Tag: ಮಿಜೊರಾಂ

  • ಅಸ್ಸಾಂ, ಮಿಜೊರಾಂ ಗಡಿಯಲ್ಲಿ ಹಿಂಸಾಚಾರ – ಐವರು ಪೊಲೀಸರು ಹುತಾತ್ಮ

    ಅಸ್ಸಾಂ, ಮಿಜೊರಾಂ ಗಡಿಯಲ್ಲಿ ಹಿಂಸಾಚಾರ – ಐವರು ಪೊಲೀಸರು ಹುತಾತ್ಮ

    – ರಾಜ್ಯದ ಗಡಿಗಾಗಿ ಗಲಾಟೆ, ಗುಂಡಿನ ಚಕಮಕಿ

    ದಿಸ್ಪುರ: ರಾಜ್ಯದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಅಸ್ಸಾಂ ಮತ್ತು ವಿಜೋರಾಂ ಗಡಿಯಲ್ಲಿ ಹಿಂಸಾಚಾರ ನಡೆದಿದೆ. ಎರಡೂ ರಾಜ್ಯದ ಜನರು ಗಡಿಯಲ್ಲಿ ಜಮಾವಣೆಗೊಂಡು ಪರಸ್ಪರ ಹೊಡೆದಾಟಕ್ಕೆ ಮುಂದಾಗಿದ್ದರು. ಈ ಗಲಾಟೆಯಲ್ಲಿ ಐವರು ಪೊಲೀಸರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಸದ್ಯ ಎರಡೂ ರಾಜ್ಯದ ಮುಖ್ಯಮಂತ್ರಿಗಳು ಶಾಂತಿ ಕಾಪಾಡುವಂತೆ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡೂ ರಾಜ್ಯಗಳ ಸಿಎಂಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

    ಅರಣ್ಯದಲ್ಲಿ ಅವಿತು ಗುಂಡಿನ ದಾಳಿ:
    ಅಸ್ಸಾಂನ ಕಾಛರ್, ಕರೀಮ್‍ಗಂಜ್, ಹೈಲಾಕಾಂಡಿ ಮತ್ತು ಮಿಜೊರಾಂನ ಐಜ್ವಾಲ್, ಮಮಿತ್ ಹಾಗೂ ಕೊಲಾಸೆಬಾ ಭಾಗದಲ್ಲಿ ಹಿಂಸಾಚಾರ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಎರಡೂ ರಾಜ್ಯದ ಮುಖ್ಯಮಂತ್ರಿಗಳು ಗಡಿ ವಿಚಾರವಾಗಿ ಟ್ವಿಟ್ಟರ್ ನಲ್ಲಿ ಭಿನ್ನ ಭಿನ್ನ ಹೇಳಿಕೆ ನೀಡಿದ್ದರು. ಇಬ್ಬರ ಟ್ವಿಟ್ಟರ್ ವಾರ್ ಹಿಂಸಾಚಾರ ಮೂಲ ಕಾರಣ ಎಂದು ವರದಿಯಾಗಿದೆ.

    ಅಸ್ಸಾಂನ ಪೊಲೀಸರು ಅರಣ್ಯ ಪ್ರದೇಶದಲ್ಲಿ ಅವಿತುಕೊಂಡು ಜನರ ಮೇಲೆ ಗುಂಡಿನ ದಾಳಿ ಜೊತೆಯಲ್ಲಿ ಗ್ರೆನೆಡ್ ಸಹ ಎಸೆದಿದ್ದಾರೆ. ಪ್ರತ್ಯುತ್ತರವಾಗಿ ನಾವು ಫೈರಿಂಗ್ ಮಾಡಬೇಕಾಯಿತು ಎಂದು ಮಿಜೊರಾಂನ ಡೆಪ್ಯುಟಿ ಇನ್ಸ್ ಪೆಕ್ಟರ್ ಹೇಳಿದ್ದಾರೆ.

    ಈ ಹಿಂಸೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈಗಲೂ ಅನೇಕ ಜರನು ಅರಣ್ಯದಲ್ಲಿ ಅವಿತುಕೊಂಡಿದ್ದು, ಗುಂಡಿನ ಸದ್ದು ಕೇಳುತ್ತಿದೆ. ಅಧಿಕಾರಿಗಳು ಎರಡೂ ರಾಜ್ಯದ ಜನರ ಜೊತೆ ಮಾತುಕತೆ ನಡೆಸುತ್ತಿರುವಾಗ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಯಿತು ಎಂದು ಹೆಸರು ಹೇಳಲು ಇಚ್ಛಿಸದ ಅಸ್ಸಾಂ ಪೊಲೀಸರು ಮಾಧ್ಯಮಗಳಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅದು ಅಶ್ಲೀಲ ಸಿನಿಮಾ ಅಲ್ಲ, ಸಾಫ್ಟ್ ಪೋರ್ನ್: ರಾಜ್ ಕುಂದ್ರಾ ಮಾಜಿ ಉದ್ಯೋಗಿ ತನ್ವೀರ್

    ಸಿಆರ್ ಪಿಎಫ್ ನಿಯೋಜನೆ:
    ಸದ್ಯ ಘಟನಾ ಸ್ಥಳದಲ್ಲಿ ಜನರನ್ನು ಚದುರಿಸಲಾಗಿದೆ. ಗಡಿ ಭಾಗದಲ್ಲಿ ಸಿಆರ್ ಪಿಎಫ್ ತಂಡವನ್ನು ನಿಯೋಜನೆ ಮಾಡಲಾಗಿದ್ದು, ಪರಿಸ್ಥಿತಿ ಬೂದು ಮುಚ್ಚಿದ ಕೆಂಡದಂತಿದೆ. ಗಡಿ ಭಾಗದ ಗ್ರಾಮಗಳಲ್ಲಿ ಶಾಂತಿ ಕಾಪಾಡುವಂತೆ ಸಿಆರ್ ಪಿಎಫ್ ಸಿಬ್ಬಂದಿ ಮೈಕ್ ಮೂಲಕ ಅನೌನ್ಸ್ ಮಾಡುತ್ತಿದ್ದಾರೆ.  ಇದನ್ನೂ ಓದಿ: ರಾಜೀನಾಮೆ ಸುದ್ದಿ ಕೇಳಿ ಅಭಿಮಾನಿ ಆತ್ಮಹತ್ಯೆ – ಬಿಎಸ್‍ವೈ ಸಂತಾಪ