Tag: ಮಿಝೋರಾಂ

  • ಬಿಜೆಪಿಯ ಚಾರ್ಜ್ ಶೀಟ್ ನಲ್ಲಿ ಲೋಪ: ವೈರಲ್ ಆಯ್ತು ಎಡವಟ್ಟು

    ಬಿಜೆಪಿಯ ಚಾರ್ಜ್ ಶೀಟ್ ನಲ್ಲಿ ಲೋಪ: ವೈರಲ್ ಆಯ್ತು ಎಡವಟ್ಟು

    ಬೆಂಗಳೂರು: ಕಾಂಗ್ರೆಸ್ ಮೇಲೆ ಆರೋಪ ಮಾಡುವ ಬರದಲ್ಲಿ ಬಿಜೆಪಿ ಎಡವಟ್ಟು ಮಾಡಿಕೊಂಡಿದ್ದು, “ಲೆಕ್ಕಕೊಡಿ ಕನ್ನಡಿಗರಿಗೆ” ಚಾರ್ಜ್ ಶೀಟ್‍ನಲ್ಲಿ ಲೋಪ ಕಂಡುಬಂದಿದೆ.

    ಚಾರ್ಜ್ ಶೀಟ್‍ನಲ್ಲಿ ಬೆಂಗಳೂರಿನ ಫೋಟೋಗಳೆಂದು ಮಿಝೋರಾಂ ಮತ್ತು ನೇಪಾಳದ ಫೋಟೋಗಳ ಬಳಕೆ ಮಾಡಲಾಗಿದೆ. ಇದೀಗ ಬಿಜೆಪಿ ಮಾಡಿರುವ ಈ ಎಡವಟ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ನಾಯಕರಿಗೆ ಮುಜುಗರ ಉಂಟುಮಾಡಿದೆ.

    ಎಡವಟ್ಟು ವಿಚಾರ ತಿಳಿದು ಬಿಜೆಪಿ ರಾಷ್ಟ್ರೀಯ ನಾಯಕರು ಬೆಂಗಳೂರು ನಾಯಕರ ಮೇಲೆ ಫುಲ್ ಗರಂ ಆಗಿದ್ದಾರೆ ಎನ್ನಲಾಗಿದ್ದು, ಯಾಕೆ ಆತುರ? ಯಾಕಿಷ್ಟು ಆತುರ ಬಿದ್ದು ಎಟವಟ್ಟು ಮಾಡ್ತೀರಿ? ಮಾಡುವ ಕೆಲಸವನ್ನ ನೀಟಾಗಿ ಮಾಡಿ. ಸಿಲಿಕಾನ್ ಸಿಟಿ ಬೆಂಗಳೂರು ಅದರ ಫೋಟೋ ಬಳಸುವಾಗ ಸ್ಥಳೀಯರಾದ ನಿಮಗೆ ಗೊತ್ತಾಗಲ್ವಾ? ಅಂತ ಆರ್ ಅಶೋಕ್ ಮತ್ತು ಅನಂತ್ ಕುಮಾರ್ ಅವರನ್ನು ಕೇಂದ್ರ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬುದಾಗಿ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.

    ಈ ಚಾರ್ಜ್ ಶೀಟನ್ನು ಬಿಜೆಪಿ ಖಾಸಗಿ ನ್ಯೂಸ್ ವೆಬ್ ಸೈಟ್ ನಿಂದ ತೆಗೆದಿದೆ ಎನ್ನಲಾಗಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಆರ್ ಅಶೋಕ್ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ನಮಗೆ ಈ ಬಗ್ಗೆ ಮಾಹಿತಿಯಿಲ್ಲ ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ.