೂನು ಹೋರಾಟದ ಮೊರೆ ಹೋಗಿದ್ದಾರೆ.

    ನಿನ್ನೆ ಅರ್ಜುನ್ ಸರ್ಜಾ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮ್ಮೆ ಕೇಸ್ ದಾಖಲಿಸಿದ್ದಾರೆ. ಅಲ್ಲದೇ, ಇಂದು ಚೆನ್ನೈ, ಹೈದ್ರಾಬಾದ್ ನಲ್ಲಿ ಮಾನನಷ್ಟ ಮೊಕದ್ದಮ್ಮೆ ಫೈಲ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ ಚೆನ್ನೈ, ಹೈದ್ರಾಬಾದ್ ನಲ್ಲೂ ಜಾಲತಾಣಗಳಲ್ಲಿ ಅರ್ಜುನ್  ಸರ್ಜಾ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ ಅಂತ ಸೈಬರ್ ಕ್ರೈಂಗೆ ದೂರು ಕೊಡಲು ಚಿಂತನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರಾಬ್ಲಂ ಆಗಿದ್ದು ನನ್ಗೆ, ನಾನ್ಯಾಕೆ ಕ್ಷಮೆ ಕೇಳಲಿ: ಶೃತಿ ಹರಿಹರನ್

    ಇದೆಲ್ಲದರ ನಡುವೆ ಶೃತಿ ಹರಿಹರನ್ ಸಹ ಇಂದು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಇಂದು ಮೆಯೋಹಾಲ್ ಕೋರ್ಟ್ ನಲ್ಲಿ ಅರ್ಜುನ್ ಸರ್ಜಾ ಸಲ್ಲಿಸಿರೋ ಅರ್ಜಿ ವಿಚಾರಣೆ ನಡೆಯಲಿದೆ. ಕೋರ್ಟ್ ಬೆಳವಣಿಗೆ ನೋಡಿಕೊಂಡು ಶೃತಿ ಹರಿಹರನ್ ಸಹ ದೂರು ಕೊಡಲು ನಿರ್ಧರಿಸಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಕ್ರಿಮಿನಲ್ ಕೇಸ್ ದಾಖಲಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಸಂಧಾನ ಇಲ್ಲವೇ ಇಲ್ಲ, ಕೋರ್ಟ್ ಗೆ ಹೋಗ್ತಿನಿ: ಅರ್ಜುನ್ ಸರ್ಜಾ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=RKPY3g4jWRM

    https://www.youtube.com/watch?v=Mud4GP9t0ik

  • ಅರ್ಜುನ್ ಸರ್ಜಾ ಸರಳ ಸಜ್ಜನ – ನಟಿ, ಸಚಿವೆ ಜಯಮಾಲಾ ಸರ್ಟಿಫಿಕೇಟ್

    ಅರ್ಜುನ್ ಸರ್ಜಾ ಸರಳ ಸಜ್ಜನ – ನಟಿ, ಸಚಿವೆ ಜಯಮಾಲಾ ಸರ್ಟಿಫಿಕೇಟ್

    ಉಡುಪಿ: ನಟ ಅರ್ಜುನ್ ಸರ್ಜಾ ಸರಳ ಸಜ್ಜನಿಕೆಯ ವ್ಯಕ್ತಿ ಅಂತ ನಟಿ, ಮಹಿಳಾ ಮತ್ತು ಕಲ್ಯಾಣ ಖಾತೆಯ ಸಚಿವೆ ಡಾ. ಜಯಮಾಲಾ ಪ್ರಮಾಣಪತ್ರ ಕೊಟ್ಟಿದ್ದಾರೆ.

    ಬೈಂದೂರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಸಮಯದಲ್ಲಿ ಮಾಧ್ಯಮಗಳ ಜೊತೆ ಮೀಟೂ ಅಭಿಯಾನ ಬಗ್ಗೆ ಮಾತನಾಡಿದರು. ಮೀಟೂ ಅಭಿಯಾನ ಹೆಣ್ಣನ್ನು ಹರಾಜು ಹಾಕುವ ಅಭಿಯಾನ ಆಗದಿರಲಿ. ಹೆಣ್ಣೊಬ್ಬಳು ಮುಕ್ತವಾಗಿ ಸಮಸ್ಯೆ ಹೇಳಿಕೊಂಡು ಬಂದಾಗ ನಾವು ಬೆಂಬಲ ನೀಡಬೇಕು. ಹೆಣ್ಣಿಗೆ ರಕ್ಷಣೆ ಕೊಡುವ ನೆಪದಲ್ಲಿ ಗಂಡಸನ್ನು ದೂಷಿಸುವುದು ತಪ್ಪು ಎಂದರು.

