Tag: ಮಿಜೋರಾಂ

  • ಆಟದ ಮಧ್ಯೆಯೇ ಹಾಲುಣಿಸಿ ತಾಯಿ ಪ್ರೇಮ ಮೆರೆದ ಆಟಗಾರ್ತಿ- ನೆಟ್ಟಿಗರಿಂದ ಮೆಚ್ಚುಗೆ

    ಆಟದ ಮಧ್ಯೆಯೇ ಹಾಲುಣಿಸಿ ತಾಯಿ ಪ್ರೇಮ ಮೆರೆದ ಆಟಗಾರ್ತಿ- ನೆಟ್ಟಿಗರಿಂದ ಮೆಚ್ಚುಗೆ

    ಐಜಾಲ್: ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯುತ್ತಿದ್ದರೂ, ಇದರ ಮಧ್ಯೆಯೇ ಬ್ರೇಕ್ ತೆಗೆದುಕೊಂಡು ವಾಲಿಬಾಲ್ ಆಟಗಾರ್ತಿಯೊಬ್ಬರು ತನ್ನ ಮಗುವಿಗೆ ಹಾಲು ಕುಡಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಿಜೋರಾಂನ ಮ್ಯಾಸ್ಕಾಟ್‍ನಲ್ಲಿ ಈ ಘಟನೆ ನಡೆದಿದ್ದು, ನಿಂಗ್ಲುನ್ ಹಂಘಲ್ ಎಂಬ ಫೇಸ್ಬುಕ್ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೂಲವಾಗಿ ಇದನ್ನು ಲಿಂಡಾ ಚಕ್ಚುವಾಕ್ ಎಂಬವರು ಪೋಸ್ಟ್ ಮಾಡಿದ್ದಾರೆ. ಟುಕುಮ್ ಮಾವಿಲಿಬಾಲ್ ತಂಡದ ಆಟಗಾರ್ತಿ ಲಾಲ್ವೆಂಟ್ಲುವಾಂಗಿ ಅವರು ಈ ವಿಡಿಯೋದಲ್ಲಿ ತನ್ನ ಮಗುವಿಗೆ ಎದೆಹಾಲು ಕುಡಿಸುತ್ತಿದ್ದಾರೆ. ಹಂಘಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದು, ಲಾಲ್ವೆಂಟ್ಲುವಾಂಗಿ ಅವರು ವಾಲಿಬಾಲ್ ಆಟವಾಡುತ್ತಿದ್ದರು. ಆಗ ಚಿಕ್ಕ ವಿರಾಮ ತೆಗೆದುಕೊಂಡು ಪ್ಲೇಯರ್ಸ್ ಕ್ಯಾಂಪ್ ಬಳಿ 7 ತಿಂಗಳ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದರು ಎಂದು ಹೊಗಳಿದ್ದಾರೆ.

    ಪೋಸ್ಟ್ ನ ಮಾಹಿತಿ ಪ್ರಕಾರ 2019ರ ಮಿಜೋರಾಂ ರಾಜ್ಯ ಮಟ್ಟದ ಆಟಗಳು ಮ್ಯಾಸ್ಕಾಟ್‍ನಲ್ಲಿ ನಡೆಯುತ್ತಿದ್ದವು. ಈ ವೇಳೆ ಲಾಲ್ವೆಂಟ್ಲುವಾಂಗಿ ಅವರು ತಮ್ಮ ಮಗುವಿಗೆ ಹಾಲು ಕುಡಿಸಿದ್ದಾರೆ. ಅಲ್ಲದೆ ಇದಕ್ಕೆ ಪ್ರೋತ್ಸಾಹ ನೀಡಲು ಮೀಜೊರಾಂನ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಅವರು ಲಾಲ್ವೆಂಟ್ಲುವಾಂಗಿ ಅವರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಿದರು ಎಂದು ಫೇಸ್ಬುಕ್ ಪೋಸ್ಟಿನಲ್ಲಿ ಬರೆಯಲಾಗಿದೆ.

    ಈ ಪೋಸ್ಟಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಲಾಲ್ವೆಂಟ್ಲುವಾಂಗಿ ಅವರು ಕ್ರೀಡಾಪಟುವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ತಾಯಿಯಾಗಿಯೂ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದರೆ. ಇನ್ನೊಬ್ಬ ಬಳಕೆದಾರರು ತಾಯಿ ಎಂದರೆ ತಾಯಿ, ಸದಾ ಮಕ್ಕಳ ಸೇವೆಯಲ್ಲಿಯೇ ತೊಡಗಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ತಂದೆ ಸಾವಿನ ನಡುವೆಯೂ ದೇಶಕ್ಕಾಗಿ ಆಟ – ಫೈನಲ್ ಆಡಿ ಹೆಮ್ಮೆ ತರ್ತೀನಿ ಎಂದಿದ್ದ ಆಟಗಾರ್ತಿ

    ತಂದೆ ಸಾವಿನ ನಡುವೆಯೂ ದೇಶಕ್ಕಾಗಿ ಆಟ – ಫೈನಲ್ ಆಡಿ ಹೆಮ್ಮೆ ತರ್ತೀನಿ ಎಂದಿದ್ದ ಆಟಗಾರ್ತಿ

    ಮಿಜೋರಾಂ: ಭಾರತದ ಮಹಿಳಾ ಹಾಕಿ ತಂಡದ ಆಟಗಾರ್ತಿ ಲಾಲ್ರೆಮ್ಸಿಯಾಮಿ ತನ್ನ ತಂದೆ ಸಾವಿನ ನಡುವೆಯೂ ದೇಶಕ್ಕಾಗಿ ಹಾಕಿ ಆಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಸೋಮವಾರ ಹೀರೋಶಿಮಾದಲ್ಲಿ ನಡೆದ ಎಫ್‍ಐಎಚ್ ಸೀರಿಸ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಜಪಾನ್ ವಿರುದ್ಧ 3-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಹಾಕಿ ಸ್ಟ್ರೈಕರ್ ಆಗಿರುವ ಲಾಲ್ರೆಮ್ಸಿಯಾಮಿ ಪಂದ್ಯ ಗೆದ್ದ ಬಳಿಕ ಮಂಗಳವಾರ ತಮ್ಮ ಊರಿಗೆ ಮರಳಿದ್ದಾರೆ. ಈ ವೇಳೆ ಅಲ್ಲಿನ ಜನರು ಲಾಲ್ರೆಮ್ಸಿಯಾಮಿಗೆ ಸ್ವಾಗತ ಕೋರಿ ಅಭಿನಂದನೆ ತಿಳಿಸಿದರು. ತಂದೆ ನಿಧನದ ಬಳಿಕ ಊರಿಗೆ ಬಂದ ಲಾಲ್ರೆಮ್ಸಿಯಾಮಿರನ್ನು ನೋಡಿ ಮನೆಯವರು ಕಣ್ಣೀರು ಹಾಕಿದ್ದಾರೆ.

    ಸೆಮಿಫೈನಲ್ ಹಿಂದಿನ ದಿನ ಅಂದರೆ ಶುಕ್ರವಾರ ಲಾಲ್ರೆಮ್ಸಿಯಾಮಿ ಅವರ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ತಂದೆ ಸಾವಿನ ವಿಷಯ ತಿಳಿದ ಲಾಲ್ರೆಮ್ಸಿಯಾಮಿ ಊರಿಗೆ ಮರಳದೇ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಭಾಗವಹಿಸಿ ತನ್ನ ತಂದೆಗೆ ಹೆಮ್ಮೆ ತರುತ್ತೇನೆ ಎಂದು ತಂಡದ ಕೋಚ್ ಆದ ಸ್ಜೊರ್ಡ್ ಮಾರಿಜ್ನೆ ಅವರ ಬಳಿ ಹೇಳಿಕೊಂಡಿದ್ದರು.

    ಫೈನಲ್ ನಲ್ಲಿ ಜಪಾನ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ಭಾರತ ಮಹಿಳಾ ಹಾಕಿ ತಂಡ ಮಂಗಳವಾರ ಹೀರೋಶಿಮಾದಿಂದ ದೆಹಲಿಗೆ ತಲುಪಿತು. ಕ್ರೀಡಾ ಸಚಿವರಾದ ಕಿರಣ್ ರಿಜಿಜು ಅವರು ತಂದೆಯ ನಿಧನದ ನಡುವೆಯೂ ತಂಡಕ್ಕಾಗಿ ಆಡಿದ ಲಾಲ್ರೆಮ್ಸಿಯಾಮಿ ಅವರನ್ನು ಶ್ಲಾಘಿಸಿದರು. ಅಲ್ಲದೆ ಕಿರಣ್ ಅವರು ಭಾರತ ಹಾಕಿ ತಂಡದ ಸದಸ್ಯರನ್ನು ಭೇಟಿಯಾಗಿ ಶುಭಾಶಯ ಕೂಡ ತಿಳಿಸಿದರು.

    ಕಿರಣ್ ರಿಜಿಜು ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮಹಿಳಾ ಹಾಕಿ ತಂಡಕ್ಕೆ ಶುಭಾಶಯ ತಿಳಿಸಿದರು. ಹಾಕಿ ತಂಡದ ನಾಯಕಿ ರಾಣಿ ರಾಮ್‍ಪಾಲ್ ಟೂರ್ನ್‍ಮೆಂಟ್‍ನ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

  • ಸತ್ತ ಕೋಳಿಮರಿಯೊಂದಿಗೆ ಆಸ್ಪತ್ರೆಗೆ ಓಡಿದ- ಬಾಲಕನ ಮುಗ್ಧತೆಗೆ ಪೇಟಾ ಫುಲ್ ಫಿದಾ

    ಸತ್ತ ಕೋಳಿಮರಿಯೊಂದಿಗೆ ಆಸ್ಪತ್ರೆಗೆ ಓಡಿದ- ಬಾಲಕನ ಮುಗ್ಧತೆಗೆ ಪೇಟಾ ಫುಲ್ ಫಿದಾ

    ಐಜಾಲ್: ತಾನು ಸೈಕಲ್ ಹತ್ತಿಸಿದ ಕೋಳಿಮರಿಯ ಜೀವ ಉಳಿಸಿಕೊಡಿ ಎಂದು ಆಸ್ಪತ್ರೆಗೆ ಓಡಿ ಬಂದಿದ್ದ ಪುಟ್ಟ ಬಾಲಕನೊಬ್ಬನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಈ 6ರ ಪೋರನ ಪ್ರಾಣಿ ಕಾಳಜಿ ಮೆಚ್ಚಿ ಪೇಟಾ(ಪ್ರಾಣಿ ದಯಾ ಸಂಘ) ಕಾಂಪಸಿನೇಟ್ ಕಿಡ್ ಎಂದು ಬಿರುದು ನೀಡಿದೆ.

    ಮಿಜೋರಾಂ ರಾಜ್ಯದ ಡೆರೆಕ್ ಸಿ ಲಾಲ್ ಚಹನಿಮಾ(6) ತನ್ನ ಮುಗ್ಧತೆಯಿಂದ ಎಲ್ಲರ ಮನ ಗೆದ್ದಿದ್ದಾನೆ. ಈತ ಆಟವಾಡುತ್ತಿದ್ದಾಗ ಪಕ್ಕದ ಮನೆಯ ಕೋಳಿ ಮರಿಯ ಮೇಲೆ ಆಕಸ್ಮಾತ್ತಾಗಿ ಸೈಕಲ್ ಹತ್ತಿಸಿದ್ದನು. ಪರಿಣಾಮ ಕೋಳಿ ಮರಿ ಬಿದ್ದಿದ್ದು, ಇದರಿಂದ ಗಾಬರಿಗೊಂಡ ಬಾಲಕ ತನ್ನಲ್ಲಿದ್ದ 10 ರೂ. ಹಣವನ್ನು ಹಿಡಿದುಕೊಂಡು ಆಸ್ಪತ್ರೆಗೆ ಓಡಿದ್ದಾನೆ. ಅಲ್ಲದೆ ಅಲ್ಲಿ ತನ್ನ ಕೈಯಲ್ಲಿದ್ದ ಹಣ ನೀಡಿ ಕೋಳಿ ಮರಿಯನ್ನು ಬದುಕಿಸಿಕೊಡುವಂತೆ ಗೋಗರೆದಿದ್ದಾನೆ. ಇದನ್ನು ಆಸ್ಪತ್ರೆಯಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ಬಳಿಕ ಬಾಲಕನ ಮುಗ್ಧತೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ ಈ ಫೋಟೋ ಸಾಕಷ್ಟು ನೆಟ್ಟಿಗರ ಮನ ಗೆದ್ದಿತ್ತು.

    ಈ ಬಾಲಕ ಒಂದು ಕೈಯಲ್ಲಿ ಹತ್ತು ರೂ. ಹಾಗೂ ಇನ್ನೊಂದು ಕೈಯಲ್ಲಿ ಕೋಳಿ ಮರಿ ಹಿಡಿದುಕೊಂಡು ಇರುವ ಫೋಟೋವನ್ನು ಸಂಗ ಸೇಸ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಈ ಮುಗ್ಧ ಫೋಟೋಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ 90 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

    ಇದನ್ನು ಗಮನಿಸಿದ ಭಾರತೀಯ ಪ್ರಾಣಿ ದಯಾ ಸಂಘವು ಈ ಬಾಲಕನ ಮುಗ್ಧತೆಗೆ ಕಾಂಪಸಿನೇಟ್ ಕಿಡ್ ಬಿರುದು ನೀಡಿ, ಈತನಿಗೆ ಪ್ರಾಣಿಗಳ ಮೇಲಿರುವ ಪ್ರೀತಿ, ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇದಕ್ಕೂ ಮೊದಲು ಬಾಲಕನ ಶಾಲೆ ಕೂಡ ಆತನ ಕಾರ್ಯವನ್ನು ಮೆಚ್ಚಿ ಸನ್ಮಾನಿಸಿದೆ.

    https://www.facebook.com/sanga.says/posts/2544025018945443:0

  • ಕೋಳಿಮರಿಯನ್ನು ರಕ್ಷಿಸಲು ಕೂಡಿಟ್ಟಿದ್ದ ಹಣವನ್ನು ಆಸ್ಪತ್ರೆಗೆ ತಂದ ಬಾಲಕನಿಗೆ ಪ್ರಶಸ್ತಿ

    ಕೋಳಿಮರಿಯನ್ನು ರಕ್ಷಿಸಲು ಕೂಡಿಟ್ಟಿದ್ದ ಹಣವನ್ನು ಆಸ್ಪತ್ರೆಗೆ ತಂದ ಬಾಲಕನಿಗೆ ಪ್ರಶಸ್ತಿ

    ಐಜ್ವಾಲ್: ಆಟವಾಡುವಾಗ ಕೋಳಿ ಮರಿ ಮೇಲೆ ಸೈಕಲ್ ಹರಿಸಿ ಬಳಿಕ ತನ್ನೊಂದಿಗೆ ಇದ್ದ ಹಣವನ್ನು ಆಸ್ಪತ್ರೆಗೆ ತೆಗೆದುಕೊಂಡು ಅದನ್ನು ರಕ್ಷಿಸಲು ಪ್ರಯತ್ನಪಟ್ಟ ಬಾಲಕನಿಗೆ ಶಾಲೆ ಮೆಚ್ಚುಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

    6 ವರ್ಷದ ಡೆರೆಕ್ ಸಿ ಲಾಲ್ಚಾನ್ಹಿಮಾ ಬಾಲಕನ ಕಾರ್ಯ ನೋಡಿ ಶಾಲಾ ಸಿಬ್ಬಂದಿ ಆತನಿಗೆ ಸನ್ಮಾನ ಮಾಡಿದ್ದಾರೆ. ಶಾಲಾ ಸಿಬ್ಬಂದಿ ಅವರು ಡೆರೆಕ್‍ಗೆ ಶಾಲು ಹೊದಿಸಿದ್ದಾರೆ. ಮಿಜೋರಾಂನಲ್ಲಿ ಈ ಹಿಂದೆ ಈ ರೀತಿಯ ಶಾಲುಗಳನ್ನು ಯೋಧರಿಗೆ ಅಥವಾ ಮುಖ್ಯ ಅತಿಥಿಗಳಿಗೆ ಹಾಕಿ ಸನ್ಮಾನಿಸುತ್ತಿದ್ದರು. ಈಗ ಬಾಲಕನ ಶೌರ್ಯವನ್ನು ಮೆಚ್ಚಿದ ಶಾಲಾ ಸಿಬ್ಬಂದಿ ಈ ಶಾಲನ್ನು ಬಾಲಕನಿಗೆ ಹಾಕಿ ಸನ್ಮಾನಿಸಿದ್ದಾರೆ.

    ಬಾಲಕನಿಗೆ ಶಾಲು ಹೊದಿಸಿ ಕೈಯಲ್ಲಿ ಪ್ರಶಸ್ತಿ ಹಿಡಿದುಕೊಂಡು ನಿಂತಿರುವ ಫೋಟೋವನ್ನು ಸಂಗಾ ಎನ್ನುವವರು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಬಾಲಕ ಕೋಳಿ ಮರಿಯನ್ನು ಆಸ್ಪತ್ರೆಗೆ ತೆಗೆದುಕೊಂಡು ಫೋಟೋವನ್ನು ಕೂಡ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು.  ಇದನ್ನೂ ಓದಿ: ಸೈಕಲಿಗೆ ಸಿಲುಕಿ ಕೋಳಿ ಮರಿ ಸಾವು – ಬಾಲಕನ ಕಾರ್ಯಕ್ಕೆ ಫಿದಾ ಆದ ನೆಟ್ಟಿಗರು!

    ನಡೆದಿದ್ದೇನು?
    ಆಟವಾಡುವ ವೇಳೆ ಬಾಲಕ ತುಳಿಯುತ್ತಿದ್ದ ಸೈಕಲ್ ಕೋಳಿ ಮರಿ ಮೇಲೆ ಹರಿದಿದ್ದು, ಪರಿಣಾಮ ಅದು ಸ್ಥಳದಲ್ಲೇ ಸಾವನ್ನಪ್ಪಿತ್ತು. ಕೂಡಲೇ ತನ್ನಿಂದಲೇ ಕೋಳಿ ಮರಿ ಸಾವನ್ನಪ್ಪಿದೆ ಎಂದು ತಿಳಿಸಿದ ಬಾಲಕ ತಾನು ಕೂಡಿಟ್ಟಿದ್ದ ಹಣದೊಂದಿಗೆ ಕೋಳಿ ಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ತೆರಳಿದ್ದನು. ಆಸ್ಪತ್ರೆಗೆ ತೆರಳಿದ ಬಾಲಕ ವೈದ್ಯರಿಗೆ ತಾನು ತಂದಿದ್ದ ಹಣವನ್ನು ನೀಡಿ ಕೋಳಿ ಮರಿಗೆ ಚಿಕಿತ್ಸೆ ನೀಡಲು ಮನವಿ ಮಾಡಿದ್ದಾನೆ. ಬಾಲಕನ ಈ ಫೋಟೋದೊಂದಿಗೆ ಆತನ ವಿವರಗಳನ್ನು `ಸಂಗಾ’ ಹೆಸರಿನ ವ್ಯಕ್ತಿಯೊಬ್ಬರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಫೋಟೋ ವೈರಲ್ ಆಗಿತ್ತು.

  • ಸೈಕಲಿಗೆ ಸಿಲುಕಿ ಕೋಳಿ ಮರಿ ಸಾವು – ಬಾಲಕನ ಕಾರ್ಯಕ್ಕೆ ಫಿದಾ ಆದ ನೆಟ್ಟಿಗರು!

    ಸೈಕಲಿಗೆ ಸಿಲುಕಿ ಕೋಳಿ ಮರಿ ಸಾವು – ಬಾಲಕನ ಕಾರ್ಯಕ್ಕೆ ಫಿದಾ ಆದ ನೆಟ್ಟಿಗರು!

    ಐಜ್ವಾಲ್: ಮಕ್ಕಳು ಶುದ್ಧ ಮನಸ್ಸಿನ ದೇವರ ಪ್ರತಿರೂಪಗಳು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಸದ್ಯ ಈ ಮಾತಿಗೆ ನೈಜ ಸಾಕ್ಷಿಯಂತೆ ಮಿಜೋರಾಂನ ಸೈರಂಗ್ ಬಾಲಕ ಮಾಡಿದ ಮುಗ್ಧ ಮನಸ್ಸಿನ ಕಾರ್ಯ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

    ನಡೆದಿದ್ದೇನು?
    ಆಟವಾಡುವ ವೇಳೆ ಬಾಲಕ ತುಳಿಯುತ್ತಿದ್ದ ಸೈಕಲ್ ಕೋಳಿ ಮರಿ ಮೇಲೆ ಹರಿದಿದ್ದು, ಪರಿಣಾಮ ಅದು ಸ್ಥಳದಲ್ಲೇ ಸಾವನ್ನಪ್ಪಿದೆ. ಕೂಡಲೇ ತನ್ನಿಂದಲೇ ಕೋಳಿ ಮರಿ ಸಾವನ್ನಪ್ಪಿದೆ ಎಂದು ತಿಳಿಸಿದ ಬಾಲಕ ತಾನು ಕೂಡಿಟ್ಟಿದ್ದ ಹಣದೊಂದಿಗೆ ಕೋಳಿ ಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ತೆರಳಿದ್ದಾನೆ.

    ಆಸ್ಪತ್ರೆಗೆ ತೆರಳಿದ ಬಾಲಕ ವೈದ್ಯರಿಗೆ ತಾನು ತಂದಿದ್ದ ಹಣವನ್ನು ನೀಡಿ ಕೋಳಿ ಮರಿಗೆ ಚಿಕಿತ್ಸೆ ನೀಡಲು ಮನವಿ ಮಾಡಿದ್ದಾನೆ. ಬಾಲಕನ ಈ ಫೋಟೋದೊಂದಿಗೆ ಆತನ ವಿವರಗಳನ್ನು ‘ಸಂಗಾ’ ಹೆಸರಿನ ವ್ಯಕ್ತಿಯೊಬ್ಬರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಬಾಲಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಪೋಸ್ಟಿಗೆ ಇದುವರೆಗೂ 1 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. 74 ಸಾವಿರ ಮಂದಿ ಶೇರ್ ಮಾಡಿದ್ದರೆ, 9 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಕನ ಈ ನಡೆಗೆ ಮೆಚ್ಚುಗೆ ಸೂಚಿಸಿರುವ ಹಲವು ಮಂದಿ ಆತನ ಪೋಷಕರು ಬಾಲಕನನ್ನು ಬೆಳೆಸಿದ ಪರಿಗೂ ಶಹಬ್ಬಾಶ್ ಗಿರಿ ನೀಡಿದ್ದಾರೆ.

  • ಶಶಿ ತರೂರ್ ವಿರುದ್ಧ ಸ್ಪರ್ಧಿಸಲು ರಾಜ್ಯಪಾಲ ಸ್ಥಾನಕ್ಕೆ ಕುಮ್ಮನಂ ರಾಜೀನಾಮೆ

    ಶಶಿ ತರೂರ್ ವಿರುದ್ಧ ಸ್ಪರ್ಧಿಸಲು ರಾಜ್ಯಪಾಲ ಸ್ಥಾನಕ್ಕೆ ಕುಮ್ಮನಂ ರಾಜೀನಾಮೆ

    ಐಜ್ವಾಲ್: ಮಿಜೋರಾಂ ರಾಜ್ಯಪಾಲ ಸ್ಥಾನಕ್ಕೆ ಕುಮ್ಮನಂ ರಾಜಶೇಖರನ್ ಅವರು ರಾಜೀನಾಮೆ ನೀಡಿದ್ದಾರೆ.

    ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿ ಮುಖಂಡರಾಗಿರುವ ಕುಮ್ಮನಂ ರಾಜಶೇಖರನ್ ಅವರು ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಯಲಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್‍ನ ಮುಖಂಡ ಶಶಿ ತರೂರ್ ಅವರನ್ನು ಎದುರಿಸಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

    ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕುಮ್ಮನಂ ರಾಜಶೇಖರನ್ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ಅಧಿಕಾರಿಗಳ ಮೂಲದಿಂದ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಮಿಜೋರಾಂಗೆ ರಾಜ್ಯಪಾಲರನ್ನು ನೇಮಿಸುವವರೆಗೆ ಅಸ್ಸಾಂ ರಾಜ್ಯಪಾಲ ಜಗದೀಶ್ ಮುಖಿ ಹೆಚ್ಚುವರಿ ಹೊಣೆ ವಹಿಸಿಕೊಳ್ಳಲಿದ್ದಾರೆ.

    ಈ ಬೆಳವಣಿಗೆಯಿಂದಾಗಿ ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಕುಮ್ಮನಂ ರಾಜಶೇಖರನ್ ಹಾಗೂ ಶಶಿ ತರೂರ್ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಿಜೋರಾಂ ರಾಜ್ಯಪಾಲರಿಂದ ಖಾಲಿ ಮೈದಾನದಲ್ಲಿ ಭಾಷಣ

    ಮಿಜೋರಾಂ ರಾಜ್ಯಪಾಲರಿಂದ ಖಾಲಿ ಮೈದಾನದಲ್ಲಿ ಭಾಷಣ

    -ಗಣರಾಜ್ಯೋತ್ಸವಕ್ಕೆ ಗೈರಾದ ಜನತೆ

    ಐಜ್ವಾಲ್: ದೇಶದೆಲ್ಲೆಡೆ ಗಣರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ದೆಹಲಿಯ ರಾಜಪಥನಲ್ಲಿಯಂತೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಿಜೋರಾಂ ರಾಜ್ಯಪಾಲರಾದ ಕುಮ್ಮನಾಮ ರಾಜಶೇಖರನ್ ಖಾಲಿ ಮೈದಾನದಲ್ಲಿ ಭಾಷಣ ಮಾಡಿದ್ದಾರೆ.

    ಐಜ್ವಾಲ ನಗರದ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕೇವಲ ಬೆರಳಣಿಕೆಯಷ್ಟೆ ಜನರು ಮಾತ್ರ ಹಾಜರಾಗಿದ್ದರು. ಸಂಪುಟದ ಕೆಲ ಮಂತ್ರಿಗಳು, ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಧ್ವಜಾರೋಹಣದ ಬಳಿಕ ಖಾಲಿ ಮೈದಾನದ ಮುಂದೆಯೇ ರಾಜ್ಯಪಾಲರು ಭಾಷಣ ಮಾಡಿದ್ರು.

    ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸಿಟಿಜನ್ ಶಿಪ್ ಬಿಲ್ ವಿರೋಧಿಸಿ ಎನ್‍ಜಿಓ ಕೋಆರ್ಡಿನೇಷನ್ ಕಮೀಟಿ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆಡಳಿತ ವರ್ಗ ಹೊರತುಪಡಿಸಿ ಸಾಮಾನ್ಯ ನಾಗರಿಕರು ಕಾರ್ಯಕ್ರಮದಿಂದ ದೂರ ಉಳಿದುಕೊಂಡಿದ್ರೆ, ಕೆಲವರು ಮೈದಾನದ ಮುಂಭಾಗದಲ್ಲಿ ಬಿಲ್ ವಿರೋಧಿಸಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಸಾಮಾಜಿಕ ಮತ್ತು ವಿದ್ಯಾರ್ಥಿ ಸಂಘಟನೆಗಳು ಭಾಗಿಯಾಗಿದ್ದವು.

