Tag: ಮಿಜೋರಾಂ

  • ಮಿಜೋರಾಂನ ಮೊಟ್ಟಮೊದಲ ರೈಲು ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

    ಮಿಜೋರಾಂನ ಮೊಟ್ಟಮೊದಲ ರೈಲು ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

    – 5 ರಾಜ್ಯಗಳಲ್ಲಿ 71,000 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ

    ಐಜ್ವಾಲ್: ಮಿಜೋರಾಂನ (Mizoram) ಮೊಟ್ಟಮೊದಲ ರೈಲು ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಉದ್ಘಾಟಿಸಿದ್ದಾರೆ.

    ಸೈರಾಂಗ್‌ನಿಂದ ದೆಹಲಿ ಸಂಪರ್ಕಿಸುವ ರಾಜಧಾನಿ ಎಕ್ಸ್ಪ್ರೆಸ್, ಸೈರಾಂಗ್-ಗುವಾಹಟಿ ಎಕ್ಸ್ಪ್ರೆಸ್ ಮತ್ತು ಸೈರಾಂಗ್-ಕೋಲ್ಕತ್ತಾ ಎಕ್ಸ್ಪ್ರೆಸ್‌ಗೆ ಹಸಿರು ನಿಶಾನೆ ತೋರಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಶಾಂತಿಯ ಹೆಜ್ಜೆ – ಜನಾಂಗೀಯ ಹಿಂಸಾಚಾರದ ಬಳಿಕ ಇಂದು ಮೋದಿ ಮೊದಲ ಭೇಟಿ

    ಮಿಜೋರಾಂ ಗುಡ್ಡಗಾಡಿನಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿ ರೈಲು ಮಾರ್ಗ ನಿರ್ಮಾಣ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಇದೀಗ ನಿಧಾನಗತಿಯಲ್ಲಿ ಸಾಗಿದ್ದ ರೈಲ್ವೆ ಕಾಮಗಾರಿ 11 ವರ್ಷಗಳ ಬಳಿಕ ಪೂರ್ಣಗೊಂಡಿದೆ. 8,070 ಕೋಟಿ ರೂ. ವೆಚ್ಚದ ಬೈರಾಬಿ-ಸೈರಾಂಗ್ ರೈಲು ಮಾರ್ಗವು ನಿರ್ಮಾಣವಾಗಿದೆ. 2015ರಲ್ಲಿ ಪ್ರಾರಂಭವಾದ ಕಾಮಗಾರಿ 2025ರಲ್ಲಿ ಪೂರ್ಣಗೊಂಡಿದೆ.

    ಇದೀಗ ಎಲ್ಲಾ ಸುರಂಗಗಳಲ್ಲಿ ಬ್ಯಾಲೆಸ್ಟ್ಲೆಸ್ ಟ್ರ‍್ಯಾಕ್ ಅಳವಡಿಸಲಾಗಿದೆ. ಸೇತುವೆ ಮತ್ತು ಸುರಂಗಗಳನ್ನು ಹೊರತುಪಡಿಸಿ 23.715 ಕಿ.ಮೀ ಮಾರ್ಗವು ಬಯಲು ಪ್ರದೇಶದಲ್ಲಿದೆ. ಕೆಲವೆಡೆ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ರೆ, ಅದರಿಂದ ರಕ್ಷಣೆ ಪಡೆಯಲು ಸೂಕ್ತ ವ್ಯವಸ್ಥೆಗಳನ್ನೂ ಮಾಡಲಾಗಿದೆ.

    ಸಾಯಿರಾಂಗ್ ಬಳಿಯ ಸೇತುವೆ ಸಂಖ್ಯೆ 144 ಕುತುಬ್ ಮಿನಾರ್‌ಗಿಂತ 114 ಮೀಟರ್ ಎತ್ತರದಲ್ಲಿದೆ. ಇದು ದೇಶದ ಅತಿ ಎತ್ತರದ ಪಿಯರ್ ರೈಲ್ವೆ ಸೇತುವೆಯಾಗಿದೆ ಎಂದು ಈಶಾನ್ಯ ಗಡಿನಾಡು ರೈಲ್ವೆಯ ಅಧಿಕಾರಿ ತಿಳಿಸಿದ್ದಾರೆ.

    5 ರಾಜ್ಯಗಳಲ್ಲಿ 71,000 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟನೆ
    ಇಂದಿನಿಂದ ಸೆ.15ರ ವರೆಗೆ ಪ್ರಧಾನಿ ಮೋದಿ 5 ರಾಜ್ಯಗಳ ಪ್ರವಾಸ ಕೈಗೊಂಡಿದ್ದಾರೆ. ಮಿಜೋರಾಂ, ಮಣಿಪುರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ ಭೇಟಿ ನೀಡಲಿದ್ದು, ಈ ಅವಧಿಯಲ್ಲಿ ಒಟ್ಟು 71,850 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

  • ಸೆ.13ಕ್ಕೆ ಮಿಜೋರಾಂ, ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ?

    ಸೆ.13ಕ್ಕೆ ಮಿಜೋರಾಂ, ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ?

    -ಹಿಂಸಾಚಾರ ಭುಗಿಲೆದ್ದ 28 ತಿಂಗಳ ಬಳಿಕ ಮೊದಲ ಭೇಟಿ ಸಾಧ್ಯತೆ

    ನವದೆಹಲಿ: ಸೆ.13ರಂದು ಮಿಜೋರಾಂ (Mizoram) ಹಾಗೂ ಮಣಿಪುರಕ್ಕೆ (Manipur) ಪ್ರಧಾನಿ ನರೇಂದ್ರ ಮೋದಿ (PM Modi) ಭೇಟಿ ನೀಡುವ ಸಾಧ್ಯತೆಯಿದ್ದು, ಎರಡೂ ರಾಜ್ಯಗಳಲ್ಲಿಯೂ ಎಲ್ಲಾ ಸಿದ್ಧತೆಗಳು ಆರಂಭವಾಗಿದೆ ಎನ್ನಲಾಗುತ್ತಿದೆ.

    ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಮೊದಲು ಮಿಜೋರಾಂಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಬೈರಾಬಿ-ಸೈರಾಂಗ್ ರೈಲ್ವೆ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆ ಮೂಲಕ ಈಶಾನ್ಯದಲ್ಲಿ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಕೇಂದ್ರದ ಪ್ರಮುಖ ಮೂಲಸೌಕರ್ಯ ಯೋಜನೆಯಾಗಿದೆ. ಹೊಸ ರೈಲು ಸಂಪರ್ಕವು ಐಜ್ವಾಲ್ ಅನ್ನು ಆಸ್ಸಾಂನ ಸಿಲ್ಚಾರ್‌ನೊಂದಿಗೆ ಮತ್ತು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಶಾಲಾ ಕಟ್ಟಡದಲ್ಲಿ ಬಿರುಕು, ಉದುರುತ್ತಿರುವ ಮೇಲ್ಛಾವಣಿ; ಅವ್ಯವಸ್ಥೆ ಸರಿಪಡಿಸುವಂತೆ ಸಿಎಂಗೆ ಮಕ್ಕಳ ಮನವಿ

    ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಮಿಜೋರಾಂ ಮುಖ್ಯ ಕಾರ್ಯದರ್ಶಿ ಖಿಲ್ಲಿ ರಾಮ್ ಮೀನಾ ಅವರು, ಭದ್ರತೆ, ಸಂಚಾರ ನಿಯಂತ್ರಣ ಮತ್ತು ಸಾರ್ವಜನಿಕ ಭಾಗವಹಿಸುವಿಕೆ ಸೇರಿದಂತೆ ಸಿದ್ಧತೆಗಳನ್ನು ಪರಿಶೀಲಿಸಲು ಸೋಮವಾರ (ಸೆ.1) ಉನ್ನತ ಮಟ್ಟದ ಸಭೆ ನಡೆಸಿದರು. ಮಿಜೋರಾಂ ಭೇಟಿಯ ನಂತರ, ಪ್ರಧಾನಿ ಮೋದಿಯವರು ಮಣಿಪುರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

    ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ 28 ತಿಂಗಳ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿ ಭೇಟಿ ನೀಡುವ ಸಾಧ್ಯತೆಯಿದೆ. ಈ ಕುರಿತು ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.ಇದನ್ನೂ ಓದಿ: ಜೂ.ಎನ್‌ಟಿಆರ್‌ಗಾಗಿ ಸಿದ್ಧಸೂತ್ರ ಮುರಿಯಲು ಸಜ್ಜಾದ ಪ್ರಶಾಂತ್ ನೀಲ್

  • ಈಶಾನ್ಯ ರಾಜ್ಯಗಳಲ್ಲಿ ರೆಮಲ್‌ ಚಂಡಮಾರುತ ಆರ್ಭಟ; ಸಾವಿನ ಸಂಖ್ಯೆ 37 ಕ್ಕೆ ಏರಿಕೆ – ಎಲ್ಲೆಲ್ಲಿ ಏನಾಗಿದೆ?

    ಈಶಾನ್ಯ ರಾಜ್ಯಗಳಲ್ಲಿ ರೆಮಲ್‌ ಚಂಡಮಾರುತ ಆರ್ಭಟ; ಸಾವಿನ ಸಂಖ್ಯೆ 37 ಕ್ಕೆ ಏರಿಕೆ – ಎಲ್ಲೆಲ್ಲಿ ಏನಾಗಿದೆ?

    ಕೋಲ್ಕತ್ತಾ: ರೆಮಲ್ ಚಂಡಮಾರುತದಿಂದ (Remal Cyclone) ಉಂಟಾದ ಭಾರೀ ಮಳೆಗೆ ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಕನಿಷ್ಠ 37 ಜನರು ಸಾವನ್ನಪ್ಪಿದ್ದಾರೆ. ಹತ್ತಾರು ಜನರು ನಾಪತ್ತೆಯಾಗಿದ್ದಾರೆ.

    ಮಳೆಯಿಂದ ಮನೆಗಳು ಧ್ವಂಸಗೊಂಡು ವಿದ್ಯುತ್ ತಂತಿಗಳು ನೆಲಕ್ಕುರುಳಿವೆ. ನೂರಾರು ಮಂದಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುವಂತಾಗಿದೆ. ಮಿಜೋರಾಂನಲ್ಲಿ ಅತಿ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ. ಇದನ್ನೂ ಓದಿ: ಹವಾಮಾನ ವೈಪರಿತ್ಯ – 24 ಗಂಟೆಯಲ್ಲಿ 250ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತ!

    ರೆಮಲ್ ಚಂಡಮಾರುತವು ಮಿಜೋರಾಂನ ರಾಜಧಾನಿ ಐಜ್ವಾಲ್‌ನ ಮೆಲ್ತಮ್, ಹ್ಲಿಮೆನ್, ಫಾಲ್ಕಾವ್ನ್ ಮತ್ತು ಸೇಲಂ ವೆಂಗ್ ಪ್ರದೇಶಗಳಲ್ಲಿ 27 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಪರಿಹಾರ ತಂಡಗಳು ಇದುವರೆಗೆ 27 ಮಂದಿಯ ಮೃತದೇಹಗಳನ್ನು ಹೊರತೆಗೆದಿದ್ದು, ನಗರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಲಾಲ್ದುಹೋಮ ಅವರು, ಮೃತರಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್) 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಅಸ್ಸಾಂನಲ್ಲಿ ಶಾಲಾ ಬಸ್‌ ಮೇಲೆ ಬಿದ್ದ ಮರ
    ಚಂಡಮಾರುತದ ನಂತರ ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ ಅಸ್ಸಾಂನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. 18 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಶಾಲಾ ಬಸ್ ಮೇಲೆ ಮರ ಬಿದ್ದು 12 ಮಕ್ಕಳು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರೆಮಲ್ ಚಂಡಮಾರುತದಿಂದ ಉಂಟಾದ ಭಾರೀ ಮಳೆಯು ನಾಗಾಲ್ಯಾಂಡ್‌ನಲ್ಲಿ ನಾಲ್ಕು ಜೀವಗಳನ್ನು ಬಲಿ ತೆಗೆದುಕೊಂಡಿದೆ. 40 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ರಾಜ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ರಾಜ್ಯದ ಅತ್ಯಂತ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

    ಮೇಘಾಲಯದಲ್ಲಿ ಭಾರೀ ಮಳೆ ಸುರಿದು ಇಬ್ಬರು ಸಾವನ್ನಪ್ಪಿದ್ದು, 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಜೈನ್ತಿಯಾ ಹಿಲ್ಸ್‌ನಲ್ಲಿ ಒಂದು ಸಾವು ಮತ್ತು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಕಾರು ಅಪಘಾತದಲ್ಲಿ ಮತ್ತೊಂದು ಸಾವು ವರದಿಯಾಗಿದೆ. ಈ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಒಟ್ಟು ಸಾವಿನ ಸಂಖ್ಯೆ 37ಕ್ಕೆ ಏರಿದೆ. ಇದನ್ನೂ ಓದಿ: ರಾಜ್ಯದ ಅನ್ನದಾತರಿಗೆ ಸರ್ಕಾರದ ಶಾಕ್ – ಬಿತ್ತನೆ ಬೀಜಗಳ ಬೆಲೆ ಶೇ.48 ಏರಿಕೆ

    ತ್ರಿಪುರಾದಲ್ಲಿ ಕತ್ತಲೆಯಲ್ಲಿ ಲಕ್ಷಾಂತರ ಜನ
    ತ್ರಿಪುರಾದಿಂದ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲವಾದರೂ, ರೆಮಲ್ ಚಂಡಮಾರುತದಿಂದ ಉಂಟಾದ ಭಾರೀ ಮಳೆಯಿಂದಾಗಿ 246 ಕುಟುಂಬಗಳ ಒಟ್ಟು 746 ಜನರು ರಾಜ್ಯದ ವಿವಿಧ ಭಾಗಗಳಲ್ಲಿ ತೆರೆಯಲಾದ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುವಂತಾಗಿದೆ.

    ಚಂಡಮಾರುತದಿಂದ ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳದಲ್ಲಿ ಭಾನುವಾರ ಮಧ್ಯರಾತ್ರಿಯ ಸುಮಾರಿಗೆ ಭೂಕುಸಿತ ಉಂಟಾಗಿದೆ. ಕರಾವಳಿಯಾದ್ಯಂತ ಗಾಳಿಯ ವೇಗ ಗಂಟೆಗೆ 135 ಕಿ.ಮೀ. ಇದೆ. ವಿದ್ಯುತ್‌ ಸ್ಥಗಿತದಿಂದಾಗಿ ಲಕ್ಷಾಂತರ ಜನ ಪರದಾಡುವಂತಾಯಿತು.

  • ಮಿಜೋರಾಂನಲ್ಲಿ ಭಾರೀ ಮಳೆ- ಕಲ್ಲುಕ್ವಾರಿ ಕುಸಿದು 10 ಮಂದಿ ದುರ್ಮರಣ, ಹಲವರು ನಾಪತ್ತೆ

    ಮಿಜೋರಾಂನಲ್ಲಿ ಭಾರೀ ಮಳೆ- ಕಲ್ಲುಕ್ವಾರಿ ಕುಸಿದು 10 ಮಂದಿ ದುರ್ಮರಣ, ಹಲವರು ನಾಪತ್ತೆ

    ಐಜ್ವಾಲ್:‌ ಇಂದು (ಮಂಗಳವಾರ) ಬೆಳಗ್ಗೆ ಎಡೆಬಿಡದೆ ಸುರಿದ ಭಾರೀ ಮಳೆಯಿಂದಾಗಿ ಮಿಜೋರಾಂನ ಐಜ್ವಾಲ್ (Aizawl, Mizoram)  ಜಿಲ್ಲೆಯಲ್ಲಿ ಕಲ್ಲುಕ್ವಾರಿ ಕುಸಿದು ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ, ಐಜ್ವಾಲ್ ಪಟ್ಟಣದ ದಕ್ಷಿಣ ಪರಿಧಿಯಲ್ಲಿ ನೆಲೆಗೊಂಡಿರುವ ಮೆಲ್ತಮ್ ಮತ್ತು ಹ್ಲಿಮೆನ್ ಸಮೀಪದಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮೃತರಲ್ಲಿ 7 ಮಂದಿ ಸ್ಥಳೀಯರು ಹಾಗೂ ಮೂವರು ಹೊರ ರಾಜ್ಯದವರು. ಇನ್ನೂ 10ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದುವರೆಗೆ 10 ಮೃತದೇಹಗಳು ಪತ್ತೆಯಾಗಿದೆ. ಇನ್ನೂ ಹಲವರು ಅವಶೇಷಗಳಡಿ ಸಿಲುಕಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಆದರೆ ಭಾರೀ ಮಳೆಯಿಂದಾಗಿ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅನಿಲ್ ಶುಕ್ಲಾ ತಿಳಿಸಿದ್ದಾರೆ. ಇದನ್ನೂ ಓದಿ: ಪಪುವಾ ನ್ಯೂಗಿನಿಯಾದಲ್ಲಿ ಭಾರೀ ಭೂಕುಸಿತ – 2,000ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿ!

    ಹಲವೆಡೆ ಭೂಕುಸಿತ: ನಿರಂತರ ಮಳೆಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗುತ್ತಿದೆ. ಅಧಿಕಾರಿಗಳ ಪ್ರಕಾರ, ಮಳೆಯಿಂದಾಗಿ ರಾಜ್ಯದ ಹಲವೆಡೆ ಭೂಕುಸಿತ ಉಂಟಾಗಿದೆ. ಹುಂತಾರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 6 ರಲ್ಲಿ ಭೂಕುಸಿತದಿಂದಾಗಿ ಐಜ್ವಾಲ್ ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ. ಇದಲ್ಲದೆ ಹಲವಾರು ಅಂತರ್-ರಾಜ್ಯ ಹೆದ್ದಾರಿಗಳು ಭೂಕುಸಿತದಿಂದ ಸಂಚಾರಕ್ಕೆ ಅಡ್ಡಿಯಾಗಿದೆ.

    ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯಮಂತ್ರಿ ಲಾಲ್ದುಹೋಮ ಅವರು ಗೃಹ ಸಚಿವ ಕೆ ಸಪ್ದಂಗ, ಮುಖ್ಯ ಕಾರ್ಯದರ್ಶಿ ರೇಣು ಶರ್ಮಾ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆಯನ್ನು ಕರೆದಿದ್ದಾರೆ. ಇನ್ನು ಭಾರೀ ಮಳೆಯ ಕಾರಣ, ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ಅಗತ್ಯ ಸೇವೆಗಳನ್ನು ಒದಗಿಸುವವರನ್ನು ಹೊರತುಪಡಿಸಿ ಸರ್ಕಾರಿ ನೌಕರರನ್ನು ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ.

  • ರನ್‌ವೇನಲ್ಲಿ ಸ್ಕಿಡ್‌ ಆದ ಮ್ಯಾನ್ಮಾರ್ ಮಿಲಿಟರಿ ವಿಮಾನ- 6 ಮಂದಿಗೆ ಗಾಯ

    ರನ್‌ವೇನಲ್ಲಿ ಸ್ಕಿಡ್‌ ಆದ ಮ್ಯಾನ್ಮಾರ್ ಮಿಲಿಟರಿ ವಿಮಾನ- 6 ಮಂದಿಗೆ ಗಾಯ

    ಐಜ್ವಾಲ್‌ (ಮಿಜೋರಾಂ): ಮ್ಯಾನ್ಮಾರ್ ಸೈನಿಕರನ್ನು ಕರೆದೊಯ್ಯಲು ಬಂದಿದ್ದ ಮಿಲಿಟರಿ ವಿಮಾನವು (Myanmar military plane) ಮಿಜೋರಾಂನ ಲೆಂಗ್‌ಪುಯಿ ಏರ್‌ಪೋರ್ಟ್‌ನಲ್ಲಿ ರನ್‌ವೇಯಿಂದ ಸ್ಕಿಡ್ ಆಗಿದೆ. ಘಟನೆಯಲ್ಲಿ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ.

    ಮಂಗಳವಾರ ಮಿಜೋರಾಂನ (Mizoram) ಲೆಂಗ್‌ಪುಯಿ ವಿಮಾನ ನಿಲ್ದಾಣದ ಟರ್ಮಿನಲ್ ತಲುಪುವ ಮೊದಲು ಅಂದರೆ ಬೆಳಗ್ಗೆ 10.19 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಘಟನೆ ನಡೆದ ವೇಳೆ ವಿಮಾನದಲ್ಲಿ ಒಟ್ಟು 14 ಮಂದಿ ಇದ್ದರು ಎನ್ನಲಾಗಿದೆ.

    ಈ ಸಂಬಂಧ ಮಿಜೋರಾಂ ಡಿಜಿಪಿ ಅನಿಲ್‌ ಶುಕ್ಲಾ ಪ್ರತಿಕ್ರಿಯಿಸಿ, ಲ್ಯಾಂಡಿಂಗ್‌ ವೇಳೆ ಉಂಟಾದ ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದೆ. ಈ ವಿಮಾನದಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಇದರಲ್ಲಿ 6 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉಳಿದ 8 ಮಂದಿ ಸುರಕ್ಷಿತವಾಗಿದ್ದಾರೆ. ಇವರನ್ನು ಲೆಂಗಪುಯಿನಲ್ಲಿರುವ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದನ್ನೂ ಓದಿ: ರಿಯಲ್ ಎಸ್ಟೇಟ್ ಬ್ರೋಕರ್ ಮೇಲೆ ‘ಕೈ’ ಕಾರ್ಪೋರೇಟರ್ ಸಹೋದರನಿಂದ ಮಾರಣಾಂತಿಕ ಹಲ್ಲೆ

  • ಮಿಜೋರಾಂ ಮುಖ್ಯಮಂತ್ರಿಯಾಗಿ ಲಾಲ್ದುಹೋಮ ಪ್ರಮಾಣ ವಚನ

    ಮಿಜೋರಾಂ ಮುಖ್ಯಮಂತ್ರಿಯಾಗಿ ಲಾಲ್ದುಹೋಮ ಪ್ರಮಾಣ ವಚನ

    ಐಜ್ವಾಲ್: ಮಿಜೋರಾಂ (Mizoram) ಮುಖ್ಯಮಂತ್ರಿಯಾಗಿ ಝೊರಾಂ ಪೀಪಲ್ಸ್ ಮೂವ್‍ಮೆಂಟ್ (ZPM) ಪಕ್ಷದ ಲಾಲ್ದುಹೋಮ ಅವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

    ಲಾಲ್ದುಹೋಮಾ (Lalduhoma) ಅವರಿಗೆ ರಾಜ್ಯಪಾಲರಾದ ಹರಿ ಬಾಬು ಕಂಬಂಪತಿ (Governor Hari Babu Kambhampati) ಅರು ಪ್ರಮಾಣವಚನ ಬೋಧನೆ ಮಾಡಿದ್ದಾರೆ. ಲಾಲ್ದುಹೋಮಾ ಜೊತೆಗೆ ಪಕ್ಷದ 11 ಮಂದಿ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಮಿಜೋ ನ್ಯಾಷನಲ್ ಫ್ರಂಟ್ ನಾಯಕ ಮತ್ತು ನಿರ್ಗಮಿತ ಮುಖ್ಯಮಂತ್ರಿ ಝೋರಂತಂಗ ಅವರು ರಾಜಭವನದಲ್ಲಿ ಪ್ರಮಾಣ ವಚನ ಸಮಾರಂಭವನ್ನು ಆಯೋಜಿಸಿದ್ದರು. ಶಾಸಕಾಂಗ ಪಕ್ಷದ ನಾಯಕ ಲಾಲಛಂದಮ ರಾಲ್ಟೆ ಸೇರಿದಂತೆ ಎಲ್ಲಾ ಎಂಎನ್‌ಎಫ್ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಲಾಲ್ ಥನ್ಹಾವ್ಲಾ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಮಂಗಳವಾರ ಝೋರಾಮ್ ಪೀಪಲ್ಸ್ ಮೂವ್ಮೆಂಟ್ ಶಾಸಕಾಂಗ ಪಕ್ಷದ ನಾಯಕರಾಗಿ ಲಾಲ್ದುಹೋಮ ಹಾಗೂ ಉಪನಾಯಕರಾಗಿ ಕೆ.ಸಪ್ದಂಗ ಅವರನ್ನು ಆಯ್ಕೆ ಮಾಡಲಾಯಿತು. 40 ಸದಸ್ಯರ ವಿಧಾನಸಭೆಯೊಂದಿಗೆ, ಮಿಜೋರಾಂ ಮುಖ್ಯಮಂತ್ರಿ ಸೇರಿದಂತೆ 12 ಮಂತ್ರಿಗಳನ್ನು ಹೊಂದಬಹುದಾಗಿದೆ.

    ನವೆಂಬರ್ 7 ರಂದು ಒಂದೇ ಹಂತದಲ್ಲಿ ಮಿಜೋರಾಂ ಚುನಾವಣೆ ನಡೆಸಲಾಯಿತು. ರಾಜ್ಯದಲ್ಲಿ ಶೇ.80.66ರಷ್ಟು ಮತದಾನವಾಗಿತ್ತು. ಝೋರಾಮ್ ಪೀಪಲ್ಸ್ ಮೂವ್ಮೆಂಟ್ 40 ರಲ್ಲಿ 27 ಸ್ಥಾನಗಳನ್ನು ಗೆದ್ದು ಪ್ರಚಂಡ ಗೆಲುವು ಸಾಧಿಸಿದೆ. ZPM ಅನ್ನು 2019 ರಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸಲಾಗಿದೆ ಇದಕ್ಕೂ ಮುನ್ನ 2018 ರ ಚುನಾವಣೆಯಲ್ಲಿ 8 ಸ್ಥಾನಗಳನ್ನು ಮಾತ್ರ ಗೆದ್ದಿತ್ತು.  ಇದನ್ನೂ ಓದಿ: Mizoram Election Results: ʻಕೈʼ ಹಿಡಿಯದ ಮಿಜೋರಾಂ – ZPMಗೆ ಗೆಲುವು, 2 ಕ್ಷೇತ್ರಗಳಲ್ಲಿ ಅರಳಿದ ಕಮಲ

  • Mizoram Election Results: ʻಕೈʼ ಹಿಡಿಯದ ಮಿಜೋರಾಂ – ZPMಗೆ ಗೆಲುವು, 2 ಕ್ಷೇತ್ರಗಳಲ್ಲಿ ಅರಳಿದ ಕಮಲ

    Mizoram Election Results: ʻಕೈʼ ಹಿಡಿಯದ ಮಿಜೋರಾಂ – ZPMಗೆ ಗೆಲುವು, 2 ಕ್ಷೇತ್ರಗಳಲ್ಲಿ ಅರಳಿದ ಕಮಲ

    ಐಜ್ವಾಲ್: ಮಿಜೋರಾಂನಲ್ಲಿ 40 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ (Mizoram Election Results) ಹೊರಬಿದ್ದಿದ್ದು, ಪ್ರಾದೇಶಿಕ ಪಕ್ಷವಾದ ಝೋರಾಮ್ ಪೀಪಲ್ಸ್ ಮೂವ್ಮೆಂಟ್‌ (ZPM) 27 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಜನಾದೇಶ ಪಡೆದಿದೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.

    ಮೀಜೋರಾಂನಲ್ಲಿ ಅಧಿಕಾರ ಹಿಡಿಯುವ ಉತ್ಸಾಹದಲ್ಲಿದ್ದ ಮಿಜೋ ನ್ಯಾಷನಲ್ ಫ್ರಂಟ್ (MNF) ಪಕ್ಷವು 10 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 2 ಕ್ಷೇತ್ರಗಳಲ್ಲಿ ಬಿಜೆಪಿ (BJP), 1 ಕ್ಷೇತ್ರದಲ್ಲಿ ಮಾತ್ರವೇ ಕಾಂಗ್ರೆಸ್‌ (Congress) ಪ್ರಾಬಲ್ಯ ಮೆರೆದಿದೆ. ಇದನ್ನೂ ಓದಿ: ದಯವಿಟ್ಟು ಸೋಲಿನ ಹತಾಶೆ ಹೊರಹಾಕಬೇಡಿ – ಸಂಸತ್‌ ಅಧಿವೇಶನಕ್ಕೂ ಮುನ್ನ ವಿಪಕ್ಷಗಳಿಗೆ ಮೋದಿ ಸಲಹೆ

    ಎಂಎನ್‌ಎಫ್‌ ಹಾಗೂ ಝಡ್‌ಪಿಎಂ ಹಾಗೂ ಕಾಂಗ್ರೆಸ್‌ ಪಕ್ಷಗಳು ತಲಾ 40 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 13 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನ ಹಾಕಿತ್ತು. ಮಿಜೋರಾಂನಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ (ಎಎಪಿ) 4 ಕ್ಷೇತ್ರಗಳಲ್ಲಿ ಮಾತ್ರವೇ ಸ್ಪರ್ಧಿಸಿತ್ತು. 17 ಮಂದಿ ಪಕ್ಷೇತರರು ಪ್ರತಿನಿಧಿಸಿದ್ದರು.

    ಹೊಸದಾಗಿ ಸ್ಥಾಪನೆಗೊಂಡಿದ್ದ ಝೋರಾಮ್ ಪೀಪಲ್ಸ್ ಮೂವ್ಮೆಂಟ್‌ 2018ರ ಚುನಾವಣೆಯಲ್ಲಿ ಕೇವಲ 8 ಸ್ಥಾನ ಗೆದ್ದಿತ್ತು. MNF 26 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿದಿತ್ತು. ಕಾಂಗ್ರೆಸ್‌ ಕೇವಲ 5 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆದ್ರೆ ಝೋರಾಮ್ ಪೀಪಲ್ಸ್ ಮೂವ್ಮೆಂಟ್‌ ತನ್ನ 2ನೇ ಅವಧಿಯ ಚುನಾವಣೆಯಲ್ಲೇ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವುದು ವಿಶೇಷ.

    ಒಟ್ಟಿನಲ್ಲಿ ಪಂಚರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿದರೆ, ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷವಾದ ಝೋರಾಮ್ ಪೀಪಲ್ಸ್ ಮೂವ್ಮೆಂಟ್‌ ಜನಾದೇಶ ಪಡೆದಿದೆ.

    ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 8 ರಂದು ನಡೆದಿದ್ದ ಚುನಾವಣೆಯಲ್ಲಿ 80.43% ಮತದಾನ ನಡೆದಿತ್ತು. 79.61% ಪುರುಷರು, 81.21% ಮಹಿಳೆಯರು ಮತ ಚಲಾಯಿಸಿದ್ದರು. 8.57 ಲಕ್ಷ ಮತದಾರರನ್ನು ಒಳಗೊಂಡಿರುವ ಈ ರಾಜ್ಯದಲ್ಲಿ ಸ್ಥಳೀಯ ಪಕ್ಷಗಳಾದ ಮಿಜೋ ನ್ಯಾಷನಲ್ ಫ್ರಂಟ್ (MNF), ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ನಡುವೆ ಪೈಪೋಟಿ ನಡೆದಿತ್ತು.

    ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿತ್ತು. ಆರಂಭಿಕವಾಗಿ ಮುನ್ನಡೆ ಸಾಧಿಸಿದ್ದ ಮಿಜೋ ನ್ಯಾಷನಲ್ ಫ್ರಂಟ್ ನಂತರ ಬಹುಮತ ಪಡೆಯುವಲ್ಲಿ ವಿಫಲವಾಯಿತು. ಇದನ್ನೂ ಓದಿ: ಗೆದ್ದ ಮರುದಿನವೇ ರಸ್ತೆಬದಿಯಲ್ಲಿನ ಮಾಂಸದಂಗಡಿಗಳ ತೆರವಿಗೆ ಬಿಜೆಪಿ ನೂತನ ಶಾಸಕ ಆದೇಶ

  • Mizoram Election Results: ZPMಗೆ ಮುನ್ನಡೆ – ಮಿಜೋರಾಂನಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ

    Mizoram Election Results: ZPMಗೆ ಮುನ್ನಡೆ – ಮಿಜೋರಾಂನಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ

    ಐಜ್ವಾಲ್: ಪಂಚ ರಾಜ್ಯಗಳಿಗೆ ನಡೆದ ಚುನಾವಣೆಯ ಪೈಕಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳ ಚುನಾವಣಾ ಫಲಿತಾಂಶ (Election Results) ಹೊರಬಿದ್ದಿದೆ. ಈಗ ಎಲ್ಲರ ಕಣ್ಣು ಮಿಜೋರಾಂ (Mizoram) ಮೇಲೆ ನೆಟ್ಟಿದೆ.

    ಸೋಮವಾರ (ಡಿ.4) ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಪ್ರಾದೇಶಿಕ ಪಕ್ಷವಾದ ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ಮುನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: 12 ರಾಜ್ಯಗಳಲ್ಲಿ ಬಿಜೆಪಿ ಆಡಳಿತ – 3 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್‌ ಅಧಿಕಾರ

    ಬೆಳಗ್ಗೆ 10:30 ಗಂಟೆ ನಂತರ ಝೋರಾಮ್ ಪೀಪಲ್ಸ್ ಮೂವ್ಮೆಂಟ್ 29 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಮಿಜೋ ನ್ಯಾಷನಲ್ ಫ್ರಂಟ್ (MNF) 7 ಸ್ಥಾನಗಳಲ್ಲಿ ಮುಂದುವರಿದಿದೆ. ಇನ್ನೂ ಆರಂಭಿವಾಗಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್‌ ಬಳಿಕ ಹಿನ್ನಡೆ ಅನುಭವಿಸಿದೆ, ಬಿಜೆಪಿ 3 ಹಾಗೂ ಕಾಂಗ್ರೆಸ್‌ 1 ಸ್ಥಾನದಲ್ಲಿದೆ. ಇದನ್ನೂ ಓದಿ: ಮಿಜೋರಾಂ ಮತ ಎಣಿಕೆಗೆ ಕೌಂಟ್‌ ಡೌನ್‌ – ಯಾರಿಗೆ ಸಿಗುತ್ತೆ ಮ್ಯಾಜಿಕ್ ನಂಬರ್?

    ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 8 ರಂದು ನಡೆದಿದ್ದ ಚುನಾವಣೆಯಲ್ಲಿ 80.43% ಮತದಾನವಾಗಿದೆ. 79.61% ಪುರುಷರು, 81.21% ಮಹಿಳೆಯರು ಮತ ಚಲಾಯಿಸಿದ್ದಾರೆ. 2018ರ ಚುನಾವಣೆಯಲ್ಲಿ 81.61% ನಷ್ಟು ಮತ ಚಲಾಯಿಸಿದ್ದರು. 8.57 ಲಕ್ಷ ಮತದಾರರನ್ನು ಒಳಗೊಂಡಿರುವ ಈ ರಾಜ್ಯದಲ್ಲಿ ಸ್ಥಳೀಯ ಪಕ್ಷಗಳಾದ ಮಿಜೋ ನ್ಯಾಷನಲ್ ಫ್ರಂಟ್ (MNF), ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ನಡುವೆ ಪೈಪೋಟಿ ನಡೆದಿದೆ. ಇನ್ನೂ ಕಾಂಗ್ರೆಸ್, ಬಿಜೆಪಿ ಈ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವುದು ಕಷ್ಟ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

    ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ. ಈಗಾಗಲೇ 4 ರಾಜ್ಯಗಳ ಪೈಕಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮಿಜೋರಂನಲ್ಲಿ ಯಾರ ಪ್ರಭಾವ ಎಷ್ಟಿದೆ ಅನ್ನೋದು‌ ಪೂರ್ಣ ಫಲಿತಾಂಶದ ನಂತರ ತಿಳಿಯಲಿದೆ. ಇದನ್ನೂ ಓದಿ: 3 ರಾಜ್ಯಗಳಲ್ಲಿ ಮೋದಿ ಪಡೆಗೆ ಭರ್ಜರಿ ಗೆಲುವು – ಗ್ಯಾರಂಟಿಯಿಂದಲೇ ತೆಲಂಗಾಣದಲ್ಲಿ ಗೆದ್ದ ಕಾಂಗ್ರೆಸ್

     

  • ಮಿಜೋರಾಂ ಮತ ಎಣಿಕೆಗೆ ಕೌಂಟ್‌ ಡೌನ್‌ – ಯಾರಿಗೆ ಸಿಗುತ್ತೆ ಮ್ಯಾಜಿಕ್ ನಂಬರ್?

    ಮಿಜೋರಾಂ ಮತ ಎಣಿಕೆಗೆ ಕೌಂಟ್‌ ಡೌನ್‌ – ಯಾರಿಗೆ ಸಿಗುತ್ತೆ ಮ್ಯಾಜಿಕ್ ನಂಬರ್?

    ಐಜ್ವಾಲ್: ಪಂಚ ರಾಜ್ಯಗಳಿಗೆ ನಡೆದ ಚುನಾವಣೆಯ ಪೈಕಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಈಗ ಎಲ್ಲರ ಕಣ್ಣು ಮಿಜೋರಾಂ ಮೇಲೆ ನೆಟ್ಟಿದೆ. ಸೋಮವಾರ (ಡಿ.4) ಮಿಜೋರಾಂ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದೆ.

    ರಾಜ್ಯಾದ್ಯಂತ 13 ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಹೊರಬೀಳಲಿದೆ. ಭಾನುವಾರ (ಡಿ.2) ಮಿಜೋರಾಂ ಜನರಿಗೆ ಪ್ರಮುಖ ಹಬ್ಬದ ದಿನವಿದ್ದ ಕಾರಣ ಮತ ಎಣಿಕೆ ಕಾರ್ಯವನ್ನು ಒಂದು ದಿನ ಮುಂದೂಡಲಾಗಿತ್ತು. ಇದನ್ನೂ ಓದಿ: ಸಿದ್ಧಾಂತದ ಕದನ ಮುಂದುವರಿಯುತ್ತದೆ: 3 ರಾಜ್ಯಗಳಲ್ಲಿ ಸೋಲಿನ ಬಳಿಕ ರಾಹುಲ್ ಪ್ರತಿಕ್ರಿಯೆ

    ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್‌ 8 ರಂದು ನಡೆದಿದ್ದ ಚುನಾವಣೆಯಲ್ಲಿ 80.43% ಮತದಾನವಾಗಿದೆ. 79.61% ಪುರುಷರು, 81.21% ಮಹಿಳೆಯರು ಮತ ಚಲಾಯಿಸಿದ್ದಾರೆ. 2018ರ ಚುನಾವಣೆಯಲ್ಲಿ 81.61% ನಷ್ಟು ಮತ ಚಲಾಯಿಸಿದ್ದರು. 8.57 ಲಕ್ಷ ಮತದಾರರನ್ನು ಒಳಗೊಂಡಿರುವ ಈ ರಾಜ್ಯದಲ್ಲಿ ಸ್ಥಳೀಯ ಪಕ್ಷಗಳಾದ ಮಿಜೋ ನ್ಯಾಷನಲ್ ಫ್ರಂಟ್ (MNF), ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ನಡುವೆ ಪೈಪೋಟಿ ನಡೆದಿದೆ. ಇನ್ನೂ ಕಾಂಗ್ರೆಸ್‌, ಬಿಜೆಪಿ ಈ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವುದು ಕಷ್ಟ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಆದ್ರೆ ಸ್ಥಳೀಯ ಪಕ್ಷಗಳೊಂದಿಗೆ ಕಾಂಗ್ರೆಸ್‌ ಸಹ ಪೈಪೋಟಿಯಲ್ಲಿರುವುದಾಗಿ ಸ್ಥಳೀಯ ನಾಯಕರು ತಿಳಿಸಿದ್ದಾರೆ. 12 ರಾಜ್ಯಗಳಲ್ಲಿ ಬಿಜೆಪಿ ಆಡಳಿತ – 3 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್‌ ಅಧಿಕಾರ

    ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ. ಈಗಾಗಲೇ 4 ರಾಜ್ಯಗಳ ಪೈಕಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮಿಜೋರಂನಲ್ಲಿ ಯಾರ ಪ್ರಭಾವ ಎಷ್ಟಿದೆ ಎನ್ನೋದು ಫಲಿತಾಂಶದ ನಂತರ ತಿಳಿಯಲಿದೆ. ಇದನ್ನೂ ಓದಿ: 3 ರಾಜ್ಯಗಳಲ್ಲಿ ಮೋದಿ ಪಡೆಗೆ ಭರ್ಜರಿ ಗೆಲುವು – ಗ್ಯಾರಂಟಿಯಿಂದಲೇ ತೆಲಂಗಾಣದಲ್ಲಿ ಗೆದ್ದ ಕಾಂಗ್ರೆಸ್ 

  • ಮಿಜೋರಾಂ ಚುನಾವಣೆ; ಮತ ಎಣಿಕೆ ದಿನಾಂಕ ಮುಂದೂಡಿಕೆ

    ಮಿಜೋರಾಂ ಚುನಾವಣೆ; ಮತ ಎಣಿಕೆ ದಿನಾಂಕ ಮುಂದೂಡಿಕೆ

    – ಡಿ.4 ರಂದು ಫಲಿತಾಂಶ ಪ್ರಕಟ: ಚುನಾವಣಾ ಆಯೋಗ

    ನವದೆಹಲಿ: ಮಿಜೋರಾಂ (Mizoram) ವಿಧಾನಸಭಾ ಚುನಾವಣೆಯ ಮತ ಎಣಿಕೆ ದಿನಾಂಕವನ್ನು ಡಿಸೆಂಬರ್ 3 (ಭಾನುವಾರ) ರಿಂದ ಡಿಸೆಂಬರ್ 4 (ಸೋಮವಾರ)ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ (Election Commission) ಶುಕ್ರವಾರ ಪ್ರಕಟಿಸಿದೆ.

    ಮಿಜೋರಾಂನಲ್ಲಿ ಮತ ಎಣಿಕೆಯ ದಿನದ ಬದಲಾವಣೆಗಾಗಿ ವಿವಿಧ ವಲಯಗಳಿಂದ ಮನವಿ ಸಲ್ಲಿಕೆಯಾಗಿತ್ತು. ಅದನ್ನು ಪರಿಗಣಿಸಿ ಆಯೋಗ ಮತ ಎಣಿಕೆ ದಿನಾಂಕ ಬದಲಾವಣೆಯನ್ನು ಘೋಷಿಸಿತು. ಇದನ್ನೂ ಓದಿ: ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಆಟ

    ಕ್ರಿಶ್ಚಿಯನ್‌ ಸಮುದಾಯದವರೇ ಹೆಚ್ಚಿರುವ ಮಿಜೋರಾಂನ ಜನರಿಗೆ ಡಿಸೆಂಬರ್ 3 ರ ಭಾನುವಾರ ವಿಶೇಷ ದಿನವಾಗಿದೆ. ಈ ಪ್ರಾತಿನಿಧ್ಯ ಪರಿಗಣಿಸಿದ ಆಯೋಗವು ಮತ ಎಣಿಕೆ ದಿನಾಂಕವನ್ನು ಡಿ.4 ಕ್ಕೆ ಬದಲಾಯಿಸಲು ನಿರ್ಧರಿಸಿದೆ.

    ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಮತದಾನ ನಡೆದಿದ್ದು, ಡಿಸೆಂಬರ್ 4 ರಂದು ಮತ ಎಣಿಕೆ ನಡೆಯಲಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ 5 ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಡಿಸೆಂಬರ್ 3 ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗವು ಈ ಹಿಂದೆ ಪ್ರಕಟಿಸಿತ್ತು. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು – ಇದು ಟುಡೇಸ್‌ ಚಾಣಕ್ಯ ಭವಿಷ್ಯ