    ಹೆಣ್ಣಿನ ಚಿತ್ರಹಿಂಸೆಗೆ ದೌರ್ಜನ್ಯಕ್ಕೆ ಮೀಟೂ ಬಲ ತಂದುಕೊಟ್ಟಿದೆ. ಡಾ. ರಾಜ್ ಕುಮಾರ್ ಕಾಲದಲ್ಲಿ ನಾವು ಬೆಳೆದವರು. ನಮ್ಮ ಕಾಲ ಚಿತ್ರರಂಗ ಸುವರ್ಣ ಯುಗವಾಗಿತ್ತು. ಇಂತಹ ಸಮಸ್ಯೆಯ ದಿನಗಳನ್ನೇ ನಾನು ನೋಡಿಲ್ಲ. 46 ವರ್ಷದಲ್ಲಿ 75 ಸಿನೆಮಾ ಮಾಡಿದ್ದೇನೆ. ಒಂದೇ ಒಂದು ಕಹಿ ಘಟನೆ ನನ್ನ ಜೀವನದಲ್ಲಿ ನಡೆದಿಲ್ಲ. ಈಗಿನ ಚಿತ್ರರಂಗದ ಬಗ್ಗೆ ನನಗೆ ಗೊತ್ತಿಲ್ಲ. ನಟ ಅರ್ಜುನ್ ಸರ್ಜಾ ಸರಳ ಸಜ್ಜನ ಹುಡುಗ, ಸರ್ಜಾ ತಂದೆಯ ಜೊತೆಯೂ ಅಭಿನಯಿಸಿದ್ದೆ ಎಂದು ನೆನಪು ಮಾಡಿಕೊಂಡರು.

    ಶೃತಿ ಹರಿಹರನ್ ಆರೋಪ ಮತ್ತು ನಂತರದ ಬೆಳವಣಿಗೆ ವಿಚಾರವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ತೀರ್ಮಾನಕ್ಕೆ ಬರಲಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ಸಭೆ ಕರೆದಿದ್ದಾರೆ. ಯಾವ ಹೆಣ್ಣಿಗೂ ಸಮಸ್ಯೆ ಆಗಬಾರದು. ಯಾವ ಪುರುಷನಿಗೂ ಅನ್ಯಾಯ ಆಗಬಾರದು. ವಿಶಾಖ ಜಡ್ಜ್‌ಮೆಂಟ್ ವಿಂಗ್ ಎಲ್ಲಾ ಕಡೆ ತೆರೆಯಬೇಕು. ಎಲ್ಲಾ ಕಚೇರಿ, ಸಂಸ್ಥೆಯಲ್ಲಿ ವಿಶಾಖ ಶಾಖೆ ತೆರೆಯುವಂತಾಗಲಿ ಎಂದರು.

    ಚಿತ್ರರಂಗವನ್ನು ಮೀಟೂ ಇಬ್ಭಾಗ ಮಾಡಲು ಸಾಧ್ಯವಿಲ್ಲ. ಸ್ಯಾಂಡಲ್ ವುಡ್ ಗೆ 85 ವರ್ಷಗಳ ಇತಿಹಾಸ ಇದೆ. ಎಲ್ಲಾ ಸಮಸ್ಯೆ ಮಾತುಕತೆಯಲ್ಲಿ ಬಗೆಹರಿಯುತ್ತದೆ ಎಂದು ಆಶವಾದ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • #MeToo ಅಭಿಯಾನಕ್ಕೆ ಜಯ – ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್ ರಾಜೀನಾಮೆ?

    #MeToo ಅಭಿಯಾನಕ್ಕೆ ಜಯ – ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್ ರಾಜೀನಾಮೆ?

    ನವದೆಹಲಿ: ಮಿಟೂ ಅಭಿಯಾನಕ್ಕೆ ಗುರಿಯಾಗಿದ್ದ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಎಂ.ಜಿ.ಅಕ್ಬರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

    ನೈಜೀರಿಯಾ ಪ್ರವಾಸದಲ್ಲಿ ಸಚಿವರು ಇಂದು ದೆಹಲಿಗೆ ಆಗಮಿಸಿದ್ದು ಲೈಂಗಿಕ ಕಿರುಕುಳ ಆರೋಪದ ಕುರಿತು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ, ಇದಕ್ಕೆ ತಕ್ಕ ಹೇಳಿಕೆಯನ್ನು ನಂತರ ನೀಡುತ್ತೇನೆ ಎಂದು ಸಚಿವರು ಹೇಳಿದ್ದಾರೆ.