    ರಾಜ್ಯಪಾಲರು ತಮ್ಮ ಭಾಷಣದಲ್ಲಿ, ರಾಜ್ಯ ಸರ್ಕಾರ ಗಡಿ ಮತ್ತು ಜನತೆ ಸುರಕ್ಷೆಗಾಗಿ ಬಹು ದೊಡ್ಡ ಹೆಜ್ಜೆಯನ್ನಿಡಲು ನಿರ್ಧರಿಸಿದೆ. ಸರ್ಕಾರ ಅಭಿವೃದ್ಧಿ ಮತ್ತು ಜನಪರವಾಗಿ ಕೆಲಸ ಮಾಡುತ್ತಿದೆ. ರಾಜ್ಯದ ಜನತೆಯ ಗುರುತಿಗಾಗಿ ಹಾಗು ಸಾಂಸ್ಕೃತಿಕ ಮೌಲ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ಗ್ರಾಮ ಗ್ರಾಮಗಳಿಗೆ ತೆರಳಿ ನಾಗರೀಕತ್ವದ ನೋಂದಣಿಯನ್ನು ಮಾಡಿಕೊಳ್ಳುತ್ತಿದೆ. ಸರ್ಕಾರ ರಾಜ್ಯದ ಜನತೆಯಲ್ಲಿ ಸಹೋದರತ್ವ ಭಾವನೆಯನ್ನು ತರಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿಯೂ ಮಿಜೋರಾಂ ಸಿಎಂಗೆ ಸೋಲು!

    ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿಯೂ ಮಿಜೋರಾಂ ಸಿಎಂಗೆ ಸೋಲು!

    ಐಜಾಲ್: ಮಿಜೋರಾಂ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಲಾಲ್ ಥನ್ಹಾವ್ಲಾ ಅವರು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿಯೂ ಪರಾಭವಗೊಂಡಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಿಜೋರಾಂನ ಸಿಎಂ ಲಾಲ್ ಥವ್ಹಾವ್ಲಾ ಅವರು ತಮ್ಮ ಕಾಯಂ ಕ್ಷೇತ್ರವಾಗಿದ್ದ ದಕ್ಷಿಣ ಚಾಂಪೈ ಕಣಕ್ಕೆ ಇಳಿದಿದ್ದರು. ಅಷ್ಟೇ ಅಲ್ಲದೆ ಸೇರ್ಫಿಪ್ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು. ಆದರೆ ಗೆಲುವು ಸಾಧಿಸುವಲ್ಲಿ ಲಾಲ್ ಥವ್ಹಾವ್ಲಾ ವಿಫಲರಾಗಿದ್ದಾರೆ. ದಕ್ಷಿಣ ಚಾಂಪೈ ಕ್ಷೇತ್ರದಲ್ಲಿ ಲಾಲ್ ಥವ್ಹಾವ್ಲಾ ಅವರು ಮಿಜೋ ನ್ಯಾಷನಲ್ ಫ್ರಂಟ್ ಅಭ್ಯರ್ಥಿ ಟಿಟಿ ಲಾಲ್ನುಂಟ್ಲುಂಗಾ ವಿರುದ್ಧ 1,049 ಮತಗಳ ಅಂತರದಲ್ಲಿ ಸೋತಿದ್ದಾರೆ.

    ಕಾಂಗ್ರೆಸ್ ಕಳೆದ ಎರಡು ಅವಧಿಗಳಿಂದ ಮಿಜೋರಾಂನಲ್ಲಿ ಅಧಿಕಾರದ ಚುಕ್ಕಾನೆ ಹಿಡಿದಿತ್ತು. ಆದರೆ ಈಗ ಪರಾಭವಗೊಂಡಿರುವ ಪರಿಣಾಮ ಈಶಾನ್ಯ ರಾಜ್ಯವು ಕಾಂಗ್ರೆಸ್ ಮುಕ್ತವಾಗಿದೆ. ಈ ಬಾರಿ ಮಿಜೋ ನ್ಯಾಷನಲ್ ಫ್ರಂಟ್ ಮುನ್ನಡೆ ಸಾಧಿಸಿದ್ದು, ಅಧಿಕಾರದ ಗದ್ದುಗೆ ಏರಲಿದೆ.

    ಲಾಲ್ ಥನ್ಹಾವ್ಲಾ ಅವರು 1984ರಿಂದ ರಾಜಕೀಯಕ್ಕೆ ಕಾಲಿಟ್ಟಿದ್ದು, ಒಟ್ಟು 5 ಬಾರಿ ಮಿಜೋರಾಂ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಒಂದು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ವಿಧಾನಸಭಾ ಚುನಾವಣೆ- ಕೈನಿಂದ ಜಾರುತ್ತಾ ಮಿಜೋರಾಂ?

    ವಿಧಾನಸಭಾ ಚುನಾವಣೆ- ಕೈನಿಂದ ಜಾರುತ್ತಾ ಮಿಜೋರಾಂ?

    ಮಿಜೋರಾಂ: ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್‍ನ ಕೊನೆಯ ಕೊಂಡಿಯಾಗಿರುವ ಮಿಜೋರಾಂ ಈ ಬಾರಿ ಕೈ ಜಾರುವ ಎಲ್ಲ ಸಾಧ್ಯತೆ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

    ಒಟ್ಟು 40 ವಿಧಾನಸಭಾ ಕ್ಷೇತ್ರಗಳ ಪುಟ್ಟ ರಾಜ್ಯ ಮಿಜೋರಾಂನಲ್ಲಿ ಈ ಬಾರಿ ಮಿಜೋ ನ್ಯಾಷನಲ್ ಫ್ರಂಟ್ ಕಾಂಗ್ರೆಸ್ ಗೆಲುವಿನ ಕನಸಿಗೆ ಅಡ್ಡಿಯಾಗುವ ನಿರೀಕ್ಷೆಯಿದೆ. ಹಾಲಿ ಸಿಎಂ ಹಾಗೂ 5 ಬಾರಿ ಸಿಎಂ ಆಗಿರುವ ಕಾಂಗ್ರೆಸ್‍ನ ಲಾಲ್‍ತನ್‍ಹಾವ್ಲಾ ಚಂಪೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಝೋರಾಂ ನ್ಯಾಷನಲ್ ಪಾರ್ಟಿಯ ಸ್ಥಾಪಕ ಲಾಲ್ದುಹೋಮಾ ಸರ್ಚಿಪ್ ಐಜ್ವಾಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದು ಪ್ರಬಲ ಎದುರಾಳಿಯಾಗಿದ್ದಾರೆ.

    ಮಿಜೋರಾಂ ವಿಧಾನಸಭೆ ಫಲಿತಾಂಶ ಒಟ್ಟು 40 ಸ್ಥಾನಗಳಿದ್ದು, 21 ಅಗತ್ಯ ಬಹುಮತ ಬೇಕಾಗಿದೆ. 2013ರ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ 34, ಎಂಎನ್‍ಎಫ್ 05 ಹಾಗೂ ಇತರೆ 01 ಸ್ಥಾನ ಪಡೆದುಕೊಂಡಿತ್ತು. 2013ರ ವಿಧಾನಸಭೆ ಚುನಾವಣೆಯ ಮತಗಳಿಕೆಯಲ್ಲಿ ಕಾಂಗ್ರೆಸ್ ಶೇ. 44.9, ಎಂಎನ್‍ಎಫ್ ಶೇ. 28.8 ಹಾಗೂ ಇತರೆ ಶೇ. 6.9 ಮತಗಳನ್ನು ಪಡೆದಿತ್ತು. ಮಿಜೋರಾ0 ಮತದಾನೋತ್ತರ ಸಮೀಕ್ಷೆ ಒಟ್ಟು 40 ಸ್ಥಾನಗಳಿದ್ದು, 21 ಬಹುಮತ ಬೇಕಾಗಿದೆ.

    ಮಿಜೋರಾಂ ಯಾರಿಗೆ ಪ್ಲಸ್? ಯಾರಿಗೆ ಮೈನಸ್?
    ಬಿಜೆಪಿ ಅಧಿಕಾರದಿಂದ ದೂರ ಉಳಿದಿರುವ ಈಶಾನ್ಯ ಭಾರತದ ಏಕೈಕ ರಾಜ್ಯ ಮಿಜೋರಾಂ ಆಗಿದ್ದು, ಇದು ಕಾಂಗ್ರೆಸ್ ಕೈಯಲ್ಲಿರುವ ಏಕೈಕ ಈಶಾನ್ಯ ರಾಜ್ಯ ಆಗಿದೆ. ಮಿಜೋರಾಂ ಸತತ ಎರಡು ಬಾರಿ ಕೈ ಅಧಿಕಾರದಲ್ಲಿದೆ. ಸತತ ಮೂರು ಬಾರಿ ಯಾವ ಪಕ್ಷಕ್ಕೂ ಅಧಿಕಾರ ಸಿಕ್ಕಿಲ್ಲ. ಅಧಿಕಾರಕ್ಕೆ ಬಂದರೆ ಮಿಜೋರಾಂ ನ್ಯಾಷನಲ್ ಫ್ರಂಟ್ ಸಂಪೂರ್ಣ ಮದ್ಯ ನಿಷೇಧದ ಭರವಸೆ ನೀಡಿದೆ. ಕ್ರಿಶ್ಚಿಯನ್ ಪ್ರಾಬಲ್ಯವಿರುವ ರಾಜ್ಯದಲ್ಲಿ ಬಿಜೆಪಿ ಮುಂದೆ ಬೆಟ್ಟದಂತಹ ಸವಾಲಿದೆ. ಕಾಂಗ್ರೆಸ್‍ನಲ್ಲಿ ಸ್ಪೀಕರ್, ಗೃಹ ಸಚಿವರು, ಮೂವರು ಶಾಸಕರು ರಾಜೀನಾಮೆಯಿಂದ ಆಂತರಿಕ ಕಚ್ಚಾಟ ನಡೆಸಿದ್ದಾರೆ. ಹದಗೆಟ್ಟ ರಸ್ತೆಗಳು, ನಿರುದ್ಯೋಗ, ರೈತರ ಸಂಕಷ್ಟ ಈ ವಿಷಯಗಳು ಕಾಂಗ್ರೆಸ್‍ಗೆ ಕಂಟಕವಾಗಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಂಚ ಫಲಿತಾಂಶದ Live Updates

    ಪಂಚ ಫಲಿತಾಂಶದ Live Updates

    ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದ್ದು, ಮತ ಎಣಿಕೆ ಆರಂಭವಾಗಿದೆ. ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಹಲವು ಹಂತಗಳಲ್ಲಿ ಚುನಾವಣೆ ಎದುರಿಸಿದ್ದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢ, ತೆಲಂಗಾಣ, ಮಿಜೋರಾಂ ಜನಾದೇಶ ಏನೆಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.

    ಮಧ್ಯಾಹ್ನ 1.23: ಮಧ್ಯಪ್ರದೇಶದಲ್ಲಿ ನೆಕ್ ಟು ನೆಕ್ ಫೈಟ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್

    ಮಧ್ಯಾಹ್ನ 12.38: ತೆಲಂಗಾಣ ಸಿಎಂ 2ನೇ ಬಾರಿಗೆ ಆಗಿ ಚಂದ್ರಶೇಖರ್ ರಾವ್ ಅವರು ನಾಳೆ ಪ್ರಮಾಣ ವಚನ ಸ್ವೀಕಾರ

    ಮಧ್ಯಾಹ್ನ 12.09: ಮಧ್ಯಪ್ರದೇಶದಲ್ಲಿ ಬಿಜೆಪಿ 111, ಕಾಂಗ್ರೆಸ್ 106 ಹಾಗೂ ಇತರೆ 13- ರಾಜಸ್ಥಾನದಲ್ಲಿ ಬಿಜೆಪಿ 73, ಕಾಂಗ್ರೆಸ್ 102 ಹಾಗೂ ಇತರೆ 24- ತೆಲಂಗಾಣದಲ್ಲಿ ಟಿಆರ್ ಎಸ್ 84, ಕಾಂಗ್ರೆಸ್ 26, ಬಿಜೆಪಿ 2 ಹಾಗೂ ಇತರೆ 7- ಮಿಜೋರಾಂನಲ್ಲಿ ಕಾಂಗ್ರೆಸ್ 6, ಎಂಎನ್‍ಎಫ್ 26, ಬಿಜೆಪಿ 1 ಹಾಗೂ ಇತರೆ 7- ಛತ್ತೀಸ್ ಗಡದಲ್ಲಿ ಬಿಜೆಪಿ 19, ಕಾಂಗ್ರೆಸ್ 64, ಬಿಎಸ್‍ಪಿ 5 ಹಾಗೂ ಇತರೆ 2 .