    ಇತ್ತ ಸಚಿವ ಅಕ್ಬರ್ ಅವರು ಪ್ರಧಾನ ಮಂತ್ರಿ ಅವರ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಅಷ್ಟೇ ಅಲ್ಲದೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡ ಸಮಯ ಕೋರಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಅಧಿಕೃತವಾಗಿ ಪ್ರಧಾನಮಂತ್ರಿಗಳ ಸಚಿವಲಾಯದಿಂದ ರಾಜೀನಾಮೆ ಸಂಬಂಧ ಯಾವುದೇ ಹೇಳಿಕೆ ಪ್ರಕಟವಾಗಿಲ್ಲ.

    ಏನಿದು ಪ್ರಕರಣ?:
    ಸಚಿವ ಅಕ್ಬರ್ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ಅವರು ಮೊದಲು ಆರೋಪ ಮಾಡಿದ್ದರು. ಎಂಜಿ ಅಕ್ಬರ್ ಕತೆಯೊಂದಿಗೆ ಇದನ್ನು ಆರಂಭಿಸುತ್ತೇನೆ. ಆದರೆ ಅವರ ಹೆಸರನ್ನು ಉಲ್ಲೇಖಿಸಿಲ್ಲ, ಏಕೆಂದರೆ ಅವರೇನೂ ಮಾಡಿಲ್ಲ. ಈ ಬೇಟೆಗಾರನಿಂದ ಅನೇಕ ಮಹಿಳೆಯರಿಗೆ ಕೆಟ್ಟ ಅನುಭವ ಆಗಿರಬಹುದು. ಬಹುಶಃ ಅವರು ಅ ಹಂಚಿಕೊಳ್ಳಬಹುದು ಎಂದು ಬರೆದು ಅಕ್ಟೋಬರ್ 8ರಂದು ಟ್ವೀಟ್ ಮಾಡಿದ್ದರು.

    https://twitter.com/priyaramani/status/1049279608263245824

    ಅಷ್ಟೇ ಅಲ್ಲದೆ ತಮ್ಮ ಮೇಲಾದ ಲೈಂಗಿಕ ಕಿರುಕುಳ ಕುರಿತು 2017ರ ಅಕ್ಟೋಬರ್ ನಲ್ಲಿ ಲೇಖನವೊಂದನ್ನು ಪ್ರಿಯಾ ರಮಣಿ ಬರೆದಿದ್ದರು. ಪ್ರಿಯಾ ರಮಣಿ ಆರೋಪದ ಬನ್ನಲ್ಲೇ ಅನೇಕ ಪ್ರತಕರ್ತೆಯರು ಅಕ್ಬರ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.

    ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರೋಪಗಳ ಕುರಿತು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಿದ್ದೇವೆ ಅಂತಾ ಹೇಳಿದ್ದರು. ಇತ್ತ ಎಂ.ಜೆ.ಅಕ್ಬರ್ ವಿರೋಧ ಪಕ್ಷಗಳು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದವು.

    https://twitter.com/priyaramani/status/1051361254776983552

    ಮಿ ಟೂ ಅಭಿಯಾನ:
    ಬಾಲಿವುಡ್ ನಟಿ ತನುಶ್ರೀ ದತ್ತ ಲೈಂಗಿಕ ಕಿರುಕುಳ ಆರೋಪದ ನಂತರ ದೇಶದಲ್ಲಿ ಮಿ ಟೂ ಅಭಿಯಾನ ಚುರುಕುಗೊಂಡಿದೆ. ಈ ಅಭಿಯಾನದಲ್ಲಿ ಪುರುಷರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರು #ಮಿಟೂ ಅಭಿಯಾನದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆರೋಪಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ನಟಿಯರು, ಕ್ರೀಡಾಪಟುಗಳು ಹಾಗೂ ಇತರ ಮಹಿಳೆಯರು ತಮಗೆ ಆದಂತಹ ಲೈಂಗಿಕ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದನಿಯೆತ್ತುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೈಂಗಿಕ ಕಿರುಕುಳದ ವಿರುದ್ಧ `ಮಿಟೂ’ ಚಳುವಳಿಗೆ ಐಶ್ವರ್ಯಾ ರೈ ಬೆಂಬಲ