    ಬೆಳಗ್ಗೆ 11.38: ಮಧ್ಯಪ್ರದೇಶದಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ

    ಬೆಳಗ್ಗೆ 11.30: ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ಇಂದಿಗೆ ಒಂದು ವರ್ಷ. ಹೀಗಾಗಿ ಇಂದಿನ ಈ ಜಯ ಅವರಿಗೆ ಉಡುಗೊರೆ ಅಂತ ರಾಜಸ್ಥಾನದ ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಪೈಲೆಟ್ ಹೇಳಿಕೆ

    ಬೆಳಗ್ಗೆ 11.10: ತೆಲಂಗಾಣದಲ್ಲಿ ಕೆಸಿಆರ್ ಗೆ 17 ಸಾವಿರ ಮತಗಳ ಲೀಡ್, ಮಿಜೋರಾಂನಲ್ಲಿ ಎಂಎನ್‍ಎಫ್ ಗೆ ಜಯ

    ಬೆಳಗ್ಗೆ 10:39: ಅಧಿವೇಶನಕ್ಕೆ ಸಂಬಂಧಿಸಿದಂತೆ ಮಾತನಾಡಿ, ಗೆದ್ದವರಿಗೆ ಶುಭಾಶಯ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ರು.

    ಬೆಳಗ್ಗೆ 10.20: ರಾಜಸ್ಥಾನದಲ್ಲಿ ಬಿಜೆಪಿ 81, ಕಾಂಗ್ರೆಸ್ 97, ಇತರೆ 16. ಮಧ್ಯಪ್ರದೇಶದಲ್ಲಿ ಬಿಜೆಪಿ 102, ಕಾಂಗ್ರೆಸ್ 104 ಹಾಗೂ ಇತರೆ 14 ಇದೆ. ಮಿಜೋರಾಂನಲ್ಲಿ ಕಾಂಗ್ರೆಸ್ 10, ಎಂಎನ್ ಎಫ್ 26, ಬಿಜೆಪಿ 1 ಹಾಗೂ ಇತರೆ 2. ತೆಲಂಗಾಣದಲ್ಲಿ ಟಿಆರ್ ಎಸ್ 76 ಕಾಂಗ್ರೆಸ್ 33, ಬಿಜೆಪಿ 3 ಹಾಗೂ ಇತರೆ 6. ಛತ್ತೀಸ್ ಗಡದಲ್ಲಿ ಬಿಜೆಪಿ 27, ಕಾಂಗ್ರೆಸ್ 58 ಬಿಎಸ್‍ಪಿ 3

    ಬೆಳಗ್ಗೆ 9.57: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 107, ಛತ್ತೀಸ್ ಗಡದಲ್ಲಿ ಕಾಂಗ್ರೆಸ್ 46, ರಾಜಸ್ಥಾನದಲ್ಲಿ ಕಾಂಗ್ರೆಸ್ 92, ಹಾಗೂ ಮಿಜೋರಾಂನಲ್ಲಿ ಕಾಂಗ್ರೆಸ್ 14, ತೆಲಂಗಾಣದಲ್ಲಿ ಟಿಆರ್ ಎಸ್ 65 ಮುನ್ನಡೆ ಗಳಿಸಿದೆ.

    ಬೆಳಗ್ಗೆ 9.37: ಮಧ್ಯಪ್ರದೇಶ, ಛತ್ತೀಸ್ ಗಡ, ರಾಜಸ್ಥಾನ, ಮಿಜೋರಾಂನಲ್ಲಿ ಕಾಂಗ್ರೆಸ್, ತೆಲಂಗಾಣದಲ್ಲಿ ಟಿಆರ್ ಎಸ್ ಮುನ್ನಡೆ

    ಬೆಳಗ್ಗೆ 9.28: ಛತ್ತಿಸ್ ಗಡದಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ

    ಬೆಳಗ್ಗೆ 9.10: ಆರಂಭಿಕ ಮುನ್ನಡೆ ಸಂತೋಷ ತಂದಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನಾವೇ ಸರ್ಕಾರ ರಚನೆ ಮಾಡಲಿದ್ದೇವೆ: ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್

    ಬೆಳಗ್ಗೆ 9.05: ಬೆಳಗ್ಗೆ 9.05: ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಮುನ್ನಡೆ-ತೆಲಂಗಾಣದಲ್ಲಿಯೂ TRS ಮುನ್ನಡೆ

    ಬೆಳಗ್ಗೆ 8:45: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಆರಂಭಿಕ ಮುನ್ನಡೆ, ರಾಜಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆ , ತೆಂಗಾಣದಲ್ಲಿ ಕಾಂಗ್ರೆಸ್ ಗೆ ಮುನ್ನಡೆ, ಮಿಜೋರಾಂನಲ್ಲಿ ಬಿಜೆಪಿ ಮುನ್ನಡೆ, ಛತ್ತೀಸ್ ಗಡದಲ್ಲಿ  ಕಾಂಗ್ರೆಸ್ ಮುನ್ನಡೆ.

    ಬೆಳಗ್ಗೆ 8: ಚುನಾವಣಾ ಮತ ಎಣಿಕೆ ಪ್ರಾರಂಭ