    ಲೈಂಗಿಕ ಕಿರುಕುಳದ ವಿರುದ್ಧ `ಮಿಟೂ’ ಚಳುವಳಿಗೆ ಐಶ್ವರ್ಯಾ ರೈ ಬೆಂಬಲ

    ಮುಂಬೈ: ಸಮಾಜದಲ್ಲಿ ಮಹಿಳೆಯರು ಕೆಲಸ ಮಾಡುವ ಜಾಗದಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದರ ವಿರುದ್ಧ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು `ಮಿಟೂ’ ಚಳುವಳಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

    ಇತ್ತೀಚೆಗೆ ಖಾಸಗಿ ಪತ್ರಿಕೆಯೊಂದರ ಜೊತೆ ಮಾತನಾಡಿದ ಐಶ್ವರ್ಯಾ, “ಸಿಡ್ನಿಯಲ್ಲಿ `ಮಿಟೂ’ ಚಳುವಳಿಯ ಬಗ್ಗೆ ಮಾತುಕತೆ ನಡೆದಿದೆ. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತಿದ್ದು, ಈ ವಿಚಾರವನ್ನು `ಮಿಟೂ’ ನಲ್ಲಿ ಹಂಚಿಕೊಂಡರೆ ಬಗೆಹರಿಸಲು ಸಾಧ್ಯವಾಗುತ್ತದೆ ಅಂತ ತೀರ್ಮಾನಕ್ಕೆ ಬರಲಾಗಿದೆ. ತುಂಬಾ ಚರ್ಚೆ ಮಾಡಿದ ಬಳಿಕ ಈ ಚಳುವಳಿಯನ್ನು ಪ್ರಾರಂಭಿಸಲಾಗಿದೆ. ಒಂದು ಒಳ್ಳೆ ವಿಷಯ ಎಂದರೆ ಈ ಕುರಿತು ಜನರು ಕೂಡ ಮಾತನಾಡುತ್ತಿದ್ದಾರೆ. ಇದು ವಿಶ್ವಕ್ಕೆ ಸೇರಿದ್ದು, ಇದನ್ನು ಸೀಮಿತವಾಗಿಸುವುದಿಲ್ಲ. ಈ ಚಳುವಳಿಯು ಸಕಾರಾತ್ಮವಾಗಿದೆ ಎಂದು ಹೇಳಿದರು.

    ಅಷ್ಟೇ ಅಲ್ಲದೇ ಮಹಿಳೆ ತನಗೆ ಆಗುತ್ತಿರುವ ಅನ್ಯಾಯದ ವಿರುದ್ಧ ತಾನೇ ಬಂದು ಮಾತನಾಡಿದರೆ ಒಳ್ಳೆಯದು. ಆಕೆ ಯಾವುದಕ್ಕೂ ರಾಜಿ ಮಾಡಿಕೊಳ್ಳದೆ ಹೇಳಿಕೊಂಡರೆ ಅದು ಖುಷಿಯ ವಿಷಯವಾಗಿದೆ. ಇದು ಯಾವುದೇ ವ್ಯವಹಾರ ಅಥವಾ ಚಲನಚಿತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಎಲ್ಲ ರೀತಿಯಲ್ಲೂ ಮಹಿಳೆಯರು ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೇಳಿಕೊಳ್ಳಲು ಇಲ್ಲಿ ಮುಕ್ತ ಅವಕಾಶವಿದೆ ಅಂತ ಅವರು ವಿವರಿಸಿದ್ದಾರೆ.

    ಹಾಲಿವುಡ್‍ನ ಪ್ರಸಿದ್ಧ ನಿರ್ಮಾಪಕ ಹಾರ್ವೆ ವೈನ್ಸ್ಟೈನ್ ಲೈಂಗಿಕ ದೌರ್ಜನ್ಯದ ಹಗರಣ ಬೆಳಕಿಗೆ ಬರುತ್ತಿದ್ದಂತೆ ಕಳೆದ ವರ್ಷ ಹಾಲಿವುಡ್ ಮಿಟೂ ಚಳುವಳಿ ಕಿಕ್ ಸ್ಟಾರ್ಟರ್ ಅನ್ನು ಬೆಂಬಲಿಸಿತು. ಜಗತ್ತಿನಾದ್ಯಂತ ಜನರೊಂದಿಗೆ ಇಂತಹ ಪ್ರಕರಣಗಳ ಉಗಮದ ಕುರಿತು ಜಾಗೃತಿ ಮೂಡಿಸಲು ವ್ಯಾಪಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹ್ಯಾಶ್ ಟ್ಯಾಗ್ ಅನ್ನು ಬಳಸಲಾಗಿತ್ತು.